ಸಾಹಿತ್ಯ ಮೈತ್ರಿ – ಇ-ಪತ್ತಿಕೆಯ ಮೊದಲ ವಾರ್ಷಿಕೋತ್ಸವಕ್ಕೆ ಶುಭಾಶಯಗಳು. ವಾರ್ಷಿಕೋತ್ಸವ ಎಂದು ಏಕೆ ಹೇಳಿದೆ ಎಂದರೆ, ‘ಸಾಹಿತ್ಯ ಮೈತ್ರಿ’ ಪ್ರಾರಂಭವಾದಂದಿನಿಂದಲೂ ಸೊಗಸಾದ ಲೇಖನ ಸರಣಿಗಳು, ಕಾದಂಬರಿ, ಕಥೆಗಳು.. ಇನ್ನಿತರ ‘ಜ್ಞಾನ ಮೈತ್ರಿ’ಯನ್ನು ಕಾಪಿಡುವ ಬರಹಗಳ ಉತ್ಸವವೇ ಜರುಗುತ್ತಿದೆ. ‘ಸಾಹಿತ್ಯ ಮೈತ್ರಿ’ ಎಂಬ ಹೆಸರು ಬಂದದ್ದೂ ಒಂದು ಕೌತುಕವೇ. ಎಷ್ಟೋ ಹೆಸರುಗಳನ್ನು ಗುಡ್ಡೆ ಹಾಕಿಕೊಂಡು ಯಾವುದು ಸೂಕ್ತ ಎಂದು ತಲೆಬಿಸಿ ಮಾಡಿಕೊಳ್ಳುತ್ತಿರುವಾಗ ಅದೊಂದು ದಿನ ‘ಸಾಹಿತ್ಯ ಮೈತ್ರಿ’ ಹೆಸರು ಸೂಚಿಸಿದ್ದು ಕುಮಾರ್ (ಸಹೋದರ). ಹೆಸರು ಆಪ್ತವೆನಿಸಿತು. ಹೆಚ್.ಎಸ್.ವೆಂಕಟೇಶ ಮೂರ್ತಿಯವರು […]Read More
ಹಿಂದಿನ ಸಂಚಿಕೆಯಿಂದ… ಮದಿರಾಪಾನದಿಂದ ಉಂಟಾದ ಅಮಲಿನಿಂದ ಅವನ ಚಿಂತೆಗಳೆಲ್ಲವೂ ಆವಿಯಾಗಿ ಹೋದವು. ಯಾವುದೋ ನವಚೈತನ್ಯ ಅವನಲ್ಲಿ ತುಂಬಿದಂತಾಗಿ ಅವನ ಮನಸ್ಸು ಉಯ್ಯಾಲೆಯಾಡುತ್ತಿತ್ತು. ಅವನು ತನ್ನ ಬೆರಳುಗಳ ಕಡೆ ದೃಷ್ಟಿ ಹಾಯಿಸಿದನು. ಉಂಗುರ ಕಣ್ಣಿಗೆ ಬಿತ್ತು. ಆ ಉಂಗುರವನ್ನು ತನ್ನ ಕಣ್ಣುಗಳ ಹತ್ತಿರ ಹಿಡಿದುಕೊಂಡು ಪರೀಕ್ಷಿಸಿ ನೋಡಿದನು. ಆಗ ಕಾಡಿನ ಮಧ್ಯೆ ಶಶಿಶೇಖರನ ಜೊತೆ ನಡೆದ ಮಾತುಕತೆ ನೆನಪಿಗೆ ಬಂದಿತು. ಮನಸ್ಸಿನಲ್ಲಿಯೇ ಮೃದುವಾಗಿ ನಗುನಗುತ್ತ ಅವನು ಎದ್ದು ಕುಳಿತನು. ಸೊಂಟದಿಂದ ಹಣದ ಥೈಲಿಯನ್ನು ಕೈಗೆ ತೆಗೆದುಕೊಂಡು ಅದರ ಬಾಯಿಯನ್ನು […]Read More
ಅತಿ ವಿನಯದಿಂ ನಮಿಪ ದುರ್ಜನನ ನಂಬದಿರುಕಿತವನಹಿ ಮಿತ್ರನನು ನಂಬದಿರಬೇಕುಅತಿ ಕುಲಟೆ ಪತ್ನಿಯನು ದಿಟದೆ ನೀ ನಂಬದಿರುಮೃತಿ ನಿನಗೆ ನಂಬಿದರೆ- || ಪ್ರತ್ಯಗಾತ್ಮ || ಬಡಪಾಯಿ ಜಿಂಕೆಗಳ ವ್ಯಾಧ ಬಿಡದೆಯೆ ಕೊಲುವಜಲಚರ ಮೀನುಗಳ ಬೆಸ್ತರವ ಹಿಡಿವಮುಗುದ ಸಜ್ಜನರ ದುರ್ಜನನು ಹಿಂಸಿಸುವಬಿಡದಿವರ ಕಾಯ್ವರಾರ್? – || ಪ್ರತ್ಯಗಾತ್ಮ || ಹೊಟ್ಟೆ ಹೊರೆಯುವುದಕ್ಕೆ ಬೇಟೆಯಾಡಲೆ ಬೇಕುಪಟ್ಟಿ ಹುಲಿಗಾವುದೇ ಕಾಡಾದರೇನು ?