ಸುಳ್ಳಿನ ಸೋಗು ಸುಳ್ಳಿನ ಸೋಗು ಬಲು ಜೋರುಜನ ಹೋಗುತಿರುವರು ಅದಕೆ ಮಾರು. (ಮಾರುಹೋಗುತಿರುವರು) ಸುಳ್ಳು ತೋರುತಿದೆ ಆರ್ಭಟವನುಸತ್ಯ ಮೊರೆಯಿಡುತಿದೆ ದೈವ ಕೃಪೆಯನು. ಸುಳ್ಳಿನ ಮುಖಗಳು ಹಲವಾರುಸತ್ಯವ ತಿಳಿದವರು ಕೇವಲ ಕೆಲವರು. ಸುಳ್ಳು ಮೆರೆಯುತಿದೆ ಅಟ್ಟಹಾಸದಿಸತ್ಯವು ಸಾಯುತಿದೆ ಸುಳ್ಳಿನ ಅಡಿಯಲಿ. ಸುಳ್ಳು ತೋರುತಿದೆ ಭಯಂಕರ ಆಸೆಸತ್ಯಕ್ಕಾಗುತಿದೆ ಪದೇ ಪದೇ ನಿರಾಸೆ. ಸುಳ್ಳೀಗೆ ಸಿಗುತ್ತಿದೆ ಜಯದ ಮಾಲೆಸತ್ಯಕೆ ಸಿಗುತ್ತಿದೆ ಸೋಲಿನ ಸರಮಾಲೆ.ಸುಳ್ಳು ಮಾಡುತಿರುವುದು ಅಪಹಾಸ್ಯವಸತ್ಯ ಕೂಗಿ ಕರೆಯುತಿದೆ ಮನುಷ್ಯತ್ವವ.ಸುಳ್ಳಿಗೆ ಸುಖದ ಸೋಪಾನಸತ್ಯಕೆ ಸದಾ ಅವಮಾನ. ಸುಳ್ಳು ಮಾಡುತಲಿದೆ ಮಾರ್ಮಿಕ ಹತ್ಯೆಜನರಿಗಾಗುತ್ತಿಲ್ಲ […]Read More
ಧರ್ಮದ ಕೊಡಲಿ ದುಡಿಯುವ ಕೈಗಳ ಕತ್ತರಿಸಿದರುಹರಿಸಿದರು ನೆತ್ತರುಕಣ್ಣೀರು ಕಡಲಾಗಿಸಿದರು ಹೃದಯಕ್ಕೆ.ಶವವಾಯಿತು, ತಾಯಿ ಜೀವ. ಜೀವ ಇದ್ದೂ….ಧರ್ಮಾಂದತೆಯ ಕೈಗಳಿಗೆ ಕೊಡಲಿ ಕೊಟ್ಟವರಾರು? ಯಾರೋ ಅದ್ಯಾರದೋ ಜೀವ ಹೊತ್ತೊಯ್ಯುತಿದ್ದಾರೆತಡೆಯುವವರಾರಿಲ್ಲ. ಬದುಕು ಭಯದ ಕೂಪ.ಕುರಾನು ಶಾಂತಿ ಬೋದಿಸುತ್ತಿದೆ.ಬೈಬಲ್ಲೂ ಶಾಂತಿ ಸಾರುತ್ತಿದೆ.ಗೀತೆಯೂ ಶಾಂತಿ ಹಾಡುತ್ತಿದೆ.ಮೌಡ್ಯ ತೊಲಗುತ್ತಿಲ್ಲ ಆದರೂ… ಜಳಪಿಸಿದ ತಲವಾರುತೊಳೆಯಬೇಕಿದೆ ಶಾಂತಿ ಮಂತ್ರದಿಂದಹೊಗೆಯಾಡುತ್ತಿರುವ ಬಂದೂಕಿನ,ನಳಿಕೆ ಮುಚ್ಚಬೇಕಿದೆ ಮಾನವತ್ವದಿಂದಭ್ರಾತೃತ್ವದ ಧರ್ಮದಿಂದ ಇದ್ದು ಎದ್ದು ಒಮ್ಮೆ ಬಿದ್ದುಹೋಗುವಾಗ ತಿಳಿಸಬೇಕಿದೆಭಾರತಾಂಬೆಗೆ ನಾವೆಲ್ಲ ಒಂದೇ ಎಂಬ ಹೆಮ್ಮೆಯಿಂದ ಪವನ್ ಕುಮಾರ್ ಕೆ.ವಿ.Read More
