ಈ ವಾರದ ಬಿಗ್ ಬಾಸ್ ಸೀಸನ್ 8 ಎಲ್ಲ ಸ್ಪರ್ದಿಗಳು ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆಗುವ ಮೂಲಕ ಶುರುವಾಯಿತು. ಶಮಂತ್ ಮತ್ತು ಅರವಿಂದ್ ಕೆ ಪಿ ಎಲಿಮಿನೇಷನ್ ನಿಂದ ಇಮ್ಮ್ಯೂನಿಟಿ ಪಡೆದಿದ್ದರು. ಎಲಿಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಎರಡು ತಂಡಗಳನ್ನು ತಾವೇ ರಚಿಸಿ ‘ದಂಡ ಯಾತ್ರೆ’ ಎಂಬ ಹೆಸರಿನಲ್ಲಿ ಟಾಸ್ಕ್ ನೀಡಿದ್ದರು. ಮಂಜು ಪಾವಗಡ, ದಿವ್ಯ ಯು, ದಿವ್ಯ ಸುರೇಶ್, ಶಮಂತ್, ಮತ್ತು ಚಕ್ರವರ್ತಿ ಒಂದು ತಂಡವಾಗಿ ತಮ್ಮನ್ನ “ನಿಮಗೈತೆ ಇರು” ಎಂದು ಕರೆದುಕೊಂಡರೆ […]Read More
ಕತ್ತಲು ಒಳಗೋ, ಹೊರಗೋ!?ಬೆಳಕು ಒಳಗೋ, ಹೊರಗೋ!? ಕಾಡ ಗಾಢಾಂಧಕಾರದಲ್ಲಿಸಾವಿರಾರು ಮಿಣುಕು ಹುಳುಗಳದ್ದೇದೀಪದ ಮೆರವಣಿಗೆ! ತನ್ನ ಮುಂದಿನ ಕತ್ತಲ ಸೀಳಿಕೊಂಡುಹಾರುವ ಈ ಪುಟ್ಟ ಹುಳುಹಿಂದುಳಿದವರಿಗೆ ಬೆಳಕಾಗಿದೆ! ವಿಜ್ಞಾನಿಗಳು ರೇಡಿಯಂ ಅನ್ನುಕಂಡು ಹಿಡಿಯುವ ಮುನ್ನವೇ…ಸೃಷ್ಟಿಕರ್ತನೇ ಜೀವ-ಜಂತುಗಳಲ್ಲಿಅದನ್ನು ಇಟ್ಟು ಕಳಿಸಿದ್ದಾನೆ! ಕತ್ತಲಲ್ಲಿ ಬದುಕುವವರಿಗೆ ಕಣ್ಣ ಬೆಳಕಾಗಿ,ದಾರಿ ದೀಪವಾಗಿ!ಹುಲಿ, ಬೆಕ್ಕು, ನಾಯಿ, ನರಿತೋಳಗಳಂತಹ ಜೀವಿಗಳಲ್ಲಿಕಣ್ಣಾಗಿಸಿದ್ದಾನೆ! ಈ ಜಗವು ಹೀಗಿದ್ದರೂ ಗೀಜಗವುತನ್ನ ಗೂಡಲ್ಲಿ ಬೆಳಕಾಗಿಸಿಕೊಂಡದ್ದುಈ ಮಿಣುಕು ಹುಳುವನ್ನೇ! ಶಕುನಿ ತಾ ತನ್ನ ತಂಗಿ ಗಾಂಧಾರಿಯಕತ್ತಲ ಭಯ ಹೋಗಿಸಲು ಹುಡುಕ ಬಂದದ್ದುಈ ಬೆಳಕ ಹುಳುವನ್ನೇ! ಪುರಾಣದ […]Read More
ನಿನ್ನೊಂದಿಗಿಷ್ಟು ಮಾತುದೀರ್ಘ ಮೌನದ ನಂತರವೂಉಳಿದದ್ದು ಇನ್ನಷ್ಟು ಮತ್ತಷ್ಟುನೀನೇ ಬೇಕೆಂಬ ವಾಂಛೆ ನಿನ್ನೆಡೆಗಿನ ಆಕರ್ಷಣೆಗೆಇದು ಇಷ್ಟೇ ಎಂದುಗೆರೆ ಎಳೆಯಲಾರೆಆಗಸದಷ್ಟು ಎಂದುಬಾಯಲ್ಲಿ ಹೇಳಿ ಬೀಗಲಾರೆ ನಿನ್ನ ಆರಾಧಿಸಲುನನ್ನವೇ ಕಾರಣಗಳುಂಟುನಿನಗಾಗಲಿ ಜಗಕಾಗಲಿವಿವರಿಸಲಾಗದ ನಂಟು ನೀ ತೋರಿದ ಸ್ನೇಹಕ್ಕೆಪ್ರೀತಿ ಪ್ರೇಮಗಳೆಂದುನೀನು ಹೆಸರಿಸಲಾರೆಅದು ಅಷ್ಟೇ ಎಂದುನಾನು ಕಡೆಗಣಿಸಲಾರೆ ನಿನ್ನೊಲುಮೆ ನನ್ನೆದೆಯಲಿಅರಳಿ ಹೂವಾಗಿದೆಕಾನನದ ಕುಸುಮವೊಲುಸುಗಂಧ ಸೂಸುತಿದೆ ನಿನ್ನೊಂದು ಮಾತಿಗೆಕಾಯುವ ತವಕದೊಳಗೂಪುಳಕಗೊಳ್ಳುವ ಪರಿಇರಲಿ ಹೀಗೇ, ಹೃದಯಅರಳುತಿರಲಿ ಪ್ರತಿ ಮುಂಜಾನೆ ಸೌಜನ್ಯ ದತ್ತರಾಜ ಫೋಟೋ ಕೃಪೆ : ವರ್ಲ್ಡ್ ಆರ್ಟ್ ಕಮ್ಯೂನಿಟಿRead More
ಅದೊಂದು ಸ್ಕೌಟ್‍ಗೈಡ್ ಉತ್ಸವ. ಚಿಕ್ಕಂದಿನಿಂದಲೆ ಹಲವಾರು ಸದ್ಗುಣಗಳನ್ನು, ಸರಳವಾಗಿ ಬದುಕುವುದನ್ನು ಮತ್ತು ಸಾಹಸ ಪ್ರವೃತ್ತಿಯನ್ನು ಬೆಳೆಸಲು ಆರಂಭಿಸಿದ ಚಳವಳಿ ಸ್ಕೌಟ್ಸ್ ಮತ್ತು ಗೈಡ್ಸ್. ಇದರಲ್ಲಿ ಪುಟ್ಟ ಗಂಡು ಮಕ್ಕಳ ತಂಡವನ್ನು ಕಬ್ಸ್ ಎಂದೂ ಪುಟ್ಟ ಹೆಣ್ಣುಮಕ್ಕಳ ತಂಡವನ್ನು ಬುಲ್‍ಬುಲ್ಸ್ ಎಂದು ಕರೆಯುತ್ತಾರೆ. ಆ ಪುಟ್ಟಮಕ್ಕಳ ಚಟುವಟಿಕೆಯನ್ನು ಕಂಡಾಗ ಸಂತೋಷ, ಆಶ್ಚರ್ಯ ಎರಡೂ ಆಗುತ್ತದೆ. ಅಂದಹಾಗೆ, ಬುಲ್‍ಬುಲ್ ಎಂದರೇನು? ಅದೇ ನಮ್ಮ ಸುಂದರ ಹಕ್ಕಿಗಳಲ್ಲಿ ಒಂದು! ಕನ್ನಡದಲ್ಲಿ ಇದನ್ನು ಪಿಕಳಾರ ಎನ್ನುತ್ತಾರೆ. ನಮ್ಮ ಬಹುತೇಕ ಪಕ್ಷಿಛಾಯಾಗ್ರಾಹಕರ ಅತ್ಯುತ್ತಮ ಚಿತ್ರಗಳಲ್ಲಿ […]Read More
