ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ – ಹಿನ್ನಲೆ – ಪುಸ್ತಕ ಬಿಡುಗಡೆ ಡಾ|| ಟಿ. ಆರ್. ಅನಂತರಾಮು ರವರು ಸಂಪಾದಿಸಿರುವ “ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು” ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ “ಹರಿವು ಬುಕ್ಸ್” ವತಿಯಿಂದ ಸೆಪ್ಟೆಂಬರ್ 3 ರ ಭಾನುವಾರದಂದು ಜಯನಗರದಲ್ಲಿರುವ ಜಯರಾಮ ಸೇವಾ ಮಂಡಳಿ ಯಲ್ಲಿ ಬೆಳಿಗ್ಗೆ 9:30 ಕ್ಕೆ ನೆರವೇರಲಿದೆ. ಕರ್ನಾಟಕದಲ್ಲಿ ನೆಲೆಸಿರುವ ಸ್ಮಾರ್ತ ಬ್ರಾಹ್ಮಣ ಪಂಗಡಗಳ ಕುರಿತು ಅಧ್ಯಯನ ನಡೆಸಿ ಮಾಹಿತಿಗಳನ್ನು ಕಲೆಹಾಕಿ ಪುಸ್ತಕದ ರೂಪದಲ್ಲಿ ತರಲಾಗುತ್ತಿದೆ. ನಾಡಿನ ಖ್ಯಾತ ಸಾಹಿತಿ ಗಳು ಮತ್ತು […]Read More
ಮುಸ್ಸಂಜೆಯ ಸೊಬಗಲಿ.. ಬಾನಲಿ ಮೂಡಿದ ರಂಗಿನೋಕುಳಿಗೆಮನದುಂಬಿ ನಕ್ಕಂತಿದೆ ವಸುಂಧರೆ!ಮೇಘಗಳು ಚಲಿಸುವ ಆ ಪರಿಗೆ..ಸುರಿಸಲಿವೆ ಚಟಪಟನೆ ವರ್ಷಧಾರೆ!! ನಿಗಿನಿಗಿ ಕೆಂಡದಂತಹ ಬಿಸಿಯಉಡಿಯಲಿರಿಸಿ ಬಂದಿಹ ನೇಸರ!ಮುಸ್ಸಂಜೆಯ ವೇಳೆಗೆ ನೆಲ ತಂಪಾಗಿಸಿ..ಕೂಗಿ ಕರೆದಂತಿದೆ ಧರಣಿಯ ಹೆಸರ!! ಮಾನಿನಿಯ ನೊಸಲ ಬಿಂದಿಯಂತೆಕೆಂಪಾಗಿ ಮೂಡುವನವ ಬೆಳಗಿನಲಿ!ತಾ ಪಶ್ಚಿಮಕೆ ನಡೆದಿರಲು ಮುಗ್ಧನಂತೆ..ಅರಿತು ಸೊಂಪಾಗಿದೆ ಅವನಿ ಬೈಗಿನಲಿ!! ದುಡಿದ ಜನರು ದಣಿದು ವಿರಮಿಸಲುಹೊರಟಿರಲು ತಮ್ಮ ನೆಚ್ಚಿನ ಗೂಡಿಗೆ!ನಿಶೆ ಅಳಿದು ಮರುದಿನವು ಮೂಡಲು…ಮತ್ತೆ ಲೋಕಕೆ ಆ ದಿನಕರನೇ ದೀವಿಗೆ!! ಸುಮನಾ ರಮಾನಂದRead More
ಆ ಒಂದು ಕ್ಷಣ ಅಂಕಣ ಭಾಗ – 8 ನಮ್ಮ ಜೀವನದ ದಿಕ್ಕನ್ನು ಬದಲಿಸಿ ಬಿಡುವಂತಹ ನಿರ್ಧಾರ ಆಗುವುದು ಕೇವಲ ಒಂದು ಕ್ಷಣದಲ್ಲಿ. ನಾವು ಆ ಕ್ಷಣಕ್ಕೆ ತೆಗೆದುಕೊಳ್ಳುವ ಒಂದೇ ಒಂದು ನಿರ್ಧಾರದಿಂದಾಗಿ ನಮ್ಮ ಇಡೀ ಬದುಕು ನಿರ್ಧಾರವಾಗಬಹುದು. ನಮ್ಮ ಬದುಕಿನ ಅನೇಕ ಬದಲಾವಣೆಗಳು ಆ ಒಂದು