ಓದಲೇಬೇಕಾದ ರೋಚಕ ಕಾದಂಬರಿ “ರೌದ್ರಾವರಣಂ”

ಓದಲೇಬೇಕಾದ ರೋಚಕ ಕಾದಂಬರಿ ರೌದ್ರಾವರಣಂ ಆಪ್ತ ಗೆಳೆಯ ಅನಂತನ ಮೊದಲ ಕಾದಂಬರಿ “ರೌದ್ರವರಣಂ” ಕೃತಿಯು ಬಹಳ ಬೇಗ ಓದಿಸಿಕೊಳ್ಳುತ್ತದೆ. ಏಕೆಂದರೆ ಪ್ರತೀ ಅಧ್ಯಾಯಗಳಲ್ಲಿಯೂ  ಕುತೂಹಲ ಮತ್ತು ರೋಚಕಭರಿತ ಪ್ರೇರಣೆಗಳು ಭರ್ಜರಿಯಾಗಿ ಇರುವುದರಿಂದ. ಸುನೀತವಾದ ಸ್ವಚ್ಛ, ಹಳ್ಳಿ ಸೊಗಡಿನ ಭಾಷೆ ಸುಲಲಿತವಾಗಿ ಆಸ್ವಾದಿಸಲಿಕ್ಕೆ ಸಹಾಯ ಮಾಡುತ್ತದೆ. ರೌದ್ರದ ಆವರಣ ಎಲ್ಲ ಪಾತ್ರಗಳಲ್ಲಿಯೂ ಬಹಳ ಆಚ್ಚುಕಟ್ಟಾಗಿ ಆಗಿದೆ. ಕೆಲವೊಮ್ಮೆ,  ಕೌತುಕದ  ಪತ್ತೇದಾರಿಯಲ್ಲಿ ಸಾಗುತ್ತಿರುವಂತೆ ಅನಿಸುತ್ತದೆ. ಅದನ್ನ ಪೋಷಿಸುವಂತೆ ತಕ್ಕ  ಪ್ರೆಶ್ನೆಗಳು, ಗೊಂದಲಗಳು, ವಿಭಿನ್ನವಾದ ತಿರುವುಗಳು ಕೂಡ ಅಡಗಿವೆ. ಚಂದ್ರ(ನಾಯಿ)ನೆಂಬ ಭಾವ […]Read More

ನೀರಿನಡಿಯಲ್ಲಿ ವಿಶ್ವದ ಅತೀ ದೊಡ್ಡ ಸಸ್ಯ

ನೀರಿನಡಿಯಲ್ಲಿ ವಿಶ್ವದ ಅತೀ ದೊಡ್ಡ ಸಸ್ಯ ಇತ್ತೀಚಿಗೆ ವಿಜ್ಞಾನಿಗಳು ನೀರಿನಡಿಯಲ್ಲಿ ಬೆಳೆಯುತ್ತಿರುವ ವಿಶ್ವದ ಅತೀ ದೊಡ್ಡ ಸಸ್ಯವನ್ನು ಪತ್ತೆ ಹಚ್ಚಿದ್ದು ಈ ಬಗ್ಗೆ ಅಧ್ಯಯನ ವರದಿಯೊಂದು ರಾಯಲ್ ಸೊಸೈಟಿ ‘ಬಿ’ ಯಲ್ಲಿ ಪ್ರಕಟಗೊಂಡಿದೆ.ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಕೊಲ್ಲಿಯಲ್ಲಿ ಪತ್ತೆಯಾದ ಈ ಸಸ್ಯವು ಒಂದೇ ಬೀಜದಿಂದ ಹರಡಿದ್ದು ಸುಮಾರು 4500 ವರ್ಷ ಹಳೆಯದಾಗಿದೆ ಹಾಗು ಸುಮಾರು 180 ಕಿಲೋ ಮೀಟರ್ ಉದ್ದವಿದೆ. ಈ ಒಂದೇ ಸಸ್ಯವು ಸುಮಾರು 200 ಚದರ ಕಿಲೋ ಮೀಟರ್ ವರೆಗೆ ವ್ಯಾಪಿಸಿದೆ !!! ಸರಳವಾಗಿ […]Read More

