ಕವಿತೆಗೆ ಸಾವಿಲ್ಲ

ಕವಿತೆಗೆ ಸಾವಿಲ್ಲ ನನ್ನ ಕವಿತೆ ನನ್ನದೇ ಕವಿತೆಮಾತು ಬರದ ಮಗು ಇದ್ದಂತೆಪದೇ ಪದೇ ಮುದ್ದು ಮಾಡಿಆಗಾಗ ಬುದ್ದಿ ಹೇಳಿತಿದ್ದಿ ತೀಡಿ ಕಟ್ಟಿದ ಕವಿತೆ ಇದು ಕದ್ದ ಕವಿತೆಯಲ್ಲಅನುವಾದ ಮಾಡಿಲ್ಲಎಲ್ಲಿಂದಲೂ ಪ್ರೇರಣೆಯಾಗಿಲ್ಲಎಲ್ಲೂ ಪ್ರಕಟವಾಗಿಲ್ಲಸ್ವತಃ ನಾನೇ ಮೆಚ್ಚಿಕೊಂಡಿಲ್ಲ ಓದಿದರೆ ಕೆಮ್ಮು ಬರುತ್ತದೆಇದು ಕವಿತೆಯೇ ಅಲ್ಲವೆಂಬ ದೂರು ಬೇರೆ!ಭರವಸೆ ಕಿತ್ತುಕೊಳ್ಳುವಂತೆಕವಿತೆ ಬರಿಯೋಕೆ ನೀನ್ಯಾರೆಂಬ ಪ್ರಶ್ನೆ?ಎಲ್ಲರೂ ಒಟ್ಟಿಗೆ ಮುತ್ತಿಗೆ ಹಾಕುತ್ತಾರೆನನ್ನ ಕವಿತೆ ಹೆದರಿಮತ್ತೆ ನನ್ನಂತರಾಳವ ಸೇರುತ್ತದೆಕೊಂಚ ಪ್ರಾಣ ಭಯ, ಅಲ್ಪ ನಾಚಿಕೆಚೂರೇ ಚೂರು ಹಿಂಜರಿಕೆ ಪತ್ರಿಕೆಗಳು ಸ್ವೀಕರಿಸಲಿಲ್ಲರೇಡಿಯೋದಲ್ಲಿ ಓದಲಿಲ್ಲಹತ್ತಿರದವರು ಒಡೆದು ಬೈದರುಹಿರಿಯರು ಉಗಿದು […]Read More

ಕೇಳಲು ಕಿವಿಯೊಂದು…!

ಕೇಳಲು ಕಿವಿಯೊಂದು…! ಆಸ್ಥೆಯಿಂದ ಕೇಳಲೊಂದುಕಿವಿ ಇದ್ದರೆಆ ಕಿವಿ ಹೊತ್ತ ದೇಹಕೊಂದುಮನಸಿದ್ದರೆದುಗುಡವೋ ದುಃಖವೋಖುಷಿಯೋ ಉನ್ಮಾದವೋಏನಾದರೂ ಹೇಳಿಸದ್ಯ ಹೇಳಿದೆನೆಲ್ಲ ಎಂದುಹಗುರಾಗಬಹುದು! ಅಂಥ ಕಿವಿಯೇಅತ್ಯಲ್ಪ ಒಂದಾದರುಇಲ್ಲದಿದ್ದರೆಹೇಳುವುದಾದರು ಏನುಮತ್ತು ಯಾರಿಗಾದರು? ಆದರೂ ಗೋಡೆಗೋಗಾಳಿಗೋಗಿಡಮರಗಳಿಗೋಅಥವ ಯಾವುದೋ ಒಂದುಬಿರುಸು ಲೋಹಕೋಹೀಗೋ ಹಾಗೋ ಹೇಳಿಹಗುರಾಗಬಹುದುಆಗಲೂಹಾಗೆ ಹೇಳುವ ಮನಸುಇನ್ನೂ ಉಳಿದಿದ್ದರೆ! ಅನೇಕವು ಅದೆಂಥಕಠಿಣ ಕಬ್ಬಿಣ ಕಿವುಡುಸಂದರ್ಭಗಳೆಂದರೆನಿಮ್ಮ ಸುತ್ತಮುತ್ತಲುಜೀವಂತ ಕಿವಿಗಳ ಹೊತ್ತನಿಮ್ಮವರೆನಿಮ್ಮ ಒಡಹುಟ್ಟಿದವರೆನಿಮ್ಮ ಸಂಗಾತಿಯೆಅಥವ ಗೆಳೆಯ ಗೆಳತಿಯೆಮುಂತಾಗಿ ಇದ್ದೂ ಸಹಆ ಕಿವಿಗಳಿಗೆ ಕೇಳುವವ್ಯವಧಾನವಾಗಲಿಎದೆಯಾಗಲಿಅಂಥ ಎದೆಯಲಿಕನಿಷ್ಠ ಕೇಳಿಯಾದರು ಮರೆತುಬಿಡುವಕರುಣೆಯಾಗಲಿಯಕಃಶ್ಚಿತ್ ಸಹ ಇರದು! ಇಂಥ ಸುಖಕ್ಕೇನುನಮ್ಮವರುನಮ್ಮ ಬಂಧು ಮಿತ್ರರುಎಂಬ ಭ್ರಮೆ…! ಡಾ. ಅರಕಲಗೂಡು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 56

