ಪರಾಭವ ಭಾವನಾ – 4 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ ಅಪ್ಪುವಿನ ಅನುಮಾನ ನಿಂತಿಲ್ಲ. ಯಾರು ಗುರುಗಳನ್ನು ಕೊಂದವರು ? ಜೋಶಿ ಮಠದಲ್ಲಿನ ಅನುಭವಗಳನ್ನು ಚಿಂತಿಸುತ್ತಾ ಮದುರೈ ಗೆ ಬಂದ ಅಪ್ಪು ಸುಂದರ ಚತುರ್ಬುಜ ನಾರಾಯಣ ವಿಗ್ರಹವನ್ನು ಕಂಡ ಮುಂದೆ ? —ನಾಲ್ಕು‌— ಅಳಗರ್‌ ಕೋವಿಲ್‌ (ಸುಂದರನ ದೇವಸ್ಥಾನ)ದ ವಿನ್ಯಾಸ ನೋಡಿ ಬೆರಗಾಗಿದ್ದ ಅಪ್ರಮೇಯ. ಬಲು ಚೆನ್ನಾದ ಗುಡಿಯದು. ಗುಡಿಯ ಹಿಂದೆ ಹಸಿರು ಬೆಟ್ಟ. ವೃಕ್ಷಸಮೂಹ ಗುಡಿಯ ಸುತ್ತಲೂ ಇತ್ತು. ಆರು ಕಂಬಗಳ ಪುಟ್ಟ ಮಂಟಪ ಪ್ರವೇಶಿಸಿದೊಡನೆ ಸುಮಾರು ಹದಿನೈದು ಕಂಬಗಳ ದೊಡ್ಡ ಪ್ರಾಂಗಣ. ಅದನ್ನು […]Read More

ಸ್ವತಂತ್ರ ಅಂದ್ರೆ ಏನು??

ಚಿಂತನ – ಮಂಥನ ಬ್ರಿಟೀಷರು ಭಾರತ ಬಿಟ್ಟು ಹೋಗಿದ್ದೇ ಸ್ವತಂತ್ರವ? ನಾವೆಲ್ಲರು ಧೈರ್ಯವಾಗಿ ರಸ್ತೆಗಳಲ್ಲಿ ಯಾವುದರ ಭಯವೂ ಇಲ್ಲದೆ ಓಡಾಡುವುದೇ ಸ್ವತಂತ್ರವೇ? ಅಥವಾ ರಾಜರ ಆಡಳಿತದಿಂದ ರಾಜಕಾರಣಿಗಳ ಆಡಳಿತಕ್ಕೆ ದೇಶ ಒಗ್ಗಿಕೊಂಡದ್ದೇ ಸ್ವತಂತ್ರವೆ? ಬಹಳ ಸುಲಭದ ಈ ಪ್ರಶ್ನೆಗೆ ನಿಖರ ಉತ್ತರವೇನಾದರೂ ಸಿಕ್ಕರೆ ಅಂದು ನಾವು ನಿಜಕ್ಕೂ ಸ್ವತಂತ್ರರೆಂದುಕೊಳ್ಳಬಹುದು. ಏಳು ದಶಕಗಳ ಹಿಂದೆ ನಡೆದ ಘಟನೆಗಳೇ ನಮಗೆ ಗೂತ್ತಿಲ್ಲ. ಕೆಲವರಿಗೆ ಗೊತ್ತಿದ್ದರು ನೆನಪಿಲ್ಲ. ಇನ್ನು ಸ್ವಾತಂತ್ರ್ಯದ ಬಗ್ಗೆ ಮಾತನಾಡು ಎಂದರೆ, ವಾಟ್ಸಪ್ ಸ್ಟೇಟಸ್ ಹಾಕುವುದು, ಸ್ಟೋರಿ ಅಪ್ಲೋಡ್ […]Read More