ನಿಮಿಷದಲ್ಲಿ ಅಡಗಿಕೊಂಡರುತ್ತದೆ. ಆ ಒಂದು ಕ್ಷಣದ ನಿರ್ಧಾರಗಳು ಒಂದಕ್ಕೊಂದು ತಳಕು ಹಾಕಿಕೊಂಡಿರುತ್ತವೆ ಉದಾಹರಣೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಬೇಗ ಬೇಗನೆ ಪರೀಕ್ಷೆಯನ್ನು ಬರೆದು […]Read More
ಮೇಘದೂತ ಇಳೆಗೆ ಬಿದ್ದ ಮೊದಲ ಹನಿ ಮಳೆಮುತ್ತಿನ ರೂಪದಾ ಸ್ವಾತಿಮಳೆರೇವತಿ ಭರಣಿ ಪುಷ್ಯದಾ ಮಳೆ ಮಳೆಯಾದರೆ ತಂಪಾಗುವುದು ಭೂಮಿಯೊಡಲುಘನೀಭೂತವಾಗಲು ಜಲರಾಶಿಯ ಕಡಲುಮನುಷ್ಯನ ಮೊಗದಲಿ ಸಂತಸದಾ ಹೊನಲು ಚಿತ್ತೆ ಮಖೆಯರ ಆರ್ಭಟವ ತಂದವರಾರುಜಲರಾಶಿಯ ಹಿಡಿದಿಟ್ಟು ಕೊಂಡವರಾರುಸಮಚಿತ್ತದಲಿ ಮಳೆಯ ಸುರಿಸಿದವರಾರು ಉಪ್ಪು ನೀರನುಂಡು ಬಂದವ ನೀನುನಮಗೆಲ್ಲ ಸಿಹಿನೀರ ಕೊಟ್ಟವ ನೀನುನಿಗಿನಿಗಿ ಸೂರ್ಯನ ತಾಪ ತಣಿಸಿದವ ನೀನು ಒಮ್ಮೆ ಶಿವನಂತೆ ಕಾಣಿತ್ತೀಯಂತೆಮತ್ತೊಮ್ಮೆ ದೇಶದ ಭೂಪಟದಂತೆನಿನ್ನಾಗಮನವೇ ಎಲ್ಲರಿಗೂ ಹರುಷವಂತೆ ಓ ಮೇಘರಾಯ ಹೇಗೆ ಸಲ್ಲಿಸಲಿ ವಂದನೆನೀನೇ ನಮ್ಮ ಪಾಲಿನ ದೇವದೂತನು ಸಿ.ಎನ್. ಮಹೇಶ್Read More
ಪರಸ್ಪರ ರಕ್ಷಣೆಯ ರಕ್ಷಾ ಬಂಧನ ರಕ್ಷಾ ಬಂಧನವನ್ನು ಸಹೋದರ ಮತ್ತು ಸಹೋದರಿಯ ಬಾಂಧವ್ಯದ ಸಂಕೇತವಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಭ್ರಾತೃತ್ವದ ನಡುವಿನ ಪ್ರೀತಿಯ ಸಂಕೇತ ಮತ್ತು ಪರಸ್ಪರರನ್ನು ರಕ್ಷಣೆ ಮಾಡುವ ಮತ್ತು ಪರಸ್ಪರ ಮನಸ್ತಾಪವನ್ನು ಮರೆಯುವ ಸಂಕಲ್ಪವನ್ನು ಮಾಡುವ ಉದ್ದೇಶದಿಂದ ಆಚರಿಸಲಾಗುತ್ತದೆ. ಇದು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬವಾಗಿದ್ದು, ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಕ್ಷಾ ಬಂಧನವನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ […]Read More
