ಸೌರವ್ಯೂಹ – 11 – ಪ್ಲುಟೊ

–ಪ್ಲುಟೊ- ಪ್ಲುಟೊ ಸೌರಮಂಡಲದಲ್ಲಿ ತಿಳಿದಿರುವಂತೆ ಅತೀ ದೊಡ್ಡ ಕ್ಷುದ್ರ ಗ್ರಹ (ಏರಿಸ್ ನಂತರ) ಮತ್ತು ಸೂರ್ಯನನ್ನು ಪರಿಭ್ರಮಿಸುತ್ತಿರುವ ಹತ್ತನೇ ಅತೀ ಕುಳ್ಳ ಕಾಯವಾಗಿದೆ. ಮೂಲತಃ ಗ್ರಹವೆಂದು ವಿಂಗಡಿಸಲಾದ ಪ್ಲುಟೊ ಪ್ರಸ್ತುತದಲ್ಲಿ ಕೈಪರ್ ಪಟ್ಟಿಯ ಅತೀ ದೊಡ್ಡ ಸದಸ್ಯವಾಗಿ ಪರಿಗಣಿಸಲ್ಪಟ್ಟಿದೆ. ಕೈಪರ್ ಪಟ್ಟಿಯ ಬೇರೆ ಸದಸ್ಯ ಕಾಯಗಳಂತೆ ಪ್ಲುಟೊ ಪ್ರಮುಖವಾಗಿ ಕಲ್ಲು ಮತ್ತು ಮಂಜಿನಿಂದ ಕೂಡಿದ್ದು. ಸುಮಾರು ಸಣ್ಣ ಗಾತ್ರದ್ದಾಗಿದೆ. ಭೂಮಿಯ ಚಂದ್ರನ ದ್ರವ್ಯರಾಶಿಯ ಸುಮಾರು ಐದನೇ ಒಂದು ಪಾಲು ಮತ್ತು ಅದರ ಗಾತ್ರದ ಮೂರನೇ ಒಂದು ಪಾಲಿನಷ್ಟಿದೆ. […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೧೯

ಮಹಿಳಾ ಜನನಾಂಗ – ಛೇದನ! ಬಹಳ ದಿನಗಳಿಂದ ಬರದಿದ್ದ ತಿಮಹಾ ಹಾದ್ದೆ (ಮಹಮ್ಮದ್), ಆ ಒಂದು ದಿನ ಸಂಜೆ ಹೊತ್ತಿನಲ್ಲಿ ಪ್ರತ್ಯಕ್ಷನಾದ. ಆಗ ತಾನೇ ಮಡದಿ ಮಕ್ಕಳೊಡನೆ ಹೊರಹೋಗಿದ್ದ ನಾನು, ಅವನೊಡನೆ ಎಂದಿನಂತೆ ಶಾಯ್ ರಿಂಜಿ (ಬ್ಲ್ಯಾಕ್ ಟೀ) ಕುಡಿದ ನಂತರ, ಪೇಷಂಟ್ ಒಬ್ಬರನ್ನು ನೋಡಲು ಹೋಗಬೇಕೆಂದ. ಸರಿ ಎಂದು ತಯಾರಾಗಿ ಹೊರಟೆ. “ಮೇಡಮ್, ಸ್ವಲ್ಪ ತಡ ಆಗುತ್ತೆ; ಸಿಟಿ ಬಿಟ್ಟು ದೂರ ಹೋಗಬೇಕು” ಎಂದು ತಾನೇ ನನ್ನ ಮಡದಿಗೆ ತಿಳಿಸಿದ. ಮೊಗದಿಶು ನಗರದ ಆಚೆಗೆ, ನಾನು […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 12

