ಸಸ್ಯರಾಶಿಯಲ್ಲಿ ಬಹಳ ವಿಶಿಷ್ಟ ಎನಿಸುವ ಅಲೋವೆರಾ ಎಂದು ಕರೆಯುವ ಲೋಳೆ ಸರವನ್ನು ಬಹಳಷ್ಟು ಮನೆಯ ಕುಂಡಗಳಲ್ಲಿ ಬೆಳೆಯುವುದನ್ನು ಕಾಣಬಹುದಾಗಿದೆ. ‘ಆಸ್ಫಾಡೆಲೆಸಿಯಾ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಇದು ದಕ್ಷಿಣ ಆಫ್ರಿಕಾ ದೇಶ ದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತನ್ನ ಹೆಸರಿಗೆ ತಕ್ಕಂತೆ ಈ ಸಸ್ಯವು ರಸಭರಿತವಾಗಿದ್ದು ಅದರೊಳಗೆ ಅಂತೂ ಲೋಳೆ ತುಂಬಿರುತ್ತದೆ. ಎಲ್ಲಾ ಸಸ್ಯ ಮೂಲಿಕೆಯಂತೆ ಈ ಸಸ್ಯಕ್ಕೆ ಬೇರು ಇರುವುದೇ ಹೊರತು ಗಿಡಕ್ಕೆ ಕಾಂಡ ಎಳೆಗಳು ಇರುವುದಿಲ್ಲ. ಇದು ನೀರು ಲಭ್ಯವಿಲ್ಲದ ಸಮಯದಲ್ಲಿ , ಎಲೆಯಲ್ಲಿರುವ ಕ್ಲೋರೋಫಿಲ್ […]Read More
ವಿವೆರಿಡೀ (Viverridae) ಕುಟುಂಬದ ಕಬ್ಬೆಕ್ಕುಗಳು ಬೆಕ್ಕುಗಳಿಗೆ ಹೋಲಿಕೆ ಕಂಡು ಬಂದರೂ ಮುಂಗುಸಿಗಳಿಗೆ ಹತ್ತಿರದವು, ಉದ್ದ ಶರೀರ ಗಿಡ್ಡ ಕಾಲು, ಪ್ರತಿ ಕಾಲಿಗೆ ಭಾಗಶಃ ಒಳ ಸೇರುವ ಉಗುರುಳ್ಳ ಐದು ಬೆರಳುಗಳಿವೆ, ನೀಳ ತಲೆ ಚೂಪಾದ ಮುಸುಡಿ ಇದೆ, ಇವು ಮಿಶ್ರಹಾರಿಗಳು. ನಮ್ಮ ರಾಜ್ಯದಲ್ಲಿ ಮೂರು ಜಾತಿಯ ಕಬ್ಬೆಕ್ಕುಗಳನ್ನು ನೋಡಬಹುದು. ಇಂಗ್ಲೀಷಿನಲ್ಲಿ ಇವಕ್ಕೆ ‘Civet‘ ಎಂದು ಕರೆಯುತ್ತಾರೆ. 1) ಸಾಮಾನ್ಯ ಕಬ್ಬೆಕ್ಕು: ‘Asian palm civet‘ ಇದು ರಾಜ್ಯದೆಲ್ಲೆಡೆ ಕಂಡುಬರುತ್ತದೆ, ಮರ ಹಾಗು ನೆಲ ವಾಸಿ, ಮಿಶ್ರಹಾರಿ, ಸಾಮಾನ್ಯ […]Read More
ಜಾಡಮಾಲಿ ಮುರಿದು ಮೂಲೆಗುಂಪಾದನನ್ನ ಕಳೆದಿರುಳ ಕನಸುಗಳಕಸಗುಡಿಸಿ ಹಾಕಲುಉದ್ದುದ್ದ ಕಿರಣಗಳಪೊರಕೆ ಹಿಡಿದುಮೊದಲ ದಿಸೆಯಲ್ಲಿಕಾಣಿಸಿಕೊಳ್ಳುತ್ತಾನೆಬೆಳಿಗ್ಗೆಯ ಜಾಡಮಾಲಿಸೂರ್ಯ ಮಾಯಾ ಹೆಂಡ ಕುಡಿದಮಂಗನ ಮಂಗತ್ವಹೆಚ್ಚಾಗುತ್ತದೆಆದರೆ ಹೆಣ್ಣು ಕಂಡಮನುಷ್ಯನ ಮನುಷ್ಯತ್ವಮಾಯವಾಗುವುದೇಕೆ ? ಡಿ ಎನ್ ಸುರೇಶ್ ಹವ್ಯಾಸಿ ಪತ್ರಕರ್ತರುRead More
