ಕಮರದ ಕನಸು ಹಾದಿಬದಿಯ ಗೂಡಿನಲಿ ಕುಳಿತುಬದುಕನರಸುತಿಹರು ಕಂದಮ್ಮಗಳು..!ಬಟ್ಟಲು ಕಂಗಳ ನೋಟದಲಿಮುಗ್ಧತನದ ನೂರೆಂಟು ಭಾವಗಳು!! ಸೂರು ಜಾರಿದ ಗೂಡು ತಲೆಗಾಸರೆಯಾಗಿಅತಿವೃಷ್ಠಿಯಲಿ ಕಮರಿದ ಕನಸನ್ನುಮತ್ತೆ ನನಸಾಗಿಸುವ ಆಸೆಮುದುಡಿ ಅರಳುವ ಪುಷ್ಪದೋಪಾದಿಯಲಿ!! ರಣಬಿಸಿಲಲಿ ದುಡಿಮೆಗೈವ ಅಪ್ಪಜೊತೆಗೆ ಬಾಳಬಂಡಿ ಎಳೆದಿಹ ಅಮ್ಮ..!ಉಂಡ ನೋವನು ಮರೆತು..ಕಂದಮ್ಮಗಳ ಬೆಚ್ಚಗಿರಿಸುವ ಗುರಿ!! ಕಾದಿವೆ ಮರಿಹಕ್ಕಿಗಳಂತೆಗುಟುಕ ತರುವ ಹೆತ್ತವರಿಗಾಗಿ..!ಆಸೆಯ ನೋಟದಲಿ ಕುಳಿತುಅರಸಿಹರು ದಿನದ ಕೂಳಿಗಾಗಿ!! ಯಾವ ಕನಸನು ಹೊತ್ತಿವೆಯೋ!?ಏನು ಸಾಧನೆಯ ಮಾಡಿಹರೋ ಬಲ್ಲವರಾರು!!!ಮುಗ್ದ ಮಂದಹಾಸದ ನೋಟದಲಿಸಾಧನೆಯ ಛಲವಿರಲಿ,ಗೆಲುವಿರಲಿ ನೆಮ್ಮದಿಯ ನಾಳೆ ನಿಮ್ಮದಾಗಲಿ!! ಸುಮನಾ ರಮಾನಂದRead More
ಬಾಲರಾಮನ ಆಗಮನ ರಾಮನ ಹುಟ್ಟೂರಾದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಬೆನ್ನಲ್ಲೆ ಎಲ್ಲೆಲ್ಲೂ ಶ್ರೀರಾಮನಾಮ ಜಪಿಸಲ್ಪಡುತಿದೆ. ಇಂಥದೊಂದು ಐತಿಹಾಸಿಕ ಕ್ಷಣಕ್ಕೆ ಭಾರತಿಯರು ಇದೇ ತಿಂಗಳು ಜನವರಿ 22 ರಂದು ಶ್ರೀರಾಮನನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾರೆ. ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ಅವರ ಕೈಚಳಕದಲ್ಲಿ , ಕೃಷ್ಣ ಶಿಲೆಯ ಕಲ್ಲಿನಲ್ಲಿ ಅರಳಿದ ಸುಂದರ ಶಿಲ್ಪಿಯು ಎಲ್ಲರ ನಿರೀಕ್ಷೆಗೂ ಮೀರಿ, ಕಣ್ಮನ ಸೆಳೆಯುವಂತಿದೆ. ಮೂರ್ತಿಯಲ್ಲಿ ಸುತ್ತಲೂ ವಿಷ್ಣುವಿನ ದಶಾವತಾರದ ಚಿತ್ರಣ ಇದ್ದು, ತಲೆಯ ಮೇಲೆ ಸೂರ್ಯ, ಹಾಗೆ ಶಂಖ […]Read More
