ಮತ್ಸ್ಯತೀರ್ಥ – ಇಲ್ಲಿ ಮೀನೇ ದೇವರು

ಮತ್ಸ್ಯತೀರ್ಥ – ಇಲ್ಲಿ ಮೀನೇ ದೇವರು ‘ಮತ್ಸ್ಯತೀರ್ಥ’ ಇದೇನಪ್ಪಾ ಹೊಸ ಹೆಸರು ಅನ್ನಿಸಬಹುದು ಅಲ್ಲವೇ? ಹೌದು ಆದರೆ ಇದು ಸತ್ಯ, ಮತ್ಸ್ಯವನ್ನೇ (ಮೀನು) ವಿಶೇಷವಾಗಿ ಪೂಜ್ಯನೀಯ ಭಕ್ತಿಭಾವದಿಂದ ಪೂಜಿಸಲಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಮತ್ಸ್ಯತೀರ್ಥವಿದೆ. ಇದು ಬೆಂಗಳೂರಿನಿಂದ ಸಕಲೇಶಪುರ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಾಗುವಾಗ ಕೊಕ್ಕಡ ಎಂಬಲ್ಲಿಂದ ನೇರವಾಗಿ ಮುಂದಕ್ಕೆ 20 ಕಿ.ಮೀ ದೂರದ ಶಿಶಿಲ ಎಂಬಲ್ಲಿದೆ. ಶಿಶಿಲೇಶ್ವರ ಹೆಚ್ಚು ಆಕರ್ಷಣೀಯವಾಗಿರುವುದು ಅಲ್ಲಿರುವ ಅಪೂರ್ವವಾದ ಮತ್ಸ್ಯ ಸಂಕುಲದ ಕಾರಣದಿಂದ. […]Read More

ನನ್ನ ಪ್ರೀತಿ ನಾಡು

ನನ್ನ ಪ್ರೀತಿ ನಾಡು ಕರುನಾಡುನಮ್ಮ ತಾಯ್ನಾಡುಇಲ್ಲಿದೆ ಶಿಲೆಗಳಹಳೆಬೀಡು !!೧!! ಗೊಮ್ಮಟೇಶನನೆಲೆನಾಡುಕಾಣಬಹುದಿಲ್ಲಿಹೊರನಾಡು !!೨!! ಸಹ್ಯಾದ್ರಿಯಲ್ಲಿನದಟ್ಟಕಾಡುತುಂಗೆ ಕಾವೇರಿಜನಿಸಿದ ನಾಡು !!೩!! ಕವಿ ಪುಂಗವರುಹುಟ್ಟಿದ ನಾಡುಗಂಡುಗಲಿಗಳುಮೆಟ್ಟಿದ ನಾಡು !!೪!! ಪಂಚಲಿಂಗೇಶ್ವರಸ್ವಾಮಿಯ ತಲಕಾಡುಸಾಧು – ಸಂತರುಗಳತಪ್ಪಸ್ಸಿನ ಬೀಡು !!೫!! ಕಲಾ ತಪಸ್ವಿಗಳಔಪಾಸನೆ ನೋಡುನಡೆದಾಡುವದೇವರಿದ್ದ ನಾಡು !!೬!! ಜೊತೆಯಲ್ಲಿದ್ದಅಪ್ಪುದೇವ್ರಾದ ನಾಡುಶ್ರೀಗಂಧದ ನಾಡುಹೊನ್ನಿನ ಬೀಡು !!೭!! ವೃಷಬ್ ರ ಕಾಂತಾರಭಕ್ತಿಯ ಗೂಡುಪ್ರಪಂಚದಾಧ್ಯಂತಪಸರಿಸಿತು ನೋಡು !!೮!! ಎಲ್ಲೆಲ್ಲೂ ಹರಡಿದೆಕನ್ನಡದ ಸೊಗಡುಎಷ್ಟು ವರ್ಣಿಸಿದರುಮುಗಿಯದ ಹಾಡು !!೯!! ೭ ಜನ್ಮಕ್ಕೂ ಇಲ್ಲೇಹುಟ್ಟುವೆನೆಂದುಪ್ರತಿಜ್ಞೆಯ ಮಾಡುಕನ್ನಡಕ್ಕೀಗ ಜೈಹಾಡು!!೧೦!! ಗೀತಾಚಲಂRead More