ರಟ್ಟೆ ಬಲವಿದ್ದು ದುಡಿದು ಜೀವಿಸುವವಗೆಹುಟ್ಟಿದೂರೇ ಏಕೆ ? – || ಪ್ರತ್ಯಗಾತ್ಮ || ದಿನಸಿ ಬೆಲೆಗಳು ಏರೆ ಧನಿಕರದ ಚಿಂತಿಸರುದಿನಗೂಲಿಯಾಳುಗಳಿಗಾ ಪರಿವೆ […]Read More
ಕೇಳೇ ಗೆಳತಿ….. ಸಾಹಿತ್ಯ ಮೈತ್ರಿ ಇವಳು ಸಹನನ್ನ ಗೆಳತಿ…..ಅದೆಷ್ಟು ಸೊಗಸಾದ ಗೆಳತನಅವಳ ಜೊತೆಗಿನ ನನ್ನ ಒಡನಾಟಎಷ್ಟು ಮಧುರ…. ಈಗ ಅವಳಿಗೆ ತುಂಬಿದೆ ವರ್ಷಆ ಹರುಷವ ಹಂಚುವೆ ನಾ ನಿನ್ನ ಜೊತೆ…. ಎಷ್ಟು ಸ್ವಾರಸ್ಯ ಅವಳೊಡನಾಟದಲ್ಲಿ…ನೋವು ನಲಿವುಗಳ ಸಂಗಮ.ಬಗೆ ಬಗೆಯ ಲೇಖನ ಕವಿತೆ , ಶುಭಾಶಯಗಳಆಗರ, ಅವಳ ಒಡಲು.. ಒಂದಕ್ಕಿಂತ ಒಂದು ಭಿನ್ನಚಿತ್ರಗಳಂತೂ ಅವಳ ಭಾವಗಳಸಾರವನ್ನೇ ಸಾರುತ್ತವೆ….. ಗೆಳತಿ…ಸಾಹಿತ್ಯ ಮೈತ್ರಿಯ ಪರಿಚಯವಾದದ್ದೇನಿನ್ನಿಂದ….ಅವಳ ಸಹವಾಸ ಮಾಡಿಸಿದ ನಿನಗೆಅವಳ ಕತೃ ಗಳಿಗೆ ನನ್ನ ನಮನಇನ್ನು ಮುಂದೆ ಮುಂದೆ ಹರಡಲಿಅವಳ ಕೀರ್ತಿಪತಾಕೆ…ಎಂಬ ಹಾರೈಕೆಅವಳ […]Read More
ಆಗುವುದೆಲ್ಲಾ ಒಳ್ಳೆಯದಕ್ಕೆ ವೀಣಾ, ಈಗ ಸಿರ್ಸಿಸಿಯಲ್ಲಿದ್ದಾಳೆ. ಮಾರಿಕಾಂಬಾ ಜಾತ್ರೆಗೆ, ಪಾರು ಬಾ ಎಂದು ಒಂದೇ ಸಮನೆ ಕರೆದಿದ್ದಳು.ಪಾರೂಗೂ ಸಂಭ್ರಮ ಅವಳು ಮಕ್ಕಳೊಡನೆ ಸಿರ್ಸಿಗೆ ಹೊರಟಳು. ಅವಳು ಹೋದ ದಿನದಿಂದ ಜಾತ್ರೆಯ ಸಂಭ್ರಮ,ತೇರು,ಜನ ಜಂಗುಳಿ, ಇದ್ದಕ್ಕಿದ್ದಂತೆ ಮೋಡ ಆವರಿಸಿ ಅಕಾಲ ಭಾರಿ ಮಳೆ ಗಾಳಿ, ಸಿಡಿಲು ಗುಡುಗು ಪ್ರಾರಂಭವಾಯಿತು. ಜನ ದಟ್ಟಣೆ ಕಡಿಮೆಯಾಯಿತು. ಪಾರುವು ವೀಣಾಳ ಮನೆ ಸೇರಿದಳು. ಆ ಮಳೆಗೆ ಜಾತ್ರೆಗೆ ಹಾಕಿದ್ದ ಸಣ್ಣಪುಟ್ಟ ಅಂಗಡಿ-ಮುಗ್ಗಟ್ಟುಗಳೆಲ್ಲಾ ಅಸ್ತವ್ಯಸ್ತವಾಯಿತು. ನೋಡುನೋಡುತ್ತಿದ್ದಂತೆ ಜಾತ್ರೆಯ ಗದ್ದುಗೆ ಮಂಟಪಕ್ಕೆ ಹಾನಿಯಾಯಿತು. ಇದರಿಂದ ಜನರು […]Read More
