ದೂರವಾಣಿಯ ಜನಕ – ಅಲೆಕ್ಸಾಂಡರ್ ಗ್ರಹಾಂ ಬೆಲ್

ಅಲೆಕ್ಸಾಂಡರ್ ಗ್ರಹಾಂ ಬೆಲ್ ಇತ್ತೀಚಿನ ದಿನಗಳಲ್ಲಿ ದೂರವಾಣಿ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಅಲ್ಲವೇ? ಅದು ನಿಸ್ತಂತು (Landline) ಆಗಿರಬಹುದು ಅಥವಾ ಸಂಚಾರಿ ದೂರವಾಣಿ ಆಗಿರಬಹುದು (ಮೊಬೈಲ್ ಫೋನ್) ಆಗಿರಬಹುದು. ಇವು ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೇ ಕಷ್ಟ! ಅಲ್ಲದೇ ದೂರವಾಣಿ ಅಥವಾ ಈ ಫೋನ್ ಗಳ ಮೂಲಕ ನಾವು ಸುಮಾರು ದೇಶ ಕಾಲದ ಎಲ್ಲೇ ಮೀರಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ದೂರವಾಣಿ ಕ್ಷೇತ್ರದಲ್ಲಿ ಇಷ್ಟೊಂದು ಕ್ರಾಂತಿಗೆ ಕಾರಣರಾದವರು ಒಬ್ಬರು ಇದ್ದಾರೆ. ಅವರೇ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 19

ಹಿಂದಿನ ಸಂಚಿಕೆಯಿಂದ…. ಬಹಳ ಹೊತ್ತಿನವರೆಗೂ ಯಾವ ಶಬ್ದವೂ ಇಲ್ಲ. ‘ಬರಿ ಕಾಲ್ಪನಿಕ ಶಬ್ದಕಿವಿಗೆ ಬಿತ್ತು. ಇದು ಕತ್ತಲು ಮಾಡಿದ ಯಕ್ಷಣಿ; ಮೋಸ ಎಂದು ಮನಸ್ಸಿನಲ್ಲಿ ಗುಣಾಕಾರ ಹಾಕುತ್ತಿದ್ದನು. ಅವನ ಸ್ನಾಯುಗಳಿಗೆ ಮತ್ತೆ ಶಕ್ತಿ ಬಂದಿತ್ತು.‘ಇದು ಎಂಥ ಮಾಯೆ! ಅಲೌಕಿಕ ಮಾಯೆ!’‘ನಾನು ಬಂದಿನೀ… ಸೆರೆಯಾಳು…’ಇಲ್ಲ, ಮನುಷ್ಯರ ಕಂಠಧ್ವನಿ- ಮೋಸವಿಲ್ಲ. ಮಾತುಗಳು ಸಂದೇಹಾಸ್ಪದವಾಗಿದ್ದರೂ ಸ್ಪಷ್ಟವಾಗಿವೆ. ಮಾತಾಡಿದ ವ್ಯಕ್ತಿ ಇನ್ನೂ ಹತ್ತಿರ ಬಂದಿರುವ ಹಾಗಿತ್ತು. ಚಿತ್ರಕನು ‘ಬಂದಿನೀ?… ನೀನು ಹೆಂಗಸೇ?’ ಎಂದು ಕೇಳಿದನು.‘ಹೌದು.’ ‘ಈಗ ಸಮಾಧಾನವಾಯಿತು. ನಿನ್ನನ್ನು ಪ್ರೇತವೆಂದು ಭಾವಿಸಿದ್ದೆ’.‘ನೀನು ಯಾರು?’‘ನಾನೂ […]Read More

