ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೦

–ಹೈವಾನ್ ಕಾ ದವಾ!– ಮೊಗದಿಶು ಅಥವ ಹಾರ್ಗೀಸಾ ಅಥವ ಸೋಮಾಲಿಯಾದ ಇನ್ನಾವ ನಗರ ಅಥವ ಊರೇ ಆಗಲಿ, ಹೃತ್ಪೂರ್ವಕವಾಗಿ ಮನಸ್ಸಿಟ್ಟು ಕೆಲಸ ಮಾಡುವ ವೈದ್ಯರಿಗೆ ಎಂದೆಂದಿಗೂ ಬೆಲೆ ಮತ್ತು ಮನ್ನಣೆ ಇದ್ದೇ ಇರುತ್ತದೆ ಎಂಬ ಸತ್ಯವನ್ನು ನಾನು ಬಹಳ ಬೇಗ ಅರಿತುಕೊಂಡಿದ್ದೆ. ಹಾಗಾಗಿ ಎಲ್ಲ ವೈದ್ಯರಂತೆ, ನನಗೂ ಅನೇಕ ಸೋಮಾಲಿ ನಾಗರಿಕರ ಸ್ನೇಹ ಹಾಗೂ ಸಾಮೀಪ್ಯ ದೊರಕಿತ್ತು. ಅದರಿಂದ ಅನೇಕ ರೀತಿಯಲ್ಲಿ ಅನುಕೂಲ ಯಥೇಚ್ಛವಾಗಿ ನನಗೂ ಇತರ ವೈದ್ಯರಂತೆ ಆಗಿದೆ. ನನ್ನ ಮೂಲಕ ನನ್ನ ಪರಿಚಯದ ಭಾರತೀಯರಿಗೆ […]Read More

ಲತಾ ಮಂಗೇಶ್ಕರಳಿಗೆ

ಲತಾ ಮಂಗೇಶ್ಕರಳಿಗೆ ಭೂಮಿಗೆ ಬಂದಶಾಪಗ್ರಸ್ತ ಕಿನ್ನರಿನಂದಾ ದೀಪದ ನಗೆಯಶ್ವೇತ ವಸ್ತ್ರದ ಶಾರದೆಲತಾ ನಿನಗೆ ನೂರು ವಂದನೆ ಶಬ್ದಜಾಲದ ನಿಶ್ಶಬ್ದದನಡುವೆ ನೂರು ಬಣ್ಣದ ಶಬ್ದಚಿತ್ರಗಳ ರಾಗ ರಂಗೋಲಿಯರಚಿಸಿ ರಂಜಿಸುವಮೋಹಕ ಮೋಡಿಯ ಮಾಟಗಾತಿಲತಾ ನಿನಗೆ ನೂರು ವಂದನೆ ಕವಿಯ ಭಾವದ ಹೂವುವಿರಹದುರಿಗಳ ನೋವುಮಿಲನದಿರುಳಿನ ಕಾವುಎಲ್ಲ ಭಾವಗಳ ಹೂಬನದಲ್ಲಿನೂರು ಬಣ್ಣಗಳ ಹೂಗಳರಳಿಸಿದ ತೋಟಗಾತಿಲತಾ ನಿನಗೆ ನೂರು ವಂದನೆ ನಿನ್ನಿಂದ ಕೋಗಿಲೆಯೋಕೋಗಿಲೆಯಿಂದ ನೀನೋ ತಿಳಿಯದೆಹಾವುಗಳೂ ತಲೆದೂಗುವಂತೆಮಾಡುವ ಶ್ರೀ ಕಂಠ ಕೀರ್ತಿಲತಾ ನಿನಗೆ ನೂರು ವಂದನೆ ಡಿ ಎನ್ ಸುರೇಶ್ಹವ್ಯಾಸಿ ಪತ್ರಕರ್ತರುRead More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 13

