ವಿಶ್ವ ಹಾವುಗಳ ದಿನ – ಜುಲೈ 16

ಇವತ್ತು ವಿಶ್ವ ಹಾವುಗಳ ದಿನ, ಹಾವುಗಳು ಪರಿಸರದ ಆಹಾರ ಸರಪಳಿ ವ್ಯವಸ್ಥೆಯ ಬಹುಮುಖ್ಯ ಕೊಂಡಿಗಳು ಹಾಗಾಗಿ ಅವುಗಳ ಬಗೆಗೆ ಅರಿವು, ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಹಾವುಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಲ್ಲಿರುವ ಕೆಲವು ವಿಶೇಷ ಹಾವುಗಳ ಪರಿಚಯ ಹಾವುಗಳ ಕುರಿತು ಇರುವ ಮೂಢನಂಬಿಕೆಗಳು, ಅವುಗಳ ಜೀವನ ಶೈಲಿ ಈ ಕುತೂಹಲಕರ ಮಾಹಿತಿಗಳು ನಿಮಗಾಗಿ ಇಲ್ಲಿವೆ ನೋಡಿ. ವಿಶ್ವದಲ್ಲಿ 2500 ಕ್ಕೂ ಅಧಿಕ ಜಾತಿ / ಪ್ರಭೇದದ ಹಾವುಗಳಿದ್ದು, ಭಾರತದಲ್ಲಿ 300 ಕ್ಕೂ ಅಧಿಕ ಜಾತಿ/ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 21

ಒಲುಮೆ ಮನದಲ್ಲಿ ಅಡಗಿ ಕುಳಿತಿದೆನಿನ್ನ ಪ್ರೇಮದ ಮಧುರ ನೆನಪುನೆನೆದಷ್ಟು ಮನಕೆ ಹೊಳಪುಈ ಬದುಕು ಸವಿಯಲುನಿನ್ನ ಸಾಂಗತ್ಯ ಬೇಕುಸಲುಗೆ ಬೇಕುಒಲುಮೆಯು ಬೇಕು!! ತೇವ ನಾ ನಿನಗಿಷ್ಟವೆಂದುನಿನ್ನ ಮುಖದ ರಂಗೇಸಾರಿ ಸಾರಿ ಹೇಳುತಿದೆ!ಆದರೂನಿನ್ನ ನಾಲಿಗೆಏಕೆ ಮೌನ ?ಕಣ್ಣುಗಳೇಕೆತೇವ ? ಅವಸರವೇನಿತ್ತು? ಹುಡುಗಿ, ನಿನ್ನನ್ನು ಬಹಳಹಚ್ಚಿಕೊಂಡೆನಿನ್ನ ಸಲುಗೆಯ ಸ್ನೇಹವನ್ನುಮೆಚ್ಚಿಕೊಂಡೆನಿನಗೆ ನೀನೆ ಚೆಲುವೆ ಎಂದುಕೊಚ್ಚಿಕೊಂಡೆತಿಳಿಯದೇ ಬದುಕಿಗೆ ಬೆಂಕಿಹಚ್ಚಿಕೊಂಡೆಅಂತಹ ಅವಸರವೇನಿತ್ತು ನಿನಗೆ ?ಯೌವನದ ಮದವೇರಿತ್ತೇ ? ಸಾರಬೇಡ ನಿನ್ನಇಚ್ಛೆಯಂತೆನಿನ್ನನ್ನು ತ್ಯಜಿಸಿದ್ದೇನೆಗೆಳತಿ!ಸುಖಾ ಸುಮ್ಮನೆನಾನುಮೋಸಗಾರಎಂದು ಜಗತ್ತಿಗೆಸಾರಬೇಡ!! ಡಾII ಪರಮೇಶ್ವರಪ್ಪ ಕುದರಿಚಿತ್ರದುರ್ಗRead More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 26

ಹಿಂದಿನ ಸಂಚಿಕೆಯಿಂದ… ನಡುರಾತ್ರಿಯ ನಂತರ ಅರಮನೆಯ ದೀಪಗಳು ಆರಿಹೋಗಿದ್ದವು. ಶುಕ್ಲ ಚತುರ್ದಶಿಯ ಚಂದ್ರನು ಪಶ್ಚಿಮ ದಿಕ್ಕಿನ ಕಡೆಗೆ ಸಾಗುತ್ತಿದ್ದನು. ನಡುನಡುವೆ ಸಣ್ಣ ಪುಟ್ಟ ಮೋಡಗಳು ಚಂದ್ರನನ್ನು ಮರೆ ಮಾಡುತ್ತಿದ್ದವು. ರಾಜಭವನ ಸುಪ್ತಾವಸ್ಥೆಯಲ್ಲಿತ್ತು. ಎಲ್ಲೆಲ್ಲೂ ನೀರವತೆ. ತನ್ನ ಶಯನಕಕ್ಷೆಯಲ್ಲಿ ಕಾಲುಚಾಚಿ ಮಲಗಿದ್ದ ಚಿತ್ರಕನು ನಿಧಾನವಾಗಿ ಎದ್ದು ಕುಳಿತನು. ಅವನು ನಿದ್ರಿಸಿರಲಿಲ್ಲ. ಕಣ್ಣುಮುಚ್ಚಿಕೊಂಡು ಸುಮ್ಮನೆ ಮಲಗಿದ್ದನು. ಮನೆಯ ಒಂದು ಮೂಲೆಯಲ್ಲಿ ಇಟ್ಟಿದ್ದ ಬತ್ತಿಯ ದೀಪವು ಅಸ್ಪಷ್ಟವಾದ ಬೆಳಕು ಚೆಲ್ಲುತ್ತಿತ್ತು. ತೆರೆದ ವಾತಾಯನದ ಮೂಲಕ ತಂಗಾಳಿಯ ಜೊತೆಗೆ ಬೆಳುದಿಂಗಳ ಬೆಳಕು ಕೊಠಡಿಯ […]Read More

ಕಟ್ಟುಹಾವು – ಇದು ಸೈಲೆಂಟ್ ಕಿಲ್ಲರ್

ಕಟ್ಟುಹಾವು – Common Krait ನಮ್ಮ ಮಲೆನಾಡು ಭಾಗದಲ್ಲಿ ಕಟ್ಟುಹಾವು, ಕಡಂಬಳ ಹಾವು, ಕಟ್ಟು ಕಡಂಬಳ, ಕಟ್ಟು ಕನ್ನಡಿ ಹಾವು ಎಂದೆಲ್ಲ ಹೆಸರಿನಿಂದ ಕರೆವ ಈ ಹಾವಿಗೆ ಆಂಗ್ಲದಲ್ಲಿ Common Krait ಎನ್ನುತ್ತಾರೆ,ಭಾರತದ 4 ಅಪಾಯಕಾರಿ ಹಾವುಗಳಲ್ಲಿ (Big four venomous snakes) ಇದೂ ಒಂದು. ನಮ್ಮಲ್ಲಿ 2-3 ಅಡಿ ಉದ್ದದ ಹಾವುಗಳನ್ನು ಈ ಜಾತಿಯಲ್ಲಿ ನೋಡಬಹುದು, ಸದಾ ರಾತ್ರಿ ಸಂಚಾರಿಯಾದ (Noctarnul) ಇದು ಹೆಚ್ಚಾಗಿ ಇತರ ಜಾತಿ ಹಾವುಗಳನ್ನೇ ತಿಂದು ಜೀವಿಸುತ್ತದೆ. ಸಾಮಾನ್ಯವಾಗಿ ಕಪ್ಪು ಬಣ್ಣದಂತೆ […]Read More

ನೋಡಬನ್ನಿರಿ ಶ್ರೀ ಜಗನ್ನಾಥದಾಸರ ತಂಬೂರಿ!!

