ಬ್ಲ್ಯಾಕ್ ಹೋಲ್

ಬ್ಲ್ಯಾಕ್ ಹೋಲ್ “ಚೆಲ್ವಿ ಅಲ್ನೋಡುsss ನಿನ್ ಮಗ್ಳು ಐನೋರ್ ರೂಮ್ ಬಾಗ್ಲು ತಗಿತಾವ್ಳೆ“- ಎಲ್ಲಿಂದಲೋ ಗಾಳಿಯಲ್ಲಿ ನುಸುಳಿ ಬಂದ ಸ್ವರಗಳು ಕರ್ಣನಾಳದ ತಮಟೆಗೆ ಬಡಿದದ್ದೆ ತಡ ಮಡಿಲಲ್ಲಿದ್ದ ಬಸಳೆ ಸೊಪ್ಪನ್ನು ನೆಲಕ್ಕೆ ಸುರಿದು ಬಿರುಸಿನ ಹೆಜ್ಜೆ ಇಟ್ಟು, ಬಾಗಿಲನ್ನು ತಳ್ಳಿ ಒಳಗೋಗುತ್ತಿದ್ದ ಕಾವೇರಿಯನ್ನು ಎರಡೂ ಕೈಗಳಿಂದ ಗೋರಿಕೊಳ್ಳಲು ಮುಂದಾದಳು ಚೆಲ್ವಿ. ಹಗಲಿರುಳಿನ ಪರಿವೆಯೇ ಇಲ್ಲದೆ ಹಸಿವಾದಾಗ ಕುಡಿಯುವುದು; ದಣಿವಾದಾಗಲೂ ಸಹ ಕುಡಿಯುವುದು; ಹೀಗೆ ಕಂಠಪೂರ್ತಿ ಕುಡಿಯುವ ಚಾಳಿಯನ್ನು ದಿನಪೂರ್ತಿ ಇಟ್ಟುಕೊಂಡಿದ್ದ ಐನೋರಿಗೆ  ಬಿಸಿಲಿನ ಕಿರಣಗಳೆಲ್ಲಿ ಕಣ್ಣಿಗೆ ಬಿದ್ದು […]Read More

ಹೆಜ್ಜೆ ಗುರುತು

ಹೆಜ್ಜೆ ಗುರುತು ಎಂದಾದರೂ ಒಮ್ಮೆ ಹಿಂತಿರುಗಿನಿಮ್ಮ ಹೆಜ್ಜೆ ಗುರುತುಗಳನ್ನು ನೋಡಿಕೊಂಡಿದ್ದೀರಾ?ಅಲ್ಲಿರುವ ನೋವು, ಕಷ್ಟ, ಅಳು, ನಗುಪರದಾಟ, ಹೊಡೆದಾಟ, ಹಸಿವು, ಬೆವರುಎಲ್ಲವೂ ಅಲ್ಲೇ ಅಡಗಿರುವಾಗಸುಮ್ಮನೆ ಮುಂದೆ ಹೋಗುವುದು ಸರಿಯೇ? ಅವಕಾಶಗಳಿಗೇನು ಕಮ್ಮಿನಿಜ ಪ್ರತಿಭೆಗೆ ಅಭಿವ್ಯಕ್ತಿಸುವ ಚಾತುರ್ಯವಿದ್ದಮೇಲೆಕಲಿಯುವಾಗ ಬೇಕುಚಿಕ್ಕಪುಟ್ಟ ಹೆಜ್ಜೆಗಳು ಸವಾಲಿನ ರೂಪದಲ್ಲಿಸತತ ಪರಿಶ್ರಮದ ಜೊತೆಗೆಸಮಯ ಹೊಂದಾಣಿಕೆಯೇ ಗೆಲುವು ಕಲಿಯಲು ಹಂಬಲಿಸುಹಪಾಹಪಿಸು ನಿನ್ನನ್ನೇ ನೀನು ಕೆಳಗಿಳಿಸುಸೊನ್ನೆ ಎಂದರೆ ಅಂತ್ಯವಲ್ಲಅದು ಆದಿಯೆಂದು ತಿದ್ದಿ ತಿಳಿಸು ಕಾಣು, ಸದಾ ಜೀವಿಸುವ ದೊಡ್ಡ ದೊಡ್ಡ ಕನಸುಗಳನಿನ್ನದೇ ದಾರಿಯಲ್ಲಿ, ಪೋಷಿಸು ಅವುಗಳಎಲ್ಲದನ್ನು ರುಚಿ ನೋಡಿ, ಒಂದನ್ನು […]Read More