ದೈವ ಕೃಪೆ ಈ ಜಗದಲ್ಲಿನಮ್ಮದು – ನಿಮ್ಮದುಅಂತ ಏನು ಇಲ್ಲಎಲ್ಲಾ ದೈವ ಕೃಪೆ!ಅವನೊಲಿದರೆ ಏನೆಲ್ಲಾಮುನಿದರೆಏನೇನು ಇಲ್ಲವೇ ಇಲ್ಲಾ!! ಸೂಕ್ತ ಗತಿಸಿಹೋದಕ್ಷಣಗಳನ್ನುನೆನೆದು ನೋವುಪಡುವುದರಲ್ಲಿಯಾವ ಸುಖವು ಇಲ್ಲ!ಬಂದುದನ್ನು ಸ್ವೀಕರಿಸುತ್ತನಗುತ ಬಾಳುವುದೇ ಸೂಕ್ತ!! ಜೀವನ ಪಾವನ ನೋವಿಲ್ಲದ ಬದುಕಿಲ್ಲವಾಸನೆ ಇಲ್ಲದ ಹೂವಿಲ್ಲಸಾವಿಲ್ಲದ ಮನೆಯಿಲ್ಲ!ನೋವಿನಲ್ಲೂಸಂಭ್ರಮಿಸುವುದೇ ಜೀವನಆಗಲೇ ಜೀವನ ಪಾವನ!! ಬದಲಾವಣೆ ಕಾಲಕ್ರಮೇಣಎಲ್ಲವೂ ಬದಲಾಗುತ್ತದೆಪರಿವರ್ತನೆ ಜಗದ ನಿಯಮಮನಸ್ಸಿಲ್ಲದಿದ್ದರೂ ಬದಲಾವಣೆಗೆಹೊಂದಿಕೊಂಡು ಬದುಕಲೇಬೇಕುಬದುಕುವ ಮನಸಿದ್ದರೆ!! ಡಾII ಪರಮೇಶ್ವರಪ್ಪ ಕುದರಿRead More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 26

ಮಲರುಗಳ ಮಕರಂದ ಹೀರಿ ಜೇನನು ಮಾಡಿನಲವಿಂದ ನೀಡಿಹುದು ದುಂಬಿ ಸವಿ ಅದನುಹಳಿಯದಿರು ನೀನದನು ದುಂಬಿ ಎಂಜಲು ಎಂದುತಿಳಿ ಎಂಜಲೆಲ್ಲಿಲ್ಲ ! || ಪ್ರತ್ಯಗಾತ್ಮ || ಕರುವಿನೆಂಜಲು ಹಾಲು, ದುಂಬಿ ಎಂಜಲು ಜೇನುಮಿರುಮಿರುಗುವಾ ರೇμÉ್ಮ ಹುಳವೆಂಜಲಲ್ತೆಹಿರಿಹಿಗ್ಗಿ ಒಲಿದೀವ ಅಕ್ಕರೆಯ ಮುತ್ತುಗಳುಬರಿ ಎಂಜಲಲ್ಲೇನು?- || ಪ್ರತ್ಯಗಾತ್ಮ || ಕಣ್ಣು ಕಾಣದ ಕುರುಡ ವಿಧವೆಯೊಬ್ಬಳ ವರಿಸಿಬನ್ನ ಪಟ್ಟನು ನೂರು ಮಕ್ಕಳನು ಹೆತ್ತುಕಣ್ಣು ಎಂಬುದೆ ಅರಿವು; ಅದುವೆ ಇಲ್ಲದ ಮೇಲೆಇನ್ನು ಸುಖವೆಲ್ಲಿಯದು- || ಪ್ರತ್ಯಗಾತ್ಮ || ಸೋಲ ಬಯಸುವ ಮನುಜ ಬುವಿಯೊಳಗೆ ಇಹನೇನು?ಸೋಲ […]Read More

ಆ ದಿನಗಳು!!

