ಸಮಯ ನಿರ್ವಹಣಾ ತಂತ್ರ ಸಾಮಾನ್ಯವಾಗಿ ನಾವೆಲ್ಲರೂ ಹಣ ಅಥವಾ ವಿದ್ಯೆಯನ್ನು ಬದುಕಿನ ಅತ್ಯಂತ ದೊಡ್ಡ ಸಂಪತ್ತೆಂದು ಹೇಳುತ್ತೇವೆ. ಇದು ನಿಜವೂ ಹೌದು ಆದರೆ ಇವೆರಡರ ಜೊತೆ ಜೊತೆಗೆ ಬದುಕಿನ ಒಂದೊಂದು ಕ್ಷಣವೂ ಅತ್ಯಂತ ಅಮೂಲ್ಯವಾದುದ್ದು ಎನ್ನುವುದನ್ನು ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ. ಸಮಯವನ್ನು ಯಾರು ಅತ್ಯಂತ ಪರಿಪೂರ್ಣವಾಗಿ ಬಳಸಿಕೊಳ್ಳುತ್ತಾ ಸಾಗುತ್ತಾರೋ ಅವರು ನಿರಂತರವಾಗಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗುತ್ತಾರೆ. ಕೆಲವರು ದಿನವಿಡೀ ಸಮಯವನ್ನು ವ್ಯರ್ಥವಾಗಿ ಕಳೆಯುವುದರಲ್ಲೇ ವ್ಯಸ್ತರಾಗಿರುತ್ತಾರೆ. ಈ ಕ್ಷಣವನ್ನು ನಂತರ ಉಪಯೋಗಿಸಿಕೊಳ್ಳೋಣ ಎಂದು ಸಮಯವನ್ನು ಜೋಪಾನ […]Read More
ಓ ನನ್ನ ಬಾಲ್ಯದಾ ಗೆಳತೀ.. ಬಾಳ ಮುಸ್ಸಂಜೆಯಲಿಮನವು ಮಾಗಿರುವಾಗ,ಹೀಗೇಕೆ ಅಳುತಿರುವೆನನ್ನ ಅಂತರಂಗ ಸಖಿ! ಬದುಕಿನಲಿ ಬಂದಿದ್ದಕಷ್ಟ-ಸುಖಗಳನೆಲ್ಲಾನಾವು ಕಂಡುಂಡಾಗಿದೆಇನ್ನೇಕಳುವೆ ನೀ ಸಖಿ! ನಿನ್ನವರೇ ನಿನ್ನನರಿಯದೆತೊರೆದರೆಂದು ಈಅಶ್ರುಗಳ ಹರಿಸುತಿಹೆಯಾಓ ನನ್ನ ಜೀವಸಖಿ! ನೊಂದ ಮನದ ಭಾವನೊಂದು ಬೆಂದಿಹಮನವಷ್ಟೇ ಅರಿವುದುಕಣ್ಣೀರಿಡದಿರು ಸಖಿ! ನನಗೆ ನೀನು, ನಿನಗೆನಾನೆಂಬ ಭಾವದಿಬಾಳೋಣ ನೋಯದಿರುನನ್ನ ಬಾಲ್ಯದಾ ಗೆಳತಿ!! ಶ್ರೀವಲ್ಲಿ ಮಂಜುನಾಥRead More
ಒಂದು ಆನೆಯ ಕಥೆ ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನ ಸೇನೆಯಲ್ಲಿ ಸಾವಿರಾರು ಆನೆಗಳಿದ್ದವು. ಆದರಲ್ಲಿ ಒಂದು ಆನೆ ಮಾತ್ರ ರಾಜನಿಗೆ ಬಲು ಪ್ರಿಯ. ರಾಜನಿಗೆ ಏಕೆ ರಾಜ್ಯದ ಎಲ್ಲಾ ಜನರು ಅದನ್ನು ಇಷ್ಟಪಡುತ್ತಿದ್ದರು. ಅದರ ನಡೆ, ಗಾಂಭೀರ್ಯ, ಯುದ್ದ ಕೌಶಲ್ಯ, ವಿಧೇಯತೆ, ಶಕ್ತಿಗೆ ಹೆಸರಾಗಿತ್ತು. ಯುದ್ಧದಲ್ಲಿ ಅಪ್ರತಿಮವಾಗಿ ಹೋರಾಡುತ್ತಿತ್ತು. ಹಲವಾರು ಯುದ್ಧಗಳಿಗೆ ಈ ಆನೆಯನ್ನು ಕಳಿಸಿತ್ತು. ಎಲ್ಲಾ ಯುದ್ಧಗಳಲ್ಲೂ ಈ ಆನೆ ಜಯಶಾಲಿಯಾಗೆಯೇ ಹಿಂದಿರುಗುತ್ತಿತ್ತು. ಸೋಲು ಎಂಬ ಮಾತೆ ಇರಲಿಲ್ಲ. ಎಲ್ಲರೂ ಹೆಚ್ಚಾಗಿ ಇಷ್ಟಪಡುತ್ತಿದ್ದ ಆನೆಯಾಗಿತ್ತು. […]Read More
