ಕುಂಭ ಮೇಳದಲ್ಲಿ ಒಂದು ಸುತ್ತು “ಕುಂಭಮೇಳ” ಈ ಪದ ನಮ್ಮ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಾದ್ಯಂತ ಮನೆಮಾಡಿದೆ. ಹಾಗಾದರೆ ಏನಿದು ಕುಂಭಮೇಳ. ಒಂದಷ್ಟು ವಿಚಾರಗಳನ್ನು ಓದಿ ಕೇಳಿ ತಿಳಿಯುತ್ತಿದ್ದೇವಾದರೂ ಈ ಮೇಳದ ಕುರಿತು ಒಂದಷ್ಟು ಮಾಹಿತಿಗಳು ಸರಳವಾಗಿ ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಭರತ ವರ್ಷವೆಂಬ ನಮ್ಮ ಭಾರತ ದೇಶದ ನಾಲ್ಕು ಸ್ಥಳಗಳಲ್ಲಿ ಪ್ರಮುಖವಾಗಿ ಆಯೋಜಿಸುವ ಈ ಬೃಹತ್ತಾದ ಮೇಳದ ಬಗ್ಗೆ ಓದಿದ್ದೆವಾದರೂ, ಹಲವಾರು ಪ್ರಶ್ನೆಗಳು ಕಾಡುತ್ತಿದ್ದವು. ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ […]Read More
ಪಯಣ ಅರಿವಿರದೆ ಸಾಗುತಿದ್ದ ಬದುಕಿಗೆದುರಾದಅನಿರೀಕ್ಷಿತ ತಿರುವು ನೀನು,ಆ ತಿರುವಲೇ ಮೈಮರೆತು ನಿಂತಅಭಿಸಾರಿಕೆ ನಾನು..! ದೀರ್ಘ ಮಾತುಗಳ ಮೇಳ ಬೇಕಿಲ್ಲಭಾವಗಳ ಸೌರಭ ಮನ ತಟ್ಟಿದೆಯಲ್ಲಮಾಂಗಲ್ಯಕ್ಕೆ ತಲೆಬಾಗಿಕಾಲುಂಗುರದ ಹೆಜ್ಜೆಗಳೊಟ್ಟಿಗೆಸಪ್ತಪದಿಗೆ ಜೊತೆಯಾಗಿ ಅರುಂಧತಿ ನಕ್ಷತ್ರವ ಕಾಣಲುನೋಟಗಳೆರಡು ಬೆರೆತುಬ್ರಹ್ಮಗಂಟಿನ ಮಹತ್ವವ ಅರಿತುಕಿರುಬೆರಳ ಹಿಡಿದು ಬಹುದೂರ ಸಾಗೋಣಉಸಿರ ಹರಿವಲಿ ಜಗವ ಮರೆಯೋಣ.. _ಪಲ್ಲವಿ ಚೆನ್ನಬಸಪ್ಪRead More
ಶ್ರುತಿ-ಸ್ವರದ “ಬೇಸೂರ್” ಕೆಲವು ಕೃತಿಗಳು ಮತ್ತೆ ಮತ್ತೆ ಓದಿಸಿಕೊಳ್ಳುವ ನಮ್ಮ ಬುದ್ಧಿ ವಿವೇಚನೆಯನ್ನು ಸಾಣೆ ಹಿಡಿಯುವ ಚಿಂತನೆಗೆ ಹಚ್ಚುವ ಗುಣವನ್ನು ಹೊಂದಿರುತ್ತವೆ. ಇತ್ತೀಚೆಗೆ ನಾನು ಓದಿದ ಅಂತಹ ಒಂದು ಕೃತಿ, ‘ವೀರಲೋಕ ಪುಸ್ತಕ’ ಪ್ರಕಾಶನದಿಂದ ಪ್ರಕಟವಾಗಿರುವ ‘ಬೇಸೂರ್’ ಎಂಬ ಕಥಾಸಂಕಲನ. ‘ಬೇಸೂರ್’ ವಿದ್ಯಾ ಭರತನಹಳ್ಳಿ ಅವರ ಪ್ರಥಮ ಕಥಾಸಂಕಲನವಾಗಿದೆ. ‘ಬೇಸೂರ್’ 13 ಕಥೆಗಳ ಗುಚ್ಚ. ಎಲ್ಲಾ ಕಥೆಗಳು ಸ್ತ್ರೀ ದನಿಯನ್ನು ಪ್ರತಿನಿಧಿಸುತ್ತವೆ, ಪ್ರತಿಧ್ವನಿಸುತ್ತವೆ.. ಪ್ರತಿಯೊಂದು ಕತೆಯಲ್ಲೂ ಹೆಣ್ಣಿನ ತುಮುಲಗಳು, ಹೋರಾಟಗಳನ್ನು ಕಾಣುತ್ತೇವೆ. ಸ್ತ್ರೀಯು ತನ್ನ ಸ್ವಾತಂತ್ರ್ಯ, ಅಸೀಮತೆಯನ್ನು […]Read More
ಮಾನಸಿಕ ಖಿನ್ನತೆ ಹುಚ್ಚಲ್ಲ ಮಾನಸಿಕ ಖಿನ್ನತೆ ಎಂದರೆ ಹುಚ್ಚಲ್ಲ, ಮನುಷ್ಯನ ದುರ್ಬಲ ಮನಃಸ್ಥಿತಿ ಮತ್ತು ಚಟುವಟಿಕೆಗಳ ಬಗ್ಗೆ ಕಡಿಮೆ ಒಲವಿರುವ ಸ್ಥಿತಿಯನ್ನು ಮಾನಸಿಕ ಖಿನ್ನತೆ ಎನ್ನಲಾಗುತ್ತದೆ. ಖಿನ್ನತೆಯು ಒಬ್ಬ ವ್ಯಕ್ತಿಯ ಆಲೋಚನೆಗಳು, ನಡವಳಿಕೆ, ಪ್ರೇರಣೆ, ಭಾವನೆಗಳು ಮತ್ತು ಆತನ ಯೋಗಕ್ಷೇಮದ ಪ್ರಜ್ಞೆಯ ಮೇಲೆ ಪರಿಣಾಮ ಬೀರಬಹುದು. ಇದು ದುಃಖ, ಆಲೋಚನೆ ಮತ್ತು ಏಕಾಗ್ರತೆಯ ತೊಂದರೆ ಮತ್ತು ಹಸಿವು ಮತ್ತು ನಿದ್ರೆಯ ಪ್ರಮಾಣದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವನ್ನು ಮಾಡಬಹುದು. ಖಿನ್ನತೆಯು ಮನುಷ್ಯನನ್ನು ‘ಕೊಲ್ಲದೇ ಕೊಲ್ಲುವ ರೋಗ’ ಎಂದು ಹೇಳಬಹುದು. […]Read More
ತಿ. ನರಸೀಪುರದ ಕುಂಭಮೇಳ – 2025 ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿ ಪುಣ್ಯ ಸ್ನಾನ ಮಾಡುವ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ. ಇದೊಂದು ಸನಾತನ ಧರ್ಮದ ಅತಿ ದೊಡ್ಡ ಸಾಮೂಹಿಕ ತೀರ್ಥಯಾತ್ರೆ ಎಂದರೆ ತಪ್ಪಾಗಲಾರದು. ಇಲ್ಲಿನ ಪುಣ್ಯ ಸ್ನಾನದಿಂದ ಜೀವನದ ಪಾಪ ಕಳೆದು, ಮುಕ್ತಿ ಸಿಗುವುದೆಂದು ಭಕ್ತರ ನಂಬಿಕೆ. ಅದಕ್ಕೆಂದೇ ವಿಶ್ವದಲ್ಲಿನ ಎಲ್ಲಾ ಭಕ್ತರು ಒಂದೆಡೆ ಸೇರುವುದು. ಆದರೆ ಅಲ್ಲಿಗೆ ಹೋಗಲಾರದೇ ನಿರಾಸೆಗೊಂಡಿದ್ದರೆ ನಮ್ಮ ಮೈಸೂರು ಜಿಲ್ಲೆಯ ತಿ. ನರಸೀಪುರ ದಲ್ಲಿ ಫೆಬ್ರುವರಿ 10 ರಿಂದ […]Read More
