ಸಹ್ಯಾದ್ರಿಯ ನಗೆಮಲ್ಲರು – Laughingthrush 2 ಮುಂದುವರೆದ ಭಾಗ ಹಿಂದಿನ ಭಾಗ ಓದಲು ಕೆಳಗಿನ ಲಿಂಕ್ ಬಳಸಿ https://rb.gy/30l4y ಪಳನಿ ನಗೆಮಲ್ಲ – Palani Laughingtrush ಪಶ್ಚಿಮ ಘಟಗಳ ಪೂರ್ವಕ್ಕೆ ವಿಸ್ತರಣೆಯಾಗಿರುವ ಪರ್ವತ ಶ್ರೇಣಿಗಳನ್ನು ಪಳನಿ ಬೆಟ್ಟಗಳು ಎಂದು ಕರೆಯುತ್ತಾರೆ. ದಟ್ಟ ಕಾಡುಗಳನ್ನು ಹೊಂದಿರುವ ತಮಿಳುನಾಡಿನ ಅಣ್ಣಾಮಲೈ ಪರ್ವತಶ್ರೇಣಿಗಳ ಪಶ್ಚಿಮದಿಂದ ಶುರುವಾಗುವ ಪಳನಿ ಬೆಟ್ಟಗಳು ಕೇರಳದ ಸೀಮೆ ಹಾಗೂ ಭಾರತದ ಪಶ್ಚಿಮ ಕರಾವಳಿಗೆ ಸಮಾನಂತರವಾಗಿ ಸಾಗುತ್ತದೆ. ಈ ಪಳನಿ ಬೆಟ್ಟಗಳಲ್ಲಿನ ದಟ್ಟ ಅಡವಿಗಳಲ್ಲಿ ಕಾಣಸಿಗುವುದೇ ಈ ಪಳನಿ […]
Feature post
ಕಿವಿ – ನ್ಯೂಜಿಲ್ಯಾಂಡ್ ನ ರಾಷ್ಟ್ರೀಯ ಪಕ್ಷಿ ನ್ಯೂಜಿಲೆಂಡಿನ ರಾಷ್ಟ್ರೀಯ ಪಕ್ಷಿ “ಕಿವಿ” ಎನ್ನುವ ವಿಷಯ ಕ್ರಿಕೆಟ್ ನೋಡುಗರಿಗೊಂದೇ ಅಲ್ಲಾ ತುಂಬಾ ಜನರಿಗೂ ತಿಳಿದೇ ಇದೆ . 14 ರಿಂದ 18 ಇಂಚು ಉದ್ದ , 1 kg ಯಿಂದ 2 kg ತೂಗುವ ಈ ಪಕ್ಷಿಯ ಕುರಿತಾಗಿ ಅನೇಕ ಕುತೂಹಲಕಾರಿಯಾದ ಸಂಗತಿಗಳಿವೆ . ತುಪ್ಪಳದಂತ ಗರಿಗಳನ್ನ ಹೊಂದಿರುವ ಇದು ಕೊಕ್ಕಿನ ಮುಂಬಾಗದಲ್ಲಿ ಮೂಗಿನ ಹೊರಳೆಗಳನ್ನ ಹೊಂದಿರುವ ಜಗತ್ತಿನ ಏಕೈಕ ಪಕ್ಷಿ . ಭೂಮಿಯ ಅಡಿಯಲ್ಲಿ ಬಿಲ […]Read More
ಸಹ್ಯಾದ್ರಿಯ ನಗೆಮಲ್ಲರು – Laughingthrush ಭಾರತದಲ್ಲಿನ ಪರ್ವತ ಶ್ರೇಣಿಗಳಲ್ಲಿ ಹಿಮಾಲಯದ ನಂತರ ಅತಿ ಉದ್ದವಾದದ್ದು ಪಶ್ಚಿಮ ಘಟ್ಟದ ಶ್ರೇಣಿಗಳು. ಸಹ್ಯಾದ್ರಿ ಘಟ್ಟಗಳು ಎಂದು ಸಹ ಹೆಸರಿರುವ ಈ ಶ್ರೇಣಿಗಳು ಬರೋಬರಿ 1600 ಕಿಲೋಮೀಟರಿನಷ್ಟು ವ್ಯಾಪ್ತಿಯಲ್ಲಿ ದಟ್ಟ ಅರಣ್ಯ ಗುಡ್ಡ ಪ್ರದೇಶಗಳಿಂದ ಹರಡಿಕೊಂಡಿದೆ. ಮಹಾರಾಷ್ಟ್ರ ಗುಜರಾತ್ ಗಳ ಗಡಿಪ್ರದೇಶದಲ್ಲಿನ ತಪತೀ ನದಿಯ ದಕ್ಷಿಣದಿಂದ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಅಲ್ಲಲ್ಲಿ ಕವಲೊಡೆದು ಕನ್ಯಾಕುಮಾರಿಯವರೆಗೆ ಚಾಚಿಕೊಂಡಿದೆ. ಇದರ ಒಟ್ಟೂ ಪ್ರದೇಶಗಳ ಅರ್ಧಕ್ಕೂ ಹೆಚ್ಚು ಭಾಗವಿರುವುದು ನಮ್ಮ ಕರ್ನಾಟಕದಲ್ಲೇ ಎಂಬುದು […]Read More
ನೀರುನಾಯಿ – The Otter ನೀರು ನಾಯಿಗಳು ಮಾಂಸಹಾರಿ ಗಣದ ‘ಮುಸ್ಟಲಿಡೀ’ (mustelidae) ಕುಟುಂಬಕ್ಕೆ ಸೇರಿದ್ದು ವೀಸಲ್ ಗಳು (weasel), ಮಾರ್ಟೆನ್ಗಳು (Martens), ಬ್ಯಾಜರ್ (Badger) ಇನ್ನೂ ಅನೇಕ ಪ್ರಾಣಿಗಳು ಈ ಕುಟುಂಬದಲ್ಲಿ ಬರುತ್ತವೆ. ಈ ಗುಂಪುಗಳ ಪ್ರಾಣಿಗಳು ಒಂದಕ್ಕೊಂದು ವಿಭಿನ್ನವಾಗಿದ್ದರೂ ಕೆಲವೊಂದು ಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ ಒಂದೇ ಕುಟುಂಬದಲ್ಲಿ ಇರಿಸಲಾಗಿದೆ. ಉದ್ದ ದೇಹ, ಗಿಡ್ಡ ಕಾಲು, ಬಾಲದ ಬುಡದಲ್ಲಿ ವಾಸನಾ ಗ್ರಂಥಿ ಅಭಿವೃದ್ಧಿ ಹೊಂದಿದ ಮಾಂಸದ ಹಲ್ಲುಗಳು ಈ ಕುಟುಂಬದ ಪ್ರಾಣಿಗಳ ಲಕ್ಷಣಗಳಾಗಿವೆ. ವಿಶ್ವದಲ್ಲಿ 13 […]Read More
ರಿಬ್ಬನ್ ಈಲ್ ಮೀನುಗಳು ಸಾಮಾನ್ಯವಾಗಿ ಈಲ್ ಮೀನು ಮತ್ತು ಸಮುದ್ರದ ಹಾವು ಇವುಗಳನ್ನ ಗುರುತಿಸುವಾಗ ಕೊಂಚ ಗೊಂದಲ ಉಂಟಾಗುವ ಸಾಧ್ಯತೆ ಇದೆ.. ಉದ್ದನೆಯ ತೆಳುವಾದ ರಿಬ್ಬನ್ ನಂತೆ ಬಳಕಾಡುವ ದೇಹ ಹೊಂದಿರುವ ಈ ಈಲ್ ಮೀನುಗಳಿಗೆ ಮುಖ್ಯವಾಗಿ ಹಾವುಗಳಂತೆ ಮೈಮೇಲೆ ಪೊರೆಗಳ ಚಿಪ್ಪುಗಳು ಇರುವುದಿಲ್ಲ( Scales). ಇವುಗಳಿಗೆ ಇತರೇ ಮೀನುಗಳಂತೆಯೇ ಈಜುರೆಕ್ಕೆಗಳು ಇರುತ್ತವೆ. ಸಮುದ್ರದ ಹಾವುಗಳಲ್ಲಿ ಈಜುರೆಕ್ಕೆ ಕಂಡುರುವುದಿಲ್ಲ. ಸಮುದ್ರದಲ್ಲಿ ರಿಬ್ಬನ್ ಈಲ್ ಗಳು ಹೆಚ್ಚಾಗಿ ಕೋರಲ್ ರೀಪ್ (ಸಮುದ್ರದ ಹವಳದ ಬಂಡೆಗಳು) ಹತ್ತಿರ ಕಂಡುಬರುತ್ತವೆ. ಸರಿಸುಮಾರು […]Read More
