ಕ್ಷಮೆ

ಕ್ಷಮೆ ಪರತಂತ್ರದ ಸೆರೆಯಲ್ಲಿದ್ದಾಗಲೂಭಾರತ…ಹೀಯಾಳಿಸಿ ಕೊರಗಲಿಲ್ಲ..ವೀರ ಕಲಿಗಳು .. ತಾಯ ರಕ್ಷಣೆಗೆ ನಿಂತರು..ಪ್ರಾಣ ತೆತ್ತರು..ಇದು ದಿಟ.. ಆದರೇನು ಮಾಡುವುದು ತಾಯಿ ಭಾರತಿ..ಇಂದು ನಿನ್ನಕುಡಿಗಳು ಮರೆತವು..ಇತಿಹಾಸ..ತಾಯ ನಾಡನ್ನೆ ಜರಿದುಮಾಡಿತಿಹರು ಅಪಹಾಸ್ಯ.. ಶಿಕ್ಷಣವೆಂದರೆ ಇದೇನಾ??ಶಿಕ್ಷಿತರೆಂದರೆ ಹೀಗೇನಾ??ಮೂಡುತಿದೆ ಶಂಕೆ…..ಕ್ಷಮಿಸಿ ಬಿಡು ತಾಯಿ ಮೌಲ್ಯಗಳ ಮರೆತದ್ದಕ್ಕೆ..ಶಕ್ತಿ ಕೊಡು ನನ್ನಮ್ಮ.. ಸರಿದಾರಿಯಲಿ ನಡೆವುದಕೆ ಸುಕೃತಿ ಕಂದRead More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 11

ಹಿಂದಿನ ಸಂಚಿಕೆಯಿಂದ ಮುಂದುವರೆದಿದೇ… ನಾರುಬಟ್ಟೆ ಧರಿಸಿದರೂ ಸುಂದರ ಯುವತಿಯು ಮತ್ತಷ್ಟು ಅಂದವಾಗಿ ಕಾಣುತ್ತಾಳೆ ಎಂದು ಕವಿ ಕಾಳಿದಾಸ ಹೇಳುತ್ತಾನೆ. ಇರಬಹುದು. ನಾವು ಎಂದೂ ಅದನ್ನು ಪರೀಕ್ಷಿಸಿ ನೋಡಿಲ್ಲ. ಆದರೆ ಯೋಧರ ವೇಷ ಧರಿಸಿದ ರೂಪಸಿಯ ರೂಪ ಅಧಿಕವಾಗುತ್ತದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಚೆನ್ನಾಗಿ ಕಾಣಬಹುದು. ಆದರೆ ಹೆಚ್ಚು ಸುಂದರವಾಗಿ ಕಾಣುವುದಿಲ್ಲ. ಆದರೆ ನನ್ನದೊಂದು ಮಾತು. ಕುಮಾರಿ ರಟ್ಟಾಳ ಹಾಗೆ ತರುಣಿಯೂ ಸುಂದರಿಯೂ ಆದವಳು, ಹದಿನೆಂಟು ವರ್ಷ ವಯಸ್ಸಿನವಳು, ತನ್ನ ತಲೆಗೂದಲನ್ನು ಕುಂದಪುಷ್ಪದ ಮೊಗ್ಗುಗಳಿಂದ ಅಲಂಕರಿಸಿ ಕೊಳ್ಳಲಿ, ಲೋಧ್ರರೇಣುಗಳಿಂದ […]Read More

ಅಂದು ಆ ರಾತ್ರಿ ಅಜ್ಜಿ ಹೋದದ್ದು ಎಲ್ಲಿಗೆ!?

