ಹೊಸ ಭಾವಲಾಸ್ಯ ತಾಳ ತಪ್ಪದ ಮೌನರಾಗಕೆಮನವು ಮೂಕಭಾವ ತಳೆದಿದೆ!ಕುಳಿರ್ಗಾಳಿಯ ದಾಳಿಯಲೂ…ಚಿಗುರಿದೆಲೆಗಳು ನಗುತಿವೆ!! ಬತ್ತಿದೆದೆಯಲಿ ಹೊಸ ಕನಸುಗರಿಗೆದರಿ ಚೈತನ್ಯವು ಮೂಡಿದೆ!ರೆಂಬೆಕೊಂಬೆಗಳಲಿ ನಂಬಿಕೆಯುಕ್ಕಿಸಿ..ಹಚ್ಚಹಸಿರು ತಾ ನಲಿದಿದೆ!! ದಿಕ್ಕು ತಪ್ಪಿಸುವ ಕತ್ತಲೆಯಲಿನಂದದ ಬೆಳಕು ಉಳಿಯಲಿ!ಅವನೆಣಿಸಿದಾಗ ಪಯಣ ನಿಲುವುದು..ಜಡ ಬದುಕಿನ ನಿಲ್ದಾಣದಲಿ!! ವಿಸ್ತರಿಸಿದ ಅಂಬರದ ಕ್ಷಿತಿಜದೊಳುಮುಚ್ಚಿದ ಕಂಗಳಲಿ ಅಡಗಿದೆ ಬೆಳಕು!ಸತ್ಯದ ನಿಲುವಿಗೆ ನಿಜದೊಳು..ಮನತೆರೆದು ನೋಡಲು ನಲ್ಮೆಯ ಬದುಕು!! ಸುಮನಾ ರಮಾನಂದRead More
ಫಲಾಫಲ ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ॥ ೬೦೦ ॥ ಡಿವಿಜಿಯವರು ನಮ್ಮ ಬದುಕನ್ನು ಜಟಕಾ ಬಂಡಿಗೆ ಹೋಲಿಸಿ, ಅದನ್ನು ಹೊತ್ತು ನಡೆಸುವ ಕುದುರೆ ನಾವು ಎಂದಿದ್ದಾರೆ, ಇನ್ನು ಅದನ್ನು ನಡೆಸುವವನನ್ನು ವಿಧಿಗೆ ಹೋಲಿಸಿ, ವಿಧಿಯ ಆಣತಿಯಂತೆ ನಾವು ನಡೆಯುತ್ತೇವೆಯೇ ಹೊರತು ನಾವು ಅಂದುಕೊಂಡಂತೆ ಏನೂ ಆಗುವುದಿಲ್ಲ ಎಂದಿದ್ದಾರೆ. ಹಾಗೆಯೇ, ಜೀವನದಲ್ಲಿ ಯಾರಿಗಾದರೂ ತನ್ನ ಉನ್ನತಿಗೆ ತಾನೇ […]Read More
ಮತ್ತೆ ಹುಟ್ಟಿ ಬನ್ನಿ ಮುತ್ತಿನಂಥ ‘ರಾಜ’, ಸಾಗರದಂಥ ‘ಪಾರ್ವತಮ್ಮ’ಮನೆಯೊಳು ಮೂಡಿದ ಫಳಫಳ ಬೆಳ್ಳಿ ‘ಚುಕ್ಕಿ’ಅಮ್ಮ ಬರೆದ ರಂಗವಲ್ಲಿಯಲ್ಲಿ ಮೂಡಿ ಬೆಳೆದಅವಸರದ ಗಗನಯಾತ್ರಿ ಮತ್ತೆ ಹುಟ್ಟಿ ಬನ್ನಿ ಪಾವನ ಗಂಗೆಯ ಕೊಳದೊಳ ತೀರ್ಥದ ಜಲತೀರ್ಥದ ಜಲದೊಳು ಉದಿಸಿದ ನವಕಮಲನವಕಮಲದ ಮೊದಲ ಮಂದ ಸ್ಮಿತಹಾಸಸ್ಮಿತಹಾಸದ ಸುಕುಮಾರ ಮತ್ತೆ ಹುಟ್ಟಿ ಬನ್ನಿ ಕೋಟಿ ಕೋಟಿ ಮನಗಳ ಗೆದ್ದ ಕೋಟ್ಯಾಧಿಪತಿಕೋಟಿ ಇದ್ದರೂ ಸೆಟೆಯದ ಸರಳ ಸುಮತಿಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ದಾನಗೈದದಾನಶೂರ ಕರ್ಣ ಚಿನ್ನ ರನ್ನ ಮತ್ತೆ ಹುಟ್ಟಿ ಬನ್ನಿ ದೀನ ದಲಿತ […]Read More
