ದುಸ್ತರ ರಾತ್ರಿ

ದುಸ್ತರ ರಾತ್ರಿ ಕಾವಳದ ರಾತ್ರಿಯಲಿ ಬೀದಿದೀಪಗಳ ಸಾಲಿನಲಿಅಲ್ಲೊಂದು ಇಲ್ಲೊಂದು ವಾಹನಗಳು ಸಾಗುತಲಿಪರವೂರಿಗೆ ಹೋಗುವ‌ ವಾಹನಗಳ ಭರಾಟೆ ನಿಲ್ದಾಣವೊಂದು ಸಿಗಲು ನಡುರಾತ್ರಿಯಲಿಓಡಾಡುವ ಹೆಂಗಳೆಯರ ಕಂಡು ಸ್ವಗತದಲಿಅದೇನು ರಾಜಕಾರ್ಯವೋ ಎನುವ ಮನ ಅದೆಲ್ಲಿಂದ ಬರುವರೋ ಅದೆಲ್ಲಿಗೆ ಹೋಗುವರೋಎತ್ತ ನೋಡಿದರೂ ನಡುವಯಸ್ಸಿನ ಹೆಂಗಳೆಯರುಮಕ್ಕಳ ನೋಡಲು ಹೋಗುವ ಅಮ್ಮಂದಿರೇ ಖಾಲಿ ಇದ್ದ ನಿಲ್ದಾಣದಲಿ ಅದೇನೋ ಗೊಂದಲಎಲ್ಲಿದ್ದರೋ ಇವರು ಬಸ್ಸನ್ನು ಏರುವ ಹಂಬಲತಡವಾಗಿ ಬಂದ ಬಸ್ಸನ್ನು ಶಪಿಸುವ ಚಪಲ ಹಾಗೆ ನೋಡಿದರೆ ನನದೂ ರಾಜ ಕಾರಣವೇನಲ್ಲಜಗವೆಲ್ಲ ನನ್ನ ಸುತ್ತಲೇ ಸುತ್ತುತ್ತಿಲ್ಲಅವರವರ ಕಾರಣ ಅವರಿಗೇ ಹಿರಿದಲ್ಲ… […]Read More

ಒಂಟೆ ಮತ್ತು ನರಿ

ಒಂಟೆ ಮತ್ತು ನರಿ ಒಂದು ದಟ್ಟಾರಣ್ಯದಲ್ಲಿ ಒಂದು ಒಂಟೆ ಮತ್ತು ನರಿ ಸ್ನೇಹಿತರಾಗಿದ್ದವು. ಇವುಗಳ ಸ್ನೇಹವು ಕಾಡಿನ ಇತರ ಪ್ರಾಣಿಗಳ ಅಸೂಯೆಗೆ ಕಾರಣವಾಗುವಷ್ಟು ಗಾಢವಾಗಿತ್ತು. ಇವೆರಡೂ ಒಬ್ಬರನ್ನೊಬ್ಬರು ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆಹಾರವನ್ನು ಅರಸಿಕೊಂಡು ಇವುಗಳು ಜೊತೆಗೇ ಹೋಗಿ ಹಂಚಿಕೊಂಡು ತಿನ್ನುತ್ತಿದ್ದವು. ಒಂದು ವರ್ಷ ಕಾಡಿನಲ್ಲಿ ಇವುಗಳಿಗೆ ತಿನ್ನಲು ಏನೂ ಸಿಗದಂತಹ ಪರಿಸ್ಥಿತಿ ಬಂದು ಪ್ರಾಣಿಗಳು ನಾಡಿನ ಕಡೆಗೆ ಆಹಾರ ಅರಸಿಕೊಂಡು ಹೋಗಲಾರಂಭಿಸಿದವು. ಮಿತ್ರರಾಗಿದ್ದ ಒಂಟೆ ಮತ್ತು ನರಿಯೂ ಆಹಾರವನ್ನು ಅರಸಿಕೊಂಡು ಕಾಡಿನ ಪಕ್ಕದಲ್ಲಿದ್ದ ಹೊಲಕ್ಕೆ ಹೋಗಲು […]Read More