ಸೂರಕ್ಕಿಗಳು – Sun Bird

ಮಕರಂದವ ಕುಡಿವ ಈ ಬೆಟ್ಟುದ್ದ ಹಕ್ಕಿಗಳು! ತಾಳಿ ತಾಳಿ ಬೆಟ್ಟುದ್ದ ಹಕ್ಕಿಗಳು ಎಂದ ಕೂಡಲೆ ಹಮ್ಮಿಂಗ್‍ ಹಕ್ಕಿಗಳು ಎಂದುಕೊಳ್ಳ ಬೇಡಿ! ಹಮ್ಮಿಂಗ್ ಹಕ್ಕಿಗಳು ಭಾರತದಲ್ಲಿ ಇಲ್ಲ. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಕಂಡುಬರುವ ಪುಟ್ಟಹಕ್ಕಿಗಳು ಹಲವಾರು ಇವೆ, ಸೂರಕ್ಕಿಗಳು, ಹೂ ಕುಟುಕಗಳು, ಜೇಡಹಿಡುಕಗಳು ಹೀಗೆ. ಇಂದು ನಾವು ಕೇವಲ ಸೂರಕ್ಕಿಗಳನ್ನು ಕುರಿತು ತಿಳಿಯೋಣ. ಇವು ಪುಟ್ಟಗಾತ್ರದ ಆದರೆ ತುಸು ಬಾಗಿದ, ಉದ್ದವಾದ ಕೊಕ್ಕಿರುವ ಹಕ್ಕಿಗಳು. ಈ ರೂಪದ ಕೊಕ್ಕು ಇವಕ್ಕೆ ಹೂವಿನ ತಳಭಾಗವನ್ನು ತಲುಪಿ ಮಕರಂದ […]Read More

ದೇವರು ಬೇಕಾಗಿದ್ದಾರೆ

‘ದೇವರು ಬೇಕಾಗಿದ್ದಾರೆ’ ಕನ್ನಡ ಚಿತ್ರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಆಗಸ್ಟ್ 13 ರಂದು ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಚಿತ್ರವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ನಾನು ಬರೆದಿದ್ದ ಲೇಖನವನ್ನು ಈಗ ಮತ್ತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ `ದೇವರು ಬೇಕಾಗಿದ್ದಾರೆ’ ಚಿತ್ರದಲ್ಲಿ ಏನಿದೆ? ಮಕ್ಕಳ ಮುಗ್ಧ ಮನಸ್ಸಿನ ತುಮಲಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಕತೆಯು ಚಿಕ್ಕದೇ ಅದರ ಅದಕ್ಕೊಂದು ವಿಸ್ತಾರವಾದ ಅರ್ಥ ಕೊಟ್ಟು ಚಿತ್ರವನ್ನು ಹಲವು ಪದರಗಳಲ್ಲಿ ಚಿತ್ರಿಸಿದ್ದಾರೆ. ಈ ಚಿತ್ರದಲ್ಲಿ `ದೇವರು’ ಯಾರು? ಎಂಬುದೇ ಚಿತ್ರದ […]Read More

ಪರಾಭವ ಭಾವನಾ – 3 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ ಅಪ್ರಮೇಯನ ಮನಸಿನಲ್ಲಿ ಗುರುಗಳ ದೇಹದ ಮೇಲೆ ಸುತ್ತ ಗಾಯಗಳು ಹೇಗಾದವು ಎಂಬ ಚಿಂತೆಗೆ ಬೀಳುತ್ತಾನೆ.ಅವರು ಇಟ್ಟಿಕೊಂಡಿದ್ದ ರಹಸ್ಯಗಳಾದರು ಏನು ? —ಮೂರು— ಪ್ರಪಂಚದಲ್ಲಿನ ದುಷ್ಟತನಕ್ಕೆ ಕೊನೆಯೇ ಇಲ್ಲವೇನೋ… ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ‍‍ಧರ‍್ಮಸಂಸ್ಥಾಪನಾರ‍್ಥಾಯ ಸಂಭವಾಮಿ ಯುಗೇ ಯುಗೇ|| ಎನ್ನುತ್ತಾನೆ ಆ ದೇವದೇವ. ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ‍್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿ ಬರುತ್ತೇನೆ ಎಂದಿದ್ದಾನೆ. ಆದರೆ ಇನ್ನೂ ಒಂದು ಮಾತು ನಾವು ಕೇಳಿದ್ದೇವೆ. ಪಾಪದ ಕೊಡ ತುಂಬುವವರೆಗೂ ಶಿಕ್ಷೆ […]Read More