ನಾದ ನಾನು ನನ್ನ ಕವಿತೆಯಸಾಲಿನ ಪದ ನೀನುಕವಿತೆಯೊಳಗಿನನಾದ ನಾನುಭಾವ ನೀನುಹಾವ – ಭಾವ ನಾವು!! ಜೊತೆಗಿದ್ದರೆ ನೀ ತೋರುವ ಪ್ರೀತಿಗೆಮನಸೋತಿರುವೆನಿನ್ನ ಸನಿಹಕೆ ನಾಹಾತೊರೆಯುವೆ!ನೀ ನನ್ನ ಜೊತೆಗಿದ್ದರೆಕಪ್ಪೆ ಚಿಪ್ಪಿನಲ್ಲಿಇಡೀ ಸಮುದ್ರವನೇನಾ ತುಂಬಬಲ್ಲೆ!! ಪಂಚ ಪ್ರಾಣ ಚಿನ್ನದಂತ ಮನಸು ನಿನ್ನದುಅದನು ಕದ್ದ ಹೃದಯ ನನ್ನದು!ನೀನೆಂದರೆ ನನಗೆ ಪಂಚ ಪ್ರಾಣನೀ ನನ್ನ ಬದುಕಿನ ಎಲ್ಲ ತ್ರಾಣಅಲೆದಾಡಿದೆವು ಅದೆಷ್ಟೋ ತಾಣಕಡಿಮೆಯೇ ಕಣ್ಣಿಂದ ನೀ ಬಿಟ್ಟಬಾಣ!! ಸಾಧ್ಯವಿಲ್ಲ ನಿನ್ನಿಂದ ನನ್ನಮನಸು ಲೂಟಿಯಾಗಿದೆನೀನು, ನಿನ್ನ ನೆನಪು ಇಲ್ಲದೇಈ ಬದುಕು ಸಾಧ್ಯವಿಲ್ಲಎನಿಸಿಬಿಟ್ಟಿದೆ!ನಿನ್ನ ನೆನಪುನಿನ್ನ ಪ್ರೀತಿಯಷ್ಟೇ ಗಟ್ಟಿಯಾಗಿದೆಸಿಕ್ಕಾಪಟ್ಟೆ ಪ್ರೀತಿಯಾಗಿದೆ!! […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 25

ರೂಪಕದ ಸೊಗಸಿಂಗೆ ಕವಿ ಕುಮಾರವ್ಯಾಸಉತ್ಪ್ರೇಕ್ಷೆ ಷಡಕ್ಷರದೇವನಿಗೆ ಸಿದ್ಧಿಹಂಪ ಕವಿಯೂಳು ಕಾಣು ಅರ್ಥಾಂತರನ್ಯಾಸಉಪಮೆ ಲಕ್ಮೀಶನೊಳು- || ಪ್ರತ್ಯಗಾತ್ಮ || ಜುಟ್ಟು ಹಿಡಿದೆಳದಾಡಿ ತಂದೆ ಅಣ್ಣನ ಬಡಿಯೆಪುಟ್ಟ ಮಗು ಹೆದರುವುದು ಕಿಟ್ಟೆಂದು ಚೀರಿಗಟ್ಟಿತನವವಕಿಲ್ಲ ರೌದ್ರತೆಗೆ ಹೆದರುವುವುಪುಟ್ಟ ಮಕ್ಕಳೆ ಹಾಗೆ- || ಪ್ರತ್ಯಗಾತ್ಮ || ನೂರು ಜನ ಮೌರ್ಯರಲಿ ಚಂದ್ರಗುಪ್ತನು ಉಳಿದಕ್ರೂರ ದಾಯಾದಿಗಳ ಕೋಟಲೆಗೆ ಸಿಲುಕಿಹಾರುವನ ದಯೆಯಿಂದ ರಾಜ್ಯ ಕೋಶವ ಪಡೆದಯಾರ ನೆರವಿಗೆ ಯಾರೊ !- || ಪ್ರತ್ಯಗಾತ್ಮ || ನೂರು ಕೌರವರೊಳಗೆ ಅದಟ ದುರ್ಯೋಧನನುನೂರು ಗಾಂಧಾರರೊಳು ಶಕುನಿ ಅತಿ ಚತುರನೂರು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 6

