ಕಣ್ಣೀರ ಕಥೆ ಎನ್ನ ಮನದಾಳದಿಹುದುಗಿ ಕುಳಿತಕಣ್ಣೀರ ಕುರಿತು ನಾನುಡಿದೆ, ಹೇ ಹೀಗೇಕೆನೀನವಿತು ಕುಳಿತೆ, ನೀನೊಮ್ಮೆ ಹೊರಬಂದು ಬಿಡಬಾರದೇ ?ಮತ್ತಷ್ಟು ಒಳಗೇಅಡಗಿದ ಕಣ್ಣೀರುಹೊರಬರಲು ತಾಒಪ್ಪಲೇ ಇಲ್ಲ. ಅನುನಯದಿಕೇಳಿದಾಗ ಅದುಉಲಿಯಿತು, ನಾಹೊರಬಂದಲ್ಲಿ ನನ್ನನೋಡಿ ನಗುವರೆಲ್ಲ.ಒಳಗಿನ ನೋವಿನಕಾವನು ಆರಿಸಲುಬರುವವರಾರೂ ಇಲ್ಲ! ಮನದಲುದಯಿಸಿದಕಣ್ಣೀರ ಹೊರಗಟ್ಟದೆಒಳಗಿಳಿಸುತಲಿಧಗಧಗಿಸುತ್ತಿರುವಒಡಲಾಗ್ನಿಯೆಂಬನೋವ ತಣಿಸಿಬಿಡುವೆ!! ಶ್ರೀವಲ್ಲಿ ಮಂಜುನಾಥRead More
ಅಸ್ತಿತ್ವದ ಅಂಚಿನಲ್ಲಿ ಬಿಳಿ ಹೊಟ್ಟೆಯ ಬೆಳ್ಳಕ್ಕಿ ಇಹಪರಕೆ ಕೊಂಡಿಯಾದಂತಿದೆ ಈ ಬೆಳ್ಳಕ್ಕಿ ಹಿಂಡುಹಿಂಡಾಗಿ ಅಥವಾ ಬೇರೆ ಬೇರೆಯೂ ಆಗಿಬೆಳ್ಳಂಬೆಳಗ್ಗೆ ಬೆಳಕಿಗೆ ಬೆಳಕಾಗಿ ಪರಕ್ಕೆ ಹೊರಟುಮರಳುವುವು ಸಂಜೆ ಮತ್ತೆ ಇಹವೆ ಬೇಕೆಂದು ಬಯಸಿನಾ. ಮೊಗಸಾಲೆ ಬತ್ತದ ಗದ್ದೆಗಳಲ್ಲಿ, ಹಳ್ಳ ಕೊಳ್ಳಗಳ ನೀರ ತೆರೆಗಳ ಸನಿಹದಲ್ಲಿ, ಜಾನುವಾರುಗಳ ಮೇಲೆ ಕುಳಿತು ಹುಳುಗಳನ್ನು ಹೆಕ್ಕುವ ಬೆಳ್ಳಂ ಬೆಳಗಿನ ಬೆಳ್ಳಕ್ಕಿಗಳನ್ನು (Heron) ಯಾರು ತಾನೇ ಕಂಡಿಲ್ಲ! ಈ ಬೆಳ್ಳಕ್ಕಿಗಳು ಸೂರ್ಯೋದಯದ ದೃಡೀಕರಣವು ಹೌದು. ಎಷ್ಟೋ ಕವಿಗಳಿಗೆ ಕವನಗಳಿಗೆ ಸ್ಪೂರ್ತಿ ಈ ಬೆಳ್ಳಕ್ಕಿ! ಆದರೆ […]Read More
ಹಿಂಗ್ ಮಾಡಿದ್ರೆ ಹೆಂಗೆ – ನಾಟಕ ಪ್ರದರ್ಶನ ಬೆಂಗಳೂರಿನ ಅಂತರಂಗ ಬಹಿರಂಗ ರಂಗ ತಂಡ ನಿರಂತರವಾಗಿ ಸುಮಾರು ಆರು ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದೆ. ತಂಡವು ಇಲ್ಲಿಯವರೆಗೂ ಆರು ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ. ನೂರಕ್ಕು ಹೆಚ್ಚು ಮರುಪ್ರದರ್ಶನಗಳನ್ನು ಕೊಟ್ಟಿದ್ದಾರೆ. “ಹಿಂಗ್ ಮಾಡಿದ್ರೆ ಹೆಂಗೆ” ತಂಡದ 7ನೇ ನಾಟಕ. ನಗರದ ಒತ್ತಡ ಜೀವನದಲ್ಲಿ ಕೆಲವು ಸಮಯ ಮನಸ್ಸನ್ನು ಹಗುರಾಗಿಸಿಕೊಳ್ಳಲು ಬಹು ಮುಖ್ಯವಾಗಿ ನಗು ಬೇಕಾಗುತ್ತದೆ. ಈ ಉದ್ದೇಶದಿಂದಲೇ ಪ್ರೇಕ್ಷಕರಿಗೆ ಬರಪೂರ ಹಾಸ್ಯವನ್ನು ನೀಡಿ ಮನಸ್ಸನ್ನು ತಿಳಿಯಾಗಿಸುವ […]Read More
