ಅಶ್ವ ಚೋರ – 2 ಇತ್ತ ನೀರಡಿಕೆ ಹೋಗಲಾಡಿಸಿಕೊಂಡ ಚಿತ್ರಕ ಮೊದಲಿನಂತೆ ಕಲ್ಲಿನ ಮೇಲೆ ಬಂದು ಕುಳಿತನು. ಸುಗೋಪಾ ನೋಡಿದಳು. ಅವನು ಮಂಡಿಗಳ ಮೇಲೆ ಮೊಳಕೈಗಳನ್ನಿಟ್ಟು, ಆ ಕೈಗಳ ತುದಿಗೆ ತನ್ನ ಗಲ್ಲವನ್ನಿಟ್ಟು ಅವಳನ್ನೇ ದುರುದುರು ನೋಡುತ್ತಿದ್ದಾನೆ. ಸುಗೋಪಾಳಿಗೆ ಒಂದು ಬಗೆಯ ಅಧೀರತೆಯುಂಟಾಯಿತು. ಅವಳು ಅನೇಕ ತಿಂಗಳುಗಳಿಂದ ಇಲ್ಲಿಯೇ ಏಕಾಕಿನಿಯಾಗಿ ಇರುತ್ತಿದ್ದಳು. ಎಷ್ಟೋ ಮಂದಿ ದಾರಿ ಹೋಕರು ಬರುವರು; ಹೋಗುವರು. ಕೆಲವರು ಅವಳನ್ನು ನೋಡಿ ವಿನೋದವಾಗಿ ಮಾತನಾಡಿಸುವರು. ಅವಳೂ ಕೂಡ ಹಾಗೆಯೇ ಲಲಿತವಾಗಿ ಉತ್ತರಿಸುವಳು. ಯಾರಾದರೂ ಸ್ವಲ್ಪ […]Read More
ರಾಜೇಂದ್ರ ಕಾರಂತರ ಮೊದಲ ನಾಟಕ ‘ಸಂಜೆ ಹಾಡು’ ಕನ್ನಡದ ಹಿರಿಯ ಹಾಗೂ ಸಕ್ರಿಯ ರಂಗಕರ್ಮಿ ರಾಜೇಂದ್ರ ಕಾರಂತರ ಮೊಟ್ಟ ಮೊದಲ ರಚನೆಯ ‘ಸಂಜೆ ಹಾಡು’. ‘ಚಿತ್ತಾರ’ ತಂಡದಲ್ಲಿ ಅಲ್ಲದೇ ‘ವ್ಯಾಸ್ಪ್’ ತಂಡದವರು ಈ ನಾಟಕವನ್ನು ಪ್ರದರ್ಶಿಸಿದ್ದಾರೆ. ಇಲ್ಲಿಯವರೆಗೂ ಈ ನಾಟಕವು ಸುಮಾರು ಅರವತ್ತು ಪ್ರದರ್ಶನಗಳನ್ನು ಕಂಡಿವೆ. ಈ ನಾಟಕದಲ್ಲಿ ಕಾರಂತರು ಹಿರಿಯ ವ್ಯಕ್ತಿಯಾಗಿ ಅಭಿನಯಿಸುತ್ತಾರೆ. ಕಾರಂತರ ಸಂಭಾಷಣೆಯ ವೈಖರಿ ಹಾಗೂ ಅಮೋಘ ನಟನೆಯನ್ನು ಅವರ ನಾಟಕಗಳನ್ನು ನೋಡಿದವರಿಗಷ್ಟೇ ಅನುಭವ ಆಗಿರುತ್ತದೆ. ಈ ಕಾರಂತರ ಜತೆಗೆ ‘ಭಜರಂಗಿ’ ಚಿತ್ರದಲ್ಲಿ […]Read More
ನಗು – ಸಂಸ್ಕೃತಿ ಹುಟ್ಟಿದಿವಿ, ಹುಟ್ಟಿದ್ದಕ್ಕೆ ಬದುಕಬೇಕುಬದುಕೋದಿಕ್ಕಾಗಿ ಚೆನ್ನಾಗಿರಬೇಕುಚೆನ್ನಾಗಿರಬೇಕು ಅಂದರೆ ನಗಬೇಕು|| ನಗು ತುಟಿಯಂಚಲ್ಲಿ ಮಾತ್ರವಲ್ಲಹೃದಯದ ತುಂಬಾ ಹರಡಬೇಕುನೆಮ್ಮದಿ ನಗುವಿನ ಕೈ ಹಿಡಿಯಬೇಕು|| ಇದ್ದುದರಲ್ಲಿ ಇನ್ನೊಬ್ಬರಿಗೆ ಇಡುವಷ್ಟಾದರೂಹೃದಯ ಸಕಲ ಸಂಪನ್ನವಾಗಬೇಕುಸಹೃದಯತೆ ಸಂಸ್ಕೃತಿಯಾಗಬೇಕು|| ‘ನಾನು’ ಎಂಬುದ ಮರೆತು ನಾವಾಗಬೇಕುಸಕಲರೊಳಗೊಂದಾಗಿ ಸರ್ವಸ್ವವೂ ಶಿವನಾಗಬೇಕುಲಯದೊಳೊಂದಾಗಿ ಭವಪಾಶದಿಂ ಮುಕ್ತರಾಗಬೇಕು|| ಸೌಜನ್ಯ ದತ್ತರಾಜRead More