ಹಿಂದಿನ ಸಂಚಿಕೆಯಿಂದ… ಸಾಮ್ರಾಜ್ಯ ವ್ಯಾಪಿಯಾದ ಈ ವಿಶೃಂಖಲತೆಯ ನಡುವೆ ರಾಜ್ಯಭಾರ ಚೆನ್ನಾಗಿ ನಡೆಯುತ್ತಿತ್ತೆಂದು ಹೇಳಲಾಗುವುದಿಲ್ಲ. ಭೂಕಂಪದಿಂದ ಮನೆಯೇ ಬಿದ್ದು ಹೋಗುತ್ತಿರುವಾಗ, ಆ ಮನೆಯ ಒಂದು ಮೂಲೆಯಲ್ಲಿ ಸಣ್ಣದಾಗಿ ಉರಿಯುತ್ತಿರುವ ಬೆಂಕಿಯನ್ನು ಯಾರೂ ಗಮನಿಸುವುದಿಲ್ಲ. ಹಾಗೆಯೇ ದೇಶದ ಯಾವುದೋ ಮೂಲೆಯಲ್ಲಿರುವ ಒಂದು ಸಣ್ಣ ‘ವಿಟಂಕ’ ರಾಜ್ಯದ ಕಥೆಯನ್ನು ಪಾಟಲಿಪುತ್ರದ ಎಲ್ಲರೂ ಮರತೇ ಬಿಟ್ಟರು. ಇಪ್ಪತ್ತೈದು ವರ್ಷಗಳ ನಡುವೆ ಯಾರೂ ಅದನ್ನು ಹುಡುಕುವ ಗೋಜಿಗೆ ಹೋಗಲಿಲ್ಲ. ರಾಜ್ಯದ ಹಿಂದಿನ ಗ್ರಂಥಪಾಲ ಮರಣಾನಂತರ ಅವನ ಜಾಗಕ್ಕೆ ಹೊಸಬನ ನೇಮಕವಾಯಿತು. ಹೊಸಬನಾದ ಕಾರಣ […]Read More

ಎಸ್ ಎನ್ ಸೇತೂರಾಂ ಅವರ ‘ಉಚ್ಛಿಷ್ಟ’ ನಾಟಕ ಹಾಗೂ ಮತ್ತಷ್ಟು ಝಲಕುಗಳು!

ಪ್ರಸ್ತುತ ರಂಗಭೂಮಿಯಲ್ಲಿ ಚಾಲನೆಯಲ್ಲಿರುವ ಕತೆಗಾರ, ನಾಟಕ ರಚನೆಕಾರ, ನಟ ಹಾಗೂ ನಿರ್ದೇಶಕ ಎಸ್ ಎನ್ ಸೇತೂರಾಂ ಅವರು ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಇವರ ನಾಟಕಗಳ ಓಘವೇ ಬೇರೆ ರೀತಿಯದು. ಇವರ ನಾಟಕಗಳಿಗೆ ಇವರದ್ದೇ ಆದ ಪ್ರೇಕ್ಷಕ ವರ್ಗವಿದೆ. ಸೇತೂರಾಂ ಅವರ ನಾಟಕಗಳಲ್ಲಿ ಮಾತಿರುತ್ತೆ, ಮಾತಿನ ಚಾಟಿಯಷ್ಟೇ ಪ್ರಾಧಾನ್ಯತೆಯಿರುವ ಮೌನವಿರುತ್ತೆ! ಆಗ ಮೌನವೇ ಹೆಚ್ಚು ವಿಷಯಗಳನ್ನು ಸ್ಪುರಿಸುತ್ತೆ. ಎಲ್ಲಾ ದೃಶ್ಯದಲ್ಲಿನ ಡೈಲಾಗ್‍ಗಳು ನಾಟಕದಿಂದ ಹೊರ ಬಂದ ನಂತರವೂ ಮನದ ಮೂಲೆಯಲ್ಲೇ ಕೂತು ರಿಂಗಣಿಸುತ್ತಲೇ ಇರುತ್ತೆ. ಯಾವುದೇ ರಂಗಸಜ್ಜಿಕೆಯ […]Read More

