ಒಂದು ಮಳೆ ಮುತ್ತು ಕಿಟಕಿಯ ಪಕ್ಕ ಮಲಗಿದ್ದೆಗುಡುಗು ಸಿಡಿಲು ಮಿಂಚಿನ ಆರ್ಭಟದ ಜೊತೆಗೆಜೋರು ಮಳೆ ರಾತ್ರಿ.ಮಳೆಯಲ್ಲಿ ನೆನೆಯೊಣವೆಂದರೆ ಅವಳುನನಗೆ ಮತ್ತು ಮಳೆಗೆ ಬಯ್ಯುವುದು ಖಾತರಿ.ಒಂದು ಐಡಿಯಾ ಮಾಡಿದೆಹಳೆಯ ಪುಟವೊಂದು ಹರಿದೆದೋಣಿ ಮಾಡಿದೆಹರಿವ ನೀರಿನಲ್ಲಿ ಬಿಡಲು ಬಂದೆಮಳೆಯಲ್ಲಿ ನೆನೆದೆ.ತನುಮನವೆಲ್ಲ ತಂಪೊ….. ತಂಪು.!! ನನ್ನಾಕೆ ಇದನ್ನೇ ನೋಡಿ ಬೀಳುವ ಮಳೆಯಲ್ಲಿಯೂ ಕಾವು ಏರಿಸಿ ಮುಖ ಗಪ್ಪಾಗಿಸಿಕೊಂಡು ಬಾಗಿಲ ಬಳಿ ಗದರುತ್ತ“ಈಗ ಈ ಪೇಪರ್ ದೋಣಿ ವಿಹಾರ ಬೇಕಿತ್ತ ನಿನಗೆ?”ನಾನು ಉತ್ತರ ಕೊಟ್ಟೆ ನನ್ನ ಹುಚ್ಚು ನಿನಗೆ ಗೊತ್ತಲ್ವ ಅಂದೆ ಅಷ್ಟೇಗೊರ […]Read More
ಊನವಾಗಿಹ ಒಂದು ಅಂಗಕ್ಕೆ ಎಷ್ಟು ಬೆಲೆ ?ಏನು ಮಾಡಿದರೇನು ಅದು ಕೃತಕವಷ್ಟೇ!ನಿನ್ನ ಅಂಗಾಂಗಗಳೆ ಕೋಟಿ ಹೊನ್ನಿಗು ಮಿಗಿಲುಇನ್ನು ನೀ ಬಡವನೇಂ? – || ಪ್ರತ್ಯಗಾತ್ಮ || ಒಡಲೆಂಬ ಒಡವೆಯನು ಪಡೆದಿದ್ದರೂ ಕೆಲರುಬಡವನೆನ್ನುತ ಕೈಯ ಚಾಚುವರು ಬಾಗಿಬಡವನೆಂಬುದೆ ಸಲ್ಲ; ಅಂಗವಿಕಲನೆ ಬಡವದೃಢಕಾಯ ಸಂಪತ್ತು- || ಪ್ರತ್ಯಗಾತ್ಮ || ನಿನ್ನ ವಂಶದ ಮೂಲ ಪುರುಷರಾರೆಂಬುದನು,ನಿನ್ನ ಬುಡಕಟ್ಟು ಶಾಖೆಗಳ ತಿಳಿಯೆಇನ್ನು ತಡಮಾಡದೆಯೆ ವಂಶವೃಕ್ಷವ ಬರೆದುಚೆನ್ನಾಗಿ ಕಾಪಾಡು- || ಪ್ರತ್ಯಗಾತ್ಮ || ತಾಳೆಗರಿ ಗ್ರಂಥ ಮೇಣ್ ತಾಮ್ರ ಶಾಸನಗಳನುಜಾಳು ಜಾಳಾಗಿರುವ ಹಳೆ ಕಡತಗಳನುಬೀಳುಗಳೆಯದೆ […]Read More
ಹಿಂದಿನ ಸಂಚಿಕೆಯಿಂದ…. ಯೌವನದ ಆರಂಭದಲ್ಲಿ ಅವನು ಊರಿಂದೂರಿಗೆ ಸಂಚಾರ ಮಾಡುತ್ತ ವ್ಯಾಪಾರ ಮಾಡುವ ಒಬ್ಬ ವ್ಯಾಪಾರಿಯ ಜೊತೆ ಸೇರಿಕೊಂಡು ಊರೂರು ಅಲೆಯುತ್ತಿದ್ದನು. ಅವನ ಸಂಪರ್ಕದಿಂದ ಅಲ್ಪ ಸ್ವಲ್ಪ ಓದು- ಬರೆಹವನ್ನು ಕಲಿತನು. ಸಾರ್ಥವಾಹ ವಣಿಕರು ಒಂಟೆಯ ಬೆನ್ನು ಮೇಲೆ ಸರಕನ್ನು ಹೇರಿಕೊಂಡು ದೇಶ ದೇಶಾಂತರಗಳಲ್ಲಿ ಸಂಚರಿಸಿ ವ್ಯಾಪಾರ ಮಾಡುತ್ತಿದ್ದರು. ಚಿತ್ರಕನು ಅವರ ಜೊತೆ ಇದ್ದುಕೊಂಡು ಅನೇಕ ಸಮೃದ್ಧ ನಗರಗಳನ್ನು ನೋಡಿದ್ದನು. ಪುರುಷಪುರ, ಮಥುರಾ, ವಾರಾಣಸಿ, ಪಾಟಲಿಪುತ್ರ, ತಾಮ್ರ ಲಿಪ್ತಿ, ಉಜ್ಜಯಿನಿ, ಕಾಂಚಿ- ಉತ್ತರಾಪಥ ಹಾಗೂ ದಕ್ಷಿಣಾ ಪಥದ […]Read More
–ಇಂಗ್ಲಿಷ್ ಗಾಥೆ– ಕನ್ನಡ ಮೀಡಿಯಂ ಸೆಕೆಂಡ್ ಪಿ.ಯು.ಸಿ ಪಾಸಾದ ಪಾರು ಹೀಗೆ ಹೇಗೋ ತಾನು ಒಂದು ಕೆಲಸಕ್ಕೆ ಸೇರಿ ದುಡಿಯಬೇಕೆಂಬ ಆಸೆಯನ್ನು ನೆರವೇರಿಸಿಕೊಂಡು ಒಂದು ದಡ ತಲುಪಿದಳು. ಎನ್ನುವಷ್ಟರಲ್ಲಿ ಅವಳಿಗೆ ಮತ್ತೊಂದು ಸವಾಲು ಎದುರಾಯಿತು. ಬೆಂಗಳೂರು ಮಹಾನಗರದಲ್ಲಿ ಶಿಕ್ಷಕಿಯಾಗಿದ್ದ ಪಾರುವಿಗೆ ಇಂಗ್ಲಿಷ್ ಕಲಿಕೆಯ ಅನಿವಾರ್ಯತೆ ಇತ್ತು. ಅದಲ್ಲದೆ ಬೆಂಗಳೂರಿಗೆ ಬಂದ ಹೊಸತರಲ್ಲಿ ಆಚೆ ಹೋದರೆ ಎಲ್ಲರೂ ಇಂಗ್ಲಿಷಿನಲ್ಲಿ ಲೀಲಾಜಾಲವಾಗಿ ಮಾತನಾಡುತ್ತಾರೆ, ಸಣ್ಣ ಸಣ್ಣ ಮಕ್ಕಳು ಇಂಗ್ಲಿಷ್ ಮಾತನಾಡುವುದರಲ್ಲಿ ನಿಪುಣರು.ಬಲು ಮಾತುಗಾತಿಯಾದ ಪಾರು ಅವರನ್ನೇ ಮೌನವಾಗಿ ಪಿಳಪಿಳ ನೋಡುತ್ತಿದ್ದಳು. […]Read More
ಮ್ಯಾನ್ ಆಫ್ ದಿ ಮ್ಯಾಚ್ ಸತ್ಯ ಸೂತ್ರದಾರನಾಗಿರುವ ‘ಮ್ಯಾನ್ ಆಫ್ ದಿ ಮ್ಯಾಚ್‘ ಚಲನಚಿತ್ರ ಇದೇ ಮೇ 5 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಕನ್ನಡದ ಈಗಿನ ದಿನಮಾನದ ಪ್ರತಿಭಾವಂತ ಯುವ ನಿರ್ದೇಶಕರ ಟಾಪ್ ಟೆನ್ ನಿರ್ದೇಶಕರಲ್ಲಿ ಪಟ್ಟಿಯಲ್ಲಿ ಡಿ ಸತ್ಯಪ್ರಕಾಶ್ ಕೂಡ ಸೇರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ‘ರಾಮಾ ರಾಮಾ ರೇ‘ ಹಾಗೂ ‘ಒಂದಲ್ಲಾ ಎರಡಲ್ಲಾ‘ ನಂತರ ಸತ್ಯ ಅವರು ಕರ್ಮಶಿಯಲ್ ಟಚ್ ಕೊಟ್ಟು ಈ ಮೂರನೇ ಚಿತ್ರವನ್ನು ನಿರ್ದೇಶಿಸಿದ್ದಾರೆ. […]Read More
ಕರೋನದ ಒಂದು, ಎರಡು, ಮೂರು ಅಲೆಗಳ ಆರ್ಭಟ ಮುಗಿದಿದ್ದು ಎಲ್ಲರಿಗು ಸಿಕ್ಕಿದ್ದ “ವರ್ಕ್ ಫ್ರಮ್ ಹೋಂ” ಅವಕಾಶ ಮುಗಿದು, ಈಗ ಹೆಚ್ಚು ಕಡಿಮೆ ಎಲ್ಲಾ ಕಂಪನಿಗಳು ತಮ್ಮ ಕೆಲಸಗಾರರನ್ನು ಮರಳಿ ಆಫೀಸಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿರುವ ಸಂದರ್ಭದಲ್ಲಿ ಎಲ್ಲರು ಪುನಃ ಅದೇ ಟ್ರಾಫಿಕ್ ಜಾಮ್ ಒತ್ತಡದಿಂದ ಆಫೀಸಿಗೆ ಹೋಗಿ ಅಲ್ಲಿಯ ಒತ್ತಡವನ್ನು ಸಹ ನಿಭಾಯಿಸಬೇಕಾಗಿದೆ. ಮತ್ತದೇ ಯಾಂತ್ರಿಕ ಜೀವನದಲ್ಲಿ ಸಂಜೆಯಾಗುತ್ತಿದ್ದಂತೆ ಆಫೀಸ್ ನಿಂದ ಮನೆಗೆ ಬರುವ ವೇಳೆಗೆ ಕೇಳುವ ಒಂದೇ ಮಾತು ತುಂಬಾ ಕೆಲಸದ ಒತ್ತಡ […]Read More
ಕಗ್ಗ ಮಾಲಿಕೆ – 2 ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು Iತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು IIಒಂದೇ ಗಾಳಿಯನುಸಿರ್ವ ನರಜಾತಿಯೋಳಗೆಂತು Iಬಂದುದೀ ವೈಷಮ್ಯ? – ಮಂಕುತಿಮ್ಮ ಒಂದೇ ಗಗನವ (ಆಕಾಶ) ಕಾಣುತ + ಒಂದೇ ನೆಲವನು ತುಳಿಯುತ + ಒಂದೇ ದ್ಯಾನವನು ಉಣ್ಣುತ್ತಾ (ತಿನ್ನುತಾ) + ಒಂದೇ ಗಾಳಿಯನು + ಉಸಿರ್ವ (ಉಸಿರಾಡುವ) + ನರಜಾತಿಯಳೊಗೆ + ಎಂತು + ಬಂದುದೀ ವೈಷ್ಯಮ್ಯ ? ನಾವೆಲ್ಲರೂ ಕಾಣುವ ಆಕಾಶ ಒಂದೇ, ತುಳಿಯುವ ನೆಲವು ಒಂದೇ, ತಿನ್ನುವ ಧಾನ್ಯವು […]Read More
ನಿನ್ನಂತಹ – ಬಿಸಿಲು ಇದೆಂಥಾ ಉರಿ ಬಿಸಿಲೋ ಮಹರಾಯಾಚರ್ಮ ಉರಿಯುವನೆತ್ತಿ ಸುಡುವ ಬಿರು ಬಿಸಿಲುಸುಡು ಸುಡು ಬಿಸಿಲುಬಿಸಿ ಬಿಸಿ ಉರಿಬಿಸಿಲುಕಿಂಚಿತ್ತು ಕಾರಣ ಸಿಕ್ಕರೂಸಾಕು ಕೆಂಡಮಂಡಲನಾಗಿಉರಿದುರಿದು ಉರುಟುವನಿನ್ನ ಸಿಟ್ಟು ಸೆಡವುಗಳಂಥದ್ದೇ ಈ ಬಿಸಿಲು ಶಿವನು ತನ್ನ ಮೂರನೆಯಕಣ್ಣನ್ನು ಒಂದರೆಘಳಿಗೆಗೆತೆರೆದಿದ್ದನೋ ಏನೋ ಎಂಬಂತೆನಿಗಿ ನಿಗಿ ಕೆಂಡದಂತೆಕುದಿಯುತ್ತಿದ್ದಾನೆಎಲ್ಲಾ ಬಣ್ಣಗಳ ನುಂಗಿರುವಬಿಳಿಮೊಗದ ಸೂರ್ಯಥೇಟು ಕೋಪ ತುಂಬಿದನಿನ್ನ ಜೋಡಿ ಕಣ್ಣುಗಳಂತೆ ನಿನ್ನಂತೆಯೇ ಸೂರ್ಯನೋಸೂರ್ಯನಂಥವನು ನೀನೋಆಗಾಗ ಕಾರಣವಿಲ್ಲದೇಉರಿದುರಿದು ಬೀಳುತ್ತೀರಿ ಇಬ್ಬರೂ ಸಮಯ ಸರಿದಂತೆನಕ್ಷತ್ರ ಲೋಕ ಕಣ್ತೆರೆಯುತ್ತಿದ್ದಂತೆತುಂಟ ಮಗುವಿನೊಲುನಿರುಮ್ಮಳವಾಗಿ ಕಣ್ಣುಮುಚ್ಚಿಮುದ್ದಾಗಿ ಮಲಗುವ ಹಾಗೆಕೋಪವುಕ್ಕಿದ ಕಾರಣಗಳಿಗೆನೀವು ಕುರುಡಾಗಿ ಕಿವುಡಾಗಿತಣ್ಣಗಾಗಿಬಿಡುತ್ತೀರಿಏನೂ […]Read More
“ಅಪ್ಪ” ನೆಂಬ ಸ್ನೇಹಿತ “ಅಪ್ಪ” ಎಲ್ಲಾ ಹೆಣ್ಣು ಮಕ್ಕಳ ಜೀವನದ ನಿಜವಾದ ಹೀರೋ. ಅಪ್ಪ ಅಂದರೆ ಗತ್ತು ಗಾಂಭೀರ್ಯ, ತಂದೆಯ ತ್ಯಾಗಮಯವಾದ ಜವಾಬ್ದಾರಿಕೆಗೆ ಬೆಲೆ ಕಟ್ಟಲಾಗದು. ಅಪ್ಪ ಆಕಾಶ, ಅಪ್ಪ ಶಕ್ತಿ, ಅಪ್ಪ ಪ್ರೀತಿ, ಅಪ್ಪ ನೆರಳು, ಅಪ್ಪ ಸಾಗರ. ಅಪ್ಪ ಭರವಸೆ…ಮಕ್ಕಳ ನೆರಳಿನಂತೆ ತನ್ನ ಜೀವನವನ್ನು ಸವೆದು ಗುಬ್ಬಚ್ಚಿಯಂತೆ ಮಕ್ಕಳನ್ನು ಕಾಪಾಡಿಕೊಳ್ಳುವ ಜೀವ. ಹೀಗೆ ಅಪ್ಪನ ಬಗ್ಗೆ ಎಷ್ಟೇ ವಿವರಣೆ ಕೊಟ್ಟರು ಕಡಿಮೆಯೇ. ಸಂಸಾರದಲ್ಲಿ ಅಮ್ಮನ ಪ್ರಾತಿನಿಧ್ಯತೆ ಎಲ್ಲಾ ಕಡೆ ಎದ್ದು ಕಾಣಿಸುತ್ತದೆ. ಆದರೆ ಅಪ್ಪ […]Read More
ಡಾ. ಅರಕಲಗೂಡು ನೀಲಕಂಠಮೂರ್ತಿ ಯವರು “ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ” ಎಂಬ ಸರಣಿಯ ಮೂಲಕ ಆಫ್ರಿಕಾ ಖಂಡದ ದಲ್ಲಿ ತಮ್ಮ ವೃತ್ತಿಯ ಅನುಭವಗಳನ್ನು ಹಾಗು ಅಲ್ಲಿನ ದೇಶದ ರೀತಿ, ರಿವಾಜು, ಅಲ್ಲಿನ ಉಸಿರುಗಟ್ಟಿಸುವ ಆಡಳಿತ, ಕಂಡಂತಹ ಸಹೃದಯಿಗಳು, ಕಪಟಿಗಳು, ಅವೈಜ್ಞಾನಿಕ ಆಚರಣೆಗಳು, ಅಲ್ಲಿನ ಜನರ ಮೌಢ್ಯತೆ ಹಾಗು ವಿವಿಧ ರೀತಿಯ ಜನರ ಬಗ್ಗೆ ಕಳೆದ ಮೂವತ್ತು ವಾರಗಳಿಂದ ಸಾಹಿತ್ಯಮೈತ್ರಿ ಮೂಲಕ ಓದುಗರೊಡನೆ ಹಂಚಿಕೊಂಡಿದ್ದಾರೆ. ಈ ಸರಣಿಯನ್ನು ಪುಸ್ತಕದ ಮೂಲಕ ಹೊರತರುವ ಯೋಜನೆಯು ಅವರಿಗಿದೆ. ನೀಲಕಂಠಮೂರ್ತಿ ಯಂತಹ ಸಜ್ಜನರನ್ನು ಸಾಹಿತ್ಯಮೈತ್ರಿಗೆ […]Read More