ಪುಸ್ತಕ : ವೈಜಯಂತಿಪುರಲೇಖಕರು: ಸಂತೋಷಕುಮಾರ ಮೆಹೆಂದಳೆಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್ ಸಂತೋಷ್ ಕುಮಾರ ಮೆಹೆಂದಳೆ ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ನಮ್ಮ ಹೆಮ್ಮೆಯ ಕದಂಬ ರಾಜ ಮಯೂರವರ್ಮನ ಕುರಿತು ರಚಿಸಿರುವ ವೈಜಯಂತಿಪುರ ಕಾದಂಬರಿ ಇದೀಗ ನಾಲ್ಕನೇ ಮುದ್ರಣ ಕಾಣುತ್ತಿದೆ. ಆ ನೆನಪಿಗೋಸ್ಕರ ಪ್ರಗತಿಪರ ಲೇಖಕರಾದ ಸಿಹಿಜೀವಿ ಸಿ ಜಿ ವೆಂಕಟೇಶ್ವರ್ ಕಾದಂಬರಿಯ ಕುರಿತು ಬರೆದ ವಿಮರ್ಶೆ ನಿಮಗಾಗಿ. ವೈಜಯಂತಿಪುರದ ಜಯ… ಇಪ್ಪತ್ಮೂರು ವರ್ಷಗಳಿಂದ ಕದಂಬರ ಬಗ್ಗೆ ಮಕ್ಕಳಿಗೆ ಪಾಠ ಮಾಡುವಾಗ ಮಯೂರ ಶರ್ಮ ಮಯೂರವರ್ಮನಾದ ಕಥೆಯನ್ನು ಹೇಳಿರುವೆ. ಮಕ್ಕಳು […]Read More
ಹಣತೆಯ ಅಹಂಕಾರ ಹಣತೆಯು ಮನೆ ಮನಗಳನ್ನು ಬೆಳಗುತ್ತದೆ. ಅದೇ ರೀತಿ ಹಣತೆಯೊಂದು ಉರಿಯುತ್ತಾ ಮನೆಯನ್ನು ನಿತ್ಯ ಬೆಳಗುತ್ತಿತ್ತು. ಒಂದು ದಿನ ತಡರಾತ್ರಿ ಆ ಮನೆಯಲ್ಲಿ ಉರಿಯುತ್ತಿದ್ದ ಹಣತೆಯು ತನ್ನಿಂದಲೇ ಕೋಣೆಯಲ್ಲಾ ಬೆಳಕು ಬೀರುತ್ತಿದೆ ಎಂಬ ಗರ್ವದಿಂದ ‘ನನ್ನಿಂದಲೇ ದೀಪವು ಉರಿಯುತ್ತಿದೆ, ಆದ್ದರಿಂದ ಈ ಬೆಳಕು ನನ್ನದೇ’ ಎಂದು ಕೂಗಿ ಹೇಳಿತು.ಇದನ್ನು ಕೇಳಿದ ಹಣತೆಯಲ್ಲಿ ಹಾಕಿದ್ದ ಎಣ್ಣೆಯು ‘ಈ ದೀಪ ಮತ್ತು ಬೆಳಕಿಗೆ ನಾನೇ ಜೀವಾಳ. ನಾನೇ ಇಲ್ಲವಾದರೆ ದೀಪವೂ ಇರುವುದಿಲ್ಲ, ಬೆಳಕೂ ಇರುವುದಿಲ್ಲ ಆದ್ದರಿಂದ ಈ ಬೆಳಕು […]Read More
ಬದುಕಿನ ಭಾಗ್ಯದ ಲಹರಿಯಲಿ.. ಬರಡಾದ ಬದುಕಿನಲಿಹಕಷ್ಟಗಳನು ತೊಡೆದು ಬದುಕುವಾ..!ಸವಿಯಾದ ಬದುಕಿನಲಿಹ..ಸಿಹಿಯನೆಲ್ಲವ ಸವಿದು ಬಾಳುವಾ..!! ಬಂಗಾರದ ಬದುಕನು ಅಂಗೈಲಿಟ್ಟಕಾಣದ ದೈವಕೆ ನಿತ್ಯ ಕೈಮುಗಿಯುವಾ..!ಸವಿಬದುಕನು ನಮ್ಮ ಮಡಿಲಲಿಟ್ಟ..ಹೆತ್ತವರಿಗೆ ಶಿರಬಾಗಿ ನಮಿಸುವಾ!! ಜೋಡೆತ್ತಿನ ತೆರೆದಿ ಸಾಗುತಾಬಾಳಿನ ಬಂಡಿಯ ಎಳೆಯುವಾ..!ಸ್ನೇಹಿತರ ಒಡನಾಟದಿ ನಡೆಯುತಾ..ಬದುಕನು ಚೆಂದದಿ ಕಳೆಯುವಾ!! ಅಂದದ ಬದುಕನು ಜೋಳಿಗೆಯಲಿಟ್ಟಅದೃಶ್ಯ ಶಕ್ತಿಯ ಸದಾ ನೆನೆಯುವಾ..!ಮಾನವೀಯತೆಯ ಶ್ರೇಷ್ಠತೆಯ ಸಾಧಿಸಿ..ನಶ್ವರ ಮಾನವಜನ್ಮವ ಸಾರ್ಥಕಗೊಳಿಸುವಾ..!! ಸುಮನಾ ರಮಾನಂದRead More
ಬೆಳಕಾದವಳು ಇವಳು, ಬದುಕೆಲ್ಲ ಬವಣೆಯನೆ ಹೊದ್ದವಳು.ನೋವಿಗೆ ತೈಲವಾದವಳು.ನಲಿವಿಗೆ ಕಾದವಳು,ಕಾದು ಹೈರಾಣಾದವಳು. ಮನೆಯೋ, ಬಯಲೋ, ಅಂತರವ ಕಾಣದೆ ಅಂತರ್ಮುಖಿಯಾದವಳು.ಮಮತೆ ವಾತ್ಸಲ್ಯದ ಸಾಕಾರಕೆ,ಹಂಗು ಅಣಕಗಳಿಗೆ ಸಾಕ್ಷಿಯಾದವಳು. ತನ್ನನೇ ಗಾಣದೆತ್ತಾಗಿಸಿಕೊಂಡವಳು,ನೆನಪಲ್ಲೇ ಕೊಟ್ಟ ನೆಪಗಳನು ಎಣಿಸಿ ಕೊಂಡವಳು. ಗೆಳೆಯನೋ, ಪ್ರೇಮಿಯೋ,ಮಾತೋ ಮೌನವೋ ಅರಿಯದವಳು,ಬೆಟ್ಟದಷ್ಟು ಭಾವಗಳ ಮನೆಯ ಅಟ್ಟದಲೆ ಅರಿತವಳು.ನೋವ ಕತ್ತಲೆಗೆ ನಲಿವ ಬೆಳಕ ಹುಡುಕುತ್ತಾ ಹೊರಟವಳು. ಆದರೆ, ಬೆಳಕಿಗೆ ಮೊಗ ಮಾಡಿ ನಿಂದವಳಬೆನ್ನ ಹಿಂದೆ ಬರೀ ಕತ್ತಲು.ತಮವು ಆವರಿಸಿ ಕಾಣದಿಹ ಜಗದ ಬೆತ್ತಲು.ನೀರವ ಮೌನ ಸುತ್ತಲೂ. ಬರಲಿ ಬಿಡು , ಬೆಳಕು ನಮ್ಮನೆತ್ತಲು. […]Read More
ಆ ಒಂದು ಕ್ಷಣ…… ಜೀವನ ಪಯಣದಲ್ಲಿ ನಮ್ಮದು ಯಾವಾಗಲೂ ಗೆಲುವಿಗಾಗಿ ತುಡಿಯುವ ಮನಸ್ಸು!!!.ಗೆಲುವಿಗಾಗಿ ಕಾಯುತ್ತಾ ಕುಳಿತು ಬಹುತೇಕ ಸಂದರ್ಭಗಳಲ್ಲಿ ನಿರಾಶರಾಗುವುದೂ ಇದೆ. ಹಣ, ಹೆಸರು, ಕೀರ್ತಿ, ಸಾಮಾಜಿಕ ಸ್ಥಾನಮಾನ ಇವೆಲ್ಲವೂ ನಮ್ಮ ಗೆಲುವಿನ ಮೇಲೆ ಹೆಚ್ಚಿನಂಶ ಅವಲಂಬಿತವಾಗಿದೆ ಎನ್ನುವುದು ಸುಳ್ಳಲ್ಲ. ಈ ಎಲ್ಲವನ್ನೂ ತಂದು ಕೊಡುವ ಆ ಗಳಿಗೆ ಇದೆಯಲ್ಲ!!! ಅದು ನಮ್ಮ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆ ನಿಮಿಷ, ಆ ಕ್ಷಣದ ನಿರ್ಧಾರ ನಮ್ಮನ್ನು ಎತ್ತರಕ್ಕೂ ಕೊಂಡೊಯ್ಯುತ್ತದೆ…ಎಚ್ಚರ ತಪ್ಪಿದರೆ ಪಾತಾಳಕ್ಕೂ ನೂಕುತ್ತದೆ.. . ಒಬ್ಬ […]Read More
