ಅಪ್ಪು ಅಜರಾಮರ…

ಅಪ್ಪು ಅಜರಾಮರ… ಹೆಮ್ಮೆಯ ಕರುನಾಡು ಮರೆಯದ ರಾಜರತ್ನನುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದನುಸನಾದಿ ಅಪ್ಪಣ್ಣನಲಿ ನಟನಾ ಚತುರನಾದನುತಾಯಿಗೆ ತಕ್ಕ ಮಗನಾಗಿ ಮನೆತನ ಬೆಳಗಿದನು ಕನ್ನಡ ಚಿತ್ರರಂಗದ ಹೊಸ ಬೆಳಕು ನೀನುವಸಂತ ಗೀತೆಯ ಹಾಡಿದ ಮೌರ್ಯನುಪಡೆದಿರಿ ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿಯನುಯಾರಿವನು ಅಂದವರಿಗೆ ದೊಡ್ಮನೆ ಮಗನಾದವನು ನಗುನಗುತಾ ಬಾಳಿದ ಪರಶುರಾಮನುಅಪ್ಪಿ ಮುದ್ದಾಡಿತು ಕರುನಾಡು ಅಪ್ಪುವನುಅರ್ಪಿಸಿದರು ವೀರ ಕನ್ನಡಿಗನಿಗೆ ಹಾಲಿನ ಅಭಿಷೇಕವನುಆಕಾಶದೆತ್ತರಕ್ಕೆ ಏರಿದ ನಮ್ಮ ಬಸವನು ಪ್ರತಿ ಸಿನಿಮಾದಲಿ ಅಜಯ್ ಬಾರಿಸಿದವನುಅಭಿಮಾನಿಗಳ ಪಾಲಿಗೆ ಅರಸನಾದವನುಪರಮಾತ್ಮನಾಗಿ ಭೂಮಿಗೆ ಬಂದ ರಾಜ್ ನುಪೃಥ್ವಿಯೇ ಹಾಡಿ […]Read More

ಹೆಣ್ಣು ಹುಣ್ಣಲ್ಲ ಹೊನ್ನು..

ಹೆಣ್ಣು ಹುಣ್ಣಲ್ಲ ಹೊನ್ನು.. ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣುನೆನಪಿರಲಿ ಅವಳೊಂದಿಗೂ ಸಮಾಜದ ಕಣ್ಣುಯಾರೊ ಮೂರ್ಖರಂದರು ಮಹಿಳೆಯು ಹುಣ್ಣುಸ್ತ್ರೀಯನು ದೂಷಿಸಿದರೆ ಸೇರಬೇಕಾಗುವುದು ಮಣ್ಣು ಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆಎಷ್ಟು ಕೆಲಸ ಮಾಡಿದರೂ ಇಲ್ಲ ನೆಮ್ಮದಿ ಮನಸ್ಸಿಗೆ ನಿಷ್ಕಲ್ಮಶವಾದ ಪ್ರೀತಿ ಅಡಗಿದೆ ಹೃದಯದೊಳಗೆಗುಡಿಯ ಕಟ್ಟಿ ಪೂಜಿಸಿ ಸ್ತ್ರೀಯ ತ್ಯಾಗದ ಮಹಿಮೆಗೆ ಮಹಿಳಾ ಸಮಾನತೆ ಕೇವಲ ಭಾಷಣಕ್ಕಾಗದಿರಲಿಮಹಿಳೆ ಅಬಲೆ ಅಲ್ಲ ಸಬಲೆ ಗೊತ್ತಿರಲಿಹೆಣ್ಣಿರದೆ ಗಂಡು ಶೂನ್ಯ ಎಂಬುದು ತಿಳಿದಿರಲಿಹೆಣ್ಮಕ್ಕಳ ಮನಸ್ಸಿಗೆ ನೋವಾಗದಂತೆ ಇರಲಿ ಕರುಣೆಗೆ ಮಮತೆಗೆ ತಾಯಿಯಾಗಿ ಹೆಣ್ಣುಪ್ರೀತಿಗೆ ಬಾಳಿಗೆ […]Read More