ಆ ದಿನಗಳು!! ನಾವು ಕಳೆದ ಬಾಲ್ಯದ ದಿನಗಳುಅದೆಷ್ಟು ಸುಂದರ!!ಹೋಲಿಸಲಾಗದು ಇಂದಿನ ಜೀವನಕೆಇಹುದು ಅಜಗಜಾಂತರ ಕಳೆಯುತಿದೆ ಇಂದಿನ ದಿನಗಳುಬರಿ ದುಡಿತದಲ್ಲಿಉಳಿದ ನಿದ್ದೆಯನು ಮಾಡುವರಿಲ್ಲಿಎಲ್ಲರು ವಾರಾಂತ್ಯದಲಿ ಊಟವೋ ನಿದ್ದೆಯೊ ಯಾವುದು ತಿಳಿಯದುಮುಳುಗಿಹರೆಲ್ಲರು ಕೆಲಸದಲಿಮನೆಯವರನು ಸಹ ಮರೆತಿಹರಿಲ್ಲಿತುಂಬಿದೆ ಕೆಲಸವು ತಲೆಯಲ್ಲಿ!! ಶೋಕಿಯ ಜೀವನಕೆ ಮರುಳಾಗಿಹರೆಲ್ಲಾಆತ್ಮೀಯತೆಗೆ ಬೆಲೆಯಿಲ್ಲಾಮೊಬ್ಯೆಲ್, ವಾಟ್ಸ್‍ಪ್ ಫೇಸ್ ಬುಕ್ ಬಂದುಕೊಂದಿಹುದು ಅತ್ಮೀಯತೆಯನ್ನೆಲ್ಲಾ!! ಬಾಲ್ಯದ ಗೆಳೆಯರೊಡನೆ ಕಳೆದಆ ದಿನಗಳಲ್ಲಿತ್ತು ಮೋಜಿನ ಗಮ್ಮತ್ತುಅಮ್ಮನು ಹಾಕಿದ ಕ್ಯೆತ್ತುತ್ತುನೆನೆಪಿಸುತಿಹುದು ಬಾಲ್ಯದ ಹೊತ್ತು!! ಹಿತ್ತಲ ಬಾಗಿಲ ಬಳಿಯಲಿ ಬಂದುಕರೆಯುತ್ತಿದ್ದರು ಗೆಳೆಯರು ಅಂದುಕೆಲಸವ ಮುಗಿಸಿ ಹೋಗೆಂದುSMS ಮಾಡ್ತನೆ ಮ್ಯಾನೆಜರ್ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 7

ಹಿಂದಿನ ಸಂಚಿಕೆಯಿಂದ…. ಅಶ್ವಚೋರ ಚಿತ್ರಕನು ಕಾಡಿನ ಮಧ್ಯೆ ಮರೆಯಾದನಲ್ಲವೆ! ಆ ಕಾಡು ಸಣ್ಣ ಪುಟ್ಟದಲ್ಲ. ಸುಮಾರು ಆರು ಹರದಾರಿಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಅದು ವ್ಯಾಪಿಸಿತ್ತು. ಮುಗಿಲೆತ್ತರ ಬೆಳೆದ ದಟ್ಟವಾದ ಕಾಡು. ಭೂಮಿ ಎಲ್ಲ ಕಡೆಯೂ ಸಮತಲವಾಗಿಲ್ಲ. ಅಲಲ್ಲಿ ಒರಟು ಕಲ್ಲುಗಳಿಂದ ಕೂಡಿದ ಹಳ್ಳ ದಿಣ್ಣೆಗಳು, ಕೆಲವು ಕಡೆ ಮರಗಳಿಂದ ಸುತ್ತವರಿದಿರುವ ಹುಲ್ಲಿನ ವಿಶಾಲವಾದ ಬಯಲು; ಕೆಲವು ಕಡೆ ಬಂಜರು ಪ್ರದೇಶದಲ್ಲಿ ಬೆಳೆದ ಮುಳ್ಳಿನ ಗಿಡಗಳು; ಕೆಲವು ಕಡೆ ಕಿರಿದಾಗಿ ಹರಿಯುತ್ತಿರುವ ತೊರೆಗಳು. ಇದು ಜಿಂಕೆ, ಹಂದಿ, ಮೊಲ, […]Read More

