ಪ್ರತ್ಯಗಾತ್ಮ ಚಿಂತನ (ನೇನಂಶಿ) – 24

ತಲೆ ಎತ್ತಿ ‘ಮೃಗರಾಜ’ ಪದವಿ ಪಡೆಯಿತು ಸಿಂಹತಲೆಯ ತಗ್ಗಿಸಿ ಕುರಿಯು `ಕುರಿಯೆ’ ಆಗಿಹುದುತಲೆಯೆತ್ತಿ ಧೈರ್ಯದಿಂ ನುಗ್ಗಿದವನಿಗೆ ಜಯವುಚಳಿಬಿಟ್ಟು ಮುನ್ನುಗ್ಗು- || ಪ್ರತ್ಯಗಾತ್ಮ || ಕಾಲ ಮರುಭೂಮಿಯಲಿ ಹೆಜ್ಜೆ ಇಕ್ಕುತ ನಡೆಯೊಬಾಳ ಬಟ್ಟೆಯ ನಡೆದು ಬಸವಳಿದ ಪಥಿಕನಾಳೆ ಯಾವನೊ ನಿನ್ನ ಹೆಜ್ಜೆ ಗುರುತನು ಹಿಡಿದುಬಾಳ ಪಥ ಸಾಗಿಸುವ- || ಪ್ರತ್ಯಗಾತ್ಮ || ಒಂದು ಗೊತ್ತಾದ ಸರಿ ದಾರಿಯನು ಹಿಡಿದು ನಡೆಹಿಂದೆ ಹೆಜ್ಜೆಯ ಗುರುತು ಬಿಟ್ಟು ನಡೆ ಮುಂದೆಎಂದಾದರೊಂದು ದಿನ ದಾರಿ ತಪ್ಪಿದ ಜನಕೆಮುಂದೆ ನೆರವಹುದೇನೊ – || ಪ್ರತ್ಯಗಾತ್ಮ […]Read More

ಹೃದಯಗಳ ಪಿಸುಮಾತು

ಹೃದಯಗಳ ಪಿಸುಮಾತು ಉಹಿಸಿದ ನೆನಪೊಂದನು ಮನಸಲ್ಲಿ ಬಚ್ಚಿಟ್ಟುಕರೆಯುವೆನು,,,,ನೀ ಬಂದು ನೆಲೆಸಲೆಂದೆಕತ್ತಲನು ಕನಸಿಂದ ತಡೆ ಹಿಡಿದಿರುವೆನು,,,,ಬಾ ಚೆಲುವೆ ನೀ ಬಾನಿಂದ ಜಾರಿ ಬೆಳಕಾಗಿಹೂ ಕನಸ ಹೊತ್ತು ನಿಂತಿರುವೆ ನಾ ನಿನಗಾಗಿ.. ಕೇಳಿಲ್ಲಿ ಚೆಲುವ ಸಿಗುತ್ತಿಲ್ಲ ಯಾಕೋ ನಿದ್ರೆಗೆ ಸಮಯಹಗಲಿಗೂ ರಾತ್ರಿಗೂ ನಿನ್ನನೆ ಪರಿಚಯಿಸುತಿದೆ ಹೃದಯಏನೆಂದು ಹುಡುಕುವ ನನ್ನ ನೋಟದಲಿ,,ಕಳೆದೋಗುತಲೇ ಇರುವೆ ನಿನ್ನನೇ ಕಾಣುತಾ ನಾನಿಲ್ಲಿ.ಬಾ ಚೆಲುವ ಬಾನಿಂದ ಜಾರಿ ಬೆಳಕಾಗಿಹೂ ಕನಸ ಹೊತ್ತು ನಿಂತಿರುವೆ ನಾ ನಿನಗಾಗಿ.. ನೀ ಆಡುವ ಮಾತು ಕಾಣದೆ ಕೊಡುವ ಮುತ್ತುಬರಿ ಕನಸಿಗೆ ನಾ […]Read More

ಸೌರವ್ಯೂಹ – 9 – ಯುರೇನಸ್

–ಯುರೇನಸ್– ಯುರೇನಸ್ ಸೌರಮಂಡಲದ ದೂರದ ಗ್ರಹ, ಸೂರ್ಯನಿಂದ ಏಳನೆಯದು. 1781 ರಲ್ಲಿ ವಿಲಿಯಂ ಹರ್ಷಲ್ ಅದರ ಇರುವಿಕೆಯನ್ನು ಕಂಡುಹಿಡಿದದ್ದು. ಅನಿಲ ರೂಪಿಯಾದ ಯುರೇನಸ್ ಗ್ರಹವು ವ್ಯಾಸದಲ್ಲಿ ಮೂರನೇ ಅತಿ ದೊಡ್ಡ ಹಾಗು ದ್ರವ್ಯರಾಶಿಯಲ್ಲಿ 4 ನೇ ಅತಿ ದೊಡ್ಡ ಗ್ರಹವಾಗಿದೆ. ಇದಕ್ಕೆ ಆಕಾಶದ ದೇವತೆ ಹಾಗು ಇತರೆ ದೇವತೆಗಳ ಪೂರ್ವಜನಾದ ಗ್ರೀಕ್ ದೇವತೆಯ “ಯುರೇನಸ್” ಎಂಬ ಹೆಸರನ್ನು ಇಡಲಾಗಿದೆ. ಆಧುನಿಕ ಕಾಲದಲ್ಲಿ ಕಂಡುಹಿಡಿಯಲಾದ ಮೊದಲ ಗ್ರಹ ಇದು. ಈ ಗ್ರಹವನ್ನು ಔಪಚಾರಿಕವಾಗಿ ಕಂಡುಹಿಡಿದದ್ದು. ಬೇರೆ ಗ್ರಹಗಳು (ಬುಧ […]Read More

ನೇತಾಜಿಯ ಮಹಾ – ಪಯಣ (India>Russia>Germany>Japan)

ನೇತಾಜಿಯ ಮಹಾ – ಪಯಣ “ಸ್ವತಂತ್ರ ಭಾರತದ ನನ್ನ ಕನಸು ನನ್ನನ್ನು ಇಲ್ಲಿ ಕರೆತಂದಿದೆ , ಬ್ರಿಟೀಷರಿಗೆ ಪಾಠ ಕಲಿಸಲು ಜರ್ಮನಿ, ಇಟಲಿ ಮತ್ತು ಜಪಾನ್ ನಂತಹ ಸ್ನೇಹಿತ ರಾಷ್ಟ್ರಗಳ ಬೆಂಬಲ ಬೇಕು, ಸ್ವಾತಂತ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ನಾವು ಸಿದ್ಧರಿದ್ದೇವೆ” ಎಂದು ನುಡಿದದ್ದು ನಮ್ಮೆಲ್ಲರ ಪ್ರೀತಿಯ “ನೇತಾಜಿ ಸುಭಾಷ್ ಚಂದ್ರ ಬೋಸ್” ಅದೂ ಯಾರ ಕೂಡ? ಜಗತ್ತು ಕಂಡ ವಿಲಕ್ಷಣ ದಂಡನಾಯಕ, ಪರಮ ಕ್ರೂರಿಯೂ ಆದ ನಾಜಿ ನಾಯಕ “ಅಡಾಲ್ಫ್ ಹಿಟ್ಲರ್” ನೊಂದಿಗೆ. ಬ್ರಿಟೀಷರ ಕಣ್ತಪ್ಪಿಸಿ […]Read More

ಅಮರ ಸುಭಾಷ್!