ಹೆಣ್ಣಿನ ಮನದಾಳದ ನಿವೇದನೆ ಒಂದು ತಾಯಿ ಆಗೋದು ಅಂದ್ರೆ ಪ್ರತಿ ಹೆಣ್ಣಿಗೆ ತುಂಬಾ ಖುಷಿ ಹಾಗೂ ಅವಳಿಗದು ಪರಿಪೂರ್ಣತೆ. ಆ ಖುಷಿ ಯಾವ ಹೆಣ್ಣು ತಾನೇ ಬೇಡ ಎನ್ನಲು ಸಾಧ್ಯ. ಪ್ರತಿ ಹೆಣ್ಣು ಆ ಒಂದು ಸೌಭಾಗ್ಯಕ್ಕಾಗಿ ತುಂಬಾ ಪ್ರಯತ್ನ ಪಟ್ಟಿರುತ್ತಾಳೆ. ಅದರಿಂದ ಅವಳು ಪಟ್ಟಿರುವ ನೋವು ಹೇಳಲು ಅಸಾಧ್ಯ. ಅದನ್ನು ಅವಳು ಬೇರೆಯವರಿಗೆ ವಿವರಿಸಲು ಸಾಧ್ಯ ಇಲ್ಲ. ಅಷ್ಟೂ ಪ್ರಯತ್ನ ಪಟ್ಟು ಆ ಸೌಭಾಗ್ಯ ಅವಳಿಗೆ ಸಿಗಲಿಲ್ಲ ಅಂದ್ರೆ ಅದು ಅವಳ ಯಾವುದೊ ಪೂರ್ವ ಜನ್ಮದ […]Read More
ನಂಬು ನನ್ನನು ರಾಮನೆ ರಾಮ ರಾಮ ಎಂದು ಜಪಿಸುತಹನುಮನಾ ಜೊತೆ ನಾನು ಬರುವೆನುರಾಮ ಲಕ್ಷ್ಮಣ ಸೀತಾಫಲವನುನಿನ್ನ ಪೂಜೆಗೆ ಬಿಡದೆ ತರುವೆನುನಂಬು ನನ್ನನು ರಾಮನೆ,,,ಕೌಸಲ್ಯೆ ಮುದ್ದಿನ ಕಂದನೆ.!!೧!! ಜಾನಕಿರಾಮ ಎಂದು ಕೂಗುತಜಟಾಯು ಪಕ್ಷಿಯನು ಕರೆಯುವೆಅಳಿಲು ಸೇವೆಯ ನಾನು ಸ್ಮರಿಸುತಶಬರಿಯಂತೆ ನಾನು ಕಾಯುವೆನಂಬು ನನ್ನನು ರಾಮನೆ,,ಸೀತೆಯನು ವರಿಸಿದ ಚಂದ್ರನೆ.!!೨!! ನಿನ್ನಂತೆ ಜನರ ಸೇವೆ ಮಾಡುತನಿನ್ನ ಗುಣವೆ ಸ್ಪೂರ್ತಿ ಎನ್ನುವೆಎಕ ಪತ್ನಿಯ ಜೊತೆಗೆ ಬದುಕುತನಿನ್ನ ತನದಲಿ ನಾನು ಬಾಳುವೆನಂಬು ನನ್ನನು ರಾಮನೆ,,ರಾಮರಾಜ್ಯದ ಭೀಮನೆ.!!೩!! ವಾಲ್ಮೀಕಿಯು ಬರೆದ ಧರ್ಮಗ್ರಂಥವಓದಿ ತಿಳಿದು ಜಗಕೆ ಸಾರುವೆಅಯೋಧ್ಯೆಯಲ್ಲಿ […]Read More
