ಭಾಷೆ-ಬಾಂಧವ್ಯ ಮತ್ತು ಭರವಸೆ

ಭಾಷೆ-ಬಾಂಧವ್ಯ ಮತ್ತು ಭರವಸೆ ‘ಭಾಷೆ’ ಯಾವುದೇ ಇರಲಿ ಅದು ಸಮುದಾಯಕ್ಕೆ ಅದ್ಭುತವಾದ ಬೆಳಕು. ಅದರ ಬೆಳಕಿನಲ್ಲಿ ಕೇವಲ ಬಾಹ್ಯರೂಪವನ್ನಷ್ಟೆ ಅಲ್ಲಅಂತರಂಗವನ್ನೂ ಕಾಣಬಹುದು. ಮನುಷ್ಯ ಸೃಷ್ಟಿಸಿದ ಅತ್ಯದ್ಭುತ ವಸ್ತು ಅಥವಾ ಸಂಗತಿಯೊಂದಿದ್ದರೆ ಅದು ಭಾಷೆಯೇ. ಭಾಷೆಯಿಂದಾಗಿಯೇ ಮನುಷ್ಯ ಸಂಸ್ಕತಿವಂತ ನಾಗರಿಕನಾಗಲು ಸಾಧ್ಯವಾಗಿದೆ. ನಾಲ್ಕೇ ಮಂದಿ ಮಾತಾಡುತ್ತಿರಲಿ, ನಾಲ್ಕು ಕೋಟಿ ಜನ ಮಾತನಾಡುತ್ತಿರಲಿ ಅದು ಭಾಷೆಯ ಮೂಲಕವೇ. ಯಾವುದೇ ಭಾಷೆಯೂ ಮೇಲಲ್ಲ ಅಥವಾ ಕೀಳಲ್ಲ. ‘ಭಾರತೀಯ ಭಾಷೆಗಳೆಲ್ಲವೂ ಅತ್ಯಂತ ಸಂಪದ್ಭರಿತ ಮತ್ತು ಸತ್ವಪೂರ್ಣ ಭಾಷೆಗಳು’. ಭಾರತದಲ್ಲಿ ಒಟ್ಟು 723 ಭಾಷೆಗಳಿದ್ದು, […]Read More

ಸಾಹಿತ್ಯ

ಸಾಹಿತ್ಯ ಭೂತಕಾಲದಿಂದವರ್ತಮಾನದಲ್ಲಿನಬತ್ತದ ಕಣಜವೀ ಸಾಹಿತ್ಯ! ಪ್ರಚಲಿತ ವಿದ್ಯಮಾನವರೋಚಕವಾಗಿಸುವಕಥೆ, ಕಾದಂಬರಿ ಸಾಹಿತ್ಯ! ಉತ್ತಮೋತ್ತಮರಜೀವನ ಗಾಥೆಯಅರುಹುವ ಚರಿತ್ರೆ ಸಾಹಿತ್ಯ! ಜನಪದರ ಜೀವನಶೈಲಿಯ ತಿಳಿಸುವಜಾನಪದ ಸಾಹಿತ್ಯ! ನಗಿಸುತ್ತಲೇ, ಲೋಕದಡೊಂಕನ್ನು ತಿದ್ದುವವಿಡಂಬನಾ ಸಾಹಿತ್ಯ! ರವಿ ಕಾಣದ್ದನ್ನು ಕಂಡ ಕವಿ,ತಾನಿತರರಿಗುಣಿಸುವರಮ್ಯ ಕಾವ್ಯವೀ ಸಾಹಿತ್ಯ! ತಾ ನೋಡಿದ ಜಾಗಗಳಕಣ್ಣೆದುರಿಗೆ ಬಿಚ್ಚಿಡುವಪ್ರವಾಸ ಸಾಹಿತ್ಯ! ಚಿಣ್ಣರ ಲೋಕವನುಬಣ್ಣ ಬಣ್ಣಗೊಳಿಸುವಮಕ್ಕಳ ಸಾಹಿತ್ಯ! ಎಲ್ಲರ ಕುತೂಹಲವತಣಿಸಲೆಂದೇ ರಚಿಸುವವೈಜ್ಞಾನಿಕ ಸಾಹಿತ್ಯ! ಆಯಾ ಭಾಷೆಯಆಯಾ ಜನಾಂಗದಅಭಿವ್ಯಕ್ತಿ ಈ ಸಾಹಿತ್ಯ! ಶ್ರೀವಲ್ಲಿ ಮಂಜುನಾಥRead More