ಕಾರ್ಮಿಕ ಬಂಧು

ಕೊರಗುವುದೇಕೆ ಕಾರ್ಮಿಕ ?ನಾವಿಲ್ಲವೇ ನಮ್ಮ ವೇದಿಕೆಯಿಲ್ಲವೇಜೊತೆ…ಕೊರಗದಿರಿ ಕರೋನ ಬಂತ್ತೆಂದುಕಟ್ಟಿರುವೆವು ಕಾರ್ಮಿಕ ವೇದಿಕೆ ನಿಮಗಾಗಿಸೇರಿದ್ದೀರಲ್ಲ ನಮ್ಮ ಜೊತೆಚಿಂತೆ ಇನ್ಯಾತಕ್ಕೆ. ಕಷ್ಟ ಕಾರ್ಪಾಣ್ಯ ಕಳೆಯುವುದು ಮೋಡದ ಹಾಗೆಕೈ ಬೆಸೆದಿದ್ದೇವಲ್ಲ ನಿಮ್ಮ ಅಂಗೈಗಳಿಗೆಕಣ್ಣೀರ ಒರೆಸುವುದು ನಮ್ಮಗಳ ಕೈನಂಬಿಕೆಯಿರಲಿ ಎಂದೆಂದಿಗೂನಮ್ಮ ವೇದಿಕೆಯೊಂದಿಗೆಸದ್ಯಕ್ಕೆ ಕಾಣಿಸಬೇಕು ನಿಮ್ಮ ಮುಗುಳುನಗೆ. ಗಿರಿಜಮ್ಮರಾಜ್ಯ ಮಹಿಳಾ ಅಧ್ಯಕ್ಷರುRead More

ಅಜಂತ ಗುಹಾಂತರ ಭಿತ್ತಿಚಿತ್ರಗಳು

ಅ-ಜಾಂತ ಎಂದರೆ ತಿಳಿಯದ್ದು ಎಂದು ಅರ್ಥ. ಹಾಗಾಗಿ ಅಜಂತ ನಾಮಧೇಯವಾಗಿದೆ. ಇದು ಹುಲಿಗಳೇ ವಾಸಿಸುವ ದಟ್ಟ ಅರಣ್ಯದಲ್ಲಿದ್ದು ವಾಘೋರ ಎಂಬ ನದಿಯ ದಡದಲ್ಲಿ ಇದೆ. ನದಿಯು ಕುದುರೆಯ ಲಾಳದ ಆಕಾರದಲ್ಲಿ ಬಾಗಿ ಮುಂದಕ್ಕೆ ಹರಿಯುತ್ತದೆ. ವ್ಯಾಘ್ರಗಳೇ ಹೆಚ್ಚಾಗಿರುವ ಈ ಕಾಡಿನಲ್ಲಿ ಎಲ್ಲ ಹುಲಿಗಳೂ ನೀರು ಕುಡಿಯಲು ಇಲ್ಲಿಗೇ ಬರುವುದರಿಂದ ಈ ನದಿಗೆ ವಾಘೋರ ಎಂಬ ಹಸರು ಬಂದಿದೆ, ಈ ಪರಿಸರದ ಕಲ್ಲುಗಳು ಬಹಳ ಕಠಿಣವಾಗಿರುವುದರಿಂದ ಶಿಲಾನ್ಯಾಸಕ್ಕೆ ಸೂಕ್ತವಾದುದು ಮತ್ತು ಬೇಸಿಗೆಯನ್ನು ಬಿಟ್ಟು ಉಳಿದ ಎಲ್ಲ ಕಾಲಮಾನಗಳೂ ಬಹಳ […]Read More

ಅಪಾರ್ಟ್ಮೆಂಟು

ಕೆಲವೊಮ್ಮೆ ಮನದೊಳಗಿನ ಆಲೋಚನೆಗಳುಅಪಾರ್ಟ್ಮೆಂಟಿನ ಕಾಂಪೌಂಡಿನೊಳಗೆವಾಕಿಂಗ್ ಮಾಡಿದಂತೆ ಅಲ್ಲಲ್ಲೇ ಸುತ್ತುತ್ತಿರುತ್ತವೆಕಣ್ಣಿಗೆ ಬೀಳುವಷ್ಟರಲ್ಲೇ ಕಥೆ ಹೆಣೆಯುತ್ತಿರುತ್ತವೆ || ನಮ್ಮದು ನೋಡಿ ಹೈಫೈ ಅಪಾರ್ಟ್ಮೆಂಟುಹೇಳದಿದ್ದರೆ ನಿಮಗೆ ಅರ್ಥವಾಗುವ ಬಗೆ ಏನುಂಟು || ಏರೋಪ್ಲೇನಿನ ಬ್ಯುಸಿನೆಸ್ ಕ್ಲಾಸಿನಂತೆವಿಚಿತ್ರ ನಿಶ್ಯಬ್ದದೊಂದಿಗೆ ಜನರಿಲ್ಲಿ ಜೀವಿಸುತ್ತಾರೆರಾತ್ರಿಯ ನಿರ್ವಾತದಂತೆ ಹಗಲುಗಳೂ ಇಲ್ಲಿ ಖಾಲಿ ಖಾಲಿ || ಥೇಟು ಸುತ್ತಿ ಸುತ್ತಿ ಬರುವ ಅವವೇ ಆಲೋಚನೆಗಳಂತೆವಾಕಿಂಗು ಮಾಡುವಾಗ ಕಾಣಿಸುವುದು ಅವವೇ ಮುಖಗಳುಪರಿಚಿತರಂತೆ?!? ಪರಿಚಿತರೊಳಗಿನ ಅಪರಿಚಿತರಂತೆ || ಕಳೆದ ತಿಂಗಳು ಮೂರು ಕೆಂಪು ಆರು ಬಿಳಿ ಬಳೆ ತೊಟ್ಟುಚಡ್ಡಿ ಹಾಕಿಕೊಂಡು ಗಂಡನೊಡನೆ […]Read More