ಅಸ್ತಿತ್ವದ ಅಂಚಿನಲ್ಲಿ ಬಿಳಿ ಹೊಟ್ಟೆಯ ಬೆಳ್ಳಕ್ಕಿ ಇಹಪರಕೆ ಕೊಂಡಿಯಾದಂತಿದೆ ಈ ಬೆಳ್ಳಕ್ಕಿ ಹಿಂಡುಹಿಂಡಾಗಿ ಅಥವಾ ಬೇರೆ ಬೇರೆಯೂ ಆಗಿಬೆಳ್ಳಂಬೆಳಗ್ಗೆ ಬೆಳಕಿಗೆ ಬೆಳಕಾಗಿ ಪರಕ್ಕೆ ಹೊರಟುಮರಳುವುವು ಸಂಜೆ ಮತ್ತೆ ಇಹವೆ ಬೇಕೆಂದು ಬಯಸಿನಾ. ಮೊಗಸಾಲೆ ಬತ್ತದ ಗದ್ದೆಗಳಲ್ಲಿ, ಹಳ್ಳ ಕೊಳ್ಳಗಳ ನೀರ ತೆರೆಗಳ ಸನಿಹದಲ್ಲಿ, ಜಾನುವಾರುಗಳ ಮೇಲೆ ಕುಳಿತು ಹುಳುಗಳನ್ನು ಹೆಕ್ಕುವ ಬೆಳ್ಳಂ ಬೆಳಗಿನ ಬೆಳ್ಳಕ್ಕಿಗಳನ್ನು (Heron) ಯಾರು ತಾನೇ ಕಂಡಿಲ್ಲ! ಈ ಬೆಳ್ಳಕ್ಕಿಗಳು ಸೂರ್ಯೋದಯದ ದೃಡೀಕರಣವು ಹೌದು. ಎಷ್ಟೋ ಕವಿಗಳಿಗೆ ಕವನಗಳಿಗೆ ಸ್ಪೂರ್ತಿ ಈ ಬೆಳ್ಳಕ್ಕಿ! ಆದರೆ […]Read More
“ಹೆಬ್ಬಕ್ಕ”ನಿಗೆ ಸುತ್ತೆಲ್ಲವೂ ಶತ್ರುಗಳೇ! ಹೆಬ್ಬಕ್ಕಗಳು (ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್) ಇದೀಗ ಮತ್ತೆ ಸುದ್ದಿಯಲ್ಲಿವೆ! ಹೆಬ್ಬಕ್ಕ – ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಈಗ ತೀವ್ರ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದ. ಇದು ರಾಜಸ್ಥಾನದ ರಾಜ್ಯ ಪಕ್ಷಿಯು ಹೌದು. ಕಳೆದ ಶತಮಾನದ ಮಧ್ಯದವರೆಗೂ ನಮ್ಮ ಭಾರತದಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ಹೆಬ್ಬಕಗಳು ಕಳೆದ ಗಣತಿಯಲ್ಲಿ ಎಣಿಕೆಗೆ ಸಿಕ್ಕಿದ್ದು ಇಡೀ ದೇಶದಲ್ಲೇ 150 ಹಕ್ಕಿಗಳು ಮಾತ್ರ . ರಾಜಸ್ಥಾನದ ಜೈಸಲ್ಮೇರ್ ಒಂದರಲ್ಲೇ 100 ಹಕ್ಕಿಗಳಿದ್ದರೆ, ಗುಜರಾತ್ ನ ಕಛ್ ನಲ್ಲಿ 25, […]Read More
ಕಲ್ಲು ಮೀನು ಬಹುಶಃ ಕಡಲತೀರದಲ್ಲಿ ಅತ್ಯಂತ ಅಪಾಯಕಾರಿ ಎಂದರೇ ಅದು ಈ ಕಲ್ಲು ಮೀನು (ಸ್ಟೋನ್ ಪಿಶ್) ಇರಬಹುದು. ಸಾಮಾನ್ಯವಾಗಿ ಇವು ಸಾಗರದ ಹವಳದ ಬಂಡೆಗಳು, ಸಮುದ್ರದ ಹುಲ್ಲು ಮತ್ತು ಇತರೇ ಸಸ್ಯಗಳ ನಡುವೆಚಲನರಹಿತವಾಗಿರುತ್ತವೆ (ನಿಶ್ಚಲವಾಗಿ ಬಿದ್ದುಕೊಂಡಿರುತ್ತವೆ), ಕೆಲವೊಂದು ಸರ್ತಿ ಸಮುದ್ರದ ಮರಳಿನಡಿಯಲ್ಲಿ ದೇಹದ ತಲೆಯನ್ನ ಹೊರಹಾಕಿ ಸಮುದ್ರದ ಮರಳಿನಲ್ಲಿ ಬಾಗಶಃ ಮರೆಮಾಚಿಕೊಂಡು ಮುಚ್ಚಿಹಾಕಿಕೊಂಡಿರುತ್ತವೆ. ಇವು ಭೇಟೆಗಳ ಬೆನ್ನು ಹತ್ತಿ ಹೋಗುವುದಿಲ್ಲ. ತಮ್ಮ ಹತ್ತಿರ ಬರುವ ಭೇಟೆಗಳ ಮೇಲೆ ಮಿಂಚಿನಂತೆ ಎರಗಿ ಭೇಟೆಯಾಡಿ ಭಕ್ಷಿಸುತ್ತವೆ. ಇವುಗಳ ವಿಷ […]Read More
ಆರಿಫ್ ನ ಕ್ರೌಂಚ ಪಕ್ಷಿ ಪ್ರೇಮ ಆರಿಫ್ ಖಾನ್ ಉತ್ತರಪ್ರದೇಶದ ಅಮೇಥಿ ಜಿಲ್ಲೆಯ ಮಂಧ್ಕಾಎಂಬ ಹಳ್ಳಿಯೊಂದರ ರೈತ. ಫೆಬ್ರವರಿ 2022 ರ ಒಂದು ಮುಂಜಾನೆ ತನ್ನ ಹೊಲದಲ್ಲಿ ತಿರುಗಾಡುತಿದ್ದಾಗ ಸಾರಸ್ ಕೊಕ್ಕರೆ ಅಥವಾ ಕ್ರೌಂಚ ಪಕ್ಷಿಯೊಂದು ಬಿದ್ದಿರುವುದನ್ನು ನೋಡಿದನು. ಸತ್ತ ಪಕ್ಷಿಯೆಂದು ತಿಳಿದು ಅದರ ಸಮೀಪಕ್ಕೆ ಹೋಗಿ ಪರಿಶೀಲಿಸಿದಾಗ ಅದರ ಕಾಲಿಗೆ ಮಾರಣಾಂತಿಕವಾಗಿ ಪೆಟ್ಟು ತಗುಲಿ ಹಾರಲಾರದೆ ಇನ್ನೂ ಉಸಿರಾಡುತ್ತಿರುವುದನ್ನು ಕಂಡು ಕೂಡಲೇ ಅದನ್ನು ತನ್ನ ಮನೆಗೆ ಸಾಗಿಸಿ ತನಗೆ ಗೊತ್ತಿರುವ ಪ್ರಕೃತಿ ಚಿಕಿತ್ಸೆಗಳನ್ನು ಮಾಡಿದನು. ಕಾಲಿಗೆ […]Read More
ಗಂಡಿನ ನಕಲಿ ವೇಷಧಾರಿ !! ಕತ್ತೆಕಿರುಬ – Spotted Hyena ಆಫ್ರಿಕಾದ ವಿಲಕ್ಷಣ ಪ್ರಾಣಿ ಚುಕ್ಕೆ ಕತ್ತೆಕಿರುಬ (Spotted Hyena) ಇದು ಗಂಡಿನ ನಕಲಿ ವೇಷಧಾರಿ !! ಜಗತ್ತಿನಾದ್ಯಂತ ಹಯಿನಾದ ಒಂಬತ್ತು ಜಾತಿ / ಪ್ರಬೇಧಗಳಿದ್ದು ,ನಮ್ಮ ದೇಶದಲ್ಲಿ Striped Hyena ಅಥವಾ ಪಟ್ಟೆ ಕತ್ತೆ ಕಿರುಬವನ್ನು ನೋಡಬಹುದು. ಈಗ ನಾನು ಬರೆಯುತ್ತಿರುವುದು ಆಫ್ರಿಕಾದ Spotted Hyena ಬಗ್ಗೆ. ನಮ್ಮ ಪ್ರಯಾಣ ಈಗ ಆಫ್ರಿಕಾ ಕಡೆಗೆ, ಆಫ್ರಿಕಾ ಎಂದೊಡನೆ ಹೇಳಬೇಕಿಲ್ಲ, ಅದು ವನ್ಯಜೀವಿಗಳ ತವರು, ಕೃಗರ್, ಸರಂಗೇಟಿಯಂತ […]Read More