ಯೋಚಿಸಿ ಪ್ರೀತಿಸು

ಯೋಚಿಸಿ ಪ್ರೀತಿಸು ಮೋಸ ಮಾಡುವ ಮನಸು ಇದ್ದರೆನನ್ನ ಕಾಡಬೇಡ……ನಾನು ಬಡವನು, ಹೆಂಗೊ ಬದುಕಿರುವೆನನ್ನ ಕೊಲ್ಲಬೇಡ…..ಬದುಕು ಹಾಳುಮಾಡಬೇಡ. ಒಮ್ಮೆ ಪ್ರೀತಿಯು ಹೃದಯ ಸೇರಿದರೆಅಳಿಸಲಾಗದೆಂದು…..ಹೃದಯ ಸೇರಿದ ಪ್ರೀತಿಯ ಮರೆತುಬದುಕಲಾರೆ ಎಂದು……ಈ ಪ್ರೀತಿ, ಪ್ರೇಮ ಕೊಂದು. ನೀ ನನ್ನ ಬದುಕಿಗೆ ಬೆಳಕು ಚೆಲ್ಲುವದೀಪವಾಗಬೇಕು…..ಆ ಬೆಳಕಿನಲಿ ಬದುಕು ನೆಡೆಸುತನನ್ನ ಅರಿಯಬೇಕು……ನಾ ನಿನ್ನ ಅರಿಯಬೇಕು. ದುಡ್ಡು ಕಾಸಿನ ಆಸೆಯಿದ್ದರೆನನ್ನ ಮರೆಯಬೇಕು…..ಬೆವರು ಹರಿಸುತ, ನಾವು ದುಡಿಯುತಬದುಕು ನಡೆಸಬೇಕು…..ಪ್ರೀತಿಯ ಹಣತೆ ಹಚ್ಚಬೇಕು. ತಂದೆ ತಾಯಿಯು ನನಗೆ ದೇವರುಜೊತೆಗೆ ಬದುಕಬೇಕು….ಅವರ ಬದುಕನು ನಮಗೆ ಸವೆಸಿದರುಸೇವೆ ಮಾಡಬೇಕು…..ಅವರ ಋಣವು ತೀರಬೇಕು. […]Read More

ಸೃಜನಶೀಲತೆ ಕ್ಷೀಣಿಸುತ್ತಿದೆಯೇ ?

ಸೃಜನಶೀಲತೆ ಕ್ಷೀಣಿಸುತ್ತಿದೆಯೇ ? ನಮ್ಮಲ್ಲಿ ಸೃಜನಶೀಲತೆಯ ಕೊರತೆ ಉಂಟಾಗಿದೆಯೆ? ಹೌದೆನ್ನುತ್ತದೆ ಎಷ್ಟೋ ಸಂಶೋಧನೆಗಳು. ಈಗಿನ ತಂತ್ರಜ್ಞಾನ ನಮ್ಮನ್ನು ಎಷ್ಟೊಂದು ಆವರಿಸಿಕೊಂಡಿದೆ, ನಾವು ಎಷ್ಟು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದ್ದೇವೆ ಎಂದರೆ, ಉಸಿರಾಡುವಷ್ಟೇ ಅದು ಕೂಡ ಅವಶ್ಯಕ ಎನ್ನುವಷ್ಟು!. ಲೆಕ್ಕವಿಲ್ಲದಷ್ಟು ಸಾಮಾಜಿಕ ಜಾಲತಾಣಗಳು ನಮ್ಮ ಸೃಜನಶೀಲತೆಯನ್ನು ನುಂಗಿಹಾಕಿವೆ ಎಂದರೆ ತಪ್ಪಾಗಲಾರದು. ಈಗ ಶುರುವಾಗಿರುವ ಕೃತಕಬುದ್ಧಿಮತ್ತೆಯ ತಂತ್ರಜ್ಞಾನವಂತೂ ಮೊದಲು ಅಚ್ಚರಿ ಮೂಡಿಸಿ ಈಗ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಕುತ್ತಿಗೆಯವರೆಗಿನ ಯಾರದೋ ದೇಹವನ್ನು ಉಪಯೋಗಿಸಿ ಇನ್ನ್ಯಾರದೋ ತಲೆಯನ್ನು ಜೋಡಿಸಿ ಒಂದು ಚೂರು ಸಂಶಯ […]Read More

