ಹಿಂದಿನ ಸಂಚಿಕೆಯಿಂದ…. ಇಬ್ಬರೂ ಕುಳಿತ ನಂತರ ರಟ್ಟಾ ಮುಖ ಮುಚ್ಚಿಕೊಂಡು ಸ್ವಲ್ಪ ನಕ್ಕಳು. ಕಂಚುಕಿಯನ್ನು ಚಿತ್ರಕನ ಜೊತೆಗೆ ಕಂಡು, ವಿಷಯವನ್ನು ಗ್ರಹಿಸಿ ಕೌತುಕ ಮಿಶ್ರಿತ ಧ್ವನಿಯಲ್ಲಿ ‘ಆರ್ಯ ಲಕ್ಶ್ಮಣ ಅವರು ಈ ಅಂತಃಪುರದ ಬಗ್ಗೆತೋರುತ್ತಿರುವ ಇಷ್ಟೊಂದು ಮುಂಜಾಗರೂಕತೆ, ಸ್ನೇಹ- ಮಮತೆ – ಕಾಳಜಿಯನ್ನು ತಾಯಂದಿರೂ ಕೂಡ ತಮ್ಮ ಮಕ್ಕಳ ಬಗ್ಗೆ ತೋರುವರೋ ಇಲ್ಲವೋ ತಿಳಿಯದು’ ಎಂದು ಹೇಳಿದಳು. ಲಕ್ಷ್ಮಣನು ಅಪ್ರತಿಭನಾದನು. ಚಿತ್ರಕನು ರಾಜಕುಮಾರಿಯ ಮಾತನ್ನು ಪುಷ್ಟೀಕರಿಸಿ ‘ಕಂಚುಕಿ ಮಹಾಶಯರು ನಮ್ಮ ಬಗ್ಗೆಯೂ ಕೂಡ ಬಹಳ ಸ್ನೇಹ ಶೀಲರು. […]Read More
ಶಾಂತಿ ದೂತರ ತೆರದಿ ಶಾಂತಿ ಮಾತಾಡುವರುಮಂತಣದಿ ಹಠಮಾರಿತನವ ತೋರುವರುಎಂತಾದರೂ ಇವರ ಹಠವೆ ವಿಶ್ವಕೆ ಕುತ್ತುಎಂತಪ್ಪುದೈ ಶಾಂತಿ_ || ಪ್ರತ್ಯಗಾತ್ಮ || ಗೆದ್ದ ಎತ್ತಿನ ಬಾಲ ಹಿಡಿದ ಜನರೇ ಹೆಚ್ಚುಗೆದ್ದ ಮಂದಿಗೆ ಹಾರ; ಸೋತವಗೆ ಕಲ್ಲುಬಿದ್ದವನೆ ಮತ್ತೊಮ್ಮೆ ಗೆದ್ದು ಬರಬಹುದೇನೊ !ಗುದ್ದಾಟವೇಕಯ್ಯ? – || ಪ್ರತ್ಯಗಾತ್ಮ || ಸದ್ದುಗದ್ದಲ ಮಾಡಿ ಗುದ್ದಾಡಿ ಬಡಿದಾಡಿಉದ್ದನೆಯ ಜುಬ್ಬಗಳ ಹರಿದು ಹಾಕಿದರೆಉದ್ದುದ್ದ ಭಾಷಣವ ಮಾಡಿದರೆ ಈ ದೇಶಉದ್ಧಾರವಾಗುವುದೇ ?- || ಪ್ರತ್ಯಗಾತ್ಮ || ಧ್ವನಿವರ್ಧಕವ ಕಿತ್ತು ಬೀಸಿ ಹೊಡೆವವನೊಬ್ಬಮುನಿದು ಕುರ್ಚಿಯ ಮುರಿದು ಬಡಿವನಿನ್ನೊಬ್ಬಕನಿಕರವ […]Read More
ಲೇಕ್ ಜಿನೀವಾ ಸ್ಫಿಡ್ಜರ್‌ಲ್ಯಾಂಡ್ ಎಂದರೆ ಸಾಕು ಎಲ್ಲರಿಗೂ ಥಟ್ಟನೆ ಅನ್ನಿಸುವುದು ಓಹ್ ಅದು ಪ್ರವಾಸಿಗರ ಸ್ವರ್ಗ ಎಂದು. ಹೌದು ಆ ನೆಲವೇ ಹಾಗೆ, ಸದಾ ಹಸಿರು ಮಂಜಿನ ನಡುವೆ ಪ್ರವಾಸಿಗರನ್ನು ತನ್ನೆಡೆಗೆ ಕೈಬೀಸಿ ಕರೆಯುವ ಸ್ವಿಡ್ಜರ್‌ಲ್ಯಾಂಡ್ ತನ್ನಲ್ಲಿ ಅನೇಕ ರಮಣೀಯ ಪ್ರವಾಸಿ ತಾಣಗಳನ್ನು ಅಡಗಿಸಿಕೊಂಡಿದೆ. ರಮಣೀಯ ಪ್ರವಾಸಿ ತಾಣಗಳಲ್ಲಿ ಸ್ವಿಡ್ಜರ್ ಲ್ಯಾಂಡಿನ ರಾಜಧಾನಿ ಜಿನೀವಾದ ಹೃದಯ ಭಾಗದಲ್ಲಿರುವ “ಲೇಕ್ ಜಿನೀವಾ” ಅಥವಾ ಜಿನೀವಾ ಸರೋವರ ಸಹ ಕೂಡ ಒಂದು. ಸಮುದ್ರ ಅಥವಾ ಸಾಗರವನ್ನು ನೋಡದವರೇನಾದರೂ ಈ ಸರೋವರವನ್ನು […]Read More
ಸೋತರೂ ಸೊಲೊಪ್ಪದ ರಾಘವೇಂದ್ರ ದೇವ್ಗಿ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ತಾರೆಯಾಗಿ ಮಿನುಗಬೇಕೆಂಬ ಮಹದಾಸೆಯನ್ನು ಹೊತ್ತು ಮುಂಬೈ ಎಂಬ ಮಾಯಾನಗರಿಗೆ ಬಂದ ಯುವಕನೊಬ್ಬನ ಬದುಕು ಅನಿವಾರ್ಯವಾಗಿ ತಿರುವನ್ನು ಪಡೆದುಕೊಂಡ ರಾಘವೇಂದ್ರ ದೇವ್ಗಿ ರವರ ಕಥೆಯಿದು.ಇವರು ಇಂದು ಭಾರತೀಯ ಕ್ರಿಕೆಟ್ ತಂಡದ ಸಹಾಯಕ ದೈಹಿಕ ತರಬೇತುದಾರ. ಕುಮಟಾದ ಹಳ್ಳಿಯೊಂದರ ಬಡ ಕುಟುಂಬದಲ್ಲಿ ಹುಟ್ಟಿದ ರಾಘವೇಂದ್ರ ದೇವ್ಗಿರವರು ಶಾರದಾ ನಿಲಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ […]Read More
ಪಾವನಾ ಬೈಲೂರು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆಯು ಸುಪ್ತವಾಗಿ ಅಡಗಿರುತ್ತದೆ. ಕೆಲವರು ಅವುಗಳನ್ನು ಬಾಹ್ಯ ಜಗತ್ತಿಗೆ ತೋರ್ಪಡಿಸಿದರೆ ಇನ್ನೊಂದಷ್ಟು ಮಂದಿ ಬಾಹ್ಯ ಜಗತ್ತಿಗೆ ತಮ್ಮ ಕಲೆಯನ್ನು ಪರಿಚಯಿಸುತ್ತಾರೆ. ಕಲೆ ಎನ್ನುವುದು ಎಲ್ಲರಿಗೂ ಸುಲಭದಲ್ಲಿ ಒಲಿಯುವುದಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಮತ್ತು ಬದ್ಧತೆ ಅತೀ ಮುಖ್ಯ. ಕೆಲವೇ ಕೆಲವರಿಗೆ ಕೆಲವೊಂದು ಕಲೆಗಳು ಒಲಿಯುತ್ತವೆ. ಅವುಗಳ ಪೈಕಿ ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ ಇತ್ಯಾದಿ ಪ್ರಮುಖವಾದವುಗಳು. ಚಿತ್ರಕಲೆಗೆ ಇಂದು ಹೆಚ್ಚಿನ ಅವಕಾಶಗಳಿದ್ದು, ಅವುಗಳ ಪೈಕಿ ತೈಲ ವರ್ಣ ಚಿತ್ರ, ಪ್ರಕೃತಿ […]Read More
