ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 18

ಸೌಂದರ್ಯ ನಿಸರ್ಗ ಸೌಂದರ್ಯನೋಡಿ ನೀ ಮೈಮರೆತಿದ್ದೆಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದೆ!ನಾನು ಮೈ ಮರೆತಿದ್ದೆಚಪ್ಪಾಳೆ ತಟ್ಟಿದ್ದೆನಿಸರ್ಗ ಸೌಂದರ್ಯ – ನೋಡಿ ಅಲ್ಲನಿನ್ನ ಮುಗ್ಧ ಸೌಂದರ್ಯ – ನೋಡಿ!! ಕುರುಡ ಅವಳುನಕ್ಕಾಗಲೆಲ್ಲಫಳ ಫಳ ಹೊಳೆವಹಲ್ಲುಗಳ ಹೊಳಪಿಗೆಕಣ್ಣುಗಳ ಮಿಂಚಿಗೆಎಷ್ಟೋ ಸಾರೆ ನಾಕುರುಡನಾಗಿದ್ದೇನೆ!! ಎತ್ತ? ಸಿಹಿ ನೆನಪುಗಳನ್ನುಸ್ಮರಿಸುತ್ತದಿನ ಕಳೆಯುತ್ತಿರುವೆಎಣಿಸುತ್ತನನ್ನ ಮನಸೋ ಬರಿನಿನ್ನ ಸುತ್ತನೀ ಹೊರಟಿರುವೆನನ್ನ ಬಿಟ್ಟು ಎತ್ತ! ಕನಸಿನೂರಿಗೆ ಕನಸುಗಳನು ಹೊತ್ತುಸಾಗುತಿರುವೆದೂರದ ಕನಸಿನೂರಿಗೆಅಲ್ಲಿ ಸ್ವಚ್ಛಂದವಾಗಿಇರಬಹುದಂತೆ!ಹೆಜ್ಜೆ ಹಾಕುತ್ತಿದ್ದೇನೆಅವಳೊಂದಿಗೆನಾಳೆಯ ಬದುಕಬಂಡಿ ಎಳೆಯಲು!! ಡಾII ಪರಮೇಶ್ವರಪ್ಪ ಕುದರಿ ಚಿತ್ರಕೃಪೆ: https://webneel.com/Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 17

ಹಿಂದಿನ ಸಂಚಿಕೆಯಿಂದ… ಕಾವಲುಗಾರನಿಗೆ ಆಶ್ಚರ್ಯವಾಯಿತು. ಅದೊಂದು ಸುರಂಗ ಮಾರ್ಗ. ಮಂದ ಪ್ರಕಾಶದ ದೀಪದ ಬೆಳಕಿನಲ್ಲಿ ಸುರಂಗದ ಒಳಗಿನ ಒಳ ಭಾಗಚೆನ್ನಾಗಿ ಕಾಣುತ್ತಿರಲಿಲ್ಲ. ಆದರೆ ಸುರಂಗವು ಕೋಟೆಯ ಗೋಡೆಯ ಒಳಗೆ ಹುತ್ತದೊಳಗಿನ ಬಿಲಗಳಂತೆ ಬಹಳ ದೂರದವರೆಗೆ ಹೋಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಹೂಣರು ಅರಮನೆಯನ್ನೇನೋ ಆಕ್ರಮಿಸಿಕೊಂಡಿದ್ದರು. ಆದರೆ ಈ ಗುಪ್ತ ಸುರಂಗದ ವಿಷಯ ಅವರಿಗೆ ಗೊತ್ತಾಗಿರಲಿಲ್ಲ. ಗುಹನು ಮುಸಿ ಮುಸಿ ನಗುತ್ತ ಆ ಬಿಲದೊಳಕ್ಕೆ ಪ್ರವೇಶ ಮಾಡಿ ಕಾವಲುಗಾರನೂ ಹಿಂಬಾಲಿಸುವಂತೆ ಕೈ ಬೀಸಿದನು. ಸುರಂಗ ಅಷ್ಟೇನೂ ಕಿರಿದಾಗಿರಲಿಲ್ಲ. ಇಬ್ಬರು ಜೊತೆಯಾಗಿ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 35

