ನೀಲಿಹೊತ್ತಿಗೆ ಜನಪದ ಚಿತ್ರಗಳು

“ಕಣಿ  ಏಳ್ತೀನಮ್ಮ ಕಣಿ” ಅಥವಾ “ಕೊಂಡಮಾಮ-ಕುರ್ರಮಾಮ” ಎಂದು ರಾಗವಾಗಿ ಭವಿಷ್ಯವನ್ನು ಹೇಳುತ್ತಾ ಊರು ಊರು ತಿರುಗುವುವರನ್ನು ನೋಡಿರುತ್ತೀರಿ. ಇವರುಗಳ ಚಟುವಟಿಕೆಗಳು  “ನೀಲಿ ಹೊತ್ತಿಗೆ“ಎಂಬ ಜನಪದ ಕಲೆಯ ಭಾಗವಾಗಿದೆ. ಇವರುಗಳು ಹೇಳುವ ಭವಿಷ್ಯ ಹಾಗು ಅವಲಂಬಿಸುವ ಚಿತ್ರಗಳ ಬಗ್ಗೆ ಒಂದು ಅವಲೋಕನ ನೀಲಿ ಹೊತ್ತಿಗೆ: ಜನನ-ಮರಣ, ಹಬ್ಬ-ಹರಿದಿನ, ಜಾತ್ರೆ-ಉತ್ಸವ, ಮದುವೆ- ದಿಬ್ಬಣದಂತದ ಸಂದರ್ಭಗಳಲ್ಲಿ, ಕೂರಿಗೆ ಹೂಡಿ, ಬಿತ್ತನೆ ಮಾಡುವ, ಬೆಳೆ ಕೊಯ್ಯುವ, ಗೂಡು ಹಾಕುವ, ಕಣ ಮಾಡುವ, ಹೀಗೆ ಹಲವು ಹಲವಾರು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಹೂರ್ತ ನೋಡುವಂತಹ […]Read More

ಗೋರಿಯ ಮೇಲಿನ ಚಿಗುರು

ಗರಿಕೆಯ ಚಿಗುರುನಿನ್ನ ಗೋರಿಯಮೇಲಿನಚೆಲುವ ಹೆಚ್ಚಿಸಿದೆನೋಡು ನಿನ್ನಷ್ಟಲ್ಲದಿದ್ದರೂ..ಗರಿಕೆಯಷ್ಟೇ ಚೆಲುವಿದೆ..!! ಪೂರ್ಣ ಬೆತ್ತಲಾಗಿ ಮಲಗಿರುವೆ ನೀನಲ್ಲಿನಿನ್ನ ಗೋರಿ ಮುಚ್ಚಲು ಒಂದೊಂದು ಗರಿಕೆಯೂ ಪೈಪೋಟಿಗೆನಿಂತಿವೆ ಇಲ್ಲಿ..!! ನಾ ನಿನ್ನ ಪ್ರೀತಿಸಿದೆನಾ ನಿನ್ನ ಪ್ರೇಮಿಯಾಗಿದ್ದಾಕ್ಕಾಗಿಈ ಗೋರಿ ನನಗಿಂತಹೆಚ್ಚಾಗೇ ಪ್ರೀತಿಸುತ್ತಿದೆಯಾ ನಿನ್ನ ಪ್ರೇಮಿಯಾಗಿ ಪಡೆದುದ್ದಾಕ್ಕಾಗಿ…??ನೀನಾಗಲೇ ಹೋಗಿರುವೆ ಬಂಧಿಸಲ್ಪಟ್ಟಬಂಧನದಿಂದನಾ ಇನ್ನೂ ಬಂದೀಖಾನೆಯಲ್ಲೇಬಂಧಿಯಾಗಿರುವೆಬರದಿರುವಪ್ರವಾಹವ ಮರೆತು…!! ಶಿವು ಅಣ್ಣಿಗೇರಿRead More

