ಹಿಂದಿನ ಸಂಚಿಕೆಯಿಂದ…. ಮರುದಿನ ಬೆಳಗ್ಗೆ ಸಚಿವ ಚತುರಾನನ ಭಟ್ಟನು ರಾಜಭವನದಲ್ಲಿ ಚಿತ್ರಕನನ್ನು ಭೇಟಿ ಮಾಡಲು ಬಂದನು. ಸ್ವಸ್ತಿ ವಾಚನದ ನಂತರ ಅವನು ‘ನಿನ್ನೆ ರಾತ್ರಿ ಅರಮನೆಯ ಪ್ರಾಕಾರದಲ್ಲಿಯೇ ತಮ್ಮ ಮೇಲೆ ಹಲ್ಲೆ ನಡೆಯಿತೆಂದುಕೇಳಿ ತುಂಬ ವಿಷಾದವಾಯಿತು. ತಮಗೆ ಮೇಲಿಂದ ಮೇಲೆ ತೊಂದರೆಗಳು ಉಂಟಾಗುತ್ತಿವೆ. ಇದರಿಂದ ತಮಗೆ ಬಹಳ ನೋವಾಗಿರಬಹುದು. ಸರಿರಾತ್ರಿಯಲ್ಲಿ ರಕ್ಷಣೆಯಿಲ್ಲದೆ ಹೊರಗೆ ಹೋದರೆ ಅಪಾಯ ತಪ್ಪಿದ್ದಲ್ಲ ಅರಮನೆಯಲ್ಲಿಯೂ ವಿಪತ್ತುಗಳು ಘಟಿಸುತ್ತಲೇ ಇರುತ್ತವೆ’ ಎಂದನು. ಕಂಚುಕಿಯೂ ಅಲ್ಲೇ ಇದ್ದನು. ಅವನು ‘ಇದೇ ವಿಷಯವನ್ನು ನಾನೂ ಕೂಡ ಹೇಳಿದೆ. […]Read More
ಹಿಂದಿನ ಸಂಚಿಕೆಯಿಂದ… ನಡುರಾತ್ರಿಯ ನಂತರ ಅರಮನೆಯ ದೀಪಗಳು ಆರಿಹೋಗಿದ್ದವು. ಶುಕ್ಲ ಚತುರ್ದಶಿಯ ಚಂದ್ರನು ಪಶ್ಚಿಮ ದಿಕ್ಕಿನ ಕಡೆಗೆ ಸಾಗುತ್ತಿದ್ದನು. ನಡುನಡುವೆ ಸಣ್ಣ ಪುಟ್ಟ ಮೋಡಗಳು ಚಂದ್ರನನ್ನು ಮರೆ ಮಾಡುತ್ತಿದ್ದವು. ರಾಜಭವನ ಸುಪ್ತಾವಸ್ಥೆಯಲ್ಲಿತ್ತು. ಎಲ್ಲೆಲ್ಲೂ ನೀರವತೆ. ತನ್ನ ಶಯನಕಕ್ಷೆಯಲ್ಲಿ ಕಾಲುಚಾಚಿ ಮಲಗಿದ್ದ ಚಿತ್ರಕನು ನಿಧಾನವಾಗಿ ಎದ್ದು ಕುಳಿತನು. ಅವನು ನಿದ್ರಿಸಿರಲಿಲ್ಲ. ಕಣ್ಣುಮುಚ್ಚಿಕೊಂಡು ಸುಮ್ಮನೆ ಮಲಗಿದ್ದನು. ಮನೆಯ ಒಂದು ಮೂಲೆಯಲ್ಲಿ ಇಟ್ಟಿದ್ದ ಬತ್ತಿಯ ದೀಪವು ಅಸ್ಪಷ್ಟವಾದ ಬೆಳಕು ಚೆಲ್ಲುತ್ತಿತ್ತು. ತೆರೆದ ವಾತಾಯನದ ಮೂಲಕ ತಂಗಾಳಿಯ ಜೊತೆಗೆ ಬೆಳುದಿಂಗಳ ಬೆಳಕು ಕೊಠಡಿಯ […]Read More