ಪ್ರಯೋಗಾತ್ಮಕ ಚಿತ್ರಗಳ ನಿರ್ದೇಶಕ – ಜಯತೀರ್ಥ

ಪ್ರಯೋಗಾತ್ಮಕ ಚಿತ್ರಗಳ ನಿರ್ದೇಶಕ – ಜಯತೀರ್ಥ ರಂಗಭೂಮಿಯ ಹಿನ್ನಲೆಯಲ್ಲಿ ಬಂದಂತಹ ಭರವಸೆಯ ಕನ್ನಡದ ಸಿನಿಮಾ ನಿರ್ದೇಶಕರಲ್ಲಿ ಜಯತೀರ್ಥರವರು ಸಹ ಒಬ್ಬರು. ಮುಂದಿನ ವಾರ ಬಿಡುಗಡೆಗೊಳ್ಳುತ್ತಿರುವ ಇವರು ನಿರ್ದೇಶಿಸಿರುವ “ಕೈವ” ಚಿತ್ರದ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿರ್ದೇಶಕರು 1983 ರ ಕರಗ ಉತ್ಸವದಲ್ಲಿ ನೆಡೆದ ಒಂದು ಪ್ರಮುಖ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಆ ಘಟನೆಯ ಪಾತ್ರಧಾರಿಗಳನ್ನು ಭೇಟಿ ಮಾಡಿ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. 2020 ರಲ್ಲಿ “ಆಕೃತಿ” ಕನ್ನಡ ಅಂತರ್ಜಾಲ ಪತ್ರಿಕೆಗೆ […]Read More

ಕನ್ನಡ ಮಾಣಿಕ್ಯ – ಗುಂಡ್ಲು ಪಂಡಿತ ರಾಜರತ್ನಂ

ಕನ್ನಡ ಮಾಣಿಕ್ಯ – ಗುಂಡ್ಲು ಪಂಡಿತ ರಾಜರತ್ನಂ ಚಿಕ್ಕಂದಿನ ನಮ್ಮ ಶಾಲೆಯ ದಿನಗಳಲ್ಲಿ ನಮ್ಮ ಪಠ್ಯ ಪುಸ್ತಕದಲ್ಲಿದ್ದ ‘ಒಂದು ಎರಡು ಬಾಳೆಲೆ ಹರಡು’, ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು’, ‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’, ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’, ಮುಂತಾದ ಪದ್ಯಗಳು ಇನ್ನೂ ಸಹ ನೆನಪಿನಲ್ಲಿ ಇವೆ. ಕಾಲೇಜಿನ ದಿನಗಳಲ್ಲಿ ಕೇಳಿದ ‘ಬೆಳದಿಂಗಳ್ ರಾತ್ರಿಲಿ’, ‘ಹೆಂಡ ಹೆಂಡ್ತಿ ಕನ್ನಡ್ ಪದಗೋಳ್’ ಈಗಲೂ ಕೇಳುತ್ತಲೇ ಇರುತ್ತೀವಿ. ಇಂತಹ ಪದಗಳ […]Read More

