ಹಿಂದಿನ ಸಂಚಿಕೆಯಿಂದ…. ನಡುರಾತ್ರಿಯಾದ ಮೇಲೆ ಅವನಿಗೆ ಎಚ್ಚರವಾಯಿತು. ಎದ್ದು ಕುಳಿತನು. ಬೆಂಕಿ ಆರಿ ತಣ್ಣಗಾಗಿತ್ತು. ಸುತ್ತಲೂ ಗಾಢಾಂಧಕಾರ. ರಟ್ಟಾ ಎದ್ದು ಬಂದು ಅವನ ತೋಳುಗಳನ್ನು ಬಿಗಿಯಾಗಿ ಅವಚಿಕೊಂಡು ಕುಳಿತಿರುವ ಹಾಗೆ ಭಾಸವಾಯಿತು. ಅವನ ಕಿವಿಯಲ್ಲಿ ‘ನೋಡಿರಿ ಗುಹೆಯ ಬಾಗಿಲ ಕಡೆ ನೋಡಿರಿ-’ ಎಂದು ರಟ್ಟಾ ಮೆಲ್ಲಗೆ ಹೇಳಿದಳು. ಚಿತ್ರಕನು ಗುಹೆಯ ಬಾಗಿಲ ಕಡೆ ದೃಷ್ಟಿ ಹರಿಸಿ ನೋಡುತ್ತಾನೆ- ಬೆಂಕಿಯ ಹಾಗೆ ಕೆಂಪು ಬಣ್ಣದ ಎರಡು ಕಣ್ಣುಗಳು ಅವರನ್ನೇ ದುರುಗುಟ್ಟಿ ನೋಡುತ್ತಿವೆ. ಕತ್ತಲಿನಲ್ಲಿ ಬೆಂಕಿಯಂತಿರುವ ಕಣ್ಣಿನ ಪ್ರಾಣಿಯ ಶರೀರ […]Read More
ಹಾಯ್ಕುಗಳು ಒಡೆದ ಹೃದಯ ಒಡೆದ ಹೃದಯಒಂದುಮಾಡಿದರೇನುಮನಸು ಒಂದೇ! ಅಲಂಕಾರ ದೀಪ ದೇವರ ಚಿತ್ರ,ಶುಭ ಕಾರ್ಯದಲಿದಬಳಸುವರು ಚತುರ್ಮಂಗಗಳು ತಿಳಿಸುವುವುಕೇಳು,ಚಿಂತಿಸು,ಮಾತು.ನೋಡದಿರೆಂದು ಬೆಳಕು ಅಧಮನಿಗೆಸಜ್ಜನರ ಜ್ಯೋತಿಯಬೆಳಕು ಇಲ್ಲ ಲಕ್ಷ್ಮೀ ಧನಿಕನಿಗೆಲಕ್ಷ್ಮೀ ಪುತ್ರನಾಗುವಯೋಗವು ಇದೆ ದೀಪ ಜ್ಞಾನಾಂಧನಿಗೆಗುರೋಪದೇಶ ದೀಪದಾರಿತೋರ್ವುದು ಗ್ರಹಣ ಗ್ರಹಣದಲಿಪಾಣೀಗ್ರಹಣ ಹೆಚ್ಚುಶಕ್ತಿಯುತವು ಹಬ್ಬ ಹಬ್ಬಗಳೆಲ್ಲವುಜ್ಞಾನಜ್ಯೋತಿಯ ತೋರಿರಂಜಿಸುವುವು ನಾಗರಾಜು.ಹಇಸ್ರೋ ಬಡಾವಣೆ,ಬೆಂಗಳೂರುRead More
ಎರಡು ಜೀವಗಳೊಂದು ಗೂಡುವುದೆ ಪರಿಣಯವುವರದಕ್ಷಿಣೆಯ ಪಿಡುಗು ಇದಕೊಂದು ವಿಘ್ನವರನ ತಾಯ್ ತಂದೆಗಳು ಆತ್ಮ ಶೋಧನೆಗೈಯೆಪರಿಹಾರವಿದಕುಂಟು- || ಪ್ರತ್ಯಗಾತ್ಮ || ಜೀವವೆರಡರ ಮಧುರ ಮಿಲನವಲ್ಲವೆ ಮದುವೆ!ಆ ವಿಚಾರವ ಮರೆಯಲಿನ್ನೇಕೆ ಮದುವೆ?ಆವ ಪುರುಷಾರ್ಥಕ್ಕೆ ವರದಕ್ಷಿಣೆಯ ತೆರುವೆ?