ಚೆಲುವ ಕನ್ನಡ ನಾಡು

ಚೆಲುವ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗಿರುವಕನ್ನಡ ನಾಡೆಲ್ಲವನು ನೀನೊಮ್ಮೆ ನೋಡುಕೈ ಬೀಸಿ ಕರೆಯುತಿಹವು ಹಂಪಿ ಬಾದಾಮಿಪಟ್ಟದಕಲ್ಲು ಐಹೊಳೆ ಬೇಲೂರು ಹಳೇಬೀಡು ಬೆಂದಕಾಳೂರು ದಸರೆಯ ಮೈಸೂರುಕಡಲತೀರಗಳು ವೀರ ಚೆನ್ನಮ್ಮನ ಕಿತ್ತೂರುಕೊಡಗಿನ ಬೆಡಗು ಜೋಗ ತಡಸಲು ನೀರುಚಾಮುಂಡಿ ಬಾಹುಬಲಿ ಹರಸಲು ನಿಂತಿಹರು ಮಲ್ಲಿಗೆ ಕಂಪು, ಶಿಲೆಗಳ ಸಂಗೀತದಿಂಪುನಂದಿಗಿರಿಧಾಮಗಳು ಮೈಮನಕೆ ತಂಪುನೋಡಿ ಪಕ್ಷಿಧಾಮ ಬನವಾಸಿ ಆಗುಂಬೆನಾಡಿನಾಚೆಗೂ ಪ್ರಸಿದ್ಧ ಚನ್ನಪಟ್ಟಣ ಗೊಂಬೆ ಪಂಪ ರನ್ನರ  ಪದಗಳ ಚಂದದ ನುಡಿಯುಜಗಕೆಲ್ಲ ವಚನಗಳ ಬೆಳಕು ಚೆಲ್ಲಿದ ನುಡಿಯು ಕೀರ್ತನ ಪರಿಮಳ ಮಳೆಗರೆದ ನುಡಿಯುಅಷ್ಟ ಜ್ಞಾನಪೀಠ ಗೆದ್ದ ಹೆಮ್ಮೆಯ […]Read More

ಏಕತೆಯ ಸರದಾರ

ಏಕತೆಯ ಸರದಾರ ಬಾಲ್ಯದಿ ದಿಟ್ಟತನ ಮೆರೆದ ಉಕ್ಕಿನ ಮನುಷ್ಯವಕೀಲಿ ಓದಿ,ವಿದೇಶದಿ ಅಣ್ಣನ ಓದಿಸಿದವರುಪ್ಲೇಗ್ ಬಂದಾಗ ಸ್ನೇಹಿತರ ಕಾಪಾಡಿದವರುಕಾಯಕದಿ ಸತಿ ವಿರಹವನು ನುಂಗಿದವರು ಇಂಗ್ಲೆಂಡನಲಿ ಓದಿ ವಕೀಲಿ ಕೈಗೊಂಡವರುಗಾಂಧೀಜಿ ಹೆಗಲಿಗೆ ಹೆಗಲು ಕೊಟ್ಟವರುಖೇಡಾ ಬಾರ್ಡೋಲಿ ಹೋರಾಟ ‘ಸರದಾರ’ಪ್ರಗತಿಪರ ವ್ಯಾಪಕ ಚಳವಳಿ ಹೂಡಿದವರು ಜಿನ್ನಾ ಹಠಕ್ಕಾಗಿ ಗಾಂಧೀಜಿಯ ತಡೆದವರುಎಪ್ಪತ್ತೆರಡರ ಯುವಕ ನೂರಾರು ಅರಸರನುಸಾಮೋಪಾಯದಿ ಗೆದ್ದು ತೋರಿಸಿದವರುಬ್ರಿಟಿಷ್‌ ಇಂಡಿಯಾ ಇಂಡಿಯಾ ಮಾಡಿದವರು ಜನಮತವ ಕೇಳಿ ಜುನಾಗಢವನು ಪಡೆದವರುಬಗ್ಗದ ನಿಜಾಮನ ಬಗ್ಗು ಬಡಿದ ‘ಬಿಸ್ಮಾರ್ಕ್’ಭಾರತವ ಒಗ್ಗೂಡಿಸಿದ ಅಪರೂಪದ ರತ್ನಏಕತಾ ಸರದಾರರಿಗೆ ‘ಏಕತಾ ಮೂರ್ತಿ’ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 55