ಅಸಹಾಯಕತೆ

ಅಸಹಾಯಕತೆ ಮಲಗಿದಲ್ಲೇ ಮಲಗಿರುವ ರೋಗಿಅವನ ಕಂಡು ಎಲ್ಲರೂ ಮರುಗಿನೋಡುತಿಹರು ಎಲ್ಲರೂ ತಿರುತಿರುಗಿ ಇತ್ತ ರೋಗಿಯ ಮನದಲ್ಲಿ ಕಾಡುತಿದೆ ನೋವೊಂದುಕೈಕಾಲು ಆಡದೇ ಮಾತು ಹೊರಡದೇತಲೆಯಾಡಿಸಲಾಗದೇ ನೋವುಂಡು ಪಿಳಿ ಪಿಳಿ ಕಣ್ಣು ಬಿಡುತಲಿ ಅತ್ತಿತ್ತ ನೋಡುತಿರೆದಪ್ಪನೆಯ ನೊಣವೊಂದು ಮೂಗಿನ ಮೇಲೆ ಕುಳಿತುಅಣಕಿಸುತಿದೆ ನನ್ನೇನು ಮಾಡುವೆ ನೀನು ಎಂದು ಕಿವಿ ಪಕ್ಕದಲ್ಲಿ ಸೊಳ್ಳೆಗಳ ಝೇಂಕಾರವ ತಾಳದೇದಪ್ಪಗಾತ್ರದ ನೊಣವ ಓಡಿಸಲಾರದೇಯಾರನ್ನೂ ಕರೆಯಲಾರದೇ ರೋಧಿಸುತಿದೆ ಮನ ನೂರೆಂಟು ತಂತಿಗಳು ಬಿಗಿದಿವೆ ನನ್ನನ್ನುಸೂಜಿಗಳು ಮಾಡಿವೆ ತೂತು ಮೈಯನ್ನುಮನವಾಗಿದೆ ಹಣ್ಣು ಹಣ್ಣು ಇಷ್ಟಾದರೂ ಮನದಲಿ ಮತ್ತೆ ಓಡಾಡುವಾಸೆಮಕ್ಕಳಲಿ‌ […]Read More

ಧಾರಿಣಿ…

ಧಾರಿಣಿ… ಅಂದು ಭಾವಗಳ ಮಳೆಯಲಿತೋಯ್ದು ಹನಿಗಳು ತೊಟ್ಟಿಕ್ಕಿದಾಗನಿನ್ನದೇ ನೆನಪು.. ಮಳೆ ಎಂದರೆನಿನ್ನ ಮಡಿಲಲಿ ನಾ ಮಲಗಿಉಂಡ ಮಮತೆಯ ಸಾಮೀಪ್ಯ ನನ್ನೊಳಗೆ ನೀ ಆವರಿಸಿಜೀವರಸ ಮೈಯೆಲ್ಲಾ ಹರಿದಾಗಆತ್ಮಸಾಂಗತ್ಯದ ಅನುಭೂತಿ.. ನಿನ್ನೊಳಗೆ ಜೀವ ಮಿಸುಕಿದೇಹವೆಲ್ಲಾ ಜೀಕಿದಾಗಹೃದಯದ ಮಾತುಗಳು ನರ್ತಿಸಿ.. ಮುದುಡಿದ್ದ ಕನಸುಗಳುಕನವರಿಕೆಗಳು ಜೀವತಾಳಿನಿನ್ನ ಮುಂಗುರುಳ ನೇವರಿಸಿದವು ನಿನ್ನೆದೆಯ ನಡುವಲ್ಲಿಹರಿದ ಬಿಸಿಯುಸಿರುಕರುಳಬಳ್ಳಿಯ ಸಂಬಂಧದ ಸಾಕ್ಷಿಪ್ರಜ್ಞೆ..‌‌ ಕೊನೆಗೂ ನನ್ನ ಭಾವದಹನಿಗಳೆಲ್ಲಾ ಕೂಡಿ ನದಿಯಾಗಿಹರಿದು ಕಾವ್ಯಗಂಗೆಯಾದಾಗ ನನಗನ್ನಿಸಿದ್ದು… ಹೆಣ್ಣೆಂದರೆ ಕೇವಲ ಹೆಣ್ಣಲ್ಲಅಕ್ಕನ ಅಕ್ಕರೆ,ಅಮ್ಮನ ಆರೈಕೆಬಿಕರಿಯಾಗುವ ಅಂಗಡಿಯಲ್ಲ.. ದೇಹವೇ ದೇಗುಲವಾಗಿಚಿಮ್ಮಿದ ಜೀವಚೈತನ್ಯ!!ಅರಿತೂ ಅರಿಯದವಳು. ಅರಿಯದೇ ಆಸರೆಯಾದವಳುಕತ್ತಲೆಯ […]Read More

