ಕನ್ನಡಕದ ಹುಡುಗಿ

ಕನ್ನಡಕದ ಹುಡುಗಿ ಪೇಟೆಬೀದಿಯಲ್ಲಿಗೋಟಿ ಅಂಗಡಿಯ ತಿರುವಿನಲಿಸೂರ್ಯ ಇಳಿಯೋ ವೇಳೇಲಿದಿನವೂ ಪ್ರತಿದಿನವೂಒಬ್ಬಾಕಿ ವೈಯ್ಯಾರದಿ ನಡೆದಾಡ್ತಿದ್ಲುಕನಸಿನಲ್ಲಿ ಬಂದು ಕಾಡೋನನ್ನವಳಂಗೆ ಕಾಣ್ತಿದ್ಲು ತುಂಬು ಕೂದಲ ಮೋಟು ಜಡೆಗಳುಕೈಯ ತುಂಬೆಲ್ಲಾ ಹಸಿರು ಬಳೆಗಳುಗಲ್ ಎಂದು ಗುಯ್ ಗುಡುವ ಕಾಲ್ಗೆಜ್ಜೆಗಳುಇವುಗಳ ಸದ್ಧನ್ನು ಅಡಗಿಸುವಂತೆಅದೊಂದು ಕನ್ನಡಕ ಆಗಾಗ ಅಡ್ಡಿಯಾಗುತ್ತಿತ್ತು ಕನ್ನಡಕವಿಲ್ಲದಿದ್ದರೆಅವಳೊಂದು ಮುಗ್ಧ ಬೆಕ್ಕಿನ ಮರಿಮುಖವೇ ಸಣ್ಣದಾಗಿ ಕಾಣುತ್ತದೆಕಣ್ಣುಗಳನ್ನು ತಿಂದುಕೊಂಡ ಗುಳಿಗಳುಎಲ್ಲಾ ಬೋಳು ಬೋಳುನನಗೂ ಕನ್ನಡಕ ಬೇಕೆನಿಸಿತು ಅಯ್ಯೋ.. ಡೆಡ್ಲಿ ಕಾಂಬಿನೇಶನ್ಮಾಸ್ಕಿನ ಜೊತೆ ಕನ್ನಡಕಒಮ್ಮೊಮ್ಮೆಹಿಮಾಲಯದಂತೆ ಫಾಗ್ ಕಟ್ಟುತ್ತದೆಇನ್ನೊಮ್ಮೆಮೂಗಿನ ಮೇಲೆ ಅಚ್ಚೆ ಬೀಳುತ್ತದೆ ಕನ್ನಡಕವಿಲ್ಲದಿದ್ದರೆಅವಳ ಸಾಲಿನಲ್ಲಿ ನಾನೂ ಒಂದು […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 10

ಕೊರೋನ ಕಣ್ಣು ಕೆಮ್ಮುವವರಸೀನುವವರಬಳಿ ನಿಲ್ಲಬೇಡ ಗೆಳತಿನಡುವೆ ಅಂತರವಿರಲಿ!ಹುಷಾರಾಗಿರುಕೊರೋನ ಕಣ್ಣು ನಿನ್ನಮೇಲೆ ಬೀಳದಿರಲಿ!! ಅಂದು – ಇಂದು ಅಂದುಕೊರೋನ ಭಯ ಇರಲಿಲ್ಲಸ್ವಚ್ಛಂದವಾಗಿ ಓಡಾಡತಿದ್ವಿಕೈ ಕುಲುಕತಿದ್ವಿ! ಇಂದುಕೊರೋನ ಭಯ ಇದೆಮನೇಲಿ ಲಾಕ್ ಆಗಿದೀವಿಕೈ ಕುಲುಕಲ್ಲಕೈ ಮುಗಿತಿದ್ದೀವಿ!! ಕಾಲನ ಕೈಗೆ ಕೊರೋನವಂಚನೆಯಿಂದಬೀಸಿದೆ ಜಾಲಮನೆಯೊಳಗಿದ್ದರೆ ಮಾತ್ರಉಳಿಗಾಲ!ಹೊಂಚುಹಾಕಿ ಕಾಯುತಿದ್ದಾನೆಕ್ರೂರ ಕಾಲ!! ಖಾಲಿಯಾಗಿದೆ ನಿನ್ನ ಜೊತೆದೂರ ಬಹುದೂರಪಯಣಿಸುವಾಸೆ!ಏಕೋನೀರವ ದಾರಿಯಂತೆಹೃದಯ ಖಾಲಿ ಖಾಲಿಯಾಗಿದೆಮನಸ್ಸು ಪೂರ್ತಿಕೊರೋನ ಭಯವೇ ತುಂಬಿದೆ!! ಡಾII ಪರಮೇಶ್ವರಪ್ಪ ಕುದರಿRead More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 23