ಅಂಗವಿಕಲತೆಯನ್ನು ವರವಾಗಿಸಿಕೊಂಡ -ಮಾನಸಿ ಜೋಶಿ ಹೆಣ್ಣಿನ ಮುಖದ ಮೇಲೆ ಒಂದೆರಡು ಮೊಡವೆಗಳು ಬಿದ್ದರೆ ಏನೋ ಅನಾಹುತವೇ ನಡೆದಿದೆ ಎನ್ನುವಂತೆ ಆಡುವ ಸಮಾಜದಲ್ಲಿ ಯಾವನೋ ಒಬ್ಬ ಲಾರಿ ಡ್ರೈವರ್ ಮಾಡಿದ ಆಚಾತುರ್ಯದಿಂದ ಆಕ್ಸಿಡೆಂಟ್ ನಲ್ಲಿ ತನ್ನ ಕಾಲನ್ನೇ ಕಳೆದುಕೊಂಡ ಮಾನಸಿ ಗಿರೀಶ್ಚಂದ್ರ ಜೋಶಿ ಸಮಾಜದಲ್ಲಿನ ಹೆಜ್ಜೆ ಹೆಜ್ಜೆಗೂ ಮೂದಲಿಕೆ, ಅಪಹಾಸ್ಯ, ತಿರಸ್ಕಾರದ ಮಾತುಗಳಿಂದ ಬೇಸತ್ತು ತಮ್ಮ ಬದುಕನ್ನು ಕೊನೆಗಣಿಸಿಕೊಳ್ಳಲು ನಿರ್ಧರಿಸಿದ್ದರು. ಅಪ್ಪನಂತೆ ತಾನೂ ವಿಜ್ಞಾನಿ ಆಗಬೇಕೆಂಬ ಬಾಲ್ಯದ ಕನಸನ್ನು ನನಸು ಮಾಡುವ ಇಂಜಿನಿಯರಿಂಗ್ ಮುಗಿಸಿ ಕ್ಯಾಂಪಸ್ ಇಂಟರ್ವ್ಯೂನಲ್ಲಿಯೇ ಹಲವಾರು […]Read More
ಸಾಲವೆಂಬ ತಿರುಳು ಮೌನವದು ಬಿಕ್ಕಿ ತಾ ಸೋತಾಗಮಾತುಗಳು ಮನಕೆ ಬೇಡವಾದಾಗಮೌನ-ಮಾತುಗಳ ಮಂಥನದಿ ಕ್ಷಣವುರುಳಿದಾಗ..ನಿನ್ನ ಕಾಳಜಿಯ ಸಾಲ ಕೊಡುವೆಯಾ !!? ಅಂತರಾಳವು ಬೇಸರದ ಕದ ಮುಚ್ಚಿದಾಗಬಾಳಲಿ ಸಂತಸವು ಮರೆಯಾದಾಗನೋವು-ನಲಿವಿನುಯ್ಯಾಲೆಯಲಿ ಮನ ಜೀಕಿದಾಗ…ನಿನ್ನ ನಸುನಗುವಿನ ಸಾಲ ನೀಡುವೆಯಾ !!? ಕಡಲಿನ ಅಲೆಗಳೊಂದಿಗೆ ಒಂಟಿಯಾದಾಗದುಗುಡವೇ ನಿತ್ಯ ಜಂಟಿಯಾದಾಗಏಕಾಂತವೇ ಬದುಕಿನ ಭಾಗವಾದಾಗ…ನಿನ್ನ ಒಲವಿನಾಸರೆಯ ಸಾಲ ಕೊಡುವೆಯಾ !!? ನಡೆವ ಹಾದಿಯದು ಕಗ್ಗಂಟಾದಾಗನುಡಿವ ಹೃದಯವೇ ಒಗಟಾದಾಗನಡೆದು ನುಡಿವ ಪಯಣದಿ ಸೋತು ಕುಗ್ಗಿದಾಗ…ನಿನ್ನ ಸಾಂಗತ್ಯದ ಸಾಲ ನೀಡುವೆಯಾ !!? ಸುಮನಾ ರಮಾನಂದRead More
