ಸೈ ಸೈ ಅಪ್ಪು

ಸೈ ಸೈ ಅಪ್ಪು ಸೈ ಸೈ ಸೈ ಅಪ್ಪು ಸೈ ಸೈ ಸೈಸೈ ಸೈ ಸೈ ಎಲ್ಲದಕ್ಕನೂ ಸೈ ನಟನೆಗು ಸೈ ಹಾಡೋಕ್ ಸೈಕುಣಿಯೊದ್ರಲ್ಲಂತೂ ಅಪ್ಪು ಎತ್ತಿದ ಕೈ ಕೈ ಕೈ ನಮ್ಮ ಅಪ್ಪು ಸೈ ಸೈ ಸೈ ಅಪ್ಪು ಸೈ ಸೈ ಸೈಸೈ ಸೈ ಸೈ ಎಲ್ಲದಕ್ಕನೂ ಸೈ ಸ್ನೇಹಕ್ಕು ಸೈ ಪ್ರೀತಿಗೂ ಸೈಮಮತೆಯಲ್ಲಂತೂ ಎತ್ತಿದ ಕೈ ಕೈ ಕೈ ನಮ್ಮ ಅಪ್ಪು ಸೈ ಸೈ ಸೈ ಅಪ್ಪು ಸೈ ಸೈ ಸೈಸೈ ಸೈ ಸೈ […]Read More

ಜೀವರಕ್ಷಕ ಓಝೋನ್ ಪದರ

ಜೀವರಕ್ಷಕ ಓಝೋನ್ ಪದರ ನಮ್ಮ ಭೂಮಿಯ ಮೇಲಿನ ವಾಯುಮಂಡಲದಲ್ಲಿನ ಭೂರಕ್ಷಕ ಓಜೋನ್ ಪದರವು ದಿನೇ ದಿನೇ ಹಾಳಾಗುತ್ತಿರುವುದು ಎಲ್ಲರಿಗು ತಿಳಿದಿರುವ ಕಹಿ ಸತ್ಯ. ಈ ನಿಟ್ಟಿನಲ್ಲಿ ಓಜೋನ್ ಪದರದ ಬಗ್ಗೆ ಅದರ ಮಹತ್ವ ಹಾಗು ಅದರ ರಕ್ಷಣೆಯ ಬಗ್ಗೆ ತಿಳಿಯೋಣ. ಓಝೋನ್ (O3) ಅಥವಾ ಟ್ರಿಯೊಕ್ಸಿಝೇನ್ ಎಂದು ಕರೆಯಲ್ಪಡುವ ಈ ಅನಿಲವು ಮೂರು ಆಮ್ಲಜನಕ ಪರಮಾಣುಗಳನ್ನು ಒಳಗೊಂಡ ಅಣುವಾಗಿದೆ. ಆಮ್ಲಜನಕದ ಅಣುಗಳು ಪರಮಾಣು ಆಮ್ಲಜನಕದ ಎರಡು ವಿಭಿನ್ನ ಶಕ್ತಿಯ ಮಟ್ಟಗಳಾಗಿ ವಿಭಜನೆಗೊಳ್ಳಲು ಸಿದ್ಧಗೊಂಡಾಗ ಓಝೋನ್ ರೂಪುಗೊಳ್ಳುತ್ತದೆ. ಅದೇ […]Read More

ಅಲೆಗಳೂ ಮಾತನಾಡುತ್ತವೆ

ಅಲೆಗಳ ಕಥೆ – ಸಮರ್ಥ ಶ್ರೀಧರ ಸಾಹಿತ್ಯದ ಮುಖಾಂತರವೇ ಪರಿಚಯವಾದ ಗೆಳೆಯ, ನನ್ನ ಕಾಲದ ಬಡ್ಡಿಂಗ್, ಕಥೆಗಾರ ಹಾಗೂ ಸಭ್ಯ ವ್ಯಕ್ತಿತ್ವದ “ಸಮರ್ಥ ಶ್ರೀಧರ” ರವರು ವೃತ್ತಿಯಿಂದ ಗ್ರಾಫಿಕ್ ಡಿಸೈನರ್ ಆದರೂ ಕೂಡ ಸಾಹಿತ್ಯದ ಕಡೆಗೆ ಅವರಿಗಿರುವ ಒಲವು ಬೆರಗು ಮೂಡಿಸುತ್ತದೆ. ಅವರ ಚೊಚ್ಚಲ ಕೃತಿ “ಅಲೆಗಳ ಕಥೆ” ಕಥಾಸಂಕಲನ ಕುರಿತ ನನ್ನ ಅಭಿಪ್ರಾಯ ಇಂತಿದೆ. ಶ್ರೀಧರ ಸಮರ್ಥ ರವರು ಈ ಸಂಕಲನದ ಮೂಲಕ ಕಥೆ ಕಟ್ಟಲು ಸಮರ್ಥರು ಎನಿಸಿಕೊಂಡಿದ್ದಾರೆ. ಇಲ್ಲಿನ ಎಲ್ಲಾ ಕಥೆಗಳಲ್ಲೂ ಜೀವನದ ಗಾಢ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 54

