ಬಣ್ಣವನ್ನು ಬದಲಾಯಿಸುವ ಈ ಗೋಸುಂಬೆ ಕೆಲವೊಂದು ವ್ಯಕ್ತಿಗಳ ಎದುರುಗಡೆ ಮತ್ತು ಹಿಂದುಗಡೆಯಿಂದ ಒಂದೊಂದು ರೀತಿಯಿಂದ ಮಾತನಾಡುವವರನ್ನು, ಮಾತು ಬದಲಾಯಿಸುವವರನ್ನು ಗೋಸುಂಬೆಗಳು ಎಂದು ಸಾಮಾನ್ಯವಾಗಿ ಕರೆಯುವುದು ವಾಡಿಕೆ. ಇದರ ಅರ್ಥ ತಮಗೆ ಅಗತ್ಯವಿರುವ ರೀತಿ ತಮ್ಮ ಮನಸ್ಸನ್ನು ಬದಲಾಯಿಸುವವರು ಎಂದು ಅರ್ಥ. ಅದೇ ರೀತಿ ಇಲ್ಲೊಂದು ಹಲ್ಲಿಯ ಜಾತಿಯ ಪ್ರಾಣಿಯೊಂದಿದ್ದು, ಅದು ತಾನು ಇರುವ ವಾತಾವರಣಕ್ಕೆ ಅನುಗುಣವಾಗಿ ತನ್ನ ಮೈಯ ಬಣ್ಣವನ್ನು ಬದಲಾಯಿಸುತ್ತದೆ. ಅದರ ಹೆಸರು ‘ಗೋಸುಂಬೆ’ ಎಂದು. ಗೋಸುಂಬೆಗಳು ಹಲ್ಲಿಯ ಜಾತಿಗೆ ಸೇರಿದವುಗಳಾಗಿದ್ದು ವಿಶಿಷ್ಟ ಹಾಗೂ ಹೆಚ್ಚು […]
Feature post
ಸುಂದರ ಸೂರಕ್ಕಿಗಳು ನಗರ ಪ್ರದೇಶದ ಮನೆಗಳಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಕೇಳುವುದು ನಮ್ಮ ಹಾಗು ಅಕ್ಕ ಪಕ್ಕದ ಮನೆಗಳಲ್ಲಿನ ಕರ್ಕಶವಾದ ನೀರೆತ್ತುವ ಮೋಟಾರ್ ಶಬ್ದಗಳೇ, ಹಳ್ಳಿಗಳಲ್ಲಿನ ಮುಂಜಾವಿನ ಸೊಗಡೇ ಬೇರೆ. ಹಾಲು ತರುವ ನೆಪದಲ್ಲಿ ಬೆಳಿಗ್ಗೆ ಮನೆಯಿಂದ ಹೊರಡುವ ನನಗೆ ಚಿಲಿಪಿಲಿ, ಟ್ವೀಟ್ ಟ್ವೀಟ್ ಶಬ್ದ ಕೇಳಿಸಿಕೊಳ್ಳಲು ಸ್ವಲ್ಪ ದೂರ ನೆಡೆಯಬೇಕು. ನಮ್ಮ ರಸ್ತೆ ತಿರುವಿನ ಮನೆಯ ಕಾಂಪೌಂಡ್ ನಲ್ಲಿ ದಾಸವಳ ಹಾಗು ಗಣಗಳೆ ಗಿಡಗಳನ್ನು ಹಾಕಿಕೊಂಡಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ನಿಂತು ತಲೆ ಎತ್ತಿ ದಿಟ್ಟಿಸಿದರೆ […]Read More
ಗಿಡುಗ ಬಂತು ಗಿಡುಗ ಬಿರು ಬೇಸಿಗೆಯ ಒಂದು ದಿನ, ಆಗಷ್ಟೇ ಮಧ್ಯಾನದ ಊಟ ಮುಗಿಸಿ ಆಫೀಸಿನ ಕೆಲಸ ಶುರುಮಾಡಿಕೊಂಡಿದ್ದೆವು, ನಮ್ಮ ಆಫೀಸಿನ ಆವರಣದಲ್ಲಿ ಒಂದು ದೊಡ್ಡ ಮಾವಿನ ಮರವು ಬೃಹದ್ದಾಕಾರದಲ್ಲಿ ಬೆಳೆದು ನಿಂತು ಅದರ ರೆಂಬೆ ಕೊಂಬೆಗಳು ನಾವು ಕೆಲಸ ಮಾಡುವ ಮೊದಲನೇ ಮಹಡಿಯ ಕಿಟಕಿಯ ಸಮೀಪದಲ್ಲೇ ಹಾದು ಗಾಳಿಗೆ ಮರವು ಆಫೀಸಿನ ಏರ್ ಕಡೀಷನರ್ ಕೂಡ ನಾಚುವಷ್ಟು ತಂಗಾಳಿ ಸೂಸುತಿತ್ತು. ಇದ್ದಕಿದ್ದ ಹಾಗೆ ದಪ್ ಎಂದು ಏನೋ ಬಿದ್ದ ಸದ್ದು, ಕಿಟಕಿಯ ಮೂಲಕ ನೋಡಲು ಪ್ರಯತ್ನ […]Read More
ಜಲ ಚತುರೆ ಈ ಗುಳುಮುಳಕ ಶಾಲೆಯ ಬೇಸಿಗೆ ರಜೆ ಬಂತೆಂದರೆ ಸಾಕು ನಾನು ನನ್ನ ತಂಗಿ ನಮ್ಮ ತಾಯಿಯೊಡನೆ ನಮ್ಮ ಅಜ್ಜಿಯ ಊರಿಗೆ ಹೊರಟು ಬಿಡುತ್ತಿದ್ದೆವು. ಮಂಡ್ಯದ ಬಸ್ ನಿಲ್ದಾಣದಲ್ಲಿ ಆ ಬಿರು ಬೇಸಿಗೆಯಲ್ಲಿ ಕೆಂಪು ಬಸ್ಸನ್ನು ಕಾಯುತ್ತಾ ಬಸ್ಸು ಬಂದೊಡನೆ ಸೀಟಿಗಾಗಿ ಖರ್ಚಿಫು, ಬ್ಯಾಗು ಇನ್ನಿತರ ವಸ್ತುಗಳನ್ನು ಕಿಟಕಿಯ ಮೂಲಕ ಹಾಕುವ ಜನರ ನಡುವೆ ನಾನು ಕಿಟಕಿಯಿಂದಲೇ ತೂರಿ ಒಳಗೆ ನುಗ್ಗಿ ಅದೇಗೋ ಮೂರು ಸೀಟಿನ ಜಾಗವನ್ನು ಆಕ್ರಮಿಸಿಬಿಡುತ್ತಿದ್ದೆ. ನಮ್ಮ ತಾಯಿ ಕೊನೆಯ ಸೀಟಿನಲ್ಲಿ ನನ್ನ […]Read More
ಮೊಸಳೆಯ ವಿರಾಮ ಮೊಸಳೆಗಳು ಆಗಾಗ ನದಿಗಳ ತೀರದಲ್ಲಿ ನಿಶ್ಚಲವಾಗಿ ಹೆಬ್ಬಂಡೆಯಂತೆ ಬಾಯ್ತೆರೆದು ಬಿಸಿಲಿಗೆ ಮೈಯೊಡ್ಡಿ ಸೋಮಾರಿಗಳ ತರ ಬಿದ್ದಿರುವುದನ್ನ ನೋಡುತ್ತಿರುತ್ತೇವೆ. ಇವು ಈ ರೀತಿ ಕಿಂಚಿತ್ತು ಚಲನವಿಲ್ಲದೇ ಸೂರ್ಯನ ಬಿಸಿಲಿನಲ್ಲಿ ಬಾಯ್ತೆರೆದು ಬಿದ್ದುಕೊಳ್ಳಲು ಪ್ರಮುಖವಾಗಿ ಎರಡು ಕಾರಣಗಳಿವೆ. 1) ನದಿ ತೀರದ ಮರಳಿನಲ್ಲಿ ತನ್ನ ಹಿಂಗಾಲಿನಿಂದ ಗುಂಡಿ ತೋಡಿ ಮೊಟ್ಟೆ ಇಡುವ ಉಭಯವಾಸಿ ಮೊಸಳೆಗಳು ಎಕ್ಟೋಥರ್ಮಿಕ್ ಪ್ರಾಣಿಗಳು (Ectothermic).ಇವುಗಳ ದೇಹದ ಉಷ್ಣತೆ ಪರಿಸರಕ್ಕನುಸಾರವಾಗಿ ತನ್ನಷ್ಟಕ್ಕೆ ತಾನೇ ಸ್ವಯಂ ಬದಲಾಯಿಸಿಕೊಳ್ಳುವುದಿಲ್ಲ. ಅಂದರೇ ದೇಹದ ಉಷ್ಣತೆ ತನ್ನಷ್ಟಕ್ಕೆ ತಾನೇ ನಿಯಂತ್ರಿತವಾಗುವುದಿಲ್ಲ. […]Read More