ಅಮರ ಸುಭಾಷ್! ಜೈ ಹಿಂದ್’ ಎಂದಿರಿಸ್ವಾತಂತ್ರ್ಯಕ್ಕಾಗಿ ಹೋರಾಡಿದಿರಿಜೈಲುವಾಸಕ್ಕೂ ‘ಸೈ’ ಎಂದಿರಿಬ್ರಿಟಿಷಗರಿಗೆ ಸಿಂಹ ಸ್ವಪ್ನ ವಾದಿರಿ ವಿವೇಕರ ವಾಣಿಯ ಆಲಿಸಿದಿರಿಅರವಿಂದರ ಅನುಸರಿಸಿದಿರಿಬಾಪುಗೆ ‘ರಾಷ್ಟ್ರಪಿತ’ ಎಂದಿರಿ‘ನೇತಾಜಿ’ ಎಂದೆನಿಸಿದಿರಿ ಗಾಂಧೀಜಿಗೆ ಪ್ರಿಯವಾದಿರಿಬಿಸಿರಕ್ತದವರಿಗೆ ಪ್ರೇರಣೆಯಾದಿರಿ‘ರಕ್ತ ಕೊಡಿ-ಸ್ವಾತಂತ್ರ್ಯ ಕೊಡುವೆ’ ಎಂದಿರಿಸ್ವಾತಂತ್ರ್ಯಕ್ಕಾಗಿ ಮಹಾನ್ ತ್ಯಾಗಿಗಳಾದಿರಿ ಗಾಂಧೀಜಿ ಒಂದೆಡೆ ಎಂದಾದರೆಸುಭಾಷ್‍ಜಿ ಮತ್ತೊಂದೆಡೆ ಎಂದಾಯ್ತುನೀವಿಬ್ಬರು ನಾಣ್ಯದ ಮುಖಗಳಾದಿರಿಎರಡರ ಉದ್ಧೇಶವೂ ‘ಆಜಾದ್’ ಆಗಿತ್ತು! ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದಿರಿದೇಶದುದ್ದಗಲ ಓಡಾಡಿದಿರಿಬ್ರಿಟಿಷರ ವಿರುದ್ಧ ಹೋರಾಡಿದಿರಿವಿದೇಶಗಳಲ್ಲೂ ಖ್ಯಾತರಾದಿರಿ ಜೀವದ ಹಂಗಿಲ್ಲದೇ ಮುನ್ನುಗ್ಗಿದಿರಿ!ಮರಣವೆಂಬುದೇ ತಮಗಿಲ್ಲ!ಎನ್ನುತ್ತಿಹರು ಅಭಿಮಾನಿಗಳೆಲ್ಲಎಂದೆಂದಿಗೂ ತಾವು ಅಮರ! ತುಂಕೂರು ಸಂಕೇತ್ ಕಲಾಕೃತಿ ಕೃಪೆ: ರವಿ ಪೂಜಾರಿRead More

ಲಕ್ಷ್ಮಿವಿಲಾಸ ಅರಮನೆ – ಬರೋಡ

ಸೌಂದರ್ಯದ ಖನಿ ಬೆಡಗಿನ ಬರೋಡ ಲಕ್ಷ್ಮಿವಿಲಾಸ ಅರಮನೆ ಗುಜಾರಾತಿನಲ್ಲಿ ಅನೇಕ ಪ್ರೇಕ್ಷಣೀಯ ಪ್ರವಾಸಿ ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾಗಿ ತನ್ನ ಕಲಾತ್ಮಕತೆಯಿಂದ ಗಮನ ಸೆಳೆಯುವುದು ಬರೋಡ ಅಥವಾ ವಡೋದರಾ ದಲ್ಲಿರುವ ಲಕ್ಷ್ಮಿವಿಲಾಸ ಅರಮನೆ. ತನ್ನ ಅಂದ ಚೆಂದದ ಕಲಾತ್ಮಕತೆಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆಯಲ್ಲದೆ ಬರೋಡಾದ ಗಾಯಕ್ವಾಡ್ ಮನೆತನದವರು ನೆಡೆಸಿದ ಅತಿ ಭೋಗದ ವಿಲಾಸಿ ಜೀವನ ಹೇಗಿತ್ತೆಂದು ನೋಡಬೇಕೆಂದರೆ ಲಕ್ಷ್ಮೀವಿಲಾಸ್ ಅರಮನೆಯನ್ನೊಮ್ಮೆ ನೋಡಲೇಬೇಕು. ವಡೋದರ ಎಂದರೆ ಸಾಕು ಕಣ್ಮುಂದೆ ಬರುವುದು ಕಲೆ. ಈ ಊರಿನಲ್ಲಿ ಅನೇಕ ಕಲಾತ್ಮಕ ಕಟ್ಟಡಗಳು ನಿಮ್ಮ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-೧೭