ಶ್ರೀ ಜಗನ್ನಾಥದಾಸರ ತಂಬೂರಿ ಮಲಗಿ ಪರಮಾದರದಿ ಪಾಡಲು |ಕುಳಿತು ಕೇಳುವ |ಕುಳಿತು ಪಾಡಲು ನಿಲುವ |ನಿಂತರೆ ನಲಿವ | ನಲಿದರೆ ಒಲಿವೆ |ನಿಮಗೆಂಬ ಸುಲಭನೋ ಹರಿ|ತನ್ನವರನರಘಳಿಗೆ ಬಿಟ್ಟಗಲನು |ರಮಾಧವನೊಲಿಸಲರಿಯದೆ |ಪಾಮರರು ಬಳಲುವರು ಭವದೊಳಗೆ| ಭಾರತದ ವೇದಾಂತ ಮತ್ತು ದರ್ಶನ ಶಾಸ್ತ್ರಗಳನ್ನು ಶ್ರೀಮಂತಗೊಳಿಸುವಲ್ಲಿ ಕರ್ನಾಟಕದ ದಾಸ ಸಾಹಿತ್ಯ ಪರಂಪರೆಯದ್ದು ಮಹತ್ತರವಾದ ಪಾತ್ರ. ಕರ್ನಾಟಕದಲ್ಲಿ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅನೇಕ ಮಹನೀಯರಿದ್ದಾರೆ ಅಂಥಹವರಲ್ಲಿ ಪ್ರಮುಖರಾದವರು ಶ್ರೀ ಜಗನ್ನಾಥದಾಸರು. ಇವರು ಭಾರತೀಯ ವೇದಾಂತ ಮತ್ತು ದರ್ಶನ ಶಾಸ್ತ್ರಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಹೊಂದಿದ್ದವರು […]Read More

ಆವರ್ತ – ಮನಸಿನ ಅರಿಗಳ ಅರಸುತ್ತಾ

ಆವರ್ತ-ಮನಸಿನ ಅರಿಗಳ ಅರಸುತ್ತಾ ಆಶಾ ರಘು ಅವರೇ ಹೇಳುವಂತೆ, ’ಆವರ್ತ’ ಅವರ ಮಹತ್ವಾಕಾಂಕ್ಷೆಯ ಕಾದಂಬರಿ. ʻಹೌದು, ಇದು ಒಂದು ಮಹತ್ವಾಕಾಂಕ್ಷೆಯ ಕಾದಂಬರಿಯೇʼ ಎಂದು ಓದುಗರನ್ನೂ ಒಪ್ಪಿಸಬೇಕಾದರೆ ಎಷ್ಟು ಸಶಕ್ತವಾಗಿ ಇರಬೇಕು ಎನ್ನುವ ಕಲ್ಪನೆ, ಬಹಶಃ ಆಶಾ ಅವರಿಗೆ ಸುಲಭವಾಗಿ ಅರ್ಥವಾಗಿಬಿಟ್ಟಿರುವಂತಿದೆ. ಹಾಗಾಗಿಯೇ ʻಆವರ್ತʼ ಓದುತ್ತಾ ಹೋದಂತೆ ಅದು ಓದುಗನನ್ನು ಆವರಿಸಿಕೊಂಡು ಬಿಡುತ್ತದೆ. ಎಲ್ಲ ನವರಸಗಳು ಓದುಗನ ಮೇಲೆ ಮುಕುರಿ ಬಿದ್ದು ಅವನು ಭಾವನೆಗಳ ತೀವ್ರ ಏರಿತಗಳನ್ನು ಗಾಢವಾಗಿ ಅನುಭವಿಸುವುದು ಉಚಿತವೆನಿಸಿ ತನ್ಮೂಲಕ ಅನಿವಾರ್ಯವೂ ಆಗಿ ಬಿಡುತ್ತದೆ. ನಮ್ಮ […]Read More