ಜಲ ಚತುರೆ ಈ ಗುಳುಮುಳಕ

ಜಲ ಚತುರೆ ಈ ಗುಳುಮುಳಕ ಶಾಲೆಯ ಬೇಸಿಗೆ ರಜೆ ಬಂತೆಂದರೆ ಸಾಕು ನಾನು ನನ್ನ ತಂಗಿ ನಮ್ಮ ತಾಯಿಯೊಡನೆ ನಮ್ಮ ಅಜ್ಜಿಯ ಊರಿಗೆ ಹೊರಟು ಬಿಡುತ್ತಿದ್ದೆವು. ಮಂಡ್ಯದ ಬಸ್ ನಿಲ್ದಾಣದಲ್ಲಿ ಆ ಬಿರು ಬೇಸಿಗೆಯಲ್ಲಿ ಕೆಂಪು ಬಸ್ಸನ್ನು ಕಾಯುತ್ತಾ ಬಸ್ಸು ಬಂದೊಡನೆ ಸೀಟಿಗಾಗಿ ಖರ್ಚಿಫು, ಬ್ಯಾಗು ಇನ್ನಿತರ ವಸ್ತುಗಳನ್ನು ಕಿಟಕಿಯ ಮೂಲಕ ಹಾಕುವ ಜನರ ನಡುವೆ ನಾನು ಕಿಟಕಿಯಿಂದಲೇ ತೂರಿ ಒಳಗೆ ನುಗ್ಗಿ ಅದೇಗೋ ಮೂರು ಸೀಟಿನ ಜಾಗವನ್ನು ಆಕ್ರಮಿಸಿಬಿಡುತ್ತಿದ್ದೆ. ನಮ್ಮ ತಾಯಿ ಕೊನೆಯ ಸೀಟಿನಲ್ಲಿ ನನ್ನ […]Read More

ವಿಕೃತವೇಕೆ

ವಿಕೃತವೇಕೆ ಚುಚ್ಚು ಮಾತಿನಮುಳ್ಳ ಕೊನೆಯಿಂದಎದೆಗೂಡಲವಿತಮನವನೇಕೆ ತಿವಿಯುವಿರಿ ? ಕೊಂಕು ನುಡಿಯೆಂಬವಿಷದ ಬಾಣಕೆಸವಿ ಮನವನೇಕೆಗುರಿಯಾಗಿಸುವಿರಿ ? ಹೆರವರ ಮನವಘಾಸಿಗೊಳಿಸುತ,ಅದೆಂತು ನೀವುಸಂತಸ ಪಡೆಯುವಿರಿ ? ನಿಮ್ಮಿಂದಾಗುವುದಾದರೆಶುಭ ನುಡಿಯಿರಿ,ಇಲ್ಲವಾದಲ್ಲಿ ಬಾಯಿಮುಚ್ಚಿಕೊಂಡಿರಿ !! ಶ್ರೀವಲ್ಲಿ ಮಂಜುನಾಥRead More

ಗ್ಯಾಸ್ಟ್ರೈಟಿಸ್ (ಜಠರದುರಿತ)

ಗ್ಯಾಸ್ಟ್ರೈಟಿಸ್ (ಜಠರದುರಿತ) ಮೊದಲನೆಯದಾಗಿ ಈ ಲೇಖನದ ಶೀರ್ಷಿಕೆಯನ್ನು ಆರಂಭಕ್ಕೆ ಇಂಗ್ಲಿಷಿನಲ್ಲಿ ಬರೆದು, ನಂತರ ಆವರಣದೊಳಗೆ ಕನ್ನಡ ಪದವನ್ನು ಬರೆದ ಕಾರಣ ಏನೆಂದರೆ, ಇದೀಗ ವಾಸ್ತವದಲ್ಲಿ ಅನೇಕ ಇಂಗ್ಲಿಷ್ ಪದಗಳು ಕನ್ನಡ ಭಾಷಿಕರಲ್ಲಿ, ನಮ್ಮ ನಾಲಿಗೆಗೆ ತಕ್ಕ ಹಾಗೆ ಉಚ್ಛಾರದಲ್ಲಿ ಬದಲಾವಣೆಗೊಂಡು ಉಪಯೋಗಿಸಲ್ಪಡುತ್ತ, ಅವೂ ಸಹ ಕನ್ನಡ ಪದಗಳೇ ಏನೋ ಅನ್ನುವ ಹಾಗಾಗಿ, ಅವುಗಳ ಕನ್ನಡ ಅವತಾರದ ಪದಗಳು ಹೆಚ್ಚುಕಮ್ಮಿ ಮೂಲೆಗುಂಪಾಗಿವೆ. ಎರಡನೆಯದಾಗಿ, ಜನಸಾಮಾನ್ಯರ ಬಾಯಲ್ಲಿ ಅನೇಕ ಕನ್ನಡ ಪದಗಳನ್ನು ಇಂಗ್ಲಿಷ್ ಪದಗಳಷ್ಟು ಸುಲಭವಾಗಿ ಉಚ್ಛರಿಸುವುದೂ ಕಷ್ಟಕರ. ಉದಾಹರಣೆಗೆ […]Read More