ವಿದ್ಯಾರ್ಥಿ ಯುವಜನರಿಗಾಗಿ – ಅಂಬೇಡ್ಕರ್ ವಾದ ಪ್ರಕಟಣೆ: ಬುದ್ಧ ಬುಕ್ ಹೌಸ್ಬೆಲೆ : 80/- ಪರಶುರಾಮ್.ಎ ರವರ ಹೊಸ ಪುಸ್ತಕ ” ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ ” ಬಿಡುಗಡೆಗೆ ಸಿದ್ದಗೊಂಡಿದ್ದು, ಈ ಪುಸ್ತಕದ ಮುನ್ನುಡಿ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಬರೆದಿದ್ದಾರೆ. ಮುನ್ನುಡಿಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳುಶ್ರೀ ಉರಿಲಿಂಗ ಪೆದ್ದೀಶ್ವರ ಮಠಮೈಸೂರು “ಅಂಬೇಡ್ಕರ್ ವಾದ ಎಂಬುದು ಭಾರತದ ಎಲ್ಲಾ ಸಮಸ್ಯೆಗಳಿಗೆ ಉತ್ತರ, ಹಾಗೂ ಅದೇ ಎತ್ತರ.” ಭಾರತೀಯರ ಹಾಗೂ ಭಾರತದ ವಿಮೋಚನೆ ಇರುವುದೇ ಅಂಬೇಡ್ಕರ್ […]Read More
ರಾಜ್ಯ ಶಾಸನ ಸಭೆಗೆ ಆಯ್ಕೆಯಾಗಿಹ ಜನರುವ್ಯಾಜ್ಯವಾಡಲು ತೋಳು ಮಡಿಸಿ ನಿಲ್ಲವರುವ್ಯಾಜ್ಯದಲಿ ದಿನವೆಲ್ಲ ಹಾಳು ಮಾಡುವರಯ್ಯರಾಜ್ಯ ಬೊಕ್ಕಸ ಖಾಲಿ- || ಪ್ರತ್ಯಗಾತ್ಮ || ಕಚ್ಚಾಟ ಕಿತ್ತಾಟ ನೂಕು ನುಗ್ಗಲಿನಾಟಹುಚ್ಚಾಟ ತಿಕ್ಕಾಟ ಗೋಳು ನರಳಾಟಪೆಚ್ಚಾದ ಜನ ಜಾತ್ರೆ ರಾಜಕೀಯದ ಆಟಕಿಚ್ಚಿಟ್ಟ ಮನೆಯಂತೆ- || ಪ್ರತ್ಯಗಾತ್ಮ || ಜೂಜಾಡಿ ಸಿರಿವಂತರಾದವರು ಇಹರೇನು?ಮೋಜಿನಲಿ ಜೂಜಾಡಿ ಸೋತವರೆ ಎಲ್ಲಜೂಜಾಟ ಒಂದು ಚಟ, ಅದು ಮತಿಯ ಕೆಡಿಸುವುದುಜೂಜಾಟ ಬಂಡಾಟ- || ಪ್ರತ್ಯಗಾತ್ಮ || ಜೂಜಿನಿಂದಲೆ ದ್ವೇಷ, ಜೂಜಿನಿಂದಲೆ ಕ್ರೋಧಜೂಜಿನಿಂದಲೆ ಕೊಲೆಯು, ವಂಚನೆಯು, ಮೋಸಜೂಜಿನಿಂದಲೆ ಸಕಲ ಸಂಸಾರಗಳ […]Read More
ಹಿಂದಿನ ಸಂಚಿಕೆಯಿಂದ… ಪೃಥಾ ಹಾಸಿಗೆಯಲ್ಲಿ ಅಲುಗಾಡದೆ ಮಲಗಿದ್ದಳು. ಗುಳಿ ಬಿದ್ದ ಕಣ್ಣುಗಳು. ಊರ್ಧ್ವದೃಷ್ಟಿ. ಚಿತ್ರಕನು ಸದ್ದು ಮಾಡದೆ ಆಕೆಯ ಹಾಸಿಗೆಯ ಬಳಿಗೆ ಬಂದು ನಿಂತುಕೊಂಡನು. ಪೃಥೆಯ ದೃಷ್ಟಿ ಅವನ ಕಡೆ ಹೊರಳಿತು. ಬಹಳ ಹೊತ್ತು ಅವನನ್ನೇ ದಿಟ್ಟಿಸಿ ನೋಡಿ ಕ್ಷೀಣ ಧ್ವನಿಯಲ್ಲಿ ‘ನೀನೇ ಏನು ಅವನು?’ ಎಂದು ಕೇಳಿದನು. ಸುಗೋಪಾ ಹಾಸಿಗೆಯ ಪಕ್ಕದಲ್ಲಿ ಮಂಡಿಯೂರಿ ಕುಳಿದು ಆಕೆಯ ಕೆನ್ನೆಯ ಮೇಲೆ ಕೈಯಿಟ್ಟು ಮೃದು ಮಧುರ ಧ್ವನಿಯಲ್ಲಿ ‘ಹೌದಮ್ಮಾ, ಇವರೇ ಅವನು’ ಎಂದು ಹೇಳಿದಳು. ಇನ್ನೂ ಸ್ವಲ್ಪ ಹೊತ್ತು […]Read More
