ಹಿನ್ನೋಟ – 2023

ಹಿನ್ನೋಟ – 2023 ಈ ವರ್ಷ ಮುಗಿಯಲು ಇನ್ನೇನು ಕೆಲವೇ ಘಂಟೆಗಳು ಬಾಕಿ ಇದೆ. ನೋಡ ನೋಡುತ್ತಿದ್ದಂತೆಯೆ ನಾವೆಲ್ಲರೂ ಮತ್ತೊಂದು ಹೊಸ ವರ್ಷದ ನಿರೀಕ್ಷೆಯಲ್ಲಿದ್ದೇವೆ. ಸಮಯ ಬಹು ಬೇಗ ಕಳೆಯುತ್ತಿದೆ. ಹಳೆಯ ವರ್ಷ ನೆನಪಿನ ಬುತ್ತಿಯಾದರೆ ಮುಂಬರುವ ವರ್ಷವು ಭರವಸೆಗಳನ್ನು ಹೊತ್ತು ತರುತ್ತದೆ. ಅಂಥ ಭರವಸೆಗಳೇ ಬದುಕಿಗೆ ಶಕ್ತಿ. ಅದೇನೇ ಇರಲಿ, ಕಳೆದ ವರ್ಷದ ಸಿಹಿ ಕಹಿ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ. ಸೂರ್ಯನ ಅಧ್ಯಯನಕ್ಕಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ‘ಆದಿತ್ಯ ಎಲ್ 1’ ಸೆಪ್ಟಂಬರ್ 2 […]Read More

ನವೋಲ್ಲಾಸದ ದಿನಕರ

ನವೋಲ್ಲಾಸದ ದಿನಕರ ವಿಷಾದದ ವಿಷಮ ಗಳಿಗೆಯನು ಮರೆಸಿಮೋಡದ ಮರೆಯಿಂದ ಕಣ್ಹೊಡೆದು ತಾ ಇಣುಕಿ!ಹೊಸಭಾವದ ಹಾದಿಯಲಿ ಜಗವ ನಡೆಸಿ..ಹೊಸ ಬೆಳಕನು ತಂದಿಹನು ದಿನಕರ!! ಕಾಣುತಿದೆ ಸೊಗದಿ ಹೊಸ ಚಿಗುರುಪಸರಿಸಿದೆ ಎಲ್ಲೆಡೆ ನವ ನವೋಲ್ಲಾಸ!ಕಂಡಿದೆ ಧರೆಯ ಮೊಗದಿ ಅದೇ ಹಸಿರು..ಅವಳ ಬದುಕಲಿ ನಿತ್ಯ ಬೆರೆತಿಹನು ಭಾಸ್ಕರ!! ಹೊನ್ನಿನಾಗಸದಿ ಬಂದಿದೆ ಬೆಳಕುಸುಂದರ ಮುಂಜಾವಿನದೇ ನವ ಚಿತ್ತಾರ!ನಲಿವ ಬುವಿಗೆ ಅವನೇ ಬದುಕು..ಹರುಷದಿ ನಗಿಸಿ ಬೇಸರ ಕಳೆದಿಹನು ನೇಸರ!! ಮಂಜು ಕವಿದು ಮುಸುಕಿರಲು ಸುತ್ತಹೊಮ್ಮಿದೆ ಅಂಬರದಿ ಕಾಂತಿಯ ಹೊಳಪು!ಹೊಂಗಿರಣದಿ ತಮದ ತೆರೆಯ ಸರಿಸಿ ಅತ್ತ..ನೋವ […]Read More

