ವಿಳಾಸ ಪರ್ವತದಲ್ಲಿಹುಟ್ಟಿರಭಸದಿಂದಕಡಲೆಡೆಗೆನುಗ್ಗುವ ನದಿಎಂದೂಯಾರನ್ನೂಕಡಲವಿಳಾಸ ಕೇಳಿಲ್ಲ!! ಪಯಣ ನನಗು ಆಕಾಶದೆತ್ತರಕ್ಕೆಹಾರುವ ಹಂಬಲಜೋಡಿ ರೆಕ್ಕೆಗಳಿಲ್ಲವಲ್ಲಎಂಬ ತಳಮಳ!ಒಗ್ಗಟ್ಟಿನಲ್ಲಿ ಬಲವಿದೆಎಂಬ ಸೂತ್ರಧಾರಣಅದೆಲ್ಲಿ ಸಾಗಿರಬಹುದುಈ ಹಕ್ಕಿಗಳ ಪಯಣ!! ದಕ್ಕಿದೆ ಭೂ ತಾಯಿಯೇ ನಿನಗಿದೋದೀರ್ಘ ದಂಡ ನಮನನಿನ್ನ ಮಡಿಲಮಗುವಾಗಿ ಜನ್ಮ ಸಿಕ್ಕಿದೆ!ಸಕಲ ಸೌಭಾಗ್ಯವೂನನಗಿಲ್ಲಿ ದಕ್ಕಿದೆಸ್ವಾರ್ಥಕ್ಕಾಗಿ ನಿನ್ನದೋಚುವವರ ಕಂಡುನನ್ನ ರಕ್ತ ಉಕ್ಕಿದೆ! ನಿಧಾನ ಗತಿ ಜೀವನವೆಂಬರೇಸಲ್ಲಿ ಮಾತ್ರವೇಗವಾಗಿಓಡುವವನುಸೋಲುತ್ತಾನೆ!ನಿಧಾನಗತಿಅನುಸರಿಸಿದವನುಬೀಗುತ್ತಾನೆ!! ಡಾII ಪರಮೇಶ್ವರಪ್ಪ ಕುದರಿಚಿತ್ರದುರ್ಗRead More
ದಂಶಕಗಳ ಲೋಕ ದಂಶಕಗಳು, ಯುಗ್ಮದಂತಿಗಳು, Rodents, Gnawing animals ಎಂದೆಲ್ಲಾ ಕರೆವ ಈ ಗಣದ ಪ್ರಾಣಿಗಳು ಸಸ್ತನಿಗಳಲ್ಲೇ ದೊಡ್ಡ ಸಂಖ್ಯೆಯ ಗುಂಪನ್ನು ಹೊಂದಿವೆ. ಈ ಗಣದಲ್ಲಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಬಲ್ಲ ಬೀವರ್ (Beaver) ಗಳಿಂದ ಹಿಡಿದು ಮನೆಯಲ್ಲಿರುವ ವಸ್ತುಗಳನ್ನು ಕಡಿದು ಅಪಾರ ಹಾನಿ ಮಾಡಬಲ್ಲ ಇಲಿ ಹೆಗ್ಗಣಗಳು ಸೇರಿವೆ. ಈ ದಂಶಕಗಳ ದೇಹರಚನೆಯೇ ಒಂದು ರೀತಿಯ ವಿಶೇಷ, ಈ ಗುಂಪಿನ ಜೀವಿಗಳಿಗೆ ಮೇಲ್ದವಡೆ ಮತ್ತು ಕೆಳ ದವಡೆಗಳಲ್ಲಿ ಉಳಿಯಂತಿರುವ ಜೋಡಿ ಬಾಚಿ ಹಲ್ಲುಗಳಿದ್ದು ಈ ಹಲ್ಲುಗಳ […]Read More