ಭಾವ ನೌಕೆಯನೇರಿ ಹಾಗು ಕಥೆಯೆಂಬ ಕನ್ನಡಿಯಲ್ಲಿ(ಕವನ ಹಾಗು ಕಥಾಸಂಕಲನಗಳ ಬಿಡುಗಡೆ) ಆಗಸ್ಟ್ 7 ರಂದು ಲೇಖಕಿ ಹಾಗು ಶಿಕ್ಷಕಿ ಶ್ರೀಮತಿ “ಸೌಜನ್ಯ ದತ್ತರಾಜ್” ರವರ “ಭಾವ ನೌಕೆಯನೇರಿ (ಕವನ ಸಂಕಲನ) ಹಾಗು ಕಥೆಯೆಂಬ ಕನ್ನಡಿಯಲ್ಲಿ” ಎಂಬ ಎರಡು ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣ ದಲ್ಲಿ ಬಿಡುಗಡೆಯಾಗುತ್ತಿದೆ. ಲೇಖಕಿ – ಪರಿಚಯ ವೃತ್ತಿಯಲ್ಲಿ ಶಿಕ್ಷಕಿಯರಾದ ಶ್ರೀಮತಿ ಸೌಜನ್ಯ ದತ್ತರಾಜ್ ರವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಹಾಗು freelance ಬರಹಗಾರರೂ. ಇವರು […]Read More
ತನುಶ್ರೀ ಪಿತ್ರೋಡಿ ಭಾರತ ದೇಶವು ವಿಶ್ವಕ್ಕೆ ವಿಜ್ಞಾನ, ಗಣಿತ, ವೈದ್ಯಕೀಯ ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದು, ಅವುಗಳ ಪೈಕಿ ಯೋಗಕ್ಕೂ ವಿಭಿನ್ನ ಕೊಡುಗೆ ನೀಡಿದೆ. ಪುರಾತನ ಕಾಲದಲ್ಲಿ ಋಷಿಗಳು ಪರಿಚಯಿಸಿದ ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಧುನಿಕತೆಯ ಧಾವಂತದಲ್ಲಿ ಇಂದಿನ ಪೀಳಿಗೆಯು ಯೋಗದ ಮಹತ್ವವನ್ನು ಮರೆತಿದ್ದು, ಮತ್ತೆ ಪುನರುತ್ಥಾನಗೊಳಿಸುವ ಪ್ರಯತ್ನವು ನಡೆದಿದೆ. ಇಂತಹ ಸಂದರ್ಭದಲ್ಲಿ ಉಡುಪಿಯ ಬಾಲೆೆಯೊಬ್ಬಳು ಯೋಗಕ್ಕೆ ಹೊಸ ಆಯಾಮವನ್ನು ನೀಡುತ್ತಿದ್ದು, ಈಕೆಯೇ ಉಡುಪಿಯ ತನುಶ್ರೀ […]Read More
ಓಡುವ ಕುದುರೆಯ ಬಾಲದ ನೇತಾರರು ಓಡುವ ಕುದುರೆಯ ಬಾಲವ ಹಿಡಿಯುತಬಳಿರೇ ಬಳಿರೇ ಬಳಿರೇ ಎನ್ನುತಉಗಿದದ್ದನ್ನು ಪ್ರಸಾದವೆನ್ನುತಕಾಲಿನ ಉಗುರಿಗೆ ಓಹೋ ಎನ್ನುತಇಂದಿನ ದಿನವ ಇಂದಿಗೇ ಮುಗಿಸುತ..