ಮೂಡಣಕೆ ಮುಖಮಾಡಿ ಜಲಬಾಧೆ ಮಾಡದಿರುಮೂಡುವೆಳನೇಸರನು ಭಕ್ತಿಯಲಿ ನಮಿಸುಗಾಢ ಭಕ್ತಿಯ ಬೆರೆಸಿ ತಾಯ್ ತಂದೆಗಳಿಗೆರಗುಓಡುವುದು ಕಷ್ಟಗಳು- || ಪ್ರತ್ಯಗಾತ್ಮ || ಕೈ ಗೂಡದಿರುವಂಥ ಆಸೆ ಆಕಾಂಕ್ಷೆಗಳುಮೈಗೂಡಿ ಫಲಿಸುವುದು ಇರುಳ ಕನಸಿನಲಿಆಗಾಗ ಮೂಡಿಬಹ ಕನಸು ದೇವನು ಇತ್ತಕೈಗಾಣ್ಕೆ ಎಂದು ತಿಳಿ- || ಪ್ರತ್ಯಗಾತ್ಮ || ಸೊಬಗಿನಲಿ ಸರಿಕಾಣೆ ವಿಶ್ವದಲಿ ಈ ಭುವಿಗೆನಭ ನೀ, ಇನ ಶಶಿಗಳುದಯಾಸ್ತ ಭವ್ಯಅಬುಧಿ ನೀಲಿಯ ಜೊತೆಗೆ ಸಸ್ಯ ಶ್ಯಾಮಲ ವರ್ಣಸುಭಗ ದೃಶ್ಯಾವಳಿಯೊ – || ಪ್ರತ್ಯಗಾತ್ಮ || ವಿಧವಿಧದ ವರ್ಣಗಳ ಪುಷ್ಪಗಳು ನೂರಾರುವಿಧವಿಧ ಸುವಾಸನೆಯ ಕುಸುಮಗಳು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 40

—ಗಿರಿಲಂಘನ– ರಟ್ಟಾ ಹಾಗೂ ಚಿತ್ರಕ ಕುದುರೆಯ ಮೇಲೆ ಕುಳಿತುಕೊಳ್ಳುತ್ತಿರುವಾಗ ಜಂಬುಕ ಪಾಂಥಶಾಲೆಯೊಳಗಿಂದ ಓಡಿ ಬಂದು, ಚಿತ್ರಕ ಜೀನಿಗೆ ಒಂದು ಬಟ್ಟೆಯ ಗಂಟನ್ನು ಕಟ್ಟಿದನು. ಚಿತ್ರಕ- ‘ಏನಿದು?’ ಜಂಬುಕ- ಏನಿಲ್ಲ. ಸ್ವಲ್ಪ ಖಾದ್ಯ ಪದಾರ್ಥಗಳು. ಜೊತೆಗಿದ್ದರೆ ಒಳ್ಳೆಯದು’ ಸಮಯಕ್ಕೆ ಬೇಕಾಗಬಹುದು. ಚಿತ್ರಕ- ಒಳ್ಳೆಯದು. ನೀನೂ ಕೂಡ ಇನ್ನು ತಡ ಮಾಡಬೇಡ. ಜಂಬುಕ- ಇಲ್ಲ. ನನ್ನ ಬಳಿ ಕುದುರೆ ಇಲ್ಲ. ಕತ್ತೆಯ ಮೇಲೆ ಪ್ರಯಾಣ ಮಾಡಬೇಕಾಗುತ್ತದೆ. ಹೋಗಿ ಸೇರಲು ಸ್ವಲ್ಪ ತಡವಾಗುತ್ತದೆ. ರಟ್ಟಾ ಜಂಬುಕನ ಕೈಗೆ ಒಂದು ಸ್ವರ್ಣ ದೀನಾರವನ್ನು […]Read More

