ಪರಿಶುದ್ಧ ಇರಲೆಮ್ಮ ಮನಮಂದಾನಿಲದ ತೆರದಿಸುಳಿಗಾಳಿ, ಬಿರುಗಾಳಿಯಾಗೊಡವೆ ಬೇಕಿಲ್ಲ! ಇರಲೆಮ್ಮ ಮನನಂದಾದೀಪದಂದದಿಹೊಟ್ಟೆಕಿಚ್ಚು ಹಚ್ಚದಿರಲಿಕಾಳ್ಗಿಚ್ಚನೆಲ್ಲೆಡೆ! ಇರಲೆಮ್ಮ ಮನತಿಳಿನೀರಿನಂದದಿ,ಬಗ್ಗಡವಾಗದಿರಲಿಅಗ್ಗದ ನುಡಿಗೆ! ಇರಲೆಮ್ಮ ಮನಧರಣಿಯ ತಾಳ್ಮೆಯಲಿ,ತುಳಿವವರಿಗೂ ನೀಡುತಆಸರೆಯನು! ಇರಲೆಮ್ಮ ಮನಆಗಸದ ಅನಂತತೆಯಂತೆ,ಮುಚ್ಚುಮರೆಯಿಲ್ಲದೆಪರಿಶುದ್ಧವಾಗಿ!! ಶ್ರೀವಲ್ಲಿ ಮಂಜುನಾಥಬೆಂಗಳೂರುRead More
ಸ್ವಾರ್ಥವಿಲ್ಲದ ಸಹಾಯ ಹಸ್ತಿನಾಪುರದ ಯುವರಾಜನಾದ ದುರ್ಯೋಧನನು ದುರಾಸೆಯಿಂದ ಪಾಂಡುವಿನ ಪುತ್ರರಾದ ಪಾಂಡವರನ್ನು ಇಂದ್ರಪ್ರಸ್ಥ ಅರಮನೆಯಿಂದ ಓಡಿಸಿ ಅವರ ಆಸ್ತಿಯನ್ನೂ ಕಬಳಿಸುವ ಉದ್ದೇಶದಿಂದ ಮಾವ ಶಕುನಿಯ ಕುತಂತ್ರದಂತೆ ಹಸ್ತಿನಾವತಿಗೆ ಪಗಡೆಯಾಟಕ್ಕೆ ಆಹ್ವಾನಿಸುತ್ತಾನೆ. ಶಕುನಿಯ ಹೆಣೆದ ಕುತಂತ್ರದಿಂದ ಧರ್ಮರಾಯನು ಪಗಡೆಯಾಟದಲ್ಲಿ ಸೋತು, ತಾನು ಗಳಿಸಿದ ಅಷ್ಟೂ ಸಂಪತ್ತು, ಗಳಿಸಿದ್ದ ಆಸ್ತಿ, ತನ್ನ ಸೈನ್ಯ, ಸಾವಿರಾರು ಕುದುರೆಗಳನ್ನು ಕಳೆದುಕೊಳ್ಳುತ್ತಾನೆ. ನಂತರದಲ್ಲಿ ಇಂದ್ರಪ್ರಸ್ಥ ಅರಮನೆ, ಸಹೋದರರಾದ ನಕುಲ, ಸಹದೇವ, ಅರ್ಜುನ, ಭೀಮ ಕೊನೆಗೆ ತನ್ನನ್ನೇ ತಾನು ಪಂದ್ಯಕ್ಕಿಟ್ಟು ಯುಧಿಷ್ಠಿರನು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಪಗಡೆಯಾಟದಲ್ಲಿ […]Read More
ಸಂಕ್ರಮಣ ಕಾಲ… ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಹಬ್ಬ. ರೈತರ ಪಾಲಿಗೆ ಈ ಹಬ್ಬ ವಿಶೇಷ. ಬೆಳಿದಿರುವ ಬೆಳೆ ಕೊಯ್ಲಿಗೆ ಬಂದು, ಸುಗ್ಗಿ ಮಾಡುವ ಕಾಲ. ಬೆಳೆದ ಧಾನ್ಯ ರಾಶಿ ಹಾಕಿ, ಪೂಜೆ ಮಾಡಿ, ಭೂದೇವಿಗೆ ಕೃತಜ್ಞತೆ ಅರ್ಪಿಸುವ ಸಂಪ್ರದಾಯವು ಇದೆ. ಪೂಜೆಯ ಪ್ರಸದಾರ್ಥವಾಗಿ, ನೆನೆಸಿಟ್ಟ ಅಕ್ಕಿಗೆ, ಬೆಲ್ಲ ಮತ್ತು ಕಾಯಿತುರಿ ಸೇರಿಸಿ ನೈವೇದ್ಯ ಮಾಡಿ ತಿನ್ನಲು ಕೊಡುತ್ತಾರೆ. ಇದರ ಹಿಂದೆಯೂ ವೈಜ್ಞಾನಿಕ ಕಾರಣ ಇವೆ..! ನಮ್ಮ ದೇಶದ ಆಚಾರ, […]Read More