ನೋವ ನುಂಗಿದ ನಂಜುಂಡರು

ನೋವ ನುಂಗಿದ ನಂಜುಂಡರು ಎಂತಹ ನೆನಪುಗಳ ಸಂತೆ ನಮ್ಮ ಬಾಲ್ಯ !ಈಗ ನೆನೆಸಿಕೊಂಡರೆ ಮನಸ್ಸಿಗೆ ಮುದ !ಒಮ್ಮೊಮ್ಮೆ ನೋವು ಬಂದು ಬೇಸರವೆನಿಸುತ್ತದೆ !ಕಾಂಡಕಿ ಕಲ್ಲಿನ ಗಚ್ಚಿನಮನೆ, ಕೂಡು ಕುಟುಂಬ, ತಂದೆ-ತಾಯಿ, ದೊಡ್ಡಪ್ಪ-ದೊಡ್ಡವ್ವ, ಚಿಕ್ಕಪ್ಪ- ಚಿಕ್ಕವ್ವಎಲ್ಲರಿಗೂ ಮೂರು-ನಾಲ್ಕು ಮಕ್ಕಳು !ಮನೆಯಲ್ಲಿ ದಿನವು ಸಂತೆ ನೆರೆದಂತೆ !ಅಪ್ಪನೇ ಮನೆಯ ಯಜಮಾನಆತ ಹಾಕಿದ ಗೆರೆಯನ್ನು ಯಾರೂ ದಾಟುತ್ತಿರಲಿಲ್ಲ ! ಮನೆಯಲ್ಲಿಯ ಎಲ್ಲ ಹಿರಿಯರು ನಮ್ಮಂಥ ಚಿಕ್ಕವರನ್ನು ಎಷ್ಟು ಅಗಾಧಪ್ರೀತಿಯಿಂದ ನೋಡುತ್ತಿದ್ದರು !ಬೇಡ ಬೇಡವೆಂದರು ಒತ್ತಾಯ ಮಾಡಿಊಟ ಮಾಡಿಸುವ ದೊಡ್ಡವ್ವ-ಚಿಕ್ಕವ್ವ !ಸ್ನಾನಕ್ಕೆ ಬಿಸಿ […]Read More

ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ

ಬೆಟ್ಟದಪುರ ಸಿಡಿಲು ಮಲ್ಲಿಕಾರ್ಜುನ ಬೆಟ್ಟದಪುರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಒಂದು ಸುಂದರ ಊರು.‌ ಸುಮಾರು ಹತ್ತು ಸಾವಿರದಷ್ಟು ಜನಸಂಖ್ಯೆ ಈ ಊರಿನಲ್ಲಿದೆ. ಈ ಊರಿನ‌ ಅಧಿದೈವ ಸಿಡಿಲು ಮಲ್ಲಿಕಾರ್ಜುನ. ಮಲ್ಲಿಕಾರ್ಜುನ ಸ್ವಾಮಿಯು ಪಾರ್ವತಿ ದೇವಿ ಮತ್ತು ವಿಘ್ನೇಶ್ವರ ಸ್ವಾಮಿಯ ಜೊತೆಯಲ್ಲಿ ನೆಲೆಸಿದ್ದಾನೆ. ಹೆಸರೇ ಹೇಳುವಂತೆ ಈ ಊರಿಗೆ ತಾಗಿದಂತೆ ಬೆಟ್ಟವೊಂದಿದೆ. ಸುಮಾರು ಮೂರು ಸಾವಿರದ ಎಂಟುನೂರು ಮೆಟ್ಟಿಲುಗಳನ್ನು ಏರಿದರೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಮೂಲಸ್ಥಾನ ನೋಡಬಹುದು. ಬಹುಕಾಲದ ಹಿಂದೆ ಈ ಪ್ರಾಂತ್ಯದಲ್ಲಿ ಶಿಡಿಲು ಎಂಬ […]Read More

ಸರಿಗನ್ನಡ-ಸರಿಕನ್ನಡ

ಸರಿಗನ್ನಡ-ಸರಿಕನ್ನಡ ಪುಸ್ತಕ : ಸರಿಗನ್ನಡ-ಸರಿಕನ್ನಡಲೇಖಕರು: ಕೊಕ್ಕಡ ವೆಂಕಟ್ರಮಣ ಭಟ್,ಮಂಡ್ಯಪ್ರಕಟಣೆ:ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ (ರಿ),ಕಾಸರಗೋಡುಸಂಪರ್ಕ ಸಂಖ್ಯೆ: 9448344380,8073740237 ಭಾಷೆ ಎಂದರೆ ಅದು ಕೇವಲ ಸಂವಹನ ಮಾಧ್ಯಮವಷ್ಟೆ ಅಲ್ಲ,ಅದು ಕಲೆ,ಸಾಹಿತ್ಯ,ಶಿಕ್ಷಣ ಸಂಸ್ಕೃತಿಗಳ ಅಭಿವ್ಯಕ್ತಿ ಮಾಧ್ಯಮವೂ ಹೌದು. ಆಡುವ ಮಾತಿನಲ್ಲಿಯೂ ಬರಹ ರೂಪದ ಭಾಷೆಯಲ್ಲಿಯೂ ಭಿನ್ನತೆ ಇರುವುದು ಸಹಜವೇ!!!. ಹಿರಿಯ ಲೇಖಕರು ,ಸಂಸ್ಕೃತ ವಿದ್ವಾಂಸರೂ ಆದ ಶ್ರೀಯುತ ಕೊಕ್ಕಡ ವೆಂಕಟ್ರಮಣ ಭಟ್ಟರ ಕೃತಿ ಸರಿಗನ್ನಡ-ಸರಿಕನ್ನಡ ನಮ್ಮ ಬಳಕೆಯಲ್ಲಿ ಇರುವ ಪದಗಳ ಕುರಿತಾಗಿ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ. ತಮ್ಮ ಸಂಪರ್ಕದಲ್ಲಿ ಇರುವವರೊಂದಿಗೆ […]Read More