ಹಿಂದಿನ ಸಂಚಿಕೆಯಿಂದ… ಅತ್ತ ಚಿತ್ರಕ ಬಹಳ ಹೊತ್ತು ಹಗಲು ನಿದ್ದೆ ಮಾಡಿ ಎಚ್ಚರಗೊಂಡನು. ಶರೀರದಲ್ಲಿ ಲವಲವಿಕೆ ಕಾಣುತ್ತಿತ್ತು. ಹಿಂದಿನ ಅನೇಕ ದಿನಗಳ ನಾನಾ ಕ್ಲೇಶಗಳಿಂದುಟಾದ ಗ್ಲಾನಿ ಇನ್ನಿಲ್ಲವಾಗಿತ್ತು. ಅವನ ಮನಸ್ಸೂ ಕೂಡ ಶರೀರದಂತೆ ಪ್ರಫುಲ್ಲವಾಗಬೇಕಾಗಿತ್ತು. ಆದರೆ ಅವನ ಮನಸ್ಸು ಪ್ರಫುಲ್ಲವಾಗುವುದಕ್ಕೆ ಬದಲಾಗಿ ಉದ್ವಿಗ್ನವಾಗುತ್ತಿರುವಂತೆ ಅವನಿಗೆ ಭಾಸವಾಯಿತು. ಅರಮನೆಯ ಗೌರವಾದರಗಳಿಗೆ, ರಾಜೋಪಚಾರಗಳಿಗೆ ಅವನು ಅಭ್ಯಸ್ಥನಾಗಿರಲಿಲ್ಲ. ಆದರೂ ಕಂಚುಕಿ ಲಕ್ಷ್ಮಣನು ಸ್ವಲ್ಪ ಹೆಚ್ಚಾಗಿಯೇ ಅವನನ್ನು ಉಪಚರಿಸುತ್ತಿದ್ದನು. ಅವನು ಪ್ರತಿ ಗಳಿಗೆಗೊಮ್ಮೆಯಾದರೂ ಬಂದು ಅವನ ಯೋಗ ಕ್ಷೇಮದ ಬಗ್ಗೆ ತಿಳಿದುಕೊಳ್ಳುತ್ತಿದ್ದನು. ಇದರ […]Read More
ಪರಿಚ್ಚೇದ – 8–ಅರಮನೆಯಲ್ಲಿ– ಅರಮನೆಯ ಪ್ರಾಕಾರದ ನಡುವೆ ಅನೇಕ ಪ್ರಾಸಾದಗಳಿವೆ. ಅವುಗಳಲ್ಲಿ ಸಭಾ ಗೃಹ, ಕೋಶಾಗಾರ, ಮಂತ್ರಣಾಭವನ ಮುಖ್ಯವಾದವುಗಳು. ರಾಜಕುಮಾರಿ ವಾಸವಾಗಿರುವ ಭವನವೇ ಅಂತಃಪುರ. ಅದರ ಪಕ್ಕದಲ್ಲಿಯೇ ರಾಜರಿಗಾಗಿರವ ಬೇರೊಂದು ಭವನ. ಈ ಎರಡೂ ಪ್ರಾಸಾದಗಳ ನಡುವೆ ವಿಶಾಲವಾದ ಅಂಗಳ. ಈ ಎರಡೂ ಪ್ರಾಸಾದಗಳು ಮೂರು ಅಂತಸ್ತುಗಳ ಕಟ್ಟಡಗಳು. ರಾಜ ಪ್ರಾಸಾದದ ಕೆಳಗಿನ ಅಂತಸ್ತಿನಲ್ಲಿ ಅನೇಕ ಕೊಠಡಿಗಳಿರುವ ಕಟ್ಟಡದಲ್ಲಿ ಆಪ್ತ ಸಚಿವ ಹರ್ಷನು ವಾಸವಾಗಿದ್ದನು. ರಾಜವೈಭವಕ್ಕೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆ ದರ್ಜೆಯದಾಗಿದ್ದರೂ ಸಾಧಾರಣ ಮನುಷ್ಯರ ದೃಷ್ಟಿಯಲ್ಲಿ […]Read More
