ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 25

ಹಿಂದಿನ ಸಂಚಿಕೆಯಿಂದ… ಅತ್ತ ಚಿತ್ರಕ ಬಹಳ ಹೊತ್ತು ಹಗಲು ನಿದ್ದೆ ಮಾಡಿ ಎಚ್ಚರಗೊಂಡನು. ಶರೀರದಲ್ಲಿ ಲವಲವಿಕೆ ಕಾಣುತ್ತಿತ್ತು. ಹಿಂದಿನ ಅನೇಕ ದಿನಗಳ ನಾನಾ ಕ್ಲೇಶಗಳಿಂದುಟಾದ ಗ್ಲಾನಿ ಇನ್ನಿಲ್ಲವಾಗಿತ್ತು. ಅವನ ಮನಸ್ಸೂ ಕೂಡ ಶರೀರದಂತೆ ಪ್ರಫುಲ್ಲವಾಗಬೇಕಾಗಿತ್ತು. ಆದರೆ ಅವನ ಮನಸ್ಸು ಪ್ರಫುಲ್ಲವಾಗುವುದಕ್ಕೆ ಬದಲಾಗಿ ಉದ್ವಿಗ್ನವಾಗುತ್ತಿರುವಂತೆ ಅವನಿಗೆ ಭಾಸವಾಯಿತು. ಅರಮನೆಯ ಗೌರವಾದರಗಳಿಗೆ, ರಾಜೋಪಚಾರಗಳಿಗೆ ಅವನು ಅಭ್ಯಸ್ಥನಾಗಿರಲಿಲ್ಲ. ಆದರೂ ಕಂಚುಕಿ ಲಕ್ಷ್ಮಣನು ಸ್ವಲ್ಪ ಹೆಚ್ಚಾಗಿಯೇ ಅವನನ್ನು ಉಪಚರಿಸುತ್ತಿದ್ದನು. ಅವನು ಪ್ರತಿ ಗಳಿಗೆಗೊಮ್ಮೆಯಾದರೂ ಬಂದು ಅವನ ಯೋಗ ಕ್ಷೇಮದ ಬಗ್ಗೆ ತಿಳಿದುಕೊಳ್ಳುತ್ತಿದ್ದನು. ಇದರ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 43

ಪ್ರತಿಭೆಯುಳ್ಳೊಡೆ ಕೆಲವು ಉದ್ಗ್ರಂಥಗಳ ರಚಿಸುಜತನದಿ ನಿರಕ್ಷರಿಗೆ ಅಕ್ಷರವ ಕಲಿಸುಶತ ಸಂಖ್ಯೆಯಲಿ ಅರ್ಧವಾದರೂ ಮರ ಬೆಳೆಸುಕೃತ ಕೃತ್ಯನೀನಪ್ಪೆ- || ಪ್ರತ್ಯಗಾತ್ಮ || ದೀಪವಿಡಿದಿರುಳಿನಲಿ ನಡೆವ ಕುರುಡನ ಕಂಡು‘ದೀಪವೇತಕೊ ಕುರುಡ?’ ಎನಲೊಬ್ಬ ಕುಹಕಿ,‘ಅಪ್ಪ! ಇದು ಕಣ್ಣುಳ್ಳ ಕುರುಡರಿಗೆ’ ಎಂದೆನಲುತೆಪ್ಪಗಾದನು ಕುಹಕಿ- || ಪ್ರತ್ಯಗಾತ್ಮ || ಮಾರಕಾಸ್ತ್ರಗಳೆಲ್ಲ ಮಾರಿಗೌತಣವಲ್ತೆ ?ಯಾರ ಸಂತೋಷಕ್ಕೆ ಇನಿತು ಕಗ್ಗೊಲೆಯು ?ಮಾರುವೋಗಿಹರೇಕೆ ತರವಲ್ಲದೀ ಚಟಕೆಮಾರಾರಿಯೇ ಬಲ್ಲ- || ಪ್ರತ್ಯಗಾತ್ಮ || ವಿಜ್ಞಾನಿ ಎಂಬುವನು ಮನುಜ ಕುಲಕುಪಕಾರಿಅಜ್ಞಾನಿ ಏಕಾದ ಅಸ್ತ್ರಗಳ ಸೃಜಿಸಿ?ಆಜ್ಞೆಗಾಗಿಯೆ ಕಾದು ಸಜ್ಜಾಗಿ ನಿಂತಿಹವುಆಗ್ನೇಯ ಅಸ್ತ್ರಗಳು !- […]Read More