ಪರಿಚ್ಛೇದ-3 –ಮಗಧದ ದೂತ– ಮಹಾಕವಿ ಕಾಳಿದಾಸನು ‘ರಘುವಿನ ದಿಗ್ವಿಜಯ’ದ ನೆಪದಲ್ಲಿ ಅಮಿತ ವಿಕ್ರಮ ಮಗಧೇಶ್ವರನ ವಿಜಯಗಾಥೆಯನ್ನು ವರ್ಣಿಸಿರುವನಲ್ಲವೆ? ಅದು ಸಮುದ್ರಗುಪ್ತನನ್ನು ಕುರಿತದ್ದು. ಒಂದು ದೃಷ್ಟಿಯಲ್ಲಿ ಸಮುದ್ರಗುಪ್ತನುಅಲೆಗ್ಜಾಂಡರನಿಗಿಂತಲೂ ಅತಿಶಯನಾದವನೆನ್ನಬಹುದು. ಅಲೆಗ್ಜಾಂಡರನ ಸಾಮ್ರಾಜ್ಯವು ಅವನ ಮರಣಾನಂತರವೇ ಛಿನ್ನಭಿನ್ನವಾಗಿ ಒಡೆದು ಹೋಯಿತು. ಆದರೆ ಸಮುದ್ರಗುಪ್ತನು ತನ್ನ ಸಮುದ್ರಮೇಖಲಾವಲಯಿತವಾದ ವಿಶಾಲಸಾಮ್ರಾಜ್ಯವನ್ನು ತನ್ನ ನಂತರ ಮೂರು ತಲೆಮಾರುಗಳವರೆಗೂ ನಿರುಪದ್ರವದಿಂದ ಅನುಭವಿಸುವಷ್ಟು ಸುಭದ್ರಗೊಳಿಸಿದ್ದನು. ಆದ್ದರಿಂದಲೇ ನೂರು ವರ್ಷಕ್ಕೆ ಮುಂಚೆ ಆ ಬಂಧನ ಸಡಿಲವಾಗಲಿಲ್ಲ. ಗುಪ್ತಸಾಮ್ರಾಜ್ಯದ ಸುಭದ್ರವಾದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡುದು – ಸಮುದ್ರಗುಪ್ತನ ಮೊಮ್ಮಗನಾದ ಕುಮಾರಗುಪ್ತನ […]Read More
ತಲೆ ಎತ್ತಿ ‘ಮೃಗರಾಜ’ ಪದವಿ ಪಡೆಯಿತು ಸಿಂಹತಲೆಯ ತಗ್ಗಿಸಿ ಕುರಿಯು `ಕುರಿಯೆ’ ಆಗಿಹುದುತಲೆಯೆತ್ತಿ ಧೈರ್ಯದಿಂ ನುಗ್ಗಿದವನಿಗೆ ಜಯವುಚಳಿಬಿಟ್ಟು ಮುನ್ನುಗ್ಗು- || ಪ್ರತ್ಯಗಾತ್ಮ || ಕಾಲ ಮರುಭೂಮಿಯಲಿ ಹೆಜ್ಜೆ ಇಕ್ಕುತ ನಡೆಯೊಬಾಳ ಬಟ್ಟೆಯ ನಡೆದು ಬಸವಳಿದ ಪಥಿಕನಾಳೆ ಯಾವನೊ ನಿನ್ನ ಹೆಜ್ಜೆ ಗುರುತನು ಹಿಡಿದುಬಾಳ ಪಥ ಸಾಗಿಸುವ- || ಪ್ರತ್ಯಗಾತ್ಮ || ಒಂದು ಗೊತ್ತಾದ ಸರಿ ದಾರಿಯನು ಹಿಡಿದು ನಡೆಹಿಂದೆ ಹೆಜ್ಜೆಯ ಗುರುತು ಬಿಟ್ಟು ನಡೆ ಮುಂದೆಎಂದಾದರೊಂದು ದಿನ ದಾರಿ ತಪ್ಪಿದ ಜನಕೆಮುಂದೆ ನೆರವಹುದೇನೊ – || ಪ್ರತ್ಯಗಾತ್ಮ […]Read More