ಬಾಳಿದು ಋಣಾನುಬಂಧಗಳ ಸಂತೆ… ಎನಿತು ಜನ್ಮದಲಿ ಎನಿತು ಜೀವರಿಗೆ,ಎನಿತು ನಾವು ಋಣಿಯೊತಿಳಿದು ನೋಡಿದರೆ ಬಾಳು ಎಂಬುದಿದು,ಋಣದ ರತ್ನಗಣಿಯೊ || ಎನ್ನುವ ಜಿ. ಎಸ್. ಶಿವರುದ್ರಪ್ಪ ಅವರ ಮಾತಿನಂತೆ ಈ ಬದುಕು ಅನೇಕ ಋಣಾನುಬಂಧಗಳ ಸಂತೆ. ಹುಟ್ಟಿನಿಂದ ಸಾಯುವವರೆಗೆ ಈ ಬದುಕಿನ ಹಾದಿಯಲ್ಲಿ ಸಾಕಷ್ಟು ಜನ ಹಾಯ್ದು ಹೋಗುತ್ತಾರೆ. ಕೆಲವರು ಪರಿಚಿತರಾದರೆ, ಮತ್ತೆ ಕೆಲವರು ಅಪರಿಚಿತರಾಗೆ ಉಳಿಯುತ್ತಾರೆ. ಋಣ ಎನ್ನುವುದು ಕೆಲವೊಮ್ಮೆ ಹೊರೆಯು ಹೌದು, ಕೆಲವೊಮ್ಮೆ ವರವೂ ಹೌದು. ಯಾರದೋ ಏಕಾಂಗಿತನಕೆ ಜೊತೆಯಾಗುವ ಬೀದಿ ದೀಪ, ಕಣ್ಣೀರ ಬಿಸುಪಿಗೆ […]Read More
ಪುಸ್ತಕ ಬಿಡುಗಡೆ ಹಾಗು ಪುಸ್ತಕ ಮಳಿಗೆ ಪ್ರಾರಂಭೋತ್ಸವ ಪುಸ್ತಕ ಸಂಸ್ಕೃತಿ ಎಷ್ಟು ವ್ಯಾಪಕವಾಗಿ ಬೆಳೆಯುವುದೋ ಅಷ್ಟು ಮಾನವ ಸಂಸ್ಕೃತಿ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಆಶಾ ರಘು ಅವರು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ನಟ, ರಂಗ ನಿರ್ದೇಶಕ ಶ್ರೀನಿವಾಸ ಪ್ರಭು ಅವರು ಉಪಾಸನ ಬುಕ್ಸ್ ನ ಆರಂಭೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯಪಟ್ಟರು. ದಿನಾಂಕ 07.02.2025, ಶುಕ್ರವಾರದಂದು ಆಶಾರಘು ಅವರು ಆರಂಭಿಸಿರುವ ಪುಸ್ತಕ ಮಳಿಗೆ “ಉಪಾಸನ ಬುಕ್ಸ್” ನ ಆರಂಭೋತ್ಸವವಿತ್ತು. ಇದೇ ಸಂದರ್ಭದಲ್ಲಿ ಆಶಾ ರಘು ಅವರ ಎರಡು […]Read More
ನವಮಾಸದಲ್ಲಿ ನವಶಕ್ತಿ ನನ್ನವ್ವ ಕರುಳಕುಡಿ ಒಡಮೂಡಿದ್ದನ್ನುವೈದ್ಯರಿಂದ ಕೇಳಿ ಖುಷಿಯಾದಳುಮೊದಲ ತಿಂಗಳಲ್ಲಿ ನನ್ನವ್ವ ಗಂಡನ ಪ್ರೀತಿ ವಾತ್ಸಲ್ಯದ ಮಾತುಕೇಳಿ ಖುಷಿಯಾದಳು ಎರಡನೇ ತಿಂಗಳಲ್ಲಿತವರು ಮನೆಯ ಬರುವಿಕೆಯ ಸುದ್ದಿ ತಿಳಿದುಖುಷಿಯಾದಳು ಮೂರನೇ ತಿಂಗಳಲ್ಲಿ ಅತ್ತೆ ಮಾವರ ಆರೈಕೆಗೆ ಮನಸೋತುಖುಷಿಯಾದಳು