ಕಾಲಚಕ್ರ ಬದಲಾಗುತಿದೆ ಕಾಲ ಬದಲಾಗುತಿದೆಜಂಜಡದ ಜೀವನವು ಬದಲಾಗುತಿದೆಎಲ್ಲೆಲ್ಲೂ ಹಣದ ಹೊಳೆಯು ಹರಿಯುತಿದೆ ಹುಟ್ಟುವ ಮೊದಲೇ ಹಸುಗೂಸಿನ ಜೀವಕೆಸಾವಿರಾರು ರೂಪಾಯಿಗಳ ಪ್ಯಾಕೇಜುಪ್ರತಿಷ್ಟೆಯ ಮನಕೆ ಇದೊಂದು ರಿವಾಜು ಮಗು ಹುಟ್ಟಿದ ಸಂಭ್ರಮದಲಿ ಹುಡುಕಾಟ ಆರಂಭಶಾಲೆಗಳ ಮುಂದೆ ಸರದಿ ನಿಲ್ಲಲು ಪ್ರಾರಂಭಇದೇ ಶಾಲೆಯ ಸೀಟು ಬೇಕೆಂಬ ಒಣಜಂಭ ಮುಂದೊಂದು ದಿನ ಮದುವೆಯ ಹುಡುಕಾಟಲಗ್ನ ವರದಕ್ಷಿಣೆಗಳ ಜೊತೆ ಬೀಗರೂಟನೋಡುವವರಿಗಂತೂ ಸುಂದರ ನೋಟ… ಕೇಳಿದಷ್ಟು ಸಾಲಕೊಡುವ ಬ್ಯಾಂಕುಗಳುಗೃಹಸಾಲ, ಮದುವೆ ಸಾಲ, ಶಿಕ್ಷಣದ ಸಾಲಗಳುಬೆನ್ನತ್ತಿ ನಿಲ್ಲುವ ಅದೇ ಬ್ಯಾಂಕಿನ ಇಎಂಐಗಳು ನಾವು ಮಾಡುವ ತಪ್ಪಿಗೆ ಮಾಡುವೆವು […]Read More
ನಂದನವನದ ಪಕ್ಷಿಗಳು – Birds of Paradise ಪಕ್ಷಿಗಳಿಗೆ ಗರಿಗಳು ಮುಖ್ಯವಾಗಿ ಮೂರು ಉದ್ದೇಶಗಳಿಗೋಸ್ಕರ ಇರುತ್ತವೆ. ಹಾರಾಟ, ರಕ್ಷಣೆ ಮತ್ತು ಆಕರ್ಷಣೆ. ಪಕ್ಷಿ ಲೋಕದಲ್ಲಿ ಸ್ವರ್ಗಲೋಕದ ಹಕ್ಕಿಗಳು ಅಥವಾ ನಂದನವನದ ಹಕ್ಕಿಗಳೆಂದೇ ಸುಪ್ರಸಿದ್ದವಾಗಿರುವ ಪಪುವಾ ನ್ಯುಗಿನಿಯಾದ “ಪ್ಯಾರಾಡೈಸೀಈಡೇ” ಕುಟುಂಬಕ್ಕೆ ಸೇರಿದ ಈ ಪಕ್ಷಿಗಳು ಪಕ್ಷಿ ಜಗತ್ತಿನಲ್ಲಿಯೇ ಅತ್ಯಂತ ಆಕರ್ಷಣೀಯ ರೆಕ್ಕೆ ಗರಿಗಳನ್ನ ಹೊಂದಿವೆ. ಈ ಪಕ್ಷಿಗಳು ವಿಶೇಷವಾಗಿ ಇಂಡೋನೇಷ್ಯಾ , ಆಸ್ಟ್ರೇಲಿಯಾ ಮತ್ತು ಪಪುವಾ ನ್ಯುಗಿನಿಯಾ ದೇಶಗಳ ಅರಣ್ಯಪ್ರದೇಶಗಳಲ್ಲಿ ಕಂಡುಬರುತ್ತವೆ. 4.7 ರಿಂದ 39 ಇಂಚುಗಳವರೆಗೆ ಗಾತ್ರದಲ್ಲಿರುವ […]Read More
