ದೂರ ಸರಿದ ಧರ್ಮಶ್ರೀ

ದೂರ ಸರಿದ ಧರ್ಮಶ್ರೀ Covid 19 ಲಾಕ್ ಡೌನ್ ಸಮಯದಲ್ಲಿ ಹಳೆಯ ಸಿನಿಮಾಗಳನ್ನು ಅದ್ರಲ್ಲೂ ಕಾದಂಬರಿ ಆಧಾರಿತ ಸಿನೆಮಾಗಳನ್ನು ನೋಡುತ್ತಿದ್ದೆ. ಆಗ “ನಾಯಿ ನೆರಳು” ಸಿನಿಮಾ ಸಿಕ್ತು, ಅಲ್ಲಿಂದ ಭೈರಪ್ಪನವರು ಪರಿಚಿತರಾದರು. ಸಿನಿಮಾ ನೋಡಿದ ಒಂದು ವಾರ ಯಾರೊಡನು ಮಾತಾಗಲಾಗದ ತಲೆಮಾರುಗಳ ದುಃಖ. ಭೈರಪ್ಪನವರ ಹೆಸರನ್ನು ಆ ವರೆಗೆ ಕೇಳಿದ ನನಗೆ ಅವರನ್ನು ನನ್ನಂಥ ಸೂಕ್ಷ್ಮ ಹೃದಯದವಳು ಓದಿ ಸೈರಸಿಕೊಳ್ಳಬಹುದಾ ಅನ್ನಿಸಿದ್ದುಂಟು. ಹೀಗಂದುಕೊಂಡವಳೆ ಮೊದಲು ಭೈರಪ್ಪನವರ ಪುಸ್ತಕ ಅಂತಾ ಕೊಂಡಿದ್ದು ‘ಮಂದ್ರ’! ಅಲ್ಲಿಂದ ಮುಂದಕ್ಕೆ ಅವರ ಬರಹಗಳ […]Read More

ವಂಶವೃಕ್ಷ – ಡಾ. ಎಸ್. ಎಲ್. ಭೈರಪ್ಪ

ವಂಶವೃಕ್ಷ – ಡಾ. ಎಸ್. ಎಲ್. ಭೈರಪ್ಪ ಪುಸ್ತಕ : ವಂಶವೃಕ್ಷಲೇಖಕರು : ಡಾ. ಎಸ್.ಎಲ್. ಭೈರಪ್ಪ ಲೇಖಕರ ಬಗ್ಗೆ ನಾನು ಏನನ್ನೂ ಹೇಳುವ ಅವಶ್ಯಕತೆಯೇ ಇಲ್ಲ. ಇವರ ಹೊಸ ಪುಸ್ತಕ ಪ್ರಕಟವಾಗುತ್ತದೆ ಎಂದರೆ ಅದನ್ನು ಓದಲು ಸಾಹಿತ್ಯಾಸಕ್ತರು ಕಾಯುತ್ತಿರುತ್ತಾರೆ. ಪುಸ್ತಕ ಬಿಡುಗಡೆಯಾದ ಮೇಲೂ ಅದರದ್ದೇ ಚರ್ಚೆ. ಇವರ ಪುಸ್ತಕಗಳು ಚರ್ಚೆಗೊಳಗಾದಷ್ಟು ಬೇರಾವ ಪುಸ್ತಕವೂ ಚರ್ಚೆಗೊಳಗಾಗಿಲ್ಲ ಎಂದೇ ಹೇಳಬಹುದು. ಇವರು ಒಟ್ಟು ೨೪ ಕಾದಂಬರಿಗಳನ್ನು ( ಧರ್ಮಶ್ರೀ,‌ ತಬ್ಬಲಿ ನೀನಾದೆ ಮಗನೆ, ನಾಯಿ ನೆರಳು, ಗೃಹಭಂಗ, ದಾಟು […]Read More