ಪರಮಾತ್ಮ ಸೃಷ್ಟಿಯೊಳು ಹಿರಿದು ಮಾನವ ಜನ್ಮನರನಾಗಿ ಜನಿಸಿದವ ಗುರುವಾಗಬಹುದುಗುರುವೇನು? ಅಮರತ್ವ ಪದವಿಗೇರಲು ಬಹುದುನರನು ಅಮರರ ಅಂಶ- || ಪ್ರತ್ಯಗಾತ್ಮ || ಸರಿತಪ್ಪುಗಳ ಅರಿವು ನರನಿಗಷ್ಟೇ ಉಂಟುಪರರ ದುಃಖವನರಿವ ಅನುಕಂಪೆಯುಂಟುನೆರೆ ಹೊರೆಯ ಜನರೊಡನೆ ಸಹಕಾರವಿಲ್ಲುಂಟುಬದಲಾವಣೆ ಕುರಿ ಕೋಳಿಗೇನುಂಟು- || ಪ್ರತ್ಯಗಾತ್ಮ || ಮಗಮಗಿಪ ಮಲ್ಲಿಗೆಯ ಬಚ್ಚಿಟ್ಟರೇನಂತೆಸೊಗಸಾದ ಪರಿಮಳವ ಸುತ್ತ ಸೂಸುವುದುಸುಗುಣಶಾಲಿಯು ನಾಡ ಮೂಲೆಯೊಳಗಿರಲೇನು?ಜಗದ ಮನ್ನಣೆ ಪಡೆವ- || ಪ್ರತ್ಯಗಾತ್ಮ || ‘ತಿಳಿ’ ನೀನು ಈ ಜಗದ ಎಲ್ಲ ವಿದ್ಯೆಗಳನ್ನು‘ಕಳೆ’ ನೀನು ಅದರೊಳಗೆ ತ್ಯಾಜ್ಯವೆಂಬುದನು‘ಉಳಿಸಿಕೊ’ ನಿನಗಾವುದುಚಿತವೆಂಬುದನರಿತುತಿಳಿವಳಿಕೆ ಮರ್ಮವಿದು- || ಪ್ರತ್ಯಗಾತ್ಮ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 4

ಅಶ್ವ ಚೋರ – 2 ಇತ್ತ ನೀರಡಿಕೆ ಹೋಗಲಾಡಿಸಿಕೊಂಡ ಚಿತ್ರಕ ಮೊದಲಿನಂತೆ ಕಲ್ಲಿನ ಮೇಲೆ ಬಂದು ಕುಳಿತನು. ಸುಗೋಪಾ ನೋಡಿದಳು. ಅವನು ಮಂಡಿಗಳ ಮೇಲೆ ಮೊಳಕೈಗಳನ್ನಿಟ್ಟು, ಆ ಕೈಗಳ ತುದಿಗೆ ತನ್ನ ಗಲ್ಲವನ್ನಿಟ್ಟು ಅವಳನ್ನೇ ದುರುದುರು ನೋಡುತ್ತಿದ್ದಾನೆ. ಸುಗೋಪಾಳಿಗೆ ಒಂದು ಬಗೆಯ ಅಧೀರತೆಯುಂಟಾಯಿತು. ಅವಳು ಅನೇಕ ತಿಂಗಳುಗಳಿಂದ ಇಲ್ಲಿಯೇ ಏಕಾಕಿನಿಯಾಗಿ ಇರುತ್ತಿದ್ದಳು. ಎಷ್ಟೋ ಮಂದಿ ದಾರಿ ಹೋಕರು ಬರುವರು; ಹೋಗುವರು. ಕೆಲವರು ಅವಳನ್ನು ನೋಡಿ ವಿನೋದವಾಗಿ ಮಾತನಾಡಿಸುವರು. ಅವಳೂ ಕೂಡ ಹಾಗೆಯೇ ಲಲಿತವಾಗಿ ಉತ್ತರಿಸುವಳು. ಯಾರಾದರೂ ಸ್ವಲ್ಪ […]Read More

ಸಂಜೆ ಹಾಡು – ರಾಜೇಂದ್ರ ಕಾರಂತ್

ರಾಜೇಂದ್ರ ಕಾರಂತರ ಮೊದಲ ನಾಟಕ ‘ಸಂಜೆ ಹಾಡು’ ಕನ್ನಡದ ಹಿರಿಯ ಹಾಗೂ ಸಕ್ರಿಯ ರಂಗಕರ್ಮಿ ರಾಜೇಂದ್ರ ಕಾರಂತರ ಮೊಟ್ಟ ಮೊದಲ ರಚನೆಯ ‘ಸಂಜೆ ಹಾಡು’. ‘ಚಿತ್ತಾರ’ ತಂಡದಲ್ಲಿ ಅಲ್ಲದೇ ‘ವ್ಯಾಸ್ಪ್’ ತಂಡದವರು ಈ ನಾಟಕವನ್ನು ಪ್ರದರ್ಶಿಸಿದ್ದಾರೆ. ಇಲ್ಲಿಯವರೆಗೂ ಈ ನಾಟಕವು ಸುಮಾರು ಅರವತ್ತು ಪ್ರದರ್ಶನಗಳನ್ನು ಕಂಡಿವೆ. ಈ ನಾಟಕದಲ್ಲಿ ಕಾರಂತರು ಹಿರಿಯ ವ್ಯಕ್ತಿಯಾಗಿ ಅಭಿನಯಿಸುತ್ತಾರೆ. ಕಾರಂತರ ಸಂಭಾಷಣೆಯ ವೈಖರಿ ಹಾಗೂ ಅಮೋಘ ನಟನೆಯನ್ನು ಅವರ ನಾಟಕಗಳನ್ನು ನೋಡಿದವರಿಗಷ್ಟೇ ಅನುಭವ ಆಗಿರುತ್ತದೆ. ಈ ಕಾರಂತರ ಜತೆಗೆ ‘ಭಜರಂಗಿ’ ಚಿತ್ರದಲ್ಲಿ […]Read More

ನಗು – ಸಂಸ್ಕೃತಿ

ನಗು – ಸಂಸ್ಕೃತಿ ಹುಟ್ಟಿದಿವಿ, ಹುಟ್ಟಿದ್ದಕ್ಕೆ ಬದುಕಬೇಕುಬದುಕೋದಿಕ್ಕಾಗಿ ಚೆನ್ನಾಗಿರಬೇಕುಚೆನ್ನಾಗಿರಬೇಕು ಅಂದರೆ ನಗಬೇಕು|| ನಗು ತುಟಿಯಂಚಲ್ಲಿ ಮಾತ್ರವಲ್ಲಹೃದಯದ ತುಂಬಾ ಹರಡಬೇಕುನೆಮ್ಮದಿ ನಗುವಿನ ಕೈ ಹಿಡಿಯಬೇಕು|| ಇದ್ದುದರಲ್ಲಿ ಇನ್ನೊಬ್ಬರಿಗೆ ಇಡುವಷ್ಟಾದರೂಹೃದಯ ಸಕಲ ಸಂಪನ್ನವಾಗಬೇಕುಸಹೃದಯತೆ ಸಂಸ್ಕೃತಿಯಾಗಬೇಕು|| ‘ನಾನು’ ಎಂಬುದ ಮರೆತು ನಾವಾಗಬೇಕುಸಕಲರೊಳಗೊಂದಾಗಿ ಸರ್ವಸ್ವವೂ ಶಿವನಾಗಬೇಕುಲಯದೊಳೊಂದಾಗಿ ಭವಪಾಶದಿಂ ಮುಕ್ತರಾಗಬೇಕು|| ಸೌಜನ್ಯ ದತ್ತರಾಜRead More