ಕಪ್ಪು ಚುಕ್ಕೆ

ಕಪ್ಪು ಚುಕ್ಕೆ ಪುಟ್ಟೇನಹಳ್ಳಿ ಎಂಬ ಸಣ್ಣ ಊರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಇತ್ತು. ಒಂದು ದಿನ, ಐದನೇ ತರಗತಿಯ ಕ್ಲಾಸ್ ಟೀಚರ್ ಸಂಗಪ್ಪ ಮೇಸ್ಟ್ರು ತನ್ನ ತರಗತಿಗೆ ಪ್ರವೇಶಿಸಿ ತನ್ನ ವಿದ್ಯಾರ್ಥಿಗಳನ್ನು ಅಚ್ಚರಿಯ ಪರೀಕ್ಷೆಗೆ ಸಿದ್ಧರಾಗುವಂತೆ ಹೇಳಿದರು. ಪರೀಕ್ಷೆ ಇನ್ನೇನು ಪ್ರಾರಂಭವಾಗಲಿದೆ, ಪರೀಕ್ಷೆಯಲ್ಲಿ ಏನೆಲ್ಲಾ ಪ್ರಶ್ನೆಗಳಿರುತ್ತೋ ಎಂಬ ಚಿಂತೆಯಲ್ಲಿ ಮಕ್ಕಳೆಲ್ಲರೂ ತಮ್ಮ ಮೇಜುಗಳ ಮೇಲೆ ಆತಂಕದಿಂದ ಕಾಯುತ್ತಿದ್ದರು. ಪ್ರಾಧ್ಯಾಪಕರು ಎಂದಿನಂತೆ ಪರೀಕ್ಷೆಯ ಪತ್ರಿಕೆಗಳನ್ನು ಮಕ್ಕಳೆಲ್ಲರಿಗೂ ಹಸ್ತಾಂತರಿಸಿದರು. ವಿದ್ಯಾರ್ಥಿಗಳು ತಮಗೆ ಸಿಕ್ಕ ಪತ್ರಿಕೆಗಳನ್ನು ನೋಡಿ ಆಶ್ಚರ್ಯಕ್ಕೆ ಒಳಗಾದರು, […]Read More

ಮನೆ ಮನಗಳ ಬೆಳಕು – ದೀಪಾವಳಿ

ಮನೆ ಮನಗಳ ಬೆಳಕು – ದೀಪಾವಳಿ ದೀಪಾವಳಿ ಎಂದರೆ ಮೊದಲು ನೆನಪಾಗುವುದೇ ಮನೆಯ ಮತ್ತು ಮನದ ಕತ್ತಲು ಓಡಿಸುವ ಬೆಳಕಿನ ಹಬ್ಬ. ಕರುಣಾಳು ಬಾ ಬೆಳಕೇಮುಸುಕಿದೀ ಮಬ್ಬಿನಲಿಕೈ ಹಿಡಿದು ನಡೆಸೆನ್ನನು ಬಿ. ಎಂ. ಶ್ರೀಕಂಠಯ್ಯ ಬಿ.ಎಮ್.ಶ್ರೀ ಅವರ ಮೇಲಿನ ಪ್ರಸಿದ್ಧ ಸಾಲುಗಳು ಇಲ್ಲಿ ನೆನಪಾಗುತ್ತದೆ. ಇದೊಂದು ಹಬ್ಬವಷ್ಟೇ ಅಲ್ಲದೆ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ಒಂದು ಧನಾತ್ಮಕತೆಯ ಭಾವ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಹಿನ್ನೆಲೆ ಇದೆ ಹಾಗೇ ಆಚರಿಸುವ ವಿಧಾನಗಳಿವೆ. ಆಚರಣೆಗಳು ಹೇಗೆ ಇದ್ದರೂ ಉದ್ದೇಶಗಳು ಮಾತ್ರ ಒಂದೇ. […]Read More