ಸಹ್ಯಾದ್ರಿ ವನ ಉಳಿಸಿಕೊಳ್ಳಲು ಅಭಿಯಾನ ಬೆಂಗಳೂರು ಜ್ಞಾನ ಭಾರತಿ ಪುಣ್ಯಧಾಮವಾಗಿರುವುದು ನಮ್ಮೆಲ್ಲರ ಸುಕ್ರುತ. ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದ ಬಯೋ ಪಾರ್ಕ್ ಆಮ್ಲಜನಕದ ಕಣಜವಾಗಿ, ಇಂಗಾಲ ಹೀರಿಕೊಳ್ಳುವ ಕೆಲಸ ಮಾಡುತ್ತಿದೆ. ನೀರಿನ ಆಸರೆಯೂ ಹಾಗೂ ಅಂತರ್ಜಲ ಮರುಪೂರಣ ಕೇಂದ್ರವೂ ಆಗಿದ್ದು ಬೆಂಗಳೂರಿಗರ ಸೌಭಾಗ್ಯ. ಹೈಕೋರ್ಟ್ ನಿರೀಕ್ಷೆಯಂತೆ ಇಕೋತೆರಪಿ ಕಾರ್ಯಕ್ರಮ ಡಾ.ಯಲ್ಲಪ್ಪ ರೆಡ್ಡಿಯವರಿಂದ ನಡೆಯುತ್ತಾ ವಿಶೇಷ ಚೇತನ ಮಕ್ಕಳ ಆಶಾದೀಪವಾಗಿದೆ. ಜ್ಞಾನ ಭಾರತಿಯಲ್ಲಿ ಲಕ್ಷಾಂತರ ಮರಗಳನ್ನು ಬೆಳೆಸಲು ಸ್ವಾಟ್, ಗ್ರೀನ್ಸ್ ಆರ್ಮಿ ಫೋರ್ಸ್, ಮಿಡಿತ ಫೌಂಡೇಶನ್, ಜೀವನ್ಮುಕ್ತಿ, ಅದಮ್ಯ […]Read More
ವಟವೃಕ್ಷ – ಆಲದ ಮರ ಆಲದ ಮರವು ಹಲಸಿನ ಕುಟುಂಬಕ್ಕೆ ಸೇರಿದ (ಮೋರೇಸೀ ಕುಟುಂಬ), ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಪರಾವಲಂಬಿ ಸಸ್ಯವಾಗಿ (ಎಪಿಫೈಟಿಕ್ ಅಂದರೆ ಇತರ ಮರಗಳನ್ನು ಆಶ್ರಯಿಸಿಕೊಂಡು ಬೆಳೆದು ನಂತರ ತಾನು ಸ್ವತಂತ್ರವಾಗಿ ಬೆಳೆಯುವ ಜಾತಿಯ ಸಸ್ಯ) ಜನ್ಮ ತಾಳುತ್ತದೆ. ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ಭಾರತ ದೇಶದ ರಾಷ್ಟ್ರೀಯ ವೃಕ್ಷವೂ ಆಗಿದೆ. ಹಿಂದೂ ಧರ್ಮದಲ್ಲಿ ಪೂಜ್ಯನೀಯವಾಗಿರುವ ಅಶ್ವತ್ಥ ವೃಕ್ಷವೂ(ಅರಳೀ […]Read More
