ಸಹ್ಯಾದ್ರಿಯ ನಗೆಮಲ್ಲರು – Laughingthrush ಭಾರತದಲ್ಲಿನ ಪರ್ವತ ಶ್ರೇಣಿಗಳಲ್ಲಿ ಹಿಮಾಲಯದ ನಂತರ ಅತಿ ಉದ್ದವಾದದ್ದು ಪಶ್ಚಿಮ ಘಟ್ಟದ ಶ್ರೇಣಿಗಳು. ಸಹ್ಯಾದ್ರಿ ಘಟ್ಟಗಳು ಎಂದು ಸಹ ಹೆಸರಿರುವ ಈ ಶ್ರೇಣಿಗಳು ಬರೋಬರಿ 1600 ಕಿಲೋಮೀಟರಿನಷ್ಟು ವ್ಯಾಪ್ತಿಯಲ್ಲಿ ದಟ್ಟ ಅರಣ್ಯ ಗುಡ್ಡ ಪ್ರದೇಶಗಳಿಂದ ಹರಡಿಕೊಂಡಿದೆ. ಮಹಾರಾಷ್ಟ್ರ ಗುಜರಾತ್ ಗಳ ಗಡಿಪ್ರದೇಶದಲ್ಲಿನ ತಪತೀ ನದಿಯ ದಕ್ಷಿಣದಿಂದ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಅಲ್ಲಲ್ಲಿ ಕವಲೊಡೆದು ಕನ್ಯಾಕುಮಾರಿಯವರೆಗೆ ಚಾಚಿಕೊಂಡಿದೆ. ಇದರ ಒಟ್ಟೂ ಪ್ರದೇಶಗಳ ಅರ್ಧಕ್ಕೂ ಹೆಚ್ಚು ಭಾಗವಿರುವುದು ನಮ್ಮ ಕರ್ನಾಟಕದಲ್ಲೇ ಎಂಬುದು […]Read More
ಕಸೂತಿಯಾಗದ ದಾರದುಂಡೆ – ಕಥಾಗುಚ್ಛ ಪುಸ್ತಕ : ಕಸೂತಿಯಾಗದ ದಾರದುಂಡೆಲೇಖಕರು : ರೇವತಿ ಶೆಟ್ಟಿ ಕೋಟಪ್ರಕಾಶನ : ಪ್ರಾಂಜಲ ಪಬ್ಲಿಕೇಷನ್ಸ್ ಉಡುಪಿ ಜಿಲ್ಲೆಯ ಕೋಟದ ರೇವತಿ ಶೆಟ್ಟಿ ಯವರ ಪ್ರಥಮ ಕಥಾಸಂಕಲನದ ಹೆಸರು ಕಸೂತಿಯಾಗದ ದಾರದುಂಡೆ. ಹೆಸರೇ ಅದೆಷ್ಟು ಧ್ವನಿಪೂರ್ಣ! ದಾರದುಂಡೆ ಎಂದರೆ ಬೆಸೆಯುವಿಕೆಯ ದ್ಯೋತಕ. ಅದೂ ಕಣ್ಮನ ತಣಿಸುವ ಸೂಕ್ಷ್ಮ ಕಸೂತಿಯಾಗಿ ಆ ದಾರದೆಳೆಗಳು ಅರಳಿದರೆ, ಆ ಕುಸುರಿ ಅದೆಷ್ಟು ಚೆಂದ ಅಲ್ವಾ? ಪ್ರತಿ ವಸ್ತುವಿಗೂ,ವ್ಯಕ್ತಿಗೂ ತಾನೊಂದು ಉತ್ಕೃಷ್ಟ ಪ್ರತಿಮೆಯಾಗಬೇಕು,ತನ್ನಿಂದ ಏನಾದರೊಂದು ಸಾಧನೆಯಾಗಬೇಕು ಎಂಬ ಆಸೆ […]Read More