ಮೇಣದ ಬತ್ತಿ

ಮೇಣದ ಬತ್ತಿ ಹಚ್ಚಿದ್ದಾನೆ ದೇವರುಉರಿಯುತ್ತಿದೆ ಮೆಲ್ಲಗೆಹೋರಾಡುತ್ತಾ ಗಾಳಿಯೊಂದಿಗೆ ಆರಿಹೋಗುವುದಿಲ್ಲ ಬೇಗನೆತನ್ನ ಶಕ್ತಿಯ ಮೇಲೆ ನಂಬಿಕೆಬೀಸುವ ಗಾಳಿ ಎಷ್ಟೇ ರಭಸವಾಗಿರಲಿಅಂಜುವುದಿಲ್ಲ ಬದುಕುವ ಛಲವದಕೆ ಸಂಘರ್ಷ ಸಹಜ.ಅಪೇಕ್ಷಿತವಿಲ್ಲ ಇಲ್ಲಿ ಏನೂಬಂದಿದ್ದು ಸ್ವೀಕರಿಸುವ ಇರಾದೆ.ಒಲಿದಂತೆ ನಡೆಯುವ ಖಯಾಲಿ..ಪ್ರಕೃತಿಯೂ ಸಹಕಾರಿ.. ನಂಬಿಕೆಯೇ ಜೀವ.ಮೇಣದ ಬತ್ತಿ ಉರಿದರೂಅದರ ಅಸ್ತಿತ್ವವೇ ಸಾಕ್ಷಿRead More

ಗೋವಿಂದಯ್ಯ (ಭಾಗ -೧)

-ಒಂದು- ಗೋವಿಂದಯ್ಯ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದು ಒಂದು ಅಂದಾಜಿನಲ್ಲಿ ನಲವತ್ತೈದು-ಐವತ್ತು ವರ್ಷಗಳೇ ಆಗಿರಬಹುದು. ಅದು ಯಾವ ಅಂದಾಜು ಅಂತ ಎಂದೂ ಅವರಿಗೇ ತಿಳಿದಿಲ್ಲ. ಆದರೂ, ಯಾರೇ ಆಕಸ್ಮಿಕವಾಗಿ ಕೇಳಿದರೂ, ಅವರು ಹೇಳೋದೇ ಹಾಗೆ. ಆಗ ಈ ಬೆಂಗಳೂರು ನೆಮ್ಮದಿಯ ಬದುಕಿನ ನಗರವಾಗಿತ್ತು…ಕೋಟಿಗಟ್ಟಲೆ ಬರೀ ಕೆಟ್ಟ ಜನಗಳೇ ಸತ್ತೂ ಸತ್ತು, ಇರುವೆ ಹರಿದಾಡಲೂ ಕೊಂಚ ತಾವಿಲ್ಲದ ಹಾಗೆ ಈಗ ನರಕ ಹೇಗೆ ಗಬ್ಬಾಗಿ ನಾರುತ್ತಾ ಇರಬಹುದೋ, ಅದೇ ಮಾದರಿಯಲ್ಲೇ ಇದೆ, ಈ ನಮ್ಮ ಹೆಮ್ಮೆಯ ನಗರ ಇಂದು! […]Read More

ಟ್ರೋಗಾನ್ ಎಂಬ ಸೌಂದರ್ಯದ ಖನಿ!

ಪಶ್ಚಿಮ ಹಾಗೂ ಘಟ್ಟಗಳ, ಒಟ್ಟಾರೆ ದಕ್ಕನ್ಪ್ರಸ್ಥ ಭೂಮಿಯ ರಮಣೀಯ ಸೌಂದರ್ಯದಲ್ಲಿ  ಈ ಹಕ್ಕಿಯದ್ದು ವಿಶಿಷ್ಟಪಾಲಿದೆ. ಕನ್ನಡದಲ್ಲಿ ಕಾಕರಣೆ ಹಕ್ಕಿ ಎಂದು ಕರೆಯಲಾಗುವ ಇದಕ್ಕೆ ಸ್ಥಳೀಯವಾಗಿ ಕಕ್ಕರಣೆ ಹಕ್ಕಿ ಎಂಬ ಹೆಸರೂ ಇದೆ. ಇಂಗ್ಲಿಷಿನಲ್ಲಿ ಮಲಬಾರ್ ಟ್ರೋಗಾನ್ (Malabar Trogon Harpactes fasciatus)ಎಂದು ಕರೆಯುತ್ತಾರೆ. ಗಂಡು ಹಾಗೂ ಹೆಣ್ಣು ಎರಡೂ ವಿಶಿಷ್ಟವಾದ ಸೌಂದರ್ಯದಿಂದ ಕೂಡಿದೆ. ಗಂಡು ಪ್ರಧಾನವಾಗಿ ಕೆಂಪಾಗಿದ್ದು ಕಪ್ಪು ತಲೆ, ಕುತ್ತಿಗೆಯನ್ನು ಹೊಂದಿರುತ್ತದೆ, ಈ ಕಪ್ಪು ಎದೆಯ ಮೇಲ್ಭಾಗದವರೆಗೂ ವ್ಯಾಪಿಸಿರುತ್ತದೆ. ದೇಹದ ಕೆಳಭಾಗ  ಕೆಂಪು! ಈ ಕೆಂಪು-ಕಪ್ಪನ್ನು ಬೇರ್ಪಡಿಸುವುದು […]Read More

ಯೋಗಾ-ಯೋಗ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಜೂನ್ ಇಪ್ಪತ್ತೊಂದು [ June 21 ], ಯೋಗಾಭ್ಯಾಸದಿಂದ ಸದೃಢ ಆರೋಗ್ಯ ನಿಮ್ಮದೆ ಎಂದೆಂದೂ. ಅಪರಿಮಿತ ಸಂತೋಷ, ಆರೋಗ್ಯ ಪಡೆಯಲು ತಪ್ಪದೆ ಮಾಡಿ ಯೋಗ 🤸🏻‍♀️ಯೋಗದ ಮಹತ್ವ ಅರಿವಿದ್ದವರಿಗೆ ಜೀವನ ಬಲು ಸರಾಗ 🚀ಯೋಗವು ಯಾವುದೇ ದೈಹಿಕ, ಮಾನಸಿಕ ಸಮಸ್ಯೆಗಳು ಹತ್ತಿರ ಸುಳಿಯದಂತೆ ಜಡಿಯುವ ಬೀಗ 🔒ಯೋಗ ಕಷ್ಟವೂ ಅಲ್ಲ, ಕ್ಲಿಷ್ಟವೂ ಅಲ್ಲ, ಎಲ್ಲರ ಸಂತೋಷವಾಗಿರಿಸುವ ಆನಂದರಾಗ ಯೋಗ ನಿಜಾರ್ಥದಲ್ಲಿ ಶಿಕ್ಷಣವಲ್ಲ, ನಮ್ಮ ಸಂಸ್ಕೃತಿ 👏🏻ಯೋಗದಿಂದಲೆ ಸಾಧ್ಯ ನಿಜವಾದ ಪ್ರಗತಿ 🚉ಉತ್ತಮ, ಅತ್ಯುತ್ತಮವಾಗಿರುವುದು […]Read More

ಅಪ್ಪ

ತಾಳ್ಮೆ ಗಳಿಸಲುಕೋಪ ಮಾರಿದ!ತನ್ನವರಆಸೆ ತೀರಿಸಲುಕನಸು ಮಾರಿದ! ಸಂಸಾರಕ್ಕೆತನ್ನನ್ನೇ ತಾನುತೇದು ತೇದುಸವೆಯುವಶ್ರೀಗಂಧ ತನ್ನಾಸೆಯಬದಿಗೊತ್ತಿತನ್ನವರ ಹೆಗಲಮೇಲೆ ಹೊತ್ತುದಡ ಸೇರಿಸುವತೆಪ್ಪ! ನನ್ನಪ್ಪ ಶ್ರೀಧರ ಕಾಡ್ಲೂರುRead More

ಸಂಚಾರಿ ವಿಜಯ್- ಇಲ್ಲವಾದ ಮೇಲೂ ಜೀವಂತ!!!