ಸಿಹಿ ವಿಷ-ಕೃತಕ ಸಿಹಿಯ ಕಹಿ ಸತ್ಯ

ಕೃತಕ ಸಿಹಿ – ಅಸ್ಪರ್‍ಟೇಮ್ ಬೆಲ್ಲದ ಸಿಹಿ ಗೊತ್ತು, ಸಕ್ಕರೆ ಸಿಹಿ ಗೊತ್ತು ಅದರೆ ಇದೇನು ಕೃತಕ ಸಿಹಿಯ ಬಗ್ಗೆ ಹೇಳುತ್ತಿದ್ದಾರಲ್ಲ! ಎಂದು ಆಶ್ಚರ್ಯವಾಗುತ್ತಿರಬಹುದು ಅಲ್ಲವೇ? ಹೌದು ಹೀಗೊಂದು ಕೃತಕ ಸಿಹಿಯನ್ನು 50 ವರ್ಷದ ಹಿಂದೆ ಅಂದರೆ 1965 ರಲ್ಲಿ ಕಂಡು ಹಿಡಿಯಲಾಗಿತ್ತಾದರೂ ಇದು ಬಳಕೆಗೆ ಬಂದಿದ್ದು 1985 ರ ನಂತರವೇ! ಇದರ ಮೇಲೆ ನೆಡೆದ ಸುಮಾರು 25 ಸಂಶೋಧನೆಗಳ ಪಲಿತಾಂಶವನ್ನು ಕೂಲಂಕುಶವಾಗಿ ಪರಿಶಿಲಿಸಿ ಅನೇಕ ಪ್ರಯೋಗಗಳನ್ನು ಮಾಡಿ ಇದು ಸುರಕ್ಷಿತ ಎಂದು ಸಾಬೀತಾದ ನಂತರವೇ ಅಮೇರಿಕಾದ […]Read More

ಸೌರವ್ಯೂಹ – 11 – ಪ್ಲುಟೊ

–ಪ್ಲುಟೊ- ಪ್ಲುಟೊ ಸೌರಮಂಡಲದಲ್ಲಿ ತಿಳಿದಿರುವಂತೆ ಅತೀ ದೊಡ್ಡ ಕ್ಷುದ್ರ ಗ್ರಹ (ಏರಿಸ್ ನಂತರ) ಮತ್ತು ಸೂರ್ಯನನ್ನು ಪರಿಭ್ರಮಿಸುತ್ತಿರುವ ಹತ್ತನೇ ಅತೀ ಕುಳ್ಳ ಕಾಯವಾಗಿದೆ. ಮೂಲತಃ ಗ್ರಹವೆಂದು ವಿಂಗಡಿಸಲಾದ ಪ್ಲುಟೊ ಪ್ರಸ್ತುತದಲ್ಲಿ ಕೈಪರ್ ಪಟ್ಟಿಯ ಅತೀ ದೊಡ್ಡ ಸದಸ್ಯವಾಗಿ ಪರಿಗಣಿಸಲ್ಪಟ್ಟಿದೆ. ಕೈಪರ್ ಪಟ್ಟಿಯ ಬೇರೆ ಸದಸ್ಯ ಕಾಯಗಳಂತೆ ಪ್ಲುಟೊ ಪ್ರಮುಖವಾಗಿ ಕಲ್ಲು ಮತ್ತು ಮಂಜಿನಿಂದ ಕೂಡಿದ್ದು. ಸುಮಾರು ಸಣ್ಣ ಗಾತ್ರದ್ದಾಗಿದೆ. ಭೂಮಿಯ ಚಂದ್ರನ ದ್ರವ್ಯರಾಶಿಯ ಸುಮಾರು ಐದನೇ ಒಂದು ಪಾಲು ಮತ್ತು ಅದರ ಗಾತ್ರದ ಮೂರನೇ ಒಂದು ಪಾಲಿನಷ್ಟಿದೆ. […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೧೯