ಬದುಕು ಜಟಕಾಬಂಡಿ – ಕಥಾಸಂಕಲನ ಕಥಾಸಂಕಲನ: ಬದುಕು ಜಟಕಾ ಬಂಡಿಲೇಖಕರು : ಅನಂತ್ ಕುಣಿಗಲ್ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್ ನಾವು ಬೆಳೆದ ಪರಿಸರ, ಹೊಂದಿಕೊಂಡ ಜಾಗ, ಹಚ್ಚಿಕೊಂಡ ಜನಗಳು ಒಮ್ಮೊಮ್ಮೆ ನಮ್ಮ ಹವ್ಯಾಸ, ಆಸಕ್ತಿಗಳ ಆಯ್ಕೆಯನ್ನ ನಿರ್ಧರಿಸಿಬಿಡುತ್ತವೆ… ಅಂತೆಯೇ ಅನಂತ್ ಅವರ ಬರಹದ ಬದುಕಿಗೆ ಸ್ಪೂರ್ತಿ ಮತ್ತು ಶಕ್ತಿಯಾಗಬಲ್ಲ ಎಲ್ಲ ಚೇತನ, ಅಚೇತನಗಳಿಗೆ ನಾನು ಮನಪೂರ್ವಕವಾಗಿ ವಂದಿಸುವೆ. ಅಂತೆಯೇ ಕಂಡು ಕೇಳಿದ ಘಟನೆಗಳನ್ನ ವಸ್ತುವಾಗಿಸಿಕೊಂಡು ಕಥೆ ಬರೆದು ಸಹೃದಯರಿಗೆ ಹಂಚಿದ ಅನಂತ್ ಕುಣಿಗಲ್ ಅವರಿಗೂ.. ಲೇಖಕರ ಪರಿಚಯ: […]Read More
ಜೋಕಾಲಿ ಮರೆಯಾಯ್ತು ಹಳ್ಳಿಯ ದಿನಗಳುಎಷ್ಟು ಚೆಂದ ಆ ಬಾಲ್ಯದ ದಿನಗಳುಈಗ ಅಲ್ಲುಂಟು ಮೊಬೈಲುಗಳು ಊರ ಮರಕೆ ಚಿಕ್ಕಪ್ಪ ಕಟ್ಟಿದ ಜೋಕಾಲಿಚಿಗುರು ಉತ್ಸಾಹಮಕ್ಕಳ ಮನದಲಿನಾಮುಂದು ತಾಮುಂದು ಎನುವ ಆತುರದಲಿ ಹುತ್ತಕ್ಕೆರದು ಬಗುರಿಯಾಡಿದ ಬಳಿಕಪಂಚಮಿ ಉಂಡೆಯ ಸವಿಯುತಹೋ ಎಂದು ಕಿರುಚಾಡಿ ತೂಗುತಾ ಜೋಕಾಲಿಗಿಲ್ಲ ವಯಸಿನಾ ಭೇದಅಡುಗೆ ಮುಗಿಸಿಟ್ಟು ಓಡುವ ಅಮ್ಮತನ್ನ ಕೂಸುಗಳ ಜತೆಯಾಡುವಳಮ್ಮ ಹಬ್ಬ ಕಳೆದ ಬಳಿಕ ಪಟ್ಟಣ ಸೇರುವಾ ಜನಮರೆಯುವರು ಹಳ್ಳಿಯ ನಲಿವಿನ ದಿನಮೊಬೈಲು ಟ್ಯಾಬುಗಳಿಗೆ ಕಾತರಿಸುವ ಮನ ಮರಿಬೇಡ ಓ ಮನುಜ ನಿನ ಬಾಲ್ಯವಾಮುಂದಿನ ಪೀಳಿಗೆಗೆ ಇರಲಿ […]Read More
ತೇರೂವೋ ಕಾದಂಬರಿ: ತೇರೂವೋಮರಾಠಿ ಮೂಲ: ಗೌರಿ ದೇಶಪಾಂಡೆಕನ್ನಡಕ್ಕೆ : ಚಂದ್ರಕಾಂತ ಪೋಕಳೆಪ್ರಕಾಶನ : ದೇಸೀ ಪುಸ್ತಕ ಪ್ರಕಾಶನಬೆಲೆ : ರೂ 80 ಈ ಕಾದಂಬರಿಯ ಕಥಾನಾಯಕಿ ತನ್ನ ಪ್ರೀತಿಯ ಉತ್ಕಟತೆಯನ್ನು ‘ಸಾಕೆ’ ಯ ಅಮಲಿನಲ್ಲೇ ಆದರೂ ತನ್ನ ಪ್ರೀತಿಯ ಇಂಗ್ಲಿಷ್ ಕವಿತೆಯೊಂದಿಗೆ ಹೇಳಿಕೊಳ್ಳುವ ಸಾಲುಗಳೊಂದಿಗೆ ಆರಂಭಿಸುತ್ತೇನೆ. ಅವಳ ಪ್ರೀತಿಗೊಂದು ಜೈ ಹೇಳುತ್ತಾ… Drink to me only with thineEyes and I will pledge with mineOr leave a kiss within the cupAnd […]Read More
