ಕಾಣೆಯಾದಿರೆಲ್ಲಿ?

ಕಾಣೆಯಾದಿರೆಲ್ಲಿ? ಮಗುವಿನಂದದಿ ಬಂದುಚಂದದಲಿ ಹೆಗಲೇರಿ,ತೋಳಲ್ಲಿ ನಾ ಬಳಸುವಾಮುನ್ನವೇ ಹೀಗೇಕೆನೀವು ಕಾಣೆಯಾಗುವಿರಿ? ಕೈಗೆ ಸಿಕ್ಕಿಯೇ ಬಿಟ್ಟಿತೆಂದುಕಾಣುವ ನೀರಗುಳ್ಳೆಯಂತೆ,ಒಮ್ಮೆ ಕಣ್ಮುಂದೆ ಬಂದುಮತ್ತೊಂದು ಕ್ಷಣದಲೇಕೆಮಾಯವಾಗುತ್ತಿರುವಿರಿ ? ಹಳೆಯ ಹೆಂಚಿನ ಮನೆಯಸಂದಿಯಿಂದ ಇಣುಕುವಬಿಸಿಲು ಕೋಲಿನಂತೆ,ಸಿಕ್ಕಿಯೂ ಸಿಗದಂತೆನ್ನಹೀಗೇಕೆ ಸತಾಯಿಸುತ್ತಿರುವಿರಿ? ಮಳೆಹನಿಯುದುರಲು,ಆಗಸದಂಚಿನಲಿ ಬಣ್ಣಬಣ್ಣದಿ ಮೂಡಿ, ಮನದಲಾಸೆತೋರಿ ಮೋಸಗೊಳಿಸುವಕಾಮನಬಿಲ್ಲಿನಂತೇಕಾದಿರಿ ? ಹೇಳಿಬಿಡಿ ಒಮ್ಮೆ ನೀವೆಂದುಬರುವಿರೆನ್ನೆಡೆಗೆ, ಚಂದದಕವಿತೆ ನೀವಾಗಲು ನನ್ನಸುಂದರ ಕನಸಿನ ಅಂದದಪದಗಳೆ !! ಶ್ರೀವಲ್ಲಿ ಮಂಜುನಾಥRead More

ಶತ್ರುವಾದ ಸೌಂದರ್ಯ

ಶತ್ರುವಾದ ಸೌಂದರ್ಯ ಸುಂದರವಾದ ಮನೆ ಕಟ್ಟಿದರೆ ಸಾಲದು; ಆ ಸುಂದರವಾದ ಮನೆಯಲ್ಲಿ ಸುಖವಾಗಿ ಬದುಕುವುದನ್ನು ಕಲಿಯಬೇಕುಎಲ್ಲರಿಗೂ ತಮ್ಮ ಮದುವೆಯೆಂದರೆ ಒಂದೊಂದು ರೀತಿಯ ಕನಸುಗಳಿರುವುದು ಸಹಜ. ಅದೇ ರೀತಿ ಜಾಗೂರು ಎಂಬ ಊರಿನಲ್ಲಿ ತೇಜಸ್ ಎಂಬ ಯುವಕನು ತನ್ನ ಮದುವೆಯ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದು, ಪಕ್ಕದ ಹಳ್ಳಿಯ ಸೌಂದರ್ಯವತಿಯಾದ ರೀತಾ ಎಂಬ ಯುವತಿಯನ್ನು ಮನಮೆಚ್ಚಿ ಮದುವೆಯಾದ. ಸೌಂದರ್ಯದ ಆರಾಧಕನಾದ ತೇಜಸ್ ರೀತಾಳನ್ನು ಬಹಳ ಇಷ್ಟಪಡುತ್ತಿದ್ದ. ಆಕೆಗೆ ಯಾವುದರಲ್ಲೂ ಕೊರತೆಯಾಗದಂತೆ ಹೂವಿನಂತೆ ಜತನದಿಂದ ನೋಡಿಕೊಳ್ಳುತಿದ್ದ. ವರ್ಷಗಳು ಉರುಳುತ್ತಿದ್ದಂತೆ […]Read More