ಹೆಣ್ಣು ಮತ್ತು ಆರೋಗ್ಯ – 9

ಹೆಣ್ಣು ಮತ್ತು ಆರೋಗ್ಯ – 9 ಒಂದರಿಂದ ನಾಲ್ಕರವರೆಗೆ ಮಕ್ಕಳಿಗೆ ಸಾಮಾನ್ಯವಾಗಿ ಬರುವಂತಹ ಕಾಯಿಲೆಗಳು, ಅದಕ್ಕೆ ನಾವು ಮನೆಯಲ್ಲೇ ಮಾಡಬಹುದಾದಂತಹ ಚಿಕಿತ್ಸೆಗಳು ಇದರ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಯೋಣ. ನಮ್ಮ ಮಕ್ಕಳಿಗೆ ವೈರಸ್ಗಳಿಂದ ಬರುವಂತ ನೆಗಡಿಗೆ ಆಂಟಿಬೈಯೊಟಿಕ್ ನಿಂದ ಪ್ರಯೋಜನವಿಲ್ಲ, ಹೆಚ್ಚಾಗಿ ನೀರು ಕುಡಿಸುವುದು, ಮಕ್ಕಳಿಗೆ ವಿಶ್ರಾಂತಿ ಕೊಡುವುದು, ಅವರನ್ನು ಬೆಚ್ಚಗೆ ಇಡುವುದು, ಬಿಸಿ ನೀರು ಕೊಡುವುದು ಹಾಗೂ ಬಿಸಿಯಾದ ಸೂಪ್ ತಯಾರಿಸಿ ಕೊಡುವುದು, ಶ್ವಾಸಕೋಶ ತೆರೆಯುವಂತೆ ಹಬೆಯ ಕೊಡುವುದು ಜ್ವರ ಇದ್ದರೆ ಜ್ವರದ ಔಷಧಿ ಕೊಡುವುದು, […]Read More

ಭ್ರಷ್ಟರ ಸಂತೆ

ಭ್ರಷ್ಟರ ಸಂತೆ ನಮ್ದೆ ದುಡ್ಡು,ನಮ್ದೆ ಕಾಸು ತೆರಿಗೆಯ ಹಣಚುನಾವಣೆ ಬಂದ್ರೆ ಸಾಕು ಜಣ್ ಜಣಾ ಜಣ!! ಪಲ್ಲವಿ!! ಮನೆತನಕ ಬರುತಾರೆ ಹುಡುಕೊಂಡು,,ಅದು ಮಾಡ್ತಿನಿ, ಇದು ಮಾಡ್ತಿನಿ ಎನುಕೊಂಡು,,ಗೆದ್ಮೆಲೆ ಮಾಡೋದು ಪುಟ್ಗೊಸಿ,,,,ಗೆಲ್ಲೋದು ಜನಗಳನು ಯಾಮಾರ್ಸಿ!!೧!! ಇವರಿಂದ ಹುಟ್ಟಿದ್ದೆ ಈ ಸುಳ್ಳು,,ಕೊಡುವಂತ ಭರವಸೆಯು ಬರಿ ಪೊಳ್ಳುಅಧಿಕಾರದ ಆಸೆಗೆ ಬರುತಾರೆ,,,ಆ ಪಕ್ಷ, ಈ ಪಕ್ಷ ಎನುತಾರೆ.!!೨!! ಆ ಯೋಜನೆ, ಈ ಯೋಜನೆ ತರುತಾರೆ,,ನಾ ಕೊಟ್ಟೆ,ನಾ ಕೊಟ್ಟೆ ಎನುತಾರೆಅದರಲ್ಲು ಕೊಳ್ಳೇನ ಹೊಡಿತಾರೆಪ್ರಜೆಗಳಿಗೆ ಟೋಪಿನ ಇಡುತಾರೆ.!!೩!! ಜಾತಿಯ ಹೆಸರಲ್ಲಿ ಇವರಾಟಧರ್ಮಕ್ಕು ಕೊಡುತಾರೊ ಬಲುಕಾಟಯುವಜನರ ಬದುಕಲ್ಲಿ […]Read More

