ಚಿಬ್ಬಲು ಗುಡ್ಡೆ ಪುಣ್ಯಕ್ಷೇತ್ರ “ಬಿತ್ತರದಾಗಸ ಹಿನ್ನೆಲೆಯಾಗಿದೆಪರ್ವತದೆತ್ತರ ಸಾಲಾಗೆಸೆದಿರೆಕಿಕ್ಕಿರಿದಡಿವಿಗಳಂಚಿನ ನಡುವೆಮೆರೆದಿರೆ ಜಲಸುಂದರಿ ತುಂಗೆರಂಜಿಸೆ ಇಕ್ಕೆಲದಲ್ಲಿ ಹೊಮ್ಮಳಲುಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತಕವಿಮನ ನಾಕವಿ ನೆಲೆಸಿತ್ತುಮಧುರ ಸೌಂದರ್ಯದ ಮಧುರ ಜಗತ್ತುಹೃದಯ ಜಿಹ್ವೆಗೆ ಜೇನಾಗಿತ್ತು” ಎಂದು ರಾಷ್ಟ್ರಕವಿ ಕುವೆಂಪುರವರು ಚಿಬ್ಬಲು ಗುಡ್ಡೆಯ ವರ್ಣನೆಯನ್ನು ತಮ್ಮ “ದೇವರು ರುಜು ಮಾಡಿದನು” ಎಂಬ ಕವಿತೆಯಲ್ಲಿ ತುಂಬಾ ಸುಂದರವಾಗಿ ವರ್ಣಿಸಿದ್ದಾರೆ. ಹೌದು ಚಿಬ್ಬಲು ಗುಡ್ಡ ಸ್ಥಳವೇ ಅಂತಹುದು.ಕುವೆಂಪುರವರು ತಮ್ಮ ಕವನದಲ್ಲಿ ಚಿಬ್ಬಲು ಗುಡ್ಡೆಯ ಸೃಷ್ಟಿ ಸೌಂದರ್ಯದಲ್ಲಿ ಭಗವಂತನ ಇರುವಿಕೆಯನ್ನು ಗುರುತಿಸುತ್ತಾರೆ. ಚಿಬ್ಬಲು ಗುಡ್ಡೆ ಮಲೆನಾಡಿನ ದಟ್ಟ ಅರಣ್ಯದಲ್ಲಿರುವ ಒಂದು […]Read More
ಕ್ಷುದ್ರ ಗ್ರಹ – Asteroid ಸೌರವ್ಯೂಹ ಒಳಗಿನ ಚಿಕ್ಕ ಗ್ರಹವು “ಕ್ಷುದ್ರ ಗ್ರಹ” ವಾಗಿದೆ. ಮಂಗಳ ಹಾಗು ಗುರು ಗ್ರಹದ ನಡುವಿನ ಅಂತರದಲ್ಲಿ ಅಸಂಖ್ಯಾತ ಕ್ಷುದ್ರಗ್ರಹಗಳು (Asteroids) ಇವೆ. ಸುಮಾರು 3000 ದಷ್ಟು ಕ್ಷುದ್ರಗ್ರಹಗಳನ್ನು ಖಗೋಳ ವಿಜ್ಞಾನಿಗಳು ಗುರುತಿಸಿದ್ದಾರೆ. ಗುರುತಿಸಲಾಗದ ಇನ್ನೂ ಅಸಂಖ್ಯಾತವಾಗಿ ಇವೆ. ಇವುಗಳಲ್ಲಿ ಅತ್ಯಂತ ದೊಡ್ಡದಾದದ್ದು ‘ಸೆರೆಸ್’. ಇದರ ವ್ಯಾಸವು ಕೇವಲ 687 ಕಿಲೋಮೀಟರ್. ಇವುಗಳ ಗಾತ್ರ 16 ರಿಂದ 800 ಕಿ.ಮೀ. (1 ರಿಂದ 500 ಮೈಲಿಗಳು). ಇವು ಸೂರ್ಯನ ಸುತ್ತ ಪ್ರದಕ್ಷಿಣೆ […]Read More
ನುಗ್ಗೆ ಎಂಬ ಸಂಜೀವಿನಿ ನಮ್ಮ ದಕ್ಷಿಣ ಭಾರತದಲ್ಲಿ ಮೂಲಭೂತವಾಗಿ ಬೆಳೆದುಕೊಂಡು ಬಂದಿರುವ ನುಗ್ಗೆಯ ಮರವು ನಮ್ಮೆಲರಿಗೂ ಚಿರಪರಿಚಿತವೇ. ಬರಗಾಲವಿದ್ದರೂ ಹಸಿರು ಎಲೆಗಳಿಂದ ಈ ಮರವು ಕಂಗೊಳಿಸುತ್ತದೆ. ಈ ಮರವನ್ನು ಬೆಳೆಸುವುದು ಅತೀ ಸುಲಭ ಹಾಗು ಆರೈಕೆಯೂ ಕಡಿಮೆ. “ಮೋರಿಂಗ ಒಲಿಫೆರಾ” ಎಂಬ ವೈಜ್ಞಾನಿಕ ಹೆಸರಿಂದ ಕರೆಯಲ್ಪಡುವ ನುಗ್ಗೆಯು ಬಹಳ ಬೇಡಿಕೆಯುಳ್ಳ ತರಕಾರಿಯಾಗಿದೆ. ಇದರ ಹೂವನ್ನು “ಮೋರಿಂಗ ಫ್ಲವರ್” ನುಗ್ಗೆಕಾಯಿಯನ್ನು “ಡ್ರಮ್ ಸ್ಟಿಕ್” ಎಂದು ಕರೆಯಲಾಗುತ್ತದೆ. ಎತ್ತರಕ್ಕೆ ಬೆಳೆದು ರೆಂಬೆಗಳನ್ನು ಚಾಚಿ ಬೆಳೆವ ಮರದಲ್ಲಿ ಪುಟ್ಟ ಹಸಿರು ಎಲೆಗಳು, […]Read More
–ಹೈವಾನ್ ಕಾ ದವಾ!– ಮೊಗದಿಶು ಅಥವ ಹಾರ್ಗೀಸಾ ಅಥವ ಸೋಮಾಲಿಯಾದ ಇನ್ನಾವ ನಗರ ಅಥವ ಊರೇ ಆಗಲಿ, ಹೃತ್ಪೂರ್ವಕವಾಗಿ ಮನಸ್ಸಿಟ್ಟು ಕೆಲಸ ಮಾಡುವ ವೈದ್ಯರಿಗೆ ಎಂದೆಂದಿಗೂ ಬೆಲೆ ಮತ್ತು ಮನ್ನಣೆ ಇದ್ದೇ ಇರುತ್ತದೆ ಎಂಬ ಸತ್ಯವನ್ನು ನಾನು ಬಹಳ ಬೇಗ ಅರಿತುಕೊಂಡಿದ್ದೆ. ಹಾಗಾಗಿ ಎಲ್ಲ ವೈದ್ಯರಂತೆ, ನನಗೂ ಅನೇಕ ಸೋಮಾಲಿ ನಾಗರಿಕರ ಸ್ನೇಹ ಹಾಗೂ ಸಾಮೀಪ್ಯ ದೊರಕಿತ್ತು. ಅದರಿಂದ ಅನೇಕ ರೀತಿಯಲ್ಲಿ ಅನುಕೂಲ ಯಥೇಚ್ಛವಾಗಿ ನನಗೂ ಇತರ ವೈದ್ಯರಂತೆ ಆಗಿದೆ. ನನ್ನ ಮೂಲಕ ನನ್ನ ಪರಿಚಯದ ಭಾರತೀಯರಿಗೆ […]Read More