ಗುಡ್ಡೆಟ್ಟು ಗಣಪತಿ ಕ್ಷೇತ್ರ

ಗುಡ್ಡೆಟ್ಟು ಗಣಪತಿ ಕ್ಷೇತ್ರ ಕುಂದಾಪುರ ತಾಲೂಕಿನ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಗುಡ್ಡೆಟ್ಟು ಗಣಪತಿ ಕ್ಷೇತ್ರವು ಒಂದು. ಬ್ರಹ್ಮಾವರ, ಬಾರಕೂರು, ಸಾಯಬ್ರ ಕಟ್ಟೆ, ಮೆಕ್ಕೆಕಟ್ಟು ದಾಟಿ ಹಾಲಾಡಿ ಕಡೆಗೆ ಸಾಗುವಾಗ ಗುಡ್ಡೆಟ್ಟು ಕ್ಷೇತ್ರ ಇದೆ. ಇಲ್ಲಿ ಗಣಪತಿಯು ಸ್ವಯಂಭುವಾಗಿದ್ದು ಸದಾ ನೀರಿನೊಳಗೆ ಇರುತ್ತಾನೆ. ನೀರಿನ ಮೂಲಕವೇ ಆತನ ದರ್ಶನ ಮಾಡಬೇಕು. ದಿನಕ್ಕೆರಡು ಬಾರಿ ಸಂಪೂರ್ಣ ನೀರನ್ನು ಹೊರತೆಗೆದು ಸ್ವಾಮಿಗೆ ಅಲಂಕಾರ ಮತ್ತು ಮಂಗಳಾರತಿ ಮಾಡುತ್ತಾರೆ. ಬಹಳ ಹಿಂದೆ ತ್ರಿಪುರಾಸುರನೆಂಬ ರಾಕ್ಷಸ ಜನರಿಗೆ ಹಿಂಸೆ ಮಾಡುತ್ತಿದ್ದನಂತೆ.. ಅದು ಪರಮೇಶ್ವರನಿಗೆ ತಿಳಿದು, […]Read More

ಪಾಂಚಾಲಿ

ಪಾಂಚಾಲಿ ಪಾಂಚಾಲಿ ಪಾಂಚಾಲಿ ಎಂದುಪಂಚಭೂತಗಳಿಗೆ ಪರಿಚಯಿಸಿದಿರಿನನ್ನನ್ನು, ಯಾರಿಗೆ ಬೇಕುಈ ಪಾಂಚಾಲಿಯ ಪಟ್ಟ ಸಂತಾನದ ಬೀಜ ಬಿತ್ತುವಅವಸರದಲಿ, ಬಯಕೆಗಳಿಗೆಬೆಂಕಿ ಇಟ್ಟು, ಕಾಮದ ಕಾವಿನಲ್ಲಿಬೆಚ್ಚಗೆ ಬದುಕಿದವರೈವರು ಒಬ್ಬೊಬ್ಬನಿಗೂ ಹಲವು ರಾತ್ರಿಗಳ ಹಸಿವುಗಂಡರೆಂಬ ಗಂಡುತನದ ಹಠದಲ್ಲಿಮಿಂಡರಂತೆ ಉಂಡುಂಡು ಹೋಗುವಾಗಈ ಹೆಣ್ಣುತನಕ್ಕೆ ಹೇಸುತಿದೆ ಮನವು ಹೆಣ್ಣೆಂಬುದರಿಯದೆ ಹಣ್ಣಿನಂತೆಹಂಚಿಕೊಂಡು ಹೀರಿದವರು ನೀವುಮೋಜಿಗಾಗಿ ಜೂಜಾಡಿ, ನನ್ನ ಜನ್ಮವನುಜಾಲಾಡಿ ಜಾರಿಕೊಂಡವರು ನೀವು ಬಂಧಿಸಿದ ಬೇಡಿಯೊಳಗೆ ಬೆಂದವಳು ನಾನುವಿವಸ್ತ್ರಗೊಳಿಸಿದರು ಶಸ್ತ್ರವನ್ನೆತ್ತದೆಷಂಡರಾಗಿ ತಲೆತಗ್ಗಿಸಿ ಕುಳಿತನಿರಾಯುಧ ನಿರ‍್ವೀರ‍್ಯರು ನೀವು ಅಂದು ಶೈಯ್ಯಾಗ್ರಹದಲ್ಲಿ ಸೂಳೆಯಾಗಿಜೀವ ಸವಿಸಿದವಳು ನಾನುಇಂದು ಸಾಹಿತ್ಯಕ್ಕೆ ಮಾತ್ರಸೀಮಿತವಾಗಿ ಉಳಿದವಳು ನಾನು […]Read More