ನಾರ್ವಲ್ ಎಂಬ ಸಮುದ್ರ ಸುಂದರಿ ಕೆನಡಾ, ಗ್ರೀನ್ಲ್ಯಾಂಡ್, ನಾರ್ವೆ ಮತ್ತು ರಶಿಯಾದ ಆರ್ಕಟಿಕ್ ಸಮುದ್ರದಲ್ಲಿ ಕಂಡುಬರುವ “ನಾರ್ವಲ್ ತಿಮಿಂಗಿಲುಗಳು” ತಿಮಿಂಗಿಲ ಪ್ರಭೇದಗಳಲ್ಲಿಯೇ ಅತ್ಯಂತ ವಿಶಿಷ್ಟ, ವಿಶೇಷ ಪ್ರಭೇದದ ತಿಮಿಂಗಿಲ ಎಂದು ಪರಿಗಣಿಸಲಾಗಿದೆ. ಇವುಗಳ ತಲೆಯಿಂದ ಬೆತ್ತದ ಬೊಂಬಿನಂತೆ ಉದ್ದನೆಯ ಸುರುಳಿಯಾಕಾರದ ದಂತ ಹೊರಹೊಮ್ಮಿರುತ್ತದೆ. ಉದ್ದವಾಗಿ ಈಟಿಯ ರೀತಿಯಲ್ಲಿ ಸುಮಾರು ಹತ್ತು ಪೀಟ್ ವರೆಗೂ ಬೆಳೆಯವ ಇವುಗಳ ದಂತಗಳು 10 ಮಿಲಿಯನ್ ಸೂಕ್ಷ್ಮಸಂವೇದಿ ನರಗಳನ್ನ ಹೊಂದಿರುತ್ತವೆ. ಅತ್ಯಂತ ಸೂಕ್ಷ್ಮ ಹಾಗೂ ಸಂವೇಧನಾಶೀಲಯುಕ್ತ ನರಗಳಿಂದ ಕೂಡಿದ ಈ ಉದ್ದನೆಯ ದಂತಗಳನ್ನ […]Read More
ನಂದನವನದ ಪಕ್ಷಿಗಳು – Birds of Paradise ಪಕ್ಷಿಗಳಿಗೆ ಗರಿಗಳು ಮುಖ್ಯವಾಗಿ ಮೂರು ಉದ್ದೇಶಗಳಿಗೋಸ್ಕರ ಇರುತ್ತವೆ. ಹಾರಾಟ, ರಕ್ಷಣೆ ಮತ್ತು ಆಕರ್ಷಣೆ. ಪಕ್ಷಿ ಲೋಕದಲ್ಲಿ ಸ್ವರ್ಗಲೋಕದ ಹಕ್ಕಿಗಳು ಅಥವಾ ನಂದನವನದ ಹಕ್ಕಿಗಳೆಂದೇ ಸುಪ್ರಸಿದ್ದವಾಗಿರುವ ಪಪುವಾ ನ್ಯುಗಿನಿಯಾದ “ಪ್ಯಾರಾಡೈಸೀಈಡೇ” ಕುಟುಂಬಕ್ಕೆ ಸೇರಿದ ಈ ಪಕ್ಷಿಗಳು ಪಕ್ಷಿ ಜಗತ್ತಿನಲ್ಲಿಯೇ ಅತ್ಯಂತ ಆಕರ್ಷಣೀಯ ರೆಕ್ಕೆ ಗರಿಗಳನ್ನ ಹೊಂದಿವೆ. ಈ ಪಕ್ಷಿಗಳು ವಿಶೇಷವಾಗಿ ಇಂಡೋನೇಷ್ಯಾ , ಆಸ್ಟ್ರೇಲಿಯಾ ಮತ್ತು ಪಪುವಾ ನ್ಯುಗಿನಿಯಾ ದೇಶಗಳ ಅರಣ್ಯಪ್ರದೇಶಗಳಲ್ಲಿ ಕಂಡುಬರುತ್ತವೆ. 4.7 ರಿಂದ 39 ಇಂಚುಗಳವರೆಗೆ ಗಾತ್ರದಲ್ಲಿರುವ […]Read More
ಕಳ್ಳ ಖದೀಮ ಕಡಲ ಹಕ್ಕಿ – ಫ್ರಿಗೇಟ್ ಅಟ್ಲಾಂಟಿಕ್ ಮಹಾಸಾಗರ ಹಾಗು ಪೆಸಿಫಿಕ್ ಸಾಗರದ ತೀರದಲ್ಲಿ ಪೆಂಗ್ವಿನ್ ತರಹದ ಬೂಬಿ ಎಂಬ ಸಣ್ಣ ಗಾತ್ರದ ಹಕ್ಕಿಗಳು ಕಾಣಸಿಗುತ್ತವೆ, ಈ ಆಕರ್ಷಕ ಹಕ್ಕಿಗಳ ಮುಖ್ಯ ಆಹಾರ ಸಾಗರದ ಮೀನುಗಳು. ಬೂಬಿ ಹಕ್ಕಿಗಳು ದಿನದಲ್ಲಿ ಸಾಕಷ್ಟು ಮೀನು ಹಿಡಿಯುತ್ತವಾದರೂ ಅವುಗಳ ಹೊಟ್ಟೆಗೆ ಸೇರುವುದು ಅದರಲ್ಲಿನ ಶೇಕಡ 40 ರಷ್ಟು ಮಾತ್ರ. ಮೀನನ್ನು ಹಿಡಿದ ಖುಷಿಯಲ್ಲಿ ಬೂಬಿ ಹಕ್ಕಿಗಳು ತನ್ನ ಸಂಗಾತಿಯತ್ತ ತಿರುಗುವಷ್ಟರಲ್ಲಿ ಅದೆಲ್ಲಿರುತ್ತದೋ ಕಳ್ಳ ಖದೀಮ ಫ್ರಿಗೇಟ್ ಹಕ್ಕಿ ಯುದ್ಧ […]Read More
ನವಿಲೇನೋ ಕುಣಿಬೇಕು ‘ಮುಗಿಲನು ಮುದ್ದಿಡೆ ನೆಲದ ಬೆಳೆಚಿಗಿವುದು, ಜಿಗಿವುದು ನೆಗೆವುದಿಳೆ;ಚಿಕ್ಕೆ ಇರುಳು ಕುಣಿದಂತೆ ಕುಣೀಕುಣಿ ಕುಣಿ ನವಿಲೇ ಕುಣೀ ಕುಣೀ’– ಡಾ|| ದ ರಾ ಬೇಂದ್ರೆ ಹಿರಿಯ ಕವಿ ಡಾ|| ದ ರಾ ಬೇಂದ್ರೆಯವರು ಹೇಳಿದಂತೆ ಮಳೆಗೆ ಇಳೆ, ಇಳೆಯಿಂದ ಹೊರಬಂದ ಬೆಳೆ ಅಷ್ಟೇ ಅಲ್ಲದೆ ತನ್ನ ಸುಂದರವಾದ ಗರಿ ಬಿಚ್ಚಿ ನಮ್ಮ ರಾಷ್ಟ್ರ ಪಕ್ಷಿ ನವಿಲು ಸಹ ಕುಣಿಯುತ್ತದೆ. ಗಂಡು ನವಿಲು ತನ್ನ ಆಕರ್ಷಕ ರೆಕ್ಕೆಯ ಗರಿಗಳನ್ನು ತೆರೆದು ಕುಣಿಯುವುದು ಮುಖ್ಯವಾಗಿ ತನ್ನ ಸಂಗಾತಿಯನ್ನು ಆಕರ್ಷಿಸಿ […]Read More
ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ‘ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ಈ ಭೂಮಿಯ ಭೂಷಣಗಳು ಎಂದೇ ವ್ಯಾಖ್ಯಾನಿಸಬಹುದು. ‘ಅಂಟಾರ್ಟಿಕಾ’ ಭೂಮಿಯ ದಕ್ಷಿಣ ದೃವದ ಸುತ್ತ ಹೆಪ್ಪುಗಟ್ಟಿದ ಸಮುದ್ರದಿಂದ ಸುತ್ತುವರೆದ ಒಂದು ಭೂಖಂಡ (Around South Pole). ಆದರೇ ಆರ್ಕ್ಟಿಕ್ ಭೂಮಿಯ ಉತ್ತರ ದೃವದಲ್ಲಿನ ಹೆಪ್ಪುಗಟ್ಟಿದ ಸಮುದ್ರ. ಅದು ಭೂಖಂಡ ಅಲ್ಲ (Around North Pole Arctic Ocean). ಈ ಎರಡೂ ಪ್ರದೇಶಗಳಿಗೆ ಸೂರ್ಯನ ಕಿರಣಗಳು ಓರೆಯಾಗಿ ತಲುಪುವುದರಿಂದ ತೀರಾ ಕಡಿಮೆ ಉಷ್ಣಾಂಶದಿಂದಾಗಿ ಇಲ್ಲಿನ ಪ್ರದೇಶಗಳು ಹೆಪ್ಪುಗಟ್ಟಿದ ಹಿಮದಿಂದ […]Read More