ಲತಾ ಮಂಗೇಶ್ಕರಳಿಗೆ ಭೂಮಿಗೆ ಬಂದಶಾಪಗ್ರಸ್ತ ಕಿನ್ನರಿನಂದಾ ದೀಪದ ನಗೆಯಶ್ವೇತ ವಸ್ತ್ರದ ಶಾರದೆಲತಾ ನಿನಗೆ ನೂರು ವಂದನೆ ಶಬ್ದಜಾಲದ ನಿಶ್ಶಬ್ದದನಡುವೆ ನೂರು ಬಣ್ಣದ ಶಬ್ದಚಿತ್ರಗಳ ರಾಗ ರಂಗೋಲಿಯರಚಿಸಿ ರಂಜಿಸುವಮೋಹಕ ಮೋಡಿಯ ಮಾಟಗಾತಿಲತಾ ನಿನಗೆ ನೂರು ವಂದನೆ ಕವಿಯ ಭಾವದ ಹೂವುವಿರಹದುರಿಗಳ ನೋವುಮಿಲನದಿರುಳಿನ ಕಾವುಎಲ್ಲ ಭಾವಗಳ ಹೂಬನದಲ್ಲಿನೂರು ಬಣ್ಣಗಳ ಹೂಗಳರಳಿಸಿದ ತೋಟಗಾತಿಲತಾ ನಿನಗೆ ನೂರು ವಂದನೆ ನಿನ್ನಿಂದ ಕೋಗಿಲೆಯೋಕೋಗಿಲೆಯಿಂದ ನೀನೋ ತಿಳಿಯದೆಹಾವುಗಳೂ ತಲೆದೂಗುವಂತೆಮಾಡುವ ಶ್ರೀ ಕಂಠ ಕೀರ್ತಿಲತಾ ನಿನಗೆ ನೂರು ವಂದನೆ ಡಿ ಎನ್ ಸುರೇಶ್ಹವ್ಯಾಸಿ ಪತ್ರಕರ್ತರುRead More
ದೈವ ಕೃಪೆ ಈ ಜಗದಲ್ಲಿನಮ್ಮದು – ನಿಮ್ಮದುಅಂತ ಏನು ಇಲ್ಲಎಲ್ಲಾ ದೈವ ಕೃಪೆ!ಅವನೊಲಿದರೆ ಏನೆಲ್ಲಾಮುನಿದರೆಏನೇನು ಇಲ್ಲವೇ ಇಲ್ಲಾ!! ಸೂಕ್ತ ಗತಿಸಿಹೋದಕ್ಷಣಗಳನ್ನುನೆನೆದು ನೋವುಪಡುವುದರಲ್ಲಿಯಾವ ಸುಖವು ಇಲ್ಲ!ಬಂದುದನ್ನು ಸ್ವೀಕರಿಸುತ್ತನಗುತ ಬಾಳುವುದೇ ಸೂಕ್ತ!! ಜೀವನ ಪಾವನ ನೋವಿಲ್ಲದ ಬದುಕಿಲ್ಲವಾಸನೆ ಇಲ್ಲದ ಹೂವಿಲ್ಲಸಾವಿಲ್ಲದ ಮನೆಯಿಲ್ಲ!ನೋವಿನಲ್ಲೂಸಂಭ್ರಮಿಸುವುದೇ ಜೀವನಆಗಲೇ ಜೀವನ ಪಾವನ!! ಬದಲಾವಣೆ ಕಾಲಕ್ರಮೇಣಎಲ್ಲವೂ ಬದಲಾಗುತ್ತದೆಪರಿವರ್ತನೆ ಜಗದ ನಿಯಮಮನಸ್ಸಿಲ್ಲದಿದ್ದರೂ ಬದಲಾವಣೆಗೆಹೊಂದಿಕೊಂಡು ಬದುಕಲೇಬೇಕುಬದುಕುವ ಮನಸಿದ್ದರೆ!! ಡಾII ಪರಮೇಶ್ವರಪ್ಪ ಕುದರಿRead More
