ಹಿಂದಿನ ಸಂಚಿಕೆಯಿಂದ…. ರಟ್ಟಾ ಏನನ್ನಾದರೂ ಹೇಳುವುದಕ್ಕೆ ಮೊದಲೆ ಮಂತ್ರಿಯು ‘ಆದರೆ ಈಗಲೇ ತಮ್ಮ ದೌತ್ಯ ಮುಗಿದಿಲ್ಲ. ಹೀಗಿರುವಾಗ ತಾವು ಹೇಗೆ ಹೋಗುತ್ತೀರಿ? ಪತ್ರದ ಉತ್ತರ- ಎಂದು ಚಿತ್ರಕನಿಗೆ ಹೇಳಿದನು. ಚಿತ್ರಕನು ದೃಢವಾದ ಧ್ವನಿಯಲ್ಲಿ ‘ತಮ್ಮ ಉತ್ತರದ ಬಗೆಗೆ ನನಗೆ ರಾಜರಿಂದ ಯಾವ ಅಪ್ಪಣೆಯೂ ಆಗಿಲ್ಲ. ನಾನು ಶ್ರೀಮನ್ ಮಹಾರಾಜರ ಪತ್ರವನ್ನು ತಮಗೆ ಒಪ್ಪಿಸಿದ್ದೇನೆ. ಅಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು’ ಎಂದು ಹೇಳಿ ಅನುಮತಿಗಾಗಿ ಮತ್ತೆ ರಟ್ಟಾಳ ಕಡೆ ನೋಡಿದನು. ಈಗ ರಟ್ಟಾ ಮಾತನಾಡಿದಳು. ಆಕೆ ಸಮಾಧಾನಕರವಾದ ದನಿಯಲ್ಲಿ‘ದೂತ […]Read More
ಪೀಸ್ ಫುಲ್ ನಗರಿ – ಪೀಸಾ ಕಾರ್ಯನಿಮಿತ್ತ ಡೆನ್ಮಾರ್ಕ್‍ಗೆ ಹೋಗುವ ಅವಕಾಶ ಸಿಕ್ಕಿತ್ತು, ಜಾಸ್ತಿ ಸಮಯವಿಲ್ಲದ ಕಾರಣ ಯೂರೋಪಿನ ನಾಲ್ಕ್ಯೆದು ದೇಶಗಳನ್ನಾದರೂ ಸುತ್ತೋಣಾ ಎಂದು ಡೆನ್ಮಾರ್ಕ್, ಫ್ರಾನ್ಸ್, ಇಟಲಿ ಹಾಗೂ ವ್ಯಾಟಿಕನ್ ಪ್ರವಾಸ ಕ್ಯೆಗೊಂಡಿದ್ದೆ, ಪ್ಯಾರಿಸ್‍ನಿಂದ ಹೋರಟು ಪೀಸಾದಲ್ಲಿ ಇಳಿಯುವ ಮೂಲಕ ಇಟಲಿಗೆ ಪಾದರ್ಪಣೆಮಾಡಿದ್ದೆ. ಪೀಸಾದ ಪಾರ್ಚಿಜಿಯೋ ವಿಮಾನ ನಿಲ್ದಾಣದಲ್ಲಿಳಿದಾಗ ಮಧ್ಯಾಹ್ನ ಮೂರು ಘಂಟೆಯಾಗಿತ್ತು, ಇಮಿಗ್ರೇಶನ್ ಚೆಕ್ ಮುಗಿಸಿ ಹೊರ ಬಂದಾಗ ಮಧ್ಯಾಹ್ನ ಮೂರುವರೆಯಾಗಿತ್ತು,ಯೂರೋಪಿನಲ್ಲಿ ಮೂರನೆ ದೇಶದಲ್ಲಿ ಕಾಲಿಟ್ಟ ಸಂತಸ ಒಂದುಕಡೆಯಾದರೆ ಹೊಟ್ಟೆ ಬೇರೆ ಚುರುಗುಡುತ್ತಿತ್ತು, ವಿಮಾನ […]Read More
ಭಾರತದ ಘೇಂಡಾಮೃಗಗಳು ನಮ್ಮ ಭಾರತದ ಘೇಂಡಾಮೃಗ ಅಳಿವಿನಂಚಿನಲ್ಲಿರುವ ಒಂದು ವಿಶಿಷ್ಟವಾದ ಪ್ರಾಣಿ. ಇದಕ್ಕಿರುವ ಒಂಟಿಕೊಂಬಿನಿಂದಾಗಿ ನೋಡಲು ವಿಶಿಷ್ಟವಾಗಿ ಕಾಣುತ್ತದೆ. ಏಷ್ಯಾದಲ್ಲಿರುವ ಮೂರು ಪ್ರಮುಖ ಘೇಂಡಾಮೃಗಗಳಲ್ಲಿ” ನಮ್ಮ ಭಾರತದ ಒಂಟಿಕೊಂಬಿನ ಘೇಂಡಾಮೃಗ ದೊಡ್ಡದು. ಇನ್ನುಳಿದೆರಡು “ಸುಮಾತ್ರಾ ಘೇಂಡಾಮೃಗ” ಸುಮಾತ್ರ ಹಾಗು ಬೊರ್ನಿಯೊ ದ್ವೀಪಗಳಲ್ಲಿ ಕಂಡುಬಂದರೆ, “ಜಾವಾ ಘೇಂಡಾಮೃಗ” ಇಂಡೋನೇಷ್ಯಾ ಹಾಗು ಜಾವಾ ದ್ವೀಪಗಳಲ್ಲಿ ಮಾತ್ರ ಕಂಡುಬರುತ್ತದೆ. ನಮ್ಮ ಭಾರತದಲ್ಲಿನ ಘೇಂಡಾಮೃಗಗಳು ಹೆಚ್ಚು ಕಡಿಮೆ ಆಫ್ರಿಕಾದ ಬಿಳಿ ಘೇಂಡಾಮೃಗದಷ್ಟೇ ಗಾತ್ರದಲ್ಲಿ ಸಮನಾಗಿವೆ. ಇದನ್ನು ಖಡ್ಗಮೃಗ ಎಂದು ಸಹ ಕರೆಯಲಾಗುತ್ತದೆ. ಇದರ […]Read More
ಓದಲೇಬೇಕಾದ ರೋಚಕ ಕಾದಂಬರಿ ರೌದ್ರಾವರಣಂ ಆಪ್ತ ಗೆಳೆಯ ಅನಂತನ ಮೊದಲ ಕಾದಂಬರಿ “ರೌದ್ರವರಣಂ” ಕೃತಿಯು ಬಹಳ ಬೇಗ ಓದಿಸಿಕೊಳ್ಳುತ್ತದೆ. ಏಕೆಂದರೆ ಪ್ರತೀ ಅಧ್ಯಾಯಗಳಲ್ಲಿಯೂ ಕುತೂಹಲ ಮತ್ತು ರೋಚಕಭರಿತ ಪ್ರೇರಣೆಗಳು ಭರ್ಜರಿಯಾಗಿ ಇರುವುದರಿಂದ. ಸುನೀತವಾದ ಸ್ವಚ್ಛ, ಹಳ್ಳಿ ಸೊಗಡಿನ ಭಾಷೆ ಸುಲಲಿತವಾಗಿ ಆಸ್ವಾದಿಸಲಿಕ್ಕೆ ಸಹಾಯ ಮಾಡುತ್ತದೆ. ರೌದ್ರದ ಆವರಣ ಎಲ್ಲ ಪಾತ್ರಗಳಲ್ಲಿಯೂ ಬಹಳ ಆಚ್ಚುಕಟ್ಟಾಗಿ ಆಗಿದೆ. ಕೆಲವೊಮ್ಮೆ, ಕೌತುಕದ ಪತ್ತೇದಾರಿಯಲ್ಲಿ ಸಾಗುತ್ತಿರುವಂತೆ ಅನಿಸುತ್ತದೆ. ಅದನ್ನ ಪೋಷಿಸುವಂತೆ ತಕ್ಕ ಪ್ರೆಶ್ನೆಗಳು, ಗೊಂದಲಗಳು, ವಿಭಿನ್ನವಾದ ತಿರುವುಗಳು ಕೂಡ ಅಡಗಿವೆ. ಚಂದ್ರ(ನಾಯಿ)ನೆಂಬ ಭಾವ […]Read More
ನೀರಿನಡಿಯಲ್ಲಿ ವಿಶ್ವದ ಅತೀ ದೊಡ್ಡ ಸಸ್ಯ ಇತ್ತೀಚಿಗೆ ವಿಜ್ಞಾನಿಗಳು ನೀರಿನಡಿಯಲ್ಲಿ ಬೆಳೆಯುತ್ತಿರುವ ವಿಶ್ವದ ಅತೀ ದೊಡ್ಡ ಸಸ್ಯವನ್ನು ಪತ್ತೆ ಹಚ್ಚಿದ್ದು ಈ ಬಗ್ಗೆ ಅಧ್ಯಯನ ವರದಿಯೊಂದು ರಾಯಲ್ ಸೊಸೈಟಿ ‘ಬಿ’ ಯಲ್ಲಿ ಪ್ರಕಟಗೊಂಡಿದೆ.ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಕೊಲ್ಲಿಯಲ್ಲಿ ಪತ್ತೆಯಾದ ಈ ಸಸ್ಯವು ಒಂದೇ ಬೀಜದಿಂದ ಹರಡಿದ್ದು ಸುಮಾರು 4500 ವರ್ಷ ಹಳೆಯದಾಗಿದೆ ಹಾಗು ಸುಮಾರು 180 ಕಿಲೋ ಮೀಟರ್ ಉದ್ದವಿದೆ. ಈ ಒಂದೇ ಸಸ್ಯವು ಸುಮಾರು 200 ಚದರ ಕಿಲೋ ಮೀಟರ್ ವರೆಗೆ ವ್ಯಾಪಿಸಿದೆ !!! ಸರಳವಾಗಿ […]Read More