ಡಾ. ಮನ್‌ಮೋಹನ್ ಸಿಂಗ್ ಆರ್ಥಿಕ ಶಾಸ್ತ್ರಜ್ಞ ಭಾರತದ ಆರ್ಥಿಕ ವಲಯದಲ್ಲಿ ಪ್ರಭಾವಿತ ವ್ಯಕ್ತಿತ್ವ ಡಾ. ಮನ್‌ಮೋಹನ್ ಸಿಂಗ್ ಅವರದು, ಅವರು ಆರ್ಥಿಕ ಹೂಡಿಕೆಗೆ ಮಹತ್ವಪೂರ್ಣ ಕೊಡುಗೆ ನೀಡಿದವರಾಗಿದ್ದಾರೆ. ಆರ್ಥಿಕತೆಯಲ್ಲಿ ವಿಶೇಷ ಶೈಲಿಯಲ್ಲಿನ ಬದಲಾವಣೆಗಳನ್ನು ತರಲು ಭಾಗಿಯಾಗಿದ್ದ ಅವರು ಭಾರತದ ಇತಿಹಾಸದಲ್ಲಿ ಬಹುಪಾಲು ಪ್ರಭಾವ ಬೀರುವ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಆರ್ಥಿಕ ಶಾಸ್ತ್ರಜ್ಞನಾಗಿ ಡಾ. ಮನ್‌ಮೋಹನ್ ಸಿಂಗ್ ಅವರು ಆರಂಭದಲ್ಲಿ ಆರ್ಥಿಕ ಶಾಸ್ತ್ರಜ್ಞನಾಗಿ ತಮ್ಮ ಪಥವನ್ನು ಆರಂಭಿಸಿದರು. 1950 ರ ದಶಕದಲ್ಲಿ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಆರ್ಥಿಕಶಾಸ್ತ್ರದಲ್ಲಿ ಪದವಿ […]Read More
ಮಳ್ಳಿ ಮಳ್ಳಿ ಬಿಳಿ ಮಿಂಚುಳ್ಳಿ ಬಗೆ ಬಗೆಯ ಪ್ರಾಣಿ ಪಕ್ಷಿಗಳಲ್ಲಿ ವಿಧವಿಧವಾದ ಬೇಟೆಯ ಕ್ರಮಗಳಿವೆ, ಮಿಂಚುಳ್ಳಿ ಹಕ್ಕಿಯ ಬೇಟೆಯ ವಿಧಾನ ಬಹಳ ಆಕರ್ಷಕ. ನದಿ ತೊರೆಗಳ ಮೇಲೆ ಚಾಚಿದ ಮರಗಳ ಕೊಂಬೆಗಳಲ್ಲಿ ಅಥವಾ ನೀರಿನ ಹೆಬ್ಬಂಡೆಗಳ ಮೇಲೆ ತಪಸ್ಸಿಗೆ ಕೂತ ಮುನಿಗಳಂತೆ ಏಕಾಗ್ರತೆಯಿಂದ ಕಾದು ಕುಳಿತು, ದಿಡೀರನೆ ನೀರಿಗೆ ಚಂಗನೆ ನೆಗೆದು ಮೀನನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೊರಬರುತ್ತವೆ. ಮೀನನ್ನು ಬೇಟೆಯಾಡುವ ಪಕ್ಷಿಗಳಲ್ಲೇ ಅತ್ಯಂತ ನಿಖರವಾಗಿ ನೀರಿನ ಆಳಕ್ಕೆ ಜಿಗಿದು ತಪ್ಪದೇ ಮೀನನ್ನು ಹೊರತರುವ ಮಿಂಚುಳ್ಳಿಯ ಬೇಟೆಯ ವಿಧಾನದಿಂದಾಗಿ […]Read More
