ಚಿರತೆ – (Cheetha, Leopard, Jaguar, Panther) ಒಮ್ಮೆ ಸ್ನೇಹಿತನೊಬ್ಬನಿಗೆ ಮೂರು ಚಿತ್ರಗಳನ್ನು ತೋರಿಸಿ ಇದೇನೆಂದು ಕೇಳಿದೆ.ಮೂರು ಚಿತ್ರಗಳನ್ನು ಚಿರತೆ ಎಂದೇ ಹೆಸರಿಸಿದ ಹಾಗೂ ‘ಸರ್ ಇದೇನಿದು ತಮಾಷೆ’ ಮೂರು ಚಿರತೆಯಲ್ಲವೇ ಸರ್ ಎಂದ.ನಾನು ಈ ಮೂರಕ್ಕೂ ಬೇರೆ ಬೇರೆ ಹೆಸರಿದೆ ಎಂದು ಹೇಳಿದೆ. ಮಲೆನಾಡು ಕಡೆ ಇದನ್ನು ಚಿಟ್ಟೆ ಹುಲಿ ಅಂತಾನೂ ಕರೆಯುತಾರೆ. ಹಳದಿ ಮಿಶ್ರಿತ ಕಂದು ಬಣ್ಣದ ಪ್ರಾಣಿ ಚಿರತೆ. ಆದರೆ ಸಾಮಾನ್ಯವಾಗಿ ನಾವು ಕರೆಯುವುದು ಚಿರತೆಯೆಂದೇ ಇದರ ಮೂಲ ನಾಮ ಪ್ಯಾಂಥೇರಾ (Pantheras). […]Read More
ತುಮಕೂರಿನಿಂದ ಕುಣಿಗಲ್‍ಗೆ ಹೋಗುವ ಮಾರ್ಗದಲ್ಲಿ ಗೂಳೂರು ಎಂಬ ಊರಿನ ಹತ್ತಿರ ಬಲಕ್ಕೆ ತಿರುಗಿ ಅರ್ಧ ಕಿಮೀ ಹೋದರೆ ಸಿಗುವುದೇ ಕೈದಳ ಚನ್ನಕೇಶವಸ್ವಾಮಿ ದೇವಸ್ಥಾನ. ದ್ರಾವಿಡ ಶೈಲಿಯಲ್ಲಿರುವ ದೇವಸ್ಥಾನವನ್ನು ನಿರ್ಮಿಸಿದವನು ಶಿಲ್ಪಿ ಜಕಣಾಚಾರಿ. 1150 ನೇ ಇಸವಿಯಲ್ಲಿ ಈ ದೇವಸ್ಥಾನವನ್ನು ಇದೇ ಊರಿನವನಾಗಿದ್ದ ಜಕಣಾಚಾರಿ ನಿರ್ಮಿಸಿದ್ದನೆಂದು ಶಾಸನಗಳು ಹೇಳುತ್ತದೆ. ಕೈದಳ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಊರಿನ ಮೊದಲ ಹೆಸರು ಕ್ರೀಡಾಪುರವೆಂದಾಗಿತ್ತು. ಅಮರ ಶಿಲ್ಪಿ ಎಂಬ ಹೆಸರಿನಿಂದ ಪ್ರಖ್ಯಾತನಾದ ಜಕಣಾಚಾರಿ ಇದೇ ಊರಿನವನು ಎಂಬುದು ಬಹಳ ಜನಕ್ಕೆ ಗೊತ್ತಿಲ್ಲ. […]Read More
–ತಿರುವು– ತನ್ನ ಹೆಸರಿಗೆ ಬಂದ ಪತ್ರವನ್ನೇ ಕೈಯಲ್ಲಿ ಹಿಡಿದು ಕುಳಿತಿದ್ದಾಳೆ ಪಾರು. ಆ ಒಂದು ಪತ್ರ ತನ್ನ ಬಾಳಿನ ತಿರುವನ್ನೇ ಬದಲಿಸಬಹುದು ಎಂಬ ಯಾವ ಸುಳಿವು ಅವಳಿಗಿರಲಿಲ್ಲ. ಅವಳಿಗೆ ಅಂದು ನಡೆದ ಘಟನೆ ನೆನಪಾಯಿತು.