ಬಿ ಟಿ ಎಸ್ RM – ಕಿಂ ನಂಜೂನ್

ಹಾಯ್, ಹಲೋ  ಎಲ್ಲರಿಗು… ಒಬ್ಬ ಪುಟ್ಟ ಮುಗ್ಧ ಹುಡುಗ ಇದ್ದ. ಓದಿನಲ್ಲಿ ಹಿಂದೆ ಉಳಿದಿದ್ದ. ತನ್ನದೇ ಲೋಕದಲ್ಲಿ ಸದಾ ಮುಳುಗಿರುತ್ತಿದ್ದ. ಅವನಿಗಿದ್ದ ಪ್ರಪಂಚ ಒಂದೇ. ಅದು ಅವನ ತಾಯಿ. ತನ್ನ ಮಗ ಬದುಕಿನಲ್ಲಿ ಎಲ್ಲರಂತಾಗಬೇಕೆಂದರೆ ತಾನು ಮಾತ್ರ ಅವನಿಗೆ ಪ್ರೋತ್ಸಾಹಿಸಬೇಕು ಎಂದು ಅರಿತ ತಾಯಿ ಅವನನ್ನು ಜಗತ್ತಿನ ಕಹಿ ಮಾತುಗಳಿಂದ ದೂರವಿರಿಸಿ, ಅವರೆಲ್ಲರೂ ಅವನನ್ನು ಪ್ರೀತಿಸುತ್ತಾರೆಂದೂ, ಹೊಗಳುತ್ತಾರೆಂದೂ ಹೇಳುತ್ತಿದ್ದಳು. ಮುಂದೆ ಆ ಹುಡುಗನು ಜನರ ನಂಬಿಕೆ, ಪ್ರೀತಿ, ನಂಬಿಕೆ ಉಳಿಸಲು ಮಹತ್ಕಾರ್ಯ ಮಾಡಿ ಜಗತ್ತಿಗೇ ಮಾದರಿಯಾದ ವಿಜ್ಞಾನಿಯಾದನಂತೆ.  […]Read More

ಚಂದಕಿಂತ ಚಂದ ನಮ್ಮಶಾಯರಿ ಈರಣ್ಣ

ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು ಎಂದು ಬರೆದ ಕನ್ನಡ ಶಾಯರಿಗಳ ಜನಕ ಎಂದೇ ಖ್ಯಾತರಾಗಿದ್ದ ಖ್ಯಾತ ಕವಿ ಇಟಗಿ ಈರಣ್ಣ. ಚಂದಕ್ಕಿಂತ ಚಂದ ನೀನೇ ಸುಂದರನಿನ್ನ ನೋಡ ಬಂದ ಬಾನ ಚಂದಿರ ಹೊಸಪೇಟೆ, ಬಳ್ಳಾರಿ, ಹೂವಿನಹಡಗಲಿ ಇನ್ನಿತರ ಕಡೆ ಉಪನ್ಯಾಸಕರಾಗಿದ್ದ ಈರಣ್ಣ ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಕನ್ನಡದ ಶಾಯರಿಗಳು ಅವರ ಜನಪ್ರಿಯ ಪುಸ್ತಕ. ಹದಿನೈದಕ್ಕೂ ಹೆಚ್ಚು ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ತಾಯಿ ಕೊಟ್ಟ ತಾಳಿ ಅವರ ಸಾಹಿತ್ಯ ಬಳಕೆ […]Read More