ಯಾವುದೇ ಕ್ರಿಮಿ ಕೀಟ ಹಕ್ಕಿಗಳಿಗಾಹಾರಹಾವುಗಳು ಕಪ್ಪೆಗಳ ತಿಂದು ಜೀವಿಪುವುಹಾವು ಮೀನುಗಳೆಲ್ಲ ಗರುಡ ಪಕ್ಷಿಯ ಬಾಯ್ಗೆಜೀವ ಜೀವಕೆ ಉಣಿಸು_ || ಪ್ರತ್ಯಗಾತ್ಮ || ಇದು ಗಂಗೆ, ಇದು ಯಮುನೆ, ಇದುವೆ ಗೋದಾವರಿಯು,ಇದು ಸಿಂಧು, ಕಾವೇರಿ-ನರ್ಮದಾ-ತಪತಿಇದು ತುಂಗೆ, ಇದು ಭದ್ರೆ-ಮನವು ನಿರ್ಮಲವಿರಲುಉದಕವೆಲ್ಲವು ತೀರ್ಥ- || ಪ್ರತ್ಯಗಾತ್ಮ || ಏನೇನೋ ನೆಪ ಹೇಳಿ ಇನಿಯನಿಂ ಹಣ ಪಡೆದುಮನೆಯ ಮುನ್ನಡೆಸುತ್ತ ಅದರೊಳಗೆ ಮಿಗಿಸಿಮಾನ ಹೋಗುವ ವೇಳೆ ಗಂಡನಿಗೆ ನೆರವಪ್ಪಮಾನವತಿ ಸತಿ ಲೇಸು- || ಪ್ರತ್ಯಗಾತ್ಮ || ಸತಿ ಸುತರು ಒಂದಾಗಿ ದೂರದೂರಿಗೆ ಹೋಗಿಅತಿ […]Read More

ಟೀ ಕಾಫಿ ಪುರಾಣ – ಹೀಗೊಂದು ತಲೆಹರಟೆ

ಟೀ ಕಾಫಿ ಪುರಾಣ ಬೆಳಿಗ್ಗೆ ಎದ್ದ ತಕ್ಷಣ 80% ಜನರು ಕುಡಿಯುವ ಚಹಾ – ಕಾಫಿಯ ಪುರಾಣ ಯಾರಿಗಾದರೂ ಗೊತ್ತಾ ?? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. “ನಭಯಂ ಚಾಸ್ತಿ ಜಾಗೃತಃ ” ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ. ಅದರ ಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ… ವನವಾಸ – ರಾವಣ ಸಂಹಾರ – ಪಟ್ಟಾಭಿಷೇಕ ಎಲ್ಲ […]Read More

ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ

ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ಜೀವನ ಎಂಬುದು ನೀರಿನ ಮೇಲಿನ ಗುಳ್ಳೆಯಂತೆ. ಈವಾಗ ಇದ್ದ ಜೀವ ಮತ್ತೊಂದು ಕ್ಷಣ ಇಲ್ಲವಾಗದೆ ಇರಬಹುದು. ಜೀವನದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡು ಬದುಕನ್ನು ಸಾಗಿಸುತ್ತಾ ಇರುತ್ತೇವೆ. ಜೀವನದಲ್ಲಿ ಅಡೆತಡೆಗಳು ಬಂದಾಗ ಕುಗ್ಗಿ ಹೋಗುತ್ತೇವೆ. ನಾವೆಲ್ಲಾ ಯಾಕೆ ಜೀವನವನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎನ್ನೋದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಕ್ಷಣಿಕ ಸುಖಕ್ಕಾಗಿ ಜೀವನದಲ್ಲಿ ಓಡುತ್ತಲೇ ಇದ್ದೇವೆ. ಹೋರಾಟ ನಡೆಸುತ್ತಲೇ ಇದ್ದೇವೆ. ಕ್ಷಣಿಕ ಸುಖಕ್ಕಾಗಿ ಪಡಬಾರದ ಪಾಡು ಪಡುತ್ತೇವೆ. ನಾವು ನಾಗಾಲೋಟದ […]Read More