ಕುಲ್ದಾರ್ – ಊರು ಒಂದು ಕಥೆ ನೂರಾರು

ಕುಲ್ದಾರ್ – ಊರು ಒಂದು ಕಥೆ ನೂರಾರು “ಕುಲ್ದಾರ್” ಇದು ರಾಜಸ್ಥಾನದಲ್ಲಿನ ಒಂದು ವಿಚಿತ್ರವಾದ ಐತಿಹ್ಯವಿರುವ, ನಂಬಲು ಆಧಾರವಿಲ್ಲದ, ಊರಿಗೂರೇ ಸಂಪೂರ್ಣವಾಗಿ ಮಾಯವಾದ ಒಂದು ಗ್ರಾಮದ ಹೆಸರು. ಗ್ರಾಮದ ಜನರೆಲ್ಲರೂ ಸಂಪೂರ್ಣವಾಗಿ ತೊರೆದಾದ ಮೇಲೆ ವಾಸ್ತವದಲ್ಲಿ ಊರು ಎಂಬ ಪದಕ್ಕೆ ಅರ್ಥವೇ ಇರದಿರುವುದರಿಂದ “ಕುಲ್ದಾರ್” ಮಾಯವಾಯಿತೆಂದೇ ಹೇಳಬಹುದು. ರಾಜಸ್ಥಾನದಲ್ಲಿನ ಪಾಲಿ ಎಂಬ ಪ್ರದೇಶದ ಜನರು (ಪಾಲಿವಾಲ್ ಬ್ರಾಹ್ಮಣರು) ಈ ಗ್ರಾಮವನ್ನು 13 ನೇ ಶತಮಾನದಲ್ಲಿ ನಿರ್ಮಿಸಿ ಅಲ್ಲಿ ನೆಲೆಸಿದ್ದರೆಂದು ಹೇಳಲಾಗಿದೆ. ಆಗ ಕುಲ್ದಾರ್, ಕೃಷಿಕರು, ವ್ಯಾಪಾರಸ್ಥರು, ಮೇಧಾವಿಗಳು […]Read More

ಕಮಲಾತ್ತಲ್ ಎಂಬ ಇಡ್ಲಿ ಅಮ್ಮನ ಕಥೆ

ಕಮಲಾತ್ತಲ್ ಎಂಬ ಇಡ್ಲಿ ಅಮ್ಮನ ಕಥೆ ಇತ್ತೀಚಿನ ದಿನಗಳಲ್ಲಿ ನಿವೇನಾದರೂ ಹೋಟೆಲ್‌ಗೆ ಹೋದರೆ ಐವತ್ತು ರೂಪಾಯಿಗೆ ಕಡಿಮೆ ಏನೂ ಸಿಗುವುದಿಲ್ಲ, ಹೊಟ್ಟೇನೂ ತುಂಬಲ್ಲ. ಈಗಿನ ದಿನಗಳಲ್ಲಿ ಒಂದು ರೂಪಾಯಿಗೆ ಒಂದರ್ಧ ಲೋಟ ಟೀ ಸಿಗುವುದು ಸಹ ದುರ್ಲಬ. ಅಂಥಹುದರಲ್ಲಿ ಇಲ್ಲೊಬ್ಬರು ಅಜ್ಜಿ ಕಳೆದ ಮುವತ್ತು ವರ್ಷಗಳಿಂದ ಕೇವಲ ಒಂದು ರೂಗೆ ಒಂದು ಇಡ್ಲಿ ಜೊತೆಗೆ ಚಟ್ನಿ ಸಾಂಬಾರ್ ಕೊಡುವ ಮೂಲಕ ಸಾವಿರಾರು ಬಡವರ ಬಾಳಿನ ಅನ್ನಪೂರ್ಣೆಯಾಗಿದ್ದಾರೆ. ಹೌದು ತಮಿಳುನಾಡಿನ ಕೊಯಮತ್ತೂರಿನ ವಡಿವೇಲಮ್‌ಪಾಳ್ಯಮ್‌ನ ಸುಮಾರು 80 ವರ್ಷ ವಯಸ್ಸಿನ […]Read More