ಸೌರವ್ಯೂಹ – 8 ಶನಿ ಗ್ರಹ

ಶನಿ ಗ್ರಹ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ IIಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ || ಸೌರವ್ಯೂಹದ ಆರನೇ ಗ್ರಹ ಶನಿ. ಅನಿಲ ರೂಪಿಯಾದ ಶನಿಯು ಗುರು ಗ್ರಹದ ನಂತರ ಸೌರಮಂಡಲದಲ್ಲಿ 2 ನೇ ಅತಿ ದೊಡ್ಡ ಗ್ರಹ. ಶನಿಯು ಎದ್ದು ಕಾಣುವಂತಹ ಉಂಗುರ ವ್ಯವಸ್ಥೆಯನ್ನು ಹೊಂದಿದೆ. ಶನಿಯು 83 ಉಪಗ್ರಹಗಳನ್ನು ಹೊಂದಿದ್ದು ಟೈಟಾನ್ ಇದರ ಮುಖ್ಯ ಹಾಗು ದೊಡ್ಡ ಉಪಗ್ರಹ. ಟೈಟಾನ್ ‘ಬುಧ’ ಗ್ರಹಕ್ಕಿಂತ ದೊಡ್ಡದಾಗಿದೆ. ಗುಣಲಕ್ಷಣಗಳು ಶನಿಯು ಭೂಮಿಯಂತೆಯೇ ಧ್ರುವಗಳಲ್ಲಿ ಸ್ವಲ್ಪ […]Read More

ಮೈಕ್ರೋ ಗ್ರೀನ್ಸ್

ಮೈಕ್ರೋ ಗ್ರೀನ್ಸ್ ನಮ್ಮೆಲರಿಗೂ ಶಾಲೆಯ ನೆನಪುಗಳು ಮನದಂಗಳದಲ್ಲಿ ಬೇರೂರಿ ಆಗಾಗ ಅದನ್ನು ನೆನೆದು ಖುಷಿ ಪಡುವುದುಂಟು. ಇಂತಹ ಶಾಲಾ ಬಾಲ್ಯವನ್ನು ನೆನೆಯುತಿದ್ದಾಗ ನೆನಪಾದ ಒಂದು ಸನ್ನಿವೇಶ ಎಂದರೆ, ಸಸ್ಯಗಳ ಬಗ್ಗೆ ಕಲಿಯುವಾಗ ಶಿಕ್ಷಕರು ಕೊಟ್ಟ ಒಂದು ನಿಯೋಜನೆ. ಪುಟ್ಟ ಸಸ್ಯಗಳನ್ನು ಐಸ್ ಕ್ರೀಮ್ ಕಪ್ ಗಳಲ್ಲಿ ಬೆಳೆಸಿ ತೆಗೆದುಕೊಂಡು ಹೋಗಬೇಕಾದದ್ದು. ಗೋದಿ, ರಾಗಿ, ಮೆಂತ್ಯೆ, ಸಾಸಿವೆಯ ಎಳೆ ಸಸ್ಯಗಳನ್ನು ಜೋಪಾನವಾಗಿ ಬೆಳೆಸಿ ಅದನ್ನು ಶಿಕ್ಷಕರಿಗೆ ತೋರಿಸಲು ಹೋಗುತಿದ್ದೆವು. ನೀವೂ ಮಾಡಿರಬಹುದು ಅಲ್ಲವೇ. ಅಂದು ನಾವು ನಿಯೋಜನೆಗೆಂದು ಬೆಳೆದ […]Read More

ಚಾಕೋಲೇಟ್ ರಾಜಧಾನಿ ವಜ್ರಭೂಮಿ – ಬೆಲ್ಜಿಯಂ

ಬೆಲ್ಜಿಯಂ ಯುರೋಪಿನಲ್ಲಿರುವ ಸಣ್ಣ ದೇಶ. ಕೇವಲ ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶ ಕೇವಲ 20520 ಚದರ ಕಿಮೀ ಇದೆ. ಬಲಿಷ್ಟ ಯುರೋಪಿನ ರಾಷ್ಟ್ರಗಳ ದಾಳಿಗೆ ಆಗಾಗ ತುತ್ತಾಗುತ್ತಲೇ ಸ್ವತಂತ್ರ್ಯವಾದ ಈ ದೇಶದಲ್ಲಿ ಈಗಲೂ ರಾಜನೇ ಸಾರ್ವಭೌಮ. ಕೃಷಿ ಮತ್ತು ವಾಣಿಜ್ಯೋದ್ಯಮ ಎರಡರಲ್ಲೂ ಅಪಾರ ಬೆಳವಣಿಗೆ ಸಾಧಿಸಿರುವ ದೇಶ ಬೆಲ್ಜಿಯಂ . ‘ಬ್ರಸೆಲ್ಸ’ ಇದರ ರಾಜಧಾನಿಯಾಗಿದ್ದು ವಜ್ರದ ಅತಿದೊಡ್ಡ ವ್ಯಾಪರ ಕೇಂದ್ರವಾಗಿದೆ. ಯುರೋಪಿನ ಚಿಕ್ಕ ರಾಷ್ಟ್ರವಾಗಿರುವ ಬೆಲ್ಜಿಯಂನಲ್ಲಿ ಸಹ ಅನೇಕ ಪ್ರೇಕ್ಷಣೀಯ ಸ್ಥಳಗಳು ಹಾಗೂ ಅನೇಕ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-೧೬

ಮೊಗದಿಶು ಸಂತರು – 2 ಕಳೆದ ಸಂಚಿಕೆಯಲ್ಲಿ… “ಮೊಗದಿಶುವಿನಲ್ಲಿ ಹಾಗು ಹರ್ಗೀಸದಲ್ಲಿ ಆರಂಭದಿಂದ ನನ್ನ ಕಿವಿಗೆ ಆಗಾಗ ತಟ್ಟುತ್ತಿದ್ದ ಒಂದು ಹೆಸರೆಂದರೆ ‘ಶೇಕ್ ಅಬ್ಬಾ’! ಅಂತಹ ಮನುಷ್ಯನನ್ನು ನೋಡಲು ಕೊತುಹಲವಿದ್ದ ನನಗೆ ನಮ್ಮ ಮನೆಯ ಒಂದು ಭಾಗದಲ್ಲೇ ನೆಡೆದ ಮದುವೆಯೊಂದರಲ್ಲಿ ಜನರ ಗುಂಪಿನ ಗಲಾಟೆಯಿಂದ ನೋಡುವ ಅವಕಾಶ ತಪ್ಪಿಹೋಗಿತ್ತು“. ಆ ಒಂದು ದಿನ, ತಿಮಹ ಹಾದ್ದೆ (ನಾನೆಂದೂ ಮಹಮ್ಮದನನ್ನು ಹಾಗೆ ಕರೆವ ಹಕ್ಕು ಚಲಾಯಿಸಿಲ್ಲ) ಮನೆಗೆ ಬಂದು ರೋಗಿಯೊಬ್ಬರನ್ನು ನೋಡಲು ಕರೆದ. ಬಹಳ ಮುಖ್ಯ ವ್ಯಕ್ತಿ ಎಂದ. […]Read More