ಧೈರ್ಯಂ ಸರ್ವತ್ರ ಸಾಧನಂ – ಸಂತೋಷ್ ರಾವ್ ಪೆರ್ಮುಡ

ಧೈರ್ಯಂ ಸರ್ವತ್ರ ಸಾಧನಂ ‘ಜೀವನ ಎನ್ನುವುದು ಯಾರಿಗೂ ಸುಖದ ಸುಪ್ಪತ್ತಿಗೆ ಅಲ್ಲ. ಇಂದು ಕಠಿಣತೆಗೆ ತನ್ನನ್ನು ತಾನು ಒಡ್ಡಿಕೊಂಡವನು ಮತ್ತು ನಾಳೆಯೂ ಕಠಿಣತೆಯನ್ನು ಎದುರಿಸಲು ಸಿದ್ಧವಾಗಿ ಇರುವವನು ನಾಳೆಯೂ ಸುಖದ ಅನ್ನವನ್ನು ಉಣ್ಣಬಲ್ಲ’ ಶ್ರೀ “ಸಂತೋಷ್ ರಾವ್ ಪೆರ್ಮುಡ” ಅವರ ಹೊಸ ಪುಸ್ತಕ “ಧೈರ್ಯಂ ಸರ್ವತ್ರ ಸಾಧನಂ” ನಿಂದ ಆಯ್ದ ಸಾಲು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯವರಾದ ಶ್ರೀ ಸಂತೋಷ್ ರಾವ್ ಪೆರ್ಮುಡ ” ಧಾರವಾಡ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯುವ […]Read More

ವಿಜಯಕ್ಕೆ ಮಾರ್ಗದರ್ಶಕ ವಿಜಯೀಭವ – ವಿ. ಗೋಪಕುಮಾರ್

ವಿಜಯೀಭವ – ಗೆಲ್ಲಲು ಸಿದ್ದರಾಗಿ ಕನ್ನಡದಲ್ಲಿ ನ್ಯಾನೋಕಥೆಗಳನ್ನು ರಚಿಸುವ ಮೂಲಕ ಸಾಹಿತ್ಯದಲ್ಲಿ ಹೊಸ ಅಲೆ ಎಬ್ಬಿಸುತ್ತಾ ನಮ್ಮೆಲ್ಲರಿಗೂ ಪರಿಚಿತರಾದ ವಿ ಗೋಪಕುಮಾರ್ ಅವರ ನಾಲ್ಕನೆ ಕೃತಿ ‘ವಿಜಯೀಭವ’ ಟೀನೇಜ್ ಮಕ್ಕಳ ಶಿಸ್ತು, ಏಕಾಗ್ರತೆ ಮತ್ತು ಪೊಟೆನ್ಶಿಯಾಲಿಟಿಯನ್ನು ಕಾಪಾಡಿಕೊಳ್ಳಲು ಒಬ್ಬೊಳ್ಳೆ ಗೆಳೆಯನಾಗಿ, ಮಾರ್ಗದರ್ಶಕನಾಗಿ ಸಹಕರಿಸುತ್ತದೆ. ಎಲ್ಲ ಅಧ್ಯಾಯಗಳನ್ನು ಮಕ್ಕಳ ಮನಸ್ಸಿಗೆ ಹತ್ತಿರವಾಗುವಂತೆ ಸೂಕ್ತ ಉದಾಹರಣೆಗಳ ಮುಖಾಂತರ ವಿಶ್ಲೇಷಿಸಿದ್ದಾರೆ. ಪ್ರೌಢಶಾಲ ಹಾಗೂ ಕಾಲೇಜು ಮಕ್ಕಳ ವ್ಯಕ್ತಿತ್ವವನ್ನು ಅಚ್ಚುಕಟ್ಟಾಗಿ ರೂಪಿಸುವಲ್ಲಿ ಈ ಪುಸ್ತಕ ಖಂಡಿತ ಕೆಲಸ ಮಾಡುತ್ತದೆ. ಓದಲು ಅಷ್ಟೇ ಅಲ್ಲದೆ […]Read More