ಹರಿವು ಮನಸ್ಸು ಮೀನಿನಂತೆ! ಬರುವುದೆಲ್ಲನಿಂತ ನೀರಲ್ಲ, ಅದು ಬಹುಷಃದುಮ್ಮಿಕ್ಕುವ ಜಲಪಾತದಂತೆ ,ಬೋರ್ಗೆವ ನದಿ,ಭೂರಮೆಯ ಅಪ್ಪಣೆ ಕೇಳೋಲ್ಲ!ಹರಿದು ಸಾಗರವ ದಡ ಮುಟ್ಟುತ್ತಾಳೆ. ಎಲ್ಲಾ ಅವನ / ಅವಳ ಅಪ್ಪಣೆಯಂತೆ,ಅಪ್ಪಣೆ – ಒಪ್ಪುಗೆ ಕೇಳಲು ಬಿಡುವೆಲ್ಲಿಅವಳಿಗೆ, ಬಿಡುವಾದರೂ ಎಲ್ಲಿ?ಹೇಳಿದ್ದು-ಕೇಳಿದ್ದುನೋಡಿದ್ದು-ಕೇಳಿದ್ದುಆ ಗುಡ್ಡ ಕಣಿವೆಗಳೇ ಹರಿದು ಹೋಗು, ನಮಗಾದರೂಇದೇ ದುಃಖ್ಖ ದುಃಮಾನಗಳುನಿನಗಿಲ್ಲ ಯಾಕೆ ವೈ-ರಾಗ್ಯನಮ್ಮ ಸೀಳಿ ಹೋಗಲುನಿನಗಿಲ್ಲ ಕಾರಣ!ಯಾಕೆಂದರೆ ಸಾಗರನೀನು ಬರಲು ಕಾಯುತ್ತಿದ್ದೆ ಬೋರ್ಗರೆಯಲು ಕು ಶಿ ಚಂದ್ರಶೇಖರ್Read More
ಹೀಗಿರಲಿ ನಮ್ಮ ಸಾಮಾಜಿಕ ನಿಯಮಗಳು ಪ್ರಸ್ತುತ ಸಾಮಾಜದಲ್ಲಿ ಮಾನವೀಯ ಸಂಬಂಧಗಳು ನಶಿಸುತ್ತಿವೆ. ಯುವಪೀಳಿಗೆಯು ಯಾಂತ್ರಿಕ ಬದುಕಿಗೆ ಜೋತುಬಿದ್ದಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾದರೆ ಯುವಪೀಳಿಗೆಯು ಪಠ್ಯದ ಹುಳುವಾಗುವ ಬದಲು ಪಠ್ಯೇತರ ಚಟುವಟಿಕೆಗಳತ್ತ ಗಮನಹರಿಸಿ ಸಮಾಜದೊಂದಿಗೆ ಬೆರೆಯುವ ಪ್ರಯತ್ನವನ್ನು ಮಾಡಬೇಕು. ಸಮಾಜದ ಎಲ್ಲಾ ಸ್ತರಗಳ ಜನರೊಂದಿಗೆ ಸಮಾನವಾಗಿ ಬೆರೆಯಬೇಕೆಂದರೆ ಕೆಲವೊಂದು ನಿಯಮಗಳತ್ತ ಗಮನಹರಿಸುವುದು ಉತ್ತಮ. ಅವುಗಳೆಂದರೆ,ಯಾರಿಗಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬಾರದು. ಕರೆ ಮಾಡಿರುವ ವ್ಯಕ್ತಿಯು […]Read More
ಹಿಂದಿನ ಸಂಚಿಕೆಯಿಂದ… ಚತುರಾನನ- ‘ಸರಿ. ಅದಾದ ಮೇಲೆ ಹಿಂದಿನ ದಿನ ರಾತ್ರಿ ತಾವು ತಮ್ಮ ಪರಿಚಯ ಹೇಳಿಕೊಂಡಿದ್ದಿದ್ದರೆ!… ಚಿತ್ರಕ- ಯಾರ ಮುಂದೆ ಪರಿಚಯ ಹೇಳಿಕೊಳ್ಳಬೇಕಾಗಿತ್ತು? ರಾತಿ ವೇಳೆ ಊರೊಳಗೆ ಗಸ್ತು ತಿರುಗುವ ಭಟರ ಮುಂದೆ? ತೋರಣದ್ವಾರದ ಕಾವಲುಗಾರರ ಮುಂದೆ?’ ಚತುರಾನನು ಚಿತ್ರಕನನ್ನು ಒಂದು ಬಾರಿ ನೋಡಿ ನಿಟ್ಟುಸಿರು ಬಿಟ್ಟನು. ‘ಹೋಗಲಿ ಬಿಡಿ. ಏನೇನು ಆಗಬೇಕಾಗಿತ್ತೊ ಎಲ್ಲವೂ ಆಗಿ ಹೋಯಿತು- ನಿರ್ವಾಣ ದೀಪೇ ಕಿಮು ತೈಲದಾನಮ್? (ಆರಿ ಹೋಗಿರುವ ದೀಪಕ್ಕೆ ಎಣ್ಣೆ ಹಾಕಿದರೆ ಪ್ರಯೋಜನವೇನು?) ಈಗ ನಿಮ್ಮ ವಿಶ್ರಾಂತಿಯ […]Read More
ಹನಿಗೂಡಿದರೆ ಹಳ್ಳ ತೆನೆಗೂಡಿದರೆ ಬಳ್ಳಅಣುವಿನಿಂದೇನೆಂದು ಸಲ್ಲದು ಉಪೇಕ್ಷೆಇನಿತಾದರೂ ಉಳಿಸಿ ಹಣವನೊಂದಡೆ ಇರಿಸುಘನ ನಿಧಿ ಭವಿಷ್ಯಕ್ಕೆ- || ಪ್ರತ್ಯಗಾತ್ಮ || ಇರುಳ ಕಾರ್ಗತ್ತಲಲಿ ದಾರಿ ತಪ್ಪಿದವಂಗೆಸರಿದಾರಿ ತೋರುವುದು ಕೋಲ್ಮಿಂಚು ಬೆಳಗಿಕೊರಗದಿರು ನೀಗೈದ ಸೇವೆ ಅಲ್ಪವದೆಂದುಕಿರಿದೆ ಅಳಿಲಿನ ಸೇವೆ ?- || ಪ್ರತ್ಯಗಾತ್ಮ || ಕೊಳಲಿನಿಂಚರ ಕೇಳಿ ತಲೆದೂಗದವರುಂಟೆ ?ಉಲಿವ ವೀಣೆಯ ದನಿಗೆ ಸೋಲದವರುಂಟೆ ?ಎಳೆಯ ಮಕ್ಕಳ ಮುದ್ದು ತೊದಲು ಮಾತನು ಕೇಳಿನಲಿಯದವರುಂಟೇನು ?- || ಪ್ರತ್ಯಗಾತ್ಮ || ಬಲಿಕೊಡುವರೇ ಹೇಳು ಆನೆ ಕುದುರೆಗಳನ್ನುಹುಲಿಯನೆಂದಾದರೂ ಬಲಿಕೊಟ್ಟುದುಂಟೆ ?ಬಲಿ ಪಶುವು ಕುರಿ-ಮೇಕೆ, […]Read More
ಏಕವ್ಯಕ್ತಿ ಕಲಾ ಪ್ರದರ್ಶನ – ನಿಸರ್ಗದ ಮಧ್ಯೆ ಚೌಗಲೆ! ಡಾ. ಡಿ ಎಸ್ ಚೌಗಲೆ ಅವರ ಕಲಾಕೃತಿಗಳ ಪ್ರದರ್ಶನವು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಮೇ 23 ರಿಂದ 31 ರವರೆಗೆ ಕೆ ಎಂ ಎಫ್ ಅವರ ಆಯೋಜಕತ್ವದಲ್ಲಿ ನಡೆಯುತ್ತಿದೆ. ‘ದಿ ನೇಚರ್ ವಿಥಿನ್‘ ಎಂಬ ಶೀರ್ಷಿಕೆಯಲ್ಲಿ ತಮ್ಮ ನೆಲೆಗಟ್ಟಿನ ಹಿನ್ನೆಲೆಯನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿದ್ದಾರೆ. ಗುಡ್ಡಗಳು ಅದರ ಮೇಲೆ ಮನೆಗಳನ್ನು ವರ್ಣರಂಜಿತವಾಗಿಸಿದ್ದಾರೆ. ತಮ್ಮೂರಿನ ಮಣ್ಣಿನ ಬಣ್ಣವನ್ನು ಕಲಾಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ದೇವಾಲಯದ […]Read More