ಹನುಕಿಯಾ – ಯುದ್ಧಕಾಲದ ಪ್ರೇಮ ಗುಲಾಬಿ

ಹನುಕಿಯಾ – ಯುದ್ಧಕಾಲದ ಪ್ರೇಮ ಗುಲಾಬಿ ಪುಸ್ತಕ : ಹನುಕಿಯಾ, ಲೇಖಕರು : ವಿಠಲ್ ಶೆಣೈ, ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್ “ಮಿರಿಯಂ”ಅಪ್ಪನ ದನಿ ಕೇಳಿ ಮಿರಿಯಂ ತಿರುಗಿದಳು, ಇಬ್ಬರ ಮದ್ಯೆ ಮುಳ್ಳು ತಂತಿಯ ದೊಡ್ಡದಾದ ಬೇಲಿ, ಮಗಳನ್ನು ಅಪ್ಪ, ಅಪ್ಪನನ್ನು ಮಗಳು ತಬ್ಬಿ ಸಂತೈಸಲಾಗದಂತಹ ಪರಿಸ್ಥಿತಿ. “ಮಗಳೇ ಇಲ್ಲಿ ನಮ್ಮ ಆಟ ಎಷ್ಟು ದಿನ ಅಂತ ಗೊತ್ತಿಲ್ಲ, ನಮ್ಮಲ್ಲಿ ಯಾರು ಎಷ್ಟು ದಿನ ಬದುಕುತ್ತಾರೆಯೋ ದೇವರೇ ಬಲ್ಲ” “ಹಾಗೆಲ್ಲ ಯೋಚಿಸಬೇಡ ಅಪ್ಪ, ಛಲವಿದ್ದರೆ ನಾವು ನಾಲ್ಕು […]Read More

ಚಿರಸ್ನೇಹದ ಭಾವ

ಚಿರಸ್ನೇಹದ ಭಾವ ಗೆಳೆತನವೆಂದರೆ ಬಂಧನವಲ್ಲಬರೇ ಕಾಡುಹರಟೆಯ ಬಂಧವಲ್ಲ..ಕೊಟ್ಟು ದೂರಾಗುವ ಸಂಬಂಧವಲ್ಲ..ಮೋಡವಿರದ ತಿಳಿಯಾಗಸದ ಭಾವವೇ ಸ್ನೇಹ!! ಯಾರಲೂ ಹೇಳಲಾಗದ ಬೇಗುದಿಯಕಾಡುವ ಮನದಲಡಗಿದ ವಿಪ್ಲವವ..ಕೇಳಿ ಹೃದಯವ ಸಂತೈಸುವ..ಜಲಪಾತದಂದದಿ ಭೋರ್ಗರೆವ ಭಾವವೇ ಸ್ನೇಹ!! ನಿತ್ಯ ಸಂಭಾಷಣೆಯು ಬೇಕಿಲ್ಲದಕಡುಮೌನದಲೇ ಎಲ್ಲ ಗುರುತಿಸಬಲ್ಲ..ಯಾವ ಪ್ರಚಾರದ ಅಗತ್ಯವಿರದ..ತಾಯಪ್ರೇಮದಂತೆ ಸ್ವಾರ್ಥವಿರದ ಭಾವವೇ ಸ್ನೇಹ!! ಗೆಳೆಯ ಗೆಳತಿಯರ ಗೆಳೆತನವುಪವಿತ್ರ ಬಾಂಧವ್ಯದ ಬಂಧುರವು..ಯಾರ ಅಂಕೆಗೂ ನಿಲುಕದೀ ಬಂಧವು..ಕನ್ನಡಿಯಂತೆ ಸ್ವಚ್ಛವಾದ ಬಿಂಬವೇ ಸ್ನೇಹ!! ಸುಮನಾ ರಮಾನಂದRead More

ಏಕೆ ಹೀಗೆ

ಏಕೆ ಹೀಗೆ ನನ್ನೊಡನಿರುವವರೆಲ್ಲಾನನ್ನವರೇ ಎಂದುಸಂತಸದಿ ಬೀಗುತ್ತೇನೆ ! ಅವರಾಡುವ ಮಾತುಗಳನಂಬಿ, ಪದೇ ಪದೇಮೋಸ ಹೋಗುತ್ತೇನೆ ! ಚುಚ್ಚಿ ಅಂದಾಡಿದರೂನಗುತಲವರೊಡನೆಮಾತನಾಡುತ್ತೇನೆ ! ದಕ್ಕದೊಲವಿನ ಸವಿನೆನಪಿನಲಿ, ಬಿಕ್ಕಿಬಿಕ್ಕಿ ಅಳುತ್ತೇನೆ ! ಮನ ರೋಸಿ, ಬಾಳುಸಾಕೆನಿಸಿದರೂ ನಾಬಾಳುತ್ತಿದ್ದೇನೆ !! ಶ್ರೀವಲ್ಲಿ ಮಂಜುನಾಥRead More