ಬುದ್ದಿವಂತ ಬಾಲಕ ಹಾಗೂ ಸೋಮಾರಿ ಜನಗಳು

ಅದೊಂದು ಮಲೆನಾಡಿನ ಸಣ್ಣ ಊರು. ಊರಿನ ಪಕ್ಕವೇ ಒಂದು ನದಿ ಹರಿಯುತ್ತಿತು. ಉತ್ತಿ ಬಿತ್ತಿ ಅಲ್ಲಿಯ ಜನ ಬಂಗಾರದಂಥಹ ಬೆಳೆ ತೆಗೆಯಬಹುದಿತ್ತು. ಆದರೆ ಬರುಬರುತ್ತಾ ಆ ಊರಿನ ಜನರೆಲ್ಲರೂ ಸೋಮಾರಿಗಳಾಗತೊಡಗಿದ್ದರು. ಎಷ್ಟರ ಮಟ್ಟಿಗೆ ಸೋಮಾರಿಗಳಾಗಿದ್ದರೆಂದರೆ ಬರೀ ಕುಳಿತು ಹರಟೆ ಹೊಡೆಯುವುದು, ಇಲ್ಲಾ ಮಲಗುವುದು, ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಸರಿಯಾಗಿ ನೀರು ಹಾಯಿಸದೆ ಹೊಲಗಳೆಲ್ಲಾ ಒಣಗತೊಡಗಿದ್ದವು. ಊರನ್ನು ಸ್ವಚ್ಛ ಮಾಡದೆ ಇದ್ದುದ್ದರಿಂದ ಅಲ್ಲಲ್ಲಿ ಕಸದ ರಾಶಿ ಬಿದ್ದು ಸಾಂಕ್ರಾಮಿಕ ರೋಗಗಳು ನಿಧಾನವಾಗಿ ಹರಡತೊಡಗಿದ್ದವು. ಹಂದಿಗಳ ಹಾವಳಿ ಜಾಸ್ತಿಯಾಗಿತ್ತು. […]Read More

ಸೌರವ್ಯೂಹ – 10 – ನೆಪ್ಚೂನ್

–ನೆಪ್ಚೂನ್– ನೆಪ್ಚೂನ್ ಸೌರಮಂಡಲದ ಎಂಟನೇ ಮತ್ತು ಸೂರ್ಯನಿಂದ ಅತೀ ಹೆಚ್ಚು ದೂರವಿರುವ ಗ್ರಹ. ಇದು ವ್ಯಾಸದಲ್ಲಿ 4 ನೆಯ ಮತ್ತು ದ್ರವ್ಯರಾಶಿಯಲ್ಲಿ 7 ನೇ ಅತೀ ದೊಡ್ಡ ಗ್ರಹವಾಗಿದೆ. ಈ ಗ್ರಹಕ್ಕೆ ರೋಮನ್ನರ ಸಾಗರ ದೇವತೆಯ ಹೆಸರನ್ನು ಇಡಲಾಗಿದೆ. ಸೆಪ್ಟೆಂಬರ್ 23 1846 ರಂದು ಕಂಡು ಹಿಡಿಯಲಾದ ನೆಪ್ಚೂನ್ ನೇರ ವೀಕ್ಷಣೆಯಲ್ಲದೆ ಗಣಿತದ ಲೆಕ್ಕಾಚಾರಗಳಿಂದ ಕಂಡು ಹಿಡಿಯಲಾದ ಮೊದಲ ಗ್ರಹ. ಯುರೇನಸ್ ಕಕ್ಷೆಯಲ್ಲಿನ ಸೂಕ್ಷ್ಮ ಬದಲಾವಣೆಗಳಿಂದ ಖಗೋಳ ಶಾಸ್ತ್ರಜ್ಞರು ನೆಪ್ಚೂನ್ ನ ಅಸ್ತಿತ್ವವನ್ನು ತರ್ಕಿಸಿದರು. ಆಗಸ್ಟ್ 25, […]Read More