1968 ರಲ್ಲಿ ಮೈಸೂರು ಮೈತ್ರಿ ಫಿಲಂಸ್ ಲಾಂಛನದಲ್ಲಿ ಡಾ. ಡಿ. ಬಿ. ಬಸವೇಗೌಡರು ಪುಟ್ಟಣ್ಣನವರ ನಿರ್ದೇಶನದಲ್ಲಿ “ಸಾವಿರ ಮೆಟ್ಟಲು” ಚಿತ್ರದ ತಯಾರಿಕೆ ಪ್ರಾರಂಭಿಸಿದರು. ಕಲ್ಯಾಣ್ಕುಮಾರ್, ಅಶ್ವಥ್, ಪಂಡರೀಭಾಯಿ, ಜಯಂತಿ ಹಾಗು ವಜ್ರಮುನಿ,ಸುಂದರ ಕೃಷ್ಣ ಅರಸ್ (ಇಬ್ಬರದೂ ಮೊದಲ ಪರಿಚಯ) ಮುಂತಾದವರೊಂದಿಗೆ ಚಾಮುಂಡಿ ಬೆಟ್ಟದ ಪರಿಸರದಲ್ಲಿ ಚಿತ್ರೀಕರಣ ನೆಡೆಯುತಿದ್ದು, ಕ್ರಮೇಣ ನಿರ್ಮಾಪಕ ಮತ್ತು ನಿರ್ದೇಶಕರ ನಡುವೆ ಉಂಟಾಗಿ ಗಂಭೀರ ಪರಿಸ್ಥಿತಿಯಿಂದ ಸ್ಥಗಿತವಾಯಿತು. ಆ ವೇಳೆಗಾಗಲೇ ಪುಟ್ಟಣ್ಣನವರು ಖ್ಯಾತರೆನಿಸಿ ಸಮಯವೇ ಸಿಗದಷ್ಟು ಬ್ಯುಸಿಯಾಗಿದ್ದರು. ಹಾಗಾಗಿ ಚಿತ್ರ ಮುಂದೆ ಹೋಗದೆ ನಿಂತೇ […]Read More
-ಎರಡು – ಏಡನ್ ತಲುಪಿದೆವು! ಲಕೋಟೆಯಿಂದ ಏರ್ ಟಿಕೆಟ್ ತೆರೆದು ತೋರಿಸಿದ್ದೇ ತಡ ನನ್ನ ತಾಯಿಯ ಕಣ್ಣುಗಳು ನೀರು ತುಂಬಿಕೊಂಡವು. ‘ದೊಡ್ಡವನೂ ಕಷ್ಟ ಸುಖಕ್ಕೆ ಇಲ್ಲದಷ್ಟು ದೂರ ಹೋದ; ಈಗ ನೀನೂ ಕೂಡ’ ಎಂಬ ದುಃಖ ಅವರಿಗೆ. ಮೇಲಾಗಿ ನಾನು ಕಿರಿಯ ಮಗ. ದಿನಕಳೆದಂತೆ ಅವರೊಡನೆ ಮಾತಿನ ಮಧ್ಯೆ, ನಮ್ಮ ಪ್ರಯಾಣದ ಬಗ್ಗೆಯೂ ಒಂದಿಷ್ಟಿಷ್ಟೇ ಹೇಳುತ್ತ ಧೈರ್ಯ ತುಂಬಿದೆ; ಅಥವಾ ಹಾಗೆ ನಾನೇ ಸಮಾಧಾನ ತಂದುಕೊಂಡೆ. ಎಷ್ಟೇ ಆದರೂ ತಾಯಿ; ಅವರು ನನಗೋಸ್ಕರ, ಮುಖದ ಮೇಲೆ ಗೆಲುವನ್ನು […]Read More
