ಪಿತೃಪಕ್ಷ – ಮಹಾಲಯ ಅಮಾವಾಸ್ಯೆ

ಪಿತೃಪಕ್ಷ – ಮಹಾಲಯ ಅಮಾವಾಸ್ಯೆ ಭಾದ್ರಪದ ಮಾಸದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ 15 ದಿನಗಳನ್ನು ಪಿತೃಪಕ್ಷ ಅಥವಾ ಪಕ್ಷಮಾಸವೆನ್ನುತ್ತಾರೆ. ಈ ಸಮಯದಲ್ಲಿ ಪಿತೃಗಳು ತಮ್ಮ ಮಕ್ಕಳಿಂದ ಪಿಂಡ, ತಿಲೋದಕಗಳನ್ನು ಎದುರು ನೋಡುತ್ತಿರುತ್ತಾರೆ. ಈ ಹದಿನೈದು ದಿನಗಳಲ್ಲಿ ಯಾರು ಶ್ರಾದ್ಧವನ್ನು ಮಾಡುತ್ತಾರೋ ಅವರನ್ನು ಸಂತೃಪ್ತರಾದ ಪಿತೃಗಳು ಉತ್ತರೋತ್ತರ ಅಭಿವೃದ್ದಿಯಾಗಲೆಂದು ಆಶೀರ್ವಾದ ಮಾಡುತ್ತಾರೆ. ಪಿತೃಗಳ ಆಶೀರ್ವಾದವಿದ್ದರೆ ಮಕ್ಕಳು ಮೊಮ್ಮಕ್ಕಳು ಆಯುರಾರೋಗ್ಯ ಆಯುಷ್ಯಗಳನ್ನು ಪಡೆದು ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ನಮಗೆ ಜನ್ಮನೀಡಿ ನಾವು ಈಗಿರುವ ಪರಿಸ್ಥಿತಿಗೆ ನಮ್ಮ ಪಿತೃಗಳ ಕೊಡುಗೆ ಬಹಳಷ್ಟಿರುತ್ತದೆ, […]Read More

ಸದಾಶಯ

ಸದಾಶಯ ಯಾರ ಶಾಪ ತಟ್ಟಿತೋ,ಅದಾರ ಕಣ್ಣು ತಾಗಿತೋ.ನಂದನದಂತಿದ್ದ ಮನೆಯೇಕೆಭೂತ ಬಂಗಲೆಯಾಯಿತೋ ? ರಾಮನನ್ನನುಸರಿಸುವಅನುಜರಂತಿದ್ದವರಿಂದು,ತಾವೇ ರಾವಣರಂತೆಬಾಳಲೇಕಾದರೋ ? ಜೇನುಗೂಡಿನಂತಿದ್ದಆ ಮನೆಯೊಗ್ಗಟ್ಟಿಗೆ,ದ್ವೇಷವೆಂಬ ಕಲ್ಲನ್ನುಅದಾರೊಗೆದರೋ ? ಕೇರುವ ಮೊರದಂತೆದೋಷವ ಬಿಟ್ಟು ಗುಣಗ್ರಹಿಸುತ್ತಿದ್ದವರು, ಜರಡಿಯಂತೆದೋಷ ಸಂಗ್ರಹಕರೇಕಾದರೋ ? ಇರುವ ಸುಖವನು ತೊರೆದು,ಮರೀಚಿಕೆಯನ್ನರಸುತ್ತಾ,ಅವರವರಲ್ಲೇ ಹೊಡೆದಾಡಿಪರಸ್ಪರ ಶತೃಗಳೇಕಾದರೋ ? ವೈರತ್ವ ಕರಗಿ, ಮನದ ಕೊಳತಿಳಿಯಾಗಿ, ಮನೆ-ಮನ-ಗಳೊಂದಾಗಿ, ಹಿಂದಿರುಗಲಾಮನೆಯ ಸಿರಿ ವೈಭವ !! ಶ್ರೀವಲ್ಲಿ ಮಂಜುನಾಥRead More