ಕಗ್ಗದ ಹಣತೆ – ಡಾ|| ಡಿ. ವಿ. ಗುಂಡಪ್ಪ

ಕಗ್ಗದ ಹಣತೆ – ಡಾ|| ಡಿ. ವಿ. ಗುಂಡಪ್ಪ “ಡಿ. ವಿ. ಗುಂಡಪ್ಪ” ನವರ ಹೆಸರು ಕೇಳಿದರೆ ಸಾಕು ನಮ್ಮಲ್ಲಿನ ಅಭೂತಪೂರ್ವ ಚೈತನ್ಯವೊಂದು ನಮಗೇ ಗೊತ್ತಿಲ್ಲದ ಹಾಗೆ ನಮ್ಮ ಮನಸ್ಸಿನಲ್ಲಿ ಕ್ರಿಯಾಶೀಲವಾಗುತ್ತದೆ. ಅವರು ರಚಿಸಿದ ಮಂಕುತಿಮ್ಮನ ಕಗ್ಗಗಳು ಅದೆಷ್ಟೋ ಜನರ ಜೀವನದಲ್ಲಿ ನಿರಾಸೆ ಎಂಬ ಕಾರ್ಮೋಡ ಸರಿಸಿ ಬೆಳಕನ್ನು ಚೆಲ್ಲಿದೆ. ನಮ್ಮ ಹಿಂದಿನ ಪೀಳಿಗೆಯ ಹಿರಿಯರು ಹಾಗು ಇಂದಿನ ಕಿರಿಯರು ಎಲ್ಲರಿಗೂ ಡಿ.ವಿ.ಜಿ.  ಹಾಗು ಅವರ ಕಗ್ಗಗಳ ಶಕ್ತಿಯೇನೆಂಬುದು ಗೊತ್ತು. ನಮ್ಮ ಹಿಂದಿನ ತಲೆಮಾರಿನವರು ಅದೆಷ್ಟೋ ಜನರು […]Read More

ಕನ್ನಡಕ್ಕಾಗಿ ಕೈಲಾಸಂ

ಕನ್ನಡಕ್ಕಾಗಿ ಕೈಲಾಸಂ ಅದೊಂದು ಇಂಗ್ಲೆಂಡಿನ ನೈಟ್ ಕ್ಲಬ್, ಅಲ್ಲಿದ್ದ ಹಾಡುಗಾರನೊಬ್ಬ CONSTANTINOPLE ಎಂಬ ಪದವನ್ನೇ ರಾಗವನ್ನಾಗಿಸಿ ಪ್ರತೀ ಪದವನ್ನು C-O-N-S-T-A-N-T-I-N-O-P-L-E ಎಂದು ಬಿಡಿಸಿ ಬಿಡಿಸಿ ಆಕರ್ಷಕ ಶೈಲಿಯಲ್ಲಿ ಹಾಡಿ ಎಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದ. ನಂತರ ಅಲ್ಲಿ ಸೇರಿದ್ದ ಜನರ ಕುರಿತು “ನಾನು ಹಾಡಿದ ಹಾಗೆ ಸ್ಥಳದಲ್ಲೇ ಯಾವುದಾದರೂ ಪದದ ಮೇಲೆ ರಾಗ ಹಾಕಿ ಹಾಡುವ ದೈರ್ಯ ಯಾರಿಗಾದರೂ ಇದೆಯಾ? ಎಂದು ಸವಾಲು ಹಾಕಿದನಂತೆ. ಆಗ ನಮ್ಮ ಬೆಂಗಳೂರಿನಿಂದ ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಒಬ್ಬ ಉತ್ಸಾಯಿ ಯುವಕರು ಮುಂದೆ […]Read More