ಅವಕಾಶಗಳ ಆಯ್ಕೆ

ಅವಕಾಶಗಳ ಆಯ್ಕೆ ಒಂದು ದಟ್ಟವಾದ ಕಾಡಿನಲ್ಲಿ ಸಿಂಹಗಳ ಸುಂದರವಾದ ಕುಟುಂಬವೊಂದು ವಾಸಿಸುತ್ತಿತ್ತು. ಪ್ರತೀ ದಿನವೂ ತನ್ನ ಕುಟುಂಬದ ಸದಸ್ಯರಿಗೆ ಅಗತ್ಯವಿರುವ ಆಹಾರವನ್ನು ಗಂಡು ಸಿಂಹವೇ ಬೇಟೆಯಾಡಿ ತಂದು ಎಲ್ಲಾ ಸದಸ್ಯರಿಗೂ ನೀಡುತ್ತಿತ್ತು. ಗಂಡು ಸಿಂಹವು ಪ್ರತೀ ದಿನ ಬೇಟೆಯಾಡಿ ಮಾಂಸವನ್ನು ತಂದರೆ ಹೆಣ್ಣು ಸಿಂಹವು ಬೇಟೆಯನ್ನು ಹಂಚಿ ಎಲ್ಲಾ ಸದಸ್ಯರಿಗೂ ನೀಡುತ್ತಿತ್ತು. ಒಂದು ದಿನ ಸುಂದರವಾದ ಸಂಸಾರದಲ್ಲಿ ಅಪಸ್ವರ ಎದುರಾಯಿತು. ಗಂಡು ಸಿಂಹ ಮತ್ತು ಹೆಣ್ಣು ಸಿಂಹ ಇಬ್ಬರ ನಡುವೆ ಯಾರು ಮೇಲು ಎಂಬ ಚರ್ಚೆಯು ಪ್ರಾರಂಭವಾಯಿತು. […]Read More

ತಂದೆ

ತಂದೆ ಅಪ್ಪಾ ನೀನೇ ಆಗಿದ್ದೆ,ನಮಗೆಲ್ಲರಿಗೂ ಪ್ರೀತಿಯ ತಂದೆ.ಅದೆಷ್ಟೋ, ಮರೆಯಲಾರದ,ಪ್ರೀತಿ,ಹರುಷ ಸಂತಸವ, ನಮ್ಮ ಬಾಳಿನ ತುಂಬಾ,ನೀ ನಮಗೆ ತಂದೆ. ಅದೇನೇನು, ಕೇಳಿದರೂ,ನಾವು ಕೇಳಿದ್ದೆಲ್ಲ ನೀ ನಮಗೆ ತಂದೆ ಕೊಡುವೆನೆಂದೆ.ಆದರೂ, ನೀ ಮಾತ್ರ ಹರಿದ ಬಟ್ಟೆಯನ್ನೇ ತೊಟ್ಟೆ.ಅದೇಕೋ ನಿನ್ನಲೆಂದೂ, ನಾವು ಕಂಡೇ ಇಲ್ಲಹೊಸ ಉಡುಪಿನ ಬಟ್ಟೆ. ನಮ್ಮ ಮುಖದಲಿ ಸದಾ ನೀ ನಗುವ ತರಿಸಿದೆ.ನೀ ಮಾತ್ರ ಯಾರೂ ಕಾಣದಂತೆನಿನ್ನ ಕಷ್ಟದ, ಕಣ್ಣೀರ ಹರಿಸಿದೆ.ನಿನ್ನ ಆಲಿಂಗನದ ತೋಳಲಿ,ನಾ ಮಗುವಾಗಿ ಮಲಗಿದೆ. ನೀ ಮಾತ್ರ ದುಡಿದು, ಬೆವತುದಣಿವಿನಿಂದ ತಲೆ ದಿಂಬಿಲ್ಲದೆ ಮಲಗಿದೆ.ನಾವು ನಿನ್ನ […]Read More