ಹೂವಲ್ಲ ಹಾವಾಗು- || ಪ್ರತ್ಯಗಾತ್ಮ || ಹೊಸಗರಿಯ ಚಪ್ಪರವು, ಮಾವಿನೆಲೆ ತೋರಣವುಬಿಸಿಯಾದ ರುಚಿಯಾದ ಭಕ್ಷ್ಯಭೋಜ್ಯಗಳುಒಸಗೆ ವಾದ್ಯದ ಮೊಳಗು, ಪ್ರಸದನದ ಸಡಗರವುರಸಿಕತೆಯ ನೆಲೆ ಮದುವೆ- || ಪ್ರತ್ಯಗಾತ್ಮ || ನೆಂಟರಿಷ್ಟರ ಕೂಟ, ತುಂಟ ಮಕ್ಕಳ ಆಟಸೊಂಟ ತಿರುವುತ ಬರಿದೆ ಹೆಣ್‍ಗಳೋಡಾಟನೆಂಟತನ ಸೋಗಿನೊಳು ಗಂಟು ಹೊಡೆದವರವೈಕುಂಠವೈ ಮದುವೆ […]Read More
ರೂಪದ ಬಯಲು – ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‍ನ ಆವರಣದಲ್ಲಿ ‘ರೂಪದ ಬಯಲು ಮಾಡುವ ಕಲಾಕೃತಿಗಳು‘ ಎಂಬ ಶೀರ್ಷಿಕೆಯಡಿ ಇದೇ ನವೆಂಬರ್ 21 ರಿಂದ 27 ರವರೆಗೆ ನಡೆಯುತ್ತಿದೆ. ಬೆಂಗಳೂರಿನ ಹೆಸರಾಂತ ಯುವ ಕಲಾವಿದ ಮಂಜುನಾಥ್ ಹೊನ್ನಾಪುರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇದಾಗಿದೆ. ಇಂದಿಗೆ ಈ ಪ್ರದರ್ಶನವು ಮುಕ್ತಯಗೊಳ್ಳಲಿದೆ. ಮಿಕ್ಸ್ ಮೀಡಿಯಾದ ವೈವಿಧ್ಯಮಯ ಈ ಪೇಂಟಿಂಗ್ ಪ್ರದರ್ಶನವು ವಿಭಿನ್ನ ಪ್ರಯೋಗವಾಗಿದೆ. ನೋಡಲಾಗದವರು ಇಂದು ಹೋಗಿ ನೋಡಬಹುದು. ಕಲಾ ಪ್ರದರ್ಶನದ ಸಮಯ: ಬೆಳಿಗ್ಗೆ 10.00 […]Read More
ಸಮುದ್ರಯಾನದ ಸಾಹಸಗಾತಿ “ಲೆಫ್ಟಿನೆಂಟ್ ಕಮಾಂಡರ್ ಪಿ. ಸ್ವಾತಿ” ಭಾರತ ದೇಶದ ಇತಿಹಾಸದಲ್ಲೇ ಅದ್ಭುತವಾದ ಛಾಪನ್ನು ಮೂಡಿಸಿ ಆರು ಮಹಿಳಾ ಸೈನ್ಯಾಧಿಕಾರಿಗಳ ರೋಚಕ ಸಮುದ್ರಯಾನದ ಸಾಹಸಗಾಥೆಯ ತಾರಿಣಿ “ಲೆಫ್ಟಿನೆಂಟ್ ಕಮಾಂಡರ್ ಪಿ.ಸ್ವಾತಿ“. ತಾರಿಣಿ ಎಂಬುವುದು ಯಾವುದೋ ಒಂದು ಕಾಲ್ಪನಿಕ ಕತೆಯಲ್ಲ. ಭಾರತದ ನೌಕಾದಳವು ತನ್ನ ಒಂದು ಹಡಗಿಗೆ ಐ.ಎನ್.ಎಸ್ ತಾರಿಣಿ ಎಂದು ವಿಶಿಷ್ಟವಾಗಿ ಇಟ್ಟ ಹೆಸರಿದು. ಈ ಹಡಗಿನಲ್ಲಿ ನೌಕಾದಳದ ಆರು ಮಹಿಳಾ ಸೈನ್ಯಾಧಿಕಾರಿಗಳು ಸುಮಾರು 21,600 ನಾಟಿಕಲ್ ಮೈಲುಗಳ ದೂರವನ್ನು (40,003 ಕಿ.ಮೀ) ಸಮುದ್ರಯಾನದ ಮೂಲಕ ಪ್ರಪಂಚಕ್ಕೊಂದು […]Read More