ಸಾಹಸಿ ಕ್ಯಾಪ್ಟನ್ ಮೋನಿಕಾ ಖನ್ನಾ ಪಾಟ್ನಾದಿಂದ ದೆಹಲಿಗೆ ಹೊರಟಿಟ್ದ ಸ್ಪೈಸ್ ಜೆಟ್ ಬೋಯಿಂಗ್ – 737 ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದ ವಿಮಾನದ ಕ್ಯಾಪ್ಟನ್ ಮೋನಿಕಾ ಖನ್ನಾಗೆ ಈಗ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ ಇಂದಿನ ದಿನ ತಂತ್ರಜ್ಞಾನದಲ್ಲಿ ತೀರಾ ಮುಂದುವರಿದಿದ್ದು, ಕೆಲವೇ ಗಂಟೆಗಳಲ್ಲಿ ಪ್ರಪಂಚದ ಯಾವುದೇ ಮೂಲೆಯನ್ನೂ ತಲುಪಬಹುದು. ಇದನ್ನು ಸಾಧ್ಯವಾಗಿಸಿದ್ದು ಜೆಟ್ ಮತ್ತು ಸೂಪರ್ ಸಾನಿಕ್ ಇಂಜಿನ್’ಗಳು. ಜೆಟ್ ಮತ್ತು ಸೂಪರ್ […]Read More
ಹನುಕಿಯಾ- ಆರಿ ಹೋಗದ ದೀಪ ಪುಸ್ತಕ: ಹನುಕಿಯಾಲೇಖಕರು: ವಿಠಲ್ ಶೆಣೈಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್ಸಂಪರ್ಕ: 91-9945939436ಬೆಲೆ: 425 /- ಸೃಜನಶೀಲ ಲೇಖಕರಾದ ವಿಠಲ್ ಶೆಣೈ ರವರು ತಮ್ಮ “ಹನುಕಿಯಾ” (ಆರಿ ಹೋಗದ ದೀಪ) ಎಂಬ ಹೊಸ ಕಾದಂಬರಿಯನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಾಶಕರ ಮೂಲಕ ಹೊರತಂದಿದ್ದಾರೆ. ಖ್ಯಾತ ಲೇಖಕ ಸಂತೋಷ್ ಕುಮಾರ್ ಮೆಹಂದಳೆ ಯವರು ಪುಸ್ತಕಕ್ಕೆ ಬೆನ್ನುಡಿ ಬರೆದುಕೊಟ್ಟಿದ್ದಾರೆ. ಲೇಖಕ ವಿಠಲ್ ಶೆಣೈಯವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿ ಬೆಂಗಳೂರಿನಲ್ಲಿ ನೆಲೆಸಿ ಹಲವು ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪೆನಿಗಳಲ್ಲಿ […]Read More
ಸ್ನೇಹದ ಅನುಬಂಧ ಸ್ನೇಹವೆಂದರೆ…ಬರೇ ಪದಗಳಲ್ಲಆ ಪದಗಳಲಿರುವ ಅಕ್ಷರಗಳಲ್ಲ!ಅಕ್ಷರದಲಿ ಕಾಣುವ ಹೊಂದಾಣಿಕೆಯ ಭಾವವೇ..ಸತ್ಯದ ಗೆಳೆತನ, ಮಾತಲಿ ವಿವರಿಸಲಾರದಲ್ಲ!! ಸ್ನೇಹವೆಂದರೆ… ದೊಡ್ಡ ಆಲದಮರದಂತೆಆ ಮರದ ಚಿಕ್ಕ ಎಲೆಗಳಂತಲ್ಲ!ಎಲೆಗಳಲಿರುವ ಹಸಿರುಸಿರಿನ ಭಾವವೇ..ನಿತ್ಯದ ಗೆಳೆತನ, ಉದುರಿ ಬೀಳುವುದಿಲ್ಲ!! ಸ್ನೇಹವೆಂದರೆ…ಸದಾ ಉರಿವ ನಂದಾದೀಪದಂತೆಆ ದೀಪದಲಡಗಿದ ಬಿಸಿಯಲ್ಲ!ಬಿಸಿಯಾಗದ ಬೆಚ್ಚಗಿನ ಭಾವವೇ..ಚಿರನೂತನ ಗೆಳೆತನ, ಉರಿದು ಆರುವುದಿಲ್ಲ!! ಸ್ನೇಹವೆಂದರೆ…ವಿಶಾಲ ಶರಧಿಯಂತೆಆ ಸಾಗರದಲಿನ ಅಲೆಗಳಂತಲ್ಲ!ಏರಿಳಿತದಲೆಗಳ ಅಪ್ಪಳಿಸುವ ಭಾವವೇ..ಶಾಶ್ವತ ಗೆಳೆತನ, ಪ್ರಳಯಕೆ ಕೊಚ್ಚಿ ಹೋಗುವುದಿಲ್ಲ!! ಸುಮನಾ ರಮಾನಂದRead More
ಹೊಯ್ಸಳರ ಕಾಲದ ಸೌಮ್ಯ ಕೇಶವ ಪುರಾತನ ಕಾಲದ ಎಷ್ಟೋ ಹಿಂದೂ ದೇವಾಲಯಗಳು ಇಂದಿಗೂ ಪ್ರಸಿದ್ಧ. ಅಳಿವಿನಂಚಿನಲ್ಲಿ ಇರುವ ಇನ್ನೂ ಅನೇಕ ದೇವಾಲಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ನಾನೀಗ ಹೇಳಲು ಹೊರಟಿರುವುದು ಅಂತಹ ಒಂದು ಪ್ರಸಿದ್ಧ ದೇವಾಲಯ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸೌಮ್ಯಕೇಶವ ದೇವಾಲಯವು 12ನೇ ಶತಮಾನದ ಪುರಾತನ ದೇವಾಲಯ. ಹೊಯ್ಸಳರ ಕೊಡುಗೆಯಿದು. ಅತಿ ಎತ್ತರದ ಗೋಪುರಗಳನ್ನು ಹೊಂದಿರುವ ನಮ್ಮ ರಾಜ್ಯದ ದೇವಾಲಯಗಳಲ್ಲಿ ಇದೂ ಒಂದು . ರಾಜಗೋಪುರ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದ್ದು, ದೇವಾಲಯದ ವಿಶಾಲತೆ ಹಾಗೂ […]Read More
ಅಹಮ್ಮಿನ ಕೋಟೆಯಲಿ ಇರಲು ಅಳತೆ ಮೀರಿದ ಬೇಗುದಿಆಗಲಿ ತಾನು,ತನ್ನಿಂದಲೆಂಬ ಭಾವದ ಶಮನ!ಬೇಕಿರಲು ಸಂಸಾರನೌಕೆಯಲಿ ನೆಮ್ಮದಿ..ಕ್ಷಣಕೊಮ್ಮೆ ಆಗುತಿರಲಿ ಅಹಂಕಾರದ ದಮನ!! ತನ್ನ ಬಿಟ್ಟು ಯಾರಿಲ್ಲ ಲೋಕದಿಅನ್ನುವ ಭಾವ ಮೊದಲು ಅಳಿಯಲಿ!ಕಾಯಲು ದೇವರಿದ್ದಾನೆನ್ನುವ ಭಕ್ತಿಯು..