ದಿಲ್ಲು ಬದುಕಿನಲಿಬಣ್ಣವಿರಲಿಬದುಕೇಬಣ್ಣವಾಗದಿರಲಿಏಳು ಬಣ್ಣಗಳಕಾಮನಬಿಲ್ಲುಏಳುಬೀಳುಗಳಸಹಿಸುವ ದಿಲ್ಲುನಮ್ಮೆಲರದಾಗಿರಲಿ ಬದುಕು ಚಿನ್ನ ಜೀವನವೊಂದು ಆಟಅದಕೊಂದಿಷ್ಟು ಪರಿಪಾಠಇದ್ದಾರೆ ಚೆನ್ನಪಾಲಿಸಿದರಂತೂಈ ಬದುಕು ಚಿನ್ನ!ಗೌರವಿಸಿ ಬಾಳಬೇಕುಗುರುಹಿರಿಯರನ್ನ!! ಏಕಾಂಗಿ ಏಕಾಂಗಿಯಾಗಿನಡೆಯುತ್ತಿರುವೆಬಾಳದಾರಿಯಕವಲಿನಲ್ಲಿ!ಕನವರಿಸುತ್ತಿರುವೆಬಾಯಿಬಿಡುತಹಗಲಿರುಳಿನಲ್ಲಿ!!ಹೆತ್ತವರಕನವರಿಕೆಯಲ್ಲಿ!! ಅಮ್ಮ ಅಮ್ಮ ನೀನೆ ನನ್ನಹೃದಯದ ವೀಣೆನೀನಿಲ್ಲದೆ ನಾಬದುಕು ಕಾಣೆ!ನೀನೆ ಎಲ್ಲ..ನೀನಿಲ್ಲದೆ ಈಬದುಕು ಬವಣೆನಿನ್ನಾಣೆ!! ಡಾII ಪರಮೇಶ್ವರಪ್ಪ ಕುದರಿRead More
–ಗುರು ಗ್ರಹ– ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ Iಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂII ಗುರು ಗ್ರಹ ಸೂರ್ಯನಿಂದ 5 ನೇ ಗ್ರಹ ಮತ್ತು ಸೌರಮಂಡಲದಲ್ಲಿ ಅತೀ ದೊಡ್ಡ ಗ್ರಹ, ಸೂರ್ಯ, ಚಂದ್ರ ಮತ್ತು ಶುಕ್ರ ಗ್ರಹಗಳ ನಂತರ ಗುರು ಗ್ರಹವು ಸಾಮಾನ್ಯವಾಗಿ ಆಗಸದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರಕಾಶಮಾನವಾದ ಕಾಯ. ಆದರೆ ವರ್ಷದ ಕೆಲವು ದಿನಗಳಲ್ಲಿ ಮಂಗಳ ಗ್ರಹವು ಗುರುವಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಂಡು ಬರುತ್ತದೆ. ಸೌರಮಂಡಲದ ಬೇರೆಲ್ಲಾ ಗ್ರಹಗಳ ಒಟ್ಟು ದ್ರವ್ಯರಾಶಿಗಿಂತಲೂ […]Read More
ಚುಚ್ಚು ಮಾತುಗಳಿಂದ ಅನ್ಯಾಯದಿಂ ಜರೆದುತುಚ್ಛನೊಬ್ಬನು ನಿನ್ನ ಮನವ ನೋಯಿಸಲುಕೊಚ್ಚಿ ಬಿಡುವೆನು ಎಂದು ಅಬ್ಬರಿಸಿ ಗುಡುಗಿ ಬಿಡುಕಚ್ಚದಿರು ಬುಸ್ಸೆನ್ನು- || ಪ್ರತ್ಯಗಾತ್ಮ || ಧರಣಿ ತಿರುಗುವುದಿಲ್ಲ ಸೂರ್ಯ ತಿರುಗುವನೆಂದುಮರಣ ಭೀತಿಯ ತೋರೆ ಗೆಲಿಲಿಯೋ ನುಡಿದಅರೆಬರೆಯ ಹುಚ್ಚರಿಗೆ ವಿಜ್ಞಾನಿಗುಂ ಸೋಲು,ಅರಿವುಳ್ಳವನು ಸೋಲ್ವ- || ಪ್ರತ್ಯಗಾತ್ಮ || ಮಾಗಿಯೊಳು ಸೆಕೆ ಎನಲಿ, ಕಾಗೆಯನು ಬಿಳುಪೆನಲಿ,ಸಾಗರವು ಹರಿಯುವುದು ಎಂದೆನಲಿ ಕೂಗಿಹೀಗೆಯೇ ಏನೇನೊ ನುಡಿವ ಮೂರ್ಖರ ನುಡಿಗೆರೇಗದಿರು; ಸುಮ್ಮನಿರು- || ಪ್ರತ್ಯಗಾತ್ಮ || ಅನ್ನದಗುಳನು ಕಂಡು ಕಾಗೆ `ಕಾ’ ಎನ್ನುವುದು,ತನ್ನ ಬಳಗವ ಕರೆದು ಕೂಡಿ […]Read More
ಅದೃಷ್ಟದ ಆಟ – 3 ಪರಿಚ್ಛೇದ – 2 ಅಶ್ವ ಚೋರ ಸುಗೋಪಾ ತಲೆಯೆತ್ತಿ ನೋಡಿ ಚಕಿತಳಾದಳು. ಒಬ್ಬ ಯುವಕ ದೇವದಾರು ಮರದ ನೆರಳಿನಲ್ಲಿ ಬಂದು ನಿಂತಿದ್ದಾನೆ. ಇವರ ಬಳಿಗೆ ಅವನು ಯಾವಾಗ ಸದ್ದಿಲ್ಲದೆ ಬಂದು ನಿಂತಿದ್ದನೋ ಯಾರಿಗೂ ತಿಳಿಯದು.ಸುಗೋಪಾ– ಯಾರು ನೀವು?ಆಗಂತುಕ– ಒಬ್ಬ ಪಥಿಕ, ಜಲಸತ್ರದ ಒಡತಿಯು ನೀವೇನೋ? ಕುಡಿಯಲು ನೀರು ಬೇಕಾಗಿತ್ತು.ಸುಗೋಪಾ ಪಥಿಕನನ್ನು ಅಡಿಯಿಂದ ಮುಡಿಯವರೆಗೆ ನೋಡಿದಳು. ಉಡಿಗೆ- ತೊಡಿಗೆಗಳನ್ನು ನೋಡಿದರೆ ಅವನು ಆಗಂತುಕನೆಂಬುದಕ್ಕೆ ಸಂಶಯ ಬರುವುದಿಲ್ಲ. ಸೀಸಕ- ಕವಚಗಳನ್ನು ಧರಿಸಿದ್ದಾನೆ. ಸೊಂಟದಲ್ಲಿ ಚರ್ಮದ […]Read More
ಸಿಂಗಳೀಕ – Macaque ಪಶ್ಚಿಮ ಘಟ್ಟ ಪ್ರದೇಶ, ಇದು ಸುತ್ತಲೂ ಹಚ್ಚ ಹಸಿರನ್ನು ಮೈ ತುಂಬಿ ಕೊಂಡಿರುವ ಸಹ್ಯಾದ್ರಿ, ಎತ್ತಲೂ ನದಿ ಕಣಿವೆಗಳಿಂದ ಕೂಡಿದ ಭೂ ಭಾಗ. ಬೆಟ್ಟ,ಗುಡ್ಡಗಳನ್ನು ಹೊಂದಿರುವ ಪರ್ವತ. ಇಲ್ಲಿ ಬಗೆ-ಬಗೆಯ ಪ್ರಾಣಿ-ಪಕ್ಷಿಗಳ ತಾಣವನ್ನು ನೋಡಿದಾಗ ಕಣ್ಣಿಗೆ ಆನಂದವಾಗುವುದು ಖಂಡಿತ. ಹಸಿರು ಸಿರಿಯ ವನ ರೂಪವನ್ನೊಮ್ಮೆ ನೋಡಿದಾಗ ಸ್ವರ್ಗದಷ್ಟೆ ಖುಷಿ ಅನುಭವ ಸಿಗುವುದು ಖಚಿತ. ಇಂತಹ ಸಸ್ಯ ವರ್ಗಗಳ ನಡುವೆ ಇಂದು ಉಳಿದಿರುವ ಜೀವಗಳೆಷ್ಟೊ, ಅಳಿದಿರುವ ಜೀವಿಗಳೆಷ್ಟೊ, ಅಳವಿನಂಚಿನಲ್ಲಿರುವ ಜೀವಿಗಳೆಷ್ಟೊ ? ಹುಡುಕುತ್ತಾ ಹೋದರೆ […]Read More