ತಂತಿಗೆ ತಂತಿ ತಾಗಿ – ದೀಪ ಗೋನಾಳ, ಕವನ ಸಂಕಲನ

ತಂತಿಗೆ ತಂತಿ ತಾಗಿ ದೀಪಕ್ಕಳ ‘ತಂತಿಗೆ ತಂತಿ ತಾಗಿ’ ಕವನ ಸಂಕಲನ ಓದುವುದೇ ಚೆಂದ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ಎಲ್ಲರೂ ಓದಬಹುದಾದ ಪುಟ್ಟ ಪುಟ್ಟ ಕವಿತೆಗಳಿಂದ ಹಿಡಿದು ಪುಟ ಪುಟಗಳ ತುಂಬ ಹರವಿಕೊಂಡಿರುವ ದೊಡ್ಡ ಗಾತ್ರದ ಕವಿತೆಗಳೂ ಇಲ್ಲಿ ಸಾಲುಸಾಲಾಗಿ ಜಾಗ ಪಡೆದುಕೊಂಡಿವೆ. ಬರೀ ಕವಿತೆಗಳಾಗದೆ ನೆನಪಿನ ಬುತ್ತಿ ಬಿಚ್ಚಿಡುವ, ಇನಿಯನಿಗೆ ಪ್ರೇಮ ನಿವೇದನೆ ಹೇಳಿಕೊಳ್ಳುವ, ಇನ್ಯಾರೊಂದಿಗೋ ಸಂವಾದ ಮಾಡುವ ಒಂದಷ್ಟು ಗದ್ಯ ಕವಿತೆಗಳು ನಮ್ಮನ್ನು ಮಾತು ಮಾತಿಗೂ ಕೆಣಕುತ್ತವೆ. ಪರಿಶುದ್ಧವಾದ ಪ್ರೀತಿಯ ಹುಡುಕಾಟದಲ್ಲಿ ಕೊನೆಗೆ […]Read More

ಮೊಸಳೆಗಳು – ಅಳಿವಿನಂಚಿನಲ್ಲಿರುವ ಸರೀಸೃಪ

ಮೊಸಳೆಗಳು – Crocodile ಸರೀಸೃಪ ವರ್ಗಕ್ಕೆ ಸೇರಿದ ಮೊಸಳೆಗಳು ಶೀತ ರಕ್ತ ಪ್ರಾಣಿಗಳು, ಪ್ರಸ್ತುತ ಭೂಮಿ ಮೇಲಿನ ಅತಿ ದೊಡ್ಡ ಸರೀಸೃಪ ಜುರಾಸಿಕ್ ಯುಗದಲ್ಲಿ ಭೂಮಿಯನ್ನು ಆಳಿದ ಡೈನೋಸಾರ್ ಗಳ ಸಂಬಂಧಿಗಳು, ಸುಮಾರು ೧೭೦ ಮಿಲಿಯನ್ ವರ್ಷಗಳಿಂದ ಅಷ್ಟೊಂದು ಬದಲಾವಣೆ ಹೊಂದದೆ ಭೂಮಿಯ ಬೆಚ್ಚಗಿನ ಮತ್ತು ಉಷ್ಣ ಹವಾಮಾನದ ವಲಯಗಳಲ್ಲಿ ವಿತರಣೆಗೊಂಡಿವೆ. ಜಲವಾಸಿಗಳಾದ ಇವು ಆಹಾರದ ವೇಳೆಯನ್ನು ಬಿಟ್ಟು ಇನ್ನುಳಿದ ಸಮಯದಲ್ಲಿ ಬಿಸಿಲು ಕಾಯಿಸಲು ಭೂಮಿಗೆ ಬರುತ್ತವೆ, ಜಾಲ ಪಾದಗಳನ್ನು ಹೊಂದಿ ಶರೀರ ಈಜುವುದಕ್ಕೆ ಮಾರ್ಪಾಡಾಗಿದೆ, ಬಾಲವು […]Read More