ಮಹಿಳಾ ಜನನಾಂಗ – ಛೇದನ! ಬಹಳ ದಿನಗಳಿಂದ ಬರದಿದ್ದ ತಿಮಹಾ ಹಾದ್ದೆ (ಮಹಮ್ಮದ್), ಆ ಒಂದು ದಿನ ಸಂಜೆ ಹೊತ್ತಿನಲ್ಲಿ ಪ್ರತ್ಯಕ್ಷನಾದ. ಆಗ ತಾನೇ ಮಡದಿ ಮಕ್ಕಳೊಡನೆ ಹೊರಹೋಗಿದ್ದ ನಾನು, ಅವನೊಡನೆ ಎಂದಿನಂತೆ ಶಾಯ್ ರಿಂಜಿ (ಬ್ಲ್ಯಾಕ್ ಟೀ) ಕುಡಿದ ನಂತರ, ಪೇಷಂಟ್ ಒಬ್ಬರನ್ನು ನೋಡಲು ಹೋಗಬೇಕೆಂದ. ಸರಿ ಎಂದು ತಯಾರಾಗಿ ಹೊರಟೆ. “ಮೇಡಮ್, ಸ್ವಲ್ಪ ತಡ ಆಗುತ್ತೆ; ಸಿಟಿ ಬಿಟ್ಟು ದೂರ ಹೋಗಬೇಕು” ಎಂದು ತಾನೇ ನನ್ನ ಮಡದಿಗೆ ತಿಳಿಸಿದ. ಮೊಗದಿಶು ನಗರದ ಆಚೆಗೆ, ನಾನು […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 12

ನಾದ ನಾನು ನನ್ನ ಕವಿತೆಯಸಾಲಿನ ಪದ ನೀನುಕವಿತೆಯೊಳಗಿನನಾದ ನಾನುಭಾವ ನೀನುಹಾವ – ಭಾವ ನಾವು!! ಜೊತೆಗಿದ್ದರೆ ನೀ ತೋರುವ ಪ್ರೀತಿಗೆಮನಸೋತಿರುವೆನಿನ್ನ ಸನಿಹಕೆ ನಾಹಾತೊರೆಯುವೆ!ನೀ ನನ್ನ ಜೊತೆಗಿದ್ದರೆಕಪ್ಪೆ ಚಿಪ್ಪಿನಲ್ಲಿಇಡೀ ಸಮುದ್ರವನೇನಾ ತುಂಬಬಲ್ಲೆ!! ಪಂಚ ಪ್ರಾಣ ಚಿನ್ನದಂತ ಮನಸು ನಿನ್ನದುಅದನು ಕದ್ದ ಹೃದಯ ನನ್ನದು!ನೀನೆಂದರೆ ನನಗೆ ಪಂಚ ಪ್ರಾಣನೀ ನನ್ನ ಬದುಕಿನ ಎಲ್ಲ ತ್ರಾಣಅಲೆದಾಡಿದೆವು ಅದೆಷ್ಟೋ ತಾಣಕಡಿಮೆಯೇ ಕಣ್ಣಿಂದ ನೀ ಬಿಟ್ಟಬಾಣ!! ಸಾಧ್ಯವಿಲ್ಲ ನಿನ್ನಿಂದ ನನ್ನಮನಸು ಲೂಟಿಯಾಗಿದೆನೀನು, ನಿನ್ನ ನೆನಪು ಇಲ್ಲದೇಈ ಬದುಕು ಸಾಧ್ಯವಿಲ್ಲಎನಿಸಿಬಿಟ್ಟಿದೆ!ನಿನ್ನ ನೆನಪುನಿನ್ನ ಪ್ರೀತಿಯಷ್ಟೇ ಗಟ್ಟಿಯಾಗಿದೆಸಿಕ್ಕಾಪಟ್ಟೆ ಪ್ರೀತಿಯಾಗಿದೆ!! […]Read More