ಹರಿವು

ಹರಿವು ಮನಸ್ಸು ಮೀನಿನಂತೆ! ಬರುವುದೆಲ್ಲನಿಂತ ನೀರಲ್ಲ, ಅದು ಬಹುಷಃದುಮ್ಮಿಕ್ಕುವ ಜಲಪಾತದಂತೆ ,ಬೋರ್ಗೆವ ನದಿ,ಭೂರಮೆಯ ಅಪ್ಪಣೆ ಕೇಳೋಲ್ಲ!ಹರಿದು ಸಾಗರವ ದಡ ಮುಟ್ಟುತ್ತಾಳೆ. ಎಲ್ಲಾ ಅವನ / ಅವಳ ಅಪ್ಪಣೆಯಂತೆ,ಅಪ್ಪಣೆ – ಒಪ್ಪುಗೆ ಕೇಳಲು ಬಿಡುವೆಲ್ಲಿಅವಳಿಗೆ, ಬಿಡುವಾದರೂ ಎಲ್ಲಿ?ಹೇಳಿದ್ದು-ಕೇಳಿದ್ದುನೋಡಿದ್ದು-ಕೇಳಿದ್ದುಆ ಗುಡ್ಡ ಕಣಿವೆಗಳೇ ಹರಿದು ಹೋಗು, ನಮಗಾದರೂಇದೇ ದುಃಖ್ಖ ದುಃಮಾನಗಳುನಿನಗಿಲ್ಲ ಯಾಕೆ ವೈ-ರಾಗ್ಯನಮ್ಮ ಸೀಳಿ ಹೋಗಲುನಿನಗಿಲ್ಲ ಕಾರಣ!ಯಾಕೆಂದರೆ ಸಾಗರನೀನು ಬರಲು ಕಾಯುತ್ತಿದ್ದೆ ಬೋರ್ಗರೆಯಲು ಕು ಶಿ ಚಂದ್ರಶೇಖರ್Read More

ಹೀಗಿರಲಿ ನಮ್ಮ ಸಾಮಾಜಿಕ ನಿಯಮಗಳು

ಹೀಗಿರಲಿ ನಮ್ಮ ಸಾಮಾಜಿಕ ನಿಯಮಗಳು ಪ್ರಸ್ತುತ ಸಾಮಾಜದಲ್ಲಿ ಮಾನವೀಯ ಸಂಬಂಧಗಳು ನಶಿಸುತ್ತಿವೆ. ಯುವಪೀಳಿಗೆಯು ಯಾಂತ್ರಿಕ ಬದುಕಿಗೆ ಜೋತುಬಿದ್ದಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾದರೆ ಯುವಪೀಳಿಗೆಯು ಪಠ್ಯದ ಹುಳುವಾಗುವ ಬದಲು ಪಠ್ಯೇತರ ಚಟುವಟಿಕೆಗಳತ್ತ ಗಮನಹರಿಸಿ ಸಮಾಜದೊಂದಿಗೆ ಬೆರೆಯುವ ಪ್ರಯತ್ನವನ್ನು ಮಾಡಬೇಕು. ಸಮಾಜದ ಎಲ್ಲಾ ಸ್ತರಗಳ ಜನರೊಂದಿಗೆ ಸಮಾನವಾಗಿ ಬೆರೆಯಬೇಕೆಂದರೆ ಕೆಲವೊಂದು ನಿಯಮಗಳತ್ತ ಗಮನಹರಿಸುವುದು ಉತ್ತಮ. ಅವುಗಳೆಂದರೆ,ಯಾರಿಗಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬಾರದು. ಕರೆ ಮಾಡಿರುವ ವ್ಯಕ್ತಿಯು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 22

ಹಿಂದಿನ ಸಂಚಿಕೆಯಿಂದ… ಚತುರಾನನ- ‘ಸರಿ. ಅದಾದ ಮೇಲೆ ಹಿಂದಿನ ದಿನ ರಾತ್ರಿ ತಾವು ತಮ್ಮ ಪರಿಚಯ ಹೇಳಿಕೊಂಡಿದ್ದಿದ್ದರೆ!… ಚಿತ್ರಕ- ಯಾರ ಮುಂದೆ ಪರಿಚಯ ಹೇಳಿಕೊಳ್ಳಬೇಕಾಗಿತ್ತು? ರಾತಿ ವೇಳೆ ಊರೊಳಗೆ ಗಸ್ತು ತಿರುಗುವ ಭಟರ ಮುಂದೆ? ತೋರಣದ್ವಾರದ ಕಾವಲುಗಾರರ ಮುಂದೆ?’ ಚತುರಾನನು ಚಿತ್ರಕನನ್ನು ಒಂದು ಬಾರಿ ನೋಡಿ ನಿಟ್ಟುಸಿರು ಬಿಟ್ಟನು. ‘ಹೋಗಲಿ ಬಿಡಿ. ಏನೇನು ಆಗಬೇಕಾಗಿತ್ತೊ ಎಲ್ಲವೂ ಆಗಿ ಹೋಯಿತು- ನಿರ್ವಾಣ ದೀಪೇ ಕಿಮು ತೈಲದಾನಮ್? (ಆರಿ ಹೋಗಿರುವ ದೀಪಕ್ಕೆ ಎಣ್ಣೆ ಹಾಕಿದರೆ ಪ್ರಯೋಜನವೇನು?) ಈಗ ನಿಮ್ಮ ವಿಶ್ರಾಂತಿಯ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 40