ಹೃದಯಗಳ ಪಿಸುಮಾತು ಉಹಿಸಿದ ನೆನಪೊಂದನು ಮನಸಲ್ಲಿ ಬಚ್ಚಿಟ್ಟುಕರೆಯುವೆನು,,,,ನೀ ಬಂದು ನೆಲೆಸಲೆಂದೆಕತ್ತಲನು ಕನಸಿಂದ ತಡೆ ಹಿಡಿದಿರುವೆನು,,,,ಬಾ ಚೆಲುವೆ ನೀ ಬಾನಿಂದ ಜಾರಿ ಬೆಳಕಾಗಿಹೂ ಕನಸ ಹೊತ್ತು ನಿಂತಿರುವೆ ನಾ ನಿನಗಾಗಿ.. ಕೇಳಿಲ್ಲಿ ಚೆಲುವ ಸಿಗುತ್ತಿಲ್ಲ ಯಾಕೋ ನಿದ್ರೆಗೆ ಸಮಯಹಗಲಿಗೂ ರಾತ್ರಿಗೂ ನಿನ್ನನೆ ಪರಿಚಯಿಸುತಿದೆ ಹೃದಯಏನೆಂದು ಹುಡುಕುವ ನನ್ನ ನೋಟದಲಿ,,ಕಳೆದೋಗುತಲೇ ಇರುವೆ ನಿನ್ನನೇ ಕಾಣುತಾ ನಾನಿಲ್ಲಿ.ಬಾ ಚೆಲುವ ಬಾನಿಂದ ಜಾರಿ ಬೆಳಕಾಗಿಹೂ ಕನಸ ಹೊತ್ತು ನಿಂತಿರುವೆ ನಾ ನಿನಗಾಗಿ.. ನೀ ಆಡುವ ಮಾತು ಕಾಣದೆ ಕೊಡುವ ಮುತ್ತುಬರಿ ಕನಸಿಗೆ ನಾ […]Read More
–ಯುರೇನಸ್– ಯುರೇನಸ್ ಸೌರಮಂಡಲದ ದೂರದ ಗ್ರಹ, ಸೂರ್ಯನಿಂದ ಏಳನೆಯದು. 1781 ರಲ್ಲಿ ವಿಲಿಯಂ ಹರ್ಷಲ್ ಅದರ ಇರುವಿಕೆಯನ್ನು ಕಂಡುಹಿಡಿದದ್ದು. ಅನಿಲ ರೂಪಿಯಾದ ಯುರೇನಸ್ ಗ್ರಹವು ವ್ಯಾಸದಲ್ಲಿ ಮೂರನೇ ಅತಿ ದೊಡ್ಡ ಹಾಗು ದ್ರವ್ಯರಾಶಿಯಲ್ಲಿ 4 ನೇ ಅತಿ ದೊಡ್ಡ ಗ್ರಹವಾಗಿದೆ. ಇದಕ್ಕೆ ಆಕಾಶದ ದೇವತೆ ಹಾಗು ಇತರೆ ದೇವತೆಗಳ ಪೂರ್ವಜನಾದ ಗ್ರೀಕ್ ದೇವತೆಯ “ಯುರೇನಸ್” ಎಂಬ ಹೆಸರನ್ನು ಇಡಲಾಗಿದೆ. ಆಧುನಿಕ ಕಾಲದಲ್ಲಿ ಕಂಡುಹಿಡಿಯಲಾದ ಮೊದಲ ಗ್ರಹ ಇದು. ಈ ಗ್ರಹವನ್ನು ಔಪಚಾರಿಕವಾಗಿ ಕಂಡುಹಿಡಿದದ್ದು. ಬೇರೆ ಗ್ರಹಗಳು (ಬುಧ […]Read More