ಕನ್ನಡವ ಕಲಿತಿಕೊ

ಕನ್ನಡವ ಕಲಿತಿಕೊ ಕನ್ನಡ ಕಲಿಯೊ ತಮ್ಮ,,ನೀ ಯಾವುರಾದರೆ ನಮಗೇನು.?ಕನ್ನಡವೇ ನಮ್ಮಮ್ಮ,,ಕಲಿತರೆ ನೀನು ನಮ್ಮವನು.!!೧!! ನಿಮ್ಮ ನಾಡಿನಲಿ ನೀನಾಗಿರುನಮ್ಮ ನಾಡಿದು ಬದಲಾಗು.ಕಷ್ಟಪಡುವೆ ನೀ ಚೆನ್ನಾಗಿರುಕನ್ನಡ ನಾಡಿಗೆ ಋಣಿಯಾಗು.!!೨!! ಕಷ್ಟಪಡುವ ಕೈಗಳನ್ನುಬಾಚಿ ಅಪ್ಪಿದೆ ಕರುನಾಡುಕೊಟ್ಟಿದೆ ಗಾಳಿ,ನೀರುಗಳನುಕನ್ನಡ ಕಲಿತು ಕುಣಿದಾಡು.!!೩!! ಕರುನಾಡೆಂದರೆ ಕೈಲಾಸಮಾಡು ಕನ್ನಡದ ಸಹವಾಸನಿನಗೆ ಇಲ್ಲ ಆಯಾಸ,,,ನಿನ್ನವರಿಗೆ ಇಲ್ಲ ಉಪವಾಸ.!!೪!! ಹೇಳಿ ಕೊಡಲು ನಾವು ಇರುವೆವುನಿಮ್ಮಯಾ ಜೊತೆ ಗೆಳೆಯರಾಗಿ.ಕನ್ನಡ ಕಲಿತರೆ ನಾವು ಬರುವೆವುನಿಮ್ಮ ಊರಿಗೆ,ನಿಮ್ಮವರಾಗಿ.!!೫!! ಹೇಗೆ ಪ್ರಸಾದ್ಕುದೂರು ಲಕ್ಕೇನಹಳ್ಳಿRead More

ಸಂಗೀತ – ಸಮರ್ಪಣೆ

ಸಂಗೀತ – ಸಮರ್ಪಣೆ ಒಂದು ದಿನ ಸಂಗೀತ ಕಾರ್ಯಕ್ರಮ ಮುಗಿಸಿ ವೇದಿಕೆ ಇಂದ ಕೆಳಗಿಳಿಯುವ ಸಮಯಕ್ಕೆ ಸರಿಯಾಗಿ ಪ್ರೇಕ್ಷಕರೊಬ್ಬರು ಒಂದು ಪ್ರಶ್ನೆ ಕೇಳಿದರು. ನೀವು ಯಾತಕ್ಕಾಗಿ ಹಾಡುತ್ತಿರ ಎಂದು.ಆಗ ನನಗೆ ಏನೂ ಹೇಳಲು ತೋಚಲಿಲ್ಲ.ಬಹಳ ಯೋಚಿಸಿದೆ ನಾನು ಏಕೆ ಹಾಡುತ್ತೇನೆ, ಜೀವನ ನಡೆಸಲು! ಮನೆಯವರ ಒತ್ತಾಯಕ್ಕೊ!,ಕಲಿತಿರುವ ವಿಧ್ಯೆ ವ್ಯರ್ಥವಾಗಬಾರದೆಂದು!, ಅಥವಾ ಪ್ರೇಕ್ಷಕರ ಸಂತೋಷಕ್ಕೊ!, ಬಹಳ ಯೋಚಿಸಿದ ಮೇಲೆ ಕೊನೆಗೆ ಅನ್ನಿಸಿದ್ದು ಇದ್ಯಾವುದೂ ಅಲ್ಲ ನಾನು ಹಾಡುವುದು ಕೇವಲ ನನ್ನ ಆತ್ಮ ತೃಪ್ತಿಗೆ. ಸಂಗೀತ ಕಲಿಯುವುದು ಮತ್ತು ಕಲಿತು […]Read More