ಶಂಖ ಪುಷ್ಪ – Asian pigeonwings

ನನ್ನ ಮನೆಯಂಗಳದ ತಾರಸಿ ತೋಟದ ಹಸಿರು ಸುಂದರಿಯರು ಮುಂಗಾರು ಮಳೆಯಲ್ಲಿ ಮಿಂದು ಮುಂಜಾವಿನ ಎಳೆ ಬಿಸಿಲಿಗೆ ನಾಚಿದಂತೆ ಕಂಗೊಳಿಸುವಾಗ ಒಮ್ಮೆ ಆ ಇಬ್ಬನಿಯನ್ನು ಕೆನ್ನೆಗೆ ಸಿಡಿಸಿಕೊಳ್ಳಲ್ಲು ಸೊಗಸಾಗಿರುತ್ತದೆ. ಹೀಗೆ ತಾರಸಿ ತೋಟದಲ್ಲಿ ಅರಳಿದ ಬಣ್ಣ ಬಣ್ಣದ ಹೂಗಳನ್ನು ನೋಡುತ್ತಿರುವಾಗ ಒಂದು ಹೂಕುಂಡದಲ್ಲಿ ಗಿಡಕ್ಕೆ ಹಬ್ಬಿದ ಬಳ್ಳಿಯಲ್ಲಿ ಸ್ವಚ್ಛಂದ ಬಿಳಿಯ ಪುಷ್ಪವು ಕಣ್ಮನ ಸೆಳೆಯುತ್ತದೆ. ಎಲೆಗಳಲ್ಲಿ ನಾಚಿ ನಿಂತ ಹೆಣ್ಣಿನಂತೆ ಬಿಳಿಯ ಶಂಖ ಪುಷ್ಪವು ಕಂಡು ಬಂತು. ಅಲಂಕರಿಸಿದ ಹೆಣ್ಣಿಗೆ ದೃಷ್ಟಿ ಬೊಟ್ಟು ಇಟ್ಟಂತೆ ಹೂವಿನ ಎಡಬದಿಯಲ್ಲಿ ನೀಲಿಯ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 37

ಮುಳ್ಳುಗಿಡಗಳ ನಡುವೆ ಹಳೆಯ ಗುಡಿ ಗೋಪುರವುಎಲ್ಲಿಯಾದರೂ ಮಾಸ್ತಿ-ವೀರಗಲ್ಲುಗಳುಕಲ್ಲು ಶಾಸನ ನಿಮ್ಮ ಊರಬಳಿ ಇರಬಹುದುಎಲ್ಲವನು ಕಾಪಾಡು- || ಪ್ರತ್ಯಗಾತ್ಮ || ಗಾಳಿ ಹೊಡೆತಕೆ ಸಿಲುಕಿ ಮನೆದೀಪ ನಂದಿರಲುಕಾಳ ಕತ್ತಲೆ ಕವಿಯೆ ಮತ್ತೆ ಬೆಳಗಿಸರೆ?ಬಾಳ ಗೆಳತಿಯು ಮಡಿಯೆ ಬೇರೊಬ್ಬಳನು ತಂದುಬಾಳ ಬೆಳಗಿಸದಿಹರೆ ?- || ಪ್ರತ್ಯಗಾತ್ಮ || ನೂರಾರು ಶಾಸ್ತ್ರಗಳು ನೂರು ಬಗೆ ಹೇಳುವುವುನೂರು ಗೋಜಲು ಗಂಟು ಶಾಸ್ತ್ರಿಗಳ ತರ್ಕಯಾರ ಗೊಡೆವೆಯೂ ಬೇಡ ನಮ್ಮ ಹಿರಿಯರು ನಡೆದದಾರಿಯೇ ಒಳ್‍ದಾರಿ- || ಪ್ರತ್ಯಗಾತ್ಮ || ಸುದತಿಯರ ಸೌಂದರ್ಯ, ಶೃಂಗಾರ ವೈವಿದ್ಯಎದೆ-ನಡುವಿನಲುಗಾಟ, ಹೂ […]Read More

ಪಾರು ಹೇಳಿದ ಕತೆಗಳು – 10

ಮನೆ-ಕಟ್ ಮಾಡಿ ಬಾಡಿಗೆ ಕೊಡಿ – ಕಥೆ – 10 ಪಾರು ಅಂದು ಶಾಲೆಯಿಂದ ಸಾಕಾಗಿ ಬಂದಿದ್ದಳು. ನಲ್ಲಿ ತಿರುಗಿಸಿದರೆ ನೀರಿಲ್ಲ, ಬೆಳಗ್ಗೆ ಯಿಂದ ಸರಿಯಾಗಿ ಕರೆಂಟ್ ಇಲ್ಲಾ, ಮಕ್ಕಳು ‘ ಅಮ್ಮಾ, ನಮ್ಮ ಬೀದಿಯಲ್ಲಿ ಎಲ್ಲಾ ಕಡೆ ಕರೆಂಟ್ ಇದೆ ನಮ್ಮ ಮನೆಯಲ್ಲಿಯೇ ಇಲ್ಲಾ’ ಎಂದರು. ನೀರು ಅಷ್ಟೇ ಯಾವಾಗಲೂ ನಿಂತು ಹೋಗಿರುತ್ತಿತ್ತು. ತುಂಬಿಟ್ಟು ಕೊಳ್ಳಲು ಊರಿನಲ್ಲಿರುವ ಹಾಗೆ ಹಂಡೆ, ತೊಟ್ಟಿ ಯಾವುದು ಇಲ್ಲಿ ಇಲ್ಲವಲ್ಲಾ! ಪಾರುವಿನದು ಬೆಂಗಳೂರಿನಲ್ಲಿ ಒಂದು ಇಕ್ಕಟ್ಟಾದ ಪ್ರದೇಶದಲ್ಲಿರುವ ಬಾಡಿಗೆಮನೆ. ಅದಕ್ಕೆ […]Read More

