ಭೇಟಿ ಹೊಂಗನಸ ಹಾದಿಯಲಿಹಾದು ಹೋಗುವ ತವಕ,ತಡೆಯಾಗದಿರಿಯೆನಗೆಮನದ ಭಾವಗಳೆ; ಆಗು-ಹೋಗುಗಳೆಡೆಗೆಗಮನವೆನಗಿಂದಿಲ್ಲ,ಗುರಿಯೊಂದೇ ನನ್ನಕಣ್ಮುಂದೆಯಿಹುದು ; ದೂರ ದೂರದಲಿರುವಬೆಳಕಿನೋಕುಳಿಯೀಗ,ಮಾತಿರದೆ ಮೌನದಲೇ,ನನ್ನ ಸೆಳೆಯುತಿದೆ; ಅಡೆತಡೆಗಳಾವುದೂನನಗೆ ತಡೆಯಾಗದು,ಧ್ಯಾನಸ್ಥ ಮನಕಾವಮಸುಕು ಮುಸುಕದು! ಹೋಗಿ ಸೇರುವೆನಲ್ಲಿನೆಲಮುಗಿಲಿನಂಚಿನಲಿ,ಸಾಗರನು ಆಗಸವಸಂಧಿಸುವ ಸಮಯದಿ! ಶ್ರೀವಲ್ಲಿ ಮಂಜುನಾಥಬೆಂಗಳೂರುRead More
ಕಳ್ಳ ಖದೀಮ ಕಡಲ ಹಕ್ಕಿ – ಫ್ರಿಗೇಟ್ ಅಟ್ಲಾಂಟಿಕ್ ಮಹಾಸಾಗರ ಹಾಗು ಪೆಸಿಫಿಕ್ ಸಾಗರದ ತೀರದಲ್ಲಿ ಪೆಂಗ್ವಿನ್ ತರಹದ ಬೂಬಿ ಎಂಬ ಸಣ್ಣ ಗಾತ್ರದ ಹಕ್ಕಿಗಳು ಕಾಣಸಿಗುತ್ತವೆ, ಈ ಆಕರ್ಷಕ ಹಕ್ಕಿಗಳ ಮುಖ್ಯ ಆಹಾರ ಸಾಗರದ ಮೀನುಗಳು. ಬೂಬಿ ಹಕ್ಕಿಗಳು ದಿನದಲ್ಲಿ ಸಾಕಷ್ಟು ಮೀನು ಹಿಡಿಯುತ್ತವಾದರೂ ಅವುಗಳ ಹೊಟ್ಟೆಗೆ ಸೇರುವುದು ಅದರಲ್ಲಿನ ಶೇಕಡ 40 ರಷ್ಟು ಮಾತ್ರ. ಮೀನನ್ನು ಹಿಡಿದ ಖುಷಿಯಲ್ಲಿ ಬೂಬಿ ಹಕ್ಕಿಗಳು ತನ್ನ ಸಂಗಾತಿಯತ್ತ ತಿರುಗುವಷ್ಟರಲ್ಲಿ ಅದೆಲ್ಲಿರುತ್ತದೋ ಕಳ್ಳ ಖದೀಮ ಫ್ರಿಗೇಟ್ ಹಕ್ಕಿ ಯುದ್ಧ […]Read More
ಕೋಪವನ್ನು ಗೆದ್ದವನು ಬದುಕನ್ನು ಗೆದ್ದಂತೆ ಇತಿಹಾಸದ ಪುಟಗಳನ್ನು ತಿರುವಿದಾಗ ಅಲ್ಲಿ ಗೋಚರಿಸುವ ಮಹಾನ್ ವ್ಯಕ್ತಿಗಳು ಹುಟ್ಟುತ್ತಲೇ ಮಹಾನ್ ವ್ಯಕ್ತಿಗಳಾಗಿ ಹುಟ್ಟಿಲ್ಲ ಬದಲಿಗೆ ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ವಿಶೇಷ ಮೌಲ್ಯಗಳಿಂದಾಗಿ ಮಹಾನ್ ವ್ಯಕ್ತಿಗಳಾಗಿ ಗೋಚರಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಅರಿಷಡ್ವೈರಿಗಳನ್ನು ಸಮರ್ಥವಾಗಿ ಗೆದ್ದಿದ್ದಾರೆ ಎನ್ನಬಹುದು. ಮನುಷ್ಯನನ್ನು ಸದಾ ಕಾಡುವ ಅರಿಷಡ್ ವೈರಿಗಳ ಪೈಕಿ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ ಇವುಗಳು ಪ್ರಮುಖವಾದದು. ಈ ಅರಿಷಡ್ವೈರಿಗಳು ಸದಾ ಯಶಸ್ವಿ ಮನುಷ್ಯನನ್ನು ಕಾಡುತ್ತಲೇ ಇರುತ್ತಿದ್ದು, […]Read More