ಸಂಚಾರಿ ವಿಜಯ್ ಶ್ರೇಷ್ಠ ನಟರಷ್ಟೇ ಆಲ್ಲ ಬರಹಗಾರರೂ ಹೌದು! ಸಂಚಾರಿ ವಿಜಯ್ ಅವರು ಲೇಖನಗಳನ್ನೂ ಬರೆಯುತ್ತಿದ್ದರು. ಆಗಾಗ ಬರಹದಲ್ಲೂ ತೊಡಗಿಸಿಕೊಂಡಿದ್ದರಲ್ಲದೇ ತಮ್ಮ ಸಮಾನ ಮನಸ್ಕರಲ್ಲಿ ಅದನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲದೇ ವಿಜಯ್ ಅವರಿಗೆ ತಮ್ಮ ಅಮ್ಮನ ಜೀವನಗಾಥೆಯನ್ನು ಬರೆಯಬೇಕೆಂಬ ಹೆಬ್ಬಯಕೆಯೂ ಇತ್ತೆಂಬುದು ಅವರು ತಮ್ಮ ಆಪ್ತ ಬಳಗದಲ್ಲಿ ಹಂಚಿಕೊಂಡಿದ್ದರು. ಅವರ “ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ನಾನು” ಎಂಬ ಕಿರು ಕಥೆ ಅವರು ಅಪಘಾತಕೀಡಾಗಿ ಸಾಯುವ ಎರಡು ದಿನದ ಮುಂಚೆ ನಮ್ಮ ಗೆಳೆಯರ ಬಳಗಕ್ಕೆ ಸೇರಿತ್ತು. ವಿಜಯ್ ಅವರು ನನಗೇನು […]Read More

ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ನಾನು!!!

ಸಂಚಾರಿ ವಿಜಯ್ ಶ್ರೇಷ್ಠ ನಟರಷ್ಟೇ ಆಲ್ಲ ಬರಹಗಾರರೂ ಹೌದು! ಜೂನ್ ಹತ್ತರಂದು (ಅಪಘಾತಕ್ಕೆ ಎರಡು ದಿನ ಮುಂಚೆ) ತನ್ನ ಗೆಳೆಯರ ಬಳಗಕ್ಕೆ ಕಳಿಸಿದ್ದ ಲೇಖನವಿದು‌. ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ನಾನು!!! ವರುಷಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಕೈಗೆ ಒಂದಿಷ್ಟು ಹಣ ಸಿಕ್ಕರೆ ಮುಗಿಯಿತು. ಹೇಳಿ ಕೇಳಿ ಶೋಕಿವಾಲನ ಬ್ರೀಡಿನಂತಿದ್ದ ನಾನು ಬೆಳ್ಳಂಬೆಳಗ್ಗೆ ಎದ್ದು ರೆಡಿಯಾಗಿ ಮುರುಕು ಮಸುಕು ಕನ್ನಡಿ ಮುಂದೆ ನಿಂತು ಕನ್ನಡಿಯ ಮೇಲಿನ ಧೂಳ್ಯಾವುದೂ ಪೌಡರ್ ಯಾವುದು ಗೊತ್ತಾಗದೆ ಅಳತೆ ಮೀರಿ ಮುಖದ ತುಂಬಾ […]Read More

ಕಿನ್ನಾಳ ಚಿತ್ತಾರ ಕಲೆ ಹಾಗು ಕಲಾವಿದರು

ಕಳೆದ ವಾರ ನಮ್ಮ ಸಂಸ್ಕೃತಿಯ ಹೆಮ್ಮೆಯ ಕಲೆ ಚನ್ನಪಟ್ಟಣದ ಬೊಂಬೆಯ ಬಗ್ಗೆ ಓದಿದ್ದೀರಿ. ಈಗ ಕಲೆ ಸಂಸ್ಕೃತಿಯ ಅಳಿವಿನಂಚಿನಲ್ಲಿದ್ದು ಈಗ ಕೇಂದ್ರ ಸರ್ಕಾರದ ಕೃಪೆ ಯಿಂದ ಮತ್ತೆ ಪುನರ್ಉದಯಿಸುತ್ತಿರುವ ಕಿನ್ನಾಳ ಕಲೆ ಹಾಗು ಅದನ್ನೇ ನೆಚ್ಚಿಕೊಂಡಿರುವ ಕಲಾವಿದರ ಬಗ್ಗೆ ತಿಳಿಯೋಣ. ವಿಜಯನಗರ ಸಾಮ್ರಾಜ್ಯವು ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೇ ಧಾರ್ಮಿಕ ರಕ್ಷಣೆಯನ್ನು ಕೊಟ್ಟ ಕರ್ನಾಟಕದ ರಾಜಮನೆತನ. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಂತೆ ಕುಸರಿ ಕಲೆಯು ಆ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದಿತ್ತು. ವಿಜಯನಗರ ಮಹಾ ಸಂಸ್ಥಾನದ ಪತನದ ನಂತರ […]Read More