ಅರುಣಿಮಾ ಸಿನ್ಹಾ – ಕೃತಕ ಕಾಲಿನಿಂದ ಎವರೆಸ್ಟ್ ಏರಿದ ಪ್ರಥಮ ಮಹಿಳೆ

ಅರುಣಿಮಾ ಸಿನ್ಹಾ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿದ್ದ ಅರುಣಿಮಾ ಸಿನ್ಹಾ ಎಂಬ ಹುಡುಗಿ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಹುಟ್ಟಿ ಬೆಳೆದವಳು. ಈಕೆ ತನ್ನ 3 ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಳು. ಈಕೆ ಭಾರತೀಯ ಸೈನ್ಯದಲ್ಲಿ ಇಂಜಿನಿಯರ್ ಆಗಿದ್ದು, ತಾಯಿ ಆರೋಗ್ಯ ಇಲಾಖೆಯ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಆಟಗಳಲ್ಲಿ ಆಸಕ್ತಿ ಹೊಂದಿದ್ದ ಅರುಣಿಮಾ ವಾಲಿಬಾಲಿನ ವಿಭಿನ್ನ ಪ್ರತಿಭೆಯಾಗಿದ್ದಳು. ತನ್ನ ಆಟದ ಚತುರತೆಯಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿ ಮಿಂಚಿದ್ದಳು. ತನ್ನ ಅಪ್ಪರ ಕ್ರೀಡಾಸಕ್ತಿಯಿಂದಾಗಿ ಅರೆ ಸೈನಿಕ […]Read More

ಭಾವಾಂತರಂಗ

ಭಾವಾಂತರಂಗ ತಂಗಾಳಿಯು ಕೆನ್ನೆಯಮೊದಮೊದಲು ಸೋಕಿನಂತರ ರಾಚಿ ಕೆಂಪಾಗಿಸಿದಾಗನಿನ್ನ ಬೆಚ್ಚನೆ ಬೊಗಸೆಯಲ್ಲಿಮುಖವಿಟ್ಟು ಮುದಗೊಳ್ಳಬೇಕೆನಿಸುವುದು ಆಗಾಗ…… ತಣ್ಣನೆಯ ನಿನ್ನ ನೆನಪೊಂದುಎದೆಗೂಡನ್ನು ಬೆಚ್ಚಗಾಗಿಸಿಮತ್ತೆ ನಿನ್ನ ಮಡಿಲ ಆಸರೆಯಲ್ಲಿನನ್ನ ನಾನು ಬಚ್ಚಿಟ್ಟು ನಿನ್ನದೇನಾಡಲ್ಲಿ ನಿನ್ನವಳೇ ಆಗಬೇಕೆನಿಸುವುದು!!!??? ಇವೆಲ್ಲವೂ…… ಪ್ರೀತಿಯೋ ಪ್ರೇಮವೋಎರಡೂ ಇರದ ಕಾಮವೋಭಾವ ಬಯಕೆಗಳ ಬಲೆಯೋನಿನ್ನೊಂದಿಗೆ ಸೇರುವುದೇಜೀವನದ ಹಿರಿ ಸಾಧನೆಯೋ!!!??? ಅಥವಾ…… ಇದೊಂದು ಪರಿಯ ಪರೀಕ್ಷೆಯೋಆಧಾರವಿರದ ನಿರೀಕ್ಷೆಯೋಭಾವ ಬಕಾಸುರನ ಸಮೀಕ್ಷೆಯೋಲೋಕ ರೂಢಿಯ ಸರ್ವೇಕ್ಷಣೆಯೋ!!!??? ಹಾಗೂ ಇರದೇ…….. ಇವೆಲ್ಲವೂ ನನ್ನದೇಭಾವಪರವಶತೆಯ ಲೋಲುಪ್ತಿಯೋ!!!??? ಸೌಜನ್ಯ ದತ್ತರಾಜRead More