ಸಮುದ್ರದೊಳಗಿನ ಅಧ್ಬುತ ಮತ್ಸ್ಯಲೋಕ

ಸಮುದ್ರದೊಳಗಿನ ಅಧ್ಬುತ ಮತ್ಸ್ಯಲೋಕ ಪ್ರವಾಸ ಹೋದಾಗ ಒಬ್ಬೊಬ್ಬರಿಗೆ ಒಂದೊಂದು ವಿಷಯದ ಮೇಲೆ ಆಸಕ್ತಿ ಇರುತ್ತದೆ, ಕೆಲವರು ಐತಿಹಾಸಿಕ ಸ್ಥಳಗಳನ್ನು ನೋಡಲು ಇಷ್ಟಪಟ್ಟರೆ, ಕೆಲವರು ಮ್ಯೂಸಿಯಂ, ಹೂತೋಟ, ಸಮುದ್ರ ತೀರ, ಅಡ್ವೆಂಚರಸ್ ಹೀಗೆ ಒಬ್ಬಬ್ಬೊರು ತಮಗೆ ಇಷ್ತವಾದುದ್ದನ್ನು ಪ್ರವಾಸದಲ್ಲಿ ಹುಡುಕಿಕೊಂಡು ಹೋಗುತ್ತಾರೆ. ಆದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರೆಗೂ ಎಲ್ಲರೂ ಇಷ್ಟಪಡುವ ಒಂದು ವಸ್ತುವೆಂದರೆ ಮೀನು. ಸಮುದ್ರದ ಒಳಹೊಕ್ಕು ದೊಡ್ಡ ಮೀನುಗಳೂ ಸಮುದ್ರ ಜಲಚರಗಳನ್ನು ನೋಡುವುದು ಅವುಗಳನ್ನು ಮುಟ್ಟುವುದು ಯಾರಿಗೆ ತಾನೆ ಇಷ್ಟವಾಗುವುದಿಲ್ಲ. ಈ ರೀತಿಯ ಅನೇಕ ಓಷನೇರಿಯಂಗಳು […]Read More

ಮರಕುಟಿಕ – Woodpecker

ಮರಕುಟಿಕ – Woodpecker ಮರಕುಟಿಕಗಳಲ್ಲಿ ಸುಮಾರು 200 ಪ್ರಭೇದಗಳಿದ್ದು ಉಷ್ಣವಲಯದ ಕಾಡುಗಳಿಂದ ಹಿಡಿದು ಸಮಶೀತೋಷ್ಣ ವಲಯದ ಕಾಡುಗಳ ಸಮೇತ ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಕಂಡುಬರುತ್ತವೆ. ಆಸ್ಟ್ರೇಲಿಯಾ, ನ್ಯೂಗಿನಿಯಾ, ನ್ಯೂಜಿಲ್ಯಾಂಡ್, ಮಡಗಾಸ್ಕರ್, ಮತ್ತು ತೀವ್ರ ಧ್ರುವ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ಮರಗಳ ಕಾಂಡ, ರೆಂಬೆಗಳನ್ನು ಕುಟ್ಟಿ ತೊಗಟೆಗಳ ಒಳಗಿರುವ ಕ್ರಿಮಿಕೀಟಗಳನ್ನು ಭಕ್ಷಿಸಲು ಇವುಗಳ ಅಂಗರಚನೆಯೂ ಇದಕ್ಕೆ ಅನುಗುಣವಾಗಿದೆ. ಉದ್ದನೆಯ ಗಟ್ಟಿಮುಟ್ಟಾದ ಕೊಕ್ಕು, ಹರಿತವಾದ ಉಗುರುಗಳುಳ್ಳ ಕಾಲುಗಳು, ಮರವನ್ನ ನಿಮಿಷಕ್ಕೆ 120 ಬಾರಿಗಿಂತಲೂ ಹೆಚ್ಚು ಬಾರಿ ಕುಟ್ಟುವಂತೆ ರಚಿತವಾದ ತಲೆಬುರುಡೆಗಳನ್ನು […]Read More