ಶನಿ ಗ್ರಹ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ IIಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ || ಸೌರವ್ಯೂಹದ ಆರನೇ ಗ್ರಹ ಶನಿ. ಅನಿಲ ರೂಪಿಯಾದ ಶನಿಯು ಗುರು ಗ್ರಹದ ನಂತರ ಸೌರಮಂಡಲದಲ್ಲಿ 2 ನೇ ಅತಿ ದೊಡ್ಡ ಗ್ರಹ. ಶನಿಯು ಎದ್ದು ಕಾಣುವಂತಹ ಉಂಗುರ ವ್ಯವಸ್ಥೆಯನ್ನು ಹೊಂದಿದೆ. ಶನಿಯು 83 ಉಪಗ್ರಹಗಳನ್ನು ಹೊಂದಿದ್ದು ಟೈಟಾನ್ ಇದರ ಮುಖ್ಯ ಹಾಗು ದೊಡ್ಡ ಉಪಗ್ರಹ. ಟೈಟಾನ್ ‘ಬುಧ’ ಗ್ರಹಕ್ಕಿಂತ ದೊಡ್ಡದಾಗಿದೆ. ಗುಣಲಕ್ಷಣಗಳು ಶನಿಯು ಭೂಮಿಯಂತೆಯೇ ಧ್ರುವಗಳಲ್ಲಿ ಸ್ವಲ್ಪ […]Read More
ಮೈಕ್ರೋ ಗ್ರೀನ್ಸ್ ನಮ್ಮೆಲರಿಗೂ ಶಾಲೆಯ ನೆನಪುಗಳು ಮನದಂಗಳದಲ್ಲಿ ಬೇರೂರಿ ಆಗಾಗ ಅದನ್ನು ನೆನೆದು ಖುಷಿ ಪಡುವುದುಂಟು. ಇಂತಹ ಶಾಲಾ ಬಾಲ್ಯವನ್ನು ನೆನೆಯುತಿದ್ದಾಗ ನೆನಪಾದ ಒಂದು ಸನ್ನಿವೇಶ ಎಂದರೆ, ಸಸ್ಯಗಳ ಬಗ್ಗೆ ಕಲಿಯುವಾಗ ಶಿಕ್ಷಕರು ಕೊಟ್ಟ ಒಂದು ನಿಯೋಜನೆ. ಪುಟ್ಟ ಸಸ್ಯಗಳನ್ನು ಐಸ್ ಕ್ರೀಮ್ ಕಪ್ ಗಳಲ್ಲಿ ಬೆಳೆಸಿ ತೆಗೆದುಕೊಂಡು ಹೋಗಬೇಕಾದದ್ದು. ಗೋದಿ, ರಾಗಿ, ಮೆಂತ್ಯೆ, ಸಾಸಿವೆಯ ಎಳೆ ಸಸ್ಯಗಳನ್ನು ಜೋಪಾನವಾಗಿ ಬೆಳೆಸಿ ಅದನ್ನು ಶಿಕ್ಷಕರಿಗೆ ತೋರಿಸಲು ಹೋಗುತಿದ್ದೆವು. ನೀವೂ ಮಾಡಿರಬಹುದು ಅಲ್ಲವೇ. ಅಂದು ನಾವು ನಿಯೋಜನೆಗೆಂದು ಬೆಳೆದ […]Read More