ಹೀಗೊಂದು ಭಾವನೆ ಯಾರಿಗಾದರೂ ಹಂಚಿ,ಎದೆ ಭಾರವಿಳಿಸಲುಆಸ್ಪದವನ್ನೀಯದ,ತಿದಿಯೊತ್ತಿದಂತೆಉರಿಯುತ್ತಿರುವಅಸಹನೀಯ ನೋವು! ಮನದ ಸಾಗರದಲಿಬಚ್ಚಿಟ್ಟು, ಒಂದೊಂದೇಹನಿ ತೊಟ್ಟಿಕ್ಕಿಸಿದರೂಮುಗಿಯದೆ, ಕರಗದೆ,ಜನ್ಮವೆತ್ತುತ್ತಿರುವ ಈಅಂತರಾಳದ ನೋವು! ಮಾತುಗಳೇ ಮುಳ್ಳಾಗಿಚುಚ್ಚಿದರೂ, ನಗುವಕಂಗಳ ಹಿಂದಡಗಿಮೌನದಿ ಬಿಕ್ಕಿದರೂಪರರಿಗರಿವಾಗದಂತಿಹಅಸಹಾಯಕ ನೋವು! ತನ್ನವರೇ ಹೊಡೆದಮಾತಿನಾಘಾತಕ್ಕೆತತ್ತರಿಸಿ, ಉಸಿರೆತ್ತದೆಒಳಗುದಿಯ ಅದಿಮಿಟ್ಟುನಗೆಯ ಮೊಗವಾಡವಿಟ್ಟಅಂತರ್ದಾಹಕವೀ ನೋವು! ಅನಿವಾರ್ಯತೆಯವಾಸ್ತವವನ್ನರಿತು,ಎಲ್ಲವನ್ನೆದುರಿಸಲುಸಜ್ಜಾದ ಪ್ರಬುದ್ಧ ಮನದಗಂಭೀರ ನೋವು! ಶ್ರೀವಲ್ಲಿ ಮಂಜುನಾಥRead More
“ಹೆಬ್ಬಕ್ಕ”ನಿಗೆ ಸುತ್ತೆಲ್ಲವೂ ಶತ್ರುಗಳೇ! ಹೆಬ್ಬಕ್ಕಗಳು (ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್) ಇದೀಗ ಮತ್ತೆ ಸುದ್ದಿಯಲ್ಲಿವೆ! ಹೆಬ್ಬಕ್ಕ – ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಈಗ ತೀವ್ರ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದ. ಇದು ರಾಜಸ್ಥಾನದ ರಾಜ್ಯ ಪಕ್ಷಿಯು ಹೌದು. ಕಳೆದ ಶತಮಾನದ ಮಧ್ಯದವರೆಗೂ ನಮ್ಮ ಭಾರತದಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ಹೆಬ್ಬಕಗಳು ಕಳೆದ ಗಣತಿಯಲ್ಲಿ ಎಣಿಕೆಗೆ ಸಿಕ್ಕಿದ್ದು ಇಡೀ ದೇಶದಲ್ಲೇ 150 ಹಕ್ಕಿಗಳು ಮಾತ್ರ . ರಾಜಸ್ಥಾನದ ಜೈಸಲ್ಮೇರ್ ಒಂದರಲ್ಲೇ 100 ಹಕ್ಕಿಗಳಿದ್ದರೆ, ಗುಜರಾತ್ ನ ಕಛ್ ನಲ್ಲಿ 25, […]Read More