ಪಾರು ಹೇಳಿದ ಕಥೆ – 8

ಗಲಿ ಬಿಲಿ – ಗಡಿ ಬಿಡಿ ಅಂದು ಪಾರುವಿಗೆ, ಏಕೋ ಎದ್ದಾಗಿನಿಂದ ಆಯಾಸ ಒಂದು ರೀತಿಯ ಬೇಸರ ಆದರೂ ಕರ್ತವ್ಯ ಪ್ರಜ್ಞೆಯಿಂದ ಶಾಲೆಗೆ ತಯಾರಾದಳು. ಮಕ್ಕಳು ಮನೆಯಲ್ಲಿಯೇ ಇದ್ದರು ಅವರಿಗೆ ಕೊರೋನಾ ಗಲಾಟೆಯಲ್ಲಿ ಇನ್ನು ಶಾಲೆ ಪ್ರಾರಂಭವಾಗಿಲ್ಲ ಆನ್ ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಶಿಕ್ಷಕರೆಲ್ಲಾ ಶಾಲೆಗೆ ಹೋಗಬೇಕು. ಪಾರು ತಡವಾಗಿ ಎದ್ದಿದ್ದರಿಂದ ಬೇಗ ಬೇಗ ತಯಾರಾದಳು. ಅಂದೇಕೋ ಅವಳಿಗೆ ಶಶಿ ಚಿಕ್ಕಮ್ಮನದೇ ನೆನಪು ಮೊನ್ನೆಯಷ್ಟೇ ಎಲ್ಲರೂ ಕೂಡಿ ತಿರುಪತಿಗೆ ಹೋಗಿದ್ದರು.ಎಷ್ಟು ಸರಳ ನಡತೆ ಅವರದು ಚಿಕ್ಕಪ್ಪನು […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ- ೨೯

–ಮೊಗದಿಶು ಟಿಟ್ ಬಿಟ್ಸ್– ನನ್ನ ಮೊಗದಿಶು ಬದುಕಿನ ಸುದೀರ್ಘ ಹದಿಮೂರು ವರ್ಷಗಳಲ್ಲಿ ಸಾಕಷ್ಟು ವಿಶೇಷ ಸಂದರ್ಭಗಳನ್ನು, ಅನೇಕ ಥರ ಇಕ್ಕಟ್ಟಿನ ಪರಿಸ್ಥಿತಿಗಳನ್ನು ಹಾಗೂ ಉತ್ತಮ, ಹೃದಯಸ್ಪರ್ಶಿ ಘಟನೆ ಮತ್ತು ಸನ್ನಿವೇಶಗಳನ್ನೂ ಕಂಡಿದ್ದೇನೆ; ಉಂಡೂ ಇದ್ದೇನೆ. ಅಂತೆಯೇ ಅನೇಕ ವಿಧವಾದ ವ್ಯಕ್ತಿಗಳನ್ನೂ ಸಂಧಿಸಿದ್ದೇನೆ, ಮತ್ತು ಒಡನಾಡಿಗಳನ್ನಾಗಿ ಪಡೆದ ಭಾಗ್ಯವಂತನೂ ಆಗಿದ್ದೇನೆ ನಿಜ.ನನ್ನ ಹಿಂದಿನ ಲೇಖನಗಳಲ್ಲಿ ಅಂತಹ ವಿಚಾರಗಳನ್ನು ಆಗಿಂದಾಗ್ಗೆ ತಿಳಿಸುತ್ತಾ ಬಂದಿದ್ದೇನೆ. ಭಾರತೀಯರಲ್ಲಿ ಹಾಗೂ ಸೋಮಾಲಿ ಜನರಲ್ಲಿ ವಿಶಿಷ್ಟ ಲಕ್ಷಣ ಉಳ್ಳವರೂ ಇಲ್ಲದಿರಲಿಲ್ಲ. ಅಂತಹವರಲ್ಲಿ ನಾನು ಕಂಡ ಕೆಲವು […]Read More

ವಾರಕ್ಕೊಂದು ಕಗ್ಗ – 1

ಕಗ್ಗ ಮಾಲಿಕೆ – 1 “ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ” ಹೆಸರನ್ನು ಅರಿಯದವರ್ಯಾರು ? ಡಿ. ವಿ. ಜಿ ಎಂದೇ ಪ್ರಸಿದ್ಧರಾಗಿ ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗುಂಡಪ್ಪನವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ದರಾದವರು.ಡಿ. ವಿ .ಜಿ ರಚಿಸಿದ ಮಂಕುತಿಮ್ಮನ ಕಗ್ಗಗಳು ಕನ್ನಡದ ಆಧುನಿಕ ಭಗವದ್ಗೀತೆ ಎಂದೇ ಎಲ್ಲರು ಭಾವಿಸುವ ಉತ್ಕ್ರಷ್ಟ ಸಂಕಲನ. ಇದು 1943 ರಲ್ಲಿ ಪ್ರಕಟವಾದ ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯವಾದ ಪ್ರಮುಖ ಸಾಹಿತ್ಯಗಳಲ್ಲಿ ಒಂದು.ರಾಮಾಯಣ ಮಹಾಭಾರತ ದಲ್ಲಿ ನೆಡೆದ […]Read More