ನಾಲ್ಕನೇ ತಿಂಗಳಲ್ಲಿತವರು ಮನೆಯ ಸೀಮಂತದಲ್ಲಿ ಹಸಿರು ಬಳೆ ಹಸಿರುಸೀರೆಯ ಉಟ್ಟು ಖುಷಿಯಾದಳು ಐದನೇ ತಿಂಗಳಲ್ಲಿ ಅಕ್ಕ ತಂಗಿಯರ ಕಚಗುಳಿಯ ಮಾತುಗಳಿಂದಖುಷಿಯಾದಳು ಆರನೇ ತಿಂಗಳಲ್ಲಿಮೈದುನ ನಾದಿನಿಯರು ನೀಡಿದಹುಳಿ ಹಣ್ಣುಗಳನ್ನು ಮನಸಾರೆ ಸವಿದುಖುಷಿಯಾದಳು ಏಳನೇ ತಿಂಗಳಲ್ಲಿ ಗರ್ಭದಲ್ಲಿರುವ ತನ್ನ ಕಂದನ ಮೆದುಗಾಲು ಒದೆವಾಗಖುಷಿಯಾದಳು […]Read More
ಹೊತ್ತಿಗೆಯ ಮಹತ್ವದ ಹೊತ್ತು ರಾಶಿ ಹೂಗಳ ಮಧ್ಯೆಯಲಿಹೊತ್ತಿಗೆಯು ಇದೆ ನಡುವಲಿ!ಕಂಗಳಿಗಿಂಪು ಪುಷ್ಪಗಳ ನೋಟ..ಬುಧ್ದಿಗೆ ತಂಪು ಪುಸ್ತಕದ ಪಾಠ!! ಪ್ರಕೃತಿಯ ಹಸಿರದೆನಿತು ಸುಂದರನೈಸರ್ಗಿಕ ನೆಲೆಯ ಭಂಡಾರ!ಪುಸ್ತಕದಲಿಹ ಅಮಿತ ಜ್ಞಾನ..ಚಿರಾಯುವದು ಮಾಡಿದಾಗ ಮನನ!! ಸುಂದರ ಗಿರಿ ಶಿಖರದೊಳುಕಳೆಯುವ ಸಮಯವೇ ಚೆಂದ!ಹೊತ್ತಿಗೆಯ ನಿತ್ಯ ಓದುತಿರಲು..ಮನವಿರಲು ಅದರಲಿ,ಬಿಡದೀ ಬಂಧ!! ಕಣ್ತೆರೆದು ಹೂಬನವ ನೋಡಿದಾಗನಿಸರ್ಗವೆಂದಿಗೂ ಉಲ್ಲಾಸಮಯ!ಮನತೆರೆದು ಪುಸ್ತಕವ ಓದಿದಾಗ..ಜೀವನಪಾಠವು ಆನಂದಮಯ!! ಸುಮನಾ ರಮಾನಂದಮುಂಬೈRead More
ಶಾಯಿರಿ ಹಸಿರಾಗಿರಲಿ ಹಣ್ಣ ಹಣ್ಣ ಮುದುಕಿಯಾದ್ರೂನಿನ್ನ ಮುಖದಾಗಿನ ನಗು ಮಾಸದಂಗಿರ್ಲಿ!ನಾವಿಬ್ರೂ ಹಣ್ಣ ಹಣ್ಣ ಮುದುಕರಾದ್ರೂನಮ್ಮಿಬ್ಬರ ಪ್ರೀತಿ ಮಾತ್ರ ಸದಾ ಹಸಿರಾಗಿರ್ಲಿ!! ಚಂದ ಕಾಣತಿ ಸಿಟ್ಟ ಮಾಡಕೊಂಡಾಗೆಲ್ಲಾ ನೀನಎಷ್ಟ ಚಂದ ಕಾಣತೀ ಅಂದ್ರಇಡೀ ದಿನ ನಿನಗ ಸಿಟ್ಟಬರಸಗೊಂತನ ಇರಬೇಕನ್ನಸತೈತಿ!! ಬರ್ತೀನಿ ಪ್ರತೀ ರಾತ್ರಿ ಸ್ವಲ್ಪ ಕಿಡಕಿ ವಾರಿ ಮಾಡಿನನ್ನ ಹೆಸರು ತಗೊಂಡ ಮಲಗು !ನಿನ್ನ ಬಾಜೂಕ ಸ್ವಲ್ಪ ಜಗಾ ಬಿಟ್ಟೀರುತಪ್ಪದ ನಿನ್ನ ಕನಸನ್ಯಾಗ ಬರ್ತೀನಿ ! ಚಡಪಡಿಕೆ ನನ್ನ ಮನಸನ್ಯಾಗ ನಿನ್ನ ಹೆಸರುಅದೆಂಗ ಗಟ್ಟಿಯಾಗಿ ಅಚ್ಚೊತ್ತೇತಿ ಅಂದ್ರ ,ನಿನ್ನ […]Read More