ಹನಿಗೂಡಿದರೆ ಹಳ್ಳ ತೆನೆಗೂಡಿದರೆ ಬಳ್ಳಅಣುವಿನಿಂದೇನೆಂದು ಸಲ್ಲದು ಉಪೇಕ್ಷೆಇನಿತಾದರೂ ಉಳಿಸಿ ಹಣವನೊಂದಡೆ ಇರಿಸುಘನ ನಿಧಿ ಭವಿಷ್ಯಕ್ಕೆ- || ಪ್ರತ್ಯಗಾತ್ಮ || ಇರುಳ ಕಾರ್ಗತ್ತಲಲಿ ದಾರಿ ತಪ್ಪಿದವಂಗೆಸರಿದಾರಿ ತೋರುವುದು ಕೋಲ್ಮಿಂಚು ಬೆಳಗಿಕೊರಗದಿರು ನೀಗೈದ ಸೇವೆ ಅಲ್ಪವದೆಂದುಕಿರಿದೆ ಅಳಿಲಿನ ಸೇವೆ ?- || ಪ್ರತ್ಯಗಾತ್ಮ || ಕೊಳಲಿನಿಂಚರ ಕೇಳಿ ತಲೆದೂಗದವರುಂಟೆ ?ಉಲಿವ ವೀಣೆಯ ದನಿಗೆ ಸೋಲದವರುಂಟೆ ?ಎಳೆಯ ಮಕ್ಕಳ ಮುದ್ದು ತೊದಲು ಮಾತನು ಕೇಳಿನಲಿಯದವರುಂಟೇನು ?- || ಪ್ರತ್ಯಗಾತ್ಮ || ಬಲಿಕೊಡುವರೇ ಹೇಳು ಆನೆ ಕುದುರೆಗಳನ್ನುಹುಲಿಯನೆಂದಾದರೂ ಬಲಿಕೊಟ್ಟುದುಂಟೆ ?ಬಲಿ ಪಶುವು ಕುರಿ-ಮೇಕೆ, […]Read More

ಏಕವ್ಯಕ್ತಿ ಕಲಾ ಪ್ರದರ್ಶನ – ನಿಸರ್ಗದ ಮಧ್ಯೆ ಚೌಗಲೆ!

ಏಕವ್ಯಕ್ತಿ ಕಲಾ ಪ್ರದರ್ಶನ – ನಿಸರ್ಗದ ಮಧ್ಯೆ ಚೌಗಲೆ! ಡಾ. ಡಿ ಎಸ್ ಚೌಗಲೆ ಅವರ ಕಲಾಕೃತಿಗಳ ಪ್ರದರ್ಶನವು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಮೇ 23 ರಿಂದ 31 ರವರೆಗೆ ಕೆ ಎಂ ಎಫ್ ಅವರ ಆಯೋಜಕತ್ವದಲ್ಲಿ ನಡೆಯುತ್ತಿದೆ. ‘ದಿ ನೇಚರ್ ವಿಥಿನ್‘ ಎಂಬ ಶೀರ್ಷಿಕೆಯಲ್ಲಿ ತಮ್ಮ ನೆಲೆಗಟ್ಟಿನ ಹಿನ್ನೆಲೆಯನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿದ್ದಾರೆ. ಗುಡ್ಡಗಳು ಅದರ ಮೇಲೆ ಮನೆಗಳನ್ನು ವರ್ಣರಂಜಿತವಾಗಿಸಿದ್ದಾರೆ. ತಮ್ಮೂರಿನ ಮಣ್ಣಿನ ಬಣ್ಣವನ್ನು ಕಲಾಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ದೇವಾಲಯದ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 39

ಕರೆಯದಿರೆ ಹೋಗದಿರು ಶುಭಕಾರ್ಯವೆಂದನಲುಪರಿಣಾಮ ರಮಣೀಯವಲ್ಲವದು ಕಾಣಮರಣ ವಾರ್ತೆಯ ಕೇಳಿ ಚಣಕಾಲನಿಲ್ಲದಿರುಮರುಕವೇ ಕರೆಯೋಲೆ- || ಪ್ರತ್ಯಗಾತ್ಮ || ಕರೆಯದಿದ್ದರೂ ಕೂಡ ದಕ್ಷ ಯಜ್ಞಕೆ ತೆರಳಿಕೆರಳಿ ದಾಕ್ಷಾಯಣಿಯು ಮರಣವಪ್ಪಿದಳುಕರೆಯದೆಯೆ ಹೋಗುವುದು ಮರ್ಯಾದೆಗದು ಕುಂದುನೆರೆ ವಿಚಾರಿಸಿ ನೋಡು- || ಪ್ರತ್ಯಗಾತ್ಮ || ಗಾಂಧಿ ನಿಧನದ ವಾರ್ತೆ ಕೇಳಿ ಕಂಗಾಲಾಗಿಮಂದಿ ಲಕ್ಷಕು ಮೀರಿ ದಿಲ್ಲಿ ಸೇರಿದರುನೊಂದು ದರ್ಶನ ಪಡೆದು ಅಶ್ರುಸುರಿಸಿದರವರನಂದು ಕರೆದವರಾರು ?- || ಪ್ರತ್ಯಗಾತ್ಮ || ತಂತಿಯನು ಅತಿ ಬಿಗಿದರದು ಕಡಿದು ತುಂಡಹುದುತಂತಿ ಸಡಿಲವ ಮಾಡೆ ನಾದ ಹೊರಬರದುತಂತಿ ಹದವಾಗಿರಲು ಸುಶ್ರಾವ್ಯ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 21