ಆಶ್ರಯದಾತ

ಆಶ್ರಯದಾತ ಮನಸು ಮುದುಡಿದೆ. ಆಸೆಗಳು ನಶಿಸಿವೆಜೀವ ಸಂಕುಲದ ಕ್ರೌರ್ಯಕ್ಕೆ ನಲುಗಿಹೋದೆಅದೆಷ್ಟು ಬಾರಿ ತಿಳಿ ಹೇಳಿದರೂ ಅರಿಯಾದಾಗಿದೆ ಗಢಚಿಕ್ಕುವ ಶಬ್ದ ಗುಡುಗು ಸಿಡಿಲುಗಳುಆಗಾಗ ಬೀಳುವ ಕೋಲ್ಮಿಂಚುಗಳುಮಾಡುತಿವೆ ನಿರಂತರ ದಾಳಿಗಳು ಒಂದೊಮ್ಮೆ ಆರೋಗ್ಯಪೂರ್ಣನಾಗುವೆನಳನಳಿಸಿ ಎದೆಯುಬ್ಬಿಸುವಾಗಲೇರೋಗ ತಾಗಿ ಅಸ್ಥಿಪಂಜರದಂತೆ ಬಡಕಲಾಗುವೆ ಕಷ್ಟ ಕೋಟಲೆಗಳೆಲ್ಲವನ್ನೂ ಸಹಿಸುಷ್ಟರಲ್ಲಿಬುಡಕ್ಕೆ ಸಂಚಕಾರ ತಂದಿಡುವ ಜನರುಈ ಗೋಳಿನಾ ಕಥೆಯ ಕೇಳುವರಾರು ಜೀವವಿದ್ದರೂ ನಾನಾದೆ ಬರೀ ಮರಜೀವಿಗಳಿಗೆ ಕೊಟ್ಟೆ ಪ್ರಾಣವಾಯುವಿನ ವರಇಷ್ಟಾದರೂ ಯಾರಿಗೂ ಇಲ್ಲ ನನ್ನಲ್ಲಿ ಕನಿಕರಆಶ್ರಯ ಕೊಟ್ಟ ನನ್ನನ್ನೇ ಮರೆತರಾ… ಮರ ಮರ ಹೆಮ್ಮರ ನೀನೆಷ್ಟು ಸುಂದರಹಸಿರು ರಾಶಿಯ […]Read More

ಕನ್ನಡ ಸಾಹಿತ್ಯಕ್ಕಾಗಿ – ಪುಸ್ತಕ ತಾಂಬೂಲ

ಕನ್ನಡ ಸಾಹಿತ್ಯಕ್ಕಾಗಿ – ಪುಸ್ತಕ ತಾಂಬೂಲ ಕನ್ನಡ ನಮ್ಮ ಮಾತೃ ಭಾಷೆ ನಮ್ಮೆಲ್ಲರ ಅಸ್ಮಿತೆ. ರಾಜ್ಯಾದ್ಯಂತ ಕನ್ನಡ ಭಾಷೆಯ ಹೆಸರಿನಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಅನೇಕ ಕೆಲಸಗಳು ನೆಡೆಯುತ್ತಲೇ ಇರುತ್ತವೆ ಅದು ಕೆಲವರಿಗೆ ಭಾಷಾಭಿಮಾನದ ಪ್ರೀತಿ ಹಾಗು ಕೆಲವರಿಗೆ ಹೊಟ್ಟೆ ಪಾಡು ಹೌದು. ನವೆಂಬರ್ ಮಾಸ ಬಂತೆಂದರೆ ಇಡೀ ತಿಂಗಳು ರಾಜ್ಯದಲ್ಲಿ ಒಂದಲ್ಲಾ ಒಂದು ಕಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನೆಡೆಯುತ್ತಲೇ ಇರುತ್ತವೆ. ರಾಜ್ಯೋತ್ಸವ ಸಮಾರಂಭಗಳು ಶಾಲಾ ಕಾಲೇಜು, ಸಾಹಿತ್ಯಲೋಕದವರು ಅಥವಾ ಸಿನಿಮಾ ರಂಗದವರೇ ಆಚರಿಸಬೇಕೆಂದಿಲ್ಲ! ಇಡೀ ದಿನ […]Read More