ಅಂದು ಆ ರಾತ್ರಿ ಅಜ್ಜಿ ಹೋದದ್ದು ಎಲ್ಲಿಗೆ!? ರಾತ್ರಿಗಳು ಮನುಷ್ಯನನ್ನೂ ಭಯದಲ್ಲಿ ಕಾಡುವುದು ಸಹಜ. ಕೆಲವರಿಗೆ ರಾತ್ರಿಗಳು ಹಗಲಿಗಿಂತ ಪ್ರಿಯ. ಆದರೆ ಆಗಬಾರದಂತಹ ಕೆಲವೊಂದು ಘಟನೆಗಳು ಇಂತಹ ರಾತ್ರಿಗಳಲ್ಲಿಯೇ ಆಗಿ ಹೋಗಿರುತ್ತೆ! ಕನಸುಗಳು ಕನವರಿಸಿದಂತೆ ಬಂದು ಕೆಲ ಸಮಯವಿದ್ದು ತೇಲಿ ಹೋಗಿರುತ್ತದೆ. ರೆಕ್ಕೆಗಳೇ ಇಲ್ಲದ ಕನಸುಗಳು ಹಾಗೆಯೇ ಹಾರಿ ಹೋಗಿರುತ್ತವೆ. ಎಚ್ಚರಿಕೆ ಆಗುವ ಮುನ್ನವೇ ಗೊತ್ತೇ ಆಗದ ಹಾಗೆ! ಹೀಗೆ ಕನಸಲ್ಲಿ ಕಂಡಂತೆ ಘಟಸುವ ಕೆಲವು ಘಟನೆಗಳು ನನ್ನ ನಿಜ ಜೀವನದಲ್ಲೂ ಬಂದು ಹೋಗುತ್ತವೆ…. ಅದು ಕನಸು […]Read More

ಚಿರತೆ

ಚಿರತೆ – (Cheetha, Leopard, Jaguar, Panther) ಒಮ್ಮೆ ಸ್ನೇಹಿತನೊಬ್ಬನಿಗೆ ಮೂರು ಚಿತ್ರಗಳನ್ನು ತೋರಿಸಿ ಇದೇನೆಂದು ಕೇಳಿದೆ.ಮೂರು ಚಿತ್ರಗಳನ್ನು ಚಿರತೆ ಎಂದೇ ಹೆಸರಿಸಿದ ಹಾಗೂ ‘ಸರ್ ಇದೇನಿದು ತಮಾಷೆ’ ಮೂರು ಚಿರತೆಯಲ್ಲವೇ ಸರ್ ಎಂದ.ನಾನು ಈ ಮೂರಕ್ಕೂ ಬೇರೆ ಬೇರೆ ಹೆಸರಿದೆ ಎಂದು ಹೇಳಿದೆ. ಮಲೆನಾಡು ಕಡೆ ಇದನ್ನು ಚಿಟ್ಟೆ ಹುಲಿ ಅಂತಾನೂ ಕರೆಯುತಾರೆ. ಹಳದಿ ಮಿಶ್ರಿತ ಕಂದು ಬಣ್ಣದ ಪ್ರಾಣಿ ಚಿರತೆ. ಆದರೆ ಸಾಮಾನ್ಯವಾಗಿ ನಾವು ಕರೆಯುವುದು ಚಿರತೆಯೆಂದೇ ಇದರ ಮೂಲ ನಾಮ ಪ್ಯಾಂಥೇರಾ (Pantheras). […]Read More