—ಕಿಸ್ಮಾಯೋ ಪ್ರಯಾಣ – 1— ಡಾ. ಜಗನ್ನಾಥ ಕಿಸ್ಮಾಯೋಗೆ ಹೋಗಿ ತನ್ನ ವೃತ್ತಿ ಆರಂಭಿಸಿದ ನಂತರ, ಅತ್ತ ಕಡೆಯಿಂದ ಸುದ್ದಿಯೇ ಇರಲಿಲ್ಲ. ನನಗೂ ಸಹ ಅವನನ್ನು ಸಂಪರ್ಕಿಸಲು ಆಗಿರಲಿಲ್ಲ. ಹಾಗಾಗಿ, ಒಮ್ಮೆ ಅವನಿಗೆ ತಿಳಿಸದ ಹಾಗೆ, ನಾವೇ ಖುದ್ದಾಗಿ ಹೋಗಿ, ಆ ಇಬ್ಬರನ್ನೂ ಅಚ್ಚರಿಯ ಮಡುವಿನಲ್ಲಿ ಅನಾಮತ್ತು ಇಳಿಸಿ ನೋಡಬೇಕೆಂಬ ಚಪಲ ನನ್ನಲ್ಲಿತ್ತು. ನನ್ನ ಹೆಂಡತಿಗೂ ತನ್ನ ಹೊಸ ಗೆಳತಿಯ ಕಾಣುವ ಹಂಬಲ ಹಾಗೂ ಅವರಿರುವ ಹೂಸ ಸ್ಥಳ ನೋಡುವ ಕುತೂಹಲ ಇತ್ತು. ಹಾಗಾದರೆ ಹೋಗುವುದು ಎಂದು, […]Read More

ಕನ್ನಡಕದ ಹುಡುಗಿ

ಕನ್ನಡಕದ ಹುಡುಗಿ ಪೇಟೆಬೀದಿಯಲ್ಲಿಗೋಟಿ ಅಂಗಡಿಯ ತಿರುವಿನಲಿಸೂರ್ಯ ಇಳಿಯೋ ವೇಳೇಲಿದಿನವೂ ಪ್ರತಿದಿನವೂಒಬ್ಬಾಕಿ ವೈಯ್ಯಾರದಿ ನಡೆದಾಡ್ತಿದ್ಲುಕನಸಿನಲ್ಲಿ ಬಂದು ಕಾಡೋನನ್ನವಳಂಗೆ ಕಾಣ್ತಿದ್ಲು ತುಂಬು ಕೂದಲ ಮೋಟು ಜಡೆಗಳುಕೈಯ ತುಂಬೆಲ್ಲಾ ಹಸಿರು ಬಳೆಗಳುಗಲ್ ಎಂದು ಗುಯ್ ಗುಡುವ ಕಾಲ್ಗೆಜ್ಜೆಗಳುಇವುಗಳ ಸದ್ಧನ್ನು ಅಡಗಿಸುವಂತೆಅದೊಂದು ಕನ್ನಡಕ ಆಗಾಗ ಅಡ್ಡಿಯಾಗುತ್ತಿತ್ತು ಕನ್ನಡಕವಿಲ್ಲದಿದ್ದರೆಅವಳೊಂದು ಮುಗ್ಧ ಬೆಕ್ಕಿನ ಮರಿಮುಖವೇ ಸಣ್ಣದಾಗಿ ಕಾಣುತ್ತದೆಕಣ್ಣುಗಳನ್ನು ತಿಂದುಕೊಂಡ ಗುಳಿಗಳುಎಲ್ಲಾ ಬೋಳು ಬೋಳುನನಗೂ ಕನ್ನಡಕ ಬೇಕೆನಿಸಿತು ಅಯ್ಯೋ.. ಡೆಡ್ಲಿ ಕಾಂಬಿನೇಶನ್ಮಾಸ್ಕಿನ ಜೊತೆ ಕನ್ನಡಕಒಮ್ಮೊಮ್ಮೆಹಿಮಾಲಯದಂತೆ ಫಾಗ್ ಕಟ್ಟುತ್ತದೆಇನ್ನೊಮ್ಮೆಮೂಗಿನ ಮೇಲೆ ಅಚ್ಚೆ ಬೀಳುತ್ತದೆ ಕನ್ನಡಕವಿಲ್ಲದಿದ್ದರೆಅವಳ ಸಾಲಿನಲ್ಲಿ ನಾನೂ ಒಂದು […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 10