ನೇತಾಜಿಯ ಮಹಾ – ಪಯಣ “ಸ್ವತಂತ್ರ ಭಾರತದ ನನ್ನ ಕನಸು ನನ್ನನ್ನು ಇಲ್ಲಿ ಕರೆತಂದಿದೆ , ಬ್ರಿಟೀಷರಿಗೆ ಪಾಠ ಕಲಿಸಲು ಜರ್ಮನಿ, ಇಟಲಿ ಮತ್ತು ಜಪಾನ್ ನಂತಹ ಸ್ನೇಹಿತ ರಾಷ್ಟ್ರಗಳ ಬೆಂಬಲ ಬೇಕು, ಸ್ವಾತಂತ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ನಾವು ಸಿದ್ಧರಿದ್ದೇವೆ” ಎಂದು ನುಡಿದದ್ದು ನಮ್ಮೆಲ್ಲರ ಪ್ರೀತಿಯ “ನೇತಾಜಿ ಸುಭಾಷ್ ಚಂದ್ರ ಬೋಸ್” ಅದೂ ಯಾರ ಕೂಡ? ಜಗತ್ತು ಕಂಡ ವಿಲಕ್ಷಣ ದಂಡನಾಯಕ, ಪರಮ ಕ್ರೂರಿಯೂ ಆದ ನಾಜಿ ನಾಯಕ “ಅಡಾಲ್ಫ್ ಹಿಟ್ಲರ್” ನೊಂದಿಗೆ. ಬ್ರಿಟೀಷರ ಕಣ್ತಪ್ಪಿಸಿ […]Read More
ಅಮರ ಸುಭಾಷ್! ಜೈ ಹಿಂದ್’ ಎಂದಿರಿಸ್ವಾತಂತ್ರ್ಯಕ್ಕಾಗಿ ಹೋರಾಡಿದಿರಿಜೈಲುವಾಸಕ್ಕೂ ‘ಸೈ’ ಎಂದಿರಿಬ್ರಿಟಿಷಗರಿಗೆ ಸಿಂಹ ಸ್ವಪ್ನ ವಾದಿರಿ ವಿವೇಕರ ವಾಣಿಯ ಆಲಿಸಿದಿರಿಅರವಿಂದರ ಅನುಸರಿಸಿದಿರಿಬಾಪುಗೆ ‘ರಾಷ್ಟ್ರಪಿತ’ ಎಂದಿರಿ‘ನೇತಾಜಿ’ ಎಂದೆನಿಸಿದಿರಿ ಗಾಂಧೀಜಿಗೆ ಪ್ರಿಯವಾದಿರಿಬಿಸಿರಕ್ತದವರಿಗೆ ಪ್ರೇರಣೆಯಾದಿರಿ‘ರಕ್ತ ಕೊಡಿ-ಸ್ವಾತಂತ್ರ್ಯ ಕೊಡುವೆ’ ಎಂದಿರಿಸ್ವಾತಂತ್ರ್ಯಕ್ಕಾಗಿ ಮಹಾನ್ ತ್ಯಾಗಿಗಳಾದಿರಿ ಗಾಂಧೀಜಿ ಒಂದೆಡೆ ಎಂದಾದರೆಸುಭಾಷ್‍ಜಿ ಮತ್ತೊಂದೆಡೆ ಎಂದಾಯ್ತುನೀವಿಬ್ಬರು ನಾಣ್ಯದ ಮುಖಗಳಾದಿರಿಎರಡರ ಉದ್ಧೇಶವೂ ‘ಆಜಾದ್’ ಆಗಿತ್ತು! ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದಿರಿದೇಶದುದ್ದಗಲ ಓಡಾಡಿದಿರಿಬ್ರಿಟಿಷರ ವಿರುದ್ಧ ಹೋರಾಡಿದಿರಿವಿದೇಶಗಳಲ್ಲೂ ಖ್ಯಾತರಾದಿರಿ ಜೀವದ ಹಂಗಿಲ್ಲದೇ ಮುನ್ನುಗ್ಗಿದಿರಿ!ಮರಣವೆಂಬುದೇ ತಮಗಿಲ್ಲ!ಎನ್ನುತ್ತಿಹರು ಅಭಿಮಾನಿಗಳೆಲ್ಲಎಂದೆಂದಿಗೂ ತಾವು ಅಮರ! ತುಂಕೂರು ಸಂಕೇತ್ ಕಲಾಕೃತಿ ಕೃಪೆ: ರವಿ ಪೂಜಾರಿRead More