ಪಕ್ಕದ ಮನೆಗೆ ಗಂಟಿನವನು ಬಂದಿದ್ದ. ಆಂಟಿ ,ಪಾರು ಸೀರೆ ನೋಡುತ್ತೀಯಾ? ಎಂದು ಕರೆದರು. ಹೋದ ಪಾರುವಿಗೆ, ಮನೆಗೆ ಬಂದಾಗ ಮಾವ (ಗಂಡ) ನಿಂದ ಬೈಗುಳ ದೊರೆಯಿತು. ಎರಡು ಮಕ್ಕಳ ಜವಾಬ್ದಾರಿ ಒಟ್ಟಿಗೆ ತಲೆ ಮೇಲಿದೆ. ನೀನೇನು ಮಾಡುತ್ತೀಯಾ? ಹಾಗೆ ಹೀಗೆ ಎಂದು, ಸ್ವಾಭಿಮಾನಿ […]Read More
–ಅಬ್ದುಲ್ಲಾಹಿ ಮದುವೆ– ನನಗೆ ಅಬ್ದುಲ್ಲಾಹಿ ಪರಿಚಯ ಯಾರಿಂದ ಆಯಿತೋ ಅಥವ ಹೇಗಾಯಿತೋ ಈಗ ನೆನಪಿಲ್ಲ. ಆತನಿಗೆ ಭಾರತೀಯರ ಎಲ್ಲ ಥರದ ನಡವಳಿಕೆಗಳ ಬಗ್ಗೆ ಬಹಳ ಆಸಕ್ತಿ ಹಾಗೂ ಗೌರವ. ಅವನು ಎಲ್ಲಿ ತನಕ ಓದಿದ್ದನೋ ನಾನರಿಯೆನಾದರೂ, ಹೆಚ್ಚಾಗಿ ಓದಿಕೊಂಡಿದ್ದವನು; ಹಾಗಾಗಿ ಒಬ್ಬ ಸಾಮಾನ್ಯ ಸೋಮಾಲಿಗಿಂತ ಹೆಚ್ಚು ತಿಳಿದವನು. ಹಿಂದಿನ ವಾರದ ಲೇಖನದಲ್ಲಿ ‘ಪ್ಲೇ ಬಾಯ್’ ಥರ ಎಂದು ಅವನ ದೈನಂದಿನ ನಡೆಯ ಬಗ್ಗೆ ಹೇಳಿದ್ದರೂ, ಅದು ಹೌದು ಮತ್ತು ಇಲ್ಲ ಎಂದರೇನೆ ಸಮುಚಿತ! ಒಮ್ಮೆ ಇದ್ದಕ್ಕಿದ್ದಂತೆ, ಈತನೊಬ್ಬ […]Read More
ಅನುಭವದಜೊತೆ ಅಧ್ಯಯನವೂಬೇಕು ಕವಿಗೆ ಮನದೊಳಗೆಅಡಗಿ ಕೂತಿದ್ದಾವೆನೂರೆಂಟು ಮಾತು ಹುಡುಕುತ್ತೇನೆ,ನಾಳೆಗೆ ಬರೆಯಲುಹೊಸ ಕವನ ಮನಕೊಪ್ಪುವಸೀರೆ ಹುಡುಕೋದಕ್ಕೆದಿನ ಸಾಲದು ಕಾಲನೊಂದಿಗೆನೋವು ಮರೆಯಾಗಲಿ,ಪುಟ್ಟ ಬೇಡಿಕೆ ಕನ್ನಡಿ ಮುಂದೆತಿದ್ದಿ ತೀಡಿ ಬಾಚಿದ್ದುಹಿಡಿಸಲಿಲ್ಲ (ಮನಮೋಹಕ) ಕತ್ತಲಿನಲ್ಲೇಅರಳಿ ನಿಲ್ಲುತ್ತಿವೆಬ್ರಹ್ಮ ಕಮಲ ಕತ್ತಲು ಅಲ್ಲಅನಿಷ್ಟ, ದುಃಖ. ಉದಾ..ಬ್ರಹ್ಮ ಕಮಲ ಅರಳಿ ನಿಂತುಕಂಗೊಳಿಸುತ್ತಲಿದೆ,ಒಲವ ಹೂವು ತಡವದರೆಬಡಬಡಿಸುತ್ತಾಳೆಹುಬ್ಬು ಗಂಟಿಕ್ಕಿ ಎಲ್ಲಕ್ಕಿಂತಲೂಸಂಸಾರ ಸಾಗರವೇವಿಸ್ಮಯಕಾರಿ ಬಡತನವುಕಸಿದು ತಿನ್ನುತ್ತಿದೆಉದರವನ್ನೇ ದಿನಕ್ಕೊಂದ್ರಂತೆಹೈಕು ಬರೆಯದಿದ್ರೆನಿದ್ದೇ ಬರಲ್ಲ ಕಣ್ಣಂಚಿನಲಿತುಂಬಿ ಬಂದಿರುವುದುಒಲವಧಾರೆ ದ್ರಾಕ್ಷಿಯ ಹುಳಿರಸಗಳಲ್ಲಿ, ತೇಲಿಬಂದಿವ ನಾನು ಬರಬಹುದುನೆಂಟರು, ಕಾಗೆ ಕಾ ಕಾಕಿರುಚುತಿದೆ ಕಾದು ಕುಳಿತಆಕೆಗೆ, ಬಿಗಿದಿತ್ತುಸಾವಿನ ಗಂಟೆ ವರ್ತಮಾನಕೆಭೂತ […]Read More