ರಾಜ್ – ಹಂಸ್

ಹಂಸರಾಗಕ್ಕೆ ಡಾ|| ರಾಜ್ ಗಾಯನ ಏಪ್ರಿಲ್ 24 ಡಾ|| ರಾಜ್ ಜನ್ಮದಿನದ ಸವಿನೆನಪು. ಕನ್ನಡ ನಾಡಿಗೆ ಮತ್ತು ಅಭಿಮಾನಿ ದೇವರುಗಳಿಗೆ ಈ ದಿವಸ ಮತ್ತೊಂದು ಹಬ್ಬ. ಡಾ|| ರಾಜ್ ಕನ್ನಡ ನಾಡಿನ ಜನಮಾನಸದಲ್ಲಿ ನೆಲೆಯಾಗಿರುವುದು ನಟನೆಯಿಂದಷ್ಟೇ ಅಲ್ಲದೆ ತಮ್ಮ ಸರಳ ವ್ಯಕ್ತಿತ್ವದಿಂದಲೂ ಕೂಡ, ಹಾಗೆಯೇ ಇನ್ನೊಂದು ರೂಪ ಅವರ ಗಾಯನ ಶಕ್ತಿ. ಅಸಂಖ್ಯ ಚಿತ್ರಗೀತೆಗಳಲ್ಲದೆ ಅವರು ಹಾಡಿದ ಅನೇಕ ಭಕ್ತಿಗೀತೆಗಳು ಕೂಡ ಇಂದಿಗೂ ಮುಂದೆಂದಿಗೂ ಡಾ|| ರಾಜ್ ರ ಧ್ವನಿ ಜನಮಾನಸಕ್ಕೆ ಮರೆಯಲಾರದಂತದ್ದು, ಹಾಗೆಯೇ ಅವರ ಧ್ವನಿಗೆ […]Read More

ಹನಿಗವನ – ಶ್ರೀಧರ ಕಾಡ್ಲೂರು

ಅಂಚೆ ಸಂದೇಶ ಕಳುಹಿಸಲುಮಾರ್ಗವಾಗಿದ್ದ ಟಪಾಲು.ಎಲ್ಲರ ಜೀವನದಲ್ಲಿಪಡೆದಿತ್ತು ಬಹು ದೊಡ್ಡಪಾಲು.ಸೋತಿತು, ಮೊಬೈಲ್ ಮುಂದೆಮಾಡಲಾಗದೆ ಡೀಲು. ದಾಯಾದಿಗಳು ಹುಟ್ಟಿನಿಂದಲೂ ಜೀವಕೆ ಜೀವ,ತೃಪ್ತಿಯಿಂದ ಕುಡಿದು ಬೆಳೆದರುಒಂದೇ ಬಟ್ಟಲಲ್ಲಿ ಹಾಲು.ಈಗ ಕಚ್ಚಾಟ,ಹೆತ್ತವರ ನೋಡಿಕೊಳ್ಳಲುನನಗೆ ಆಸ್ತಿಯಆ ಪಾಲು ಈ ಪಾಲು. ಮತ್ತು ಬೆಳಗ್ಗೆ ಹೋರಾಟಗಾರರುಪುರಭವನದ ಮುಂದೆ ಸೇರಿದ್ದರುಕಿಕ್ಕಿರಿದು.ಬರಬರುತ್ತಾ ಹೋರಾಟದಲ್ಲಿಒಬ್ಬೊಬ್ಬರಾಗಿ ಕಡಿಮೆ ಆಗುತ್ತಿದ್ದರು ಎಣ್ಣೆಯಕಿಕ್ಕಿಳಿದು. ನಂಬಿಕೆ ಕೆಲವೊಮ್ಮೆ ತುಂಬಾ ಕಷ್ಟನಮ್ಮ ಬೆನ್ನ ಹಿಂದೆ ಇರುವವರನಂಬುವುದು.ಉದಾಹರಣೆಗೆ, ಮರ ಕಡಿಯುವ ಕೊಡಲಿಹಿಂದೆ ಕಟ್ಟಿಗೆಇರುವುದು. ಶ್ರೀಧರ ಕಾಡ್ಲೂರುRead More