ರಾಮಯ್ಯನವರು ತುಂಬಾ ದುಃಖಿತರಾಗಿದ್ದರು. ಅದೇ ಕಲ್ಲು ಬಂಡೆಯ ಪಾರ್ಕಿನಲ್ಲಿ ಮೊಮ್ಮೊಗುವಿನೊಂದಿಗೆ ಖುಷಿ ಖುಷಿಯಾಗಿ ಆಟವಾಡಿದ ಕ್ಷಣಗಳು ಆ ಒಂದು ಘಟನೆಯಿಂದ ಕ್ಷಣ ಮಾತ್ರದಲ್ಲಿ ಕರಗಿ ಹೋಗಿತ್ತು. ಅದೇ ಘಟನೆಯನ್ನು ಮತ್ತೆ ಮತ್ತೆ ನೆನಸಿಕೊಂಡು ಅಳುತ್ತಿದ್ದರು. ಅಷ್ಟಕ್ಕೂ ಆದದ್ದಿಷ್ಟೇ… ನಿನ್ನೆ ನೆಡೆದ ಘಟನೆ…. ಪಾರ್ಕಿನಲ್ಲಿ ರಾಮಯ್ಯನವರು ಮೊಮ್ಮೊಗ ರಾಮುವಿನೊಂದಿಗೆ ಹೆಜ್ಜೆ ಹಾಕುತ್ತ ಹರಟುತ್ತ ಆಟವಾಡಿಸುತ್ತಾ ಏನೇನೋ ಮಾತನಾಡುತ್ತ ಇದ್ದಾಗ ಒಡನೆಯೇ ರಾಮು ‘ತಾತ ನಾಳೆ ನನ್ನ ಬರ್ತ್ಡೇ ಇದೆ, ನಾಳೆ ನನ್ನ ಫ್ರೆಂಡ್ಸ್ ನ ಮನೆಗೆ ಕರೆಯುವೆ, ಬಂದವರಿಗೆ […]Read More
ಕಳೆದ ವಾರದ ಟಾಸ್ಕ್ ಗಳಲ್ಲಿ ಸ್ಪರ್ದಿಗಳ ಲವಲವಿಕೆಯ ಆಟಗಳಿಂದ ಬಿಗ್ ಬಾಸ್ ನೋಡುಗ ಪ್ರಿಯರಿಗೆ ರೋಚಕವಾಗಿತ್ತು ಜೊತೆಗೆ ಮೊದಲನೇ ಮಹಿಳಾ ಕ್ಯಾಪ್ಟನ್ ಆಗಿ ದಿವ್ಯ ಉರುಡುಗ ಗಮನ ಸೆಳೆದರು. ಬನ್ನಿ ಈ ವಾರದ ಬಿಗ್ ಬಾಸ್ ಸೀಸನ್ 8 ಮುಖ್ಯಾಂಶಗಳನ್ನು ನೋಡೋಣ. ಈ ವಾರ ಅತಿ ಹೆಚ್ಚು ಘರ್ಷಣೆಗಳನ್ನು ಕಂಡ ವಾರವಾಗಿದ್ದು. ಫೈನಲ್ ದಿನಗಳು ಹತ್ತಿರವಾದಂತೆ ಮನೆಯಲ್ಲಿನ ತಾಪಮಾನ ಹೆಚ್ಚುತ್ತಿದೆ. ಮಂಜು ಪಾವಗಡ, ದಿವ್ಯ ಯು, ಪ್ರಶಾಂತ್ ಸಂಭರ್ಗಿ, ಡಿ ಜೆ ಚಕ್ರವರ್ತಿ, ವೈಷ್ಣವಿ, ದಿವ್ಯ ಸುರೇಶ್, […]Read More
