ಪರಾಭವ ಭಾವನಾ – 5 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ…ಅಪ್ರಮೇಯ ಅಳಗರ್ ಕೋವಿಲ್ ದೇವಸ್ಥಾನದ ಸುಂದರಬಾಹು ವಿಗ್ರಹದ ಬೆರಗನ್ನು ಸವಿಯುತ್ತ ಅಲ್ಲಿನ ಅಳಗಪ್ಪ ಚೆಟ್ಟಿಯಾರ್ ಕೋರಿಕೆಯ ಮೇರೆಗೆ ತನ್ನ ಪ್ರವಚನವನ್ನು ಶುರು ಮಾಡುತ್ತಾನೆ ಈ ಮದ್ಯದಲ್ಲಿ ಅವನಿಗೆ ಗೊತ್ತಿಲದೆ ನಾಯಕ್ ನ ಕಡೆಯವರು ಪಿಸ್ತೂಲಿನೊಂದಿಗೆ ಸಭೆಯ ಮದ್ಯೆ ಹೊಂಚು ಹಾಕುತ್ತಿರುತ್ತಾರೆ. ಐದು ಆ ಸಂಜೆ ಮೀನಾಕ್ಷಿ, ಸುಂದರೇಶ್ವರರ ದರುಶನ ಮಾಡಿ ಹೊರಡುವ ಸನ್ನಾಹ ನಡೆಸಿದ ಅಪ್ಪು ಅಳಗಪ್ಪ ಚೆಟ್ಟಿಯಾರ್‌ ಬಹಳವೇ ಸಂತೋಷ ಪಟ್ಟು ಅನೇಕ ಕಾಣಿಕೆಗಳನ್ನು ನೀಡಲು ಹೋದ. “ದಯವಿಟ್ಟು ಕ್ಷಮಿಸಿ. ನಾನು ಇವನ್ನೆಲ್ಲಾ ಸ್ವೀಕರಿಸಲಾರೆ. […]Read More

ಸುಗ್ಗಿ

ಭೂ ಒಡಲು ತಂಪಾಗಿಮೈಯೆಲ್ಲಾ ಹಸಿರಾಗೀದೇವರ ಪ್ರೀತಿಯೆಲ್ಲಾಬೆಳೆಯಾಗಿ ಹೊರಬಂದಿತೋರೈತನಾ ಮಾರೀ ಮ್ಯಾಲೆನಗೆಯೊಂದು ಹೊರ ಚೆಲ್ಲಿಬಾನೆಲ್ಲಾ ಬೆಳಕಾಯಿತೋ ಬಾನಾಗೆ ತಲೆ ಎತ್ತಿ ನೋಡೋದೇ ಮರೆತಾವ್ರೆ.ಹೇಂಡ್ತೀಯ ಮೊಗದಾಗಬಿದಿಗೆ ಚಂದ್ರಾನ ಕಂಡಾವ್ರೆಮುನಿಸೊಂದು ನಗೆಯಾಯಿತು ದಿನಕ್ಕೊಂದು ಉಗಾದಿಮುದುಕಿಯ ಬೊಚ್ಚ ಬಾಯ್ತುಂಬ ಎಲೆ ಅಡಕಿಊರೆಲ್ಲಾ ರಂಗಾಯಿತೋಮಾರೀ ಮ್ಯಾಗಿನ ನೆರೆಗೆಹಳೆ ಕಥೆಯ ಬಿಚ್ಚಿಟ್ಟಿತೋ.ತೊಟ್ಟೀಲ ಕೂಸೀಗೆ ಚಂದಾದ ಹಾಡಾಯಿತೋ ಬೆಳ್ಳಗಾಗವ್ನೆ ಊರ ಹನುಮಸೇರಾವ್ರೆ ಹೆಂಗಸ್ರುಬೆಳಗ್ತಾರ ದೀಪ ಎಲ್ಲಾರೂ ಕುಣಿದಾಡಿ ಹಾಡೀಜೋಗತೀಯ ಜೋಳೀಗೀ ಎಂದೆಂದೂ ಬತ್ತದಿರಲೀನನ್ನಪ್ಪಾ. ಹರಿಸು ಊರೂ ಕೇರೀ ಪವನ ಕುಮಾರ ಕೆ ವಿ ಬಳ್ಳಾರಿ ಸಂಪರ್ಕ: 9900515957 […]Read More