ವರಸೆ ಚಳಿ ರೋಗಿಯನು ಮೂಡಣಕೆ ಮುಖಮಾಡಿಅರಿಸಿನದ ಬಟ್ಟೆಯನು ನಾಡಿಯೆಡೆ ಕಟ್ಟುನರನ ಬಲಗೈ ನಾಡಿ, ನಾರಿಯರ ಎಡಗೈಗೆವರಸೆ ಚಳಿ ನಿಲ್ಲುವುದು- || ಪ್ರತ್ಯಗಾತ್ಮ || ಎಂಟೆಂಟು ತುಂಬೆ ಹೂ, ತುಂಬೆ ಶ್ರೀತುಳಸಿ ಎಲೆಎಂಟು ಕರಿ ಮೆಣಸೊಂದು ಬೆಳ್ಳುಳ್ಳಿ ಹಿಲುಕುಒಂಟಿ ವೀಳ್ಯ – ಲವಂಗ ಅರೆದು ನುಂಗಿಸಿ, ಮೇಲೆಗುಟುಕ ನೀರ- || ಪ್ರತ್ಯಗಾತ್ಮ || ಒಂದು ಗಜ್ಜುಗ ಒಡೆದು ಅದರ ಬಿತ್ತವ ತೆಗೆದುಮಂದ ಕಲಗಚ್ಚಿನಲಿ ತೇದು ಹಚ್ಚಿದರೆನೊಂದ ವೃಷಣದ ಊತ ಇಳಿದು ಮೊದಲಂತಹುದುಒಂದೆರಡು ಸಲ ಹಚ್ಚು- || ಪ್ರತ್ಯಗಾತ್ಮ || […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 38

ಪರಿಚ್ಛೇದ – 13ಚೀನೀ ಪರಿವ್ರಾಜಕ (ಚೀನೀ ಯಾತ್ರಿಕ) ಸೂರ್ಯೋದಯವಾಗುತ್ತಲೇ ಪಾಂಥಶಾಲೆಯ ಬಾಗಿಲು ತೆರೆಯಿತು. ಪಾರಸಿಕ ವ್ಯಾಪಾರಿಗಳು ಅಷ್ಟು ಹೊತ್ತಿಗಾಗಲೇ ಒಂಟೆ ಮತ್ತು ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಸಿದ್ಧತೆ ಮಾಡಿಕೊಂಡಿದ್ದರು. ಪಾಂಥಶಾಲೆಯ ಶುಲ್ಕವನ್ನು ಪಾವತಿ ಮಾಡಿ ಹೊರಗೆ ಹೊರಟರು. ಅವರು ಇಡೀ ಆರ್ಯಾವರ್ತವನ್ನೆಲ್ಲ ಸುತ್ತಾಡುವರು. ಅಲ್ಲಲ್ಲಿ ದಾರಿ ಪಕ್ಕದಲ್ಲಿ ವಿಶ್ರಮಿಸಿಕೊಂಡು ಪ್ರಯಾಣ ಮಾಡುವರು. ಚಿತ್ರಕ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ. ಇಷ್ಟಾದರೂ ಅವನಲ್ಲಿ ಎಳ್ಳಷ್ಟೂ ಆಯಾಸ ಕಾಣುತ್ತಿರಲಿಲ್ಲ. ಅವನು ಅತ್ತಿತ್ತ ನೋಡಿದನು. ಪಾಂಥ ಶಾಲೆಯೆಲ್ಲ ಬಿಕೋ ಎನ್ನುತ್ತಿದೆ. ಆದರೆ […]Read More