ಮನೆ ಕೆಲಸದ ಹುಡುಗಿ

ಮನೆ ಕೆಲಸದ ಹುಡುಗಿ ಮೂರಕ್ಕೆ ಮೂರು ಸೇರಿಸಿದರೆಸಾಲಿಗೆ ಸೇರುವಷ್ಟು ವಯಸ್ಸಾಗುವ ಹುಡುಗಿತರಾತುರಿಯಲ್ಲಿ ಮನೆಗೆಲಸಕ್ಕೆ ತಯಾರಾದಳು ದುಂಡು ತಲೆಯಲ್ಲಿ ದುಂಡು ಮಲ್ಲಿಗೆ ಮುಡಿದುತುರುಬು ಕಟ್ಟುವ ತಲೆಯ ಕೂದಲು ಕತ್ತರಿಸಿಎಣ್ಣೆಯ ಬರಕ್ಕೆ ಹೆದರಿತುಸು ತಲೆಯ ಬಾರ ಇಳಿಸಿಕೊಂಡಿದ್ದಳು ಕರಾರು ಒಪ್ಪಂದಕ್ಕೆಅಂದದ ಮುಖದ ನಗುವನ್ನುಒತ್ತೆ ಇಟ್ಟ ಅವ್ವನ ಹೆಬ್ಬೆಟ್ಟುಒಬ್ಬಟ್ಟು ತಿಂದದ್ದು ಅಪ್ಪನ ಪುಣ್ಯಸ್ಮರಣೆಯ ದಿನದಂದುಇಂದಿಗೂ ನೆನೆಯುತ್ತಿದ್ದಳು ಇದ್ದದ್ದೇ ಐದು ಜನಬಂದು ಬಾಂಧವರೆಲ್ಲ ಬಂದು ಹೋದರುನೊಂದ ಮನಕ್ಕೆ ಮಾತಿನ ಮುಲಾಮಲ್ಲದೆಮತ್ತೇನು ಕೊಡಲಿಲ್ಲಹಂದರ ಹಾಕಿದ್ದ ಹಸಿವಿಗೆಕೈ ಚಾಚದೆ ವಿರಾಮದ ಕನಸು ಕಟ್ಟಿದ್ದಳು ಬಿಡಿಗಾಸಿನ ಸಹಾಯವಿಲ್ಲದೆಉಡಿಯಲ್ಲಿ […]Read More

ಖಿನ್ನತೆ – Depression

ಖಿನ್ನತೆ – Depression ಖಿನ್ನತೆಯು ಒಂದು ಮಾನಸಿಕ ಆರೋಗ್ಯದ ಅಸ್ವಸ್ಥತೆಯಾಗಿದೆ.ಅದು ಮುಖ್ಯವಾಗಿ ದುಃಖ ಮತ್ತು ಸಂತೋಷದ ನಷ್ಟ ಅಥವಾ ಒಮ್ಮೆ ಆನಂದಿಸಿದ ಚಟುವಟಿಕೆಗಳಲ್ಲಿ ಆಸಕ್ತಿಯ ನಷ್ಟವನ್ನು ಉಂಟುಮಾಡುತ್ತದೆ. ಇದು ವ್ಯಕ್ತಿಯ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಬ್ಬರ ದೈನಂದಿನ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ. ಪ್ರತಿ 20 ಜನರಲ್ಲಿ ಒಬ್ಬರಿಗೆ, ಹೆಚ್ಚಾಗಿ ಮಹಿಳೆಯರಿಗೆ ಇದು ಕಾಡುವ ಸ್ಥಿತಿಯಾಗಿದೆ ಜೈವಿಕ, ಪರಿಸರ, ಮಾನಸಿಕ ಮತ್ತು ಭಾವನಾತ್ಮಕ ಅಂಶಗಳ ಸಂಯೋಜನೆಯು ಖಿನ್ನತೆಯ ಲಕ್ಷಣಗಳಿಗೆ ಕಾರಣವಾಗಬಹುದು ಖಿನ್ನತೆಯ ಕಾರಣಗಳು […]Read More