ಹುಲಿ-ಚಿರತೆ-ಸಾರಂಗ-ನರಿ-ಕರಡಿ-ಖಡ್ಗಮೃಗಮೊಲ-ಜಿಂಕೆ-ಕಾಡೆಮ್ಮೆ-ಸೀಳ್ನಾಯಿ-ಸಿಂಹಸಲಗ-ವಾನರ-ತೋಳ-ಹಂದಿ-ಮುಂಗುಸಿ-ಕೋಳಿಮಲೆನಾಡಿನೈಸಿರಿಯೊ !- || ಪ್ರತ್ಯಗಾತ್ಮ || ಕಾಡು ಕಾಷ್ಠದ ಗೂಡು, ಔಷಧಿಯ ನೆಲೆವೀಡುಮೂಡು ಮನೆಯಲಿ ಬಳಕೆ ಇದರ ಮರಮುಟ್ಟುನಾಡಿನಾದಾಯಕ್ಕೆ ಕಾಡು ಮೂಲಾಧಾರಕಾಡು ಜೇನಿನ ಗೂಡು- || ಪ್ರತ್ಯಗಾತ್ಮ || ಮುಳ್ಳುಗಿಡ ನೂರಾರು, ಕಳ್ಳಿಗಿಡ ನೂರಾರುಬಳ್ಳಿಗಳು ಎಷ್ಟೊಂದು ಎಣಿಸಿದವರಿಲ್ಲಎಲ್ಲೆಡೆಗೂ ಹಬ್ಬಿರುವ ಗೇಣುದ್ದ ಸಸ್ಯಗಳುಇಲ್ಲೇತಕೆನ್ನದಿರು- || ಪ್ರತ್ಯಗಾತ್ಮ || ಒಂದೊಂದು ಗಿಡ ಒಂದು ಜಾತಿ ಗಿಡಮೂಲಿಕೆಯುಒಂದೊಂದು ಗಿಡ ಒಂದು ರೋಗಾಪಹಾರಿಹಿಂದಿನವರಿದನೆಲ್ಲ ತಿಳಿದೆ `ಆಯುರ್ವೇದ’ವೆಂದರುವನೌಷಧಿಯ- ||| ಪ್ರತ್ಯಗಾತ್ಮ || ಎನ್. ಶಿವರಾಮಯ್ಯ (ನೇನಂಶಿ)ವಾಚನ: ಗೌರಿದತ್ತRead More

ಸ್ವಾರ್ಥ

ಸ್ವಾರ್ಥ ನಿಜಕ್ಕೂ ನಾನು ಈ ರೀತಿಯ ದುಸ್ಥಿತಿ ಬರುತ್ತದೆಂದು ಊಹಿಸಿರಲಿಲ್ಲ..ಸರಿ ನೇರವಾಗಿಯೇ ವಿಷಯಕ್ಕೆ ಬರುವೆ. ನಾನು ದಾಂಡೇಲಿ ಕಾಡಿನಲ್ಲಿ ನನ್ನ ಪಾಡಿಗೆ ನನ್ನ ಪುಟ್ಟ ತಂಗಿ ಮತ್ತು ತಾಯಿ ಜೊತೆಗೆ ಹಾಯಾಗಿದ್ದೆ ನನಗೆ ಚೆನ್ನಾಗಿ ನೆನಪಿದೆ ಸರಿ ಸುಮಾರು 3 ತಿಂಗಳ ಕೂಸು. ಗೆಳೆಯ ಕರಿಯನ ಜೊತೆಗೆ ಆಟವಾಡುತ್ತಿದ್ದೆ ಒಂದು ದಿನ ಈ ರಾಮಸ್ವಾಮಿ ಕಾಡಿನ ಸಫಾರಿಗೆ ಬಂದು ನನ್ನ ಅನಾಮತ್ತಾಗಿ ತನ್ನ ಜಿಪ್ಸಿಯಲ್ಲಿ ಹಾಕಿಕೊಂಡು ಕರೆದೊಯ್ದು. ಪ್ರತಿನಿತ್ಯ ತರಬೇತಿ ಹೆಸರಲ್ಲಿ ನಾನ ತರಹದ ಪ್ರಯೋಗಗಳ ನನ್ನ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 39