ಮಲರುಗಳ ಮಕರಂದ ಹೀರಿ ಜೇನನು ಮಾಡಿನಲವಿಂದ ನೀಡಿಹುದು ದುಂಬಿ ಸವಿ ಅದನುಹಳಿಯದಿರು ನೀನದನು ದುಂಬಿ ಎಂಜಲು ಎಂದುತಿಳಿ ಎಂಜಲೆಲ್ಲಿಲ್ಲ ! || ಪ್ರತ್ಯಗಾತ್ಮ || ಕರುವಿನೆಂಜಲು ಹಾಲು, ದುಂಬಿ ಎಂಜಲು ಜೇನುಮಿರುಮಿರುಗುವಾ ರೇμÉ್ಮ ಹುಳವೆಂಜಲಲ್ತೆಹಿರಿಹಿಗ್ಗಿ ಒಲಿದೀವ ಅಕ್ಕರೆಯ ಮುತ್ತುಗಳುಬರಿ ಎಂಜಲಲ್ಲೇನು?- || ಪ್ರತ್ಯಗಾತ್ಮ || ಕಣ್ಣು ಕಾಣದ ಕುರುಡ ವಿಧವೆಯೊಬ್ಬಳ ವರಿಸಿಬನ್ನ ಪಟ್ಟನು ನೂರು ಮಕ್ಕಳನು ಹೆತ್ತುಕಣ್ಣು ಎಂಬುದೆ ಅರಿವು; ಅದುವೆ ಇಲ್ಲದ ಮೇಲೆಇನ್ನು ಸುಖವೆಲ್ಲಿಯದು- || ಪ್ರತ್ಯಗಾತ್ಮ || ಸೋಲ ಬಯಸುವ ಮನುಜ ಬುವಿಯೊಳಗೆ ಇಹನೇನು?ಸೋಲ […]Read More
ಆ ದಿನಗಳು!! ನಾವು ಕಳೆದ ಬಾಲ್ಯದ ದಿನಗಳುಅದೆಷ್ಟು ಸುಂದರ!!ಹೋಲಿಸಲಾಗದು ಇಂದಿನ ಜೀವನಕೆಇಹುದು ಅಜಗಜಾಂತರ ಕಳೆಯುತಿದೆ ಇಂದಿನ ದಿನಗಳುಬರಿ ದುಡಿತದಲ್ಲಿಉಳಿದ ನಿದ್ದೆಯನು ಮಾಡುವರಿಲ್ಲಿಎಲ್ಲರು ವಾರಾಂತ್ಯದಲಿ ಊಟವೋ ನಿದ್ದೆಯೊ ಯಾವುದು ತಿಳಿಯದುಮುಳುಗಿಹರೆಲ್ಲರು ಕೆಲಸದಲಿಮನೆಯವರನು ಸಹ ಮರೆತಿಹರಿಲ್ಲಿತುಂಬಿದೆ ಕೆಲಸವು ತಲೆಯಲ್ಲಿ!! ಶೋಕಿಯ ಜೀವನಕೆ ಮರುಳಾಗಿಹರೆಲ್ಲಾಆತ್ಮೀಯತೆಗೆ ಬೆಲೆಯಿಲ್ಲಾಮೊಬ್ಯೆಲ್, ವಾಟ್ಸ್‍ಪ್ ಫೇಸ್ ಬುಕ್ ಬಂದುಕೊಂದಿಹುದು ಅತ್ಮೀಯತೆಯನ್ನೆಲ್ಲಾ!! ಬಾಲ್ಯದ ಗೆಳೆಯರೊಡನೆ ಕಳೆದಆ ದಿನಗಳಲ್ಲಿತ್ತು ಮೋಜಿನ ಗಮ್ಮತ್ತುಅಮ್ಮನು ಹಾಕಿದ ಕ್ಯೆತ್ತುತ್ತುನೆನೆಪಿಸುತಿಹುದು ಬಾಲ್ಯದ ಹೊತ್ತು!! ಹಿತ್ತಲ ಬಾಗಿಲ ಬಳಿಯಲಿ ಬಂದುಕರೆಯುತ್ತಿದ್ದರು ಗೆಳೆಯರು ಅಂದುಕೆಲಸವ ಮುಗಿಸಿ ಹೋಗೆಂದುSMS ಮಾಡ್ತನೆ ಮ್ಯಾನೆಜರ್ […]Read More