ಕಠಿಣ ಏನೂ ಅಪೇಕ್ಷೆ ಪಡದೆ ಶ್ರಮಿಸಿಗಳಿಸಬಹುದುಸನ್ಮಾನಶ್ರಮಿಸದೆ ಬರೋಕೆಅದೇನು ಬೇಕಾಬಿಟ್ಟಿಪೇಟೇಲಿ ಸಿಗೋಸಾಮಾನ?? ರಾಜಿ ತಾರಕಕ್ಕೆ ಏರುವ ಮೊದಲೇಜಗಳಕ್ಕೆ ಹಾಕಿತೇಪೆಕಡೆಗಣಿಸಿ ದೌಲತ್ತು ತೋರಿದರೆಕೋಣೆ ಹೊರಗೆ ಬಿಸಾಡುವಳುದಿಂಬುಚಾಪೆ ಪ್ರಭಾವ ಘೋರ ಪ್ರತಿಭಟನೆಬೆಳಿಗ್ಗೆಕಿಕ್ಕಿರಿದುಮಧ್ಯಾಹ್ನದ ಹೊತ್ತಿಗೆಬಾರೆಡೆಗೆಕಿಕ್ಕಿಳಿದು ಪ್ರಯತ್ನ ಹರಿದ ಬಟ್ಟೆ ಹೊಲಿದಂತೆಒಂದು ಚಿಕ್ಕಸೂಜಿಒಡೆದ ಸಂಬಂಧ ಜೋಡಿಸುವುದುಒಂದು ಚಿಕ್ಕರಾಜಿ ಶ್ರೀಧರ ಕಾಡ್ಲೂರುRead More
ಕೆಮ್ಮೀಸೆ ಪಿಕಳಾರ ಮರಿಗಳು ಸಂಜೆಯ ಐದರ ಸಮಯ, ನಮ್ಮ ಮನೆಯ ಮುಂದಿರುವ ಕ್ರಿಸ್ಮಸ್ ಟ್ರೀ ಒಂದರಿಂದ ಎರಡು ಕೆಮ್ಮೀಸೆಯ ಪಿಕಳಾರ (Red Whiskered Bul Bul) ಜೋಡಿ ಹಕ್ಕಿಗಳು ಒಂದೇ ಸಮನೆ ಅರಚಾಟ ನೆಡೆಸುತ್ತಿದ್ದವು. ಏನೆಂದು ಹತ್ತಿರ ಹೋಗಿ ನೋಡಿದರೆ ಅವುಗಳ ಎರಡು ಪುಟ್ಟ ಹಕ್ಕಿ ಮರಿಗಳು ಕೆಳಗೆ ಬಂದು ಕಡಿದ ಕೊಂಬೆಗಳ ಮೇಲೆ ಕುಳಿತುಬಿಟ್ಟಿದ್ದವು. ಬಹುಷಃ ಆ ಮರಿಗಳು ಸ್ವತಂತ್ರವಾಗಿ ಹಾರಲು ಕಲಿಯುತ್ತಿದ್ದವೋ ಏನೋ! ಸುಮಾರು ಅರ್ಧ ಗಂಟೆ ಹಾಗೆ ಅವುಗಳನ್ನು ಗಮನಿಸುತಿದ್ದೆ. ತಾಯಿಯೋ ತಂದೆ […]Read More
ಹಿಂದಿನ ಸಂಚಿಕೆಯಿಂದ…. ಮರುದಿನ ಬೆಳಗ್ಗೆ ಸಚಿವ ಚತುರಾನನ ಭಟ್ಟನು ರಾಜಭವನದಲ್ಲಿ ಚಿತ್ರಕನನ್ನು ಭೇಟಿ ಮಾಡಲು ಬಂದನು. ಸ್ವಸ್ತಿ ವಾಚನದ ನಂತರ ಅವನು ‘ನಿನ್ನೆ ರಾತ್ರಿ ಅರಮನೆಯ ಪ್ರಾಕಾರದಲ್ಲಿಯೇ ತಮ್ಮ ಮೇಲೆ ಹಲ್ಲೆ ನಡೆಯಿತೆಂದುಕೇಳಿ ತುಂಬ ವಿಷಾದವಾಯಿತು. ತಮಗೆ ಮೇಲಿಂದ ಮೇಲೆ ತೊಂದರೆಗಳು ಉಂಟಾಗುತ್ತಿವೆ. ಇದರಿಂದ ತಮಗೆ ಬಹಳ ನೋವಾಗಿರಬಹುದು. ಸರಿರಾತ್ರಿಯಲ್ಲಿ ರಕ್ಷಣೆಯಿಲ್ಲದೆ ಹೊರಗೆ ಹೋದರೆ ಅಪಾಯ ತಪ್ಪಿದ್ದಲ್ಲ ಅರಮನೆಯಲ್ಲಿಯೂ ವಿಪತ್ತುಗಳು ಘಟಿಸುತ್ತಲೇ ಇರುತ್ತವೆ’ ಎಂದನು. ಕಂಚುಕಿಯೂ ಅಲ್ಲೇ ಇದ್ದನು. ಅವನು ‘ಇದೇ ವಿಷಯವನ್ನು ನಾನೂ ಕೂಡ ಹೇಳಿದೆ. […]Read More