ಸೌಂದರ್ಯದ ಖನಿ ಬೆಡಗಿನ ಬರೋಡ ಲಕ್ಷ್ಮಿವಿಲಾಸ ಅರಮನೆ ಗುಜಾರಾತಿನಲ್ಲಿ ಅನೇಕ ಪ್ರೇಕ್ಷಣೀಯ ಪ್ರವಾಸಿ ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾಗಿ ತನ್ನ ಕಲಾತ್ಮಕತೆಯಿಂದ ಗಮನ ಸೆಳೆಯುವುದು ಬರೋಡ ಅಥವಾ ವಡೋದರಾ ದಲ್ಲಿರುವ ಲಕ್ಷ್ಮಿವಿಲಾಸ ಅರಮನೆ. ತನ್ನ ಅಂದ ಚೆಂದದ ಕಲಾತ್ಮಕತೆಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆಯಲ್ಲದೆ ಬರೋಡಾದ ಗಾಯಕ್ವಾಡ್ ಮನೆತನದವರು ನೆಡೆಸಿದ ಅತಿ ಭೋಗದ ವಿಲಾಸಿ ಜೀವನ ಹೇಗಿತ್ತೆಂದು ನೋಡಬೇಕೆಂದರೆ ಲಕ್ಷ್ಮೀವಿಲಾಸ್ ಅರಮನೆಯನ್ನೊಮ್ಮೆ ನೋಡಲೇಬೇಕು. ವಡೋದರ ಎಂದರೆ ಸಾಕು ಕಣ್ಮುಂದೆ ಬರುವುದು ಕಲೆ. ಈ ಊರಿನಲ್ಲಿ ಅನೇಕ ಕಲಾತ್ಮಕ ಕಟ್ಟಡಗಳು ನಿಮ್ಮ […]Read More
—ಕಿಸ್ಮಾಯೋ ಪ್ರಯಾಣ – 1— ಡಾ. ಜಗನ್ನಾಥ ಕಿಸ್ಮಾಯೋಗೆ ಹೋಗಿ ತನ್ನ ವೃತ್ತಿ ಆರಂಭಿಸಿದ ನಂತರ, ಅತ್ತ ಕಡೆಯಿಂದ ಸುದ್ದಿಯೇ ಇರಲಿಲ್ಲ. ನನಗೂ ಸಹ ಅವನನ್ನು ಸಂಪರ್ಕಿಸಲು ಆಗಿರಲಿಲ್ಲ. ಹಾಗಾಗಿ, ಒಮ್ಮೆ ಅವನಿಗೆ ತಿಳಿಸದ ಹಾಗೆ, ನಾವೇ ಖುದ್ದಾಗಿ ಹೋಗಿ, ಆ ಇಬ್ಬರನ್ನೂ ಅಚ್ಚರಿಯ ಮಡುವಿನಲ್ಲಿ ಅನಾಮತ್ತು ಇಳಿಸಿ ನೋಡಬೇಕೆಂಬ ಚಪಲ ನನ್ನಲ್ಲಿತ್ತು. ನನ್ನ ಹೆಂಡತಿಗೂ ತನ್ನ ಹೊಸ ಗೆಳತಿಯ ಕಾಣುವ ಹಂಬಲ ಹಾಗೂ ಅವರಿರುವ ಹೂಸ ಸ್ಥಳ ನೋಡುವ ಕುತೂಹಲ ಇತ್ತು. ಹಾಗಾದರೆ ಹೋಗುವುದು ಎಂದು, […]Read More