ಹಿಂದಿನ ಸಂಚಿಕೆಯಿಂದ…. ಅಶ್ವಚೋರ ಚಿತ್ರಕನು ಕಾಡಿನ ಮಧ್ಯೆ ಮರೆಯಾದನಲ್ಲವೆ! ಆ ಕಾಡು ಸಣ್ಣ ಪುಟ್ಟದಲ್ಲ. ಸುಮಾರು ಆರು ಹರದಾರಿಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಅದು ವ್ಯಾಪಿಸಿತ್ತು. ಮುಗಿಲೆತ್ತರ ಬೆಳೆದ ದಟ್ಟವಾದ ಕಾಡು. ಭೂಮಿ ಎಲ್ಲ ಕಡೆಯೂ ಸಮತಲವಾಗಿಲ್ಲ. ಅಲಲ್ಲಿ ಒರಟು ಕಲ್ಲುಗಳಿಂದ ಕೂಡಿದ ಹಳ್ಳ ದಿಣ್ಣೆಗಳು, ಕೆಲವು ಕಡೆ ಮರಗಳಿಂದ ಸುತ್ತವರಿದಿರುವ ಹುಲ್ಲಿನ ವಿಶಾಲವಾದ ಬಯಲು; ಕೆಲವು ಕಡೆ ಬಂಜರು ಪ್ರದೇಶದಲ್ಲಿ ಬೆಳೆದ ಮುಳ್ಳಿನ ಗಿಡಗಳು; ಕೆಲವು ಕಡೆ ಕಿರಿದಾಗಿ ಹರಿಯುತ್ತಿರುವ ತೊರೆಗಳು. ಇದು ಜಿಂಕೆ, ಹಂದಿ, ಮೊಲ, […]Read More
ಕೃತಕ ಸಿಹಿ – ಅಸ್ಪರ್‍ಟೇಮ್ ಬೆಲ್ಲದ ಸಿಹಿ ಗೊತ್ತು, ಸಕ್ಕರೆ ಸಿಹಿ ಗೊತ್ತು ಅದರೆ ಇದೇನು ಕೃತಕ ಸಿಹಿಯ ಬಗ್ಗೆ ಹೇಳುತ್ತಿದ್ದಾರಲ್ಲ! ಎಂದು ಆಶ್ಚರ್ಯವಾಗುತ್ತಿರಬಹುದು ಅಲ್ಲವೇ? ಹೌದು ಹೀಗೊಂದು ಕೃತಕ ಸಿಹಿಯನ್ನು 50 ವರ್ಷದ ಹಿಂದೆ ಅಂದರೆ 1965 ರಲ್ಲಿ ಕಂಡು ಹಿಡಿಯಲಾಗಿತ್ತಾದರೂ ಇದು ಬಳಕೆಗೆ ಬಂದಿದ್ದು 1985 ರ ನಂತರವೇ! ಇದರ ಮೇಲೆ ನೆಡೆದ ಸುಮಾರು 25 ಸಂಶೋಧನೆಗಳ ಪಲಿತಾಂಶವನ್ನು ಕೂಲಂಕುಶವಾಗಿ ಪರಿಶಿಲಿಸಿ ಅನೇಕ ಪ್ರಯೋಗಗಳನ್ನು ಮಾಡಿ ಇದು ಸುರಕ್ಷಿತ ಎಂದು ಸಾಬೀತಾದ ನಂತರವೇ ಅಮೇರಿಕಾದ […]Read More