ಅಧ್ಬುತ ಶಿಲ್ಪಕಲಾ ವೈಭವ – ಕೈದಳದ ಚನ್ನಕೇಶವ

ತುಮಕೂರಿನಿಂದ ಕುಣಿಗಲ್‍ಗೆ ಹೋಗುವ ಮಾರ್ಗದಲ್ಲಿ ಗೂಳೂರು ಎಂಬ ಊರಿನ ಹತ್ತಿರ ಬಲಕ್ಕೆ ತಿರುಗಿ ಅರ್ಧ ಕಿಮೀ ಹೋದರೆ ಸಿಗುವುದೇ ಕೈದಳ ಚನ್ನಕೇಶವಸ್ವಾಮಿ ದೇವಸ್ಥಾನ. ದ್ರಾವಿಡ ಶೈಲಿಯಲ್ಲಿರುವ ದೇವಸ್ಥಾನವನ್ನು ನಿರ್ಮಿಸಿದವನು ಶಿಲ್ಪಿ ಜಕಣಾಚಾರಿ. 1150 ನೇ ಇಸವಿಯಲ್ಲಿ ಈ ದೇವಸ್ಥಾನವನ್ನು ಇದೇ ಊರಿನವನಾಗಿದ್ದ ಜಕಣಾಚಾರಿ ನಿರ್ಮಿಸಿದ್ದನೆಂದು ಶಾಸನಗಳು ಹೇಳುತ್ತದೆ. ಕೈದಳ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಊರಿನ ಮೊದಲ ಹೆಸರು ಕ್ರೀಡಾಪುರವೆಂದಾಗಿತ್ತು. ಅಮರ ಶಿಲ್ಪಿ ಎಂಬ ಹೆಸರಿನಿಂದ ಪ್ರಖ್ಯಾತನಾದ ಜಕಣಾಚಾರಿ ಇದೇ ಊರಿನವನು ಎಂಬುದು ಬಹಳ ಜನಕ್ಕೆ ಗೊತ್ತಿಲ್ಲ. […]Read More

ಪಾರು ಹೇಳಿದ ಕಥೆಗಳು ಕಥೆ-3

–ತಿರುವು– ತನ್ನ ಹೆಸರಿಗೆ ಬಂದ ಪತ್ರವನ್ನೇ ಕೈಯಲ್ಲಿ ಹಿಡಿದು ಕುಳಿತಿದ್ದಾಳೆ ಪಾರು. ಆ ಒಂದು ಪತ್ರ ತನ್ನ ಬಾಳಿನ ತಿರುವನ್ನೇ ಬದಲಿಸಬಹುದು ಎಂಬ ಯಾವ ಸುಳಿವು ಅವಳಿಗಿರಲಿಲ್ಲ. ಅವಳಿಗೆ ಅಂದು ನಡೆದ ಘಟನೆ ನೆನಪಾಯಿತು.ಪಕ್ಕದ ಮನೆಗೆ ಗಂಟಿನವನು ಬಂದಿದ್ದ. ಆಂಟಿ ,ಪಾರು ಸೀರೆ ನೋಡುತ್ತೀಯಾ? ಎಂದು ಕರೆದರು. ಹೋದ ಪಾರುವಿಗೆ, ಮನೆಗೆ ಬಂದಾಗ ಮಾವ (ಗಂಡ) ನಿಂದ ಬೈಗುಳ ದೊರೆಯಿತು. ಎರಡು ಮಕ್ಕಳ ಜವಾಬ್ದಾರಿ ಒಟ್ಟಿಗೆ ತಲೆ ಮೇಲಿದೆ. ನೀನೇನು ಮಾಡುತ್ತೀಯಾ? ಹಾಗೆ ಹೀಗೆ ಎಂದು, ಸ್ವಾಭಿಮಾನಿ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೩

–ಅಬ್ದುಲ್ಲಾಹಿ ಮದುವೆ– ನನಗೆ ಅಬ್ದುಲ್ಲಾಹಿ ಪರಿಚಯ ಯಾರಿಂದ ಆಯಿತೋ ಅಥವ ಹೇಗಾಯಿತೋ ಈಗ ನೆನಪಿಲ್ಲ. ಆತನಿಗೆ ಭಾರತೀಯರ ಎಲ್ಲ ಥರದ ನಡವಳಿಕೆಗಳ ಬಗ್ಗೆ ಬಹಳ ಆಸಕ್ತಿ ಹಾಗೂ ಗೌರವ. ಅವನು ಎಲ್ಲಿ ತನಕ ಓದಿದ್ದನೋ ನಾನರಿಯೆನಾದರೂ, ಹೆಚ್ಚಾಗಿ ಓದಿಕೊಂಡಿದ್ದವನು; ಹಾಗಾಗಿ ಒಬ್ಬ ಸಾಮಾನ್ಯ ಸೋಮಾಲಿಗಿಂತ ಹೆಚ್ಚು ತಿಳಿದವನು. ಹಿಂದಿನ ವಾರದ ಲೇಖನದಲ್ಲಿ ‘ಪ್ಲೇ ಬಾಯ್’ ಥರ ಎಂದು ಅವನ ದೈನಂದಿನ ನಡೆಯ ಬಗ್ಗೆ ಹೇಳಿದ್ದರೂ, ಅದು ಹೌದು ಮತ್ತು ಇಲ್ಲ ಎಂದರೇನೆ ಸಮುಚಿತ! ಒಮ್ಮೆ ಇದ್ದಕ್ಕಿದ್ದಂತೆ, ಈತನೊಬ್ಬ […]Read More