ಗೆಳೆಯನೊಬ್ಬ ಸತ್ತ ಸುದ್ದಿ

ಗೆಳೆಯನೊಬ್ಬ ಸತ್ತ ಸುದ್ದಿ ಗೆಳೆಯನೀ ಹೋಗಿಬಿಟ್ಟ ಥಣ್ಣನೆ ಸುದ್ದಿಈಗಷ್ಟೆ ತಿಳಿಯಿತು ಮೂರನೆ ಬಾಯಿಂದಹೌದು, ನೋವಾಗದಿರದೆ?ಅದೀಗ ನಿನಗೆಲ್ಲಿ ಅರಿವಾದೀತುನೀ ಬದುಕಿದ್ದಾಗಲೇ ಅಂಥದ್ದೊಂದುಕಿವಿಯಾಗಲಿಅಥವ ಮನಸ್ಸಾಗಲಿಎಲ್ಲಿತ್ತು ನಿನಗೆಕಾಲೇಜಿನಿಂದಾಚೆಗೆ? ಪ್ರೈಮರಿ ಶಾಲೆಯಲ್ಲೇ ನೀನುನನ್ನೆದೆಯೊಳಗೆ ಗೋಂದಾಗಿದ್ದವನುಅಂದಿನಿಂದ ಪ್ರಬುದ್ಧ ಪಥದವರೆಗುಹಾಗೆ ನನ್ನ ಕಾಡಿದವನುಕುಯ್ದರೂ ಬಿಡದೆ ಅಂಟಿದವನು! ಏಕೋ ಏನೋಕಾಮದ ಕಟು ಕಾಟದ ಕಜ್ಜಿನಿನ್ನ ಮೈಗೆ ಏಡಿ ರೋಗದ ಹಾಗೆ ಮುತ್ತಿನಿನ್ನ ಕೆಡವಿದ್ದುಅಂತ ನನಗನಿಸಿದ್ದು ಸತ್ಯಜನ ಮಾತಾಡಿದ್ದು ಹರಡಿದ್ದುಎಲ್ಲ ಬೇರೆನೀನೇ ಖುಷಿಯಿಂದಪ್ರಬಲ ಮೆತ್ತಿಸಿಕೊಂಡದ್ದುಮುಂತಾಗಿ ಯಾರೂ ಜಗದಿ ಸಂತರಿಲ್ಲ ನಿಜಬಹುಶಃ ಸಂತರೂ ಕೂಡಗಂಡಾಗಲಿ ಹೆಣ್ಣಾಗಲಿ ಎಲ್ಲ ಒಂದೇಮಣ್ಣಲಿ ಹುಟ್ಟಿ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 20

ಸಂಚು ನೀ ಮತ್ತೆ ಬಂದಿರುವೆದೂರದಿ ಮುಖತೋರದೆ ನಿಂತಿರುವೆನಿನಗನ್ನಿಸಿರಬಹುದುನಾ ನಿನ್ನ ಮರೆತಿರಬಹುದೆಂದು!ನೆನಪು ಆರಿದರೆ ತಾನೇಮರೆಯುವುದು!ನೀ ನನ್ನ ಮಿಂಚುದೂರವಾಗಲುಮತ್ತೆ ಮಾಡದಿರು ಸಂಚು!! ಅಳಿವೆ ನೀ ಬರುವದಾರಿಯಲ್ಲಿಹಾಕಿ ಕುಳಿತಿರುವೆಪ್ರೀತಿಯ ರಂಗವಲ್ಲಿ!ನೀ ತುಳಿದು ಬಂದರೆನಾ ಅಳಿವೆದಾಟಿ ಬಂದರೆನಾ ಉಳಿವೆ!! ನಿನ್ನದೇ ನಿನ್ನ ಸ್ವಾಧೀನಕ್ಕೆಒಳಗಾಗಿದ್ದೇನೆನನ್ನತನವನ್ನುಕಳೆದುಕೊಂಡಿದ್ದೇನೆ!ಹಗಲು ರಾತ್ರಿಎಲ್ಲವು ನಿನ್ನದೇನಿನ್ನ ಜೊತೆಗೇಕಳೆಯುತಿದ್ದೇನೆಕಳೆದುಕೊಳ್ಳುತ್ತಿದ್ದೇನೆ!! ಒಪ್ಪಿಕೊ ಅಲೆಯ ಅಪ್ಪುಗೆಗೆಕಡಲ ತಟಕಾಯುವಂತೆಕಾದಿರುವೆ ನಾನೂ!ಬಾ ಒಪ್ಪಿಕೊಮನ ಬಯಸಿದೆನಿನ್ನ ಅಪ್ಪುಗೆಯನ್ನು!!ಮನಸಾರೆ ಅಪ್ಪಿಕೋ ಡಾ|| ಪರಮೇಶ್ವರಪ್ಪ ಕುದರಿಚಿತ್ರದುರ್ಗRead More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 42