ದಸರಾ ಹಬ್ಬಕ್ಕೆ”ಹುಟ್ಟು ಸಾವು ಎರಡರ ನಡುವೆ” ಕಾದಂಬರಿ ಬಿಡುಗಡೆ

ದಸರಾ ಹಬ್ಬಕ್ಕೆ”ಹುಟ್ಟು ಸಾವು ಎರಡರ ನಡುವೆ” ಕಾದಂಬರಿ ಬಿಡುಗಡೆ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಹಬ್ಬದ ಪ್ರಯುಕ್ತ, ಕಲ್ಬುರ್ಗಿಯ ಪ್ರಸಿದ್ಧ ಬರಹಗಾರ ಶ್ರೀ ಪ್ರಮೋದ್ ಕರ್ಣಂ ಅವರ ಮೂರನೇ ಕಾದಂಬರಿ “ಹುಟ್ಟು ಸಾವು ಎರಡರ ನಡುವೆ” ಸರಕಾರದ ಆಶ್ರಯದಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾದಂಬರಿ ಮಾನವ ಜೀವನದ ಮೂಲಭೂತ ಅಂಶಗಳನ್ನು ವಿಶ್ಲೇಷಿಸುವ ಮೂಲಕ ಓದುಗರನ್ನು ಆಲೋಚನೆಗೆ ಪ್ರೇರೇಪಿಸುತ್ತದೆ. ಕಥಾ ಶೈಲಿ, ಪಾತ್ರಗಳ ಗಾಢತೆ ಮತ್ತು ಸಾಮಾಜಿಕ ಸಂದೇಶಗಳ ಮೂಲಕ ಈ ಕಾದಂಬರಿ ಓದುಗರ ಹೃದಯವನ್ನು ಗೆಲ್ಲುವ ನಿರೀಕ್ಷೆಯಿದೆ. ಬುಕ್ ಲಾಂಚ್ […]Read More

ಸಿಹಿಮಾತು – ಪ್ರೀತಿಸುವ ಹೃದಯಗಳಿಗಾಗಿ…

ಸಿಹಿಮಾತು – ಪ್ರೀತಿಸುವ ಹೃದಯಗಳಿಗಾಗಿ… ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬ ಪ್ರಶ್ನೆಗೆ ಸಾಹಿತಿಗಳು, ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಪ್ರೀತಿಸುವ ಹೃದಯಗಳಿಗಾಗಿ ಈ ಪ್ರೀತಿ ಭೂಮಿ ಮೇಲಿದೆ! ಒಂದು ವೇಳೆ ಪ್ರೀತಿಯು ಇಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಎರಡು ಹೃದಯಗಳು ಸಂಗಮವಾದಾಗ ಪ್ರೀತಿಯ ಜ್ಯೋತಿ ಹೊತ್ತಿ ಉರಿಯುವುದು ಅದು ಒಮ್ಮೊಮ್ಮೆ ಅರ್ಧದಲ್ಲಿಯೇ ದುಃಖವನ್ನು ನೀಡಿ ನಂದಿ ಹೋಗುವುದು, ಮತ್ತೊಮ್ಮೆ ಮದುವೆಯ ಹಂತಕ್ಕೆ ತಿರುಗಿ ಬದುಕೇ ಆನಂದಮಯವಾಗುವುದು. ಪ್ರೀತಿಗಾಗಿ ಪ್ರಾಣವನ್ನು ಕಳೆದುಕೊಂಡವರನ್ನು ನೋಡಿದ್ದೇವೆ ಅದರ ಬಗ್ಗೆ […]Read More

ಆಪಾದನೆ

ಆಪಾದನೆ ನನ್ನ ರೆಪ್ಪೆಯಲುಗುವ ಮುನ್ನನೀ ಹೋಗಿ ಬಿಡು ಬೇಗಮತ್ತೆಂದೂ ತಿರುಗಿ ನೋಡದೆ ತುಂಬಿದ ಕಣ್ ಕೊಳವನ್ನುಹಿಂಗಿಸಿ ಬಿಡುವೆನುತಿರುಗಿಯೂ ನೋಡದೆಹೋಗುತಿರುವ ನಿನ್ನ ನೆನೆನೆನೆದು ನೀ ತಿರುಗಿ ನೋಡಿದೆಯಾದರೇಕೊಚ್ಚಿಹೋಗಿ ಬಿಡಬಹುದುಗುರಿಯೆಡೆಗಿನ ಕನಸುಗಳುಕಣ್ಣ ಜಲಪಾತದಲಿಬೇಡ ನನಗೆ ಆಪಾದನೆ ರೆಪ್ಪೆಯಲಿ ಬಂಧಿಸಿಡುವೆನುನನ್ನೆಲ್ಲ ಸ್ವಪ್ನಗಳಏರಿಸಲಾರೆ ಬೇಡದಹೊರೆಯ ನಿನ್ನ ಹೆಗಲಿಗೆ ಪ್ರೀತಿಯಲಿ ಬಿದ್ದವರನ್ನುಕಂಡಿದ್ದೇವೆ ಸಾವಿರ ಸಾವಿರಕಂಡದ್ದನ್ನು ಅರಗಿಸಿಕೊಂಡುಕಲಿತಿದ್ದೇನೆ ಪಾಠ ನಾನೂ ನಿನ್ನ ಪ್ರೇಮದಲೇಅದರ ತಾಪದಲೇಉರಿದುರಿದು ಕಮರಿದರೂಮತ್ತೆದ್ದು ಬರುವೆನು ನಾನುನಿನ್ನ ಯಶವ ಕಣ್ತುಂಬಿಕೊಳ್ಳಲೆಂದು ನನ್ನ ಕುಡಿನೋಟದೊಳಗೆಸಿಕ್ಕಿ ನರಳಬೇಡ ನೀನುಗುರಿಯೆಡೆಗಿನ ದಾರಿಯತಪ್ಪಿಸುವ ತಿರುವು ನಾನಾಗಲಾರೆಬೇಡ ನನಗಾವ ಆಪಾದನೆ… ಸೌಜನ್ಯ […]Read More

ಪಿತೃಪಕ್ಷ ಎಂಬ ಕೃತಜ್ಞತಾ ವಿಧಿ….