ಪರಿಚ್ಛೇದ – 4–ಪ್ರಾಸಾದ ಶಿಖರದಲಿ– ಆಕಾಶದಲ್ಲಿ ಪೂರ್ಣಚಂದ್ರ. ಬೆಳುದಿಂಗಳ ಬೆಳಕಿನಲ್ಲಿ ಕಪೋತಕೂಟ ನಗರ ಸುಂದರವಾಗಿ ಕಂಗೊಳಿಸುತ್ತಿದೆ.ವಿಟಂಕ ರಾಜ್ಯವು ನಾಲ್ಕು ಕಡೆ ಭೂಮಿಯಿಂದ ಸ್ವಲ್ಪ ಎತ್ತರವಾದ ದಿಣ್ಣೆಯ ಮೇಲೆ ಇದೆ. ದಿಣ್ಣೆಯೂ ಸಮತಟ್ಟಾಗಿಲ್ಲ. ರಾಜ್ಯದ ಮಧ್ಯಭಾಗಕ್ಕೆ ವೃತ್ತಾಕಾರವಾಗಿ ಹೋದಂತೆಲ್ಲ ಅದು ಎತ್ತರವಾಗುತ್ತ ಹೋಗುತ್ತದೆ. ಕೇಂದ್ರ ಸ್ಥಳದಲ್ಲಿ ಕಪೋತಕೂಟ ನಗರ. ರಾಜ್ಯದ ಸರ್ವೋಚ್ಚ ಶಿಖರದ ಮೇಲೆ ಇರುವುದರಿಂದಲೋ ಏನೋ ಅದಕ್ಕೆ ಕಪೋತಕೂಟವೆಂಬ ಹೆಸರು ಬಂದಿರಬಹುದು. ನಗರವು ರಾಜ್ಯದ ಸಂಕ್ಷಿಪ್ತ ಪ್ರತಿರೂಪ. ಎಲ್ಲಿಯೂ ನೆಲ ಸಮತಟ್ಟಾಗಿಲ್ಲ. ನಾಲ್ಕು ಕಡೆ ಎತ್ತರವಾದ ಬಲವಾದ […]Read More
ಎತ್ತು ಕೋಣಗಳಲ್ಲಿ ಮೂಗುದಾರದ ಬಳಕೆಕುತ್ತಿಗೆಗೆ ಹಗ್ಗ, ಬಾಯ್ ಬೀಗ ಕೆಲವಕ್ಕೆಹಸ್ತಿಗಂಕುಶ ಚುಚ್ಚಿ ದುಡಿಸಿಕೊಳ್ಳುವೀ ಬುದ್ಧಿ-ಮತ್ತೇ ನರನಿಗೆ ಮಾತ್ರ- || ಪ್ರತ್ಯಗಾತ್ಮ || ಕವಿ ಚುರುಕು ಕುರುಡಂಗೆ, ಅಂತೆ ಸ್ಪರ್ಶಜ್ಞಾನಕಿವುಡುನಿಗೆ ಕಣ್ ಚುರುಕು ಗಮನಿಸಿರಬೇಕುಅವರಿವರ ಕೈ ಬಾಯ ಸನ್ನೆಯರಿವನು ಮೂಗಇವರು ಯಾರಿಗೆ ಕಡಿಮೆ ? || ಪ್ರತ್ಯಗಾತ್ಮ || ಕಣ್ಣಂತೆ ಕುರುಡಂಗೆ ಕೈ ಕಾಲು ಕಿವಿಗಳೆಯೆಸನ್ನೆ ಕೈ ಬಾಯ್ಗಳದೆ ಮಾತು ಮೂಗನಿಗೆ,ಕಣ್ಣೆ ಕಿವಿ ಕಿವುಡನಿಗೆ, ಹೆಳವನಿಗೆ ಕೈಯೆ ಕಾಲ್,ಅನ್ಯೋನ್ಯ ಸಹಕಾರ- || ಪ್ರತ್ಯಗಾತ್ಮ || ಸ್ವರಗಳೇಳೇ ಏಳು ಸಂಗೀತ […]Read More