ಹೆಣ್ಣಿನ ನಡಿಗೆಯಲಿ ಜಗತ್ತು ಅನವರತ ದುಡಿವ ಹೆಣ್ಣಾಗಿಎಲ್ಲರ ಬದುಕಿನ ಕಣ್ಣಾಗಿ..ಇವಳಾಗಿಹಳು ಸಕಲರ ಭಾವಚೇತನ..ನೀಡುವಿರಾ ಇವಳಿಗೆ ಪ್ರತಿಸ್ಪಂದನ..!!? ಹೊಂಗನಸಿನ ಭಾವ ರೆಕ್ಕೆಯಲಿಮನ ಹಾರುತಿದೆ ಬಾನಂಗಳದಲಿ..ಅರಿಯದ ದ್ವಂದ್ವ,ನಿಡುಸುಯ್ದ ಮನಸು..ಅವಳ ಕನಸಾಗುವುದೇ ಎಂದಾದರೂ ನನಸು..!!? ಸಂಸಾರದ ನಗುಮೊಗವ ನೋಡಿಭವ ಸಾಗರದಿ ಬಿಡದೆ ಈಜಾಡಿ..ಸಬಲೆಯಾಗಿ ಮಾಡಿದ ಮಂಥನಕೆ..ಬೆಲೆ ದೊರೆವುದೇ ಅವಳ ತ್ಯಾಗ ಜೀವನಕೆ..!!? ಬಾಳಿನಲಿಹ ಉತ್ತರವಿರದ ಜಟಿಲತೆಗೆಉತ್ತರಿಸಿದೆ ಅವಳ ಸ್ನಿಗ್ಧ ಸರಳತೆ..ತಲೆಬಾಗಿ ನಡೆದಿಹಳು ಲೋಕದ ನಿಯಮಕೆ..ಸಾಟಿ ಎಲ್ಲಿದೆ ಅವಳ ಸಂಯಮಕೆ..!!? ಬದುಕಲಿ ಬರುವ ಅಡೆತಡೆಗಳ ರಭಸಕೆಎದುರಿಸಿಹಳು ದಿಟ್ಟತನದಿ ಅದರ ಹೊಡೆತಕೆ..ಕಾದಿಹಳು ಸಮಾಧಾನದ ನುಡಿಗಳಿಗೆ..ಓಗೊಡುವಿರಾ […]Read More
ಗಿಡುಗ ಬಂತು ಗಿಡುಗ ಬಿರು ಬೇಸಿಗೆಯ ಒಂದು ದಿನ, ಆಗಷ್ಟೇ ಮಧ್ಯಾನದ ಊಟ ಮುಗಿಸಿ ಆಫೀಸಿನ ಕೆಲಸ ಶುರುಮಾಡಿಕೊಂಡಿದ್ದೆವು, ನಮ್ಮ ಆಫೀಸಿನ ಆವರಣದಲ್ಲಿ ಒಂದು ದೊಡ್ಡ ಮಾವಿನ ಮರವು ಬೃಹದ್ದಾಕಾರದಲ್ಲಿ ಬೆಳೆದು ನಿಂತು ಅದರ ರೆಂಬೆ ಕೊಂಬೆಗಳು ನಾವು ಕೆಲಸ ಮಾಡುವ ಮೊದಲನೇ ಮಹಡಿಯ ಕಿಟಕಿಯ ಸಮೀಪದಲ್ಲೇ ಹಾದು ಗಾಳಿಗೆ ಮರವು ಆಫೀಸಿನ ಏರ್ ಕಡೀಷನರ್ ಕೂಡ ನಾಚುವಷ್ಟು ತಂಗಾಳಿ ಸೂಸುತಿತ್ತು. ಇದ್ದಕಿದ್ದ ಹಾಗೆ ದಪ್ ಎಂದು ಏನೋ ಬಿದ್ದ ಸದ್ದು, ಕಿಟಕಿಯ ಮೂಲಕ ನೋಡಲು ಪ್ರಯತ್ನ […]Read More
ಕತ್ತಲಿಂದ ಬೆಳಕಿನೆಡೆಗೆ ಅಂಧಕಾರ ಎತ್ತಲೆತ್ತಲೂ ಅಂಧಕಾರಕಾಣುವ ಕಣ್ಣಿಗೆ ಎಲ್ಲವೂ ಅಗೋಚರಸಕಲ ದೈವವೂ ಈ ಜೀವಕೆ ನಿರಾಕಾರಆಕಾರ ನಿರಾಕಾರದ ನಿಖರ ಸಾಕಾರದ ಗ್ರಹಚಾರ ಹೇ ದೇವನೇ ನೀನೇಕೆ ದೃಷ್ಟಿ ಕಿತ್ತುಕೊಂಡೆಪರವಾಗಿಲ್ಲ ಬಿಡು ಅಂತರ್‌ದೃಷ್ಟಿ ಕೊಟ್ಟೆನೋಡಲು ನೋಟವಿಲ್ಲದಿದ್ದರೇನುಸ್ಪರ್ಷಾನುಭವದ ಜ್ಞಾನಚಕ್ಷುವನ್ನು ಕೊಟ್ಟೆ ಎಲ್ಲರೂ ಪತ್ಯೂಷ ಸಂಧ್ಯೆ ಅಂತೆಲ್ಲಾ ಕೂಗಾಡಿದ್ರೆನಮ್ಮ ಪಾಲಿಗೆ ಎಲ್ಲವೂ ಕಾವಳವೇಬದುಕೇ ದುಸ್ತರ ಅಂದರಂತೆ ಎಲ್ಲರೂನಮಗ್ಯಾವುದೂ ಹಾಗನ್ನಿಸದಂತೆ ಮಾಡಿಟ್ಟೆ ಪಂಚೇಂದ್ರಿಯಗಳಲ್ಲಿ ಒಂದಂನಂತೂ ಕಿತ್ತುಬಿಟ್ಟೆಮಿಕ್ಕ ನಾಲ್ಕು ಇಂದ್ರಿಯಗಳನ್ನು ಹರಿತ ಮಾಡಿಬಿಟ್ಟೆಕಣ್ಣಿದ್ದೂ ಕುರುಡರಂತಿರುವವರ ನಡುವೆ ನಮ್ಮನ್ನಿಟ್ಟೆಎಲ್ಲರ ಡೋಂಗೀತನವ ನೀ ತೋರಿಸಿಬಿಟ್ಟೆ ಪ್ರಭುವೇ ನಿನಗೆಷ್ಟು […]Read More
ಗುದದ ರೋಗಗಳು (Anal diseases) ದಶಕಗಳಷ್ಟು ಹಿಂದಿನ ವಿಷಯ. ನಾನು ಆಗ, ಮೂಲವ್ಯಾಧಿ ಚಿಕಿತ್ಸೆಗೆ ಮಾತ್ರ ಮೀಸಲಾಗಿದ್ದ ನನ್ನ ಸ್ನೇಹಿತರೊಬ್ಬರ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಬೆಳಗಿನ ಒಂಭತ್ತರಿಂದ ಆರಂಭವಾಗಿ, ಸಂಜೆಯ ರಂಗು ಪಶ್ಚಿಮದಲ್ಲಿ ಮಾಯವಾಗುವವರೆಗೂ, ಕೇವಲ ಮೂಲವ್ಯಾಧಿ ರೋಗಿಗಳನ್ನೆ ಪರೀಕ್ಷಿಸಿ, ಶಸ್ತ್ರಚಿಕಿತ್ಸೆಗೆ ತಯಾರು ಮಾಡುವ ಕೆಲಸ ನನ್ನದಾಗಿತ್ತು. ಮನುಷ್ಯನಿಗೆ ಆತನ ಬದುಕಿನಲ್ಲಿ ಎಂಥೆಂಥ ಸಂಕಷ್ಟದ ಪರಿಸ್ಥಿತಿಗಳು ಬಂದೆರಗಬಹುದು ಎಂಬುದನ್ನು ಮನದಟ್ಟಾಗಿಸಲೋ ಎಂಬ ಹಾಗೆ ನಡೆದ ಆ ಘಟನೆ ನನಗೆ ಇನ್ನೂ ಕೂಡ ಮರೆಯಲಾಗದ್ದು; ಮತ್ತು ಅಷ್ಟಾದರು ಮನುಷ್ಯನ […]Read More
ಕಾಸ್ಕ್ವೆರ್ ಗುಹೆ ಇದು ವಿಶ್ವದ ಏಕೈಕ ಇತಿಹಾಸಪೂರ್ವ ನೀರೊಳಗಿನ ಗುಹೆ !! ಫ್ರಾನ್ಸ್ ನ ಕ್ಯಾಲಂಕ್ ಡೆ ಮೊರ್ಗಿಯೋದಲ್ಲಿರುವ ಈ ಗುಹೆಯನ್ನು 1991 ರಲ್ಲಿ ಕಂಡುಹಿಡಿಯಲಾಯಿತು. ಈ ಗುಹೆಯ ಪ್ರವೇಶದ್ವಾರವು ಸಮುದ್ರ ಮಟ್ಟಕ್ಕಿಂತ ಸುಮಾರು 37 ಮೀಟರ್(121ಅಡಿ) ಕೆಳಗಿದೆ,175 ಮೀ (574 ಅಡಿ ) ಉದ್ದವಿದೆ. ಮಾನವ ವಾಸಿಸುತ್ತಿದ್ದ ಸಮಯದಲ್ಲಿ ಈ ಗುಹೆಯು ಸಮುದ್ರ ತೀರದಿಂದ 6-10 ಕಿಲೋಮೀಟರ್ ಗಳಷ್ಟು ದೂರದಲ್ಲಿತ್ತು ಎಂದು ಅಂದಾಜು ಮಾಡಲಾಗಿದೆ. ಸುಮಾರು 30,000 ವರ್ಷಗಳಷ್ಟು ಹಳೆಯದಾದ ಈ ಗುಹೆಯಲ್ಲಿ ಇತಿಹಾಸ ಪೂರ್ವ […]Read More