ಇನಿಯನ ಉಡುಗೊರೆ ಸಮುದ್ರತಟದಲ್ಲಿಇಳಿಸಂಜೆಯಲಿಕೈಯಲ್ಲಿ ಕೈ ಹೆಣೆದುಕುಳಿತಿದ್ದಾಗಅವಳು ಕೇಳಿದಳು ನನಗೊಂದುಆಕಾಶದ ಬಣ್ಣದಸೀರೆ ಕೊಡಿಸೋಅವನು ಮರುದಿನವೇ ತಂದಿದ್ದ ಆತುರಾತುರವಾಗಿಪೊಟ್ಟಣಬಿಡಿಸಿದವಳೇಮುಗುಳ್ನಕ್ಕಳುಕೇಳಿದಳು ಅರೇ ಏನಿದುಬೂದು ಬಣ್ಣಕ್ಕೆಕಿತ್ತಳೆಯ ಅಂಚುಇದರಲ್ಲಿ ಆಗಸದನೀಲಿಯೆಲ್ಲಿದೆ ಅವನು ಅವಳಬರಸೆಳೆದುಮುದ್ದುಗರೆಯುತ್ತಾಕಿವಿಯಲ್ಲಿಉಸುರಿದ ನಿನಗೆನಾ ಕಂಡಂತೆಸೂರ್ಯೋದಯಸೂರ್ಯಾಸ್ತದಆಗಸವೇ ಇಷ್ಟ ನೀನೆಂದೂಹನ್ನೊಂದರಆಗಸ ಕಂಡುಸಂಭ್ರಮಪಟ್ಟದ್ದುನಾಕಾಣೆ ಇನ್ನೇನು ಬೇಕಿದೆಅವಳಿಗೆ ಅವನಪ್ರೇಮದಲ್ಲಿಮುಳುಗಿಕೊಚ್ಚಿಹೋಗಲು ಸೌಜನ್ಯ ದತ್ತರಾಜRead More
ಶ್ರೀ ಕ್ಷೇತ್ರ ಬಿಚ್ಚಾಲೆ, ಬಿಚ್ಚಾಲಿ ಅಥವಾ ಭಿಕ್ಷಾಲಯ ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂಬ ನಾನ್ಣುಡಿ ಇದೆ. ಈ ಇಬ್ಬರನ್ನು ನೋಡಲು ತಿರುಪತಿಗೆ ಹಾಗೂ ಮಂತ್ರಾಲಯಕ್ಕೆ ಲಕ್ಷಾಂತರ ಮಂದಿ ಹೋಗಿ ದರ್ಶನ ಪಡೆದು ಪುನೀತಾರಾಗುತ್ತಾರೆ. ಆದರೆ ಮಂತ್ರಾಲಯಕ್ಕೆ ಹೋದ ಬಹಳ ಮಂದಿ ಗುರುರಾಯರ ದರ್ಶನ ಪಡೆದು ಮತ್ತೆ ಕೆಲವರು ಗಾಣದಾಳ್ ನಲ್ಲಿರುವ ಪಂಚಮುಖಿ ಅಂಜನೇಯನ ದರ್ಶನ ಪಡೆದು ವಾಪಸ್ ಹೋಗಿ ಬಿಡುತ್ತಾರೆ. ಮಂತ್ರಾಲಯದ ಹತ್ತಿರದಲ್ಲೇ ಇನ್ನೊಂದು ಪರಮ ಪವಿತ್ರವಾದ ಕ್ಷೇತ್ರವಿದೆ. ಅದೇ ಬಿಚ್ಚಾಲೆ, ಬಿಚ್ಚಾಲಿ […]Read More
ಅಪ್ಪ ಹೇಳಿದ ಕಥೆ ಅಪ್ಪನ ಮುದ್ದಿನ ಮಗಳು ಧನ್ವಿತಾ, ಅತ್ಯಂತ ಚುರುಕು ಹುಡುಗಿಯಷ್ಟೇ ಅಲ್ಲದೇ ಎಲ್ಲಾ ಚಟುವಟಿಕೆಗಳಲ್ಲೂ ಅತ್ಯಂತ ಲವಲವಿಕೆಯಿಂದ ಭಾಗವಹಿಸುತ್ತಿದ್ದಳು. ಏಕೋ ಅದೊಂದು ದಿನ ಧನ್ವಿತಾ ಅಳುತ್ತಾ ಅಪ್ಪನ ಬಳಿಗೆ ಬಂದಳು. ಮಗಳ ಅಳುವನ್ನು ನೋಡಿದ ಅಪ್ಪ ಏನಾಯಿತು ಪುಟ್ಟಾ ಎಂದು ಕೇಳಿದರು. ‘ಪಪ್ಪಾ ನಾನು ಎಷ್ಟು ಚೆನ್ನಾಗಿ ಚಿತ್ರ ಬಿಡಿಸಿದರೂ ನನ್ನನ್ನು ಚಿತ್ರಕಲಾ ಸ್ಪರ್ಧೆಗೆ ಮೇಷ್ಟ್ರು ಸೇರಿಸಿಕೊಳ್ಳಲೇ ಇಲ್ಲ, ಅವರು ನನ್ನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುದ್ದಾರೆ’ ಎಂದು ಧನ್ವಿತಾ ಅಪ್ಪನಿಗೆ ಅಳುತ್ತಾ ಹೇಳಿದಳು.ಆಗ ಅಪ್ಪನು ಧನ್ವಿತಾ […]Read More