ಕಾಲೇಜಿನ ಕಾಟ ಪರಪರ ಪರಪರ ಪರದಾಟ,,ಪ್ರೀತಿ ಪ್ರೇಮದ ಹುಡುಗಾಟ.ಅಲೆಅಲೆ ಅಲೆಅಲೆ ಅಲೆದಾಟಬದುಕಿಗೆ ಬೆಳಕಿನ ಹುಡುಕಾಟ.ಕಾಲೇಜಿನ ವಯಸ್ಸು ಗಾಳಿಪಟಎಡವಿದರೆ ಬದುಕೆ,,, ಧೂಳಿಪಟ.!!೧!! ಸರಸರ ಸರಸರ ಸರಸಗಳುಗುಸುಗುಸು ಪಿಸುಪಿಸು ಮಾತುಗಳುತರಲೆಗು ಮೀರಿದ ಹರಟೆಗಳುಬಿದಿ ಹಲೆಯುವ ಜರಟೆಗಳುಗುರುಗಳ ಮಾತೆ ಸತ್ಯಗಳುಕೇಳದ ಬದುಕಲಿ ಮುಳ್ಳುಗಳು.!!೨!! ಚಿಣಿಮಿಣಿ ಅನ್ನುವ ಬಟ್ಟೆಯಲಿಅಳುಕುತ ಬಳುಕತ ರಸ್ತೆಯಲಿತಂದೆ ತಾಯಿಯ ಕನಸಿನಲಿನಿಮ್ಮಯ ಬದುಕಿದೆ ಬೆವರಿನಲಿಕಲಿಯದೆ ಇದ್ದರೆ ಬದುಕಿನಲಿನರಕವೆ ಇರುವುದು ಬಾಳಿನಲಿ.!!೩!! ದೇಹದ ಮೋಹದ ಸೆಳೆತವಿದೆಸೆಳೆತಕೆ ಸಿಕ್ಕರೆ ನಾಶವಿದೆಅವನಿಗು ಅವಳಿಗು ಬದುಕು ಇದೆಬದುಕುವ ದಾರಿಯು ಉದ್ದವಿದೆ.ಕಲಿಕೆಯ ವಿಷಯವು ಆಳವಿದೆಕಲಿತರೆ ಬದುಕಲಿ ಬೆಳಕು […]Read More
ಗೋಧೂಳಿ ಗಂಧ ಸೂಸುವ ಸಂಜೆಯ ಹಾಡುಗಳು… ಪುಸ್ತಕ : ಗೋಧೂಳಿ ಗಂಧಕವಿ : ಪ್ರೊ. ಸಿದ್ದು ಸಾವಳಸಂಗ ತಾಜ್ಪುರಪ್ರಕಾಶಕರು : ಕಾವ್ಯ ಭಾರತೀ ಪ್ರಕಾಶನ ಕವಿತೆಯ ಎದೆಯ ಕದವ ತೆರೆಯೆ ಎಷ್ಟೊಂದು ಕವಿತೆಗಳುಮನದ ತುಮುಲವ ಹಾಡಲುಒಂದಾದರೂ ಕವಿತೆಗೆಸಾಧ್ಯವಾಗಿದೆಯೇ ಬೆಳಕ ಹಚ್ಚಲು ಹೀಗೆ ಕವಿ ಕೇಳುವ ಪ್ರಶ್ನೆಗೆ ಎಷ್ಟೋ ಸಾವಿರ ವರ್ಷಗಳ ಇತಿಹಾಸವಿದೆ. ಉತ್ತರ ಬಹುಶಃ ಯಾವ ಕವಿಗೂ ಸಿಕ್ಕಿಲ್ಲ ಆದರೆ ಕವಿ ಹೇಳುವುದನ್ನು ಮಾತ್ರ ಬಿಟ್ಟಿಲ್ಲ. ಯಾರು ಕೇಳಲಿ, ಬಿಡಲಿ ನನ್ನ ಕಾರ್ಯವನ್ನು ನಾನು ಮಾಡುತ್ತೇನೆ ಎಂದು […]Read More