ಸಂಧ್ಯಾರಾಗ – ಅ.ನ. ಕೃ – ಪುಸ್ತಕ ವಿಮರ್ಶೆ

ಸಂಧ್ಯಾರಾಗ – ಅ.ನ. ಕೃಷ್ಣರಾಯರು – ಪುಸ್ತಕ ವಿಮರ್ಶೆ ಸಂಧ್ಯಾರಾಗ – ಸುಮಾರು 87 ವರ್ಷಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಹೊಸತೇನಿಸೋ ಹಾಗೆ ಸಂಗೀತಕ್ಕೆ ಸಂಬಂಧಿಸಿದ ಪುಸ್ತಕವಿದು, ಇಂದಿಗೂ ಜೀವಂತವಾಗಿರುವುದು ಸಂಧ್ಯಾರಾಗದ ಹಿರಿಮೆ. ಕಾಲ ಬದಲಾಗಬಹುದು ಆದರೆ ಭಾವ ಬದಲಾದೀತೆ.? ಪುಸ್ತಕ ಓದು ಓದುತ್ತಾ ಸಂಗೀತವನ್ನೇ ಕೇಳಿದಷ್ಟು ಇಂಪಾಗಿತ್ತು ಈ ಪುಸ್ತಕದ ಭಾಷಾಲಹರಿ. ಕನ್ನಡ ಪ್ರೇಮವೇ ಇಲ್ಲದೆ ಇರೋ ‘ಬೀಚಿ’ ಯವರಿಗೆ ಮೊಟ್ಟ ಮೊದಲಾಗಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿ, ಓದಿದ ಮೊದಲ ಪುಸ್ತಕವಿದು. ಹಾಗೆ ಕನ್ನಡ ಸಾಹಿತ್ಯ […]Read More

ಗಮನ ನಿಮ್ಮ ಮೇಲೆ ಕೇಂದ್ರೀಕರಿಸಿ

ಗಮನ ನಿಮ್ಮ ಮೇಲೆ ಕೇಂದ್ರೀಕರಿಸಿ ನಾವು ಯಾವಾಗಲು ಬೇರೆಯವರು ನಮ್ಮ ಬಗ್ಗೆ ಒಳ್ಳೆಯ ಯೋಚನೆ ಮಾಡಲಿ, ನಮ್ಮ ಬಗ್ಗೆ ಎಲ್ಲಾರೂ ಹೊಗಳಲಿ, ನಾವು ತುಂಬಾ ಒಳ್ಳೆಯವರು ಎಂದುಕೊಳ್ಳಲಿ ಎಂದು ನಿರೀಕ್ಷಿಸುತ್ತೇವೆ. ಈ ನಿರೀಕ್ಷೆ ಖಂಡಿತಾ ಸಾಧ್ಯವಿಲ್ಲ. ನಾವು ಏನೇ ಮಾಡಿದರು ಯಾರು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೋ ಯಾವಾಗಲು ಅವರು ಜನರೇ ಆಗಿರುತ್ತಾರೆ. ನೀವು ಶಿವ ಹಾಗು ಪಾರ್ವತಿಯ ಈ ಕಥೆ ಕೇಳಿರಬಹುದು, ಒಮ್ಮೆ ಶಿವ ಪಾರ್ವತಿಯೊಂದಿಗೆ, “ನಡೆ, ನಾವು ಮೃತ್ಯುಲೋಕಕ್ಕೆ ವಾಯುವಿಹಾರಕ್ಕೆ ಹೋಗೋಣ ಎನ್ನುತ್ತಾರೆ. ಪಾರ್ವತಿ […]Read More

ಮುತ್ತಿನ ಕಥೆ ….

ಮುತ್ತಿನ ಕಥೆ …. ಸಿಂಪಿ (Oysters) ಗಳನ್ನೂ “ದ್ವಿಕವಾಟ ಮೃದ್ವಂಗಿಗಳು” ಎಂದು ಕರೆಯಬಹುದು. ಇವು ಪ್ರಪಂಚದ ಅನೇಕ ಸಾಗರಗಳಲ್ಲಿ ಕಂಡುಬರುವುದು. ಆಭರಣಗಳಿಗೆ ಸುಂದರವಾದ ಜೊಡಿಸ್ಪಡುವ ಮುತ್ತುಗಳು ಇಂತಹ ಸಿಂಪಿಗಳಿಂದ ಹೊರತೆಗೆಯಲಾಗಿರುತ್ತೆ . ಆದರೇ ಇದರ ಹಿಂದೆ ಒಂದು ನೋವಿನ ಕಥೆ ಇದೆ. ಸಮುದ್ರದ ಮರಳು ಸಿಂಪಿನ ಕವಚವನ್ನ ಕೊರೆದು ಸೇರಿದಾಗ ಸಿಂಪು ಗಾಯಗೊಳ್ಳುತ್ತದೆ. ಆಗ ಪ್ಯಾರಾಸೈಟಗಳು, ಉಪದ್ರವಿ ಬ್ಯಾಕ್ಟೀರಿಯಾಗಳು ಸಿಂಪಿನ ಕವಚಗಳಲ್ಲಾದ ಸೀಳಿನ ಮುಖಾಂತರ ಅವುಗಳ ದೇಹ ಸೇರುತ್ತವೆ. ಪ್ಯಾರಾಸೈಟಗಳನ್ನ ಪ್ರತಿರೋಧಿಸುವುದಕ್ಕಾಗಿ ಸಿಂಪಿನ ಚಿಪ್ಪುಗಳ ಒಳಗೆ “ಆಗೊನೈಟ್” […]Read More