ಸರ್ವರೊಳಗೊಂದೊಂದು ನುಡಿಗಲಿತು ಮಾನವನುಸರ್ವಜ್ಞನಾಗುವನು ಸಂದೇಹವಿಲ್ಲಸರ್ವರೊಳಗೊಂದಾಗಿ ನಗುನಗುತ ಮಾತಾಡುಸರ್ವಜನ ಮಾನ್ಯನಹೆ- || ಪ್ರತ್ಯಗಾತ್ಮ || ತಲೆ ಬಾಚಿ ಹೂ ಮುಡಿದು ಹಣೆಗೆ ತಿಲಕವನಿಟ್ಟುಮಲಿನವಲ್ಲದ ಸೀರೆ ಕುಪ್ಪಸವ ಧರಿಸಿಬಳಲಿ ಬಹ ಪತಿಯೆದಿರು ಸತಿ ಸುಳಿಯೆ ಪತಿಗಾಗಬಳಲಿಕೆಯು ಹಿಂಗುವುದು- || ಪ್ರತ್ಯಗಾತ್ಮ || ಜನುಮ ನೀಡಿದ ಜನನಿ ಜನಕರೇ ಪರದೈವಅನುನಯದೊಳವರನ್ನು ಮುಪ್ಪಿನಲಿ ಸಲಹು.ನಿನಗಾಗಿ ಅವರೆನಿತು ಕಷ್ಟಗಳ ಸಹಿಸಿದರೊ !ನೆನೆಯ ಬೇಡವೆ ನೀನು- || ಪ್ರತ್ಯಗಾತ್ಮ || ಹದಿ ಹರೆಯದ ಹೆಣ್ಣ ಹೊಳೆವ ಕಣ್ಣೇ ಚಂದಅದಕಿನಿತು ಕಾಡಿಗೆಯು ಮತ್ತಷ್ಟು ಚಂದಮುದಿತನದಲಿ ಮಂಜಾಗಿ ಸುಕ್ಕಾಗಿ […]Read More
ಸದ್ದು ನಿನ್ನಕಾಲ್ಗೆಜ್ಜೆಯಮಧುರವಾದಸದ್ದುನನ್ನನ್ನುಗಾಢನಿದ್ದೆಯಿಂದಎಚ್ಚರಿಸಿತು!! ಖೈದಿ ಫಳ ಫಳಹೊಳೆವನಿನ್ನಸುಂದರಕಂಗಳ ನೋಟಕ್ಕೆಸೋತೆ ನಾನು!ದಯೆ ತೋರದೇಈ ಕ್ಷಣಬಂಧಿಸು ನನ್ನನ್ನು!! ಬೂದಿ ನಿನ್ನನೆನಪಲ್ಲಿನಾನುಸುಟ್ಟು ಬೂದಿಆದಾಗಲೇತಿಳಿಯಿತುಎಲ್ಲ ಬೆಂಕಿಯನ್ನೂನೀರುಆರಿಸಲಾರದೆಂದು!! ಒರತೆ ನಿನ್ನಕೊರತೆಅದಾಗಲೆಲ್ಲನನ್ನಕಣ್ಣಲ್ಲಿಕಣ್ಣೀರ ಒರತೆ!ಅದೇಕೆನನ್ನ ಬಿಟ್ಟುಇನ್ನೊಬ್ಬನಲ್ಲಿ ಬೆರೆತೆ!! ಡಾII ಪರಮೇಶ್ವರಪ್ಪ ಕುದರಿRead More
ಯಾರು ಸರಿ? ಇತರರು ಸರಿ ಇಲ್ಲ ಅಥವಾ ತಪ್ಪಿತಸ್ಥರು ಎನ್ನುವ ಅಧಿಕಾರ ನಮಗೆ ಎಂದೂ ಇರುವುದಿಲ್ಲ.