ದೂರದೂರಿನ ಪ್ರಯಾಣಕ್ಕೆ ಪೂರ್ವ ತಯಾರಿಯಿರಲಿ

ದೂರದೂರಿನ ಪ್ರಯಾಣಕ್ಕೆ ಪೂರ್ವ ತಯಾರಿಯಿರಲಿ ದೂರದ ಊರಿಗೆ ಪ್ರಯಾಣ ಮಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರಯಾಣ ಮತ್ತು ಪ್ರವಾಸವೆಂದರೆ ಹೆಚ್ಚಿನೆಲ್ಲರಿಗೂ ಅಚ್ಚುಮೆಚ್ಚು ಹಾಗೂ ಖುಷಿಯ ವಿಚಾರ. ಪ್ರವಾಸವೆಂದರೆ ವಾಹನವಿಲ್ಲದಿದ್ದರೆ ಅದು ಪ್ರವಾಸವೇ ಅಲ್ಲ ಎಂಬಂತಾಗಿದ್ದು, ಪ್ರವಾಸದ ಸಂದರ್ಭದಲ್ಲಿ ವಾಹನದೊಂದಿಗೆ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಫೋಟೋ ತೆಗೆಸಿಕೊಳ್ಳುವುದೇ ಒಂದು ವಿಶೇಷವಾದ ಸಂದರ್ಭವಾಗಿ ಮಾರ್ಪಟ್ಟಿದೆ. ಪ್ರಯಾಣಕ್ಕೆ ಬಹುತೇಕರು ಸ್ವಂತ ವಾಹನ ಹಾಗೂ ಬಾಡಿಗೆ ವಾಹನವನ್ನು ಬಳಸುತ್ತಾರೇನೋ ನಿಜ ಆದರೆ ವಾಹನವನ್ನು ಯಾವ ರೀತಿ ಚಲಾಯಿಸ್ತಾರೆ ಎಂಬುವುದು ಮುಖ್ಯವಾಗುತ್ತದೆ. ವಾಹನಗಳು […]Read More

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಾಲು ಮರದ ತಿಮ್ಮಕ್ಕ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದಾಗ ಆತುರಗೆಟ್ಟ ಸ್ವಯಂ ಘೋಷಿತ ಮೇಧಾವಿಗಳು ತಮ್ಮ ವದಂತಿಗಳಲ್ಲೇ ಅವರನ್ನು ಸಾಯಿಸಿಬಿಟ್ಟಿದ್ದರು. ತಿಮ್ಮಕ್ಕನವರ ಆರೋಗ್ಯದ ಕಾಳಜಿಗಿಂತ ಅವರು ಕೊನೆಯುಸಿರೆಳೆದರು ಎಂಬ ಸುದ್ದಿಯನ್ನು ನಾವೇ ಮೊದಲು ಪಸರಿಸಬೇಕೆಂಬ ಹಪಾಹಪಿ ಅವರುಗಳಲ್ಲಿದ್ದಂತೆ ಭಾಸವಾಯಿತು. ಕೊನೆಗೂ ತಿಮ್ಮಕ್ಕನವರ ಅರೋಗ್ಯ ಚೇತರಿಸಿಕೊಂಡಿದೆ ಎಂಬ ಸುದ್ಧಿಯನ್ನು ಅವರ ಸಮೀಪವರ್ತಿಗಳು ಹಾಗು ಕುಟುಂಬದವರು ಪತ್ರಿಕಾ ಪ್ರಕಟಣೆ ಕೊಡುವಷ್ಟರಲ್ಲಿ ಸಾಕಾಯಿತು. ಹೆದ್ದಾರಿಯ ರಸ್ತೆಗಳಲ್ಲಿ ಎಂತಹ ಐಷಾರಾಮಿ ಹವಾನಿಯಂತ್ರಿತ […]Read More

ಪ್ರೇಮದ ಋಣ

ಪ್ರೇಮದ ಋಣ ಅವನನ್ನು ನನ್ನಾತ್ಮದೊಳಗೆಇಳಿಸಿಕೊಳ್ಳದಿದ್ದರೆಹುಟ್ಟುತ್ತಿದ್ದವೇಇಷ್ಟೆಲ್ಲಾ ಕವಿತೆಗಳು ಅವನೆದೆಯೊಳಗೆನನ್ನ ಹೆಜ್ಜೆ ಗುರುತುಮೂಡಿವೆಯೋ ಇಲ್ಲವೋಬೇಕಿಲ್ಲ ನನಗೆ ಅವನನ್ನೆಂದಿಗೂಬೈಯ್ಯಲಾರೆ ಬೇಡಲಾರೆಅವನಿಂದಲೇ ಹುಟ್ಟಿದಕವಿತೆಗಳ ಋಣನನ್ನ ಮೇಲಿರುವಾಗ ಬರೆದ ಕವಿತೆಗಳಲ್ಲೊಂದಾದರೂಅವನ ಕಣ್ಣಿಗೆ ಬಿದ್ದುಮನದಲ್ಲೊಮ್ಮೆ ನನ್ನ ನೆನಪುಹಾದು ಹೋಗಿದ್ದರೂ ಸಾಕುಈ ಜನ್ಮದ ಋಣ ಕಳೆದಂತೆ ಸೌಜನ್ಯ ದತ್ತರಾಜRead More