ಕೊರೋನ ಕಣ್ಣು ಕೆಮ್ಮುವವರಸೀನುವವರಬಳಿ ನಿಲ್ಲಬೇಡ ಗೆಳತಿನಡುವೆ ಅಂತರವಿರಲಿ!ಹುಷಾರಾಗಿರುಕೊರೋನ ಕಣ್ಣು ನಿನ್ನಮೇಲೆ ಬೀಳದಿರಲಿ!! ಅಂದು – ಇಂದು ಅಂದುಕೊರೋನ ಭಯ ಇರಲಿಲ್ಲಸ್ವಚ್ಛಂದವಾಗಿ ಓಡಾಡತಿದ್ವಿಕೈ ಕುಲುಕತಿದ್ವಿ! ಇಂದುಕೊರೋನ ಭಯ ಇದೆಮನೇಲಿ ಲಾಕ್ ಆಗಿದೀವಿಕೈ ಕುಲುಕಲ್ಲಕೈ ಮುಗಿತಿದ್ದೀವಿ!! ಕಾಲನ ಕೈಗೆ ಕೊರೋನವಂಚನೆಯಿಂದಬೀಸಿದೆ ಜಾಲಮನೆಯೊಳಗಿದ್ದರೆ ಮಾತ್ರಉಳಿಗಾಲ!ಹೊಂಚುಹಾಕಿ ಕಾಯುತಿದ್ದಾನೆಕ್ರೂರ ಕಾಲ!! ಖಾಲಿಯಾಗಿದೆ ನಿನ್ನ ಜೊತೆದೂರ ಬಹುದೂರಪಯಣಿಸುವಾಸೆ!ಏಕೋನೀರವ ದಾರಿಯಂತೆಹೃದಯ ಖಾಲಿ ಖಾಲಿಯಾಗಿದೆಮನಸ್ಸು ಪೂರ್ತಿಕೊರೋನ ಭಯವೇ ತುಂಬಿದೆ!! ಡಾII ಪರಮೇಶ್ವರಪ್ಪ ಕುದರಿRead More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 23

ಪರಮಾತ್ಮ ಸೃಷ್ಟಿಯೊಳು ಹಿರಿದು ಮಾನವ ಜನ್ಮನರನಾಗಿ ಜನಿಸಿದವ ಗುರುವಾಗಬಹುದುಗುರುವೇನು? ಅಮರತ್ವ ಪದವಿಗೇರಲು ಬಹುದುನರನು ಅಮರರ ಅಂಶ- || ಪ್ರತ್ಯಗಾತ್ಮ || ಸರಿತಪ್ಪುಗಳ ಅರಿವು ನರನಿಗಷ್ಟೇ ಉಂಟುಪರರ ದುಃಖವನರಿವ ಅನುಕಂಪೆಯುಂಟುನೆರೆ ಹೊರೆಯ ಜನರೊಡನೆ ಸಹಕಾರವಿಲ್ಲುಂಟುಬದಲಾವಣೆ ಕುರಿ ಕೋಳಿಗೇನುಂಟು- || ಪ್ರತ್ಯಗಾತ್ಮ || ಮಗಮಗಿಪ ಮಲ್ಲಿಗೆಯ ಬಚ್ಚಿಟ್ಟರೇನಂತೆಸೊಗಸಾದ ಪರಿಮಳವ ಸುತ್ತ ಸೂಸುವುದುಸುಗುಣಶಾಲಿಯು ನಾಡ ಮೂಲೆಯೊಳಗಿರಲೇನು?ಜಗದ ಮನ್ನಣೆ ಪಡೆವ- || ಪ್ರತ್ಯಗಾತ್ಮ || ‘ತಿಳಿ’ ನೀನು ಈ ಜಗದ ಎಲ್ಲ ವಿದ್ಯೆಗಳನ್ನು‘ಕಳೆ’ ನೀನು ಅದರೊಳಗೆ ತ್ಯಾಜ್ಯವೆಂಬುದನು‘ಉಳಿಸಿಕೊ’ ನಿನಗಾವುದುಚಿತವೆಂಬುದನರಿತುತಿಳಿವಳಿಕೆ ಮರ್ಮವಿದು- || ಪ್ರತ್ಯಗಾತ್ಮ […]Read More