ಬೆಲ್ಜಿಯಂ ಯುರೋಪಿನಲ್ಲಿರುವ ಸಣ್ಣ ದೇಶ. ಕೇವಲ ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶ ಕೇವಲ 20520 ಚದರ ಕಿಮೀ ಇದೆ. ಬಲಿಷ್ಟ ಯುರೋಪಿನ ರಾಷ್ಟ್ರಗಳ ದಾಳಿಗೆ ಆಗಾಗ ತುತ್ತಾಗುತ್ತಲೇ ಸ್ವತಂತ್ರ್ಯವಾದ ಈ ದೇಶದಲ್ಲಿ ಈಗಲೂ ರಾಜನೇ ಸಾರ್ವಭೌಮ. ಕೃಷಿ ಮತ್ತು ವಾಣಿಜ್ಯೋದ್ಯಮ ಎರಡರಲ್ಲೂ ಅಪಾರ ಬೆಳವಣಿಗೆ ಸಾಧಿಸಿರುವ ದೇಶ ಬೆಲ್ಜಿಯಂ . ‘ಬ್ರಸೆಲ್ಸ’ ಇದರ ರಾಜಧಾನಿಯಾಗಿದ್ದು ವಜ್ರದ ಅತಿದೊಡ್ಡ ವ್ಯಾಪರ ಕೇಂದ್ರವಾಗಿದೆ. ಯುರೋಪಿನ ಚಿಕ್ಕ ರಾಷ್ಟ್ರವಾಗಿರುವ ಬೆಲ್ಜಿಯಂನಲ್ಲಿ ಸಹ ಅನೇಕ ಪ್ರೇಕ್ಷಣೀಯ ಸ್ಥಳಗಳು ಹಾಗೂ ಅನೇಕ […]Read More
ಮೊಗದಿಶು ಸಂತರು – 2 ಕಳೆದ ಸಂಚಿಕೆಯಲ್ಲಿ… “ಮೊಗದಿಶುವಿನಲ್ಲಿ ಹಾಗು ಹರ್ಗೀಸದಲ್ಲಿ ಆರಂಭದಿಂದ ನನ್ನ ಕಿವಿಗೆ ಆಗಾಗ ತಟ್ಟುತ್ತಿದ್ದ ಒಂದು ಹೆಸರೆಂದರೆ ‘ಶೇಕ್ ಅಬ್ಬಾ’! ಅಂತಹ ಮನುಷ್ಯನನ್ನು ನೋಡಲು ಕೊತುಹಲವಿದ್ದ ನನಗೆ ನಮ್ಮ ಮನೆಯ ಒಂದು ಭಾಗದಲ್ಲೇ ನೆಡೆದ ಮದುವೆಯೊಂದರಲ್ಲಿ ಜನರ ಗುಂಪಿನ ಗಲಾಟೆಯಿಂದ ನೋಡುವ ಅವಕಾಶ ತಪ್ಪಿಹೋಗಿತ್ತು“. ಆ ಒಂದು ದಿನ, ತಿಮಹ ಹಾದ್ದೆ (ನಾನೆಂದೂ ಮಹಮ್ಮದನನ್ನು ಹಾಗೆ ಕರೆವ ಹಕ್ಕು ಚಲಾಯಿಸಿಲ್ಲ) ಮನೆಗೆ ಬಂದು ರೋಗಿಯೊಬ್ಬರನ್ನು ನೋಡಲು ಕರೆದ. ಬಹಳ ಮುಖ್ಯ ವ್ಯಕ್ತಿ ಎಂದ. […]Read More
ದಿಲ್ಲು ಬದುಕಿನಲಿಬಣ್ಣವಿರಲಿಬದುಕೇಬಣ್ಣವಾಗದಿರಲಿಏಳು ಬಣ್ಣಗಳಕಾಮನಬಿಲ್ಲುಏಳುಬೀಳುಗಳಸಹಿಸುವ ದಿಲ್ಲುನಮ್ಮೆಲರದಾಗಿರಲಿ ಬದುಕು ಚಿನ್ನ ಜೀವನವೊಂದು ಆಟಅದಕೊಂದಿಷ್ಟು ಪರಿಪಾಠಇದ್ದಾರೆ ಚೆನ್ನಪಾಲಿಸಿದರಂತೂಈ ಬದುಕು ಚಿನ್ನ!ಗೌರವಿಸಿ ಬಾಳಬೇಕುಗುರುಹಿರಿಯರನ್ನ!! ಏಕಾಂಗಿ ಏಕಾಂಗಿಯಾಗಿನಡೆಯುತ್ತಿರುವೆಬಾಳದಾರಿಯಕವಲಿನಲ್ಲಿ!ಕನವರಿಸುತ್ತಿರುವೆಬಾಯಿಬಿಡುತಹಗಲಿರುಳಿನಲ್ಲಿ!!ಹೆತ್ತವರಕನವರಿಕೆಯಲ್ಲಿ!! ಅಮ್ಮ ಅಮ್ಮ ನೀನೆ ನನ್ನಹೃದಯದ ವೀಣೆನೀನಿಲ್ಲದೆ ನಾಬದುಕು ಕಾಣೆ!ನೀನೆ ಎಲ್ಲ..ನೀನಿಲ್ಲದೆ ಈಬದುಕು ಬವಣೆನಿನ್ನಾಣೆ!! ಡಾII ಪರಮೇಶ್ವರಪ್ಪ ಕುದರಿRead More