ನಮ್ಮ ಜೀವನದಲ್ಲಿ ನಂಬಿಕೆ, ಪ್ರೀತಿ ಇವೆರಡು ರತ್ನಗಳು ದೈವದತ್ತವಾಗಿ ನಮಗೆ ಭಾವನೆಗಳ ಮೂಲಕ ಬಂದಂತಹ ಒಂದು ಕೊಡುಗೆಯಾಗಿದೆ. ಜೀವನದಲ್ಲಿ ಇವುಗಳಿಗೆ ಇದರದೇ ಆದ ಒಂದು ಪಾವಿತ್ರ್ಯ ಮೌಲ್ಯವಿದೆ. ನಮ್ಮ ಜೀವನದಲ್ಲಿ ಎಲ್ಲ ವಸ್ತುಗಳನ್ನು ದುಡ್ಡು ಕೊಟ್ಟು ಪಡೆಯಬಹುದು. ಆದರೆ, ನಂಬಿಕೆ, ಪ್ರೀತಿ ಮನುಷ್ಯನ ಭಾವನೆಯಿಂದ ಮೂಡುವಂತಹ ಪ್ರಕ್ರಿಯೆ. ಪ್ರತೀ ಮಾನವ ಜೀವನದಲ್ಲಿ ಇವುಗಳು ಇಲ್ಲದೇ ಬಾಳಲು ಸಾದ್ಯವಿಲ್ಲ. ಜೀವನದ ತಳಹದಿಗೆ ಇವುಗಳು ಆದಾರಸ್ತಂಭಗಳಾಗಿವೆ. ಇದರಲ್ಲಿ ಒಂದನ್ನು ಕಳೆದುಕೊಂಡರು ನಮ್ಮ ಜೀವನದ ಲಯ ಕಳೆದುಕೊಂಡಂತೆ. ಆದರೆ, ಇಂದು ಎಲ್ಲೋ […]Read More
ಡಾ. ಅರಕಲಗೂಡು ನೀಲಕಂಠ ಮೂರ್ತಿ ಯವರು ವೃತ್ತಿಯಿಂದ ವೈದ್ಯರು ಹಾಗು ಹವ್ಯಾಸಿ ಸಾಹಿತಿಗಳು. ಹಲವಾರು ವರ್ಷಗಳ ಹಿಂದೆ ಅವರು ಕೆಲಸದ ನಿಮಿತ್ತ ಸೊಮಾಲಿಯಾದಲ್ಲಿ (ಆಫ್ರಿಕಾ) ನೆಲೆಸಿದ್ದಾಗ ಅಲ್ಲಿನ ತಮ್ಮ ಅನುಭವಗಳನ್ನು ಪತ್ರಿಕೆಗೆ ಲೇಖನ ರೂಪದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ… (ಆಫ್ರಿಕಾಕ್ಕೆ ಪ್ರಪ್ರಥಮವಾಗಿ ‘ಕಗ್ಗತ್ತಲೆಯ ಖಂಡ’ ಎಂಬ ಅಡ್ಡಹೆಸರು ಕೊಟ್ಟದ್ದು, ವೇಲ್ಸ್ (ಯು.ಕೆ. ಯ ಒಂದು ಪ್ರಾಂತ್ಯ) ಭಾಗದ ಪತ್ರಕರ್ತ ಮತ್ತು ಅನ್ವೇಷಕ, ಹೆನ್ರಿ ಮಾರ್ಟನ್ ಸ್ಟ್ಯಾನ್ಲೆ) -ಒಂದು- ಲಕೋಟೆಯೊಂದು ಬಂತು! ನಾನಾಗ ಬೆಂಗಳೂರಿನ ಪ್ರಸನ್ನ ಟಾಕೀಸ್ ಸನಿಹ […]Read More
ಹಿಂದಿನ ಸಂಚಿಕೆಯಿಂದ…ನಾಯಕ್ ತನ್ನ ಮಾದಕ ವಸ್ತುಗಳ ಸಾಗಾಣಿಕೆಯನ್ನು ನೊರ್ಕೋಟಿಕ್ ವಿಭಾಗದವರು ಪತ್ತೆ ಹಚ್ಚಿ ಸೀಜ್ ಮಾಡಿದ್ದರಿಂದ ಯೋಚನೆ ಹತ್ತಿ ಕ್ರೂರಿ ಆಲ್ಬೆರ್ತೋ ಗಾರ್ಸಿಯಾ ಗೆ ಏನು ಹೇಳುವುದೆಂದು ತಿಳಿಯದಾಯಿತು. ಅಷ್ಟರಲ್ಲಿ ವಿಗ್ರಹ ಕಳ್ಳ ಸಾಗಣೆದಾರ ಫಿಲಿಪ್ ಸ್ಟೋನ್ಬ್ರಿಡ್ಜ್ ಗೆ ಕರೆ ಮಾಡಿ ಅಪ್ರಮೇಯನ ಬಳಿ ಇರುವ ಮೂರು ವಿಗ್ರಹಗಳ ಬಗ್ಗೆ ಹಾಗು ಅದು ಉತ್ತರ ಭಾರತದ ಕಡೆಗೆ ಸಾಗುತ್ತಿರುವ ವಿಷಯವನ್ನು ಹೇಳಿ ಅದನ್ನು ಲಪಟಾಯಿಸಿ ಕಳಿಸುತ್ತೇನೆಂದು ಹೇಳುತ್ತಾನೆ. ಮುಂದೆ… -ಹನ್ನೊಂದು- ಬೆಳಗ್ಗೆ ಐದೂವರೆಗೇ ಹೊಟೇಲ್ ಚೆಕ್ ಔಟ್ […]Read More