ಸೂಕ್ಷ್ಮಾಣು ಜೀವದರ್ಶಕ ಯಂತ್ರದ ಜನಕ – ಅಂಟೋನ್ ವಾನ್‍ಲ್ಲಿವೆನ್‍ಹುಕ್

ಸೂಕ್ಷ್ಮಾಣು ಜೀವದರ್ಶಕ ಯಂತ್ರದ ಜನಕ – ಅಂಟೋನ್ ವಾನ್‍ಲ್ಲಿವೆನ್‍ಹುಕ್ ವಿಜ್ಞಾನ ಕ್ಷೇತ್ರದಲ್ಲಿ ಐನ್‍ಸ್ಟೇನ್, ನ್ಯೂಟನ್, ಆರ್ಕಿಮಿಡಿಸ್, ರಾಬರ್ಟ್ ಕಾಚ್, ಮೇಡಂ ಕ್ಯೂರಿ, ಮುಂತಾದ ಮಹಾವಿಜ್ಞಾನಿಗಳ ಹೆಸರನ್ನು ಕೇಳದವರೇ ಇಲ್ಲ. ವಿಜ್ಞಾನ ಕ್ಷೇತ್ರಕ್ಕೆ ಈ ಮಹಾ ವಿಜ್ಞಾನಿಗಳು ನೀಡಿದ ಕೊಡುಗೆ ಅಪಾರ ಇದರಿಂದ ಇವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಇದರಂತಯೇ ವಿಜ್ಞಾನ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿಯೂ ಪ್ರಚಾರದಿಂದ ದೂರ ಉಳಿದಿರುವ ವಿಜ್ಞಾನಿಗಳು ಬಹಳ ಮಂದಿ ಇದ್ದು ಅಂಥವರಲ್ಲಿ ‘ಅಂಟೋನ್ ನಾನ್ ಲಿವೆನ್ ಹುಕ್’ ಸಹ ಒಬ್ಬ. ಅಂಟೋನ್ […]Read More

ಮ್ಯಾನ್ ಆಫ್ ದಿ ಮ್ಯಾಚ್ – ಯಶಸ್ವಿ ಪ್ರಯೋಗಾತ್ಮಕ ಚಿತ್ರ

ಮ್ಯಾನ್ ಆಫ್ ದಿ ಮ್ಯಾಚ್ “ಮ್ಯಾನ್ ಆಫ್ ದಿ ಮ್ಯಾಚ್” ಬಹಳ ದಿನಗಳ ಮೇಲೆ ಒಂದು ವಿನೂತನ ಪ್ರಯೋಗಾತ್ಮಕ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಉತ್ಸಾಹಿ ನಿರ್ದೇಶಕರಾದ ಸತ್ಯ ಪ್ರಕಾಶ್ ತಮ್ಮ “ರಾಮ ರಾಮ ರೇ” ಹಾಗು “ಒಂದಲ್ಲ ಎರಡಲ್ಲ” ಚಿತ್ರಗಳ ನಂತರ “ಮ್ಯಾನ್ ಆಫ್ ದಿ ಮ್ಯಾಚ್” ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದ್ದಾರೆ. ಒಂದು ಒಳ್ಳೆಯ ರಂಗರೂಪಕವಾಗಬಹುದಾದ ಕಥೆಯನ್ನು ಯಶಸ್ವಿಯಾಗಿ ಚಲನಚಿತ್ರವನ್ನಾಗಿಸಿದ್ದಾರೆ. ಈ ಚಿತ್ರಕ್ಕೆ ನಿಜವಾದ ಸೂತ್ರಧಾರ ಸತ್ಯಪ್ರಕಾಶ್ ಆದರೂ […]Read More

ವಾರಕ್ಕೊಂದು ಕಗ್ಗ – 3(ಬಾಳಿಗೊಂದು ನಂಬಿಕೆ – ಡಿ. ವಿ. ಜಿ.)