ಹೈಕುಗಳು – ಶ್ರೀಧರ ಕಾಡ್ಲೂರು

ಅನುಭವದಜೊತೆ ಅಧ್ಯಯನವೂಬೇಕು ಕವಿಗೆ ಮನದೊಳಗೆಅಡಗಿ ಕೂತಿದ್ದಾವೆನೂರೆಂಟು ಮಾತು ಹುಡುಕುತ್ತೇನೆ,ನಾಳೆಗೆ ಬರೆಯಲುಹೊಸ ಕವನ ಮನಕೊಪ್ಪುವಸೀರೆ ಹುಡುಕೋದಕ್ಕೆದಿನ ಸಾಲದು ಕಾಲನೊಂದಿಗೆನೋವು ಮರೆಯಾಗಲಿ,ಪುಟ್ಟ ಬೇಡಿಕೆ ಕನ್ನಡಿ ಮುಂದೆತಿದ್ದಿ ತೀಡಿ ಬಾಚಿದ್ದುಹಿಡಿಸಲಿಲ್ಲ (ಮನಮೋಹಕ) ಕತ್ತಲಿನಲ್ಲೇಅರಳಿ ನಿಲ್ಲುತ್ತಿವೆಬ್ರಹ್ಮ ಕಮಲ ಕತ್ತಲು ಅಲ್ಲಅನಿಷ್ಟ, ದುಃಖ. ಉದಾ..ಬ್ರಹ್ಮ ಕಮಲ ಅರಳಿ ನಿಂತುಕಂಗೊಳಿಸುತ್ತಲಿದೆ,ಒಲವ ಹೂವು ತಡವದರೆಬಡಬಡಿಸುತ್ತಾಳೆಹುಬ್ಬು ಗಂಟಿಕ್ಕಿ ಎಲ್ಲಕ್ಕಿಂತಲೂಸಂಸಾರ ಸಾಗರವೇವಿಸ್ಮಯಕಾರಿ ಬಡತನವುಕಸಿದು ತಿನ್ನುತ್ತಿದೆಉದರವನ್ನೇ ದಿನಕ್ಕೊಂದ್ರಂತೆಹೈಕು ಬರೆಯದಿದ್ರೆನಿದ್ದೇ ಬರಲ್ಲ ಕಣ್ಣಂಚಿನಲಿತುಂಬಿ ಬಂದಿರುವುದುಒಲವಧಾರೆ ದ್ರಾಕ್ಷಿಯ ಹುಳಿರಸಗಳಲ್ಲಿ, ತೇಲಿಬಂದಿವ ನಾನು ಬರಬಹುದುನೆಂಟರು, ಕಾಗೆ ಕಾ ಕಾಕಿರುಚುತಿದೆ ಕಾದು ಕುಳಿತಆಕೆಗೆ, ಬಿಗಿದಿತ್ತುಸಾವಿನ ಗಂಟೆ ವರ್ತಮಾನಕೆಭೂತ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 10