ಮಾನ್ಯರೇ ನಮಸ್ಕಾರ…. ಕೃಷ್ಣಾ ಮೇಲ್ದಂಡೆ ಯೋಜನೆ ಕ್ಕ್ರಿಯಾಕ್ರಮ ಯೋಜನೆ ಅನುಷ್ಠಾನ ತತ್ಸಂಬಂಧಿತ ಪುನರ್ವಸತಿ ಹಾಗೂ ಅದರನುಗುಣವಾಗಿ ಮಾಡಿದ್ದು ಮಾಡಬೇಕಾಗಿದ್ದು ವಿಷಯ ವಿಚಾರಯೋಗ್ಯ…. ಸಾಂಘಿಕವಾಗಿ ನಾವೆಲ್ಲರೂ ಬರಲಿರುವ ಸನ್ನಿವೇಶಗಳ ಬಗ್ಗೆ ಹಾಗೂ ತೆಗುದುಕೊಳ್ಳಬೇಕಾಗದ ನಿರ್ಧಾರಗಳ ಬಗ್ಗೆ ಪ್ರಸ್ತುತ ಈ ಒಡನಾಟ ಮನ್ವಂತರವಾಗಬೇಕು. ಅಂದಾಜು ೭೦ ಋತುಗಳ ಸಂಘರ್ಷ ಕಂಡ ಕೃಷ್ಣಾ ಮೇಲ್ದಂಡೆ ಯೋಜನೆ ಅನುಕಂಪ ಗಿಟ್ಟಿಸಿಕೊಳ್ಳುವ ಅಥವಾ ಕೃಪಾಪೋಷಿತವಾಗಬಾರದು..ನಮ್ಮೆಲ್ಲರ ತ್ಯಾಗ ಸಹಿಷ್ಣುತೆಯ ದ್ಯೋತಕವಾಗಲೇಬೇಕು… ಹತ್ತಾರು ಬಂದಾರು ತಿಳುವಳಿಕೆ ತಂದಾರು ಮನೆಮನೆಗು ಕನಸಿನ ತೊಟ್ಟಿಲು ಕೊಟ್ಟಾರು…. ಏರಿಳಿತದ ಜೀವನದ ನಿಟ್ಟುಸಿರು […]Read More
ಒಂದು, ಒಂದು ಪಕ್ಕ ಕುಂತಾವೆ,ಹನ್ನೊಂದು ಆಗಾವೆ. ಒಂದು, ಒಂದು ಎಂದೇಸೇರ್ಪಡೆಯಾಗುತ್ತಾಜನನ ಪ್ರಮಾಣವು ಏರುತ್ತಾಸಂಖ್ಯೆಯು ಅಸಂಖ್ಯವಾಗುತ್ತಿದೆ. ಯೋಚನೆ, ಆಲೋಚನೆ,ಯೋಜನೆಗಳಿಂದಜನಸಂಖ್ಯಾ ಸ್ಫೋಟಕ್ಕೆತಡೆ ಹಾಕಬಹುದು! ಜನನ ಜತನವಾಗಲಿ!ಮರಣ ಅಕಾಲವಾಗದಿರಲಿ! ತುಂಕೂರು ಸಂಕೇತ್Read More
ಅದೇನದು?ಇತ್ತೀಚೆಗೆ ಎಲ್ಲರೂ..ಗೀಚಲು ಶುರುಮಾಡಿದ್ದಾರಲ್ಲ!!ಕಾವ್ಯವಿರಬೇಕು ಇಲ್ಲಾ ಕವನವಿರಬೇಕುಅದೂ ಅಲ್ಲದಿದ್ದರೆ ಕವಿತೆಯಿರಬೇಕು ಕಾವ್ಯವೆಂದರೆ,ಪದಗಳನ್ನು ಒಂದರ ವಕ್ಕಳಕ್ಕೆಮತ್ತೊಂದನ್ನು ಪೋಣಿಸುವುದೇ?ಪ್ರಾಸಗಳನ್ನು ಆಯ್ದು ಮನೆ ಕಟ್ಟುವುದೇ?ಎಲ್ಲಿಗೆ ಬೇಕು ಅಲ್ಲಿಗೆಸಾಲುಗಳನ್ನು ತುಂಡರಿಸುವುದೇ?