ವಿಧುರನ ಸತ್ಯ ಮತ್ತು ಧರ್ಮ

ವಿಧುರನ ಸತ್ಯ ಮತ್ತು ಧರ್ಮ ಸತ್ಯ ಮತ್ತು ಧರ್ಮದ ಆಡಳಿತಕ್ಕೆ ಹೆಸರಾಗಿದ್ದ ವಿಧುರನು ದೃತರಾಷ್ಟ್ರನ ಆಸ್ಥಾನದ ಮಂತ್ರಿಯಾಗಿದ್ದು, ದೃತರಾಷ್ಟ್ರನ ಮಗನಾದ ದುಶ್ಶಾಸನನು ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದಾಗ ಅದನ್ನು ವಿರೋಧಿಸಿ ಕೌರವನ ಸಭೆಯನ್ನು ಧಿಕ್ಕರಿಸಿ ಹೊರನಡೆದ ದಕ್ಷ ಆಡಳಿತಗಾರನಾಗಿದ್ದ. ಈತನ ಸತ್ಯ ಮತ್ತು ಧರ್ಮದ ನಡೆಯಿಂದ ಶ್ರೀಕೃಷ್ಣನ ವಿಶ್ವಾಸವನ್ನೂ ಈತ ಗಳಿಸಿದ್ದ. ಹಸ್ತಿನಾವತಿಯ ಅಧಿಕಾರಕ್ಕಾಗಿ ಧುರ್ಯೋಧನನು ಪಾಂಡವರನ್ನು ಮೋಸದಿಂದ ಕೊಲ್ಲಲು ಹಲವು ಕುಟಿಲ ತಂತ್ರಗಳನ್ನು ಹೆಣೆಯುತ್ತಾನೆ. ಆದರೆ ಮಹಾತ್ಮ ವಿಧುರನಿಗೆ ತನ್ನ ಗುಪ್ತಚರರ ಸಹಾಯದಿಂದ ದುರ್ಯೋಧನನು […]Read More

ಹೆಣ್ಣು ಮತ್ತು ಆರೋಗ್ಯ – 8

ಹೆಣ್ಣು ಮತ್ತು ಆರೋಗ್ಯ – 8 ಒಂದು ವರ್ಷದವರೆಗಿನ ಮಗುವಿನ ಬೆಳವಣಿಗೆ ಹಾಗೂ ಚಟುವಟಿಕೆ ಮಗುವಿನ ಮುಂದಿನ ಬೆಳವಣಿಗೆ, ಮಗು ಸುರಕ್ಷಿತವಾದ ವಾತಾವರಣದಲ್ಲಿ,ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರ ಮೇಲೆ ನಿರ್ಧರಿತವಾಗುತ್ತದೆ. ಮಗು ಹುಟ್ಟಿದಾಗಲೇ ಅದಕ್ಕೆ ಬಿಸಿಜಿ ವ್ಯಾಕ್ಸಿನ್ ಅನ್ನು ಹಾಕಿರುತ್ತಾರೆ. ಮತ್ತೆ ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು ಅವಧಿಯಲ್ಲಿ ಡಿಪಿಟಿ, ಹೆಪಟೈಟಿಸ್, ಪೋಲಿಯೋ ಈ ವ್ಯಾಕ್ಸಿನ್ ಗಳನ್ನು ಹಾಕುತ್ತಾರೆ. ವ್ಯಾಕ್ಸಿನ್ಗಳನ್ನು ಹಾಕಿದಾಗ ಮಗುವಿಗೆ ಸ್ವಲ್ಪ ಜ್ವರ ಬರುವುದು ಸಾಮಾನ್ಯ. ಆಗ ಮಗುವಿಗೆ ಜ್ವರದ ಔಷಧಿಯನ್ನು ಡ್ರಾಪ್ಸ್ […]Read More