ಹಿಂದಿನ ಸಂಚಿಕೆಯಿಂದ…. ರಟ್ಟಾ ಏನನ್ನಾದರೂ ಹೇಳುವುದಕ್ಕೆ ಮೊದಲೆ ಮಂತ್ರಿಯು ‘ಆದರೆ ಈಗಲೇ ತಮ್ಮ ದೌತ್ಯ ಮುಗಿದಿಲ್ಲ. ಹೀಗಿರುವಾಗ ತಾವು ಹೇಗೆ ಹೋಗುತ್ತೀರಿ? ಪತ್ರದ ಉತ್ತರ- ಎಂದು ಚಿತ್ರಕನಿಗೆ ಹೇಳಿದನು. ಚಿತ್ರಕನು ದೃಢವಾದ ಧ್ವನಿಯಲ್ಲಿ ‘ತಮ್ಮ ಉತ್ತರದ ಬಗೆಗೆ ನನಗೆ ರಾಜರಿಂದ ಯಾವ ಅಪ್ಪಣೆಯೂ ಆಗಿಲ್ಲ. ನಾನು ಶ್ರೀಮನ್ ಮಹಾರಾಜರ ಪತ್ರವನ್ನು ತಮಗೆ ಒಪ್ಪಿಸಿದ್ದೇನೆ. ಅಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು’ ಎಂದು ಹೇಳಿ ಅನುಮತಿಗಾಗಿ ಮತ್ತೆ ರಟ್ಟಾಳ ಕಡೆ ನೋಡಿದನು. ಈಗ ರಟ್ಟಾ ಮಾತನಾಡಿದಳು. ಆಕೆ ಸಮಾಧಾನಕರವಾದ ದನಿಯಲ್ಲಿ‘ದೂತ […]Read More
ಹಿಂದಿನ ಸಂಚಿಕೆಯಿಂದ… ಚತುರಾನನ- ‘ಸರಿ. ಅದಾದ ಮೇಲೆ ಹಿಂದಿನ ದಿನ ರಾತ್ರಿ ತಾವು ತಮ್ಮ ಪರಿಚಯ ಹೇಳಿಕೊಂಡಿದ್ದಿದ್ದರೆ!… ಚಿತ್ರಕ- ಯಾರ ಮುಂದೆ ಪರಿಚಯ ಹೇಳಿಕೊಳ್ಳಬೇಕಾಗಿತ್ತು? ರಾತಿ ವೇಳೆ ಊರೊಳಗೆ ಗಸ್ತು ತಿರುಗುವ ಭಟರ ಮುಂದೆ? ತೋರಣದ್ವಾರದ ಕಾವಲುಗಾರರ ಮುಂದೆ?’ ಚತುರಾನನು ಚಿತ್ರಕನನ್ನು ಒಂದು ಬಾರಿ ನೋಡಿ ನಿಟ್ಟುಸಿರು ಬಿಟ್ಟನು. ‘ಹೋಗಲಿ ಬಿಡಿ. ಏನೇನು ಆಗಬೇಕಾಗಿತ್ತೊ ಎಲ್ಲವೂ ಆಗಿ ಹೋಯಿತು- ನಿರ್ವಾಣ ದೀಪೇ ಕಿಮು ತೈಲದಾನಮ್? (ಆರಿ ಹೋಗಿರುವ ದೀಪಕ್ಕೆ ಎಣ್ಣೆ ಹಾಕಿದರೆ ಪ್ರಯೋಜನವೇನು?) ಈಗ ನಿಮ್ಮ ವಿಶ್ರಾಂತಿಯ […]Read More