ಪ್ರೇಮ ಕವಿತೆ ನಿನ್ನೀ ಕಣ್ಣು ಬೋರ್ಗರೆವ ಕಡಲುಅದರಲ್ಲಿ ನಾ ಅಲೆಯಂತೆ!ನೀ ನೊಮ್ಮೆ ನನ್ನ ನೋಡಲುನನ್ನೀ ಶಾಂತ ಅಲೆಯು ಉಣ್ಣಿಮೆಯ ಚಂದ್ರನಂತೆ!! ನನ್ನ ಕನಸಿಗೂ ನಿನ್ನದೇ ಕನವರಿಕೆಕಾರಣ! ಹೃದಯದಲಿ ಮೂಡಿದ ಪ್ರೇಮದ ಗರಿಕೆನೀ ಒಪ್ಪಿಗೆಯ ನೀರೆರೆದರೆಆಗುವುದು ಮುದುವೆಗೆ ವೇದಿಕೆಸಧ್ಯಕಷ್ಟು ಸಾಕು ಚಂದದ ಸಂಸಾರಕ್ಕೆ!! ಬಾಲ ಕನ್ನಡಿಗRead More
ಹಿನ್ನೋಟ – 2023 ಈ ವರ್ಷ ಮುಗಿಯಲು ಇನ್ನೇನು ಕೆಲವೇ ಘಂಟೆಗಳು ಬಾಕಿ ಇದೆ. ನೋಡ ನೋಡುತ್ತಿದ್ದಂತೆಯೆ ನಾವೆಲ್ಲರೂ ಮತ್ತೊಂದು ಹೊಸ ವರ್ಷದ ನಿರೀಕ್ಷೆಯಲ್ಲಿದ್ದೇವೆ. ಸಮಯ ಬಹು ಬೇಗ ಕಳೆಯುತ್ತಿದೆ. ಹಳೆಯ ವರ್ಷ ನೆನಪಿನ ಬುತ್ತಿಯಾದರೆ ಮುಂಬರುವ ವರ್ಷವು ಭರವಸೆಗಳನ್ನು ಹೊತ್ತು ತರುತ್ತದೆ. ಅಂಥ ಭರವಸೆಗಳೇ ಬದುಕಿಗೆ ಶಕ್ತಿ. ಅದೇನೇ ಇರಲಿ, ಕಳೆದ ವರ್ಷದ ಸಿಹಿ ಕಹಿ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ. ಸೂರ್ಯನ ಅಧ್ಯಯನಕ್ಕಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ‘ಆದಿತ್ಯ ಎಲ್ 1’ ಸೆಪ್ಟಂಬರ್ 2 […]Read More
ನವೋಲ್ಲಾಸದ ದಿನಕರ ವಿಷಾದದ ವಿಷಮ ಗಳಿಗೆಯನು ಮರೆಸಿಮೋಡದ ಮರೆಯಿಂದ ಕಣ್ಹೊಡೆದು ತಾ ಇಣುಕಿ!ಹೊಸಭಾವದ ಹಾದಿಯಲಿ ಜಗವ ನಡೆಸಿ..ಹೊಸ ಬೆಳಕನು ತಂದಿಹನು ದಿನಕರ!! ಕಾಣುತಿದೆ ಸೊಗದಿ ಹೊಸ ಚಿಗುರುಪಸರಿಸಿದೆ ಎಲ್ಲೆಡೆ ನವ ನವೋಲ್ಲಾಸ!ಕಂಡಿದೆ ಧರೆಯ ಮೊಗದಿ ಅದೇ ಹಸಿರು..ಅವಳ ಬದುಕಲಿ ನಿತ್ಯ ಬೆರೆತಿಹನು ಭಾಸ್ಕರ!! ಹೊನ್ನಿನಾಗಸದಿ ಬಂದಿದೆ ಬೆಳಕುಸುಂದರ ಮುಂಜಾವಿನದೇ ನವ ಚಿತ್ತಾರ!ನಲಿವ ಬುವಿಗೆ ಅವನೇ ಬದುಕು..ಹರುಷದಿ ನಗಿಸಿ ಬೇಸರ ಕಳೆದಿಹನು ನೇಸರ!! ಮಂಜು ಕವಿದು ಮುಸುಕಿರಲು ಸುತ್ತಹೊಮ್ಮಿದೆ ಅಂಬರದಿ ಕಾಂತಿಯ ಹೊಳಪು!ಹೊಂಗಿರಣದಿ ತಮದ ತೆರೆಯ ಸರಿಸಿ ಅತ್ತ..ನೋವ […]Read More