ಕಗ್ಗ ಮಾಲಿಕೆ – ಕಗ್ಗ 17 ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ?ಹಾಲಾಹಲವ ಕುಡಿವ ಗಿರೀಶನಿರ್ದೊಡೀಕಳವಳವದೇತಕೆಲೋ? – ಮಂಕುತಿಮ್ಮ ತಳಮಳವಿದೇನಿಳೆಗೆ= ತಳಮಳವಿದು + ಏನು + ಇಳೆಗೆ, ದೇವಮನುಜರ್ =ದೇವದ + ಅನುಜರ್ಜಳಧಿಯೊಳಾದಂತೆ = ಜಲಧಿಯೊಳು + ಆದಂತೆ, ಗಿರೀಶನಿರ್ದೊಡೀ= ಗಿರೀಶನು + ಇರ್ದೊಡೆ,ಕಳವಳವದೇತಕೆಲೋ = ಕಳವಳವು + ಅದು+ ಏತಕೆ+ ಎಲೋ,ದೇವದನುಜರ್ = ದೇವಲೋಕದ ಅಣ್ಣ ತಮ್ಮಂದಿರು , ಮಥಿಸೆ= ಕಡೆಯೆ, ಜಲಿಧಿ= ಸಮುದ್ರ, ಸುಧೆ= ಅಮೃತ, ಪೀಠಿಕೆ = ಭೂಮಿಕೆ, ಪ್ರಸ್ತಾವನೆ, ಹಾಲಾಹಲ= ವಿಷ, […]Read More

ಯುಕ್ತಿ

ಯುಕ್ತಿ ಒಂದು ದಟ್ಟಾರಣ್ಯದಲ್ಲಿ ವಾಸವಾಗಿದ್ದ ಹುಲಿಯೊಂದು ಕಾಡಿನಲ್ಲಿ ತಾನೇ ಅತ್ಯಂತ ಬಲಶಾಲಿಯಾದ ಪ್ರಾಣಿಯೆಂದು ಅಹಂಕಾರದಿಂದ ಬೀಗುತ್ತಾ ತನಗೆದುರಾಗಿ ಸಿಕ್ಕ ಪ್ರಾಣಿಗಳನ್ನು ತನ್ನೊಂದಿಗೆ ಹೋರಾಟದ ಪಂದ್ಯಕ್ಕೆ ಆಹ್ವಾನಿಸಿ ಅವುಗಳನ್ನು ಸೋಲಿಸಿ ಕೊಂದು ತಿನ್ನುತ್ತಾ ಮೆರೆಯುತ್ತಿತ್ತು. ಇದಕ್ಕಾಗಿ ಹುಲಿಯು ಮೊದಲು ತಾನು ಎದುರಾಳಿಯ ಮೇಲೆ ಮೂರು ಬಾರಿ ದಾಳಿ ಮಾಡಿ ನಂತರ ಎದುರಾಳಿ ಪ್ರಾಣಿಯು ತನ್ನ ಮೇಲೆ ಮೂರು ಬಾರಿ ದಾಳಿ ಮಾಡುವ ನಿಯಮ ವಿಧಿಸಿತ್ತು. ಒಮ್ಮೆ ಹುಲಿಯು ಇಂದು ಯಾವ ಪ್ರಾಣಿಯನ್ನು ಪಂದ್ಯದಲ್ಲಿ ಸೋಲಿಸಿ ಕೊಂದು ತಿನ್ನುವುದೆಂದು ಯೋಚಿಸುತ್ತಿದ್ದಾಗ […]Read More

ರಾಜ್ಯದ ಏಕೈಕ ಮಹಿಳಾ ಲೋಕೋ ಪೈಲಟ್ ಕರಾವಳಿಯ ವನಿತಾ..!

ಎಲ್ಲರಿಗೂ ಏನಾದರೊಂದು ಸಾಧನೆಯ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಬೇಕೆಂಬ ಆಸೆಯಿರುವುದು ಸಹಜ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ವನಿತಾಶ್ರೀ ಕರ್ನಾಟಕದ ಏಕೈಕ ಮಹಿಳಾ ಲೋಕೋ ಪೈಲಟ್ (ರೈಲಿನ ಚಾಲಕಿ) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅದರಲ್ಲೂ ವನಿತಾಶ್ರೀ ಸವಾಲಿನಿಂದ ಕೂಡಿದ ರೈಲಿನ ಚಾಲಕಿಯಾಗಿ ಆಯ್ಕೆಯಾಗುವ ಮೂಲಕ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಉತ್ತಮ ವೇತನದೊಂದಿಗೆ, ಭತ್ಯೆ ಮತ್ತು ಕುಟುಂಬಕ್ಕೆ ಬೆಂಬಲದ ಖಾತ್ರಿಯಿರುವ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರು ಉದ್ಯೋಗವನ್ನು ಪಡೆಯುವುದು ಬಹಳ ವಿರಳವೆನ್ನಬಹುದು, ಅದರಲ್ಲೂ ರೈಲನ್ನೇ ಚಲಾಯಿಸುವ ಲೋಕೋ […]Read More