ಬದುಕುವ ಭಂಡ ಪ್ರಚಂಡರು.. ಕತ್ತೆಯ ತೋರಿಸಿ ಕುದುರೆಯಂದರೂಕುದುರೆಯ ತೋರಿಸಿ ಎಮ್ಮೆಯೆಂದರೂಹ್ಮೂ ಹ್ಮೂ ಹ್ಮೂ ಎನ್ನುತ ಸಾಗುವ ಬುದ್ದಿ ಜೀವಿಗಳು… ಏನೇ ಬರಲೀ ತಾ.. ತಾ… ತಾಯಾರೇ ಸಾಯಲೀ ತಾ.. ತಾ.. ತಾ.ಹುಟ್ಟಿಗೂ, ಸಾವಿಗೂ, ಸಂಭ್ರಮಿಸುವತದಾತ್ಮ ಜೀವಿಗಳೂ… ಅಯ್ಯೋ ಅಪ್ಪ ಅಣ್ಣಾ ಎನ್ನುತವಂಶೋದ್ದಾರಕ ಅಧಿಕಾರ..ಕೂಡು ಕುಟುಂಬ ರಾಜ್ಯಕ್ಕೇಮಾದರಿ ಎನಿಸಿಕೊಂಡಿಹರು ಇವ್ರ ಮೇಲೆ ವಿಶ್ವಾಸವಿರಸಿದೇಶದ ಭವಿಷ್ಯ […]Read More
ಹೋಪ್ – ಭರವಸೆಯ ಬೆಳಕು ಸಿನೆಮಾ ನಿರ್ದೇಶಕನಾಗಬೇಕೆಂಬ ಕನಸು ಹೈಸ್ಕೂಲಿನಿಂದಲೇ ಚಿಗುರಿತ್ತಾದರೂ ಅದಕ್ಕೆ ಗೊಬ್ಬರ ಸಿಕ್ಕಿದ್ದು ಡಿಗ್ರಿಯಲ್ಲಿ. ಗೆಳೆಯರೆಲ್ಲ ಸೇರಿ ಕಿರುಚಿತ್ರ ಮಾಡಲು ಮುಂದಾದೆವು. ಹಾರರ್ ಥ್ರಿಲ್ಲರ್ ಕಥೆ ಮಾಡಿಕೊಂಡು ತಮಿಳುನಾಡಿನಲ್ಲಿರುವ ಗೆಳೆಯನ ಮನೆಯಲ್ಲಿ ಬೀಡುಬಿಟ್ಟೆವು. ಒಂದು ರಾತ್ರಿ ಮತ್ತು ಒಂದು ಬೆಳಿಗ್ಗೆಯಲ್ಲಿ ಚಿತ್ರೀಕರಣ ಮುಗಿಸಿ, ಒಂದು ವಾರದೊಳಗೆ ಎಡಿಟ್ ಮಾಡಿ ಯೂಟ್ಯೂಬಿನಲ್ಲಿ ಹರಿಯಬಿಟ್ಟು, ಅದನ್ನು ಕಾಲೇಜಿನಲ್ಲೆಲ್ಲಾ ಸುದ್ದಿ ಮಾಡಿಬಿಟ್ಟೆವು. ಈಗ ಆ ಕಿರುಚಿತ್ರ ನೋಡಿದರೆ ನನಗೇ ನಗು ಬರುತ್ತದೆ. ಏನೇನೆಲ್ಲ ಸರ್ಕಸ್ಸು ಮಾಡಿ, ಬಹಳ ಕಷ್ಟ […]Read More
ಪವರ್ ಸ್ಟಾರ್ ಅಪ್ಪುವಿನ ಅಕಾಲ ಮರಣ ಘಟಿಸಿ ಹಲವು ತಿಂಗಳುಗಳು ಕಳೆದು ವರ್ಷದತ್ತಿರ ಆಗುತ್ತಾ ಬಂದರು ನಮ್ಮ ನಡುವೆ ಅಪ್ಪು ಇಲ್ಲ ಎಂಬುವ ಸತ್ಯವನ್ನು ಎಷ್ಟೋ ಜನರಿಗೆ ಈಗಲೂ ಒಪ್ಪಲು ಕಷ್ಟ ಎಂಬುದು ಎಲ್ಲರಿಗೂ ತಿಳಿದಿರುವಂತದ್ದೇ. 2012 ರಲ್ಲಿ ಬಿಡುಗಡೆಯಾಗಿದ್ದ “ಯಾರೇ ಕೂಗಾಡಲಿ” ಚಿತ್ರದ ನಂತರ ಎರಡು ವರ್ಷದ ದೀರ್ಘ ಸಮಯದ ನಂತರ ಬಿಡುಗಡೆಗೊಂಡ ಅಪ್ಪುವಿನ “ನಿನ್ನಿಂದಲೇ” ಚಿತ್ರವು ಜನರನ್ನು ತಲುಪಲು ವಿಫಲವಾಗಿತ್ತು. ಆಗ ಅದೇ ವರ್ಷ 6 ತಿಂಗಳ ನಂತರ ತೆಲುಗು ಚಿತ್ರವಾದ ಮಹೇಶ್ ಬಾಬು […]Read More