ಇನ್ನಾವ ಗ್ರಹದೊಳಗೆ ಜೀವರಾಶಿಗಳಿವೆಯೊಇನ್ನವರ ಮೆಮಗಂತು ತಿಳಿದು ಬಂದಿಲ್ಲಔನ್ನತ್ಯಕೇರಿರುವ ನಾಗರಿಕ ಭೂಮಿಯಿದುಸೊನ್ನೆಯಾಗುವುದೇನೊ !- || ಪ್ರತ್ಯಗಾತ್ಮ || ಉರಿವ ಹಣತೆಯ ದೀಪವನು ಗಾಳಿ ನಂದಿಪುದುಉರಿಯುತಿರೆ ಹುಲು ಬಣವೆ ಬೆನ್ನು ತಟ್ಟುವುದುಪಿರಿದು ಬಲಶಾಲಿಗಳ ಎಲ್ಲ ಬೆಂಬಲಿಸುವರುದುರುಬಲತೆಯೇ ಶಾಪ- || ಪ್ರತ್ಯಗಾತ್ಮ || ನೀತಿವಂತನ ಕಂಡು ಭ್ರಷ್ಟ ಕಿಡಿ ಕಾರುವನುಮಾತಿನಲಗಲಿ ಚುಚ್ಚಿ ಮನವ ನೋಯಿಪನುಧೂರ್ತ ಕಾಗೆಯು ಪುಟ್ಟ ಕೋಗಿಲೆಯ ಮರಿಯನ್ನುಘಾತಿಸುತ್ತಿದೆ ನೋಡು- || ಪ್ರತ್ಯಗಾತ್ಮ || ಕಟ್ಟುಕಟ್ಟಳೆ ಎಂಬುದುಂಟೇನು ನಾಡಿನಲಿ?ಪುಟ್ಟ ಮಕ್ಕಳ ಶಾಲೆ ಕುಸಿದು ಬೀಳುತಿದೆಗಟ್ಟಿ ಸೇತುವೆ ಇಲ್ಲ; ಗಟ್ಟಿ ಅಣೆಕಟ್ಟಿಲ್ಲಭ್ರಷ್ಟತೆಯೆ […]Read More
ಸ್ತ್ರೀ ದೇವೋಭವ ಗ್ರಾಮ – ಪಿಪ್ಲಾಂತ್ರಿ ಗ್ರಾಮ “ಯತ್ರ ನಾರ್ಯಸ್ತು ಪುಜ್ಯಂತೆ ರಮಂತೆ ತತ್ರ ದೇವತ” ಎಂದು ಹಿಂದೂ ಸಂಸ್ಕೃತಿಯಲ್ಲಿ ಯಾವ ಜಾಗದಲ್ಲಿ ಮಹಿಳೆಗೆ ಪೂಜನೀಯ ಸ್ಥಾನಮಾನ ಸಿಗುತ್ತದೋ ಅಂಥಹ ಸ್ಥಳದಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎನ್ನುವ ಮೂಲಕ ಮಹಿಳೆಗೆ ಪುಜನೀಯ ಸ್ಥಾನ ಕಲ್ಪಿಸಲಾಗಿದೆ. ಆದರೆ ಇಂದಿನ ವಾಸ್ತವವೆ ಬೇರೆ, ದಿನಬೆಳಗಾದರೆ ಸಾಕು ಸುದ್ದಿ ಮಾದ್ಯಮಗಳು ಹೆಣ್ಣು ಮಕ್ಕಳಮೇಲೆ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಅತ್ಯಚಾರ, ಕೊಲೆ ಮುಂತಾದ ಸುದ್ದಿಯ ಮೂಲಕ ಸುಪ್ರಭಾತ ಹಾಡುತ್ತದೆ. ಇವುಗಳ ಮಧ್ಯೆಯೂ […]Read More