ಹಿಂದಿನ ಸಂಚಿಕೆಯಿಂದ…. ಹೋರಾಡಬೇಕಾದ ಸಂದರ್ಭ ಒದಗಿ ಬಂದರೆ ಚಿತ್ರಕ ಎಂದೂ ಧೈರ್ಯ ಕಳೆದುಕೊಳ್ಳುತ್ತಿರಲಿಲ್ಲ. ಯುದ್ಧಕ್ಕೆ ಮುಂಚೆ ಬುದ್ಧಿವಂತನಾದ ಸೇನಾಪತಿಯ ಹಾಗೆ ಅವನು ಎಲ್ಲ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡನು. ರಟ್ಟಾಳ ಕೈ ಹಿಡಿದು ಅವನು ಅವಳನ್ನು ಕೊಠಡಿಗೆ ಕರೆದುಕೊಂಡು ಬಂದು ಕುಳ್ಳಿರಿಸಿದನು. ಅವಳ ಕೈ ಹಿಮದಂತೆ ಕೊರೆಯುತ್ತಿತ್ತು. ತುಟಿಗಳು ನಡುಗುತ್ತಿದ್ದವು. ನಾರೀಮಣಿ ಹೊರಗೆ ಪುರುಷರಂತೆ ಎಷ್ಟೇ ಚೆನ್ನಾಗಿ ಅಭಿನಯಿಸಿದರೂ, ಆಂತರ್ಯದಲ್ಲಿ ಅವರು ಅಬಲೆಯರು! ಚಿತ್ರಕನು ಅವಳ ಮುಂದೆ ಕುಳಿತನು. ಧೈರ್ಯದಿಂದ ಅವಳನ್ನು ನಾಲ್ಕಾರು ಪ್ರಶ್ನೆ ಕೇಳಿ, ಕಿರಾತ ಮತ್ತು […]Read More

ಮುಂಗುಸಿಗಳು

ಮುಂಗುಸಿಗಳು ಮುಂಗುಸಿಗಳು ಮೊನಚಾದ ಮೂಗುಗಳುಳ್ಳ, ಸಣ್ಣ ಕಿವಿಗಳು ಮತ್ತು ಉದ್ದವಾದ ತುಪ್ಪುಳದಂತಿರುವ ಬಾಲವನ್ನು ಹೊಂದಿರುವ ಪ್ರಾಣಿ. ಮುಂಗುಸಿಗಳನ್ನು ಮೊದಲು (Civet) ಸಿವೆಟ್ ಗಳ ವಿವಿರಿಡೀ ಕುಟುಂಬಕ್ಕೆ ಸೇರಿಸಲಾಗಿತ್ತು. ಆದರೆ ಅವುಗಳ ವಿಭಿನ್ನ ಅಂಗರಚನೆ ಮತ್ತು ಇನ್ನುಳಿದ ಲಕ್ಷಣಗಳಿಂದ ಹರ್ಪೆಸ್ಟಿಡೆ – Herpestidae ಕುಟುಂಬಕ್ಕೆ ಸೇರಿಸಲಾಗಿದೆ. ಅರ್ಧ ವರ್ತುಳದ ಚಿಕ್ಕ ಕಿವಿಗಳು, ಉದ್ದವಾದ ಬೆರಳು ಹಾಗು ಉಗುರುಗಳಿರುವ ಗಿಡ್ಡ ಕಾಲು ಮೊನಚು ಮುಸುಡಿ ಇವುಗಳ ಲಕ್ಷಣಗಳಾಗಿವೆ. ಮಾಂಸಹಾರಿಗಳಾದರೂ ಕೆಲವು ಸಲ ಹಣ್ಣು ಹಂಪಲನ್ನು ತಿನ್ನುತ್ತವೆ. ಹೆಚ್ಚಿನವರು ಮುಂಗುಸಿಗಳು ಮರ […]Read More