ಇಲಿಗೂ ಒಂದು ದೇವಸ್ಥಾನ!!!! ನಮ್ಮಲ್ಲಿನ ವಿವಿಧ ದೇವಾನುದೇವತೆಗಳಿಗೆ ದೇವಸ್ಥಾನ ಕಟ್ಟುವುದು ಗೊತ್ತು, ಪ್ರಾಣಿಗಳಲ್ಲಿ ಬಸವಣ್ಣ ಅಥವ ನಂದಿಗೆ ದೇವಸ್ಥಾನ ಇರುವುದು ನೋಡಿದ್ದೀರಿ, ಆದರೆ ಇಲಿಗಳಿಗಾಗಿ ದೇವಸ್ಥಾನವೊಂದಿದೆ ಗೊತ್ತಾ?! ಇಲಿಗಳಿಗೆ ದೇವಸ್ಥಾನವೆಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಆಶ್ಚರ್ಯವಾದರೂ ಇದು ಸತ್ಯ. ಇಲಿಗಳಿಗಾಗಿಯೇ ದೇವಸ್ಥಾನವೊಂದು ರಾಜಸ್ಥಾನದ “ಬಿಕನೇರ್” ನಿಂದ 30 ಕಿ.ಮಿ ದೂರದ “ದೇಶ್‌ನೋಕಿ” ಎಂಬ ಊರಿನಲ್ಲಿದೆ. ಇದು ಭಾರತದ ಪವಿತ್ರ ಯಾತ್ರಾಸ್ಥಳವೂ ಹೌದು. ಈ ಇಲಿಗಳ ದೇವಸ್ಥಾನ “ಕರ್ನಿ ಮಾತಾ ದೇವಸ್ಥಾನ” ವೆಂದು ಪ್ರಸಿದ್ಧಿಯಾಗಿದೆ. ಇದನ್ನು ಗಂಗಾಸಿಂಗ್ ಎಂಬ ಮಹಾರಾಜ […]Read More
ಡೋಡೋ ಪಕ್ಷಿ ಹಾಗು ಪೋರ್ಚುಗೀಸರು ಮಾನವ ಜನ್ಮ ಶ್ರೇಷ್ಠವಂತೆ! ಏಕೆಂದರೆ ತನ್ನ ಮೆದುಳಿನ ವಿಕಾಸದಿಂದ ಇಡೀ ಭೂಮಂಡಲದಲ್ಲಿ ಪ್ರಕೃತಿಯನ್ನೊಂದು ಬಿಟ್ಟು ಇನ್ನೆಲದರ ಮೇಲು ತನ್ನ ಅಧಿಪತ್ಯ ಸಾದಿಸಿದ್ದಾನೆ. ಇಲ್ಲಿ ಅವನು ಸೃಷ್ಟಿಸಿರುವುದು ಏನಿಲ್ಲ, ಇದದ್ದನ್ನೇ ಕಂಡದ್ದನ್ನೇ ಹೊಸ ಹೊಸದಾಗಿ ಕಂಡು ಹಿಡಿಯುತ್ತಾ ಹೋಗಿದ್ದಾನೆ ಅಷ್ಟೇ. ಹೊಸದನ್ನು ಕಟ್ಟುತ್ತಾನೆ ಕಟ್ಟುವುದಕ್ಕೂ ಮೊದಲು ಹಳೆಯದನ್ನು ಹೊಡೆಯುತ್ತಾನೆ, ಅವನು ಕಟ್ಟಿದ್ದನ್ನು, ತಯಾರಿಸಿದ್ದನ್ನು, ಬೆಳೆಸಿದ್ದನ್ನು ಹೊಡೆಯುತ್ತ ಕಟ್ಟುತ್ತಾ ಬೆಳೆಸುತ್ತಾ ಬಂದಿದ್ದಾನೆ ಆದರೆ ಹಿಂದಿನ ಸೃಷ್ಟಿಯನ್ನು ನಾಶ ಮಾಡುತ್ತಾ ಬಂದಿರುವುದು ಬರುತ್ತಿರುವುದು ಎಷ್ಟು ಸರಿ? […]Read More
ತಿಳಿದ ಜ್ಞಾನಿಗೆ ಎಲ್ಲ ಗಿಡ ಬಳ್ಳಿ ಔಷಧವುಕಳೆಯ ರೂಪದಿ ಬೆಳೆದ ಮುಳ್ಳುಗಿಡ ಕೂಡಇಳೆಯೊಳಗೆ ಬೆಳೆದಿರುವ ಸಸ್ಯಕೋಟಿಗಳೆಲ್ಲಬೆಲೆಯುಳ್ಳ ಔಷಧವು- || ಪ್ರತ್ಯಗಾತ್ಮ || ಕೆಲವು ಗಿಡಗಳ ಬೇರು ಕೆಲವು ಮರಗಳ ತೊಗಟೆ,ಕೆಲವು ಗಿಡಗಳ ಹೂವು, ಕೆಲವುಗಳ ಕಾಯಿಕೆಲವು ಎಲೆಗಳ ತರಗು, ಕೆಲ ಕೆಲವು ಚಕ್ಕೆಗಳುಹಲವು ಬಗೆ ಔಷಧವು- || ಪ್ರತ್ಯಗಾತ್ಮ || ವರದಕ್ಷಿಣಿಗೆ ಮೂಲ ವರನಲ್ಲ ನಿಜವ ತಿಳಿವರನ ತಾಯಿಯೊ ಮೇಣು ಅಕ್ಕ ತಂಗಿಯರೊಪರಿಪರಿಯ ಪ್ರಾರ್ಥನೆಗೂ ಇವರು ಮಣಿಯರು ಕಾಣಕರುಬುವುದು ಪೆಣ್ಗೆ ಪೆಣ್- || ಪ್ರತ್ಯಗಾತ್ಮ || ತಾನು […]Read More
ಕಳೆದ ಸಂಚಿಕೆಯಿಂದ…. ಪಶ್ಚಿಮ ದಿಗ್ವಲಯವನ್ನು ಆರಕ್ತಸಿಕ್ತವನ್ನಾಗಿಸುತ್ತ ಸೂರ್ಯ ಅಸ್ತಂಗತನಾದನು. ನಾಲ್ಕು ದಿಕ್ಕಿಗೂ ಪರ್ವತ. ಉದ್ದವಾಗಿ ಮಲಗಿರುವ ಅಷ್ಟು ಎತ್ತರವಲ್ಲದ ಪರ್ವತಶ್ರೇಣಿ. ನಡು ನಡುವೆ ದೊಡ್ಡ ದೊಡ್ಡ ಬಂಡೆಗಳು ಎದ್ದು ನಿಂತಿವೆ. ಪರ್ವತದಲ್ಲಿ ಎಲ್ಲಿ ನೋಡಿದರೂ ಮುಳ್ಳು ಕಾರೆಗಿಡಗಳು, ಕಾಡ ಎಲಚಿಮರಗಳೇ ಕಾಣಿಸುತ್ತಿದ್ದವು. ಇಂಥ ಪರಿಸರದ ನಡುವೆ ಚಿತ್ರಕ ಹಾಗೂ ರಟ್ಟಾ ಕುದುರೆಯನ್ನೇರಿ ನಿಂತಿದ್ದಾರೆ. ರಟ್ಟಾ ಮೌನವಾಗಿ ಚಿತ್ರಕನ ಕಡೆ ನೋಡಿದಳು. ಅವಳ ಮುಖದಲ್ಲಿ ಒಂದು ವಿಚಿತ್ರವಾದ ನಗು ಕಾಣಿಸಿತು. ಅವರು ಪರ್ವತವನ್ನು ದಾಟಲು ಕೆಲವೊಮ್ಮೆ ಸರಿದಾರಿಯಲ್ಲಿ, ಕೆಲವೊಮ್ಮೆ […]Read More
ವಿಶ್ವ ಟೆಲಿವಿಷನ್ ದಿನ – ನವೆಂಬರ್ 21 ಟಿ ವಿ ಕಂಡು ಹಿಡಿದ್ದದ್ದು ಯಾರು? ನವೆಂಬರ್ 21 ವಿಶ್ವ ಟೆಲಿವಿಷನ್ ದಿನ, ಮಾನವನ ದ್ಯೆನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಹಾಗು ಪ್ರಪಂಚದಲ್ಲಿ ಸಂವಹನ ಕ್ಷೇತ್ರದಲ್ಲಿ ಆದ ಕ್ರಾಂತಿಯನ್ನು ನೆನೆಯುವ ಸಲುವಾಗಿ 17 ಡಿಸೆಂಬರ್ 1996 ರಂದು ಯುನ್ಯೆಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಪ್ರತಿ ವರ್ಷದ ನವಂಬರ್ 21 ನ್ನು ವಿಶ್ವ ಟೆಲಿವಿಷನ್ ದಿನವೆಂದು ಘೋಷಿಸಿತು. ನೀವು ದಿನವೂ ನಿಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸುವ ಈ ಟಿ ವಿ ಯನ್ನು […]Read More