ಶಿಲೆಯೊಳಗಿನ ಚೇತನ ತಮ್ಮೊಳಗಿನ ಹೊಂಬೆಳಕನಂದಿಸಿ, ಕತ್ತಲ ಹಾದಿಯಲಿಕಂದೀಲಿಗಾಗಿ ಕಾಯುತ್ತನಿಂತಹ ಅಹಲ್ಯೆಯರು ! ಘನ ಗಾಂಭೀರ್ಯದನಡುವೆಯೂ, ಅಚ್ಚರಿಯಕಂಗಳ ಮತ್ತಷ್ಟರಳಿಸಿನೋಡುವ ಅಹಲ್ಯೆಯರು! ತಾವು ಮಾಡಿದ-ಮಾಡದಪಾಪಕ್ಕೆ ಮನನೊಂದು,ಕಲ್ಲಿನಂತೆ ಕುಳಿತು ತಪಗೈವಶಾಪಗ್ರಸ್ತ ಅಹಲ್ಯೆಯರು! ಮನೆಯೊಳ ಹೊರಗೆದುಡಿದರೂ, ಎಲ್ಲರಿಂದಅಂದಾಜಿಸಲ್ಪಡುತ್ತಿರುಸೌಮ್ಯ ಅಹಲ್ಯೆಯರು! ಒಡಲಾಳದಿ ಕುದಿವ,ಹೊಯ್ದಾಡುತ್ತಿರುವ,ತಳಮಳಿಪ ಪರ್ವತವಹೊತ್ತ ಅಹಲ್ಯೆಯರು ! ನವ ಭಸ್ಮಾಸುರರಕೈಯೊಳಗೆ ಸಿಕ್ಕಿ ಬಿದ್ದು,ಸುಟ್ಟು ಕರಕಲಾಗುತ್ತಿರುವನತದೃಷ್ಟ ಅಹಲ್ಯೆಯರು ! ಅವತಾರ ಪುರುಷನಆಗಮನಕೆ, ಆತನ ಚರಣಸ್ಪರ್ಶಕೆ ಕಾಯುತಿರುವಆಧುನಿಕ ಅಹಲ್ಯೆಯರು !! ಶ್ರೀವಲ್ಲಿ ಮಂಜುನಾಥRead More
ರೈಲು ಪ್ರಯಾಣಕ್ಕೆ ವಿಸ್ಟಾಡೋಮ್ ಸ್ಪರ್ಶ ರೈಲು ಪ್ರಯಾಣವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೆಚ್ಚು ಕುಲುಕಾಟವಿಲ್ಲದ ಸುಖ ನಿದ್ರೆಯ ಪ್ರಯಾಣಕ್ಕೆ ಎಲ್ಲರೂ ಹೆಚ್ಚಾಗಿ ಅವಲಂಬಿಸುವುದು ರೈಲನ್ನೇ. ಭಾರತೀಯ ರೈಲ್ವೆಯಲ್ಲಿ ಇಂದು ಹಲವಾರು ವಿನೂತನ ಆವಿಷ್ಕಾರಳು ಬಂದಿದ್ದು, ಅತ್ಯಂತ ವೇಗದ ತೇಜಸ್, ಬುಲೆಟ್ ರೈಲು, ವಿದ್ಯುತ್ ರೈಲು ಮತ್ತು ಐಶಾರಾಮಿ ಗೋಲ್ಡನ್ ರಥ್ ಇತ್ಯಾದಿ ಪ್ರಮುಖವಾದವುಗಳು. ಈ ಸಾಲಿಗೆ ಇದೀಗ ಹೊಸ ಮಾದರಿಯೊಂದು ಸೇರ್ಪಡೆಯಾಗಿದ್ದು, ಅದುವೇ ವಿಸ್ಟಾಡೋಮ್ ರೈಲು. ಸಾಮಾನ್ಯ ರೈಲು ಸಂಪೂರ್ಣ ಕಬ್ಬಿಣದ ಬಾಡಿಯನ್ನು ಹೊಂದಿದ್ದರೆ, ವಿಸ್ಟಾಡೋಮ್ ರೈಲು ಸಂಪೂರ್ಣ […]Read More
ಹೆಣ್ಣು ಮತ್ತು ಆರೋಗ್ಯ -5 ಹೈ ರಿಸ್ಕ್ ಪ್ರೆಗ್ನೆನ್ಸಿ ಅಥವಾ ಹೆಚ್ಚಿನ ಅಪಾಯದ ಗರ್ಭಧಾರಣೆ ಈ ವಿಷಯದ ಬಗ್ಗೆ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.ಈ ಹೆಚ್ಚಿನ ಅಪಾಯ ತಾಯಿಯಿಂದ ಹಾಗೂ ಮಗುವಿನಿಂದ ಎರಡರಿಂದಲೂ ಆಗುವ ಸಾಧ್ಯತೆ ಇದೆ. 