–ಬ್ರಿಜ್ (Bridge) ಎಂಬ ಇಸ್ಪೀಟ್ ಆಟ!– ಹವ್ಯಾಸಗಳು ಒಂದಲ್ಲ ಒಂದು ರೀತಿಯಲ್ಲಿ ಅನೇಕರ ಮೈಕೈಗಳಿಗೆ ಅಂಟಿಕೊಂಡೇ ಇರುತ್ತವೆ. ಕೆಲವು ಉತ್ತಮ, ಇನ್ನು ಕೆಲವು ಉತ್ತಮ ಅಲ್ಲದವು – ಸಮಾಜದ ಕಣ್ಣಲ್ಲಿ! ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ವೃತ್ತಿಯ ಜೊತೆಗೆ, ಹಾಡುವಂಥ ಕಂಠ ಹೊಂದಿದ್ದು ಅದನ್ನು ಕೆಲವು ಕಾರ್ಯಕ್ರಮಗಳಲ್ಲಿ ಉಪಯೋಗ ಮಾಡುತ್ತಿದ್ದರೆ ಅದು ಆತನ ಉತ್ತಮ ಹವ್ಯಾಸ. ಹಾಗೆಯೇ ಕಥೆ, ಕವನ ಮತ್ತು ಇನ್ನಿತರ ಬರವಣಿಗೆಯ ಹವ್ಯಾಸ ಇರಬಹುದು. ಮೈದಾನಗಳಲ್ಲಿ ಆಡುವಂತಹ ಆಟಗಳಿರಬಹುದು; ಇವು ಉತ್ತಮ. ಅದೇ ಮಾದರಿಯಲ್ಲಿ […]Read More
ಸಾಹಿತ್ಯ ಮೈತ್ರಿ ಗೆ ವರ್ಷ-ಹರ್ಷ! ಸಾಹಿತ್ಯ ಮೈತ್ರಿಯು ವರ್ಷಕ್ಕೆ ಕಾಲಿಟ್ಟು ಮನೆಯಂಗಳದಿಂದ ಹೊರ ಬಂದು ಕನ್ನಡಿಗರ ಮನದಂಗಳಕ್ಕೆ ಅಂಬೆಗಾಲಿಟ್ಟಿದೆ. ಈ ‘ಸಾಹಿತ್ಯ ಮೈತ್ರಿ’ ಆನ್ಲೈನ್ ಪತ್ರಿಕೆಗೆ ಒಂದು ವರ್ಷವಾಗಿದೆ. ಈ ಪತ್ರಿಕೆಯ ರುವಾರಿ ಹಾಗೂ ಲೇಖಕರೂ ಆದ ಕು.ಶಿ ಚಂದ್ರಶೇಖರ್ ಅವರ ಶ್ರಮವನ್ನು ಈಗ ಇಲ್ಲಿ ಶ್ಲಾಘಿಸಲೇಬೇಕು. ವೃತ್ತಿಗಷ್ಟೇ ಸೀಮಿತವಾಗದೇ ಪ್ರವೃತ್ತಿಯನ್ನಾಗಿ ಈ ಪತ್ರಿಕೆಯನ್ನು ಆರಂಭಿಸಿದ್ದಾರೆ. ಈ ಪತ್ರಿಕೆಗೆ ಶೀರ್ಷಿಕೆಯನ್ನು ಆರಿಸುವ ಹಂತದಿಂದ, ಕನ್ನಡದ ಸಾಹಿತ್ಯಲೋಕದ ದಿಗ್ಗಜ ಎಚ್ ಎಸ್ ವೆಂಕಟೇಶಮೂರ್ತಿ ಅವರಿಂದ ಉದ್ಘಾಟಿಸುವ ಸಂಭ್ರಮ (ಹೋದ […]Read More
ದಾರಿ ನಿಮ್ಮ ಜೀವನದ ಪತನಕ್ಕೆನಾಂದಿ ಹಾಡಿದದಾರಿ.ನಿಮ್ಮಬೇಜವಾಬ್ದಾರಿ. ಧ್ಯಾನ ಬುದ್ದನ ಸಿದ್ಧಾಂತ ಪಾಲಿಸುವವರುಕೇವಲ ಐ ಟಿಉದ್ಯೋಗಿಗಳೆ.ದಿನಕ್ಕೆ ಹನ್ನೆರೆಡು ತಾಸುಅವನ ಹಾಗೆ ಕೆಲಸಕೂತಲ್ಲೆ… ಸಿದ್ಧಾಂತ ನಮ್ಮ ಮನೆಯಲ್ಲೂ ಉಂಟುಬುದ್ದನ ದೊಡ್ಡ ಕಲ್ಲಿನಮೂರ್ತಿ.ಅದರ ಮುಂದೆ ಅವನ ಹಾಗೆಗಟ್ಟಿಯಾಗಿ ಹನ್ನೆರೆಡು ತಾಸು ಕೂತೂನಾನು ಕಾರ್ಯಪ್ರವೃತ್ತಿ. ತೀರ್ಪು ಮಹಿಳೆ ಅಂದರೆಎಂದೆಂದಿಗೂ ನಯ,ವಿನಯ.ಗಂಡಸರದ್ದು,ಕೇವಲ ಮೂಕಾಭಿ-ನಯ. ಶ್ರೀಧರ ಕಾಡ್ಲೂರುRead More