ಹೀಗೊಂದು ಅನ್ನದಾಸೋಹ (ಅನಾಜ್ ಬ್ಯಾಂಕ್)

ಹೀಗೊಂದು ಅನ್ನದಾಸೋಹ (ಅನಾಜ್ ಬ್ಯಾಂಕ್) ಪ್ರಪಂಚದ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತ ದೇಶವೂ ಒಂದು. ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಂಚೂಣಿಯಲ್ಲಿರುವ ದೇಶವೇನೋ ಹೌದು, ಆದರೆ ಇಲ್ಲಿನ ಕೆಲವೊಂದು ಜ್ವಲಂತ ಸಮಸ್ಯೆಗಳನ್ನು ಕಂಡರೆ ಎಂತವನಿಗೂ ಆಶ್ಚರ್ಯವಾಗದೇ ಇರಲಾರದು. ಇವುಗಳಲ್ಲಿ ಒಪ್ಪೊತ್ತಿನ ಊಟಕ್ಕೂ ಹಾಹಾಕಾರ ಹಾಕುವಂತಹ ಆಹಾರದ ಸಮಸ್ಯೆ. ಭಾರತದ ದೇಶದ ಒಟ್ಟು ಮಕ್ಕಳಲ್ಲಿ ಆರನೇ ಒಂದು ಭಾಗ ಮಕ್ಕಳು ಅಪೌಷ್ಠಿಕತೆಯಿಂದ, ಆಹಾರದ ಕೊರತೆಯಿಂದಾಗಿ ಬಳಲುತ್ತಿದ್ದಾರೆ ಹಾಗೂ ಇವರಲ್ಲಿ ನಾಲ್ಕರಲ್ಲಿ ಒಂದು ಮಗು ತೀರಾ ಅಪೌಷ್ಠಿಕತೆಯಿಂದ ಬಳಲುತ್ತಿದೆ. ಪ್ರತಿದಿನ […]Read More

ಜಗದ ಸೂತ್ರಧಾರಿ

ಜಗದ ಸೂತ್ರಧಾರಿ ನೀ ಜಗದ ಸೂತ್ರಧಾರಿಯಾಗಿಲೋಕವನೆ ನಿನ್ನಾಣತಿಯಂತೆ ನಡೆಸುವೆ!ನಾವು ಕ್ಷಣಿಕದ ಪಾತ್ರಧಾರಿಗಳಾಗಿ..ನಟನೆ ಮುಗಿಯಲು ಪರದೆಯೆಳೆಯುವೆವು!! ಚದುರಂಗದ ತೆರದಿ ಬಾಳಲಿಸೋತ ನಂತರವೇ ಗೆಲುವು!ಸಾಗುತಿಹ ಜೀವನವೆಂಬ ಆಟದಿ..ನೀ ಮುನ್ನಡೆಸಿದಂತೆ ನಮ್ಮ ನಲಿವು!! ಬಾಳಬಂಡಿ ಸರಾಗದಿ ಸಾಗಲುಸೊಗದ ಜೋಡೆತ್ತಿನ ನಡೆಯಿರಬೇಕು!ಬದುಕಿನ ದಾರಿ ನೆಮ್ಮದಿಯಲಿರಲು..ಕಾಣದ ಆ ದೈವದ ಕೃಪೆಯಿರಬೇಕು!! ಅಂದದ ಬದುಕು ಕೊಟ್ಟ ದೇವನನೆನೆದು ಪರಹಿತವೇ ಧ್ಯೇಯವಾಗಬೇಕು!ಬಾಳಲಿ ಉಳಿದೆಲ್ಲವೂ ನಶ್ವರವೆಂಬ..ಕಟುಸತ್ಯವ ನಾವೆಂದಿಗೂ ಅರಿತಿರಬೇಕು ಸುಮನಾ ರಮಾನಂದRead More