ಕತ್ತೆ ಬಾಲವ ಹಿಡಿದು ಜಗ್ಗಿದನು ಬಡ ಹುಡುಗಕತ್ತೆ ಒದೆಯಿತು ಎತ್ತಿ ಎರಡು ಕಾಲ್ಗಳನುಸತ್ತೇನೆನ್ನುತ ಹುಡುಗ ಅರೆ ಜೀವವಾಗಿರಲುಹೆತ್ತವರ ಗತಿಯೇನು ?- || ಪ್ರತ್ಯಗಾತ್ಮ || ಶೌಚಗೃಹ ಸ್ನಾನಗೃಹ ಕೊಳಚೆ ಗುಂಡಿಗಳೆಂದುಪಾಶ್ಚಾತ್ಯರೆಮ್ಮನ್ನು ನಿಂದಿಸುವುದುಂಟುಸ್ವಚ್ಛತೆ ಸುಸಂಸ್ಕೃತಿಯ ಕುರುಹು ಎಂಬುದನರಿತುಸ್ವಚ್ಛತೆಗೆ ಗಮನ ಕೊಡು- || ಪ್ರತ್ಯಗಾತ್ಮ || ಪಾಶ್ಚಾತ್ಯ ರಾಷ್ಟ್ರಗಳ ಪ್ರಾಮಾಣಿಕತೆ, ವಿನಯ,ಸ್ವಚ್ಛತೆಯು, ರಾಷ್ಟ್ರಾಭಿಮಾನ, ನಿಸ್ಪೃಹತೆಕೊಂಚವಾದರೂ ಸರಿಯೆ ನಮ್ಮವರು ಅನುಕರಿಸೆಮೆಚ್ಚುಗೆಯ ಗಳಿಸುವರು- || ಪ್ರತ್ಯಗಾತ್ಮ || ಅಪ್ಪಿಕೋ ಚಳುವಳಿಯು ನಾಡಿನೆಲ್ಲೆಡೆ ಹಬ್ಬಿತಪ್ಪಿದರೆ ಕಾಡುಗಳ ಕಡಿವ ಹಾವಳಿಯುತಪ್ಪದೆಯೆ ಮಳೆ ಬಂದು ಬರ ಹಿಂಗೆ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 24

ಪರಿಚ್ಚೇದ – 8–ಅರಮನೆಯಲ್ಲಿ– ಅರಮನೆಯ ಪ್ರಾಕಾರದ ನಡುವೆ ಅನೇಕ ಪ್ರಾಸಾದಗಳಿವೆ. ಅವುಗಳಲ್ಲಿ ಸಭಾ ಗೃಹ, ಕೋಶಾಗಾರ, ಮಂತ್ರಣಾಭವನ ಮುಖ್ಯವಾದವುಗಳು. ರಾಜಕುಮಾರಿ ವಾಸವಾಗಿರುವ ಭವನವೇ ಅಂತಃಪುರ. ಅದರ ಪಕ್ಕದಲ್ಲಿಯೇ ರಾಜರಿಗಾಗಿರವ ಬೇರೊಂದು ಭವನ. ಈ ಎರಡೂ ಪ್ರಾಸಾದಗಳ ನಡುವೆ ವಿಶಾಲವಾದ ಅಂಗಳ. ಈ ಎರಡೂ ಪ್ರಾಸಾದಗಳು ಮೂರು ಅಂತಸ್ತುಗಳ ಕಟ್ಟಡಗಳು. ರಾಜ ಪ್ರಾಸಾದದ ಕೆಳಗಿನ ಅಂತಸ್ತಿನಲ್ಲಿ ಅನೇಕ ಕೊಠಡಿಗಳಿರುವ ಕಟ್ಟಡದಲ್ಲಿ ಆಪ್ತ ಸಚಿವ ಹರ್ಷನು ವಾಸವಾಗಿದ್ದನು. ರಾಜವೈಭವಕ್ಕೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆ ದರ್ಜೆಯದಾಗಿದ್ದರೂ ಸಾಧಾರಣ ಮನುಷ್ಯರ ದೃಷ್ಟಿಯಲ್ಲಿ […]Read More