ಕೈರಾತಗಳು! – Malkohas

ಕೈರಾತ! ಇದು ಹಕ್ಕಿಯ ಕನ್ನಡದ್ದೇ ಹೆಸರಾದರೂ ಬಹುತೇಕರು ಕೇಳಿಲ್ಲ. ಇಂಗ್ಲಿಷಿನಲ್ಲಿ ಮಲ್ಕೊಹ (Malkoha) ಎನ್ನುತ್ತಾರೆ. ಹಿಂದೆ ನಾವು ಪರಪುಟ್ಟಹಕ್ಕಿ ಕೋಗಿಲೆ ಬಗ್ಗೆ ತಿಳಿದುಕೊಳ್ಳುವಾಗ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಪರತಂತ್ರಹಕ್ಕಿಗಳನ್ನು ಕುರಿತಾಗಿ ತಿಳಿದಿದ್ದೆವು. ಇತರ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಕೋಗಿಲೆಯಂತಹ ಕುಕ್ಕು ಹಕ್ಕಿಗಳು ಪರತಂತ್ರಹಕ್ಕಿಗಳಾದರೆ, ಗೂಡು ಕಟ್ಟುವ ಕೈರಾತಗಳು ಪರತಂತ್ರವಲ್ಲದ ಕುಕ್ಕು ಹಕ್ಕಿಗಳು. ದಕ್ಷಿಣ ಏಷ್ಯಾದಲ್ಲಿ ನಾಲ್ಕು ಬಗೆಯ ಕೈರಾತಗಳು ಕಂಡುಬರುತ್ತವೆ. ಕೆಂಗಂದು ಕೈರಾತ (ಸಿರ್‍ಕೀರ್ ಮಲ್ಕೋಹ, Sirkeer Malkoha Taccocua leschenaultii ) ಹೊರತುಪಡಿಸಿ ಉಳಿದವು ಮರವಾಸಿಗಳು. […]Read More

ಅಷ್ಟದಿಗ್ಗಜನೇ ?

ಹಠ ಹಠ ಕೇಳೋದಿಲ್ಲ ಇವನುನಿಮ್ಮಲ್ಯಾರೋ ಹೇಳಿ ಸ್ವಾಮಿಭೂಮಿ ಇವನ ಕೈಲಿ ಇದಯಂತೆ!ಏನಾಶ್ಚರ್ಯ ಆ ವರಾಹ ಸ್ವಾಮಿ ಕೈಲಿರೋದುರಬ್ಬರ್ ಚೆಂಡೆ? ಮತ್ತೆ ನನ್ನ ಕೈಲಿರೋದುಏನೂ ಅಂತಾನೆ ಮರುಳಬಿಟ್ಟೆ ಬಿಟ್ಟೆ ಕೈ ಬಿಟ್ಟೆಮರುಳ ನೋಡಿದ ವರಾಹ ಕಣ್ತುಂಬಿ….ಒದ್ದೆ ಕಣ್ಣು ಮಂಜು ಮಂಜು ಕು ಶಿ ಚಂದ್ರಶೇಖರ್Read More

ಬಿ ಟಿ ಎಸ್ RM – ಕಿಂ ಸಿಯೊಕ್ ಜಿನ್ (Kim Seok-Jin)

ಛಲದಂಕ ಮಲ್ಲ ಜಗದೇಕ ಸುಂದರ ಛಲದಿಂದ ಏನನ್ನಾದರೂ ಸಾಧಿಸಬಹುದು ಎನ್ನಲು ಉದಾಹರಣೆ ಕಿಂ ಸಿಯೊಕ್ ಜಿನ್ (Kim Seok-Jin). ಕಿಂ ಸಿಯೊಕ್-ಜಿನ್ (Kim Seok-Jin), 28 ವರ್ಷಗಳ ಅತ್ಯಂತ ಸುಂದರ ಯುವಕ. ಅವನನ್ನು ಜಗದೇಕ ಸುಂದರ (World wide handsome) ಎಂದೂ ಕರೆಯುತ್ತಾರೆ. ಅವನ ಸ್ಟೇಜ್ ಹೆಸರು ಜಿನ್ ಎಂದು. BTSನ ಎರಡನೇ ಸದಸ್ಯ. ಇವನ ವೈಯಕ್ತಿಕ ಬದುಕಿನ ಬಗ್ಗೆ ಅಷ್ಟೇನೂ ವಿವರಗಳು ತಿಳಿದುಬಂದಿಲ್ಲವಾದರೂ, ಅಲ್ಪಸ್ವಲ್ಪ ವಿವರಗಳನ್ನು ಹೆಕ್ಕಿದ್ದೇನೆ. ಜಿನ್ ಹುಟ್ಟಿದ್ದು ಡಿಸೆಂಬರ್ 4, 1992ರಲ್ಲಿ. ಜಿನ್ […]Read More