ಹಿಂದಿನ ಸಂಚಿಕೆಯಿಂದ…. ಚಿತ್ರದ ಬೊಂಬೆಗಳ ಹಾಗೆ ಇನ್ನೂ ಎಷ್ಟು ಹೊತ್ತು ಇರುತ್ತಿದ್ದರೋ ಏನೋ, ಆದರೆ ಅಷ್ಟರಲ್ಲಿ ದೈವಯೋಗದಿಂದ ರಾಜ್ಯದ ಪ್ರಧಾನಮಂತ್ರಿ ಚತುರಾನನ ಭಟ್ಟ ಕಾಣಿಸಿಕೊಂಡನು. ಚತುರಾನನ ವರ್ಣಾಶ್ರಮದಲ್ಲಿ ಬ್ರಾಹ್ಮಣ. ಚತುರ; ಸ್ಥಿರಬುದ್ಧಿಯ ವ್ಯಕ್ತಿ. ಆ ಕಾಲದಲ್ಲಿ ಭಾರತಭೂಮಿಯಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳಲ್ಲಿ ಬಹುಜಾತೀಯ ಹಾಗೂ ಬಹುಧರ್ಮೀಯ ರಾಜರುಗಳು ರಾಜ್ಯವಾಳುತ್ತಿದ್ದರು. ಉತ್ತರದಲ್ಲಿ ಶಕರೂ ಹೂಣರೂ ಇದ್ದರು. ದಕ್ಷಿಣದಲ್ಲಿ ದ್ರಾವಿಡರೂ ಗುರ್ಜರರೂ ಇದ್ದರು. ಮಂತ್ರಿಯ ಕಾರ್ಯನಿರ್ವಹಿಸುತ್ತಿದ್ದವರು ಮಾತ್ರ ಬಡಕಲು ಶರೀರದ, ಯಜ್ಞೋಪವೀತಧಾರಿಗಳಾದ ಬ್ರಾಹ್ಮಣರೇ ಆಗಿದ್ದರೆಂಬುದು ಒಂದು ಆಶ್ಚರ್ಯದ ಸಂಗತಿ. ಪ್ರಧಾನಿ […]Read More
ಪರಿಚ್ಛೇದ – 7–ಬಿಡುಗಡೆ– ಕಳ್ಳನನ್ನು ಹಿಡಿದ ಉತ್ಸಾಹದಿಂದ ಸುಗೋಪಾಳಿಗೆ ರಾತ್ರಿ ನಿದ್ದೆ ಹತ್ತಲಿಲ್ಲ ಬೆಳಗಾದುದೇ ತಡ ಅವಳು ಅರಮನೆಗೆ ಬಂದಳು. ರಾಜಕುಮಾರಿ ರಟ್ಟಾ ಇನ್ನೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಮಲಗುವ ಕೋಣೆಯ ಬಾಗಿಲಲ್ಲಿ ಯವನ ಸ್ತ್ರೀಯರ ಪಹರೆ. ಸುಗೋಪಾ ಆ ಪಹರೆಯವರ ನಿಷೇಧವನ್ನು ಉಪೇಕ್ಷಿಸಿ, ರಾಜಕುಮಾರಿಯ ಶಯನಗೃಹದೊಳಕ್ಕೆ ಪ್ರವೇಶಿಸಿ ‘ಸಖಿ! ಏಳು, ಏಳು. ಕುದುರೆಯ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಎಂದು ಒಂದೇ ಸಮನೆ ಕೂಗಿ ಅವಳನ್ನು ಎಬ್ಬಿಸಿದಳು. ರಾಜಕುಮಾರಿಯ ಕಣ್ಣುಗಳು ತೆರೆದವು. ಅವಳು ನಿದ್ದೆಗಣ್ಣಿನಲ್ಲಿ ‘ಏ ದೆವ್ವ […]Read More