C/O ಚಾರ್ಮಾಡಿ – ಪ್ರೇಮ ಪ್ರಕೃತಿಯ ಪಯಣ

C/O ಚಾರ್ಮಾಡಿ – ಪ್ರೇಮ ಪ್ರಕೃತಿಯ ಪಯಣ ಪುಸ್ತಕ : C/O ಚಾರ್ಮಾಡಿಲೇಖಕರು : ಸಚಿನ್ ತೀರ್ಥಹಳ್ಳಿಪ್ರಕಾರ : ಕಾದಂಬರಿಪ್ರಕಾಶಕರು : ಸ್ವಪ್ನ ಬುಕ್ ಹೌಸ್ ಇದನ್ನ ನೀವು ಓದೋಕೆ ಶುರು ಮಾಡಿದಿರಿ ಅಂದರೆ ಪೂರ್ತಿ ಓದೋವರೆಗು ಸ್ವೈಪ್ ಮಾಡೋ ಆಗಿಲ್ಲ. ಇಲ್ಲ ಪೂರ್ತಿ ಓದೋಕೆ ಆಗಲ್ಲ ,ಟೈಂ ಇಲ್ಲ, ಅಂದ್ರೆ ಇವಾಗ್ಲೇ ಸ್ಕಿಪ್ ಮಾಡಿ ಧನ್ಯವಾದ. ಈ ಚಳೀಲಿ ಬೆಳಗ್ಬೆಳಿಗ್ಗೆ ಐದ್ ಗಂಟೆಗೆ ಎದ್ದು ವರ್ಷ ಪೂರ್ತಿ ನೋಡದೆ ಇರೋ ಬುಕ್ಸ್ ಎಲ್ಲಾ ಹುಡುಕಿ ಮೀಟಿಂಗ್ […]Read More

ರಾಧಾಮಾಧವರ ದಿವ್ಯಪ್ರೀತಿ

ರಾಧಾಮಾಧವರ ದಿವ್ಯಪ್ರೀತಿ ಕೃಷ್ಣರಾಧೆಯರ ಒಲವಧಾರೆಯಕಂಡು ಲೋಕದಿ ಏನೊ ಪುಳಕ..!ರಾಧಾಮಾಧವನೆಂಬ ಜಗ ನೀಡಿದಹೆಸರಲಿ ಇಹದಲ್ಲ ಯಾವ ಕಳಂಕ..!! ಮುಕುಂದನ ನೀಲಿ ಕಂಗಳಲಿಕಂಡಿಹಳು ರಾಧೆ ಅನಂತಪ್ರೀತಿ..!ಬಲ್ಲವಳಿವಳು ಮಾತ್ರವೇ ಅದರಲಡಗಿಹಭವ್ಯ ಅನುರಾಗದ ದಿವ್ಯನೀತಿ!! ಮುರಾರಿಗೋ ಅವಳೆಂದರೆಆತ್ಮ,ಜೀವಗಳ ಸವಿಭಾವದೊರತೆ..!ಬಾಳಲಿ ಅವನಿಗಿಲ್ಲ ಅವಳಎದಿರು ಯಾವುದಕೂ ಕೊರತೆ!! ಗೋಪಿಕೆಯರು ಸಾವಿರಾರಿದ್ದರೂಮೋಹನನಿಗೆ ರಾಧೆಯೇ ಪ್ರಾಧಾನ್ಯ..!ನೀಡಿಹನು ತನ್ನ ಹೃದಯದಂತರಾಳವಅವಳ ಒಲವೇ ಅವನಿಗೆ ಅನನ್ಯ!! ಕಳೆದ ಜನ್ಮಜನ್ಮಗಳಲಿ ಆಗಿದೆಇವರೀರ್ವರ ಆತ್ಮಾನುಸಂಧಾನ..!ಲೋಕಕಿಂದಿಗೂ ಮಾದರಿರಾಧೆಗೋವಿಂದರ ಪ್ರೀತಿಯ ಕಥನ!! ಸುಮನಾ ರಮಾನಂದRead More