ಸುಂದರ ಜೀವನದ ಉದ್ದೇಶ

ಸುಂದರ ಜೀವನದ ಉದ್ದೇಶ ನಮ್ಮ ಜೀವನದ ಉದ್ದೇಶ ಏನು? ಮುಕುಂದಾನಂದ ಸ್ವಾಮೀಜಿಗಳು ಅವರ ಒಂದು ಪ್ರವಚನದಲ್ಲಿ ಜೀವನದ ಉದ್ದೇಶದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ. ಒಮ್ಮೆ ಒಬ್ಬ ಕಾರಿನ ಚಾಲಕ ಜಂಕ್ಷನಿನಲ್ಲಿ ನಿಂತಿರುವ ಹಿರಿಯ ದಾರಿಹೋಕ ವ್ಯಕ್ತಿಯಲ್ಲಿ, “ಈ ದಾರಿ ನನ್ನನ್ನು ಎಲ್ಲಿ ಕರೆದುಕೊಂಡು ಹೋಗುತ್ತದೆ ಎಂದು ಕೇಳುತ್ತಾರೆ”. ಅದಕ್ಕೆ ಆ ಹಿರಿಯ, “ನೀವು ಎಲ್ಲಿಗೆ ಹೋಗಬೇಕು” ಎಂದು ಕೇಳುತ್ತಾರೆ. ಅದಕ್ಕೆ ಆತ ನಿರ್ದಿಷ್ಟವಾಗಿ “ಇಂತಹುದೇ ಕಡೆ ಎಂಬುದು ಇಲ್ಲ”, ಅಂತ ಹೇಳಿದಾಗ ಹಿರಿಯ ವ್ಯಕ್ತಿ “ಹಾಗಾದರೆ […]Read More

ಪುನೀತ

ಪುನೀತ ‘ಮೌರ್ಯ’ ‘ವಂಶಿ’ ‘ಅರಸು’ ಡಾ’ರಾಜ್’ ಸುತ‘ಪೃಥ್ವಿ’ ತೂಕದ ಪಾರ್ವತಮ್ಮ ‘ಅಂಜನಿ ಪುತ್ರ’‘ನಿನ್ನಿಂದಲೇ’ ‘ಬೆಟ್ಟದ ಹೂವು’ ಸಾಧ್ಯ ಎನಲು‘ಚಲಿಸುವ ಮೋಡಗಳ’ ಬೆನ್ನೇರಿದ’ಭಾಗ್ಯವಂತ’ ‘ಯಾರಿವನು’ ‘ದೊಡ್ಮನೆ ಹುಡುಗ’ ಎಂದಅಶ್ವಿನಿಯವರಿಗೆ ‘ಮೈತ್ರಿ’ ‘ಪ್ರೇಮದ ಕಾಣಿಕೆ’ಕೊಟ್ಟ ‘ರಾಮ’ ‘ಪರಶುರಾಮ  ‘ನಮ್ಮ ಬಸವ’‘ಮಿಲನ’ದ ಶುಭಫಲ  ‘ಎರಡು ನಕ್ಷತ್ರಗಳು’ ‘ಯಾರೇ ಕೂಗಾಡಲಿ’ ‘ಬಿಂದಾಸ್’ ನಟನೆ ಧೀರ‘ರಣವಿಕ್ರಮ’ನಂತೆ  ಬದುಕಿದ ‘ರಾಜಕುಮಾರ’ಯುವಕರ ಮೆಚ್ಚಿನ ‘ಜಾಕಿ’ ‘ಅಣ್ಣಾ ಬಾಂಡ್’‘ಫ್ಯಾಮಿಲಿ ಗಳ ಪವರ್’ ಹೆಚ್ಚಿಸಿದ  ‘ಅಪ್ಪು’ ‘ಅಭಿ’ಮಾನಿ ದೇವರುಗಳ ‘ಭಕ್ತ ಪ್ರಹ್ಲಾದ’ಅನಾಥರ ನಾಥ ಈ ಜೀವಂತ ‘ಪರಮಾತ್ಮ’ಕೋಟಿ ಕೋಟಿ ‘ವೀರ […]Read More