–ಗುರು ಗ್ರಹ– ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ Iಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂII ಗುರು ಗ್ರಹ ಸೂರ್ಯನಿಂದ 5 ನೇ ಗ್ರಹ ಮತ್ತು ಸೌರಮಂಡಲದಲ್ಲಿ ಅತೀ ದೊಡ್ಡ ಗ್ರಹ, ಸೂರ್ಯ, ಚಂದ್ರ ಮತ್ತು ಶುಕ್ರ ಗ್ರಹಗಳ ನಂತರ ಗುರು ಗ್ರಹವು ಸಾಮಾನ್ಯವಾಗಿ ಆಗಸದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರಕಾಶಮಾನವಾದ ಕಾಯ. ಆದರೆ ವರ್ಷದ ಕೆಲವು ದಿನಗಳಲ್ಲಿ ಮಂಗಳ ಗ್ರಹವು ಗುರುವಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಂಡು ಬರುತ್ತದೆ. ಸೌರಮಂಡಲದ ಬೇರೆಲ್ಲಾ ಗ್ರಹಗಳ ಒಟ್ಟು ದ್ರವ್ಯರಾಶಿಗಿಂತಲೂ […]Read More
ಚುಚ್ಚು ಮಾತುಗಳಿಂದ ಅನ್ಯಾಯದಿಂ ಜರೆದುತುಚ್ಛನೊಬ್ಬನು ನಿನ್ನ ಮನವ ನೋಯಿಸಲುಕೊಚ್ಚಿ ಬಿಡುವೆನು ಎಂದು ಅಬ್ಬರಿಸಿ ಗುಡುಗಿ ಬಿಡುಕಚ್ಚದಿರು ಬುಸ್ಸೆನ್ನು- || ಪ್ರತ್ಯಗಾತ್ಮ || ಧರಣಿ ತಿರುಗುವುದಿಲ್ಲ ಸೂರ್ಯ ತಿರುಗುವನೆಂದುಮರಣ ಭೀತಿಯ ತೋರೆ ಗೆಲಿಲಿಯೋ ನುಡಿದಅರೆಬರೆಯ ಹುಚ್ಚರಿಗೆ ವಿಜ್ಞಾನಿಗುಂ ಸೋಲು,ಅರಿವುಳ್ಳವನು ಸೋಲ್ವ- || ಪ್ರತ್ಯಗಾತ್ಮ || ಮಾಗಿಯೊಳು ಸೆಕೆ ಎನಲಿ, ಕಾಗೆಯನು ಬಿಳುಪೆನಲಿ,ಸಾಗರವು ಹರಿಯುವುದು ಎಂದೆನಲಿ ಕೂಗಿಹೀಗೆಯೇ ಏನೇನೊ ನುಡಿವ ಮೂರ್ಖರ ನುಡಿಗೆರೇಗದಿರು; ಸುಮ್ಮನಿರು- || ಪ್ರತ್ಯಗಾತ್ಮ || ಅನ್ನದಗುಳನು ಕಂಡು ಕಾಗೆ `ಕಾ’ ಎನ್ನುವುದು,ತನ್ನ ಬಳಗವ ಕರೆದು ಕೂಡಿ […]Read More