ಪಿತೃಪಕ್ಷ ಎಂಬ ಕೃತಜ್ಞತಾ ವಿಧಿ…. ನಮ್ಮ ದೇಶದ ಸನಾತನ ಸಂಸ್ಕೃತಿಯಲ್ಲಿ ಸಾಕಷ್ಟು ವಿಧಗಳು ಮತ್ತು ವೈವಿಧ್ಯತೆಗಳು ಇವೆ. ಪ್ರತಿಯೊಂದು ಆಚರಣೆಗಳೂ ಕೂಡ ಅರ್ಥಪೂರ್ಣ ಕಾರಣಗಳು ಮತ್ತು ವಿಭಿನ್ನತೆಯನ್ನು ಒಳಗೊಂಡಿವೆ. ಅಂತಹ ಆಚರಣೆಗಳಲ್ಲಿ ಒಂದಾದ ಶ್ರಾದ್ಧ ಅಥವಾ ಪಿತೃಪಕ್ಷ ಪೂಜೆಯು ತನ್ನದೇ ಆದ ಮಹತ್ವ ಹೊಂದಿದೆ. ಪಿತೃಗಳು ಎಂದರೆ ನಮ್ಮ ಪೂರ್ವಜರು. ನಮ್ಮ ಜನ್ಮಕ್ಕೆ ಕಾರಣಕರ್ತರಾದ ಅಥವಾ ಈ ಭೂಮಿಯಲ್ಲಿ ನಮ್ಮ ಹುಟ್ಟಿಗೆ ಆಸರೆಯಾದ ಕುಟುಂಬದವರು, ತಂದೆ ತಾಯಿಗಳು ಮತ್ತು ಅವರ ಹಿಂದಿನ ತಲೆಮಾರು. ಹುಟ್ಟಿದ ಪ್ರತಿಯೊಂದು ಜೀವಿಗೂ […]Read More

ಕಾರ್ಟೂನಿಸ್ಟ್ ಜೀವನ್ ಗೆ ಜೀವಮಾನದ ಪ್ರಶಸ್ತಿ

ಕಾರ್ಟೂನಿಸ್ಟ್ ಜೀವನ್ ಗೆ ಜೀವಮಾನದ ಪ್ರಶಸ್ತಿ ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರಾದ ಜೀವನ್ ಶೆಟ್ಟಿ ಅವರ ಕಾರ್ಟೂನ್ ಕ್ಷೇತ್ರದ ನಿರಂತರ ಸೇವೆಯನ್ನು ಗುರುತಿಸಿ ‘ಕರ್ನಾಟಕದ ವ್ಯಂಗ್ಯಚಿತ್ರಕಾರರ ಸಂಘವು ಕೊಡ ಮಾಡುವ ಜೀವಮಾನದ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಈ ಪ್ರಶಸ್ತಿ ಪ್ರದಾನವು ಇದೇ ಸೆಪ್ಟೆಂಬರ್ 6 ರಂದು ನಡೆಯಲಿದೆ. ಬೆಂಗಳೂರಿನ ಎಂ ಜಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ ಇರುವ ಭಾರತೀಯ ವ್ಯಂಗ್ಯಚಿತ್ರ ಸಂಸ್ಥೆಯ ಗ್ಯಾಲರಿಯಲ್ಲಿ ಬೆಳಗ್ಗೆ 11 ಕ್ಕೆ ರಾಜ್ಯದ ವ್ಯಂಗ್ಯಚಿತ್ರಕಾರರ ಸಮ್ಮುಖದಲ್ಲಿ ನೆರವೇರಲಿದೆ. ವೃತ್ತಿ ಬ್ಯಾಂಕ್ – […]Read More

ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ…..

ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ….. ನಾನು ಈ ಲೇಖನ ಬರೆಯುವುದಕ್ಕೆ ಕಾರಣ ನನ್ನ ಜೀವ, ಅದು ನಮ್ಮ ತಾಯಿಯ ಭಿಕ್ಷೆ. ನಾನು ಇಲ್ಲಿಯವರೆಗೆ ಬದುಕಿದ್ದೇವೆ ಎಂದರೆ ಅದಕ್ಕೆ ಕಾರಣ ನನ್ನ ಜೀವನ, ಅದು ನಮ್ಮ ತಂದೆಯ ಭಿಕ್ಷೆ. ಈ ಜನ್ಮ ಜೀವನದಲ್ಲಿ ನಾವೆಲ್ಲ ಅಕ್ಷರಸ್ಥರು ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ಶಿಕ್ಷಣ, ಅದು ನಮ್ಮ ಗುರುಗಳ ಭಿಕ್ಷೆ. ಪ್ರತಿ ವ್ಯಕ್ತಿಯ ಹೃದಯದಲ್ಲಿ ಅಕ್ಷರದ ಬೀಜ ಬಿತ್ತಿ, ಆ ವ್ಯಕ್ತಿಯ ಬದುಕಿಗೆ ದಾರಿದೀಪವಾಗಿರುವ ಸಮಸ್ತ ಗುರು ಬಳಗಕ್ಕೆ […]Read More

ಕಣ್ಣೋಟದ ಸವಿಸತ್ಯ

ಕಣ್ಣೋಟದ ಸವಿಸತ್ಯ ನೋಡುವಾ ನೋಟವು ತಿಳಿಯಾಗಿರೆಮನಸಲಿ ಒಂದು ಸಂಚಲನ !ನೋಟದಿ ಕುಹಕವೇ ತುಂಬಿರೆಅಂತರಂಗದಲಿ ನಿತ್ಯ ಕದನ !! ಪ್ರಕೃತಿಯಲಿ ಕಾಣುವಾ ಸೊಬಗುಕೋಟಿ ಕೊಟ್ಟರೂ ನಿಲುಕದು!ಕಂಗಳಲಿ ಕಾಡುವ ಮೆರುಗುಮನದಲಿ ಸಂತಸವಿರೆ ದೊರೆವುದು !! ದೂರದ ಬೆಟ್ಟವು ನುಣ್ಣಗೆಂಬ ನುಡಿಲೋಕದಿ ಆಗಿರಲು ಕಹಿಸತ್ಯ!ಕಣ್ಣಂಚಲಿ ತುಂಬಿದ ನೋವುಕಣ್ಣೀರಾಗಿ ಹರಿದಾಗಲೇ ಬಾಳು ಸವಿಪಥ್ಯ!! ಹಸಿರ ಕಾನನವು ಬೆಸೆದಂತೆಜನಜೀವನದಲಿ ಒಂದು ನಂಟು!ಹೆಣ್ಣಿನ ಕಂಗಳಲಡಗಿದ ಭಾವವುಎಂದೂ ಬಿಡಿಸಲಾರದ ಬ್ರಹ್ಮಗಂಟು!! ಸುಮನಾ ರಮಾನಂದಕೊಯಮತ್ತೂರುRead More

ಸಂಗೀತ ಸಂಜೆ – ಸ್ವರಸಿರಿ

ಸಂಗೀತ ಸಂಜೆ – ಸ್ವರಸಿರಿ ಕೊಬಾಲ್ಟ್ ಕಲಾ ಸಂಸ್ಥೆ ದಿನಾಂಕ 3ರ ಆಗಸ್ಟ್ ಭಾನುವಾರ 2025 ರಾಜರಾಜೇಶ್ವರಿ ನಗರದ ಕೊಬಾಲ್ಟ್ ಕಲಾ ಗ್ಯಾಲರಿಯಲ್ಲಿ “ಸ್ವರಸಿರಿ” ಹೆಸರಿನಲ್ಲಿ ಹಿಂದೂಸ್ತಾನಿ ಸಂಗೀತ ಸಂಜೆ ಹಮ್ಮಿಕೊಂಡಿತ್ತು. ಶ್ರೀಮತಿ ರೇಷ್ಮಾ ಭಟ್ಟ ಅವರು ಹಿಂದೂಸ್ತಾನಿ ಸಂಗೀತದಲ್ಲಿ ಮಾಡಿರುವ ಸಾಧನೆಯಿಂದಾಗಿ, ತಮ್ಮ ಧ್ವನಿಸಂಪತ್ತಿನಿಂದಾಗಿ ಬೇರೆ ಬೇರೆ ರಾಗಗಳ ಮೂಲಕ ಶ್ರೋತೃಗಳ ಮನತಣಿಸುವುದರಲ್ಲಿ ಸಫಲರಾದರು. ಮೊದಲಿಗೆ ರಾಗ ಮುಲ್ತಾನಿಯಲ್ಲಿ ವಿಲಂಬಿತ್ ಲಯದಲ್ಲಿ ಪ್ರಾರಂಭಿಸಿ ದೃತ್ ತೀನ್ ತಾಲದಲ್ಲಿ ಪ್ರಸ್ತುತ ಪಡಿಸಿದರು. ತಮ್ಮ ಸ್ವರ ಸಾಧನೆ, ರಾಗದಲ್ಲಿಯ […]Read More