ಧನ್ಯತೆ

ಧನ್ಯತೆ ಮುಂಬೆಳಗಿನ ನೋಟಕಿಚ ಕಿಚ ಕೊಕ್ಕೊ ಕೋ ಚಿಲಿಪಿಲಿಸ್ವರ ಮಾಧುರ್ಯ ಕಿವಿ ಹಿಂಡಿ ಕಿವ್ವನೆ ಪಿಸು ಮಾತುಉಸಿರಿ ಹೋದಂತೆ ತಂಗಾಳಿಎಲ್ಲೋ ಅಸ್ಪಷ್ಟ ವೇದ ಘೋಷಈ ಪ್ರಕೃತಿಯಲಿ ಮೀಟುತಿದೆ ಮನದ ಸ್ವರ ಅಗೋ ಮೆಲ್ಲನೆ ವಣ೯ ಬದಲಿಸಿಸೂಯ೯ಬಂದ ಅವನೂ ಕರ್ತವ್ಯಮರೆತು ಶಾಂತನಾದಮೋಡದೊಳಗೆ ಅವಿತು ಕುಳಿತಅಘಟಿತ ವಿಧ್ಯಾಮಾನಕ್ಕೆ ಸಾಕ್ಷಿಯಾದ ಪ್ರಕೃತಿ ನಿನದೆಂತ ಚೆಲುವುನೀ ಕೃಪೆತೋರಲುಸಕಲ ಜೀವ ರಾಶಿಗೆ ಗೆಲುವು ಪವನ ಕುಮಾರ್ ಕೆ. ವಿ.ಬಳ್ಳಾರಿRead More

ಮತ್ಸ್ಯತೀರ್ಥ – ಇಲ್ಲಿ ಮೀನೇ ದೇವರು

ಮತ್ಸ್ಯತೀರ್ಥ – ಇಲ್ಲಿ ಮೀನೇ ದೇವರು ‘ಮತ್ಸ್ಯತೀರ್ಥ’ ಇದೇನಪ್ಪಾ ಹೊಸ ಹೆಸರು ಅನ್ನಿಸಬಹುದು ಅಲ್ಲವೇ? ಹೌದು ಆದರೆ ಇದು ಸತ್ಯ, ಮತ್ಸ್ಯವನ್ನೇ (ಮೀನು) ವಿಶೇಷವಾಗಿ ಪೂಜ್ಯನೀಯ ಭಕ್ತಿಭಾವದಿಂದ ಪೂಜಿಸಲಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಮತ್ಸ್ಯತೀರ್ಥವಿದೆ. ಇದು ಬೆಂಗಳೂರಿನಿಂದ ಸಕಲೇಶಪುರ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಾಗುವಾಗ ಕೊಕ್ಕಡ ಎಂಬಲ್ಲಿಂದ ನೇರವಾಗಿ ಮುಂದಕ್ಕೆ 20 ಕಿ.ಮೀ ದೂರದ ಶಿಶಿಲ ಎಂಬಲ್ಲಿದೆ. ಶಿಶಿಲೇಶ್ವರ ಹೆಚ್ಚು ಆಕರ್ಷಣೀಯವಾಗಿರುವುದು ಅಲ್ಲಿರುವ ಅಪೂರ್ವವಾದ ಮತ್ಸ್ಯ ಸಂಕುಲದ ಕಾರಣದಿಂದ. […]Read More