ಪ್ರೇಮದಿ ಪ್ರತೀ ಮನದಲೂ ಉಳಿಯಲಿ!! ಆ ಸೂರ್ಯಚಂದ್ರರಿಗಿರದ ಅಹಂಕಾರವುಮನುಜನಲಿ ಉದಿಸಿದದೇತಕೊ ಕಾಣೆ!ಭವಬಂಧನವ ತೊರೆದು ಹೋಗುವ ತನಕ..ಅಹಮ್ಮಿರುವ ಮನಕೆ ಹಿಡಿಯಿರಿ ಸಾಣೆ!! ತಲೆಗೆ ಏರಿರಲು ಅಹಂಕಾರದ ಭಾವತುಂಬೀತು ಅದರಲಿಯೇ ಬಾಳ ಕೊಪ್ಪರಿಗೆ,ಜೋಕೆ !ನಿತ್ಯ ಕೃತಕ ಹೊಗಳುಭಟರ ಕೈಗೆ ತನ್ನನಿರಸಿ…ಏರಿಸುವಿರಿ ಮನವನು ಉಪ್ಪರಿಗೆಗೆ,ಯಾಕೆ!! ಸುಮನಾ ರಮಾನಂದRead More
ನವಶಕ್ತಿ ಸ್ವರೂಪಿಣಿ ನವರೂಪವನೆತ್ತಿ ನಲಿದಿರುವೆ ತಾಯೇ!ನವಜೀವನಕೊಂದು ಬೆಳಕು ನೀಡಮ್ಮಾ!!ನಿನ್ನ ಹೆಸರೊಂದಿರಲು ನನ್ನ ಮನದಲ್ಲಿ!ನನ್ನ ಭಾವದಂಗಳದಿ ಬೆಳಕು ತಾಯೇ!! ನವರಾತ್ರಿಯಲಿ ಪೂಜಿಪೆನು ನಾ ನಿನ್ನ!ನೀಡು ನೀ ವರವನು ಸಲಹು ನಮ್ಮನ್ನು!!ನವಶಕ್ತಿ ದುರ್ಗೆಯು ನೀನಮ್ಮ ತಾಯೇ!ನವೀನತೆಯ ಭಾಗ್ಯ ನೀಡುವಾ ಮಾಯೆ!! ನನ್ನೆದೆಯ ಗೂಡಲ್ಲಿ ನೆಲೆಸು ನೀ ಬಾರಮ್ಮ!ನಾನುನಾನೆಂಬ ಮೋಹವನು ಕಳೆಯಮ್ಮ!!ನವದುರ್ಗೆ ನೀನಮ್ಮ ನನ್ನ ಉಸಿರಾಗಿರುವೆ!ನಮಿಸುವೆನು ನಾ ನಿನಗೆ ಬೆಳಕು ನೀಡಮ್ಮ!! ನಿನ್ನೊಲುಮೆ ನನಗಿರಲು ಬಾಳು ಸೊಗಸಮ್ಮ!ನನ್ನೆದೆಯ ಗೂಡಲ್ಲಿ ಹಣತೆ ಹಚ್ಚುವೆನಮ್ಮ!!ನಿನ್ನೊಡಲ ಕೂಸು ನಾ ಕೃಪೆಯ ತೋರಮ್ಮ!!ನನ್ನದೆಯಾಳದಲಿ ನೀ ನಿಂತು ಸಲಹಮ್ಮ!! […]Read More
ನವಿಲೇನೋ ಕುಣಿಬೇಕು ‘ಮುಗಿಲನು ಮುದ್ದಿಡೆ ನೆಲದ ಬೆಳೆಚಿಗಿವುದು, ಜಿಗಿವುದು ನೆಗೆವುದಿಳೆ;ಚಿಕ್ಕೆ ಇರುಳು ಕುಣಿದಂತೆ ಕುಣೀಕುಣಿ ಕುಣಿ ನವಿಲೇ ಕುಣೀ ಕುಣೀ’– ಡಾ|| ದ ರಾ ಬೇಂದ್ರೆ ಹಿರಿಯ ಕವಿ ಡಾ|| ದ ರಾ ಬೇಂದ್ರೆಯವರು ಹೇಳಿದಂತೆ ಮಳೆಗೆ ಇಳೆ, ಇಳೆಯಿಂದ ಹೊರಬಂದ ಬೆಳೆ ಅಷ್ಟೇ ಅಲ್ಲದೆ ತನ್ನ ಸುಂದರವಾದ ಗರಿ ಬಿಚ್ಚಿ ನಮ್ಮ ರಾಷ್ಟ್ರ ಪಕ್ಷಿ ನವಿಲು ಸಹ ಕುಣಿಯುತ್ತದೆ. ಗಂಡು ನವಿಲು ತನ್ನ ಆಕರ್ಷಕ ರೆಕ್ಕೆಯ ಗರಿಗಳನ್ನು ತೆರೆದು ಕುಣಿಯುವುದು ಮುಖ್ಯವಾಗಿ ತನ್ನ ಸಂಗಾತಿಯನ್ನು ಆಕರ್ಷಿಸಿ […]Read More