ಎಸ್ ಎಲ್ ಭೈರಪ್ಪನವರ ಸೃಷ್ಟಿಶೀಲತೆಯಲ್ಲಿ ಲಕ್ಷ್ಮಣ, ಊರ್ಮಿಳೆ ಹಾಗು ತಾರೆ – ಆಶಾ

ಡಾ.ಎಸ್.ಎಲ್.ಭೈರಪ್ಪನವರ ಉತ್ತರಕಾಂಡದ ಸಂವಾದದಲ್ಲಿ ಮಂಡಿಸಿದ ಪ್ರಬಂಧ ನಮ್ಮ ಭಾರತೀಯ ಪುರಾಣ ಪರಂಪರೆಯಲ್ಲಿ ರಾಮನದು ಆದರ್ಶಪಾತ್ರ. ಅವನೇ ರಾಮಾಯಣದ ನಾಯಕ. ಅವನ ಆಜ್ಞಾಧಾರಕ ಹಾಗೂ ಪ್ರತಿ ಹೆಜ್ಜೆಗಳನ್ನು ಅನುಸರಿಸಿ ನಡೆಯುವವನು ಲಕ್ಷ್ಮಣ. ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿ ’ಉತ್ತರಕಾಂಡ’ ದಲ್ಲಿ ರಾಮ ಕಥಾ ನಾಯಕನೂ ಹೌದು, ಆದರ್ಶಪ್ರಾಯನೂ ಹೌದು. ಆದರೆ ಅವನಷ್ಟೇ ಉದಾತ್ತ ಪಾತ್ರವಾಗಿ, ಸ್ವತಂತ್ರ ಆಲೋಚನೆ, ನಿರ್ಧಾರಗಳನ್ನ ಮಾಡಬಲ್ಲವನಾಗಿ, ಕೆಲವೊಮ್ಮೆ ರಾಮನನ್ನು ಪ್ರತಿರೋಧಿಸುವವನಾಗಿಯೂ ಕಾಣಿಸುಕೊಳ್ಳುವ ಪ್ರಬಲ ಪಾತ್ರವಾಗಿ ಲಕ್ಷ್ಮಣ ಚಿತ್ರಿತಗೊಂಡಿದ್ದಾನೆ! ರಾಮ ಭಾವುಕತೆಯಲ್ಲಿ ಮೈಮರೆತು ತೇಲಿಹೋಗುತ್ತಿದ್ದರೆ, ಲಕ್ಷ್ಮಣ ಮೈಕೈಯಿಗೆ ಮಣ್ಣುಮೆತ್ತಿಕೊಂಡು […]Read More

ಸ್ವಾತಂತ್ರ್ಯ ಸಮರ ಕರುನಾಡು ಅಮರ

ಸ್ವರಾಜ್ಯ ನಮ್ಮ ಜನ್ಮ ಸಿದ್ದ ಹಕ್ಕು ಎಂದು ಆಂಗ್ಲರ ಗುಲಾಮಗಿರಿಗೆ ತಲೆಬಾಗದ ನಮ್ಮ ನಾಡಿನ ಜನರ ನರನಾಡಿಗಳಲ್ಲಿ ಮಿಡಿಯುವ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟದ ಮಹತ್ತರ ಆಶಯಗಳನ್ನು ತುಂಬಿಕೊಂಡಿರುವ ಕರ್ನಾಟಕ ವೀರ ವನಿತೆಯರ, ವೀರಯೋಧರ ಮತ್ತು ಮಹತ್ತರ ಘಟನಾವಳಿಗಳನ್ನು ಸರಳವಾಗಿ ಹಾಗು ಸಮರ್ಪಕವಾಗಿ ತಿಳಿಯಪಡಿಸುವ ಹೊಸ ನಾಟಕ “ಸ್ವಾತಂತ್ರ್ಯ ಸಮರ ಕರುನಾಡು ಅಮರ“. ಕನ್ನಡ ನಾಡಿನ ರಾಣಿ ಅಬ್ಬಕ್ಕನಿಂದ ಮೊದಲುಗೊಂಡು ಕಿತ್ತೂರು ರಾಣಿ ಚೆನ್ನಮ್ಮ, ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಹಾಗೆಯೇ, ಸಂಗೊಳ್ಳಿ […]Read More