ಜನುಮದ ಮೈತ್ರಿ ನಿನ್ನ ಬೆರಗಿನ ಸವಿನೋಟದಲಿನಿನ್ನೊಲವಿನ ಅನುಭೂತಿಯಲಿ!ಮನದಲಿ ಮಿಂಚಿನ ರಿಂಗಣ..ಇರಲೆಂದಿದೆ ಬಾಳಲಿ ಅನುದಿನ!! ಯಾವ ಜನ್ಮದ ಮೈತ್ರಿಯಿದುಅನುಭಾವದಲಿ ಮನ ಮಿಡಿದು!ನೆಮ್ಮದಿ ಕಂಡಿದೆ ನಿನ್ನ ಕಂಗಳಲಿ..ಹಸಿರು ತಬ್ಬಿದಂತೆ ಕಾನನದಲಿ!! ಒಂದೇ ರಾಗದಿ ಒಂದೇ ಭಾವದಿತಲ್ಲೀನಗೊಳಿಸಿಹುದು ಈ ಲೋಕದಿ!ಬೆರೆತಿಹುದು ನಮ್ಮ ಮನಗಳಿಂದು..ಬೆರೆತಂತೆ ನದಿಯು ಕಡಲಲಂದು!! ಅನುಗಾಲವೂ ಇರಲಿ ಆತ್ಮಪ್ರೀತಿದಿಗಂತದಿ ಅನಂತವಾಗುವಾ ರೀತಿ!ನೀ ಬಾಳಿನಾ ಜೀವದುಸಿರು..ಅಳಿಯಲಿ ಅದರಲಿ ನನ್ನುಸಿರು!! ಸುಮನಾ ರಮಾನಂದRead More
ನೀರುನಾಯಿ – The Otter ನೀರು ನಾಯಿಗಳು ಮಾಂಸಹಾರಿ ಗಣದ ‘ಮುಸ್ಟಲಿಡೀ’ (mustelidae) ಕುಟುಂಬಕ್ಕೆ ಸೇರಿದ್ದು ವೀಸಲ್ ಗಳು (weasel), ಮಾರ್ಟೆನ್ಗಳು (Martens), ಬ್ಯಾಜರ್ (Badger) ಇನ್ನೂ ಅನೇಕ ಪ್ರಾಣಿಗಳು ಈ ಕುಟುಂಬದಲ್ಲಿ ಬರುತ್ತವೆ. ಈ ಗುಂಪುಗಳ ಪ್ರಾಣಿಗಳು ಒಂದಕ್ಕೊಂದು ವಿಭಿನ್ನವಾಗಿದ್ದರೂ ಕೆಲವೊಂದು ಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ ಒಂದೇ ಕುಟುಂಬದಲ್ಲಿ ಇರಿಸಲಾಗಿದೆ. ಉದ್ದ ದೇಹ, ಗಿಡ್ಡ ಕಾಲು, ಬಾಲದ ಬುಡದಲ್ಲಿ ವಾಸನಾ ಗ್ರಂಥಿ ಅಭಿವೃದ್ಧಿ ಹೊಂದಿದ ಮಾಂಸದ ಹಲ್ಲುಗಳು ಈ ಕುಟುಂಬದ ಪ್ರಾಣಿಗಳ ಲಕ್ಷಣಗಳಾಗಿವೆ. ವಿಶ್ವದಲ್ಲಿ 13 […]Read More
ಅಪ್ಪನೆಂದರೆ ಆಟವಾಡಿಸುತಲೇಬದುಕಿನ ಪಾಠವನುಹೇಳುವವ, ಜೀವನದಅನುಭವವ ತಿಳಿಸುವವ ಮಕ್ಕಳಿಗೆ ಹಣವಿತ್ತೂ;ಸಂಪಾದನೆಯ,ಉಳಿತಾಯದ ಅರಿವಮಾಡಿಸುವಾತ! ತನ್ನ ಸುಖ ಬದಿಗೊತ್ತಿತನ್ನವರಿಗಾಗಿಯೇಹಗಲಿರುಲೆನ್ನದೆದುಡಿವ ಶ್ರಮಜೀವಿ!! ಮಮತೆಯ ಮಡಿಲು,ಸ್ನೇಹದ ಒಲವಿನೊಡಲು,ಶಿಸ್ತಿನ ಸಿಪಾಯಿ,ಭರವಸೆಯ ಬಿಗಿಹಸ್ತ! ಬೆರಗು, ಭರವಸೆ,ಕನಸು, ಒಂದಿಷ್ಟುಬಿಗಿ, ಒಮ್ಮೊಮ್ಮೆನನ್ನ ಕನ್ನಡಿಯೀತ! ಶ್ರೀವಲ್ಲಿ ಮಂಜುನಾಥRead More