ಪರಿತಪಿಸುವರು ಕೆಲರು ಹಲ್ಲು ಮಸೆವರು ಕೆಲರುಪರಿಪರಿಯುಪಾಯಗಳ ಚಿಂತಿಪರು ಕೆಲರುಸೆರೆಯವಧಿ ಮುಗಿದಂದು ಸೇಡು ತೀರಿಸಿಕೊಳುವಸೆರೆಯಾಳುಗಳು ಎನಿತೊ! || ಪ್ರತ್ಯಗಾತ್ಮ || ಉಂಡುಂಡು ತೇಗಿದರೆ ದಿಂಡುರುಳಿ ಮಲಗಿದರೆಉಂಡಾಡಿಯಂತಿರಲು ಬಂದ ಫಲವೇನು?ಭಂಡತನದಿಂ ಬಾಳ ನೂಕಿದರೆ ಬಂತೇನು?ದಂಡಿಸೆಲೊ ಕಾಯವನು- || ಪ್ರತ್ಯಗಾತ್ಮ || ಸಂಜೆ ಮುಂಜಾನೆಯೊಳು ನಿದ್ರಿಸುವ ಮನೆಗಳಲಿಗಂಜಿಗುಂ ಗತಿಯಿಲ್ಲದಾಗುವುದು ಸಹಜ,ಕಂಜದಳ ನೇತ್ರೆಯಾ ಲಕುಮಿ ನೆಲೆಸಳು ಅಲ್ಲಿಅಂಜಿ ಬಾಳಲೊ ನೀನು- || ಪ್ರತ್ಯಗಾತ್ಮ || ಅನ್ನದಗುಳಿನ ಮೇಲೆ ತಿನ್ನುವರ ಹೆಸರಿಹುದುಭಿನ್ನ ಭಾವನೆ ಬಿಟ್ಟು ಬಂದವಗೆ ಉಣಿಸು,ನಿನ್ನ ಭಾಗದ ತಿನಿಸು ಬೇರೊಬ್ಬನುಣ್ಣುವುದುನಿನ್ನ ನೆನಪಿಗೆ ಬರದೆ?- […]Read More
ಸೀತೆ ಕಾಯುತ್ತಾಳೆಅಶೋಕ ವನದಲ್ಲಿಬಂದರು ಬರಬಹುದುರಾಮಇಂದಲ್ಲ ನಾಳೆಸಾಗರವ ದಾಟಿಲಂಕೇಶನನ್ನು ನಿವಾರಿಸಿಕರೆದೊಯ್ಯಲುಬಹುದುಬೆಂಕಿಗೆ ಬಿದ್ದರುಎದ್ದು ಬರಲು ಬಹುದು ಸೀತೆಯರು ಕಾಯುತ್ತಾರೆಮಿಥಿಲೆಯಲ್ಲಿಆದರೆರಾಮರು ಬರುವುದಿಲ್ಲಸಂಪ್ರದಾಯಗಳ ದಾಟಿಶಿವಧನುವ ಮುರಿದುಹೂ ಮಾಲೆಗೆಗೋಣು ಚಾಚುವುದಿಲ್ಲಹಾಗೊಮ್ಮೆ ಬಂದರುಶಿವಧನುವನೆತ್ತಿಎದೆ ಏರಿಸುವುದುಬಲು ಕಷ್ಟ ಧನುಸ್ಸು ಮುರಿದರೂಬೆಂಕಿಗೆ ಬಿದ್ದುಎದ್ದು ಬರುವುದಸಾದ್ಯಹಾಗಾಗಿಮಿಥಿಲೆಯ ಸೀತೆಯರಿಗೆಮಾಂಗಲ್ಯ ಯೋಗಬಂಗಾರದ ಜಿಂಕೆಯ ಹಾಗೆಮರೀಚಿಕೆ ಡಿ. ಎನ್. ಸುರೇಶ್ಹವ್ಯಾಸಿ ಪತ್ರಕರ್ತರುRead More