ಎಲ್ಲಿಗೀ ಪಯಣ

ಎಲ್ಲಿಗೀ ಪಯಣ ಈ ಬದುಕು ಒಂದು ಜಟಕಾಬಂಡಿಯಂತೇ!ಆ ಪರಮಾತ್ಮ ಇದರ ಮಾಲೀಕನಂತೇ!!ಈ ಜೀವನೇ ಒಬ್ಬ ಪಯಣಿಗನಂತೇಪಯಣವು ಆ ಮಾಲೀಕನ ಇಚ್ಛೆಯಂತೆ|| ಅದರಂತೆಯೇ ಇತರರು ಸಹ ಪಯಣಿಗರುಪಯಣದಲಿ ಎಲ್ಲರೂ ಒಂದೇ ಕಡೆ ಇರುವರು|ಕೆಲವರು ಬಂಧು ಬಳಗದವರು ಸ್ನೇಹಿತರು;ಕೆಲವರು ಏನೂ ತಿಳಿಯದ ಅಪರಿಚಿತರು|| ಹೆಂಗಸರು ಮಕ್ಕಳು ಮುದುಕರು ಇತ್ಯಾದಿಗಳುಪ್ರಯಾಣಿಕರಲ್ಲಿ ಮನುಜರಲ್ಲದೇ;ಪ್ರಾಣಿ ಪಕ್ಷಿಗಳು, ಕೀಟಾದಿ ಜಂತುಗಳುಬರುವುವು ಯಾವುದೇ ಯೋಚನೆ ಇಲ್ಲದೇ|| ಪಯಣಿಗರು ತಾವು ಇಚ್ಛಿಸಿದಲ್ಲಿಗೆಹೋಗುವಂತಿಲ್ಲ ದಾರಿ ತಿಳಿದಿಲ್ಲ ಅಲ್ಲಿಗೆ !|ಚಾಲಕನ ಇಷ್ಟದಂತೆ,ಯಾರನ್ನು ಎಲ್ಲಿಗೆಇಳಿಸಬೇಕೋ ಇಳಿಯಬೇಕಲ್ಲಿಗೇ|| ನಾಗಶಯನನೇ ಚಾಲಕನಾಗಿಹನುವಾಯು ದೇವರೇ ವಾಹನವಾಗಿಹನು|ಜೀವಿಯೇ ಪಯಣಿಗನಾಗಿಹನುಈ […]Read More

ಬಯಲು ಆಲಯದ ಶ್ರೀ ಸೌತಡ್ಕ ಮಹಾಗಣಪತಿ

ಬಯಲು ಆಲಯದ ಶ್ರೀ ಸೌತಡ್ಕ ಮಹಾಗಣಪತಿ ಸೌತಡ್ಕ ಏನಪ್ಪಾ ಈ ಹೆಸರು ಒಂಥರಾ ವಿಚಿತ್ರವಾಗಿದೆಯಲ್ಲಾ ಎಂದು ಎಣಿಸಬಹುದಾದರೂ ಹೆಸರೇ ಹೇಳುವಂತೆ ಇದು ಸೌತೆಯ ಬಯಲು (ಅಡ್ಕ) ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲಾ ದೇವರುಗಳು ದೇವಸ್ಥಾನದ ಒಳಗಡೆ ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಟ್ಟರೆ ಇಲ್ಲಿನ ಗಣಪ ಬಯಲು ಆಲಯದಲ್ಲಿ ಪ್ರತಿಷ್ಠಾಪನೆ ಕೊಂಡಿದ್ದಾನೆ. ಹೌದು ಈ ವಿಶಿಷ್ಟವಾದ ಬಯಲು ಆಲಯದ ಗಣಪತಿ ಇರುವುದು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯ ಸೌತಡ್ಕ ಎಂಬ ಗ್ರಾಮದಲ್ಲಿ. ಇದೊಂದು ಹಿಂದುಗಳ […]Read More

ಮೌನ – ಮಾತು

ಮೌನ – ಮಾತು ನಿನ್ನ ಮೌನವಿಂದುಹೆಬ್ಬಂಡೆಯಂದದಲಿಎನ್ನ ಮನದ ಮೇಲೆತಾ ಕುಳಿತು ನನಗೆಉಸಿರುಗಟ್ಟಿಸುತಿದೆನಿನ್ನ ಮಾತಿನಿಂದದನುಅತ್ತ ಸರಿಸಲಾರೆಯಾ ? ನಿನ್ನ ಸುಡು ಮೌನನನ್ನೊಡಲ ತುಂಬಹರಡುತ್ತ ಉರಿವ,ಅಗ್ನಿಯಂದದಿ ತಾಧಗಧಗಿಸುತ್ತಲಿದೆನಿನ್ನ ಸವಿಮಾತಿನಮಳೆಯಿಂದಲದನುತಣಿಸಲಾರೆಯಾ ? ನಿನ್ನ ಮೌನವ್ರತವಕಂಡು ಮೂಕವಾಗಿಕೊರಗಿ, ಸೊರಗುತ್ತಮಂಕಾಗಿ ಕುಳಿತನನ್ನ ಸವಿಮನಕೆ ನಿನ್ನಸಿಹಿ ಮಾತಿನ ಅಮೃತಸೇಚನವಿತ್ತು ಮತ್ತೆನೀನದ ನಗಿಸಲಾರೆಯಾ ? ಶ್ರೀವಲ್ಲಿ ಮಂಜುನಾಥRead More

ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹ

ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹ ನಮ್ಮ ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು. ಕಲೆ, ಸಂಗೀತ, ನೃತ್ಯ, ಸಾಹಿತ್ಯ, ಸಂಸ್ಕೃತಿಯಲ್ಲಿ, ಹಾಗೆಯೇ ಅಲ್ಲಲ್ಲಿ ಈಗಲೂ ಕಾಣಬಹುದಾದ ಅವಿಭಕ್ತ ಕುಟುಂಬಗಳು, ಅಲ್ಲಿ ಕಂಡು ಬರುವ ಒಗ್ಗಟ್ಟು, ಅಂಥಹ ಒಗ್ಗಟ್ಟಿನಿಂದ ಒಟ್ಟಿಗೆ ಆಚರಿಸುವ ಆಚಾರ ವಿಚಾರಗಳು ಅಂದಿನಿಂದ ಇಂದಿನವರೆಗೂ ಭಾರತೀಯರಾದ ಪ್ರತಿಯೊಬ್ಬರಲ್ಲೂ ತನ್ನತನ ಉಳಿಸುವಲ್ಲಿ ಯಶಸ್ವಿಯಾಗಿದೆ. ಬೇರೆ ಬೇರೆ ದೇಶದವರೂ ಸಹ ಭಾರತೀಯ ಸಂಸ್ಕೃತಿಗೆ ಮರುಳಾಗಿ ಅವರೂ ಅಳವಡಿಸಿ ಕೊಂಡಿರುವುದು, ನಮಗೆ ಹೆಮ್ಮೆಯ ಸಂಗತಿ. ಆದರೆ ನಾವು ನಮ್ಮ ಸಂಸ್ಕೃತಿಯನ್ನೇ ಎಲ್ಲೋ ಮರೆಯುತ್ತಿದ್ದೇವೆ. […]Read More

ಮನೆದೇವತೆ

ಮನೆದೇವತೆ ಶರಣಾದೆ ನಿನ್ನಲ್ಲಿ ಓ ಮುದ್ದು ಮಡದಿಇರಬೇಕು ನೀನೆಂದು ಈ ನನ್ನ ಮನದಿ!! ಪಲ್ಲವಿ!! ನನಗಾಗಿ ನೀನು ತವರನ್ನು ಮರೆತೆನೀನಾದೆ ನನ್ನ ಮನೆಯಲ್ಲಿ ಹಣತೆನಿನಗಾಗಿ ನಾನೀಗ ಕವಿಯಾದೆನುಏಳೇಳು ಜನುಮಕ್ಕು ಜೊತೆಬರುವೆನು.!!೧!! ಹಗಲಿರುಳು ಆಯಾಸ ನಿನಗಾಗದೆನಿನ ಪ್ರೀತಿ ವಾತ್ಸಲ್ಯ ನಮಗೆಯಿದೆನೀ ತಾನೆ ನನ್ನ ಮನೆದೇವತೆ,,ನಿನಗಾಗಿ ಬರೆದೆ ಈ ನನ್ನ ಕವಿತೆ !!೨!! ತಾಯಂತೆ ನನ್ನನ್ನು ಹಾರೈಸುವೆಮಗುವಂತೆ ನೀ ನನ್ನ ಮುದ್ದಾಡುವೆನಾ ಎಡವಿ ಬಿದ್ದಾಗ ಕೈಹಿಡಿಯುವೆಎನಾದರೂನು ಜೊತೆ ನೆಡೆಯುವೆ.!!೩!! ನನ ಮುದ್ದು ಮಗುವಿಗೆ ತಾಯಾಗುತಮರುಜನ್ಮದ ನೋವು ನೀ ಸಹಿಸುತನೋವೆಲ್ಲ ಮರೆತು […]Read More