ಕಂಬನಿಯ ಬೆಲೆ

ಕಂಬನಿಯ ಬೆಲೆ ಮನದಿ ನೋವು ಮಡುಗಟ್ಟಿರೆನಿರತ ಹರಿವುದು ಕಂಬನಿಧಾರೆ!ಮನದ ಭಾವ ತಟಸ್ಥವಾಗಿರೆ..ನೋವೆಲ್ಲ ಕಂಗಳಲಿ ಸೆರೆ!! ಹೆಣ್ಣಿನ ಕಂಬನಿಯ ಬೆಲೆಯಅರಿತವರಾರು ಈ ವಿಶಾಲ ಜಗದಿ!ಕಣ್ಣೊರೆಸುವವರು ಕೃತಕತೆಯಲಿ..ತಿಳಿವರೇನವಳ ಹೃದಯದ ಬೇಗುದಿ!! ಕಂಗಳ ಅಂಚಲಿ ಜಾರಿದ ಕಂಬನಿಹೇಳಿದೆ ನೂರೊಂದು ಕಥೆಯ!ಪುಟದಲಿ ಬರೆಯಲಾರದು ಲೇಖನಿ..ಅವಳ ಮನದಲಿರುವ ವ್ಯಥೆಯ!! ಅಶ್ರುಧಾರೆ ಕೆನ್ನೆಗಿಳಿಯಲುಇಹುದು ನೂರು ದಾರಿ!ಕಂಬನಿ ಒರೆಸುವ ಕರಗಳಿರಲು..ನೋವು ಕಲಿವುದು ನಗುವ ಪರಿ!! ಸುಮನಾ ರಮಾನಂದRead More

“ಅಕ್ಷರ ಸಿಂಗಾರೋತ್ಸವ” ವರ್ಣಮಾಲೆಯ ಕಲಾಕೃತಿಗಳು

“ಅಕ್ಷರ ಸಿಂಗಾರೋತ್ಸವ” ವರ್ಣಮಾಲೆಯ ಕಲಾಕೃತಿಗಳು ಪ್ರದರ್ಶನ : ಅಕ್ಷರ ಸಿಂಗಾರೋತ್ಸವಸ್ಥಳ : ಆರ್ಟ್ ಗ್ಯಾಲರಿ, ಯುವಪಥ ರಸ್ತೆ,ಜಯನಗರ ಬೆಂಗಳೂರುದಿನಾಂಕ : ನವೆಂಬರ್ 30 ರ ವರೆಗೂ ಕನ್ನಡವನ್ನು ಪ್ರೀತಿಸಲು ಸಾವಿರ ಕಾರಣಗಳಿವೆ!ಅದರಲ್ಲೊಂದು ಪ್ರಮುಖವಾದದ್ದು ಸುಂದರ ಬರವಣಿಗೆ! ಕನ್ನಡದಷ್ಟು ಸುಂದರವಾಗಿ ಬರೆಯಲು ಬೇರೆ ಬಾಷೆಯೇ ಇಲ್ಲವೇನೋ ಅನ್ನುವಷ್ಟು ಅಭಿಮಾನ! ಬೆಂಗಳೂರಿನ ಜಯನಗರದ ಯುವಪಥ ರಸ್ತೆಯಲ್ಲಿರುವ ಆರ್ಟ್ ಗ್ಯಾಲರಿಯಲ್ಲಿ “ಅಕ್ಷರ ಸಿಂಗಾರೋತ್ಸವ” ದ ಪ್ರದರ್ಶನ ನೆಡೆಯುತ್ತಿದೆ. ಕನ್ನಡ ನಾಡು ನುಡಿ, ಇತಿಹಾಸ,ಪರಂಪರೆ, ಕಾವ್ಯ , ಸಾಹಿತ್ಯದೊಂದಿಗೆ ಕನ್ನಡ ಅಕ್ಷರಮಾಲೆಯನ್ನೇ ಕಲಾಕೃತಿಗಳಾಗಿ […]Read More