ಅಮ್ಮ ಮತ್ತು ಪಾರ್ಥ

ಕಳೆದುಹೋದ ಬಾಲ್ಯವನ್ನು ನೆನೆಸಿಕೊಂಡರೆ ಮತ್ತೆ ಮರುಕಳಿಸಬಾರದೇ ಎಂಬ ಆಸೆ ಎಲ್ಲರಲ್ಲೂ ಉಂಟಾಗುವುದು ಸಹಜ ಅಲ್ಲವೇ ? ಇಲ್ಲಿ ನಾನು ಹೇಳ ಹೊರಟಿರುವುದು ನನ್ನಮ್ಮನ ಬಾಲ್ಯ… ದೊಡ್ಡದಾದ ತುಂಬು ಕುಟುಂಬದಲ್ಲಿ ಬೆಳೆದ ನನ್ನ ತಾಯಿಯ ವಿದ್ಯಾಭ್ಯಾಸ ನೆಡೆದಿದ್ದು ನಮ್ಮ ಹಳ್ಳಿಯಲ್ಲೇ. ಅವಳು ತನ್ನ ಬಾಲ್ಯವನ್ನು ನೆನಿಸಿಕೊಳ್ಳುವಾಗ ಬಹಳಷ್ಟು ಬಾರಿ ತಾನು ಮಾಡಿದ ನಾಟಕದ ಬಗ್ಗೆ ಹೇಳುತ್ತಿರುತ್ತಾಳೆ. ಹಳ್ಳಿಗಳಲ್ಲಿ ನಾಟಕವೆಂದರೆ ಜನರು ತಮ್ಮ ಪರಿವಾರದವರೊಡನೆ ಗಾಡಿಗಳಲ್ಲಿ ಉತ್ಸಹಾದಿಂದ ಬರುತ್ತಿದ್ದ ಕಾಲ. ಒಂದು ನಾಟಕದಲ್ಲಿ ನನ್ನಮ್ಮ ಕೃಷ್ಣನ ಪಾತ್ರದಾರಿ ಹಾಗು ಅವಳ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-೧೮

ಕಿಸ್ಮಾಯೋ ಪ್ರಯಾಣ – 2 ಮಾನವನ ದೈನಂದಿನ ಬದುಕೊಂದು ನಿರಂತರ ಅನಿಶ್ಚಿತತೆಯ ನಿಕ್ಷೇಪ! ಹೌದಲ್ಲವೇ? ನಾವು ಏನೆಲ್ಲ ಎಷ್ಟೆಲ್ಲ ಯೋಚಿಸಿ, ತಿಂಗಳಿಗೂ ಮಿಕ್ಕಿದ ಯೋಜನೆ ರೂಪಿಸಿಕೊಂಡು ಖುಷಿಯಿಂದ ಸ್ನೇಹಿತನ ಮನೆಯತ್ತ ಹೊರಟಿದ್ದು; ಆದರೆ ಆದದ್ದು ಏನು ಮತ್ತು ಎಂಥದ್ದು! ಕಿಸ್ಮಾಯೋ ಎಂಬ ಅಂದಿನ ಆ ಕೊಂಪೆ, ಒಂದು ಅರ್ಥದಲ್ಲಿ ಭಗವಂತನೇ ತೊರೆದ (ಗಾಡ್ ಫರ್ಸೇಕನ್) ಊರು. ವಾಸ್ತವದಲ್ಲಿ ವೈದ್ಯಕೀಯ ತುರ್ತು ಸ್ಥಿತಿಯ ರೋಗಿಗಳಿಗೆ, ಅಂದಿನ ಇಡೀ ಆ ದೇಶವೇ ಉತ್ತಮವಾಗಿರಲಿಲ್ಲ ಎಂದರದು ಉತ್ಪ್ರೇಕ್ಷೆಯಾಗಿರಲಿಲ್ಲ. ಹಾಗಂತ ಇನ್ನೆಲ್ಲಿಗೆ ಹೋಗುವುದು? […]Read More