ಪರಿಚ್ಛೇದ – 4–ಪ್ರಾಸಾದ ಶಿಖರದಲಿ– ಆಕಾಶದಲ್ಲಿ ಪೂರ್ಣಚಂದ್ರ. ಬೆಳುದಿಂಗಳ ಬೆಳಕಿನಲ್ಲಿ ಕಪೋತಕೂಟ ನಗರ ಸುಂದರವಾಗಿ ಕಂಗೊಳಿಸುತ್ತಿದೆ.ವಿಟಂಕ ರಾಜ್ಯವು ನಾಲ್ಕು ಕಡೆ ಭೂಮಿಯಿಂದ ಸ್ವಲ್ಪ ಎತ್ತರವಾದ ದಿಣ್ಣೆಯ ಮೇಲೆ ಇದೆ. ದಿಣ್ಣೆಯೂ ಸಮತಟ್ಟಾಗಿಲ್ಲ. ರಾಜ್ಯದ ಮಧ್ಯಭಾಗಕ್ಕೆ ವೃತ್ತಾಕಾರವಾಗಿ ಹೋದಂತೆಲ್ಲ ಅದು ಎತ್ತರವಾಗುತ್ತ ಹೋಗುತ್ತದೆ. ಕೇಂದ್ರ ಸ್ಥಳದಲ್ಲಿ ಕಪೋತಕೂಟ ನಗರ. ರಾಜ್ಯದ ಸರ್ವೋಚ್ಚ ಶಿಖರದ ಮೇಲೆ ಇರುವುದರಿಂದಲೋ ಏನೋ ಅದಕ್ಕೆ ಕಪೋತಕೂಟವೆಂಬ ಹೆಸರು ಬಂದಿರಬಹುದು. ನಗರವು ರಾಜ್ಯದ ಸಂಕ್ಷಿಪ್ತ ಪ್ರತಿರೂಪ. ಎಲ್ಲಿಯೂ ನೆಲ ಸಮತಟ್ಟಾಗಿಲ್ಲ. ನಾಲ್ಕು ಕಡೆ ಎತ್ತರವಾದ ಬಲವಾದ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 28

ಎತ್ತು ಕೋಣಗಳಲ್ಲಿ ಮೂಗುದಾರದ ಬಳಕೆಕುತ್ತಿಗೆಗೆ ಹಗ್ಗ, ಬಾಯ್ ಬೀಗ ಕೆಲವಕ್ಕೆಹಸ್ತಿಗಂಕುಶ ಚುಚ್ಚಿ ದುಡಿಸಿಕೊಳ್ಳುವೀ ಬುದ್ಧಿ-ಮತ್ತೇ ನರನಿಗೆ ಮಾತ್ರ- || ಪ್ರತ್ಯಗಾತ್ಮ || ಕವಿ ಚುರುಕು ಕುರುಡಂಗೆ, ಅಂತೆ ಸ್ಪರ್ಶಜ್ಞಾನಕಿವುಡುನಿಗೆ ಕಣ್ ಚುರುಕು ಗಮನಿಸಿರಬೇಕುಅವರಿವರ ಕೈ ಬಾಯ ಸನ್ನೆಯರಿವನು ಮೂಗಇವರು ಯಾರಿಗೆ ಕಡಿಮೆ ? || ಪ್ರತ್ಯಗಾತ್ಮ || ಕಣ್ಣಂತೆ ಕುರುಡಂಗೆ ಕೈ ಕಾಲು ಕಿವಿಗಳೆಯೆಸನ್ನೆ ಕೈ ಬಾಯ್ಗಳದೆ ಮಾತು ಮೂಗನಿಗೆ,ಕಣ್ಣೆ ಕಿವಿ ಕಿವುಡನಿಗೆ, ಹೆಳವನಿಗೆ ಕೈಯೆ ಕಾಲ್,ಅನ್ಯೋನ್ಯ ಸಹಕಾರ- || ಪ್ರತ್ಯಗಾತ್ಮ || ಸ್ವರಗಳೇಳೇ ಏಳು ಸಂಗೀತ […]Read More