ನನ್ನ ಪ್ರೀತಿ ನಾಡು

ನನ್ನ ಪ್ರೀತಿ ನಾಡು ಕರುನಾಡುನಮ್ಮ ತಾಯ್ನಾಡುಇಲ್ಲಿದೆ ಶಿಲೆಗಳಹಳೆಬೀಡು !!೧!! ಗೊಮ್ಮಟೇಶನನೆಲೆನಾಡುಕಾಣಬಹುದಿಲ್ಲಿಹೊರನಾಡು !!೨!! ಸಹ್ಯಾದ್ರಿಯಲ್ಲಿನದಟ್ಟಕಾಡುತುಂಗೆ ಕಾವೇರಿಜನಿಸಿದ ನಾಡು !!೩!! ಕವಿ ಪುಂಗವರುಹುಟ್ಟಿದ ನಾಡುಗಂಡುಗಲಿಗಳುಮೆಟ್ಟಿದ ನಾಡು !!೪!! ಪಂಚಲಿಂಗೇಶ್ವರಸ್ವಾಮಿಯ ತಲಕಾಡುಸಾಧು – ಸಂತರುಗಳತಪ್ಪಸ್ಸಿನ ಬೀಡು !!೫!! ಕಲಾ ತಪಸ್ವಿಗಳಔಪಾಸನೆ ನೋಡುನಡೆದಾಡುವದೇವರಿದ್ದ ನಾಡು !!೬!! ಜೊತೆಯಲ್ಲಿದ್ದಅಪ್ಪುದೇವ್ರಾದ ನಾಡುಶ್ರೀಗಂಧದ ನಾಡುಹೊನ್ನಿನ ಬೀಡು !!೭!! ವೃಷಬ್ ರ ಕಾಂತಾರಭಕ್ತಿಯ ಗೂಡುಪ್ರಪಂಚದಾಧ್ಯಂತಪಸರಿಸಿತು ನೋಡು !!೮!! ಎಲ್ಲೆಲ್ಲೂ ಹರಡಿದೆಕನ್ನಡದ ಸೊಗಡುಎಷ್ಟು ವರ್ಣಿಸಿದರುಮುಗಿಯದ ಹಾಡು !!೯!! ೭ ಜನ್ಮಕ್ಕೂ ಇಲ್ಲೇಹುಟ್ಟುವೆನೆಂದುಪ್ರತಿಜ್ಞೆಯ ಮಾಡುಕನ್ನಡಕ್ಕೀಗ ಜೈಹಾಡು!!೧೦!! ಗೀತಾಚಲಂRead More

ಚೆಲುವ ಕನ್ನಡ ನಾಡು

ಚೆಲುವ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗಿರುವಕನ್ನಡ ನಾಡೆಲ್ಲವನು ನೀನೊಮ್ಮೆ ನೋಡುಕೈ ಬೀಸಿ ಕರೆಯುತಿಹವು ಹಂಪಿ ಬಾದಾಮಿಪಟ್ಟದಕಲ್ಲು ಐಹೊಳೆ ಬೇಲೂರು ಹಳೇಬೀಡು ಬೆಂದಕಾಳೂರು ದಸರೆಯ ಮೈಸೂರುಕಡಲತೀರಗಳು ವೀರ ಚೆನ್ನಮ್ಮನ ಕಿತ್ತೂರುಕೊಡಗಿನ ಬೆಡಗು ಜೋಗ ತಡಸಲು ನೀರುಚಾಮುಂಡಿ ಬಾಹುಬಲಿ ಹರಸಲು ನಿಂತಿಹರು ಮಲ್ಲಿಗೆ ಕಂಪು, ಶಿಲೆಗಳ ಸಂಗೀತದಿಂಪುನಂದಿಗಿರಿಧಾಮಗಳು ಮೈಮನಕೆ ತಂಪುನೋಡಿ ಪಕ್ಷಿಧಾಮ ಬನವಾಸಿ ಆಗುಂಬೆನಾಡಿನಾಚೆಗೂ ಪ್ರಸಿದ್ಧ ಚನ್ನಪಟ್ಟಣ ಗೊಂಬೆ ಪಂಪ ರನ್ನರ  ಪದಗಳ ಚಂದದ ನುಡಿಯುಜಗಕೆಲ್ಲ ವಚನಗಳ ಬೆಳಕು ಚೆಲ್ಲಿದ ನುಡಿಯು ಕೀರ್ತನ ಪರಿಮಳ ಮಳೆಗರೆದ ನುಡಿಯುಅಷ್ಟ ಜ್ಞಾನಪೀಠ ಗೆದ್ದ ಹೆಮ್ಮೆಯ […]Read More