ಹನುಕಿಯಾ – ಯುದ್ಧಕಾಲದ ಪ್ರೇಮ ಗುಲಾಬಿ ಪುಸ್ತಕ : ಹನುಕಿಯಾ, ಲೇಖಕರು : ವಿಠಲ್ ಶೆಣೈ, ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್ “ಮಿರಿಯಂ”ಅಪ್ಪನ ದನಿ ಕೇಳಿ ಮಿರಿಯಂ ತಿರುಗಿದಳು, ಇಬ್ಬರ ಮದ್ಯೆ ಮುಳ್ಳು ತಂತಿಯ ದೊಡ್ಡದಾದ ಬೇಲಿ, ಮಗಳನ್ನು ಅಪ್ಪ, ಅಪ್ಪನನ್ನು ಮಗಳು ತಬ್ಬಿ ಸಂತೈಸಲಾಗದಂತಹ ಪರಿಸ್ಥಿತಿ. “ಮಗಳೇ ಇಲ್ಲಿ ನಮ್ಮ ಆಟ ಎಷ್ಟು ದಿನ ಅಂತ ಗೊತ್ತಿಲ್ಲ, ನಮ್ಮಲ್ಲಿ ಯಾರು ಎಷ್ಟು ದಿನ ಬದುಕುತ್ತಾರೆಯೋ ದೇವರೇ ಬಲ್ಲ” “ಹಾಗೆಲ್ಲ ಯೋಚಿಸಬೇಡ ಅಪ್ಪ, ಛಲವಿದ್ದರೆ ನಾವು ನಾಲ್ಕು […]Read More
ಚಿರಸ್ನೇಹದ ಭಾವ ಗೆಳೆತನವೆಂದರೆ ಬಂಧನವಲ್ಲಬರೇ ಕಾಡುಹರಟೆಯ ಬಂಧವಲ್ಲ..ಕೊಟ್ಟು ದೂರಾಗುವ ಸಂಬಂಧವಲ್ಲ..ಮೋಡವಿರದ ತಿಳಿಯಾಗಸದ ಭಾವವೇ ಸ್ನೇಹ!! ಯಾರಲೂ ಹೇಳಲಾಗದ ಬೇಗುದಿಯಕಾಡುವ ಮನದಲಡಗಿದ ವಿಪ್ಲವವ..ಕೇಳಿ ಹೃದಯವ ಸಂತೈಸುವ..ಜಲಪಾತದಂದದಿ ಭೋರ್ಗರೆವ ಭಾವವೇ ಸ್ನೇಹ!! ನಿತ್ಯ ಸಂಭಾಷಣೆಯು ಬೇಕಿಲ್ಲದಕಡುಮೌನದಲೇ ಎಲ್ಲ ಗುರುತಿಸಬಲ್ಲ..ಯಾವ ಪ್ರಚಾರದ ಅಗತ್ಯವಿರದ..ತಾಯಪ್ರೇಮದಂತೆ ಸ್ವಾರ್ಥವಿರದ ಭಾವವೇ ಸ್ನೇಹ!! ಗೆಳೆಯ ಗೆಳತಿಯರ ಗೆಳೆತನವುಪವಿತ್ರ ಬಾಂಧವ್ಯದ ಬಂಧುರವು..ಯಾರ ಅಂಕೆಗೂ ನಿಲುಕದೀ ಬಂಧವು..ಕನ್ನಡಿಯಂತೆ ಸ್ವಚ್ಛವಾದ ಬಿಂಬವೇ ಸ್ನೇಹ!! ಸುಮನಾ ರಮಾನಂದRead More
ಎಲ್ಲಿಗೀ ಪಯಣ ಈ ಬದುಕು ಒಂದು ಜಟಕಾಬಂಡಿಯಂತೇ!ಆ ಪರಮಾತ್ಮ ಇದರ ಮಾಲೀಕನಂತೇ!!ಈ ಜೀವನೇ ಒಬ್ಬ ಪಯಣಿಗನಂತೇಪಯಣವು ಆ ಮಾಲೀಕನ ಇಚ್ಛೆಯಂತೆ|| ಅದರಂತೆಯೇ ಇತರರು ಸಹ ಪಯಣಿಗರುಪಯಣದಲಿ ಎಲ್ಲರೂ ಒಂದೇ ಕಡೆ ಇರುವರು|ಕೆಲವರು ಬಂಧು ಬಳಗದವರು ಸ್ನೇಹಿತರು;ಕೆಲವರು ಏನೂ ತಿಳಿಯದ ಅಪರಿಚಿತರು|| ಹೆಂಗಸರು ಮಕ್ಕಳು ಮುದುಕರು ಇತ್ಯಾದಿಗಳುಪ್ರಯಾಣಿಕರಲ್ಲಿ ಮನುಜರಲ್ಲದೇ;ಪ್ರಾಣಿ ಪಕ್ಷಿಗಳು, ಕೀಟಾದಿ ಜಂತುಗಳುಬರುವುವು ಯಾವುದೇ ಯೋಚನೆ ಇಲ್ಲದೇ|| ಪಯಣಿಗರು ತಾವು ಇಚ್ಛಿಸಿದಲ್ಲಿಗೆಹೋಗುವಂತಿಲ್ಲ ದಾರಿ ತಿಳಿದಿಲ್ಲ ಅಲ್ಲಿಗೆ !|ಚಾಲಕನ ಇಷ್ಟದಂತೆ,ಯಾರನ್ನು ಎಲ್ಲಿಗೆಇಳಿಸಬೇಕೋ ಇಳಿಯಬೇಕಲ್ಲಿಗೇ|| ನಾಗಶಯನನೇ ಚಾಲಕನಾಗಿಹನುವಾಯು ದೇವರೇ ವಾಹನವಾಗಿಹನು|ಜೀವಿಯೇ ಪಯಣಿಗನಾಗಿಹನುಈ […]Read More