ಪುಸ್ತಕ ಓದುವವರು ಕಡಿಮೆಯಾಗಿರಬಹುದು. ಆದರೆ ಪುಸ್ತಕ ಓದುವವರೇ ಇಲ್ಲ ಎನ್ನುವ ದೋರಣೆಯನ್ನು ನಾನಂತು ಒಪ್ಪಿಕೊಳ್ಳಲಾರೆ. ಪ್ರಿಂಟೆಡ್ ಪುಸ್ತಕಗಳನ್ನು ಪ್ರೀತಿಯಿಂದ ಓದುವವರು ಖಂಡಿತ ಇದ್ದಾರೆ ಎನ್ನುವುದಕ್ಕೆ ನಾನು ಮತ್ತು ನನ್ನ ಪುಸ್ತಕಗಳೇ ಸಾಕ್ಷಿ. ಬಹುಶಃ ಓದುವವರನ್ನು ತಲುಪುವಲ್ಲಿ ಮತ್ತು ನಮ್ಮ ಸಾಹಿತ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಎಡವುತ್ತಿರಬಹುದು. ಮತ್ತು ಓದುಗರು ಬಿಡುವಿಲ್ಲದ ಕೆಲಸಗಳಲ್ಲಿ ನಿರತರಾಗಿ, ಓದುವ ಆಸಕ್ತಿಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿರಬಹುದು! ಕೆಲವು ಹಿರಿಯ ಲೇಖಕರನ್ನು ಸೇರಿಸಿಕೊಂಡು ಯುವಬರಹಗಾರರ ಪುಸ್ತಕಗಳ ಮೊದಲ ಮುದ್ರಣ ಪ್ರತಿಗಳ ಸಂಖ್ಯೆ ಒಂದು ಸಾವಿರಕ್ಕೆ ಇಳಿದಿದೆ. […]Read More
ಶಿವ ಕೊಟ್ಟ ಜೋಳಿಗೆಯ ಗೂಟಕ್ಕೆ ತಗುಲಿಸಿರೆಶಿವ ಬಂದು ಉಣಲಿಕ್ಕಿ ತಣಿಸುವನೆ ಹೇಳುಶಿವ ನಾಮ ಧ್ಯಾನದಲಿ ಊರೂರು ತಿರಿದು ಬರೆಶಿವನು ಕರುಣಿಪನೂಟ- || ಪ್ರತ್ಯಗಾತ್ಮ || ಮೃಗರಾಜ ತಾನೆಂದು ಗುಹೆಯೊಳಗೆ ಮಲಗಿರಲುಮೃಗಗಳೇ ತಾ ಬಂದು ಬಾಯ್ಗೆ ಬೀಳುವುವೆ?ಮೃಗರಾಜನಾದರೇಂ ಬೇಟೆಯಾಡಲೆ ಬೇಕುಜಗದೊಳಗೆ ಶ್ರಮಕೆ ಬೆಲೆ- || ಪ್ರತ್ಯಗಾತ್ಮ || ಬೇಸಿಗೆಯ ಬೇಗೆಯನು ತಾಳಲಾರದೆ ಬರಿದೆಘಾಸಿ ಪಟ್ಟರೆ ಗಾಳಿ ಬೀಸುವುದೆ? ಹೇಳುಬೀಸಣಿಗೆಯನು ಹಿಡಿದು ಬೀಸಿಕೊಂಡರೆ ಮಾತ್ರಬೀಸುವುದು ಗಾಳಿಯದು- || ಪ್ರತ್ಯಗಾತ್ಮ || ದಿನದಿನವು ಇನಿತಿನಿತು ಅಭ್ಯಾಸ ಮಾಡುತಿರೆಕೊನೆಗೆ ದಡ್ಡನು ಕೂಡ ವಿದ್ವಾಂಸನಹನುದಿನ […]Read More