ನೆನಪಿನ ಸಖ ಒಂದು ಕಾಲದಲ್ಲವನುನನ್ನ ಮಾತುಗಳಿಗೆಲ್ಲಾಕಿವಿಯಾದವನುನನ್ನ ನಗುವನ್ನೂಬೊಗಸೆಯಲ್ಲಿ ಹಿಡಿದವನುನನ್ನ ಹುಚ್ಚು ಆಸೆಗಳಿಗೆಬಣ್ಣ ಹಚ್ಚಲು ಸಹಕರಿಸಿದವನುಹೇಗೆ ಮರೆಯಲಿ ಅವನನ್ನುಅವನ ಸರಳತೆಯನ್ನುಸಜ್ಜನಿಕೆಯನ್ನು ನಾನು ಅತ್ತರೆಏನು ಮಾಡಬೇಕೆಂದುತಿಳಿಯದೆ ಪೇಚಾಡುತ್ತಿದ್ದವನುಪೆಚ್ಚು ಮೋರೆ ಹಾಕುತ್ತಿದ್ದವನುಎಷ್ಟೋ ಕಾಲ ನಾನುಅವನ ಕಡೆಗಣಿಸಿದ್ದರೂಕಂಗೆಡದೆ, ತುಂಬುಹೃದಯದಿಂದ ಹಾರೈಸಿದವನುಹರಸುತ್ತಲೇ ಇರುವವನುಹೇಗೆ ಮರೆಯಲಿ ಅವನನ್ನು ಮರೆತಿದ್ದೇನೆ ಎಂಬಂತೆನಟಿಸಬಹುದು ಅಷ್ಟೇಮರೆತರೆ, ಬಾಳ ಹೊತ್ತಿಗೆಯಲ್ಲಿಎಲ್ಲೋ ಒಮ್ಮೊಮ್ಮೆಮಾತ್ರವೇ ಇಣುಕುವಸುಂದರ, ಸುಮಧುರಹರೆಯದ, ಹಸಿ ಹೃದಯದಹಾಳೆಯೊಂದನ್ನೂ, ಅದರಆರ್ದ್ರತೆಯನ್ನು ನಾನೇಕಳೆದುಕೊಂಡಂತೆ ಅಲ್ಲವೇ…….. ಸೌಜನ್ಯ ದತ್ತರಾಜRead More
ಮಕ್ಕಳಿಗೊಂದು ನೀತಿ ಕಥೆ… ಹಿಂದೆ ಕಾಶಿಯಲ್ಲಿ ಒಬ್ಬ ರಾಜ ಇದ್ದನಂತೆ, ಅವನಿಗೆ ಅನಾರೋಗ್ಯ ಬಂದು ಇದ್ದಕ್ಕಿದ್ದಂತೆ ಒಂದು ದಿನ ಅಕಾಲ ಮರಣಕ್ಕಿಡಾದ, ಅವನಿಗೆ ಮಕ್ಕಳಿರಲಿಲ್ಲ. ಹಿಂದೆಲ್ಲಾ ರಾಜ್ಯವಾಳುವ ರಾಜ ಹೀಗೆ ಅಕಾಲ ಮರಣಕ್ಕಿಡಾದರೆ ಮಂತ್ರಿಗಳು ಆನೆಯ ಸೊಂಡಿಲಲ್ಲಿ ಒಂದು ಹಾರ ಕೊಡುತ್ತಿದ್ದರು. ಆದು ಯಾರ ಕೊರಳಿಗೆ ಹಾರ ಹಾಕುತ್ತದೋ, ಅವನನ್ನು ಆ ರಾಜ್ಯದ ರಾಜ ಮಾಡುತ್ತಿದ್ದರು. ಆದರೆ ಮಂತ್ರಿಗಳಿಗೆ ಇದು ಯಾಕೋ ಸರಿ ಕಾಣಲಿಲ್ಲ. ಮಂತ್ರಿಗಳೆಲ್ಲ ಯೋಚನೆ ಮಾಡಿ ಒಂದು ಬೇರೆಯ ಉಪಾಯ ಮಾಡಿದರು. ಊರಿನ ಮಧ್ಯದಲ್ಲಿದ್ದ […]Read More
–೧೫– ಮೊಗದಿಶು ಸಂತರು – 1 ಕಳೆದ ವಾರ ಲೇಖನದ ಅಂತಿಮ ಪ್ಯಾರ, ಕಣ್ತಪ್ಪಿ ಎರಡು ಬಾರಿ ಅಚ್ಚಾಗಿತ್ತು. ವಾಸ್ತವವಾಗಿ ಅದೇ ಅಂತ್ಯವೂ ಆಗಿರದೆ, ಅದರ ನಂತರ ಮತ್ತೊಂದು ಪ್ಯಾರ ಸಹ ಇತ್ತು. ಅದನ್ನು ಸರಿಪಡಿಸವ ಹೊತ್ತಿಗೆ ಆಗಲೇ ತಡವಾಗಿತ್ತು. ಆದ್ದರಿಂದ ಅದರಿಂದಲೇ ಇಂದಿನ ಲೇಖನ ಆರಂಭಿಸುತ್ತೇನೆ. “ಅಣ್ಣನಿಗೂ ಏಕೋ ಸೋಮಾಲಿಯಾ ಬೇಸರವಾಗಿ, ಇಲ್ಲಿಯ ಕೆಲಸಕ್ಕೆ ತಿಲಾಂಜಲಿ ಹೇಳಿ,ಇತರೆ ದೇಶಗಳನ್ನು ಸುತ್ತಿ ನೋಡಿ, ಬೇರೆಡೆ ಕೆಲಸ ಮಾಡುವ ಖಯಾಲಿ ಆರಂಭ ಆಗಿತ್ತು. ಅದೇ ನನಗೆ, ಗಯಾನ ಭ್ರಮನಿರಸನದ […]Read More
ಕಳ್ಳಿ ಕಣ್ಣಿಗೆ ಬಿದ್ರಕಾಡ್ತಾಳೆ ಅಂತಕಣ್ಣ ಮುಚ್ಚಿದೆಕಳ್ಳಿ ಮನಸಿನಬಾಗಲ ತಳ್ಳಿಒಳಗ ಬಂದೆ ಬಿಟ್ಲು!ಬರೋದ ಬಂದ್ಲುಅಲ್ಲೇ ಝಾಂಡಾಊರೇ ಬಿಟ್ಲು!! ಎರಡು ಮೆಟ್ಟಿಲು ಅಂದು ನೀನುಎರಡು ಮೆಟ್ಟಿಲುಕೆಳಗಿಳಿಯಲಿಲ್ಲನಾನಾದರೂಎರಡು ಮೆಟ್ಟಿಲುಮೇಲೇರಲಿಲ್ಲ!ಅದ್ಯಾರೋ ಬಂದುನಿನ್ನ ಕೈಹಿಡಿದನೀನು ಕತ್ತು ನೀಡಿದೆ! ಅರ್ಥೈಸಿಕೊ ನನ್ನ ಮೌನವನ್ನೇನಿನಗೆಕಾಣಿಕೆಯಾಗಿಕಳಿಸಿದ್ದೇನೆ!ಈಗಲಾದರೂನನ್ನ ಮನದಭಾವನೆಗಳನ್ನುಅರ್ಥೈಸಿಕೊ!! ನೆನಪು ಬಾರದೆ ನಿನ್ನ ಪ್ರೀತಿಗೆಕರಗಿ ನೀರಾದೆಆದರೇನು ಮಾಡಲಿಅರ್ಥ ಮಾಡಿಕೊಳ್ಳುವಷ್ಟರಲ್ಲಿನೀ ದೂರಾದೆ!ಅರ್ಥವಾಗಲೇ ಇಲ್ಲನಿನ್ನ ಇರಾದೆನಿನಗೆ ನನ್ನನೆನಪು ಬಾರದೆ!! ಡಾII ಪರಮೇಶ್ವರಪ್ಪ ಕುದರಿRead More
ಪ್ರತ್ಯಗಾತ್ಮ ಚಿಂತನ `ನನ್ನ ಕೋಳಿಯ ಕೂಗು ಕೇಳಿಯೇ ಬೆಳಗಬಹುದುನನ್ನೊಲೆಯ ಬೆಂಕಿಯಿಂ ಊರವರ ಊಟನನ್ನಿಂದಲೇ ಎಲ್ಲ’ ಎಂಬ ಮುದುಕಿಯ ಹಾಗೆಇನ್ನು ನಾವಿರಬೇಕೆ ?- || ಪ್ರತ್ಯಗಾತ್ಮ || ಬತ್ತಲೆಯ ರಾಜ್ಯದಲಿ ಬಟ್ಟಿ ಉಡುವವ ಹುಚ್ಚ,ಬತ್ತಲಿರುವನೆ ಹುಚ್ಚ, ಉಟ್ಟವರ ನಡುವೆಮೊತ್ತವಾವುದು ಹೆಚ್ಚೊ ಅದು ಹುಚ್ಚುತನವಲ್ಲಮೊತ್ತಕ್ಕೆ ಕಿಮ್ಮತ್ತು- || ಪ್ರತ್ಯಗಾತ್ಮ || ನೆರೆಯೂರಿನಲಿ ಮದುವೆ ಎಂದು ಬೀಗವ ಜಡಿದುಹರುಷದಲಿ ಮನೆ ಬಿಟ್ಟು ಪಯಣಿಸಿದರೆಲ್ಲಇರುಳು ಕಳ್ಳನು ಬಂದು ಎಲ್ಲವನು ಕದ್ದೊಯ್ದ,ಅರಿಸಿನದ ಕೂಳ ಫಲ! – || ಪ್ರತ್ಯಗಾತ್ಮ || ಸ್ವಾತಿ ಮಳೆ ಹನಿ […]Read More