ಹಿಂದಿನ ಸಂಚಿಕೆಯಿಂದ…. ಚಿತ್ರದ ಬೊಂಬೆಗಳ ಹಾಗೆ ಇನ್ನೂ ಎಷ್ಟು ಹೊತ್ತು ಇರುತ್ತಿದ್ದರೋ ಏನೋ, ಆದರೆ ಅಷ್ಟರಲ್ಲಿ ದೈವಯೋಗದಿಂದ ರಾಜ್ಯದ ಪ್ರಧಾನಮಂತ್ರಿ ಚತುರಾನನ ಭಟ್ಟ ಕಾಣಿಸಿಕೊಂಡನು. ಚತುರಾನನ ವರ್ಣಾಶ್ರಮದಲ್ಲಿ ಬ್ರಾಹ್ಮಣ. ಚತುರ; ಸ್ಥಿರಬುದ್ಧಿಯ ವ್ಯಕ್ತಿ. ಆ ಕಾಲದಲ್ಲಿ ಭಾರತಭೂಮಿಯಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳಲ್ಲಿ ಬಹುಜಾತೀಯ ಹಾಗೂ ಬಹುಧರ್ಮೀಯ ರಾಜರುಗಳು ರಾಜ್ಯವಾಳುತ್ತಿದ್ದರು. ಉತ್ತರದಲ್ಲಿ ಶಕರೂ ಹೂಣರೂ ಇದ್ದರು. ದಕ್ಷಿಣದಲ್ಲಿ ದ್ರಾವಿಡರೂ ಗುರ್ಜರರೂ ಇದ್ದರು. ಮಂತ್ರಿಯ ಕಾರ್ಯನಿರ್ವಹಿಸುತ್ತಿದ್ದವರು ಮಾತ್ರ ಬಡಕಲು ಶರೀರದ, ಯಜ್ಞೋಪವೀತಧಾರಿಗಳಾದ ಬ್ರಾಹ್ಮಣರೇ ಆಗಿದ್ದರೆಂಬುದು ಒಂದು ಆಶ್ಚರ್ಯದ ಸಂಗತಿ. ಪ್ರಧಾನಿ […]Read More

ಬೆಂಕಿಯಲ್ಲಿ ಅರಳಿದ ಪಾರಿಜಾತ

ಬೆಂಕಿಯಲ್ಲಿ ಅರಳಿದ ಪಾರಿಜಾತ ರಾಜೇನಹಳ್ಳಿ ಎಂಬ ಊರಿನಲ್ಲಿ ಗುಣಶೇಖರ ಮತ್ತು ರಾಜಶೇಖರ ಎಂಬ ಇಬ್ಬರು ಸಹೋದರರು ಒಟ್ಟಿಗೇ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಗುಣಶೇಖರನು ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿದ್ದನು. ಇವನ ಪತ್ನಿ ಸತ್ಯಾ ಅತ್ಯಂತ ಮೃದು ಸ್ವಭಾವದ ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ ಗೃಹಿಣಿಯಾಗಿದ್ದಳು. ಗುಣಶೇಖರನಿಗೆ ಪಾರಿಜಾತ ಎಂಬ ಒಬ್ಬಳೇ ಮಗಳಿದ್ದು, ಅತ್ಯಂತ ಚತುರೆ ಮತ್ತು ಓದಿನಲ್ಲೂ ಎಲ್ಲರಿಗಿಂತ ಮುಂದಿದ್ದಳು. ಈಕೆ ಚೆನ್ನಾಗಿ ಓದಿ ಪ್ರತೀ ಬಾರಿಯೂ ತರಗತಿಗೆ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದಳು. ರಾಜಶೇಖರನು ರಿಯಲ್ ಎಸ್ಟೇಟ್ ವ್ಯವಹಾರವನ್ನು […]Read More