ಅವಳಿಲ್ಲದೆ,,,, ಈ ಬದುಕು ಇನ್ನೇಕೆ ಅವಳಿಲ್ಲದೆಅವಳಿಲ್ಲದೆ ಮನಸು ಇರವಲ್ಲದೆ.ಅವಳೆನ್ನ ಪ್ರೀತಿ,,ನನ ಬಾಳ ಜ್ಯೋತಿಹೇಳದೆ ಹೋದಳೊ,,ನನ್ನನ್ನ ಮರೆತಿಇದು ನ್ಯಾಯವೇ,,, ಇದು ಪ್ರೀತಿಯೇ .?!!೧!! ಒಂದು ಕ್ಷಣ ಇರಲಾರೆ ಅವಳಿಲ್ಲದೆ ,,ಅವಳಂಥ ಮನವು ಸಿಗವಲ್ಲದೆ.ಅವಳೇನೆ ಬದುಕು,,ಅವಳಿಂದ ಹುರುಪುಹೋಗುವಾಗ ನಾನು,, ಬರಲಿಲ್ಲ ನೆನಪುಇದು ನ್ಯಾಯವೇ,,, ಇದು ಪ್ರೀತಿಯೇ.?!!೨!! ಕಷ್ಟದಲಿ ಕೈ ಹಿಡಿದು ಮೇಲೆತ್ತಲು,,ಮರೆಯಾಯ್ತು ಆ ನನ್ನ ಕಾರ್ಗತ್ತಲುಅವಳೆನ್ನ ಉಸಿರು,,,ಅವಳಿಂದ ಹಸಿರುಹೋಗುವಾಗ ಕೂಗದೆ ನನ್ನ ಹೆಸರುಇದು ನ್ಯಾಯವೇ,,, ಇದು ಪ್ರೀತಿಯೇ.?!!೩!! ಈ ಬಡವ ಬದುಕೋಕೆ ಅವಳಾ ಜೊತೆಭಗವಂತ ಬರೆದಿದ್ದ ಇಂಥಾ ಕಥೆಬದುಕಿದ್ದು ಸತ್ಯಾ,,,ಬದುಕಿದಳು […]Read More
ರಿಬ್ಬನ್ ಈಲ್ ಮೀನುಗಳು ಸಾಮಾನ್ಯವಾಗಿ ಈಲ್ ಮೀನು ಮತ್ತು ಸಮುದ್ರದ ಹಾವು ಇವುಗಳನ್ನ ಗುರುತಿಸುವಾಗ ಕೊಂಚ ಗೊಂದಲ ಉಂಟಾಗುವ ಸಾಧ್ಯತೆ ಇದೆ.. ಉದ್ದನೆಯ ತೆಳುವಾದ ರಿಬ್ಬನ್ ನಂತೆ ಬಳಕಾಡುವ ದೇಹ ಹೊಂದಿರುವ ಈ ಈಲ್ ಮೀನುಗಳಿಗೆ ಮುಖ್ಯವಾಗಿ ಹಾವುಗಳಂತೆ ಮೈಮೇಲೆ ಪೊರೆಗಳ ಚಿಪ್ಪುಗಳು ಇರುವುದಿಲ್ಲ( Scales). ಇವುಗಳಿಗೆ ಇತರೇ ಮೀನುಗಳಂತೆಯೇ ಈಜುರೆಕ್ಕೆಗಳು ಇರುತ್ತವೆ. ಸಮುದ್ರದ ಹಾವುಗಳಲ್ಲಿ ಈಜುರೆಕ್ಕೆ ಕಂಡುರುವುದಿಲ್ಲ. ಸಮುದ್ರದಲ್ಲಿ ರಿಬ್ಬನ್ ಈಲ್ ಗಳು ಹೆಚ್ಚಾಗಿ ಕೋರಲ್ ರೀಪ್ (ಸಮುದ್ರದ ಹವಳದ ಬಂಡೆಗಳು) ಹತ್ತಿರ ಕಂಡುಬರುತ್ತವೆ. ಸರಿಸುಮಾರು […]Read More