ದೀಪಾವಳಿ – ಧರ್ಮಾತೀತ ಹಾಗೂ ದೇಶಾತೀತ ಹಬ್ಬ

ದೀಪಾವಳಿ – ಧರ್ಮಾತೀತ ಹಾಗೂ ದೇಶಾತೀತ ಹಬ್ಬ ಭಾರತದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೀಪಾವಳಿ ಇದೊಂದು ಹಿಂದೂಗಳ ವಿಶೇಷ ಹಬ್ಬ. ಇದು ಭಾರತದವಷ್ಟೇ ಅಲ್ಲ, ಜಗತ್ತಿನ ಅನೇಕ ದೇಶಗಳಲ್ಲೂ ಆಚರಿಸಲ್ಪಡುವ ಧರ್ಮಾತೀತ ಹಾಗೂ ದೇಶಾತೀತ ಹಬ್ಬವಾಗಿದೆ. ಅಬಾಲವೃದ್ಧರೆಲ್ಲ ತುಂಬ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ‘ದೀಪ’ ಇದು ಕತ್ತಲು ಕಳೆಯುವ ಒಂದು ಸಾಧನ. ‘ಆವಳಿ’ ಎಂದರೆ ಸಾಲು. ‘ದೀಪಾವಳಿ’ ಎಂದರೆ ಸಾಲಾಗಿ ದೀಪಗಳನ್ನು ಹಚ್ಚುವುದು. ಕತ್ತಲೆ ಅಜ್ಞಾನದ ಸಂಕೇತ. ಬೆಳಕು ಜ್ಞಾನದ ಸಂಕೇತ. ದೀಪ […]Read More

ಘನ್ನ ದೃಶ್ಯ

ಘನ್ನ ದೃಶ್ಯ(ಜಲ ಷಟ್ಪದಿಯಲ್ಲಿದೆ) ತನ್ನಲಿಲ್ಲದಹೊನ್ನ ಬೆಳಕನುಮುನ್ನ ಬೇಡುತ ರವಿಯಲಿಚಿನ್ನದಂತಹರನ್ನ ಚಂದಿರಹೊನ್ನ ಹರಿಸಿದನಿಳೆಯಲಿ ಹರಿವ ನೀರಿನತೊರೆಯ ಮೇಗಡೆಮೆರೆದು ಹೊಳೆದಿದೆ ಬೆಳಕದುಗಿರಿಯನೇರುತಬೆರೆತು ಮುಗಿಲಲಿಸುರಿದ ಕರುಣೆಯ ಸೊಗಸದು ತನಗೆ ಸಿಕ್ಕಿದಘನದ ಬೆಳಕನುವಿನಯದಿಂದಲಿ ಹಂಚಿದತನಯನಂತೆಯೆಮನವನರಳಿಸಿಜನರ ಕತ್ತಲೆ ನೀಗಿದ ಸಾಕುತಿರುವನುಲೋಕವೆಲ್ಲವನೂಕಿ ಕತ್ತಲೆಯಾಚೆಗೆನಾಕ ಸೃಷ್ಟಿಸಿಚಾಕಚಕ್ಯದಿಶೋಕ ತಪ್ಪಿಸಿ ಜನತೆಗೆ ಹೊನ್ನ ಕಿತ್ತಳೆಬಣ್ಣವಾಗಿಹಚೆನ್ನ ಚಂದಿರ ಬಾನಲಿಇನ್ನು ಮರೆಯೆನುಘನ್ನ ದೃಶ್ಯವನನ್ನ ಮನದೊಳಗುಳಿಯಲಿ ಶೀಲಾ ಅರಕಲಗೂಡು (ಈ ಕವನವನ್ನು ಜೀವನ ಮೌಲ್ಯತಿಳಿಸುವ ವಿಜ್ಞಾನ ಗೀತೆಯೆಂದು ಭಾವಿಸಬಹುದು)Read More