ಕತ್ತಲೆ ಇರುಳಿನಲಿ ರಜನಿಯು ಕಾಣದಿರೆಮನದಲಿ ಆಸೆಯು ಬತ್ತುತಲಿಆವರಿಸುವುದು ಜಗದಲಿ ಕತ್ತಲೆ ಬಾನಿನ ಅಂಚಿನಲಿ ನೀ ಕಾಣದಿರಲುಆಸೆಯ ಹೊಂಗಿರಣ ಹೊರಬರದಿರಲುಆವರಿಸುವುದು ಜಗದಲಿ ಕತ್ತಲೆ ನೇತ್ರಗಳಲಿ ಕಾಂತಿಯುಕ್ಕಿದರೂಮನದ ಅಂಗಳದಿ ಬೆಳಕಿದ್ದರೂದೇಹದೊಳಗೆ ಮೂಡಿದ ಕತ್ತಲೆ ಒಮ್ಮೊಮ್ಮೆ ಇಷ್ಟವಾಗುವ ಕತ್ತಲೆಹಾಗೆಯೇ ಬೇಸರ ಮೂಡಿಸುವ ಕತ್ತಲೆದಿನದ ನಾಗಾಲೋಟದಿ ಅನಿವಾರ್ಯ ಕತ್ತಲೆ ಸದ್ವಿಚಾರಗಳ ಬೆಳಕು ಮೊಳೆತುದುರ್ಬುದ್ಧಿಗಳ ಕತ್ತಲೆ ಕಳೆದುಬದುಕ ಬಂಡಿ ಸುಖದಿ ಸಾಗಲಿ ಕಷ್ಟದ ಜೀವನಕೆ ಬೆಳಕಾಗಿಅತಿಯಾಸೆಗೆ ನೀ ಕಪ್ಪಾಗಿಸಮಭಾವದಿ ಬೆಳಗು ನೀ ಕತ್ತಲೆ ಸಿ.ಎನ್. ಮಹೇಶ್Read More
ಹಳೇ ಪಾದಗಳ ಹೊಸ ಹೆಜ್ಜೆಗಳು… ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಡಿ. ವಿ. ಗುಂಡಪ್ಪ ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು ಊಹಿಸಿದ್ದೇ ಸತ್ಯ ಎಂದು ಕೆಲವೊಮ್ಮೆ ಮೂರ್ಖರಂತೆ ವರ್ತಿಸುತ್ತಿರುತ್ತೇವೆ. ನಮ್ಮ ನೋವುಗಳಿಗೆ ಮತ್ಯಾರನ್ನೋ ಹೊಣೆ ಮಾಡಿರುತ್ತೇವೆ. ಯಾವುದೋ, ಯಾರದೋ ವೈಯಕ್ತಿಕ ವಿಷಯಗಳು ನಮ್ಮ ಟೇಬಲ್ ನ ಬಿಸಿ ಬಿಸಿ ಚರ್ಚೆಗಳಾಗಿರುತ್ತವೆ. ಅಂತರಂಗದ ಶಾಂತಿ […]Read More
ಭಾರತೀಯತೆಯ ಅಂತಃಸತ್ವ.. “ಭಾರತ” ವಿವಿಧತೆಯಲ್ಲಿ ಏಕತೆಯುಳ್ಳ ಅಗಣಿತ ಸುಂದರತೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಅದ್ಭುತವಾದ ದೇಶ. ‘ಭ’ ಎಂದರೆ ಬೆಳಕು. ಬೆಳಕನ್ನು ಅರಸುತ್ತಾ, ಬೆಳಕಲ್ಲೇ ತಾ ಸೇರಿ ತಾನೇ ಬೆಳಕಾಗುವವ ಭಾರತೀಯ. ಬೆಳಕು ಜ್ಞಾನದ ಸಂಕೇತ. ಇಲ್ಲಿನ ಮಣ್ಣಿನ ಪ್ರತೀ ಕಣ ಕಣದಲ್ಲೂ ಶ್ರೇಷ್ಠ ಭಾವಗಳ ಸಮ್ಮಿಳಿತವಿದೆ. ಒಂದೆಡೆ, ಇಡೀ ವಿಶ್ವಕ್ಕೆ ನಮ್ಮ ದೇಶದ ಸಂಸ್ಕೃತಿಯನ್ನು ಸಾರಿ ತಿಳಿಸಿದ ಸ್ವಾಮಿ ವಿವೇಕಾನಂದರು ಹೇಳುತ್ತಾರೆ ‘ ಜಗತ್ತಿನ ಯಾವುದೇ ಮೂಲೆಯಲ್ಲಿ ಒಳಿತು ಎನ್ನುವಂತಹ ವಿಚಾರಧಾರೆ ಸಿಕ್ಕರೆ, ನಿಸ್ಸಂದೇಹವಾಗಿ ಅದು ಭಾರತದಿಂದ […]Read More