–ಧೂಮಕೇತು– ಸೂರ್ಯನನ್ನು ಪರಿಭ್ರಮಿಸುತ್ತ ತನ್ನ ಸುತ್ತಲೂ ಘನೀಕೃತ ಅನಿಲಗಳನೊಳಗೊಂಡು ಜೊತೆಗೆ ಬಾಲವು ಇರುವ ಒಂದು ಸಣ್ಣ ಕಾಯವೇ ಧೂಮಕೇತು. ಧೂಳು, ಬಂಡೆ ಮತ್ತು ಮಂಜುಗಡ್ಡೆಗಳಿಂದ ಕೂಡಿದ ಸೌರವ್ಯೂಹದ ರಚನೆಯಿಂದ ಹೆಪ್ಪುಗಟ್ಟಿದ ಅವಶೇಷಗಳೆ ಈ ಧೂಮಕೇತುಗಳು. ಧೂಮಕೇತುವಿನ ತಲೆಭಾಗದಲ್ಲಿ ಮಿಥೇನ್ ಅಮೋನಿಯಾ ಆವಿಗಳು ಮತ್ತು ನೀರು ಘನಸ್ಥಿತಿಯಲ್ಲಿರುತ್ತವೆ. ಇನ್ನು ಇವುಗಳ ಗಡ್ಡೆಗಳಲ್ಲಿ ಕಬ್ಬಿಣ್ಣ, ನಿಕೆಲ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಸಿಲಿಕಾನ್, ಸೋಡಿಯಂ ಮುಂತಾದವುಗಳಿಂದ ಕೂಡಿವೆ. ಧೂಮಕೇತು ಆಕಾಶದ ನಿಹಾರಿಕೆಯ ವಸ್ತುವಾಗಿದ್ದು ಪ್ರಕಾಶಮಾನವಾದ ಹೆಪ್ಪುಗಟ್ಟುವಿಕೆಯ ನ್ಯೂಕ್ಲಿಯಸ್ ಮತ್ತು ಪ್ರಕಾಶಮಾನವಾದ ಬಾಲವನ್ನು ಹೊಂದಿದೆ. […]Read More
ಎದೆಯಾಳ ಒದ್ದೆಯಾದ ಕಣ್ಣುಗಳಿಗಷ್ಟೇ ಗೊತ್ತು,ಒಡಲಿನ ನೋವು,ಹೃದಯದ ಗಾಯ,ಮನಸಿನ ಸಂಕಟ, ಹತ್ತಿರವೇ ಇದ್ದ ತುಟಿಗಳು ಮಾತ್ರಅರಳಿ ನಿಲ್ಲುವ ಹಠ ಬಿಡಲಿಲ್ಲಕಾರಣ ಅವಕೆ ಗೊತ್ತಿದೆ; ಎದೆಯಲ್ಲಿನ ಸಾವಿರ ನೋವುಗಳಿಗೆಶಬ್ದದ ರೂಪ ಎಂದೂ ಕೊಡಬಾರದುಎಂಬ ಸತ್ಯ.. ಅದಕ್ಕೆ ಮತ್ತೆ ಮತ್ತೆಬಿರಿಯುತ್ತವೆ ಆ ನಗೆಯಸೊಬಗು ಕಣ್ಣಿನ ಹನಿಯಹೊಳಪು ಹೆಚ್ಚಿಸುತ್ತವೆ. ಸುಕೃತಿ ಕಂದRead More
ಕಥೆ – ೨ –ಕನಸಿನ ರಾಜಕುಮಾರ– ರೈಲು ಸಾಗುತ್ತಿದೆ. ಒಮ್ಮೆ ಕತ್ತಲು ಒಮ್ಮೆ ಬೆಳಕು ರೈಲು ಗುಹೆಯೊಳಗೆ ಹೋಗಿ, ಹೊರ ಬರುತ್ತಿದೆ. ಕತ್ತಲು ಬೆಳಕಿನ ಆಟದಂತೆ. ಕತ್ತಲಿನ ನಂತರ ಸುಂದರ ಬೆಳಕು ಗುಹೆಯೊಳಗೆ ಜಿನುಗುವ ನೀರು ಅಲ್ಲಲ್ಲಿ ಪಾಚಿ, ಹಸಿರು ತುಂಬಿದ ನೋಟ ಎಷ್ಟು ಸುಂದರ ಎಂದರೆ ನೋಡಿದಷ್ಟು ನೋಡಬೇಕೆಂಬ ಆಸೆ. ಗುಹೆ ಸರಿದ ನಂತರ ಆಳವಾದ ಪಾತಾಳ ಜಲಪಾತಗಳು, ಕೋರೆಗಳು, ಅತಿ ರಮಣೀಯ ದೃಶ್ಯ. ಒಂದು ಬೇರೆಯೇ ಲೋಕಕ್ಕೆ ಹೋದ ಅನುಭವ, ಅದು ಬೆಂಗಳೂರು-ಕಾರವಾರ ಎಕ್ಸ್ […]Read More