ಹಿಂದಿನ ಸಂಚಿಕೆಯಿಂದ…. ಬಹಳ ಹೊತ್ತಿನವರೆಗೂ ಯಾವ ಶಬ್ದವೂ ಇಲ್ಲ. ‘ಬರಿ ಕಾಲ್ಪನಿಕ ಶಬ್ದಕಿವಿಗೆ ಬಿತ್ತು. ಇದು ಕತ್ತಲು ಮಾಡಿದ ಯಕ್ಷಣಿ; ಮೋಸ ಎಂದು ಮನಸ್ಸಿನಲ್ಲಿ ಗುಣಾಕಾರ ಹಾಕುತ್ತಿದ್ದನು. ಅವನ ಸ್ನಾಯುಗಳಿಗೆ ಮತ್ತೆ ಶಕ್ತಿ ಬಂದಿತ್ತು.‘ಇದು ಎಂಥ ಮಾಯೆ! ಅಲೌಕಿಕ ಮಾಯೆ!’‘ನಾನು ಬಂದಿನೀ… ಸೆರೆಯಾಳು…’ಇಲ್ಲ, ಮನುಷ್ಯರ ಕಂಠಧ್ವನಿ- ಮೋಸವಿಲ್ಲ. ಮಾತುಗಳು ಸಂದೇಹಾಸ್ಪದವಾಗಿದ್ದರೂ ಸ್ಪಷ್ಟವಾಗಿವೆ. ಮಾತಾಡಿದ ವ್ಯಕ್ತಿ ಇನ್ನೂ ಹತ್ತಿರ ಬಂದಿರುವ ಹಾಗಿತ್ತು. ಚಿತ್ರಕನು ‘ಬಂದಿನೀ?… ನೀನು ಹೆಂಗಸೇ?’ ಎಂದು ಕೇಳಿದನು.‘ಹೌದು.’ ‘ಈಗ ಸಮಾಧಾನವಾಯಿತು. ನಿನ್ನನ್ನು ಪ್ರೇತವೆಂದು ಭಾವಿಸಿದ್ದೆ’.‘ನೀನು ಯಾರು?’‘ನಾನೂ […]Read More
ಹಿಂದಿನ ಸಂಚಿಕೆಯಿಂದ…. ಯೌವನದ ಆರಂಭದಲ್ಲಿ ಅವನು ಊರಿಂದೂರಿಗೆ ಸಂಚಾರ ಮಾಡುತ್ತ ವ್ಯಾಪಾರ ಮಾಡುವ ಒಬ್ಬ ವ್ಯಾಪಾರಿಯ ಜೊತೆ ಸೇರಿಕೊಂಡು ಊರೂರು ಅಲೆಯುತ್ತಿದ್ದನು. ಅವನ ಸಂಪರ್ಕದಿಂದ ಅಲ್ಪ ಸ್ವಲ್ಪ ಓದು- ಬರೆಹವನ್ನು ಕಲಿತನು. ಸಾರ್ಥವಾಹ ವಣಿಕರು ಒಂಟೆಯ ಬೆನ್ನು ಮೇಲೆ ಸರಕನ್ನು ಹೇರಿಕೊಂಡು ದೇಶ ದೇಶಾಂತರಗಳಲ್ಲಿ ಸಂಚರಿಸಿ ವ್ಯಾಪಾರ ಮಾಡುತ್ತಿದ್ದರು. ಚಿತ್ರಕನು ಅವರ ಜೊತೆ ಇದ್ದುಕೊಂಡು ಅನೇಕ ಸಮೃದ್ಧ ನಗರಗಳನ್ನು ನೋಡಿದ್ದನು. ಪುರುಷಪುರ, ಮಥುರಾ, ವಾರಾಣಸಿ, ಪಾಟಲಿಪುತ್ರ, ತಾಮ್ರ ಲಿಪ್ತಿ, ಉಜ್ಜಯಿನಿ, ಕಾಂಚಿ- ಉತ್ತರಾಪಥ ಹಾಗೂ ದಕ್ಷಿಣಾ ಪಥದ […]Read More