1- ಮೊದಲನೇ ತಿಂಗಳಲ್ಲಿ ಭ್ರೂಣವು ಗರ್ಭಾಶಯದ ಒಳ ಗೋಡೆಗೆ ಅಂಟಿಕೊಳ್ಳುವಾಗ ಕೆಲವೊಮ್ಮೆ ಕೆಳಗಿನ ಭಾಗದಲ್ಲಿ ಅಂಟಿಕೊಳ್ಳುತ್ತದೆ. ಅದನ್ನು ಪ್ಲಸೆಂಟಾ ಪ್ರೀವಿಯ ಅನ್ನುತ್ತಾರೆ. ಇದು ಮುಂದುವರೆದು, ನಾಲ್ಕು ಐದು ತಿಂಗಳಲ್ಲೂ ಹೀಗೆಯೇ ಕೆಳ ಭಾಗದಲ್ಲಿ ಇದ್ದರೆ, ಆರು ಏಳು ತಿಂಗಳಗಳಲ್ಲಿ ರಕ್ತಸ್ರಾವ […]Read More
ಕಾಲನ ಕರೆ ಕಾಲವೆಂಬೊ ಕಾಳಿಂಗಸರ್ಪವು ಕಚ್ಚಲುಕಾಯುತಿದೆ ಬದುಕು ಕಸಿಯಲು..!ಹಾವಾಡಿಗನಂತೆ ಯಾರಿಲ್ಲಅದನು ಹಿಡಿದು ಸದೆಬಡಿಯಲುತಯಾರಾಗಿದೆ ಬಾಳು ನಿರ್ಗಮಿಸಲು!! ಕಾಲವೆಂಬೊ ಚಕ್ರವು ಶತಪಥ ಓಡಿದೆಯಾರ ಅಪ್ಪಣೆಗೂ ತಾ ಕಾಯದೆ..!ಅದನು ತಡೆಯುವವರಾರಿಲ್ಲಸಿಕ್ಕಸಿಕ್ಕ ಎಡರುಗಳಲಿ ನಿಲ್ಲದೆಮನಬಂದತ್ತ ತಾ ಅವಸರದಿ ಚಲಿಸಿದೆ!! ಕಾಲವೆಂಬೊ ಕುಡುಗೋಲದು ಬೀಸಿದೆತಪ್ಪಿಸಿ ಓಡುವವರ ಕ್ಷಣದಿ ಹಿಡಿದಿದೆ!ಅದನು ಮೆಟ್ಟಿ ತುಳಿಯುವವರಾರಿಲ್ಲಗಾಳಿಯಲಿ ತೂರಿಯೂ ತಾಕದೆತಾಕಿದರೀ ಬಗ್ಗದೆ ನಡೆದಿದೆ!! ಕಾಲವೆಂಬೊ ಕಹಿಸತ್ಯವು ಆಗಮಿಸಿದೆಯಾರೂ ನುಂಗದ ಕಹಿಬೇವಿನಂತಿದೆ..!ತನ್ನನರಿತು ನಿಯಂತ್ರಿಸುವವರಾರಿಲ್ಲ..ಆಸರೆ ತಪ್ಪಿದ ಬಾಳು ಸೊರಗಿದೆಬಾಳಿನ ಆಸರೆಯು ಮರುಗಿದೆ!! ಸುಮನಾ ರಮಾನಂದRead More
ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 7 ಒಂದು ನಿಮಿಷವೆಂದರೆ ಅದು 60 ಸೆಕೆಂಡುಗಳು ಮಾತ್ರ ಎಂದುಕೊಳ್ಳಬಹುದು.ನಾವೇನಾದರೂ 60 ಸೆಕೆಂಡುಗಳಲ್ಲಿ ಏನು ಮಾಡಲು ಸಾಧ್ಯ ಎಂದು ಸುಮ್ಮನೆ ಕುಳಿತುಬಿಟ್ಟರೆ, ಆ ಕ್ಷಣಗಳೇ ನಮ್ಮ ಬದುಕಿನ ಮಹತ್ವದ ಘಟ್ಟವೂ ಆಗಿರಬಹುದು, ಮೈ ಮರೆತು ಕುಳಿತರೆ ಆ ಕಳೆದು ಹೋದ ಕ್ಷಣವು ಮತ್ತೊಂದು ಸಾರಿ ತಿರುಗಿ ಬಾರದು. ಬದುಕಿನಲ್ಲಿ ನಾವು ಯಾವುದಾದರೂ ಗುರಿಯನ್ನು ಇಟ್ಟುಕೊಂಡು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೆ ಅಂತಿಮವಾದ ಕೆಲವು ಕ್ಷಣಗಳು ಬಹಳ ಮಹತ್ವವನ್ನು ಪಡೆದುಕೊಂಡಿರುತ್ತದೆ […]Read More