ಮಂಜಿನ ಹನಿ

ಮಂಜಿನ ಹನಿ ಕಾವಳದ ರಾತ್ರಿ ಸರಿದಾಯ್ತುನಲ್ಬೆಳಕಿನ ನಸುಕು ಮೂಡಿತುಭುವಿಯ ಮೇಲೆ ಚಿತ್ತಾರ ಅರಳಿತು ಕಾನನದ ಅಂಚಿನಲಿ ನಡುಮಧ್ಯ ನಾಡಿನಲಿತರುಲತೆ ಪರ್ಣಗಳಲಿ‌ ಹೊಳೆಯುತಿಹಬೆಲೆ ಕಟ್ಟಲಾರದ ಮುತ್ತುಗಳು ‌ಪ್ರತಿದಿನವೂ ಪಕ್ಷಿ ಕೀಟಗಳಿಗಾಸರೆಬರಗಾಲದಲಿ ಪಶುಪಕ್ಷಿಗಳಿಗಾಸರೆಅವರೆ ತೊಗರಿ ಬೆಳೆಗಳ ಸೊಗಡಿನಾಸರೆ ನಿನ್ನಯ ಮುತ್ತಿನ ಪ್ರತಿ ಬಿಂದುಮೂಡಿಸಿದೆ ಮನದಲಿ ಹರ್ಷವಿಂದುನಿನ್ನ ರೂಪಕೆ ಶರಣು ಓ ಹಿಮಬಿಂದು ಸಿ.ಎನ್. ಮಹೇಶ್Read More

ಕತ್ತಲಿನಿಂದ ಬೆಳಕಿನೆಡೆಗೆ – ಉತ್ತರಕಾಶಿ ಕಾರ್ಯಾಚರಣೆ

ಕತ್ತಲಿನಿಂದ ಬೆಳಕಿನೆಡೆಗೆ – ಉತ್ತರಕಾಶಿ ಕಾರ್ಯಾಚರಣೆ ಇದು ಬರೋಬರಿ ಹದಿನೇಳು ದಿನಗಳ ಕಾಲ ಪಾತಾಳದ, ಕಗ್ಗತ್ತಲಲ್ಲಿ ಸಿಲುಕಿದ 41 ಜನ ಕಾರ್ಮಿಕರ ಕಥೆ, ವ್ಯಥೆ ಹಾಗು ನಮ್ಮ ರಕ್ಷಣಾಪಡೆಯ ಯಶಸ್ವಿಗಾಥೆ. ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಸಿಲ್ಕ್ಯಾರ ಬಡ್ ಕೊಟ್ ಸುರಂಗದಲ್ಲಿ ನಡೆದ ರಕ್ಷಣಾಪಡೆಯ ಕಾರ್ಯಾಚರಣೆ ನಿಜಕ್ಕೂ ರೋಚಕ. ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿಯು ರಾಷ್ಟ್ರೀಯ ಹೆದ್ದಾರಿ ನಿಗಮದ ಸಹಯೋಗದಲ್ಲಿ ಉತ್ತರಾಖಂಡದಲ್ಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಿಕರಿಗಾಗಿ ಸುಗಮ ಹೆದ್ದಾರಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದು; […]Read More