ಕಲ್ಲಂಗಡಿಯಲ್ಲಿ ಕಲಾವಿದನ ಕೈಚಳಕ ಕಲಾವಿದ ನಿದ್ದೆಯಲ್ಲೂ ಕಲೆಯನ್ನು ಆರಾಧಿಸುವವನು. ಕಲೆ ಎಂಬುದು ಒಂದೇ ಕ್ಷೇತ್ರದ ಸೊತ್ತಲ್ಲ, ಯಾವುದೇ ಕ್ಷೇತ್ರವಿರಲಿ ಅಲ್ಲಿ ಆಸಕ್ತಿ ಮತ್ತು ಶ್ರದ್ಧೆಯಿಂದ ಕೌಶಲವನ್ನು ಧಾರೆಯೆರೆದರೆ ಸಾಧಕನ ಪಟ್ಟ ದೊರೆತು ಸಾಧನೆಯ ತೃಪ್ತಿಯೂ ಶೀಘ್ರವಾಗಿ ದೊರೆಯುತ್ತದೆ. ಇಂತಹ ಸಾಧನೆಯ ಹಾದಿಯಲ್ಲಿರುವವನು ಧಾರವಾಡ ಜಿಲ್ಲೆಯ ಕೇಲಗೇರಿಯ ಯುವಕ ಅಮೃತ್ ಗೌಡ ಭಾವಿಕಟ್ಟಿ. ಹದಿನೆಂಟು ವರ್ಷದ ಯುವಕ ಅಮೃತ್ ಗೌಡ ಭಾವಿಕಟ್ಟಿ ಪ್ರಸ್ತುತ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಓದುತ್ತಿದ್ದಾನೆ. ಯುವಕ ಎಂದಾಕ್ಷಣ ನಮ್ಮ ಮುಂದೆ […]Read More
ಅಯೋಧ್ಯೆಯ ಕನಸು ಅಯೋಧ್ಯೆಯಲ್ಲಿ ರಾಮಮಂದಿರಕಟ್ಟಿಬಿಟ್ಟರು ಬಹಳ ಸುಂದರಮರೆಯದೆ ನೋಡಿರಿ ಜನವೆಲ್ಲ,,,ಹನುಮನ ಭಕ್ತಿಗೆ ಮಿತಿಯಿಲ್ಲ.!!೧!! ಹನುಮನ ಹಾಗೆ ಭಜನೆಯ ಮಾಡುತಮರ್ಯಾದ ರಾಮನ ಮನದಿ ನೆನೆಯುತಪ್ರಭು ಸೀತಾರಾಮನ ಕೊಂಡಾಡಿ,,,ರಾಮ ಭಕ್ತಿಯಲಿ ತೆಲಾಡಿ.!!೨!! ಶಬರಿಯ ಹಾಗೆ ಕಾದು ಕುಳಿತಿಹರುಹನುಮನ ರೀತಿ ಜಪವಗೈದಿಹರುಗುಡಿಯ ನೋಡಲು ಬಂದೇ ಬರುವರುರಾಮ ಕೋಟಿಯನು ಬರೆದು ತರುವರು.!!೩!! ರಾಮ ನವಮಿಗೆ ಪಾನಕ ಹಂಚುವಅನ್ನದಾನದ ಘನತೆ ಮೆರೆಸುವಏಕೈಕ ಧರ್ಮವು ನಮ್ಮದು,ನಿಮ್ಮದುಜಗದ ಒಳಿತಿಗೆ ಬೆಳಕು ಕೊಡುವುದು .!!೪!! ಅಳಿಲು ಸೇವೆಯ ಧರ್ಮರಕ್ಷಕರುರಾಮನ ಗುಡಿಗೆ ಸೇವೆಗೈದಿಹರುಅಕ್ಷತೆ ಕೊಟ್ಟು ಕೂಗಿ ಕರೆದಿಹರುಅಯೋಧ್ಯೆಗೆ ಬನ್ನಿರಿ,,, ಶ್ರೀ […]Read More