ಕಣ್ಮನ ಸೆಳೆಯುವ ನಟನಾ ಪ್ರತಿಭೆ – ಲಕ್ಷ್

ಬಹಳ ಹಿಂದೆ ಚಿತ್ರರಂಗದ ಕದ ತಟ್ಟಬೇಕಾದರೆ ಆಗಿನ ನಟನಾಸಕ್ತರು ರಂಗಭೂಮಿ ತಂಡದಲ್ಲಿ ಸೇರಿಕೊಂಡು ರಂಗ ದಿಗ್ಗಜರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಹತ್ತು ಹಲವಾರು ಪಾತ್ರಗಳಲ್ಲಿ ನಟಿಸಿ ಅಥವಾ ತೆರೆಯ ಹಿಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಂಗಭೂಮಿಯಲ್ಲಿ ಗುರುತಿಸಿಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು, ರಂಗಭೂಮಿಯ ಜೊತೆಗೆ ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರವಹಿಸಿ ಅದರಲ್ಲೇ ತಮ್ಮ ಪ್ರತಿಭೆಯನ್ನು ತೋರಿಸಿ ನಂತರ ಚಿತ್ರರಂಗದ ನಿರ್ದೇಶಕ ನಿರ್ಮಾಪಕರ ಕಣ್ಸೆಳೆದು ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದರು. ಡಾ. ರಾಜಕುಮಾರ್, ಅನಂತನಾಗ್, ಶಂಕರ್ ನಾಗ್, ಇಂದಿನ ಯಶ್, ಶರಣ್, […]Read More

ಮುನಿಸೇಕೆ

ಮುನಿಸೇಕೆ ಮೊದಲಿರುಳ ಆರತಿಯಹಸಿಯಿನ್ನು ಆರಿಲ್ಲನಿಮಗೆ ಮುನಿಸೇಕೆಂದುನನಗೆ ಅರಿವಾಗದು! ಕಟ್ಟಿದಾ ಕಂಕಣದಗಂಟಿನ್ನೂ ಬಿಚ್ಚಿಲ್ಲಚಪ್ಪರದ ಹೂವುಗಳಘಮವು ಮಾಸಿಲ್ಲ; ಹೊರಗೆ ಹೋಗೋಣವೇ?ಎಂದು ಕೇಳಿದ ನಿಮಗೆನಾ ಬೇಡವೆಂದುದಕೆನೊಂದಿರುವಿರೇ? ಅಳಿಯನಾ ಮಾತನ್ನುಮಾವನೊಪ್ಪದೆ ಇಹರೆ,ಒಪ್ಪಿಸುವೆ ಅಪ್ಪನನುಮುನಿಯದಿರಿ ನೀವು; ತಮ್ಮ-ತಂಗಿಯರಿನ್ನುನಿಮ್ಮ ಕಾಡುವುದಿಲ್ಲ,ನಾ ಬರುವೆ ನಿಮ್ಮೊಡನೆಗೊಡವೆ ಬೇಡಿನ್ನು; ನನ್ನ ಗೆಳತಿಯರೆಲ್ಲನನ್ನಂತೆ ಅತಿಸಾಧು,ಕೊಂಕು ಮಾತುಗಳನ್ನುಆಡರವರೆಂದೂ ; ನನ್ನ ಅಮ್ಮನ ಕಂಡುನೀವೊಮ್ಮೆ ಹೇಳಿಬಿಡಿ,ಅವಳೊಪ್ಪಿದರೆ ಸಾಕುಬರುವೆ ನಿಮ್ಮೊಡನೆ!! ಶ್ರೀವಲ್ಲಿ ಮಂಜುನಾಥಬೆಂಗಳೂರುRead More

ಭೋರ್ಗರೆವ ಎರ್ಮಾಯಿ ಜಲಪಾತ

ಭೋರ್ಗರೆವ ಎರ್ಮಾಯಿ ಜಲಪಾತ ಮಳೆಗಾಲ ಬಂತೆಂದರೆ ಸಾಕು ಮಳೆಗಾಲದುದ್ದಕ್ಕೂ ಇಲ್ಲಿನ ಪ್ರಕೃತಿಗೆ ಒಂಥರಾ ಹಬ್ಬವೆಂಬಂತಾಗಿ ಪ್ರಕೃತಿ ಮಾತೆಯು ಹಚ್ಚ ಹಸುರಿನಿಂದ ಮೈತುಂಬಿ ನಿಲ್ಲುತ್ತಾಳೆ. ಬತ್ತಿ ಹೋಗಿದ್ದ ತೊರೆ, ಕೆರೆ, ನದಿಗಳೆಲ್ಲವೂ ಮೈತುಂಬಿ ಮತ್ತೆ ಜೀವ ಪಡೆದುಕೊಳ್ಳುವುದರಿಂದ ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಖುಷಿ. ಪ್ರವಾಸಿಗರ ಕಣ್ಮನಗಳಿಗೆ ಆಹ್ಲಾದವನ್ನು ನೀಡುವ ಜಲಪಾತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಬಹಳಷ್ಟು ಕಾಣ ಸಿಗುತ್ತವೆ. ಅಂತಹ ಜಲಪಾತಗಳ ಪೈಕಿ ಬೆಳ್ತಂಗಡಿ ತಾಲೂಕಿನ ದಿಡುಪೆಯ ಕಾಜೂರು ಸಮೀಪವಿರುವ “ಎರ್ಮಾಯಿ” ಜಲಪಾತವೂ ಒಂದು. ಬೆಳ್ತಂಗಡಿ […]Read More