ಮೋಡ ಕಲಿಸಿದ ಪಾಠ

ಮೋಡ ಕಲಿಸಿದ ಪಾಠ ಬಿರು ಬೇಸಿಗೆಯ ಬಿಸಿಲಿನಲ್ಲಿ ಬೆಂದ ಎಲ್ಲರಿಗೂ ಮಳೆರಾಯನ ಹಂಬಲವಿತ್ತು. ಆ ಹಂಬಲ ಮಳೆರಾಯನಿಗೆ ಮುಟ್ಟಿತೋ ಏನೋ ತಿಳಿಯದು! ದಟ್ಟವಾದ ಕಪ್ಪು ಮೋಡಗಳು ಬಾನಂಚಿನಲ್ಲಿ ಆವರಿಸಿ, ಕೆಂಡದಂತಹ ಬಿಸಿಲು ಬೀರುತ್ತಿದ್ದ ಸೂರ್ಯನನ್ನು ಮರೆಮಾಚಿದವು. ಬಿಟ್ಟು ಬಿಡದೆ ಸುರಿದ ಮಳೆ ದಣಿದ ಜೀವಕ್ಕೆ ತಂಪನ್ನೆರೆದಿತ್ತು. ಅದೇಕೋ ಮಳೆರಾಯನಿಗೂ ಭುವಿಯನ್ನು ಮತ್ತೆ ಮತ್ತೆ ಚುಂಬಿಸುವ ಆಸೆ ಹೆಚ್ಚಾಯಿತೇನೋ? ತಂಪನ್ನೀಯಲು ಹರಸಿದ ವರುಣನು ಹಗಲು ರಾತ್ರಿ ಎನ್ನದೆ ಭೋರ್ಗರೆದು ಬೇಸಿಗೆ ಕಾಲ ಎಂಬ ಸುಳಿವೇ ಇಲ್ಲದಂತೆ ಮಾಡಿದನು. ಸುರಿವ […]Read More

ವಾರಕ್ಕೊಂದು ಕಗ್ಗ – 6 (ಬಾಳಿಗೊಂದು ನಂಬಿಕೆ) – ಡಿ. ವಿ. ಜಿ

ಕಗ್ಗ ಮಾಲಿಕೆ – ಕಗ್ಗ 478 ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ।ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ।।ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು ।ಮುಗುಳು ದುಡಿತಕೆ ತಣಿಸು – ಮಂಕುತಿಮ್ಮ ।। ನೀರೆರೆದು=ನೀರು+ಎರೆದು, ಮುಳ್ಳಿರಿತಗಳ=ಮುಳ್ಳ+ಇರಿತಗಳ, ನಗುವುದೊಂದರೆನಿಮಿಷ=ನಗುವು+ಒಂದು+ಅರೆ+ನಿಮಿಷ, ಬಾಳ್ಮುಗಿಯುವುದು=ಬಾಳು+ಮುಗಿಯುವುದು. ಜಗಿವ =ಚುಚ್ಚುವ, ಸೈರಿಸೆ=ಸಹಿಸಿಕೊಂಡರೆ, ಅರೆ=ಅರ್ದ, ಮುಗುಳು=ಮೊಗ್ಗು. ಆ ಗುಲಾಬಿ ತೋಟದ ಮಾಲಿ, ನೆಲ ಅಗೆದು ಸಸಿಯ ನೆಟ್ಟು, ಅದಕ್ಕೆ ಗೊಬ್ಬರವ ಕೊಟ್ಟು ನೀರೆರೆದು, ಸೈರಣೆಯಿಂದ ಆ ಗಿಡದ ಮುಳ್ಳುಗಳಿಂದ ಚುಚ್ಚಿಸಿಕೊಂಡು, ಪ್ರೀತಿಯಿಂದ ಆ ಗಿಡವನ್ನು ಬೆಳೆಸಿದರೆ ಒಂದು ದಿನ ಹೂ […]Read More