ಕನ್ನಡ ಶಾಯಿರಿಗಳು – ಒಂದು ಅವಲೋಕನ

ಕನ್ನಡ ಸಾರಸ್ವತ ಲೋಕವು  ಕಥೆ, ಕಾದಂಬರಿ,ನಾಟಕ,ಮಹಾಕಾವ್ಯ,ಕವನ, ಸಣ್ಣ ಕಥೆ, ಹನಿಗವನ ಇನ್ನೂ ಹಲವಾರು ಪ್ರಕಾರಗಳಿಂದ ಶ್ರೀಮಂತವಾಗಿದೆ.ಈ ಶ್ರೀಮಂತ ಪರಂಪರೆಗೆ ಇತ್ತಿಚಿನ ಸೇರ್ಪಡೆ ಎಂದರೆ ಕನ್ನಡ ಶಾಯಿರಿಗಳು. ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಪರಿಯನ್ನು ಶಾಯಿರಿ ಎನ್ನಬಹುದು.ಇದನ್ನು ಓದಿಯೇ ಸವಿಯಬೇಕು! ಶಾಯಿರಿ  ಎಂಬ ಪದವು ಅರೇಬಿಕ್  ಭಾಷೆಯ “ ಶೇರ್” ಎಂಬ  ಪದದ ರೂಪಾಂತರವಾಗಿದೆ.ಶೇರ್  ಪದದ ಅರ್ಥ ಎರಡು ಸಾಲಿನ ಪದ್ಯ ಎಂದಾಗುತ್ತದೆ.  ನಮಗೆ ಬಹಳ ಸಂತೋಷವಾದಾಗ, ಮತ್ತು ಬಹಳ ದುಃಖವಾದಾಗ ಮನಸ್ಸಿನ ಭಾವನೆಗಳನ್ನು ಹೊರ ಹಾಕುವ […]Read More

ಚಿತ್ ಶಾಂತಿ

ಅರಿಯದಿರಲಿ ಬಾಳಿನ ನೋವುತನಷ್ಟಕ್ಕೆ ತಾನುರಿಯಲಿ ಸೊಡರುತನ್ಮಯತೆ ಜ್ವಾಲೆ, ಹಚ್ಚಿರುವರು ಯಾರು?ನಿಲುಕದಿರಲಿ ಕೊನೆಯ ಉಸಿರು ದಾರಿ ಕಾಣುವ ಬಯಕೆ ಯಾಕೆ?ಉರಿದುರಿದು ನೀಡಲಿ ಚಿತ್ ಶಾಂತಿಜ್ಯೋತಿಯೇ ವಿಸ್ಮಯ, ಆನಂದ ಬೆಳಕೇ!ನಿನ್ನೊಳಗಿನ ಲೀನ ನನ್ನೊಳಗಿನ ಕಾಂತಿ ಭರತ್ ಎಚ್ ಜಿRead More

ಪ್ರತ್ಯಗಾತ್ಮ ಚಿಂತನ (ನೇನಂಶಿ)

ಮೂಡಿ ಬಹ ದಿನಮಣಿಯ ಬ್ರಹ್ಮ ರೂಪನು ಕಾಣನಡುನೆತ್ತಿ ಮೇಲಿರುವ ಸೂರ್ಯ ಶಿವ ತಾನು,ಪಡುವಣದ ಕಡೆಗಿಳಿವ ಸೂರ್ಯ ಸಾಕ್ಷಾತ್ ವಿಷ್ಣುನೋಡಿವನೆ ತ್ರೈಮೂರ್ತಿ- || ಪ್ರತ್ಯಗಾತ್ಮ || ವಿಶ್ವದೇವನ ವರ್ಣಮಾಲೆಯನು ಕಂಡಾಗಹ್ರಸ್ವನಾನಾಗುವೆನು ದೀರ್ಘ ಚಿಂತನದೆ|ವಿಶ್ವ ಪ್ರಕೃತಿಯ ಭಾವ ಎಂದೆಂದು ಅವ್ಯಯವುವಿಶ್ವಾತ್ಮನಿಗೆ ಶರಣು – || ಪ್ರತ್ಯಗಾತ್ಮ || ಋಷಿಯಲ್ಲದವರಾರೂ ಕವಿಯಾಗಲಾರರೈಋಷಿಯ ಅಂಶವು ಬೇಕು ಕಾವ್ಯಕರ್ಮಕ್ಕೆಋಷಿಯ ತಪಸ್ ಸಾಧನೆಯು, ಸಿದ್ಧಿ ಮೇಣ್ ದರ್ಶನವುರಸಋಷಿಗಿದತಿಮುಖ್ಯ- || ಪ್ರತ್ಯಗಾತ್ಮ || ಯಾವಾಗ ಬರುವಳೋ ಯಾವಾಗ ಹೋಗುವಳೋಭಾವದೇವಿಯು ತಾನು ನಾ ಹೇಳಲಾರೆ,ಆವ ಸಮಯದಿ ಎನ್ನ ಕೈಯಿಂದ […]Read More