ಯಾವಾಗಲೂ ನಾವು, ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎಂದು ನಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಮತ್ತೊಬ್ಬರನ್ನು ದೂರುತ್ತಲೇ ಇರುತ್ತೇವೆ. ಆದರ ಬದಲಿಗೆ ನಾನೆಷ್ಟು ಸರಿ ಇದ್ದೇನೆ? ನಾನು ಸರಿ ಇದ್ದೇನೆಯೇ? ಎಂದು ನಮ್ಮನ್ನೇ ನಾವು ಪರೀಕ್ಷೆಯನ್ನು ಮಾಡಿಕೊಳ್ಳಬೇಕು. ಒಮ್ಮೆ ಲೋಟದ ಒಳಗಿದ್ದ ದಪ್ಪನೆಯ ಹಾಲು ನೀರನ್ನು ನೋಡಿ ‘ನೋಡು ನಾನೆಷ್ಟು ಬಿಳಿ ಬಿಳಿಯಾಗಿ ಸ್ವಚ್ಛ ಮತ್ತು ಶುಭ್ರವಾಗಿ ಇದ್ದೇನೆ, ನೀನಾದರೂ […]Read More
ಕಗ್ಗ ಮಾಲಿಕೆ – ಕಗ್ಗ 430 ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ ।ಇಬ್ಬರಾಗುವೆನೆಂದನಂತೆ ಪರಬೊಮ್ಮಂ ॥ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? ।ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ ಒಬ್ಬನುಣುವೂಟದಲಿ=ಒಬ್ಬನು+ಉಣುವ+ಊಟದಲಿ,ಇಬ್ಬರಾಗುವೆನೆಂದನಂತೆ=ಇಬ್ಬರು+ಆಗುವೆ+ಎಂದನಂತೆ, ಹೆಬ್ಬದುಕನೊಂಟಿತನದೊಳದೇನು=ಹೆಬ್ಬದುಕನು+ಒಂಟಿತನದೊಳು+ಅದೇನು, ಉಣುವ=ತಿನ್ನುವ, ಹೆಬ್ಬದುಕನು=ದೊಡ್ಡದಾದ ಜೀವನವ, ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಒಬ್ಬಂಟಿ ಜೀವನದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ನಾವು ಒಬ್ಬರೇ ಕುಳಿತು ಊಟ ಮಾಡಿದರೆ ಅದರಲ್ಲಿ ಏನು ಸುಖವಿರುತ್ತದೆ? ಇಬ್ಬರಾದರೆ ಪರಸ್ಪರ ವಿಷಯಗಳನ್ನು, ಕಷ್ಟ ಸುಖಗಳನ್ನು ಹಂಚಿಕೊಳ್ಳಬಹುದು. ಒಬ್ಬನೇ ಊಟ ಮಾಡಿದರೆ ನಮ್ಮ ಹೊಟ್ಟೆ ತುಂಬಬಹುದು ಆದರೆ ನಮ್ಮ ಮನಸ್ಸು ತುಂಬುವುದಿಲ್ಲ. […]Read More
ಹಿಂದಿನ ಸಂಚಿಕೆಯಿಂದ…. ರಟ್ಟಾ ಏನನ್ನಾದರೂ ಹೇಳುವುದಕ್ಕೆ ಮೊದಲೆ ಮಂತ್ರಿಯು ‘ಆದರೆ ಈಗಲೇ ತಮ್ಮ ದೌತ್ಯ ಮುಗಿದಿಲ್ಲ. ಹೀಗಿರುವಾಗ ತಾವು ಹೇಗೆ ಹೋಗುತ್ತೀರಿ? ಪತ್ರದ ಉತ್ತರ- ಎಂದು ಚಿತ್ರಕನಿಗೆ ಹೇಳಿದನು. ಚಿತ್ರಕನು ದೃಢವಾದ ಧ್ವನಿಯಲ್ಲಿ ‘ತಮ್ಮ ಉತ್ತರದ ಬಗೆಗೆ ನನಗೆ ರಾಜರಿಂದ ಯಾವ ಅಪ್ಪಣೆಯೂ ಆಗಿಲ್ಲ. ನಾನು ಶ್ರೀಮನ್ ಮಹಾರಾಜರ ಪತ್ರವನ್ನು ತಮಗೆ ಒಪ್ಪಿಸಿದ್ದೇನೆ. ಅಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು’ ಎಂದು ಹೇಳಿ ಅನುಮತಿಗಾಗಿ ಮತ್ತೆ ರಟ್ಟಾಳ ಕಡೆ ನೋಡಿದನು. ಈಗ ರಟ್ಟಾ ಮಾತನಾಡಿದಳು. ಆಕೆ ಸಮಾಧಾನಕರವಾದ ದನಿಯಲ್ಲಿ‘ದೂತ […]Read More
ಪೀಸ್ ಫುಲ್ ನಗರಿ – ಪೀಸಾ ಕಾರ್ಯನಿಮಿತ್ತ ಡೆನ್ಮಾರ್ಕ್‍ಗೆ ಹೋಗುವ ಅವಕಾಶ ಸಿಕ್ಕಿತ್ತು, ಜಾಸ್ತಿ ಸಮಯವಿಲ್ಲದ ಕಾರಣ ಯೂರೋಪಿನ ನಾಲ್ಕ್ಯೆದು ದೇಶಗಳನ್ನಾದರೂ ಸುತ್ತೋಣಾ ಎಂದು ಡೆನ್ಮಾರ್ಕ್, ಫ್ರಾನ್ಸ್, ಇಟಲಿ ಹಾಗೂ ವ್ಯಾಟಿಕನ್ ಪ್ರವಾಸ ಕ್ಯೆಗೊಂಡಿದ್ದೆ, ಪ್ಯಾರಿಸ್‍ನಿಂದ ಹೋರಟು ಪೀಸಾದಲ್ಲಿ ಇಳಿಯುವ ಮೂಲಕ ಇಟಲಿಗೆ ಪಾದರ್ಪಣೆಮಾಡಿದ್ದೆ. ಪೀಸಾದ ಪಾರ್ಚಿಜಿಯೋ ವಿಮಾನ ನಿಲ್ದಾಣದಲ್ಲಿಳಿದಾಗ ಮಧ್ಯಾಹ್ನ ಮೂರು ಘಂಟೆಯಾಗಿತ್ತು, ಇಮಿಗ್ರೇಶನ್ ಚೆಕ್ ಮುಗಿಸಿ ಹೊರ ಬಂದಾಗ ಮಧ್ಯಾಹ್ನ ಮೂರುವರೆಯಾಗಿತ್ತು,ಯೂರೋಪಿನಲ್ಲಿ ಮೂರನೆ ದೇಶದಲ್ಲಿ ಕಾಲಿಟ್ಟ ಸಂತಸ ಒಂದುಕಡೆಯಾದರೆ ಹೊಟ್ಟೆ ಬೇರೆ ಚುರುಗುಡುತ್ತಿತ್ತು, ವಿಮಾನ […]Read More
ಭಾರತದ ಘೇಂಡಾಮೃಗಗಳು ನಮ್ಮ ಭಾರತದ ಘೇಂಡಾಮೃಗ ಅಳಿವಿನಂಚಿನಲ್ಲಿರುವ ಒಂದು ವಿಶಿಷ್ಟವಾದ ಪ್ರಾಣಿ. ಇದಕ್ಕಿರುವ ಒಂಟಿಕೊಂಬಿನಿಂದಾಗಿ ನೋಡಲು ವಿಶಿಷ್ಟವಾಗಿ ಕಾಣುತ್ತದೆ. ಏಷ್ಯಾದಲ್ಲಿರುವ ಮೂರು ಪ್ರಮುಖ ಘೇಂಡಾಮೃಗಗಳಲ್ಲಿ” ನಮ್ಮ ಭಾರತದ ಒಂಟಿಕೊಂಬಿನ ಘೇಂಡಾಮೃಗ ದೊಡ್ಡದು. ಇನ್ನುಳಿದೆರಡು “ಸುಮಾತ್ರಾ ಘೇಂಡಾಮೃಗ” ಸುಮಾತ್ರ ಹಾಗು ಬೊರ್ನಿಯೊ ದ್ವೀಪಗಳಲ್ಲಿ ಕಂಡುಬಂದರೆ, “ಜಾವಾ ಘೇಂಡಾಮೃಗ” ಇಂಡೋನೇಷ್ಯಾ ಹಾಗು ಜಾವಾ ದ್ವೀಪಗಳಲ್ಲಿ ಮಾತ್ರ ಕಂಡುಬರುತ್ತದೆ. ನಮ್ಮ ಭಾರತದಲ್ಲಿನ ಘೇಂಡಾಮೃಗಗಳು ಹೆಚ್ಚು ಕಡಿಮೆ ಆಫ್ರಿಕಾದ ಬಿಳಿ ಘೇಂಡಾಮೃಗದಷ್ಟೇ ಗಾತ್ರದಲ್ಲಿ ಸಮನಾಗಿವೆ. ಇದನ್ನು ಖಡ್ಗಮೃಗ ಎಂದು ಸಹ ಕರೆಯಲಾಗುತ್ತದೆ. ಇದರ […]Read More