ಮೋಡದ ಮರೆಯ ಬೆಳಕು

ಮೋಡದ ಮರೆಯ ಬೆಳಕು ರವಿಕಿರಣವದು ತಿಣುಕಾಡಿದೆಮೋಡದ ಮರೆಯಿಂದ ಹೊರಬರಲು!ಬೆಳಕದು ಬಂಧನ ಬಿಡಿಸಿ ಬಂದಿದೆ..ಬುವಿಯ ಜೀವರಾಶಿಯ ಕಾಯಲು!! ಪ್ರತಿಭೆಯು ಪ್ರಭೆಯಂತೆ ಹೊಳೆಯಲುಅಹಮ್ಮಿನ ಮೋಡ ಸರಿಯಬೇಕು!ಟೀಕಿಸುವವರ ಬಿರುನುಡಿಯ ಎದುರಿಸಲು..ತಾಳ್ಮೆಯ ಗೋಡೆಯನೊಮ್ಮೆ ಮುರಿಯಬೇಕು!! ಬೆಳ್ಳಿಯ ಕಿರಣವು ಬೆಳ್ಮುಗಿಲಮೋಡದಿಂದ ಜಾರಿ ಧರೆ ಬೆಳಗುವಂತೆ!ಮಾತಿನ ಸಿಹಿ ಮೌನದ ಕಹಿಯ ಮೀರಿ..ಮನದೊಳಗೆ ಲಹರಿ ಮಿಂಚುವಂತೆ!! ಕಾನನದ ಹಸಿರು ಚಿಗುರಲುಹೊಂಗಿರಣದ ಬೆಳಕು ಬೇಕು!ಬೆಳ್ಳಿಮೋಡದಂಚಲಿ ದಿನಪ ನಗುತಿರಲು..ಜೀವಸಂಕುಲವದು ನಿತ್ಯ ಬೆಳೆಯಬೇಕು!! ಸುಮನಾ ರಮಾನಂದRead More

ರವಿರಶ್ಮಿ

ರವಿರಶ್ಮಿ ನಡುನೆತ್ತಿಯಲಿ ನಿಂತ ಸೂರ್ಯನಪ್ರಭೆಯು ಭೂತಳವ ಹುಡುಕುತಿದೆರವಿಕಿರಣದಾಟಕ್ಕೆ ನೆರಳಿನ ನರ್ತನ ಹೊನ್ನ ನೇಸರನ ನೇರ ರಶ್ಮಿಯುಭೂ ಸ್ಪರ್ಷವ ಮಾಡಲು ಕೆಂಪಾಗಲುಇಳೆಯ ಒಡಲು ಹಸಿರಾಗುವುದು ಎಳೆ ಹಸಿರ ಗಿಡಬಳ್ಳಿಗಳು ಕಡುಬಣ್ಣಕೆ ತಿರುಗಿಭೂ ಒಡಲಾಳದ ಜೀವಜಲ ಗಗನ ಸೇರಿಬಾನಲ್ಲಿ ಕರಿಮೋಡವು ಮೂಡುವುದು ಇಳೆಯ ತಿರುಗಾಟದಿ ಚಂದಮಾಮನುಹಗಲಿರುಳು ಕ್ಷೀಣಿಸುತಲಿ ವೃದ್ದಿಸುತಿಹನುಪಕ್ಷಪಕ್ಷಕೂ ಕುಂದಿ ಬೆಳಗುತಿಹನು. ದಿನವೂ ಕಾಣುವ ನೇಸರನು ಅದೇ ಸೊಬಗಿನಲಿತಿರುಗಾಡುತಾ ಭೂಮಿಯ ಮೇಲೆ ಕೃಪೆಯಿರಿಸಿಕಣ್ಣು ಮುಚ್ಚಾಲೆಯಾಡುವನು ಮೋಡಗಳಲಿ ನೇಸರನಿದ್ದರ ಮಳೆಮಳೆಯಿದ್ದರೆ ಇಳೆ….ಇಳೆ ಮಳೆಗಳ ಒಡನಾಟದಲಿಬೆಳೆಯುತಿಹೆವು ನಾವು ಬೆಳೆ. ಸಿ.ಎನ್. ಮಹೇಶ್Read More