ನಾಲ್ಕೈದು ಪ್ಯಾರ ಅನಿಸಿಕೆ ಬರೆಯುವುದೇ? ಇದೊಂದು ಗೊಂದಲದ ಪ್ರಶ್ನೆಇಂತದ್ದೇ ನಿಯಮಗಳೆಂಬುದಿದ್ದರೆಅದನ್ನು ಅನುಸರಿಸಬಹುದಿತ್ತುಓದಿದರೆ ಕಾವ್ಯವಾಗಬಲ್ಲುದುಮತ್ತೆ ಓದಿದರೆ ಗದ್ಯವಾಗಬಹುದುಎಲ್ಲಿಲ್ಲದ ಮಾಂತ್ರಿಕ ಶಕ್ತಿ ಈ ಕಾವ್ಯಕ್ಕೆಅರ್ಥೈಸಿಕೊಳ್ಳದಿದ್ದರೆ ಗೊಚ್ಚೆತಲೆಹಾಕದಿದ್ದರೆ ಪುಚ್ಚೆಕೆಲವರಿಗೆ ನೇರ ಚಾಟಿ ಏಟುಮತ್ತೆ ತಳ ಸುಟ್ಟ ಹಾಗೆ ಇಲ್ಲಿ ಎಲ್ಲವೂ ಸಂಧಿಸಲಿದೆಪುಟಪುಟಗಳಲ್ಲಿ ಹೇಳುವುದನ್ನುಕೇವಲ ಎರಡು ಪದಗಳಲ್ಲಿಯೇ ಮುಗಿಸಹುದು!ನಾಲ್ಕು ಸಾಲಿನಲ್ಲಿ ಪ್ರಪಂಚವೇ ಕಾಂಬುದುಅಳುವವರಿಗೆ ನಗುವುದನ್ನೂನಗುವವರಿಗೆ ಸೈರಿಸುವುದನ್ನುಹಸಿದವರಿಗೆ ಅನ್ನವನ್ನೂಹೆಚ್ಚಾದವರಿಗೆ ತಲೆತೂಗುವುದನ್ನೂಹೇಳಿಕೊಡುವ ಅದ್ಭುತ […]Read More
“ಜಿಗಿ ಜಿಗಿ ಬೊಂಬೆಯಾಟ” ಇದು ನಾಟಕಕಾರರಾದ ‘ಎ ಎಸ್ ಮೂರ್ತಿ’ ರವರು ಕಿರುತೆರೆಯಲ್ಲಿ ತಂದ ಪ್ರಸಿದ್ಧ ಧಾರಾವಾಹಿಯ ಹೆಸರು. ಈ ಬೊಂಬೆಯಾಟವು ತೊಗಲು ಬೊಂಬೆಯಾಟ ನಮ್ಮ ಜನಪದಕಲೆಯಾಗಿದ್ದು ಇದರ ಬಗ್ಗೆ ತಿಳಿಯೋಣ. ತೊಗಲು ಬೊಂಬೆಯಾಟವು ಚಿತ್ರಕಲೆ, ಹಾಡು, ನೃತ್ಯ ಮತ್ತು ಬೆಳಕಿನ ಅಂಶಗಳನ್ನು ಮೇಳೈಸಿಕೊಂಡು ಮುನ್ನಡೆಯುವ ಪ್ರದರ್ಶನ ಚಿತ್ರಕಲೆ. ವಿಜ್ಞಾನ, ಪುರಾಣ, ಇತಿಹಾಸ, ಕಾವ್ಯಗಳು ಮತ್ತು ಬದುಕಿನ ತೊಳಲಾಟವನ್ನು ಮೇಳೈಸಿಕೊಂಡ ವಿಶಿಷ್ಠವಾದ ಜನಪದ ಪ್ರಯೋಗ ಕಲೆ. ಈ ಕಲೆ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಕಲೆ […]Read More